< ಸಮುವೇಲನು - ದ್ವಿತೀಯ ಭಾಗ 3 >

1 ಸೌಲನ ಕುಟುಂಬದವರಿಗೂ ದಾವೀದನ ಕುಟುಂಬದವರಿಗೂ ಬಹು ದಿವಸ ಯುದ್ಧವು ನಡೆಯಿತು. ದಾವೀದನು ಬಲಗೊಳ್ಳುತ್ತಾ ಬಂದನು. ಆದರೆ ಸೌಲನ ಕುಟುಂಬದವರು ಬಲಹೀನರಾಗುತ್ತಾ ಹೋದರು.
दावीद आणि शौल यांच्या घराण्यांमध्ये दीर्घकाळ युध्द चालू राहिले. काही दिवसानंतर दावीदाची ताकद वाढत चालली तर शौलाचे घराणे कमकुवत बनत गेले.
2 ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಪುತ್ರರು ಯಾರೆಂದರೆ: ಇಜ್ರೆಯೇಲ್ ಪಟ್ಟಣದ ಅಹೀನೋವಮಳ ಚೊಚ್ಚಲ ಮಗ ಅಮ್ನೋನನು;
हेब्रोन येथे दावीदाला पुत्र झाले, त्यांचा क्रम असा इज्रेलची अहीनवाम हिच्यापासून पाहिला मुलगा झाला तो अम्नोन.
3 ಕರ್ಮೇಲ್ಯನಾದ ನಾಬಾಲನ ವಿಧವೆ ಅಬೀಗೈಲಳಿಂದ ಹುಟ್ಟಿದ ಅವನ ಎರಡನೆಯ ಮಗ ಕಿಲಾಬನೂ; ಗೆಷೂರಿನ ಅರಸನಾಗಿರುವ ತಲ್ಮಾಯನ ಮಗಳಾದ ಮಾಕಳಿಂದ ಹುಟ್ಟಿದ ಅವನ ಮೂರನೆಯ ಮಗ ಅಬ್ಷಾಲೋಮನು;
दुसरा मुलगा किलाब, हा कर्मेलची नाबालची विधवा अबीगईल हिचा मुलगा. अबशालोम तिसरा, गशूरचा राजा तलमय याची मुलगी माका ही याची आई.
4 ಹಗ್ಗೀತಳಿಂದ ಹುಟ್ಟಿದ ನಾಲ್ಕನೆಯ ಮಗ ಅದೋನೀಯನು; ಅಬೀಟಾಲಳಿಂದ ಹುಟ್ಟಿದ ಐದನೆಯ ಮಗ ಶೆಫಟ್ಯನು;
अदोनीया चौथा, हग्गीथ ही त्याची आई, शफाट्या पाचवा, त्याची आई अबीटल.
5 ದಾವೀದನ ಹೆಂಡತಿ ಎಗ್ಲಳಿಂದ ಹುಟ್ಟಿದ ಆರನೆಯ ಮಗ ಇತ್ರಾಮನು. ಇವರು ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದವರು.
दावीदाची पत्नी एग्ला हिच्यापासून सहावा इथ्राम झाला. हेब्रोनमध्ये जन्मलेले हे त्याचे सहा पुत्र.
6 ಸೌಲನ ಕುಟುಂಬಕ್ಕೂ ದಾವೀದನ ಕುಟುಂಬಕ್ಕೂ ಯುದ್ಧ ನಡೆಯುತ್ತಿರುವಾಗ, ಅಬ್ನೇರನು ಸೌಲನ ಕುಟುಂಬದಲ್ಲಿ ತನ್ನದೇ ಆದ ಸ್ಥಾನವನ್ನು ಬಲಪಡಿಸಿಕೊಂಡನು.
शौल आणि दावीद यांच्या घराण्यात चाललेल्या लढायांमध्ये शौलाच्या सैन्यातील अबनेरचे बळ वाढत चालले.
7 ಸೌಲನಿಗೆ ಅಯ್ಯಾಹನ ಮಗಳಾದ ರಿಚ್ಪಳೆಂಬ ಹೆಸರುಳ್ಳ ಒಬ್ಬ ಉಪಪತ್ನಿ ಇದ್ದಳು. ಈಷ್ಬೋಶೆತನು ಅಬ್ನೇರನಿಗೆ, “ನೀನು ನನ್ನ ತಂದೆಯ ಉಪಪತ್ನಿಯ ಬಳಿಗೆ ಪ್ರವೇಶಿಸಿದ್ದೇಕೆ?” ಎಂದನು.
शौलाची रिस्पा नामक उपपत्नी असून ती अय्याची मुलगी होती. ईश-बोशेथ अबनेरला म्हणाला, “माझ्या वडिलांच्या दासीशी तू शारीरिक संबध का ठेवतोस?”
8 ಆಗ ಅಬ್ನೇರನು ಈಷ್ಬೋಶೆತನ ಮಾತುಗಳಿಗೆ ಬಹುಕೋಪಗೊಂಡು, “ನಾನು ನಿನ್ನನ್ನು ದಾವೀದನ ಕೈಯಲ್ಲಿ ಒಪ್ಪಿಸಿಕೊಡದೆ ಈ ದಿವಸದವರೆಗೂ ಯೆಹೂದವನ್ನು ವಿರೋಧಿಸಿ, ನಿನ್ನ ತಂದೆ ಸೌಲನ ಕುಟುಂಬಕ್ಕೂ ಅವನ ಸಹೋದರರಿಗೂ, ಸ್ನೇಹಿತರಿಗೂ ದಯೆ ತೋರಿಸಿದ ನನ್ನನ್ನು ನೀನು ಈ ಹೊತ್ತು ಈ ಸ್ತ್ರೀಗೋಸ್ಕರ ನನ್ನಲ್ಲಿ ತಪ್ಪು ಹಿಡಿಯುವುದಕ್ಕೆ ನಾನೇನು ಯೆಹೂದ ನಾಯಿಯ ತಲೆಯೋ?
या बोलण्याचा अबनेरला संताप आला. तो म्हणाला, मी काय यहूदाच्या असलेल्या कुत्र्याचे डोके आहे? शौलाशी आणि त्याच्या घराण्याशी मी एकनिष्ठ राहिलेलो आहे. दावीदाच्या हातून मी तुमचा पराभव होऊ दिला नाही. मी विश्वासघात केला नाही, पण आता तू मला या स्त्रीच्या संदर्भात दोष देत आहेस.
9 ನಾನು ಸೌಲನ ಕುಟುಂಬದಿಂದ ರಾಜ್ಯವನ್ನು ತಪ್ಪಿಸಿ, ಯೆಹೋವ ದೇವರು ದಾವೀದನಿಗೆ ಆಣೆ ಇಟ್ಟ ಪ್ರಕಾರವೇ,
आता मात्र मी निश्चित सांगतो की, परमेश्वराने भाकित केल्याप्रमाणे सर्व घडेल. माझ्या हातून आता हे सर्व प्रत्यक्षात आले नाही, तर देव खुशाल माझे वाईट करो.
10 ದಾವೀದನ ಸಿಂಹಾಸನವನ್ನು ದಾನಿನಿಂದ ಬೇರ್ಷೆಬದ ಮಟ್ಟಿಗೂ ಇರುವ ಇಸ್ರಾಯೇಲಿನ ಮೇಲೆಯೂ, ಯೆಹೂದದ ಮೇಲೆಯೂ ಸ್ಥಿರಪಡಿಸುವ ಹಾಗೆ ನಾನು ಮಾಡದೆ ಇದ್ದರೆ, ದೇವರು ಅಬ್ನೇರನಿಗೆ ಹೀಗೆಯೂ ಅಧಿಕವಾಗಿಯೂ ಮಾಡಲಿ,” ಎಂದನು.
१०शौलाच्या घराण्याकडून राज्य काढून घेऊन ते दावीदाकडे सोपवण्याचे भाकित परमेश्वराने केले आहे. परमेश्वर दावीदाला इस्राएल आणि यहूदा यांचा राजा करणार आहे. दानपासून बैर-शेब्यापर्यंत त्याचे राज्य असेल.
11 ಈಷ್ಬೋಶೆತನು ಅಬ್ನೇರನಿಗೆ ಭಯಪಟ್ಟದ್ದರಿಂದ ಒಂದು ಮಾತಾದರೂ ಪ್ರತ್ಯುತ್ತರ ಹೇಳಲಾರದೆ ಇದ್ದನು.
११ईश-बोशेथ हे ऐकून इतका घाबरला की त्याने अबनेरला काहीही प्रत्युत्तर केले नाही.
12 ಆಗ ಅಬ್ನೇರನು ತನ್ನ ಪರವಾಗಿ ದಾವೀದನ ಬಳಿಗೆ ತನ್ನ ದೂತರನ್ನು ಕಳುಹಿಸಿ, “ದೇಶವು ಯಾರದು? ಇದಲ್ಲದೆ ನೀನು ನನ್ನ ಸಂಗಡ ಒಡಂಬಡಿಕೆಯನ್ನು ಮಾಡು. ಆಗ ಇಗೋ, ಇಸ್ರಾಯೇಲರನ್ನೆಲ್ಲಾ ನಿನ್ನ ಬಳಿಗೆ ಬರಮಾಡುವ ಹಾಗೆ ನನ್ನ ಕೈ ನಿನ್ನ ಸಂಗಡ ಇರುವುದೆಂದು ಹೇಳಿರಿ,” ಎಂದನು.
१२अबनेरने दूताकरवी दावीदाला निरोप पाठवला, “या प्रदेशावर कोणी राज्य करावे असे तुला वाटते? माझ्याशी करार कर. म्हणजे इस्राएलचा राजा म्हणून तुला मान्यता मिळवून द्यायला मी मदत करीन.”
13 ಅದಕ್ಕೆ ದಾವೀದನು, “ಒಳ್ಳೆಯದು, ನಾನು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡುವೆನು. ಆದರೆ ನಾನು ನಿನ್ನಲ್ಲಿ ಒಂದನ್ನು ಕೇಳುತ್ತೇನೆ.” ಏನೆಂದರೆ, “ನೀನು ನನ್ನನ್ನು ನೋಡುವುದಕ್ಕೆ ಬರುವಾಗ, ಸೌಲನ ಮಗಳಾದ ಮೀಕಲಳನ್ನು ನೀನು ಕರೆದುಕೊಂಡು ಬಾರದೆ ಹೋದರೆ, ನೀನು ನನ್ನ ಮುಖವನ್ನು ಕಾಣಬಾರದು,” ಎಂದನು.
१३यावर दावीद म्हणाला, “हे छान झाले मी करार करायला तयार आहे. आता माझे एक मागणे आहे. शौलाची मुलगी मीखल हिला आपल्याबरोबर आणलीस तरच मी तुला भेटीन.”
14 ದಾವೀದನು ಸೌಲನ ಮಗ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ, “ಫಿಲಿಷ್ಟಿಯರ ನೂರು ಮುಂದೊಗಲುಗಳಿಂದ ನನಗೆ ನೇಮಕ ಮಾಡಿಕೊಂಡ ನನ್ನ ಹೆಂಡತಿಯಾದ ಮೀಕಲಳನ್ನು ನನಗೆ ಒಪ್ಪಿಸು,” ಎಂದನು.
१४शौलाचा मुलगा ईश-बोशेथ याच्याकडे दावीदाने जासूदाकरवी निरोप पाठवला, “माझी पत्नी मीखल हिला माझ्याकडे पाठवून द्यावे. ती मला देण्यात आलेली आहे. तिच्या प्राप्तीसाठी मी शंभर पलिष्ट्यांचा वध केला होता.”
15 ಆಗ ಈಷ್ಬೋಶೆತನು ಸೇವಕರನ್ನು ಕಳುಹಿಸಿ, ಲಯಿಷನ ಮಗನಾಗಿರುವ ಅವಳ ಗಂಡ ಪಲ್ಟೀಯೇಲನಿಂದ ಅವಳನ್ನು ಕರೆಯಿಸಿಕೊಂಡನು.
१५तेव्हा ईश-बोशेथने लईशाचा मुलगा पालटीयेल याच्याकडून मीखलला आणण्यास माणसे पाठवली.
16 ಅವಳ ಗಂಡನು ಅವಳ ಸಂಗಡ ಬಹುರೀಮಿನವರೆಗೂ ಅಳುತ್ತಾ ಅವಳ ಹಿಂದೆ ಹೋದನು. ಆಗ ಅಬ್ನೇರನು ಅವನಿಗೆ, “ತಿರುಗಿ ಹೋಗು ಹಿಂದಿರುಗು,” ಎಂದನು. ಅವನು ತಿರುಗಿಹೋದನು.
१६पालटीयेल हा मीखलचा पती तो तिच्या मागोमाग बहूरीमपर्यंत रडत रडत गेला. पण अबनेरने त्यास परत जाण्यास सांगितले तेव्हा तो मागे फिरला.
17 ಅಬ್ನೇರನು ಇಸ್ರಾಯೇಲಿನ ಹಿರಿಯರ ಸಂಗಡ ಮಾತನಾಡಿ, “ದಾವೀದನು ನಿಮ್ಮ ಮೇಲೆ ಅರಸನಾಗಿರುವುದಕ್ಕೆ ನೀವು ಹುಡುಕುತ್ತಿದ್ದೀರಿ.
१७अबनेराने इस्राएलाच्या वडीलधाऱ्या मंडळीकडे निरोप पाठवला, “दावीदाला राजा करावे असे तुमच्या मनात होते.
18 ಆದರೆ ಈಗ ಅದನ್ನು ಮಾಡಿರಿ. ಏಕೆಂದರೆ, ‘ನಾನು ನನ್ನ ದಾಸನಾದ ದಾವೀದನ ಕೈಯಿಂದ ಜನರಾದ ಇಸ್ರಾಯೇಲರನ್ನು ಫಿಲಿಷ್ಟಿಯರ ಕೈಯಿಂದಲೂ, ಅವರ ಸಮಸ್ತ ಶತ್ರುಗಳ ಕೈಯಿಂದಲೂ ತಪ್ಪಿಸಿ ರಕ್ಷಿಸುವೆನು,’ ಎಂದು ಯೆಹೋವ ದೇವರು ದಾವೀದನ ವಿಷಯದಲ್ಲಿ ಹೇಳಿದ್ದಾರೆ,” ಎಂದನು.
१८आता ते प्रत्यक्षात आणा परमेश्वराने दावीदा विषयी म्हटले आहे, पलिष्टी लोक आणि इतर शत्रू यांच्यापासून मी माझ्या इस्राएल लोकांचे संरक्षण करीन. माझा सेवक दावीद याच्यामार्फत मी हे करीन.”
19 ಇದಲ್ಲದೆ ಅಬ್ನೇರನು ಬೆನ್ಯಾಮೀನ್ಯರ ಸಂಗಡ ಮಾತನಾಡಿದನು. ಅಬ್ನೇರನು ಇಸ್ರಾಯೇಲರ ದೃಷ್ಟಿಗೂ ಬೆನ್ಯಾಮೀನನ ಮನೆಯವರೆಲ್ಲರ ದೃಷ್ಟಿಗೂ ಒಳ್ಳೆಯದಾಗಿ ತೋರಿದ್ದನ್ನೆಲ್ಲಾ ದಾವೀದನಿಗೆ ತಿಳಿಸುವುದಕ್ಕೆ ಹೆಬ್ರೋನಿಗೆ ಹೋದನು.
१९अबनेरने हे सर्व हेब्रोन येथे दावीदाच्या कानावर घातले. बन्यामीन घराण्यातील लोकांशीही तो या विषयी बोलला त्यांना आणि इस्राएल लोकांस ते चांगले वाटले.
20 ಹೀಗೆಯೇ ಅಬ್ನೇರನು ತನ್ನ ಸಂಗಡ ಇಪ್ಪತ್ತು ಜನರನ್ನು ಕರೆದುಕೊಂಡು, ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಬಂದನು. ದಾವೀದನು ಅಬ್ನೇರನಿಗೂ, ಅವನ ಸಂಗಡ ಬಂದ ಜನರಿಗೂ ಔತಣ ಮಾಡಿಸಿದನು.
२०एवढे झाल्यावर तो आपल्या बरोबर वीस जणांना घेऊन हेब्रोन येथे दावीदाकडे आला. दावीदाने अबनेर आणि त्याच्या बरोबरचे हे सर्व लोक यांना मेजवानी दिली.
21 ಆಗ ಅಬ್ನೇರನು ದಾವೀದನಿಗೆ, “ಸಮಸ್ತ ಇಸ್ರಾಯೇಲರು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡುವ ಹಾಗೆಯೂ, ನಿನ್ನ ಪ್ರಾಣವು ಇಚ್ಛೈಸುವ ಹಾಗೆ ಎಲ್ಲರ ಮೇಲೆ ಆಳುವ ಹಾಗೆಯೂ ನಾನು ಎದ್ದು ಹೋಗಿ, ಸಮಸ್ತ ಇಸ್ರಾಯೇಲರನ್ನು ಅರಸನಾದ ನನ್ನ ಒಡೆಯನ ಬಳಿಗೆ ಕೂಡಿಸಿಕೊಂಡು ಬರುವೆನು,” ಎಂದನು. ದಾವೀದನು ಅಬ್ನೇರನಿಗೆ ಅಪ್ಪಣೆ ಕೊಟ್ಟದ್ದರಿಂದ ಅವನು ಸಮಾಧಾನವಾಗಿ ಹೋದನು.
२१अबनेर दावीदाला म्हणाला, “महाराज, सर्व इस्राएल लोकांस मी आता आपल्या पायाशी एकत्र आणतो. ते तुमच्याशी करार करतील. मग आपल्या इच्छेप्रमाणे तुम्ही इस्राएलवर राज्य कराल.” तेव्हा दावीदाने अबनेरला निरोप दिला. अबनेर शांततेने परत गेला.
22 ಆಗ ದಾವೀದನ ಸೇವಕರೂ ಯೋವಾಬನೂ ಒಂದು ಸೈನ್ಯದಿಂದ ದೊಡ್ಡ ಕೊಳ್ಳೆಯನ್ನು ತೆಗೆದುಕೊಂಡು ಬಂದರು. ಆಗ ಅಬ್ನೇರನು ಹೆಬ್ರೋನಿನಲ್ಲಿ ದಾವೀದನ ಸಂಗಡ ಇರಲಿಲ್ಲ. ಏಕೆಂದರೆ ಅವನು ಅಬ್ನೇರನನ್ನು ಕಳುಹಿಸಿಬಿಟ್ಟದ್ದರಿಂದ, ಅವನು ಸಮಾಧಾನವಾಗಿ ಹೋದನು.
२२इकडे यवाब आणि दावीदाचे लोक युध्दावरून परत आले. त्यांनी शत्रूकडून बऱ्याच मौल्यवान वस्तू लुटून आणल्या. दावीदाने निरोप दिल्यावर अबनेर नुकताच शांतचित्ताने तेथून गेला होता. तेव्हा हेब्रोन येथे दावीदाजवळ तो अर्थातच नव्हता.
23 ಯೋವಾಬನೂ ಅವನ ಸಂಗಡ ಇದ್ದ ಸೈನ್ಯವೂ ಬಂದಾಗ ಅಲ್ಲಿದ್ದವರು ಯೋವಾಬನಿಗೆ, “ನೇರನ ಮಗ ಅಬ್ನೇರನು ಅರಸನ ಬಳಿಗೆ ಬಂದನು. ದಾವೀದನು ಅವನನ್ನು ಕಳುಹಿಸಿಬಿಟ್ಟದ್ದರಿಂದ ಸಮಾಧಾನವಾಗಿ ಹೋಗಿದ್ದಾನೆ,” ಎಂದರು.
२३यवाब सर्वसैन्यासह हेब्रोन येथे आला. सैन्यातील लोक यवाबाला म्हणाले, “नेरचा मुलगा अबनेर दावीदराजाकडे आलेला होता आणि दावीदाने त्यास शांत मनाने जाऊ दिले.”
24 ಆಗ ಯೋವಾಬನು ಅರಸನ ಬಳಿಗೆ ಬಂದು, “ಏನು ಮಾಡಿದೆ? ಅಬ್ನೇರನು ನಿನ್ನ ಬಳಿಗೆ ಬಂದನು. ಅವನು ಹೋಗಿ ಬಿಡುವ ಹಾಗೆ ನೀನು ಅವನನ್ನು ಕಳುಹಿಸಿಬಿಟ್ಟದ್ದು ಏಕೆ?
२४तेव्हा यवाब राजाकडे आला आणि म्हणाला, “हे आपण काय केलेत? अबनेर येथे आलेला असताना तुम्ही त्यास तसेच जाऊ दिलेत! असे का?
25 ನೇರನ ಮಗ ಅಬ್ನೇರನನ್ನು ನೀನು ಅರಿತಿದ್ದಿಯಲ್ಲಾ. ನಿಶ್ಚಯವಾಗಿ ಅವನು ನಿನ್ನನ್ನು ಮೋಸಗೊಳಿಸಲು ನಿನ್ನ ಆಗಮನ, ನಿರ್ಗಮನಗಳನ್ನು ತಿಳಿದುಕೊಳ್ಳುವುದಕ್ಕೂ, ನೀನು ಮಾಡುವುದನ್ನೆಲ್ಲಾ ಕಂಡುಹಿಡಿಯುವುದಕ್ಕೂ ಬಂದಿದ್ದನು,” ಎಂದನು.
२५या नेरच्या मुलाला तुम्ही ओळखताच. त्याचा यामध्ये कावा आहे. तो येथील बातमी काढायला आला होता.”
26 ಯೋವಾಬನು ದಾವೀದನನ್ನು ಬಿಟ್ಟು ಹೊರಟುಬಂದಾಗ, ಅವನು ಅಬ್ನೇರನ ಹಿಂದೆ ದೂತರನ್ನು ಕಳುಹಿಸಿದನು. ಅವರು ಅವನನ್ನು ಸಿರಾ ಎಂಬ ಬಾವಿಯಿಂದ ತಿರುಗಿ ಕರೆದುಕೊಂಡು ಬಂದರು. ಆದರೆ ದಾವೀದನಿಗೆ ಅದು ತಿಳಿಯದೆ ಇತ್ತು.
२६मग दावीदाकडून निघून यवाबाने आपले दूत अबनेरच्या मागावर पाठवले. त्यांनी त्यास सिरा विहिरीजवळ गाठले आणि परत आणले. दावीदाला याची काहीच कल्पना नव्हती.
27 ಅಬ್ನೇರನು ಹೆಬ್ರೋನಿಗೆ ತಿರುಗಿ ಬಂದ ತರುವಾಯ ಯೋವಾಬನ ಬಾಗಿಲಲ್ಲಿ ಅವನ ಸಂಗಡ ಸಮಾಧಾನವಾಗಿ ಮಾತನಾಡಿ, ಅವನನ್ನು ಒಂದು ಕಡೆ ಕರೆದುಕೊಂಡು ಹೋಗಿ, ತನ್ನ ತಮ್ಮ ಅಸಾಯೇಲನ ರಕ್ತಾಪರಾಧದ ನಿಮಿತ್ತ ಅಲ್ಲಿ ಅವನ ಹೊಟ್ಟೆಯಲ್ಲಿ ಇರಿದು ಕೊಂದುಹಾಕಿದನು.
२७हेब्रोन येथे त्यास आणल्यावर यवाबाने त्यास गुप्त मसलत करण्यासाठी म्हणून वेशीच्या आत घेतले आणि अबनेरच्या पोटावर वार केला. अबनेर गतप्राण झाला. यवाबाचा भाऊ असाएल याला अबनेराने मारले होते त्याचा यवाबाने सूड उगवला.
28 ದಾವೀದನು ಅದನ್ನು ಕೇಳಿದಾಗ, “ನೇರನ ಮಗನಾದ ಅಬ್ನೇರನ ರಕ್ತಾಪರಾಧಕ್ಕೆ ನಾನೂ ನನ್ನ ರಾಜ್ಯವೂ ಎಂದೆಂದಿಗೂ ಯೆಹೋವ ದೇವರ ಮುಂದೆ ನಿರಪರಾಧಿಯಾಗಿದ್ದೇವೆ.
२८दावीदाला हे वृत्त समजले तेव्हा तो म्हणाला, “नेरचा मुलगा अबनेर याच्या खुनाच्या बाबतीत मी आणि माझे राज्य निर्दोष आहोत, परमेश्वर हे जाणतो.
29 ಅದು ಯೋವಾಬನ ತಲೆಯ ಮೇಲೆಯೂ, ಅವನ ತಂದೆಯ ಮನೆತನದವರ ಮೇಲೆಯೂ ನಿಂತಿರಲಿ. ಯೋವಾಬನ ಮನೆಯಲ್ಲಿ ರಕ್ತಸ್ರಾವ ರೋಗದವರೂ, ಕುಷ್ಠರೋಗಿಯೂ, ಕೋಲು ಹಿಡಿದು ನಡೆಯುವವನೂ, ಖಡ್ಗದಿಂದ ಬೀಳುವವನೂ, ಆಹಾರದ ಕೊರತೆಯುಳ್ಳವನಾಗಿಯೂ ಇದ್ದೇ ಇರಲಿ,” ಎಂದನು.
२९यवाब आणि त्याचे कुटुंबीय या कृत्याला जबाबदार आहेत. तेव्हा अपराधी ते आहेत. याचे फळ त्यांना भोगावे लागेल त्याच्या वंशातील लोक महारोग, पंगुत्व यांनी ग्रासले जातील, युध्दात मारले जातील. त्यांची अन्नान्नदशा होईल.”
30 ಹೀಗೆ ಯೋವಾಬ ಮತ್ತು ಅಬೀಷೈ ಅಬ್ನೇರನನ್ನು ಕೊಂದುಹಾಕಿದರು. ಏಕೆಂದರೆ ಅಬ್ನೇರನು ಅವನ ಸಹೋದರ ಅಸಾಯೇಲನನ್ನು ಗಿಬ್ಯೋನಿನ ಯುದ್ಧದಲ್ಲಿ ಕೊಂದುಹಾಕಿದ್ದನು.
३०गिबोनच्या लढाईत अबनेरने असाएलला मारले. आपल्या भावाच्या वधाचे प्रत्युत्तर म्हणून यवाब आणि अबीशय यांनी अबनेरला मारले.
31 ದಾವೀದನು ಯೋವಾಬನಿಗೂ, ಅವನ ಸಂಗಡವಿದ್ದ ಸಮಸ್ತ ಜನರಿಗೂ, “ನೀವು ನಿಮ್ಮ ವಸ್ತ್ರಗಳನ್ನು ಹರಿದುಕೊಂಡು, ಗೋಣಿತಟ್ಟುಗಳನ್ನು ಉಟ್ಟುಕೊಂಡು, ಅಬ್ನೇರನ ಮುಂದೆ ಗೋಳಾಡಿರಿ,” ಎಂದನು. ಅರಸನಾದ ದಾವೀದನು ತಾನೇ ಅವನ ಶವದ ಪೆಟ್ಟಿಗೆಯ ಹಿಂದೆ ಹೋದನು.
३१दावीदाने यवाब व त्याच्या बरोबरचे सर्व लोक यांना सांगितले, “तुमची ही वस्त्रे फाडा आणि शोक झाला असल्याचे दाखवणारी वस्त्रे घाला.” अबनेरच्या मृत्युबद्दल दुःख व्यक्त करा.
32 ಅವರು ಅಬ್ನೇರನನ್ನು ಹೆಬ್ರೋನಿನಲ್ಲಿ ಹೂಳಿಟ್ಟರು. ಆಗ ಅರಸನು ತನ್ನ ಧ್ವನಿಯನ್ನೆತ್ತಿ ಅಬ್ನೇರನ ಸಮಾಧಿಯ ಬಳಿಯಲ್ಲಿ ಅತ್ತನು; ಜನರೆಲ್ಲರು ಅತ್ತರು.
३२त्यांनी हेब्रोन येथे अबनेरचे दफन केले. दावीद अत्यंविधीला हजर होता. अबनेरच्या कबरीपाशी राजा आणि इतर सर्वजण यांनी विलाप केला.
33 ಅರಸನು ಅಬ್ನೇರನಿಗೋಸ್ಕರ ಗೋಳಾಡಿ ಹೀಗೆ ಹಾಡಿದನು: “ಬುದ್ಧಿಹೀನನು ಸತ್ತ ಹಾಗೆಯೇ, ಅಬ್ನೇರನು ಸತ್ತನೋ?
३३तेथे दावीद राजाने हे शोकगीत म्हटले, “एखाद्या मूढ गुन्हेगाराप्रमाणे अबनेर मेला, नाही का?
34 ನಿನ್ನ ಕೈಗಳು ಕಟ್ಟಿರಲಿಲ್ಲ. ನಿನ್ನ ಕಾಲಿಗೆ ಬೇಡಿ ಹಾಕಿರಲಿಲ್ಲ. ಒಬ್ಬನು ದುಷ್ಟರ ಮುಂದೆ ಬೀಳುವ ಹಾಗೆಯೇ ನೀನು ಬಿದ್ದು ಹೋದೆ.” ಆಗ ಜನರೆಲ್ಲರು ತಿರುಗಿ ಅವನಿಗೋಸ್ಕರ ಅತ್ತರು.
३४अबनेर, अरे, तुझ्या हातात बेड्या नव्हत्या, पाय साखळदंडांनी बांधले नव्हते. नाही रे, तुला कपटी लोकांनी मारले.” मग पुन्हा सर्वांनी अबनेरसाठी शोक व्यक्त केला.
35 ಇನ್ನೂ ಹೊತ್ತಿರುವಾಗಲೇ ಜನರೆಲ್ಲರು ಬಂದು ಊಟಮಾಡು ಎಂದು ದಾವೀದನಿಗೆ ಹೇಳಿದರು. ಅದಕ್ಕೆ ದಾವೀದನು, “ಸೂರ್ಯನು ಅಸ್ತಮಿಸುವುದಕ್ಕಿಂತ ಮುಂಚೆ ನಾನು ರೊಟ್ಟಿಯನ್ನಾಗಲಿ, ಬೇರೆ ಯಾವ ಆಹಾರವನ್ನಾಗಲಿ ರುಚಿ ನೋಡಿದರೆ, ದೇವರು ನನಗೆ ಬೇಕಾದದ್ದನ್ನು ಮಾಡಲಿ, ಅಧಿಕವಾಗಿಯೂ ಮಾಡಲಿ,” ಎಂದು ಆಣೆ ಇಟ್ಟುಕೊಂಡನು.
३५दावीदाने काही तरी खाऊन घ्यावे म्हणून दिवसभर लोकांनी त्याची मनधरणी केली. पण दावीदाने एक निर्धार केला होता. सूर्यास्तापूर्वी मी भाकर किंवा तत्सम काहीही खाल्ले तरी देव मला शासन करो, मला संकटात टाको असे तो बोलला होता.
36 ಜನರೆಲ್ಲರು ಅದನ್ನು ತಿಳಿದುಕೊಂಡಾಗ, ಅವರೆಲ್ಲರಿಗೆ ಮೆಚ್ಚಿಗೆಯಾಯಿತು. ಹಾಗೆಯೇ ಅರಸನು ಏನೇನು ಮಾಡಿದನೋ, ಅದು ಜನರಿಗೆ ಮೆಚ್ಚಿಗೆಯಾಗಿತ್ತು.
३६लोकांनी हे सर्व पाहिले आणि दावीद राजाची वर्तणूक पाहून त्यांना आनंद झाला.
37 ಏಕೆಂದರೆ ನೇರನ ಮಗ ಅಬ್ನೇರನನ್ನು ಕೊಂದುಹಾಕಿದ್ದು ಅರಸನಿಂದ ಆದದ್ದಲ್ಲವೆಂದು ಸಮಸ್ತ ಜನರೂ, ಸಮಸ್ತ ಇಸ್ರಾಯೇಲರೂ ಆ ದಿವಸದಲ್ಲಿ ತಿಳಿದುಕೊಂಡರು.
३७दावीदाने नेर चा पुत्र अबनेरला मारलेले नाही याबद्दल यहूदा आणि इस्राएल लोकांची खात्री पटली.
38 ಇದಲ್ಲದೆ ಅರಸನು ತನ್ನ ಸೇವಕರಿಗೆ, “ಇಸ್ರಾಯೇಲಿನಲ್ಲಿ ಈ ಹೊತ್ತು ಪ್ರಧಾನನೂ ದೊಡ್ಡವನೂ ಬಿದ್ದಿದ್ದಾನೆಂದು ಗೊತ್ತಿಲ್ಲವೋ?
३८दावीद राजा आपल्या सेवकांना म्हणाला, आज एक मुख्य आणि महत्वाचा पुढारी इस्राएलमध्ये मारला गेला हे तुम्ही जाणत नाही काय?
39 ನಾನು ಅರಸನಾಗಿ ಅಭಿಷೇಕ ಹೊಂದಿದ್ದರೂ ಇಂದಿಗೆ ದುರ್ಬಲನಾಗಿದ್ದೇನೆ. ಚೆರೂಯಳ ಪುತ್ರರಾದ ಇವರು ನನ್ನ ಹತೋಟಿಗೆ ಬಾರದವರು. ಕೆಟ್ಟತನ ಮಾಡುವವನಿಗೆ ಯೆಹೋವ ದೇವರು ಅವನ ಕೆಟ್ಟತನಕ್ಕೆ ಸರಿಯಾಗಿ ಪ್ರತಿಫಲ ಕೊಡುವರು,” ಎಂದನು.
३९आज जरी मी आभिषिक्त राजा आहे, तरी मी अशक्त आहे. सरुवेच्या मुलांचे हे वर्तन मला फार त्रासदायक झाले आहे. परमेश्वर त्यांच्या गुन्ह्याबद्दल त्यांना तसेच शासन करो.

< ಸಮುವೇಲನು - ದ್ವಿತೀಯ ಭಾಗ 3 >