< ಸಮುವೇಲನು - ದ್ವಿತೀಯ ಭಾಗ 20 >

1 ಬೆನ್ಯಾಮೀನ್ಯನಾದ ಬಿಕ್ರಿಯ ಮಗ ಶೆಬನೆಂಬ ಹೆಸರುಳ್ಳ ಒಬ್ಬ ನೀಚ ವ್ಯಕ್ತಿ ಅಲ್ಲಿದ್ದನು. ಅವನು ತುತೂರಿಯನ್ನು ಊದಿ ಹೀಗಂದನು, “ನಮಗೆ ದಾವೀದನಲ್ಲಿ ಪಾಲಿಲ್ಲ, ಇಷಯನ ಮಗನ ಬಳಿಯಲ್ಲಿ ನಮಗೆ ಬಾಧ್ಯತೆಯೂ ಇಲ್ಲ. ಇಸ್ರಾಯೇಲರೇ, ನಿಮ್ಮ ನಿಮ್ಮ ಗುಡಾರಗಳಿಗೆ ಹೋಗಿರಿ.”
當時,在那裏有個敗類,始叫舍尸巴,是本雅明人彼革黎的兒子。吹著號,喊說:「我們和達味沒有關係,對葉瑟兒子的產業沒有分子。以色列人! 各自回本家吧!
2 ಆಗ ಇಸ್ರಾಯೇಲರೆಲ್ಲರೂ ದಾವೀದನನ್ನು ಬಿಟ್ಟು ಸರಿದು, ಬಿಕ್ರಿಯ ಮಗ ಶೆಬನ ಹಿಂದೆ ಹೋದರು. ಆದರೆ ಯೊರ್ದನಿನಿಂದ ಯೆರೂಸಲೇಮಿನವರೆಗೂ ಇರುವ ಯೆಹೂದ ಜನರು ತಮ್ಮ ಅರಸನನ್ನು ಅಂಟಿಕೊಂಡಿದ್ದರು.
因此,眾以色列人離開達味,跟隨了彼革黎的兒子舍巴;但猶大人仍然緊隨他們的君王,由約旦河直到了耶路撒冷。
3 ದಾವೀದನು ಯೆರೂಸಲೇಮಿನಲ್ಲಿರುವ ತನ್ನ ಮನೆಗೆ ಬಂದನು. ಅರಸನು ಮನೆಯಲ್ಲಿ ಕಾಯಲು ಇಟ್ಟ ಉಪಪತ್ನಿಗಳಾದ ಹತ್ತು ಮಂದಿ ಸ್ತ್ರೀಯರನ್ನು ತೆಗೆದುಕೊಂಡು, ಅವರನ್ನು ಒಂದು ಕಾವಲಿನಲ್ಲಿರಿಸಿ ಸಾಕುತ್ತಿದ್ದನು. ಅವರಿಗೆ ಅನ್ನವಸ್ತ್ರ ಕೊಡುತ್ತಿದ್ದನು. ಅವರ ಸಂಪರ್ಕ ಮಾಡಲಿಲ್ಲ. ಹಾಗೆಯೇ ಅವರು ಸಾಯುವ ದಿವಸದವರೆಗೂ ವಿಧವೆಯರಂತೆ ಇದ್ದು ಕಾವಲಲ್ಲಿರಬೇಕಾಯಿತು.
達味王進了耶路撒冷的宮殿,就將他留下看守宮殿的十個個嬪妃,留在禁官裏,養活她們,卻不再親近她們。她們被禁在冷官內,一直到死,終身守寡。
4 ಅರಸನು ಅಮಾಸನಿಗೆ, “ನೀನು ಮೂರು ದಿವಸಗಳೊಳಗೆ ಯೆಹೂದ ಜನರನ್ನು ಕೂಡಿಸಿಕೊಂಡು ನನ್ನ ಬಳಿಗೆ ಬಾ ಮತ್ತು ನೀನೇ ಇಲ್ಲಿ ಇರು,” ಎಂದನು.
王對阿瑪撒說:「三天之內,你應給我召集猶大人,你也親自也該來到這裏」。
5 ಹಾಗೆಯೇ ಅಮಾಸನು ಯೆಹೂದ ಜನರನ್ನು ಕೂಡಿಸಲು ಹೋದನು. ಆದರೆ ಅವನು ತನಗೆ ನೇಮಿಸಿದ ಕಾಲಕ್ಕಿಂತ ಬಾರದೆ ಹೆಚ್ಚು ತಡಮಾಡಿದನು.
阿彼撒去召集猶大人,但他遲延耽擱,過了君王他所定的期限。
6 ಆದ್ದರಿಂದ ದಾವೀದನು ಅಬೀಷೈಯನಿಗೆ, “ಈಗ ಅಬ್ಷಾಲೋಮನಿಗಿಂತ ಬಿಕ್ರಿಯ ಮಗ ಶೆಬನು ನಮಗೆ ಹೆಚ್ಚಿನ ಕೇಡನ್ನು ಮಾಡುವನು. ಅವನು ತನಗೆ ಗಡಿ ಪಟ್ಟಣಗಳನ್ನು ಸಂಪಾದಿಸಿಕೊಂಡು, ನಮ್ಮಿಂದ ತಪ್ಪಿಸಿಕೊಳ್ಳದೆ ಹಾಗೆ ನೀನು ನಿನ್ನ ಯಜಮಾನನ ಸೇವಕರನ್ನು ತೆಗೆದುಕೊಂಡು ಹೊರಟು ಅವನನ್ನು ಹಿಂದಟ್ಟು,” ಎಂದನು.
達味就對阿彼撒說:「現今彼革黎的兒子舍巴危害我們,恐怕甚於阿貝沙隆。你快去領你主人的軍隊去追趕他,免得他佔了設防的城,由我們眼前逃脫」。
7 ಹಾಗೆಯೇ ಅವನ ಹಿಂದೆ ಯೋವಾಬನ ಜನರೂ, ಕೆರೇತ್ಯರೂ, ಪೆಲೇತ್ಯರೂ, ಸಮಸ್ತ ಪರಾಕ್ರಮಶಾಲಿಗಳೂ ಅಬೀಷೈಯನ ನೇತೃತ್ವದಲ್ಲಿ ಬಿಕ್ರಿಯ ಮಗ ಶೆಬನನ್ನು ಹಿಂದಟ್ಟಲು ಯೆರೂಸಲೇಮಿನಿಂದ ಹೊರಟರು.
約阿布的部下,革肋提人和培肋提人,以及所有的勇士,都跟阿彼撒去了。他們由耶路撒冷出發,趕走彼革黎的兒子舍巴。
8 ಅವರು ಗಿಬ್ಯೋನಿನ ಸಮೀಪದಲ್ಲಿರುವ ದೊಡ್ಡ ಕಲ್ಲಿನ ಬಳಿಗೆ ಬಂದಾಗ, ಅಮಾಸನು ಅವರೆದುರಿಗೆ ಬಂದನು. ಯೋವಾಬನು ತಾನು ಧರಿಸಿದ್ದ ಅಂಗಿಯ ಮೇಲೆ ಒಂದು ನಡುಕಟ್ಟನ್ನು ಕಟ್ಟಿಕೊಂಡಿದ್ದನು. ಅದರಲ್ಲಿ ಒರೆಯ ಸಂಗಡ ಒಂದು ಕಠಾರಿ ಅವನ ನಡುವಿನಲ್ಲಿ ತೂಗುತ್ತಿತ್ತು. ಅವನು ನಡೆಯುವಾಗ ಕಠಾರಿ ಒರೆಯಿಂದ ಕೆಳಗೆ ಬಿದ್ದಿತು.
當他們來到基貝紅的大石旁,阿瑪撒也迎面而來。約阿布身穿戰袍,束著腰帶,腰間掛著一把帶鞘的刀。約阿布的刀出鞘落地。
9 ಆಗ ಯೋವಾಬನು ಅಮಾಸನಿಗೆ, “ನನ್ನ ಸಹೋದರನೇ, ಕ್ಷೇಮವೋ?” ಎಂದನು. ಯೋವಾಬನು ಅವನನ್ನು ಮುದ್ದಿಟ್ಟುಕೊಳ್ಳಲು ತನ್ನ ಬಲಗೈಯಿಂದ ಅವನ ಗಡ್ಡವನ್ನು ಹಿಡಿದನು.
約阿布對阿瑪撒說:「吾兄,你好﹖」約阿布遂用石手抓住阿瑪撒的鬍鬚,與他親吻。
10 ಆದರೆ ಅಮಾಸನು ಯೋವಾಬನ ಕೈಯಲ್ಲಿ ಕಠಾರಿ ಇದ್ದುದರಿಂದ ಎಚ್ಚರಿಕೆ ತೆಗೆದುಕೊಳ್ಳದಿರುವಾಗ, ಯೋವಾಬನು ಅವನನ್ನು ಕರುಳುಗಳು ಹೊರಬರುವ ಹಾಗೆ ಅವನ ಪಕ್ಕೆಯ ಹೊಟ್ಟೆಯಲ್ಲಿ ತಿವಿದನು. ಎರಡನೆಯ ಸಾರಿ ಹೊಡೆಯಲಿಲ್ಲ. ಅವನು ಸತ್ತನು. ಯೋವಾಬನೂ, ಅವನ ಸಹೋದರನಾದ ಅಬೀಷೈಯನೂ ಬಿಕ್ರಿಯ ಮಗ ಶೆಬನನ್ನು ಹಿಂದಟ್ಟಿದರು.
阿瑪撒沒有提防約阿布手中的刀;約阿布就用刀刺穿了他的肚腹,五臟傾流在地上,沒有再刺第二下,他就死了。約阿布與自己的兄弟阿彼瑟,便往前追趕彼革黎的兒子舍巴。
11 ಯೋವಾಬನ ಜನರಲ್ಲಿ ಒಬ್ಬನು ಸತ್ತವನ ಬಳಿಯಲ್ಲಿ ನಿಂತು, “ಯಾವನು ಯೋವಾಬನ ಮೇಲೆ ಇಷ್ಟವುಳ್ಳವನೋ, ಯಾವನು ದಾವೀದನಿಗೆ ಹೊಂದಿದವನೋ, ಅವನು ಯೋವಾಬನ ಹಿಂದೆ ಹೋಗಲಿ,” ಎಂದನು.
看守阿瑪撒屍首的約阿布的一個兵士喊說:「誰喜愛約阿布,誰屬達味,就跟約阿布去! 」
12 ಆದರೆ ಅಮಾಸನು ರಾಜಮಾರ್ಗದೊಳಗೆ ರಕ್ತದಲ್ಲಿ ಹೊರಳಾಡುತ್ತಾ ಇದ್ದನು. ಜನರೆಲ್ಲರು ನಿಂತಿರುವುದನ್ನು ಆ ಮನುಷ್ಯನು ಕಂಡಾಗ, ಅವನು ಅಮಾಸನನ್ನು ದಾರಿಯಿಂದ ಹೊಲಕ್ಕೆ ಎಳೆದು ಹಾಕಿ, ಅವನ ಮೇಲೆ ಒಂದು ವಸ್ತ್ರವನ್ನು ಹಾಕಿದನು.
阿瑪撒此時臥在路中血泊中,那人見眾人停留不前,就將阿瑪撒的屍首,由路上搬到田裏,上面蓄上一件衣服,因為他見軍人到了那裏,就停在屍首前。
13 ಶವವನ್ನು ರಾಜಮಾರ್ಗದಿಂದ ಎಳೆದು ಆಚೆ ಹಾಕಿದ ತರುವಾಯ ಜನರೆಲ್ಲರೂ ಮುಂದಕ್ಕೆ ಹೋಗಿ, ಬಿಕ್ರಿಯ ಮಗನಾದ ಶೆಬನನ್ನು ಹಿಂದಟ್ಟಿ ಯೋವಾಬನ ಹಿಂದೆ ಹೋದರು.
屍首由路上搬走後,軍人就都過去,跟隨約阿布追趕彼革黎的兒子舍巴。
14 ಶೆಬನು ಇಸ್ರಾಯೇಲಿನ ಎಲ್ಲಾ ಗೋತ್ರಗಳಲ್ಲಿ ಹಾದು ಬೇತ್ ಮಾಕದ ಆಬೇಲಿಗೆ ಬಂದು, ಬೇರ‍್ಯರ ಪ್ರದೇಶದ ಮಾರ್ಗವಾಗಿ ಹೋದನು. ಆಗ ಬೇರ‍್ಯರು ಕೂಡಿಕೊಂಡು ಅವನ ಸಂಗಡ ಹೋದರು.
舍巴走遍了以色列各支派,人都不理他。隨後到了貝特瑪阿加的阿貝耳,眾彼革黎人卻聚集起來,跟隨了他。
15 ಯೋವಾಬನ ಜೊತೆಗಿದ್ದ ಸೈನಿಕರು ಬಂದು ಆಬೇಲ್ ಬೇತ್ ಮಾಕಾ ಊರಿಗೆ ಮುತ್ತಿಗೆ ಹಾಕಿ, ಪಟ್ಟಣಕ್ಕೆದುರಾಗಿ ಊರು ಗೋಡೆಯವರೆಗೆ ಮಣ್ಣಿನ ದಿಬ್ಬವನ್ನು ಮಾಡಿದರು. ಯೋವಾಬನ ಸಂಗಡದಲ್ಲಿರುವ ಜನರೆಲ್ಲರೂ ಗೋಡೆಯನ್ನು ಕೆಡವಿಬಿಡುವುದಕ್ಕೆ ಪ್ರಯತ್ನಿಸಿದರು.
約阿布大軍前來,把他包圍在貝特瑪阿加的阿貝內,興築攻城的壁壘。跟隨約阿布的大軍遂下手挖城牆,使牆倒塌。
16 ಆಗ ಜ್ಞಾನವುಳ್ಳ ಒಬ್ಬ ಸ್ತ್ರೀಯು ಪಟ್ಟಣದಲ್ಲಿಂದ, “ಕೇಳಿರಿ, ಕೇಳಿರಿ. ನಾನು ಯೋವಾಬನ ಸಂಗಡ ಮಾತನಾಡುವ ಹಾಗೆ ಅವನು ಇಲ್ಲಿಗೆ ಸಮೀಪಿಸಲು ಬರಹೇಳಿರಿ,” ಎಂದು ಕೂಗಿ ಬೇಡಿಕೊಂಡಳು.
當時城中有個聰明的婦人,站在城牆上喊說:「請聽! 請聽! 你們對約阿布說:來這裏,我有話對你說」。
17 ಅವನು ಅವಳ ಬಳಿಗೆ ಸಮೀಪಿಸಿ ಬಂದಾಗ, ಆ ಸ್ತ್ರೀಯು, “ನೀನು ಯೋವಾಬನೋ?” ಎಂದಳು. ಅದಕ್ಕೆ ಅವನು, “ಹೌದು, ನಾನೇ,” ಎಂದು ಉತ್ತರಕೊಟ್ಟನು. ಆಕೆ, “ನಿನ್ನ ದಾಸಿಯ ಮಾತನ್ನು ಕೇಳಿ,” ಎಂದಳು. ಅದಕ್ಕೆ ಅವನು, “ನಾನು ಕೇಳುತ್ತೇನೆ,” ಎಂದನು.
約阿布來到她那裏,婦人便問說:「你是約阿布嗎﹖」他答說:「我是」。她便對他說:「請你聽你婢女一言! 」他答說:「我聽」。
18 ಅವಳು ಮಾತನಾಡುತ್ತಾ, “ಪೂರ್ವಕಾಲದಲ್ಲಿ, ‘ಆಬೇಲಿನವರ ಉತ್ತರ ಪಡೆಯಿರಿ’ ಎಂದು ಹೇಗೆ ವ್ಯಾಜ್ಯ ತೀರಿಸಿಕೊಳ್ಳುತ್ತಿದ್ದರು.
她說:「從前有句話說:你去問問阿貝耳,事便可解決。
19 ಹಾಗೆ ನಾವು ಇಸ್ರಾಯೇಲಿನಲ್ಲಿ ಸಮಾಧಾನವುಳ್ಳವರೂ, ನಂಬಿಗಸ್ತರೂ ಆಗಿದ್ದೇವೆ. ಇಸ್ರಾಯೇಲಿನ ತಾಯಿಯಂತಿರುವ ನಮ್ಮ ಪಟ್ಟಣವನ್ನು ಹಾಳುಮಾಡಲು ಯೆಹೋವ ದೇವರ ಸೊತ್ತನ್ನು ಕಬಳಿಸುವುದಕ್ಕೆ ಏಕೆ ಪ್ರಯತ್ನಿಸುತ್ತಿದ್ದೀರಿ?” ಎಂದಳು.
我在以色列算是一座和平忠厚的城,你卻圖謀消滅一座以色列的母城。為什麼你要吞滅上主的產業﹖」
20 ಅದಕ್ಕೆ ಯೋವಾಬನು ಉತ್ತರವಾಗಿ, “ನಾನು ಅದನ್ನು ಎಂದಿಗೂ ಮಾಡುವುದಿಲ್ಲ. ನುಂಗುವುದನ್ನೂ ಹಾಳುಮಾಡುವುದನ್ನೂ ನಾನು ಎಂದಿಗೂ ಮಾಡುವುದಿಲ್ಲ.
約阿布答說:「決無此事,我決無意消滅或破壞。
21 ಕಾರ್ಯವು ಹಾಗಲ್ಲ. ಏಕೆಂದರೆ ಬಿಕ್ರಿಯ ಮಗನಾದ ಶೆಬನೆಂಬ ಹೆಸರುಳ್ಳ ಎಫ್ರಾಯೀಮ್ ಬೆಟ್ಟದವನಾದ ಒಬ್ಬ ಮನುಷ್ಯನು, ಅರಸನಾದ ದಾವೀದನಿಗೆ ವಿರೋಧವಾಗಿ ತನ್ನ ಕೈಯನ್ನು ಎತ್ತಿದ್ದಾನೆ. ನೀವು ಅವನೊಬ್ಬನನ್ನೇ ಒಪ್ಪಿಸಿಕೊಡಿರಿ. ಆಗ ನಾನು ಪಟ್ಟಣವನ್ನು ಬಿಟ್ಟು ಹೋಗುವೆನು,” ಎಂದನು. ಆ ಸ್ತ್ರೀಯು ಯೋವಾಬನಿಗೆ, “ಅವನ ತಲೆಯು ಗೋಡೆಯ ಮೇಲಿನಿಂದ ನಿನ್ನ ಕಡೆಗೆ ಎಸೆಯಲಾಗುವುದು,” ಎಂದಳು.
完全不是這麼一回事;只因厄弗辣因山地的一人,即彼革黎的兒子名叫舍巴的,造反抗拒達味王;只要你們將他交來,我即撤離此城」。婦人對約阿布說:「請看,他的頭由城上拋給你」。
22 ಆ ಸ್ತ್ರೀಯು ತನ್ನ ಜ್ಞಾನದಿಂದ ಸಮಸ್ತ ಜನರ ಬಳಿಗೆ ಹೋದಳು. ಆಗ ಅವರು ಬಿಕ್ರಿಯ ಮಗ ಶೆಬನ ತಲೆಯನ್ನು ಕಡಿದು ಯೋವಾಬನ ಬಳಿ ಹಾಕಿದರು. ಅವನು ತುತೂರಿಯನ್ನು ಊದಿದ್ದರಿಂದ, ಅವರು ಪಟ್ಟಣದಿಂದ ಚದರಿ ಪ್ರತಿ ಮನುಷ್ಯನೂ ತಮ್ಮ ತಮ್ಮ ಮನೆಗಳಿಗೆ ಹೋದರು. ಯೋವಾಬನು ಯೆರೂಸಲೇಮಿನಲ್ಲಿರುವ ಅರಸನ ಬಳಿಗೆ ಹಿಂದಿರುಗಿ ಬಂದನು.
婦人就去憑自己的智慧勸說眾百姓。他們便砍了彼革黎的兒子舍巴的頭,拋給約阿布。約阿布遂吹起號角,撤兵離城,各自了本家。約阿布也回了耶路撒冷君王那裏。
23 ಯೋವಾಬನು ಇಸ್ರಾಯೇಲಿನ ಸಮಸ್ತ ಸೈನ್ಯದ ಅಧಿಪತಿಯಾಗಿದ್ದನು. ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರ ಮೇಲೆಯೂ ಪೆಲೇತ್ಯರ ಮೇಲೆಯೂ ಮುಖ್ಯಸ್ಥನಾಗಿದ್ದನು.
約阿布統率以色列的眾軍隊;約雅達的兒子貝納雅管理革勒提人和培肋提人;
24 ಅದೋನೀರಾಮನು ದಾಸರ ಮೇಲೆ ಉಸ್ತುವಾರಿ ವಹಿಸಿದ್ದನು. ಅಹೀಲೂದನ ಮಗ ಯೆಹೋಷಾಫಾಟನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುವವನಾಗಿದ್ದನು.
阿多蘭管理奴役;阿希路得的兒子約沙法特作御史;
25 ಶೆವನು ಕಾರ್ಯದರ್ಶಿಯಾಗಿದ್ದನು. ಚಾದೋಕನೂ ಅಬಿಯಾತರನೂ ಯಾಜಕರಾಗಿದ್ದರು.
史沙作書記;匝多克和厄貝雅塔爾作司祭;
26 ಯಾಯೀರಿನವನಾದ ಈರನೂ ದಾವೀದನ ಯಾಜಕನಾಗಿದ್ದನು.
此外,雅提爾人依辣也也作達味的司祭。

< ಸಮುವೇಲನು - ದ್ವಿತೀಯ ಭಾಗ 20 >