< ಸಮುವೇಲನು - ದ್ವಿತೀಯ ಭಾಗ 19 >
1 “ಅರಸನು ಅಬ್ಷಾಲೋಮನಿಗೋಸ್ಕರ ಅತ್ತು ದುಃಖ ಪಡುತ್ತಾ ಇದ್ದಾನೆ,” ಎಂದು ಯೋವಾಬನಿಗೆ ತಿಳಿಸಲಾಯಿತು.
有人報告約阿布說:「看,君王在痛哭哀悼阿貝沙隆。」
2 “ಅರಸನು ತನ್ನ ಮಗನಿಗೋಸ್ಕರ ವ್ಯಥೆಪಡುತ್ತಿದ್ದಾನೆ,” ಎಂದು ಎಲ್ಲ ಜನರಿಗೂ ಗೊತ್ತಾಗಿದ್ದರಿಂದ ಆ ವಿಜಯದ ದಿನವು ಸಮಸ್ತ ಜನರಿಗೆ ಗೋಳಾಟವಾಗಿ ಮಾರ್ಪಟ್ಟಿತು.
那天的勝利為全軍竟變成了悲哀,因為他們那天聽說君王為自己的兒子悲傷。
3 ಆದ್ದರಿಂದ ಜನರು ಯುದ್ಧದಲ್ಲಿ ಓಡಿಹೋಗಿ ಅವಮಾನ ಪಟ್ಟು ಬರುವ ಕಳ್ಳರ ಹಾಗೆ ಪಟ್ಟಣದೊಳಗೆ ಬಂದರು.
因此,那天軍人暗暗地進了城,好像由戰埸上受辱回來的軍隊。
4 ಆದರೆ ಅರಸನು ಮೋರೆಯನ್ನು ಮುಚ್ಚಿಕೊಂಡು, ಮಹಾಶಬ್ದವಾಗಿ, “ನನ್ನ ಮಗ ಅಬ್ಷಾಲೋಮನೇ, ಅಬ್ಷಾಲೋಮನೇ ನನ್ನ ಮಗನೇ, ನನ್ನ ಮಗನೇ,” ಎಂದು ಕೂಗುತ್ತಿದ್ದನು.
此時君王正在掩面大聲哀哭說:「我兒阿貝沙隆! 我兒阿貝沙隆! 我兒! 」
5 ಆಗ ಯೋವಾಬನು ಮನೆಯೊಳಗೆ ಅರಸನ ಬಳಿಗೆ ಬಂದು, ಅವನಿಗೆ, “ನಿನ್ನ ಪ್ರಾಣವನ್ನೂ, ನಿನ್ನ ಪುತ್ರಪುತ್ರಿಯರ ಪ್ರಾಣಗಳನ್ನೂ, ನಿನ್ನ ಹೆಂಡತಿಯರ ಮತ್ತು ಉಪಪತ್ನಿಯರ ಪ್ರಾಣಗಳನ್ನೂ ರಕ್ಷಿಸಿದ ನಿನ್ನ ಸೇವಕರನ್ನು ಈ ಹೊತ್ತು ನಾಚಿಕೆಪಡಿಸಿದ್ದೀ.
約阿布進去對君王說:「你今天大傷你僕人們的臉面,他們救了你的性命,你兒女的性命,你妻妾的性命;
6 ನೀನು ನಿನ್ನ ಹಗೆಯವರನ್ನು ಪ್ರೀತಿಮಾಡಿ, ನಿನ್ನನ್ನು ಪ್ರೀತಿಸುವವರನ್ನು ಹಗೆ ಮಾಡಿದ್ದರಿಂದ ಸೇನಾಧಿಪತಿಗಳನ್ನೂ, ಸೈನಿಕರನ್ನೂ ನಿನಗೆ ಏನೂ ಅಲ್ಲವೆಂದು ಈಗ ತಿಳಿಯಮಾಡಿದಿ. ಈ ಹೊತ್ತು ನಾವೆಲ್ಲರೂ ಸತ್ತು ಅಬ್ಷಾಲೋಮನು ಬದುಕಿದ್ದರೆ, ನಿನಗೆ ಸಂತೋಷವಾಗುತ್ತಿತ್ತು ಎಂದು ನನಗೆ ಅನಿಸುತ್ತದೆ.
然而恨你的,你反而愛他;愛你的,你反恨他。今天你已明確表示:王侯和臣民為你不算什麼。也明明看出:阿貝沙隆今天若能活著,我們我們都死了,你才安心呢!
7 ಈಗ ನೀನು ಎದ್ದು ಹೊರಟುಬಂದು, ನಿನ್ನ ಸೈನಿಕರ ಸಂಗಡ ಸಮಾಧಾನವಾಗಿ ಮಾತನಾಡು. ನೀನು ಹೊರಗೆ ಬಾರದೆ ಇದ್ದರೆ, ಈ ರಾತ್ರಿಯಲ್ಲಿ ಒಬ್ಬರಾದರೂ ನಿನ್ನ ಸಂಗಡ ಇರುವುದಿಲ್ಲವೆಂದು ಯೆಹೋವ ದೇವರ ಮೇಲೆ ಆಣೆ ಇಟ್ಟು ಹೇಳುತ್ತೇನೆ. ಆಗ ನಿನ್ನ ಯೌವನಕಾಲದಿಂದ ಈ ದಿನದವರೆಗೂ ನಿನಗೆ ಬಂದ ಸಮಸ್ತ ಕೇಡಿಗಿಂತ ಅದು ಅಧಿಕ ಕೇಡಾಗಿರುವುದು,” ಎಂದನು.
現今你快起來,出去,說幾句使你僕人們安心的話吧! 我指著上主起誓,如果你不出去,今夜再沒有一個人同你一起了。這禍患於你要超過你從小到大所遭遇的一切禍患」。
8 ಆಗ ಅರಸನು ಎದ್ದು ಹೋಗಿ ಬಾಗಿಲಲ್ಲಿ ಕುಳಿತನು. “ಅರಸನು ಬಾಗಿಲಲ್ಲಿ ಕುಳಿತಿದ್ದಾನೆ,” ಎಂದು ಸಮಸ್ತ ಸೈನಿಕರಿಗೆ ತಿಳಿದಿದ್ದರಿಂದ, ಸೈನಿಕರೆಲ್ಲರೂ ಅರಸನ ಎದುರಿಗೆ ಬಂದರು. ಆದರೆ ಇಸ್ರಾಯೇಲರು ಮಧ್ಯದಲ್ಲಿ ತಮ್ಮ ತಮ್ಮ ಮನೆಗಳಿಗೆ ಹೋದರು.
君王就起來,坐在大門口。遂有人向軍民傳報說:「君王已坐在門口! 」軍人都聚齊,來到君王前。以色列各自逃回自己的營幕。
9 ಇಸ್ರಾಯೇಲಿನ ಎಲ್ಲಾ ಕುಲಗಳಲ್ಲಿ ಸಮಸ್ತ ಜನರು ತಮ್ಮೊಳಗೆ ಜಗಳ ಮಾಡುತ್ತಾ, “ನಮ್ಮ ಶತ್ರುಗಳ ಕೈಯಿಂದ ನಮ್ಮನ್ನು ವಿಮೋಚನೆ ಮಾಡಿದವನು ಅರಸನೇ, ಫಿಲಿಷ್ಟಿಯರ ಕೈಯಿಂದ ನಮ್ಮನ್ನು ವಿಮೋಚನೆ ಮಾಡಿದವನು ಅರಸನೇ, ಆದರೆ ಈಗ ಅಬ್ಷಾಲೋಮನಿಗೋಸ್ಕರ ದೇಶವನ್ನು ಬಿಟ್ಟು ಓಡಿಹೋಗಿದ್ದಾನೆ.
那時,以色列各支派的民眾紛紛議論說:「君王從仇人手中拯救了我們,現在,他竟為阿貝沙隆離開了本國。
10 ನಮ್ಮನ್ನು ಆಳಲು ನಾವು ಅಭಿಷೇಕಿಸಿದ ಅಬ್ಷಾಲೋಮನು ಯುದ್ಧದಲ್ಲಿ ಸತ್ತನು. ನಾವು ಈಗ ಅರಸನನ್ನು ತಿರುಗಿ ಕರೆದುಕೊಂಡು ಬಾರದೆ, ಸುಮ್ಮನೆ ಇರುವುದು ಏಕೆ?” ಎಂದರು.
我們給阿貝沙隆曾傅過油為管理我們,他已經戰死。現今你們等什麼,遇不把君王接回來﹖」
11 ಆಗ ಅರಸನಾದ ದಾವೀದನು ಯಾಜಕರಾದ ಚಾದೋಕನ ಬಳಿಗೂ, ಅಬಿಯಾತರನ ಬಳಿಗೂ ಸೇವಕರನ್ನು ಕಳುಹಿಸಿ, “ನೀವು ಯೆಹೂದದ ಹಿರಿಯರಿಗೆ, ‘ಸಮಸ್ತ ಇಸ್ರಾಯೇಲಿನ ಮಾತು ಅರಸನಿಗೆ ಅವನ ಅರಮನೆಯಲ್ಲಿಯೇ ತಿಳಿದಿರುವಾಗ, ಅರಸನನ್ನು ಅವನ ಮನೆಗೆ ತಿರುಗಿ ಕರೆದುಕೊಂಡು ಬರುವಂತೆ ನೀವು ಹಿಂಜರಿದದ್ದೇನು?
全以色列這提議傳到君王那裏。達味遂派人對司祭匝多克和厄貝雅塔爾說:「你們應向猶大長老說:為什麼你們等到最後才去迎接君王回宮呢﹖
12 ನೀವು ನನ್ನ ಸಹೋದರರೂ, ನನ್ನ ರಕ್ತವೂ, ನನ್ನ ಮಾಂಸವೂ ಆಗಿದ್ದೀರಿ. ಹಾಗಾದರೆ ಅರಸನನ್ನು ತಿರುಗಿ ಬರಮಾಡುವಂತೆ ನೀವು ಹಿಂಜರಿದದ್ದೇನು?’ ಎಂದು ತಿಳಿಸಿರಿ.
你們是我的兄弟,我的骨肉,為什麼你們等到最後才去迎接君王呢﹖
13 ಇದಲ್ಲದೆ ನೀವು ಅಮಾಸನಿಗೆ, ‘ನೀನು ನನ್ನ ರಕ್ತವೂ, ನನ್ನ ಮಾಂಸವೂ ಅಲ್ಲವೋ? ನೀನು ಯೋವಾಬನಿಗೆ ಬದಲಾಗಿ ಯಾವಾಗಲೂ ನನ್ನ ಮುಂದೆ ಸೈನ್ಯದ ಪ್ರಧಾನನಾಗಿರದೆ ಹೋದರೆ, ದೇವರು ನನಗೆ ಏನಾದರೂ ಮಾಡಲಿ,’ ಎಂದು ಹೇಳಿರಿ,” ಎಂದನು.
你們要向阿瑪撒說:你不是我的骨肉嗎﹖若我不叫你一生代替約阿布作元帥,願天主這樣罰我,且更加倍地罰我! 」
14 ಅರಸನು ಸಕಲ ಯೆಹೂದ ಜನರ ಹೃದಯವನ್ನು ಸಂಪೂರ್ಣವಾಗಿ ಗೆದ್ದುಕೊಂಡದ್ದರಿಂದ, ಅವರು ಅರಸನಿಗೆ, “ನೀನೂ, ನಿನ್ನ ಸಮಸ್ತ ಸೇವಕರೂ ತಿರುಗಿ ಬನ್ನಿರಿ,” ಎಂದು ಹೇಳಿ ಕಳುಹಿಸಿದರು.
那時,全猶大人都同心合意,一致派使者到君王說:「請你和你的臣僕回來吧!
15 ಅರಸನು ತಿರುಗಿ ಯೊರ್ದನಿನವರೆಗೂ ಬಂದನು. ಯೆಹೂದದವರು ಅರಸನನ್ನು ಎದುರುಗೊಳ್ಳುವದಕ್ಕೆ ಹೋಗಿ, ಅರಸನು ಯೊರ್ದನನ್ನು ದಾಟುವ ಹಾಗೆ ಮಾಡುವುದಕ್ಕೆ ಗಿಲ್ಗಾಲಿಗೆ ಬಂದರು.
君王動身回來了,到了約旦河。這時迎接君王的猶大人來到了基耳加耳,協助君王渡約旦河。
16 ಬಹುರೀಮಿನವನೂ ಬೆನ್ಯಾಮೀನ್ಯನೂ ಗೇರನ ಮಗ ಶಿಮ್ಮಿಯು ತ್ವರೆಯಾಗಿ ಯೆಹೂದ ಜನರ ಸಂಗಡ ಅರಸ ದಾವೀದನನ್ನು ಎದುರುಗೊಳ್ಳುವುದಕ್ಕೆ ಬಂದನು.
那時,巴胡陵的本雅明人革辣的兒子史米,也趕快來同那些猶大人歡迎達味君王。
17 ಅವನ ಸಂಗಡ ಬೆನ್ಯಾಮೀನ್ಯರಾದ ಸಾವಿರ ಜನರೂ, ಸೌಲನ ಮನೆಯ ಸೇವಕ ಚೀಬನೂ, ಅವನ ಸಂಗಡ ಹದಿನೈದು ಮಂದಿ ಪುತ್ರರೂ, ಅವನ ಇಪ್ಪತ್ತು ಮಂದಿ ಸೇವಕರೂ ಯೊರ್ದನನ್ನು ದಾಟಿ, ಅರಸನಿಗೆ ಎದುರಾಗಿ ಬಂದರು.
同他來的,還有一千本雅明人。撒烏耳的家僕,漆巴和他十五個兒子同二十個僕人,也來到約旦河歡迎君王﹖
18 ಅರಸನ ಮನೆಯವರನ್ನು ಈಚೆ ದಡಕ್ಕೆ ತರುವುದಕ್ಕೂ, ಅವನ ದೃಷ್ಟಿಗೆ ಒಳ್ಳೆಯದಾಗಿ ತೋರಿಸಿದ್ದನ್ನು ಮಾಡುವುದಕ್ಕೂ ಯೊರ್ದನನ್ನು ದಾಟಿ ಬಂದರು. ಆಗ ಗೇರನ ಮಗ ಶಿಮ್ಮಿಯು ಯೊರ್ದನನ್ನು ದಾಟುತ್ತಲೇ, ಅರಸನ ಮುಂದೆ ಬಿದ್ದು ಅರಸನಿಗೆ,
他們都到渡口那邊,協助君王的家族過河。聽君王的調動;君王快要過約旦河時,革辣的兒子史米就俯伏在君王前,
19 “ನನ್ನ ಒಡೆಯನೇ, ನನ್ನ ಅಕ್ರಮವನ್ನು ಎಣಿಸದೆ ಅರಸನಾದ ನನ್ನ ಒಡೆಯನು ಯೆರೂಸಲೇಮಿನಿಂದ ಹೊರಟು ಬರುವ ದಿವಸದಲ್ಲಿ ತನ್ನ ದಾಸನು ಮೂರ್ಖತನದಿಂದ ಮಾಡಿದ ಕಾರ್ಯವನ್ನು ನೆನಸದೆ, ಅದನ್ನು ತನ್ನ ಹೃದಯದಲ್ಲಿ ಇಡದೆ ಇರಲಿ.
向他說:「我主;,請不要歸罪於我,求你不要懷念大王出離耶路撒冷時,你僕人所犯的罪;願大王不要把這事放在心上!
20 ಏಕೆಂದರೆ ಪಾಪ ಮಾಡಿದೆನೆಂದು ನಿನ್ನ ಸೇವಕನಾಗಿರುವ ನಾನು ತಿಳಿದಿದ್ದೇನೆ. ಆದ್ದರಿಂದ ಇಗೋ, ನಾನು ಅರಸನಾದ ನನ್ನ ಒಡೆಯನನ್ನು ಎದುರುಗೊಳ್ಳಲು ಯೋಸೇಫ್ಯರಲ್ಲಿ ಎಲ್ಲರಿಗಿಂತ ಮುಂದಾಗಿ ಈ ದಿನ ಬಂದಿದ್ದೇನೆ,” ಎಂದನು.
因為你的僕人自知犯了罪。看,如今我是若瑟全家族中,首先來歡迎我主大王的」。
21 ಆಗ ಚೆರೂಯಳ ಮಗ ಅಬೀಷೈಯನು ಉತ್ತರವಾಗಿ, “ಯೆಹೋವ ದೇವರ ಅಭಿಷಿಕ್ತನನ್ನು ಶಿಮ್ಮಿಯು ಶಪಿಸಿದ್ದರಿಂದ, ಅದಕ್ಕಾಗಿ ಅವನಿಗೆ ಮರಣದಂಡನೆ ಆಗಬೇಕಲ್ಲವೆ?” ಎಂದನು.
責雅的兒子阿瑟立即發言說:「史米辱罵了上主的受傅者,難道為了他這番話就不該死嗎﹖」
22 ಆದರೆ ದಾವೀದನು, “ಚೆರೂಯಳ ಮಕ್ಕಳೇ, ಈ ಹೊತ್ತು ನೀವು ನನಗೆ ಶತ್ರುಗಳಾಗಿರುವ ಹಾಗೆ ನಿಮ್ಮೊಂದಿಗೆ ನನಗೆ ಏನು? ಈ ಹೊತ್ತು ಇಸ್ರಾಯೇಲಿನಲ್ಲಿ ಯಾರಿಗೂ ಮರಣದಂಡನೆ ಆಗಬಾರದು, ಏಕೆಂದರೆ ಈ ಹೊತ್ತು ನಾನು ಇಸ್ರಾಯೇಲಿನ ಮೇಲೆ ಅರಸನಾಗಿದ್ದೇನೆಂದು ಗೊತ್ತಾಯಿತಲ್ಲಾ?” ಎಂದನು.
達味卻答說:「責魯雅的兒子們,我與你們有什麼關係﹖竟使你們今天與我作對! 今天還可以將一個以色列人處死嗎﹖難道不知道,我今天又作了以色列的君王﹖」
23 ಆಗ ಅರಸನು ಶಿಮ್ಮಿಗೆ, “ನೀನು ಸಾಯುವುದಿಲ್ಲ,” ಎಂದು ಅವನಿಗೆ ಆಣೆ ಇಟ್ಟನು.
然後君王向史米說:「伓不會死! 」君王遂向起了誓。
24 ಸೌಲನ ಮೊಮ್ಮಗ ಮೆಫೀಬೋಶೆತನು ಅರಸನನ್ನು ಎದುರುಗೊಳ್ಳಲು ಬಂದನು. ಅರಸನು ಹೋದಂದಿನಿಂದ ಅವನು ಮರಳಿ ಸಮಾಧಾನವಾಗಿ ಬರುವವರೆಗೂ ಅವನು ತನ್ನ ಪಾದಗಳನ್ನು ಕಟ್ಟಿಕೊಳ್ಳಲಿಲ್ಲ, ಗಡ್ಡವನ್ನು ಕತ್ತರಿಸಿರಲಿಲ್ಲ, ಬಟ್ಟೆಯನ್ನು ಒಗೆಸಿಕೊಂಡಿರಲಿಲ್ಲ.
撒烏耳的孫子默黎巴耳也下來歡迎君王;他自從君王出走的那日起,直到平安回來的這一天,沒有洗腳,沒有修鬚,也沒有人換洗自己的衣服。
25 ಅವನು ಯೆರೂಸಲೇಮಿನಿಂದ ಅರಸನನ್ನು ಎದುರುಗೊಳ್ಳಲು ಬಂದಾಗ, ಅರಸನು ಅವನಿಗೆ, “ಮೆಫೀಬೋಶೆತನೇ, ನೀನು ಏಕೆ ನನ್ನ ಸಂಗಡ ಬಾರದೆ ಹೋದೆ?” ಎಂದನು.
他由耶路撒冷來君王時,君王問他說:「默黎巴耳! 你為什麼不同我一起出走呢﹖」
26 ಅದಕ್ಕವನು, “ಅರಸನಾದ ನನ್ನ ಒಡೆಯನೇ, ನನ್ನ ಸೇವಕನು ನನ್ನನ್ನು ಮೋಸ ಮಾಡಿದನು. ಏಕೆಂದರೆ ನಿನ್ನ ಸೇವಕನು ಕುಂಟನಾಗಿರುವುದರಿಂದ ಒಂದು ಕತ್ತೆಯ ಮೇಲೆ ತಡಿಯನ್ನು ಹಾಕಿ, ಅದರ ಮೇಲೇರಿ ಅರಸನ ಸಂಗಡ ಹೋಗುವೆನೆಂದು ನಿನ್ನ ಸೇವಕನಾದ ನಾನು ಅವನಿಗೆ ಹೇಳಿದೆನು.
他答說:「我主大王! 我的僕人哄騙了我,你僕人曾向他說:給我備一匹驢,我好騎著跟王一齊走,因為你僕腳跛。
27 ಅವನು ಅರಸನಾದ ನನ್ನ ಒಡೆಯನಿಗೆ ನಿನ್ನ ಸೇವಕನ ಮೇಲೆ ಚಾಡಿಯನ್ನು ಹೇಳಿದನು. ಆದರೆ ಅರಸನಾದ ನನ್ನ ಒಡೆಯನು ದೇವದೂತನ ಹಾಗೆಯೇ ಇದ್ದಾನೆ. ನಿನ್ನ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ಮಾಡು.
他又在我主大王前誹謗了你的僕人;但我主大王像天主的天使,你看怎樣好,就怎樣作吧!
28 ಏಕೆಂದರೆ ಅರಸನಾದ ನನ್ನ ಒಡೆಯನಿಗೆ ನನ್ನ ತಂದೆಯ ಮನೆಯವರೆಲ್ಲರೂ ಸತ್ತವರಾಗಿ ಇದ್ದರೂ, ನಿನ್ನ ಮೇಜಿನಲ್ಲಿ ಭೋಜನ ಮಾಡುವವರೊಳಗೆ ನಿನ್ನ ಸೇವಕನನ್ನು ಇಟ್ಟಿ. ನಾನು ಇನ್ನು ಅರಸನಿಗೆ ಹೆಚ್ಚು ಮೊರೆಯಿಡುವುದಕ್ಕೆ ಯೋಗ್ಯನೋ?” ಎಂದನು.
因為我父全家對於我主大王,都是該死的人,你反而使你的僕人與你同桌共,食我那裏還有名分來向大王訴苦﹖」
29 ಆಗ ಅರಸನು ಅವನಿಗೆ, “ಇನ್ನು ನಿನ್ನ ಕಾರ್ಯಗಳನ್ನು ಕುರಿತು ಮಾತನಾಡುವುದೇನು? ನೀನೂ, ಚೀಬನೂ ಭೂಮಿಯನ್ನು ಪಾಲು ಹಂಚಿಕೊಳ್ಳಿರಿ ಎಂದು ಹೇಳಿದ್ದೇನೆ,” ಎಂದನು.
君王對他說:「你何必再說﹖我已決定,你該與巴平分產業」。
30 ಮೆಫೀಬೋಶೆತನು ಅರಸನಿಗೆ, “ಹೌದು, ಅರಸನಾದ ನನ್ನ ಒಡೆಯನು ಸಮಾಧಾನದಿಂದ ತಿರುಗಿ ತನ್ನ ಮನೆಗೆ ಬಂದದ್ದೇ ಸಾಕು. ಅವನೇ ಸಮಸ್ತವನ್ನು ತೆಗೆದುಕೊಳ್ಳಲಿ,” ಎಂದನು.
默黎巴耳回答君王說:「我主大王既然平安回朝,讓他全佔有吧! 」
31 ಇದಲ್ಲದೆ ಗಿಲ್ಯಾದ್ಯನಾದ ಬರ್ಜಿಲ್ಲೈಯು ರೋಗೆಲೀಮಿನಿಂದ ಅರಸನನ್ನು ಯೊರ್ದನ್ ದಾಟಿಸಲು ಮತ್ತು ಅಲ್ಲಿಂದ ಅವನನ್ನು ಕಳುಹಿಸಲು ಬಂದನು.
基肋阿得人巴爾齊從洛格林下來,陪伴君王過了約旦河,在約旦河岸與他辭別。
32 ಈ ಬರ್ಜಿಲ್ಲೈಯು ಎಂಬತ್ತು ವರ್ಷದವನಾಗಿ ಮಹಾವೃದ್ಧನಾಗಿದ್ದನು. ಅರಸನು ಮಹನಯಿಮಿನಲ್ಲಿ ವಾಸಿಸಿಸುವವರೆಗೂ ಇವನು ಅರಸನನ್ನು ಸಂರಕ್ಷಿಸಿದನು. ಏಕೆಂದರೆ ಅವನು ಬಹು ಸಿರಿವಂತ ಮನುಷ್ಯನಾಗಿದ್ದನು.
巴爾齊來年紀很老,已八十歲。君王住在瑪哈納殷時,他供給了君王的吃用,他原很富有。
33 ಆದ್ದರಿಂದ ಅರಸನು ಬರ್ಜಿಲ್ಲೈಗೆ, “ನೀನು ನನ್ನ ಸಂಗಡ ಬಾ, ಯೆರೂಸಲೇಮಿನಲ್ಲಿ ನಿನ್ನನ್ನು ನನ್ನ ಬಳಿಯಲ್ಲಿ ಸಂರಕ್ಷಿಸುವೆನು,” ಎಂದನು.
君王向巴爾齊來說:「你同我一起去吧! 我願在耶路撒冷供養你的老年」。
34 ಆದರೆ ಬರ್ಜಿಲ್ಲೈಯು ಅರಸನಿಗೆ, “ನಾನು ಅರಸನ ಸಂಗಡ ಯೆರೂಸಲೇಮಿಗೆ ಹೋಗುವಹಾಗೆ ನಾನು ಬದುಕುವ ವರುಷ ಎಷ್ಟು ಉಂಟು?
巴爾齊來回答君王說:「既使我同大王上耶路撒冷去,我還能活幾年﹖
35 ನಾನು ಈ ಹೊತ್ತು ಎಂಬತ್ತು ವರ್ಷದವನು. ಇನ್ನು ಒಳ್ಳೆಯದು ಕೆಟ್ಟದ್ದು ಎಂಬ ಭೇದ ತಿಳಿಯುವೆನೋ? ತಿನ್ನುವುದು, ಕುಡಿಯುವುದು ನಿನ್ನ ಸೇವಕನಿಗೆ ರುಚಿಕರವಾಗಿರುವುದೋ? ಗಾಯನ ಮಾಡುವ ಸ್ತ್ರೀಪುರುಷರ ಸ್ವರಗಳು ನನಗೆ ಕೇಳಿಸುತ್ತವೋ? ಹಾಗಾದರೆ ನಿನ್ನ ಸೇವಕನು ಅರಸನಾದ ನನ್ನ ಒಡೆಯನಿಗೆ ಏಕೆ ಇನ್ನು ಭಾರವಾಗಿರಬೇಕು?
我現年已八十,還能分辨美醜麼﹖你的僕人還能嚐出吃喝的味道來麼﹖還能細聽伶女和歌女的樂聲麼﹖你的為什麼還要拖累我主大王﹖
36 ನಿನ್ನ ಸೇವಕನು ಸ್ವಲ್ಪ ದೂರ ಯೊರ್ದನನ್ನು ದಾಟುವವರೆಗೂ ಅವರ ಅರಸನ ಸಂಗಡ ಬರುವನು. ಅದಕ್ಕೆ ಇಂಥಾ ಬಹುಮಾನ ಕೊಡುವುದೇನು?
你的僕人陪著大王過約旦河,只是一點小意思,為什麼大王要給我一個這樣的報答﹖
37 ಅಪ್ಪಣೆ ಆದರೆ ನಿನ್ನ ಸೇವಕನಾದ ನಾನು ತಿರುಗಿ ಹೋಗಿ, ನನ್ನ ಪಟ್ಟಣದಲ್ಲಿ ನನ್ನ ತಂದೆತಾಯಿಗಳ ಸಮಾಧಿಯ ಬಳಿಯಲ್ಲಿ ಸಾಯುತ್ತೇನೆ. ಆದರೆ ಅರಸನಾದ ನನ್ನ ಒಡೆಯನ ಸಂಗಡ ನಿನ್ನ ಸೇವಕನಾದ ನನ್ನ ಮಗ ಕಿಮ್ಹಾಮನು ಬರುವನು. ನಿನ್ನ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ಅವನಿಗೆ ಮಾಡು,” ಎಂದನು.
請讓你的僕人回去,叫我死在靠近我父母墳墓的故鄉! 看,你的僕人基默罕在這裏,他可跟我主大王同去,你看著怎樣好,就怎樣對待他吧! 」
38 ಆಗ ಅರಸನು, “ಕಿಮ್ಹಾಮನು ನನ್ನ ಸಂಗಡ ಬರಲಿ; ನಿನ್ನ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ನಾನು ಅವನಿಗೆ ಮಾಡುವೆನು. ನಿನಗೆ ನನ್ನಿಂದ ಬೇಕಾದದ್ದೆಲ್ಲಾ ಮಾಡುವೆನು,” ಎಂದನು.
達味答說:「那麼,讓默基罕跟我去好了,你看著怎樣好,我就怎樣待他;凡你向我所所要求的,我必為你做到」。
39 ಜನರೆಲ್ಲರೂ ಯೊರ್ದನನ್ನು ದಾಟಿದರು. ಅರಸನು ದಾಟಿ ಬಂದಾಗ, ಬರ್ಜಿಲ್ಲೈಯನ್ನು ಮುದ್ದಿಟ್ಟು ಅವನನ್ನು ಆಶೀರ್ವದಿಸಿದನು. ಅನಂತರ ಬರ್ಜಿಲ್ಲೈಯು ತನ್ನ ಸ್ಥಳಕ್ಕೆ ಹಿಂದಿರುಗಿದನು.
眾人都過了約旦河,君王也過去了;然後與巴爾齊來親吻,祝福道別。巴爾齊來遂回了本鄉。
40 ಅರಸನು ಗಿಲ್ಗಾಲಿಗೆ ಬಂದನು. ಹಾಗೆಯೇ ಅವನ ಸಂಗಡ ಕಿಮ್ಹಾಮನು ಬಂದನು. ಯೆಹೂದದ ಸೈನಿಕರೆಲ್ಲರೂ, ಇಸ್ರಾಯೇಲಿನ ಅರ್ಧ ಪಾಲು ಸೈನಿಕರೂ ಅರಸನನ್ನು ಕರೆದುಕೊಂಡು ಬಂದರು.
君王繼續向基耳加耳前行,基默罕跟他同來。猶大全民眾和一半以色列人陪著君王前行。
41 ಇಸ್ರಾಯೇಲರೆಲ್ಲರೂ ಅರಸನ ಬಳಿಗೆ ಬಂದು ಅರಸನಿಗೆ, “ನಮ್ಮ ಸಹೋದರರಾದ ಯೆಹೂದದ ಮನುಷ್ಯರು ಕಳ್ಳತನವಾಗಿ ನಿನ್ನನ್ನು ಕರೆತಂದದ್ದೇನು? ಅರಸನನ್ನೂ, ಅವನ ಮನೆಯವರನ್ನೂ, ಅವನ ಸಂಗಡ ಇರುವ ದಾವೀದನ ಸಕಲ ಮನುಷ್ಯರನ್ನೂ ಯೊರ್ದನನ್ನು ದಾಟಿಸಿದ್ದೇನು?” ಎಂದರು.
眾以色列人來到君王前,向君王說:「為什麼我們的兄弟猶大人將君王劫了去,領君王和君王的眷屬過了約旦河。所有屬達味的人不都是他的百姓嗎﹖」
42 ಆಗ ಯೆಹೂದದವರೆಲ್ಲರೂ ಇಸ್ರಾಯೇಲರಿಗೆ ಉತ್ತರವಾಗಿ, “ಅರಸನು ನಮಗೆ ಸಮೀಪ ಬಂಧುವಾದುದರಿಂದ, ಈ ಕಾರ್ಯಕ್ಕೋಸ್ಕರ ನೀವು ಕೋಪಗೊಂಡಿರುವುದೇನು? ನಾವು ಅರಸನ ಖರ್ಚಿನಿಂದ ಏನಾದರೂ ಊಟ ಮಾಡಿದೆವೋ? ನಾವು ನಮಗಾಗಿ ಏನನ್ನಾದರೂ ತೆಗೆದುಕೊಂಡಿದ್ದೇವೆಯೇ?” ಎಂದರು.
猶大人回答以色列人說:「因為君王是我們的親族,你們為什麼因此憤怒﹖我們豈是吃過君王的飯,或是領過他的俸祿﹖」
43 ಆದರೆ ಇಸ್ರಾಯೇಲರು ಯೆಹೂದ ಜನರಿಗೆ ಉತ್ತರವಾಗಿ, “ಅರಸನಲ್ಲಿ ನಮಗೆ ಹತ್ತು ಪಾಲು ಉಂಟು. ನಿಮಗಿಂತ ನಮಗೆ ದಾವೀದನ ಬಾಧ್ಯತೆಯು ಅಧಿಕವಾಗಿದೆ. ನಮ್ಮ ಅರಸನನ್ನು ತಿರುಗಿ ಕರೆದುಕೊಂಡು ಬರುವುದರ ವಿಷಯದಲ್ಲಿ ಮೊದಲು ಮಾತನಾಡಿದವರು ನಾವಲ್ಲವೋ? ಹಾಗಾದರೆ ನಮ್ಮನ್ನು ಏಕೆ ಅಲ್ಪರಾಗಿ ಎಣಿಸಿದಿರಿ?” ಎಂದರು. ಆದರೆ ಇಸ್ರಾಯೇಲರ ಮಾತುಗಳಿಗಿಂತ ಯೆಹೂದ ಜನರ ಮಾತುಗಳು ಕಠಿಣವಾಗಿದ್ದವು.
以色列人回答猶大人說:「我們對君王有十倍權利,那麼,我們對達味的名分也多過你們,你們為什麼輕視我們﹖不是我們首先提議,要迎回我們的君王嗎﹖」然後猶大的答覆比以色列人所說的話,更為激烈。