< ಸಮುವೇಲನು - ದ್ವಿತೀಯ ಭಾಗ 17 >
1 ಅಹೀತೋಫೆಲನು ಅಬ್ಷಾಲೋಮನಿಗೆ, “ಅಪ್ಪಣೆಯಾದರೆ ನಾನು ಹನ್ನೆರಡು ಸಾವಿರ ಜನರನ್ನು ಆಯ್ದುಕೊಂಡು ಈ ರಾತ್ರಿಯೇ ದಾವೀದನನ್ನು ಹಿಂದಟ್ಟುವೆನು.
Ахитофел каза още на Авесалома: Да избера сега дванадесет хиляди мъже, и да стана да преследвам Давида още тая нощ.
2 ಅವನು ದಣಿದು ಅವನ ಕೈ ದುರ್ಬಲವಾಗಿರುವಾಗ, ಹೋಗಿ ಅವನ ಮೇಲೆ ಬಿದ್ದು ಅವನನ್ನು ಹೆದರಿಸುವೆನು. ಆಗ ಅವನ ಸಂಗಡ ಇರುವ ಜನರೆಲ್ಲರು ಓಡಿಹೋಗುವರು.
Ще налетя върху него като е уморен и ръцете му ослабнали, и ще го уплаша; и всичките люде, що са с него, ще побягнат, и ще поразя само царя.
3 ಆಗ ನಾನು ಅರಸನನ್ನು ಮಾತ್ರ ಹೊಡೆದು, ಜನರೆಲ್ಲರನ್ನು ತಿರುಗಿ ನಿನ್ನ ಬಳಿಗೆ ತೆಗೆದುಕೊಂಡು ಬರುವೆನು. ನೀನು ಹುಡುಕುವವನು ಸಿಕ್ಕಿದರೆ, ಜನರೆಲ್ಲರು ಹಿಂದಿರುಗಿದ ಹಾಗೆ ಆಗುವುದು. ಜನರೆಲ್ಲರು ಸಮಾಧಾನವಾಗಿರುವರು,” ಎಂದನು.
Така ще възвърна всичките люде към тебе, защото убиването на мъжа, когото ти търсиш, значи възвръщането на всичките; всичките люде ще се помирят.
4 ಈ ಮಾತು ಅಬ್ಷಾಲೋಮನ ದೃಷ್ಟಿಗೂ, ಇಸ್ರಾಯೇಲಿನ ಸಮಸ್ತ ಹಿರಿಯರ ದೃಷ್ಟಿಗೂ ಒಳ್ಳೆಯದಾಗಿ ತೋರಿತು.
И тая дума бе угодна на Авесалома и на всичките Израилеви старейшини.
5 ಆದರೆ ಅಬ್ಷಾಲೋಮನು, “ಅರ್ಕಿಯನಾದ ಹೂಷೈಯನ್ನು ನಾವು ಕೇಳುವ ಹಾಗೆ ಅವನನ್ನು ಕರೆಯಿರಿ,” ಎಂದನು.
Тогава рече Авесолом: Повикай сега и архиеца Хусай, и нека чуем какво ще каже и той.
6 ಹೂಷೈ ಅಬ್ಷಾಲೋಮನ ಬಳಿಗೆ ಬಂದಾಗ, ಅಬ್ಷಾಲೋಮನು ಅವನಿಗೆ, “ಅಹೀತೋಫೆಲನು ಈ ಪ್ರಕಾರ ಹೇಳಿದ್ದಾನೆ. ಅವನ ಮಾತಿನ ಪ್ರಕಾರ ಮಾಡೋಣವೋ? ಬೇಡವಾದರೆ ನೀನು ಮಾತನಾಡು,” ಎಂದನು.
И когато Хусей влезе при Авесалома, Авесалом му говори, казвайки: Така е говорил Ахитофел. Да постъпим ли според неговия съвет? ако не, говори ти.
7 ಆಗ ಹೂಷೈ ಅಬ್ಷಾಲೋಮನಿಗೆ, “ಅಹೀತೋಫೆಲನು ಹೇಳಿದ ಆಲೋಚನೆಯು ಈ ವೇಳೆಗೆ ಒಳ್ಳೆಯದಲ್ಲ,” ಎಂದನು.
И Хусей каза на Авесалома: Не е добър съветът, който Ахитофел даде тоя път.
8 ಹೂಷೈ, “ನಿನ್ನ ತಂದೆಯೂ, ಅವನ ಮನುಷ್ಯರೂ ಪರಾಕ್ರಮಶಾಲಿಗಳು. ಅವರು ಅಡವಿಯಲ್ಲಿ ಮರಿಗಳನ್ನು ಕಳೆದುಕೊಂಡ ಕರಡಿಯ ಹಾಗೆಯೇ ಕೋಪವುಳ್ಳವರಾಗಿದ್ದಾರೆಂದು ನೀನು ಬಲ್ಲೆ. ಇದಲ್ಲದೆ ನಿನ್ನ ತಂದೆಯು ಶೂರನು. ಅವನು ರಾತ್ರಿಯಲ್ಲಿ ಜನರ ಸಂಗಡ ತಂಗುವುದಿಲ್ಲ.
Хусей рече още: Ти знаеш баща си и неговите мъже, че са силни мъже, и че са преогорчени в душа, както мечка лишена от малките си в полето; и баща ти, като военен мъж, няма да пренощува с людете;
9 ಅವನು ಈಗ ಒಂದು ಗವಿಯಲ್ಲಾದರೂ, ಒಂದು ಸ್ಥಳದಲ್ಲಾದರೂ ಅಡಗಿಕೊಂಡಿದ್ದಾನೆ. ಮೊದಲೇ ಇವರಲ್ಲಿ ಕೆಲವರು ಸತ್ತರೆ, ಅದನ್ನು ಕೇಳುವವರು ಅಬ್ಷಾಲೋಮನನ್ನು ಹಿಂಬಾಲಿಸುವ ಜನರಲ್ಲಿ ಸಂಹಾರವಾಯಿತೆಂದು ಹೇಳುವರು.
ето, сега скрит в някой трап или в някое друго място, и когато нападне някой от тия свои люде в началото на сражението, всеки, който чуе ще рече: Поражение става между людете, които следват Авесалома.
10 ಆಗ ಸಿಂಹ ಹೃದಯರಾದ ಪರಾಕ್ರಮಶಾಲಿಯ ಹೃದಯವು ಸಹ ಸಂಪೂರ್ಣ ಕರಗುವುದು. ಇದಲ್ಲದೆ ನಿನ್ನ ತಂದೆಯು ಶೂರನೆಂದೂ, ಅವನ ಸಂಗಡ ಇರುವವರು ಪರಾಕ್ರಮಶಾಲಿಗಳೆಂದೂ ಇಸ್ರಾಯೇಲರೆಲ್ಲರು ಬಲ್ಲರು.
Тогава даже юначният, чието сърце е като лъвско сърце, съвсем ще премре; защото целият Израил знаеше, че баща ти е юнак, и че ония, които са с него, са храбри мъже.
11 “ನಾನು ಹೇಳುವ ಆಲೋಚನೆ ಏನೆಂದರೆ, ದಾನಿನಿಂದ ಬೇರ್ಷೆಬದವರೆಗೂ ವಾಸವಾಗಿರುವ ಇಸ್ರಾಯೇಲರೊಳಗಿಂದ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಸೈನ್ಯವನ್ನು ನಿನ್ನ ಬಳಿಯಲ್ಲಿ ಕೂಡಿಸಿ, ನೀನೂ ಅವರ ಜೊತೆಯಲ್ಲಿ ಯುದ್ಧಕ್ಕೆ ಹೋಗಬೇಕು.
Аз съветвам по-добре да се събере при тебе целият Израил, от Дан до Вирсавее, по множество както пясъка край морето, и ти лично да идеш в боя.
12 ಆಗ ನಾವು ಅವನನ್ನು ಕಂಡುಕೊಳ್ಳುವ ಸ್ಥಳದಲ್ಲಿ ಅವನ ಮೇಲೆ ಬಂದು, ಭೂಮಿಯ ಮೇಲೆ ಮಂಜು ಬೀಳುವ ಹಾಗೆ ಅವನ ಮೇಲೆ ಬೀಳುವೆವು. ಅವನೂ, ಅವನ ಸಂಗಡ ಇರುವ ಸಮಸ್ತ ಜನರಲ್ಲಿ ಒಬ್ಬನಾದರೂ ಉಳಿಯುವುದಿಲ್ಲ.
Така ще налетим върху него в някое място, където се намери, и ще го нападнем, както пада росата на земята, тъй щото от него и от всичките човеци, които са с него, няма да оставим ни един.
13 ಅವನು ಒಂದು ಪಟ್ಟಣದಲ್ಲಿ ಹೊಕ್ಕಿರುವುದಾದರೆ, ಇಸ್ರಾಯೇಲರೆಲ್ಲರೂ ಆ ಪಟ್ಟಣಕ್ಕೆ ಹಗ್ಗಗಳನ್ನು ತಂದುಹಾಕಿದ ತರುವಾಯ, ನಾವು ಒಂದು ಹರಳಾದರೂ ಅಲ್ಲಿ ಉಳಿಯದಂತೆ ಆ ಊರನ್ನು ಎಳೆದುಕೊಂಡು ಹೋಗಿ ಹೊಳೆಯಲ್ಲಿ ಹಾಕಿಬಿಡೋಣ,” ಎಂದನು.
Или, ако прибегне в някой град, тогава целият Израил ще донесе до оня град въжета, та ще го завлечем до потока, тъй щото да не остане там ни едно камъче.
14 ಆಗ ಅಬ್ಷಾಲೋಮನೂ, ಇಸ್ರಾಯೇಲಿನ ಸಮಸ್ತ ಮನುಷ್ಯರೂ, “ಅಹೀತೋಫೆಲನ ಆಲೋಚನೆಗಿಂತ ಅರ್ಕಿಯನಾದ ಹೂಷೈಯ ಆಲೋಚನೆ ಒಳ್ಳೆಯದು,” ಎಂದರು. ಏಕೆಂದರೆ ತಾನು ಅಬ್ಷಾಲೋಮನ ಮೇಲೆ ಕೇಡನ್ನು ಬರಮಾಡುವ ಹಾಗೆ ಅಹೀತೋಫೆಲನ ಒಳ್ಳೆಯ ಆಲೋಚನೆಯನ್ನು ವ್ಯರ್ಥಮಾಡುವುದಕ್ಕೆ ಯೆಹೋವ ದೇವರು ಹಾಗೆ ನೇಮಿಸಿದ್ದರು.
Тогава Авесалом и всичките Израилеви мъже казаха: Съветът на архиеца Хусей е по-добър от съвета на Ахитофела. (Защото Господ беше рекъл да осуети добрия Ахитофелов съвет, за да нанесе Господ зло на Авесалома).
15 ಹೂಷೈಯು ಯಾಜಕರಾದ ಚಾದೋಕನಿಗೂ, ಅಬಿಯಾತರನಿಗೂ, “ಅಹೀತೋಫೆಲನು ಅಬ್ಷಾಲೋಮನಿಗೂ, ಇಸ್ರಾಯೇಲಿನ ಹಿರಿಯರಿಗೂ ಇಂಥಿಂಥ ಆಲೋಚನೆ ಹೇಳಿದನು.
Тогава Хусей каза на свещениците Садоха и Авиатара: Така и така съветва Ахитофел Авесалома и Израилевите старейшини; а така и така съветвах аз.
16 ಆದ್ದರಿಂದ ನೀವು ಬೇಗನೆ ಅರಸನಾದ ದಾವೀದನಿಗೆ, ‘ನೀವು ಈ ರಾತ್ರಿ ಅಡವಿಯಲ್ಲಿ ನದಿ ದಾಟುವ ಸ್ಥಳದ ಹತ್ತಿರ ಇಳಿದುಕೊಳ್ಳಬೇಡಿ; ಶೀಘ್ರವಾಗಿ ನದಿದಾಟಿ ಮುಂದೆ ಹೋಗಬೇಡಿ; ಇಲ್ಲವಾದರೆ ನೀವೂ, ನಿಮ್ಮ ಜನರೂ ನಾಶವಾಗುವಿರಿ,’ ಎಂದು ಹೇಳಿ ಕಳುಹಿಸಿರಿ,” ಎಂದನು.
Сега, прочее, пратете скоро да известят на Давида, казвайки: Не оставай тая нощ при бродовете в пустинята, но непременно да преминеш Иордан, за да не погинат царят и всичките люде, които са с него.
17 ಯೋನಾತಾನನೂ, ಅಹೀಮಾಚನೂ ಏನ್ ರೋಗೆಲ್ ಎಂಬಲ್ಲಿ ಇದ್ದರು. ಒಬ್ಬ ಸೇವಕಿ ಹೋಗಿ ಅವರಿಗೆ ತಿಳಿಸಬೇಕಾಗಿತ್ತು. ಅನಂತರ ಅವರು ಹೋಗಿ ಅರಸನಾದ ದಾವೀದನಿಗೆ ಹೇಳಬೇಕಾಗಿತ್ತು. ಏಕೆಂದರೆ ಪಟ್ಟಣದಲ್ಲಿ ಪ್ರವೇಶಿಸುವುದನ್ನು ಬೇರೆಯವರು ನೋಡುವ ಗಂಡಾಂತರಕ್ಕೆ ಒಳಗಾಗಲು ಅಪೇಕ್ಷಿಸಿರಲಿಲ್ಲ.
А Иоанатан и Ахимаас стояха при извора Рогил, защото не смееха да влизат явно в града: затова, една слугиня отиде да им извести това, и те отидоха та известиха на цар Давида.
18 ಆದರೆ ಒಬ್ಬ ಹುಡುಗನು ಅವರನ್ನು ಕಂಡು ಅಬ್ಷಾಲೋಮನಿಗೆ ತಿಳಿಸಿದನು. ಆದ್ದರಿಂದ ಅವರಿಬ್ಬರು ಶೀಘ್ರವಾಗಿ ಹೋಗಿ, ಬಹುರೀಮಿನಲ್ಲಿರುವ ಒಬ್ಬ ಮನುಷ್ಯನ ಮನೆಯಲ್ಲಿ ಪ್ರವೇಶಿಸಿ, ಅವನ ಅಂಗಳದಲ್ಲಿರುವ ಬಾವಿಯಲ್ಲಿ ಇಳಿದರು.
А един момък ги видя и обади на Авесалома; но двамата отидоха бърже та влязоха в къщата на един човек във Ваурим, който имаше кладенец в двора си, и спуснаха се в него.
19 ಆಗ ಆ ಮನೆಯವಳು ಬಾವಿಯ ಮೇಲೆ ಒಂದು ವಸ್ತ್ರವನ್ನು ಹಾಸಿ ನುಚ್ಚನ್ನು ಹರವಿದಳು. ಈ ಕಾರ್ಯ ಯಾರಿಗೂ ತಿಳಿಯದೆ ಹೋಯಿತು.
И жена му взе една покривка та я простря върху отвора на кладенеца, и насипа върху нея чукано жито, така щото нищо не се позна.
20 ಅಬ್ಷಾಲೋಮನ ಸೇವಕರು ಮನೆಯೊಳಗೆ ಬಂದು ಆ ಸ್ತ್ರೀಯನ್ನು, “ಅಹೀಮಾಚನೂ, ಯೋನಾತಾನನೂ ಎಲ್ಲಿ,” ಎಂದು ಕೇಳಿದರು. ಅವಳು ಅವರಿಗೆ, “ಹಳ್ಳವನ್ನು ದಾಟಿಹೋದರು,” ಎಂದಳು. ಅವರು ಹುಡುಕಿ ಕಾಣದೆ ಹೋಗಿ ಯೆರೂಸಲೇಮಿಗೆ ಹಿಂದಿರುಗಿದರು.
И когато Авесаломовите слуги дойдоха при жената в къщата и казаха: Где са Ахимаас и Ионатан? Жената им рече: Преминах водния поток. И те ги потърсиха, но като не ги намериха, върнаха се в Ерусалим.
21 ಇವರು ಹೋದ ತರುವಾಯ, ಅವರು ಬಾವಿಯೊಳಗಿಂದ ಏರಿಹೋಗಿ, ಅರಸನಾದ ದಾವೀದನಿಗೆ, “ನೀನು ಶೀಘ್ರವಾಗಿ ಎದ್ದು ನದಿಯನ್ನು ದಾಟಿ ಹೋಗು; ಏಕೆಂದರೆ ಈ ಪ್ರಕಾರ ಅಹೀತೋಫೆಲನು ನಿನಗೆ ವಿರೋಧವಾಗಿ ಆಲೋಚನೆ ಹೇಳಿದ್ದಾನೆ,” ಎಂದರು.
А след заминаването им, ония излязоха от кладенеца и отидоха та известиха на цар Давида. Рекоха на Давида: Станете преминете скоро водата, защото Ахитофел така съветва против вас.
22 ಆಗ ದಾವೀದನೂ, ಅವನ ಸಂಗಡ ಇದ್ದ ಸಮಸ್ತ ಜನರೂ ಎದ್ದು ಯೊರ್ದನನ್ನು ದಾಟಿದರು. ಉದಯವಾದಾಗ ದಾಟಬೇಕಾದವರು ಒಬ್ಬರಾದರೂ ಉಳಿದಿರಲಿಲ್ಲ.
Тогава Давид и всичките люде, що бяха с него, станаха та преминаха Иордан; до зори не остана ни един, който не беше преминал Иордан.
23 ಆದರೆ ಅಹೀತೋಫೆಲನು ತನ್ನ ಯೋಚನೆಯ ಪ್ರಕಾರ ನಡೆಯಲಿಲ್ಲವೆಂದು ನೋಡಿದಾಗ, ತನ್ನ ಕತ್ತೆಯ ಮೇಲೆ ತಡಿಯನ್ನು ಹಾಕಿ ಏರಿ, ತನ್ನ ಪಟ್ಟಣದಲ್ಲಿರುವ ತನ್ನ ಮನೆಗೆ ಹೋದನು. ಅವನು ಮನೆಯನ್ನು ಕ್ರಮಪಡಿಸಿ, ಉರುಲು ಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು.
А Ахитофел, като видя, че съветът му не се възприе, оседла осела си и стана та отиде у дома си, в своя град; и като нареди домашните си работи, обеси се. Така умря; и погребан бе в бащиния си гроб.
24 ದಾವೀದನು ಮಹನಯಿಮಿಗೆ ಬಂದನು. ಇದಲ್ಲದೆ ಅಬ್ಷಾಲೋಮನೂ, ಅವನ ಸಂಗಡ ಇಸ್ರಾಯೇಲ್ ಮನುಷ್ಯರೂ ಯೊರ್ದನನ್ನು ದಾಟಿದರು.
Тогава Давид дойде в Механаим; а Авесалом премина Иордан, той и всичките Израилеви мъже с него.
25 ಅಬ್ಷಾಲೋಮನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೈನ್ಯದ ಅಧಿಪತಿಯಾಗಿ ಇಟ್ಟಿದ್ದನು. ಈ ಅಮಾಸನು ಇಸ್ರಾಯೇಲನಾದ ಇತ್ರನ ಮಗನು. ಈ ಇತ್ರನು ನಾಹಾಷನ ಮಗಳೂ, ಯೋವಾಬನ ತಾಯಿಯೂ, ಚೆರೂಯಳ ಸಹೋದರಿಯೂ ಆದ ಅಬೀಗೈಲಳನ್ನು ಮದುವೆಯಾಗಿದ್ದನು.
И Авесалом постави Амаса за военачалник вместо Иоава. А Амаса бе син на един човек на име Итра, израилтянин, който беше влязъл при Авигея Наасовата дъщеря, сестра на Саруия Иоавовата майка).
26 ಇಸ್ರಾಯೇಲರೂ, ಅಬ್ಷಾಲೋಮನೂ ಗಿಲ್ಯಾದ್ ದೇಶದಲ್ಲಿ ದಂಡಿಳಿದರು.
И Израил и Авесалом разположиха стана си в галаадската земя.
27 ದಾವೀದನು ಮಹನಯಿಮಿಗೆ ಬಂದಾಗ, ಅಮ್ಮೋನಿಯರ ರಬ್ಬಾ ಪಟ್ಟಣದ ನಾಹಾಷನ ಮಗ ಶೋಬಿಯೂ, ಲೋದೆಬಾರು ಊರಿನವನಾಗಿರುವ ಅಮ್ಮಿಯೇಲನ ಮಗ ಮಾಕೀರನೂ, ರೋಗೆಲೀಮ್ ಊರಿನ ಗಿಲ್ಯಾದ್ಯನಾದ ಬರ್ಜಿಲ್ಲೈಯೂ
А когато дойде Давид в Маханаим, Совей Наасовият син, от Рава на амонците, и Махир Амииловият син, от Ло-девар, и галаадецът Верзелай, от Рогелим,
28 ಹಾಸಿಗೆಗಳನ್ನು, ಬಟ್ಟಲುಗಳನ್ನು, ಮಡಕೆ, ಗೋಧಿ, ಜವೆಗೋಧಿ, ಹಿಟ್ಟು, ಹುರಿದ ಕಾಳು ಅವರೆ, ಅಲಸಂದಿ,
донесоха постелки, легени и пръстени съдове, жито, ечемик, брашно, пържено жито, боб, леща и други печени храни,
29 ಹುರಿದ ಕಡಲೆ, ಜೇನುತುಪ್ಪ, ಬೆಣ್ಣೆ, ಕುರಿ, ಹಸುವಿನ ಗಿಣ್ಣು ಇವುಗಳನ್ನು ದಾವೀದನಿಗೂ, ಅವನ ಸಂಗಡ ಇದ್ದ ಜನರಿಗೂ ತಿನ್ನುವುದಕ್ಕೆ ತಂದರು. ಏಕೆಂದರೆ, “ಮರುಭೂಮಿಯಲ್ಲಿ ಜನರು ಹಸಿದು ದಣಿದು ದಾಹಗೊಂಡಿರುವರು,” ಎಂದುಕೊಂಡರು.
мед, масло, овци и говеждо сирене на Давида и на людете с него за да ядат; защото рекоха: Людете са гладни и изнемощели и жадни в пустинята.