< ಸಮುವೇಲನು - ದ್ವಿತೀಯ ಭಾಗ 15 >

1 ಇದರ ತರುವಾಯ ಅಬ್ಷಾಲೋಮನು ತನಗೋಸ್ಕರ ರಥಗಳನ್ನೂ ಕುದುರೆಗಳನ್ನೂ ತನ್ನ ಮುಂದೆ ಓಡುವುದಕ್ಕೆ ಐವತ್ತು ಮಂದಿಯನ್ನೂ ಸಿದ್ಧಮಾಡಿಕೊಂಡನು.
וַֽיְהִי֙ מֵאַ֣חֲרֵי כֵ֔ן וַיַּ֤עַשׂ לֹו֙ אַבְשָׁלֹ֔ום מֶרְכָּבָ֖ה וְסֻסִ֑ים וַחֲמִשִּׁ֥ים אִ֖ישׁ רָצִ֥ים לְפָנָֽיו׃
2 ಇದಲ್ಲದೆ ಅಬ್ಷಾಲೋಮನು ಬೆಳಿಗ್ಗೆ ಎದ್ದು ಬಾಗಿಲ ಬಳಿಯಲ್ಲಿ ನಿಂತುಕೊಂಡು, ವ್ಯಾಜ್ಯ ಉಂಟಾದವನು ಯಾವನಾದರೂ ನ್ಯಾಯಕ್ಕೋಸ್ಕರ ಅರಸನ ಬಳಿಗೆ ಬರುವವನಾಗಿದ್ದರೆ ಅವನನ್ನು ಕರೆದು, “ನೀನು ಯಾವ ಪಟ್ಟಣದವನು?” ಎಂದು ಕೇಳಿದನು. ಅದಕ್ಕವನು, “ನಿನ್ನ ಸೇವಕರಾದ ನಾವು ಇಸ್ರಾಯೇಲರ ಇಂಥ ಕುಲಕ್ಕೆ ಸೇರಿದವರು,” ಎಂದು ಉತ್ತರ ಕೊಡುವನು.
וְהִשְׁכִּים֙ אַבְשָׁלֹ֔ום וְעָמַ֕ד עַל־יַ֖ד דֶּ֣רֶךְ הַשָּׁ֑עַר וַיְהִ֡י כָּל־הָאִ֣ישׁ אֲשֶֽׁר־יִהְיֶה־לֹּו־רִיב֩ לָבֹ֨וא אֶל־הַמֶּ֜לֶךְ לַמִּשְׁפָּ֗ט וַיִּקְרָ֨א אַבְשָׁלֹ֤ום אֵלָיו֙ וַיֹּ֗אמֶר אֵֽי־מִזֶּ֥ה עִיר֙ אַ֔תָּה וַיֹּ֕אמֶר מֵאַחַ֥ד שִׁבְטֵֽי־יִשְׂרָאֵ֖ל עַבְדֶּֽךָ׃
3 ಆಗ ಅಬ್ಷಾಲೋಮನು ಅವನಿಗೆ, “ನೋಡು ನಿನ್ನ ಕಾರ್ಯವು ಒಳ್ಳೆಯದೂ, ನ್ಯಾಯವಾದದದ್ದೂ ಆಗಿದೆ. ಆದರೆ ಅರಸನ ಬಳಿಯಲ್ಲಿ ನಿನ್ನನ್ನು ವಿಚಾರಿಸುವುದಕ್ಕೆ ಯಾವನೂ ಇಲ್ಲ,” ಅನ್ನುವನು.
וַיֹּ֤אמֶר אֵלָיו֙ אַבְשָׁלֹ֔ום רְאֵ֥ה דְבָרֶ֖ךָ טֹובִ֣ים וּנְכֹחִ֑ים וְשֹׁמֵ֥עַ אֵין־לְךָ֖ מֵאֵ֥ת הַמֶּֽלֶךְ׃
4 ಇದಲ್ಲದೆ ಅಬ್ಷಾಲೋಮನು, “ನಾನು ದೇಶದ ಮೇಲೆ ನ್ಯಾಯಾಧಿಪತಿಯಾಗಿ ನೇಮಕವಾಗಿದ್ದರೆ ಎಷ್ಟೋ ಒಳ್ಳೆಯದು. ಆಗ ವ್ಯಾಜ್ಯವಾದರೂ, ನ್ಯಾಯವಿಚಾರಣೆಯಾದರೂ ಇದ್ದ ಪ್ರತಿ ಮನುಷ್ಯನು ನನ್ನ ಬಳಿಗೆ ಬಂದರೆ, ನಾನು ಅವನಿಗೆ ನೀತಿಯಿಂದ ನ್ಯಾಯತೀರಿಸುವೆನು,” ಅನ್ನುವನು.
וַיֹּ֙אמֶר֙ אַבְשָׁלֹ֔ום מִי־יְשִׂמֵ֥נִי שֹׁפֵ֖ט בָּאָ֑רֶץ וְעָלַ֗י יָבֹ֥וא כָּל־אִ֛ישׁ אֲשֶֽׁר־יִהְיֶה־לֹּו־רִ֥יב וּמִשְׁפָּ֖ט וְהִצְדַּקְתִּֽיו׃
5 ಯಾವನಾದರೂ ಅವನಿಗೆ ವಂದಿಸುವುದಕ್ಕೆ ಬಂದರೆ, ಕೂಡಲೆ ತನ್ನ ಕೈಯನ್ನು ಚಾಚಿ ಅಂಥವನನ್ನು ಎತ್ತಿ ಮುದ್ದಿಡುತ್ತಿದ್ದನು.
וְהָיָה֙ בִּקְרָב־אִ֔ישׁ לְהִשְׁתַּחֲוֹ֖ת לֹ֑ו וְשָׁלַ֧ח אֶת־יָדֹ֛ו וְהֶחֱזִ֥יק לֹ֖ו וְנָ֥שַׁק לֹֽו׃
6 ಈ ಪ್ರಕಾರ ಅಬ್ಷಾಲೋಮನು ನ್ಯಾಯಕ್ಕೋಸ್ಕರ ಅರಸನ ಬಳಿಗೆ ಬರುವ ಇಸ್ರಾಯೇಲರೆಲ್ಲರಿಗೆ ಮಾಡಿದನು. ಹೀಗೆ ಅಬ್ಷಾಲೋಮನು ಇಸ್ರಾಯೇಲರ ಹೃದಯಗಳನ್ನು ಗೆದ್ದುಕೊಂಡನು.
וַיַּ֨עַשׂ אַבְשָׁלֹ֜ום כַּדָּבָ֤ר הַזֶּה֙ לְכָל־יִשְׂרָאֵ֔ל אֲשֶׁר־יָבֹ֥אוּ לַמִּשְׁפָּ֖ט אֶל־הַמֶּ֑לֶךְ וַיְגַנֵּב֙ אַבְשָׁלֹ֔ום אֶת־לֵ֖ב אַנְשֵׁ֥י יִשְׂרָאֵֽל׃ פ
7 ನಾಲ್ಕು ವರ್ಷಗಳಾದ ತರುವಾಯ ಅಬ್ಷಾಲೋಮನು ಅರಸನಿಗೆ, “ನಾನು ಯೆಹೋವ ದೇವರಿಗೆ ಮಾಡಿಕೊಂಡಿದ್ದ ನನ್ನ ಹರಕೆಯನ್ನು ಹೆಬ್ರೋನಿನಲ್ಲಿ ಸಲ್ಲಿಸಲು ಹೋಗುವುದಕ್ಕೆ ಅಪ್ಪಣೆಕೊಡಬೇಕು.
וַיְהִ֕י מִקֵּ֖ץ אַרְבָּעִ֣ים שָׁנָ֑ה וַיֹּ֤אמֶר אַבְשָׁלֹום֙ אֶל־הַמֶּ֔לֶךְ אֵ֣לֲכָה נָּ֗א וַאֲשַׁלֵּ֛ם אֶת־נִדְרִ֛י אֲשֶׁר־נָדַ֥רְתִּי לַֽיהוָ֖ה בְּחֶבְרֹֽון׃
8 ಏಕೆಂದರೆ, ‘ಯೆಹೋವ ದೇವರು ನನ್ನನ್ನು ಯೆರೂಸಲೇಮಿಗೆ ತಿರುಗಿ ನಿಜವಾಗಿಯೂ ಬರಮಾಡಿದರೆ, ನಾನು ಯೆಹೋವ ದೇವರನ್ನು ಸೇವಿಸುವೆನು,’ ಎಂದು ನಿನ್ನ ಸೇವಕನು ಅರಾಮ್ಯ ದೇಶದ ಗೆಷೂರಿನಲ್ಲಿ ವಾಸಿಸಿರುವಾಗ ಹರಕೆ ಮಾಡಿಕೊಂಡಿದ್ದನು,” ಎಂದನು.
כִּי־נֵ֙דֶר֙ נָדַ֣ר עַבְדְּךָ֔ בְּשִׁבְתִּ֥י בִגְשׁ֛וּר בַּאֲרָ֖ם לֵאמֹ֑ר אִם־יְשִׁיב (יָשֹׁ֨וב) יְשִׁיבֵ֤נִי יְהוָה֙ יְר֣וּשָׁלַ֔͏ִם וְעָבַדְתִּ֖י אֶת־יְהוָֽה׃
9 ಅರಸನು ಅವನಿಗೆ, “ಸಮಾಧಾನವಾಗಿ ಹೋಗು,” ಎಂದನು. ಆಗ ಅವನು ಎದ್ದು ಹೆಬ್ರೋನಿಗೆ ಹೋದನು.
וַיֹּֽאמֶר־לֹ֥ו הַמֶּ֖לֶךְ לֵ֣ךְ בְּשָׁלֹ֑ום וַיָּ֖קָם וַיֵּ֥לֶךְ חֶבְרֹֽונָה׃ פ
10 ಅಬ್ಷಾಲೋಮನು ಇಸ್ರಾಯೇಲಿನ ಸಮಸ್ತ ಗೋತ್ರಗಳಿಗೆ ಗೂಢಚಾರರನ್ನು ಕಳುಹಿಸಿ ಅವರಿಗೆ, “ನೀವು ತುತೂರಿಯ ಶಬ್ದ ಕೇಳಿದಾಗ, ‘ಅಬ್ಷಾಲೋಮನು ಹೆಬ್ರೋನಿನಲ್ಲಿ ಅರಸನಾದನೆಂದು ಘೋಷಿಸಿರಿ’ ಎಂದು ಹೇಳಿರಿ,” ಎಂದನು.
וַיִּשְׁלַ֤ח אַבְשָׁלֹום֙ מְרַגְּלִ֔ים בְּכָל־שִׁבְטֵ֥י יִשְׂרָאֵ֖ל לֵאמֹ֑ר כְּשָׁמְעֲכֶם֙ אֶת־קֹ֣ול הַשֹּׁפָ֔ר וַאֲמַרְתֶּ֕ם מָלַ֥ךְ אַבְשָׁלֹ֖ום בְּחֶבְרֹֽון׃
11 ಅಬ್ಷಾಲೋಮನ ಸಂಗಡ ಯೆರೂಸಲೇಮಿನಿಂದ ಕರೆಯಲಾದ ಇನ್ನೂರು ಮಂದಿ ಜನರು ಹೋದರು. ಆದರೆ ಅವರು ಒಳಸಂಚನ್ನು ಏನೂ ತಿಳಿಯದೆ ಯಥಾರ್ಥ ಮನಸ್ಸುಳ್ಳವರಾಗಿದ್ದರು.
וְאֶת־אַבְשָׁלֹ֗ום הָלְכ֞וּ מָאתַ֤יִם אִישׁ֙ מִיר֣וּשָׁלַ֔͏ִם קְרֻאִ֖ים וְהֹלְכִ֣ים לְתֻמָּ֑ם וְלֹ֥א יָדְע֖וּ כָּל־דָּבָֽר׃
12 ಅಬ್ಷಾಲೋಮನು ಬಲಿಗಳನ್ನು ಅರ್ಪಿಸುತ್ತಿರುವಾಗ, ದಾವೀದನ ಆಲೋಚನಾಗಾರನಾಗಿರುವ ಗಿಲೋವಿನ ಅಹೀತೋಫೆಲನನ್ನು ಗಿಲೋವೆಂಬ ಅವನ ಪಟ್ಟಣದಿಂದ ಕರೆಕಳುಹಿಸಿದನು. ಅಬ್ಷಾಲೋಮನ ಸಂಗಡ ಕೂಡುವ ಜನರು ಆಗಾಗ್ಗೆ ಹೆಚ್ಚಿದ್ದರಿಂದ, ಒಳಸಂಚಿನ ಗುಂಪು ಬಲವಾಯಿತು.
וַיִּשְׁלַ֣ח אַ֠בְשָׁלֹום אֶת־אֲחִיתֹ֨פֶל הַגִּֽילֹנִ֜י יֹועֵ֣ץ דָּוִ֗ד מֵֽעִירֹו֙ מִגִּלֹ֔ה בְּזָבְחֹ֖ו אֶת־הַזְּבָחִ֑ים וַיְהִ֤י הַקֶּ֙שֶׁר֙ אַמִּ֔ץ וְהָעָ֛ם הֹולֵ֥ךְ וָרָ֖ב אֶת־אַבְשָׁלֹֽום׃
13 ದಾವೀದನ ಬಳಿಗೆ ಒಬ್ಬ ದೂತನು ಬಂದು, “ಇಸ್ರಾಯೇಲರ ಹೃದಯಗಳು ಅಬ್ಷಾಲೋಮನ ಕಡೆ ತಿರುಗಿಕೊಂಡಿವೆ,” ಎಂದನು.
וַיָּבֹא֙ הַמַּגִּ֔יד אֶל־דָּוִ֖ד לֵאמֹ֑ר הָיָ֛ה לֶב־אִ֥ישׁ יִשְׂרָאֵ֖ל אַחֲרֵ֥י אַבְשָׁלֹֽום׃
14 ಆಗ ದಾವೀದನು ಯೆರೂಸಲೇಮಿನಲ್ಲಿ ತನ್ನ ಹತ್ತಿರ ಇರುವ ತನ್ನ ಸಮಸ್ತ ಸೇವಕರಿಗೆ, “ಏಳಿರಿ, ನಾವು ಓಡಿಹೋಗೋಣ. ಇಲ್ಲದಿದ್ದರೆ ಅಬ್ಷಾಲೋಮನ ಕೈಯಿಂದ ತಪ್ಪಿಸಿಕೊಂಡು ಹೋಗಲಾರೆವು. ಅವನು ಫಕ್ಕನೆ ನಮ್ಮನ್ನು ಹಿಡಿದು, ನಮ್ಮ ಮೇಲೆ ಕೇಡನ್ನು ಬರಮಾಡಿ, ಪಟ್ಟಣವನ್ನು ಖಡ್ಗದಿಂದ ಹೊಡೆಯದ ಹಾಗೆ ಹೊರಟು ಹೋಗುವುದಕ್ಕೆ ತ್ವರೆಮಾಡಿರಿ,” ಎಂದನು.
וַיֹּ֣אמֶר דָּ֠וִד לְכָל־עֲבָדָ֨יו אֲשֶׁר־אִתֹּ֤ו בִירוּשָׁלַ֙͏ִם֙ ק֣וּמוּ וְנִבְרָ֔חָה כִּ֛י לֹא־תִֽהְיֶה־לָּ֥נוּ פְלֵיטָ֖ה מִפְּנֵ֣י אַבְשָׁלֹ֑ום מַהֲר֣וּ לָלֶ֗כֶת פֶּן־יְמַהֵ֤ר וְהִשִּׂגָ֙נוּ֙ וְהִדִּ֤יחַ עָלֵ֙ינוּ֙ אֶת־הָ֣רָעָ֔ה וְהִכָּ֥ה הָעִ֖יר לְפִי־חָֽרֶב׃
15 ಆಗ ಅರಸನ ಸೇವಕರು ಅರಸನಿಗೆ, “ಅರಸನಾದ ನಮ್ಮ ಒಡೆಯನು ನಮಗೆ ಏನೇನು ಆಜ್ಞಾಪಿಸುವನೋ, ಅದನ್ನು ಮಾಡುವುದಕ್ಕೆ ನಿನ್ನ ಸೇವಕರು ಸಿದ್ಧವಾಗಿದ್ದೇವೆ,” ಎಂದರು.
וַיֹּאמְר֥וּ עַבְדֵֽי־הַמֶּ֖לֶךְ אֶל־הַמֶּ֑לֶךְ כְּכֹ֧ל אֲשֶׁר־יִבְחַ֛ר אֲדֹנִ֥י הַמֶּ֖לֶךְ הִנֵּ֥ה עֲבָדֶֽיךָ׃
16 ಅರಸನು ಮನೆಗೆ ಕಾವಲಿರುವಂತೆ ಉಪಪತ್ನಿಗಳಾದ ಹತ್ತು ಮಂದಿ ಸ್ತ್ರೀಯರನ್ನು ಬಿಟ್ಟು, ಅವನೂ, ಅವನ ಮನೆಯವರೆಲ್ಲರೂ ಅವನ ಹಿಂದೆ ಹೊರಟು ಹೋದರು.
וַיֵּצֵ֥א הַמֶּ֛לֶךְ וְכָל־בֵּיתֹ֖ו בְּרַגְלָ֑יו וַיַּעֲזֹ֣ב הַמֶּ֗לֶךְ אֵ֣ת עֶ֧שֶׂר נָשִׁ֛ים פִּֽלַגְשִׁ֖ים לִשְׁמֹ֥ר הַבָּֽיִת׃
17 ಅರಸನೂ, ಅವನ ಹಿಂದೆ ಸಮಸ್ತ ಜನರೂ ಹೊರಟುಹೋಗಿ ಪಟ್ಟಣದ ಕಡೆಯ ಮನೆಯ ಬಳಿ ಬಂದು ಅಲ್ಲಿ ನಿಂತರು.
וַיֵּצֵ֥א הַמֶּ֛לֶךְ וְכָל־הָעָ֖ם בְּרַגְלָ֑יו וַיַּעַמְד֖וּ בֵּ֥ית הַמֶּרְחָֽק׃
18 ಅವನ ಸಮಸ್ತ ಸೇವಕರೂ, ಸಮಸ್ತ ಕೆರೇತ್ಯರೂ, ಸಮಸ್ತ ಪೆಲೇತ್ಯರೂ ಅವನ ಹಿಂದೆ ಗತ್ ಊರಿನಿಂದ ಅವನ ಸಂಗಡ ಬಂದ ಗಿತ್ತೀಯರಾದ ಆರುನೂರು ಮಂದಿಯೂ ಅರಸನ ಮುಂದೆ ನಡೆದರು.
וְכָל־עֲבָדָיו֙ עֹבְרִ֣ים עַל־יָדֹ֔ו וְכָל־הַכְּרֵתִ֖י וְכָל־הַפְּלֵתִ֑י וְכָֽל־הַגִּתִּ֞ים שֵׁשׁ־מֵאֹ֣ות אִ֗ישׁ אֲשֶׁר־בָּ֤אוּ בְרַגְלֹו֙ מִגַּ֔ת עֹבְרִ֖ים עַל־פְּנֵ֥י הַמֶּֽלֶךְ׃
19 ಆಗ ಅರಸನು ಗಿತ್ತೀಯನಾದ ಇತ್ತೈಯನ್ನು ಕಂಡು, “ನೀನು ನಮ್ಮ ಸಂಗಡ ಬರುವುದು ಏಕೆ? ನಿನ್ನ ಸ್ಥಳಕ್ಕೆ ಹಿಂದಿರುಗಿ ಹೋಗಿ, ಅರಸನ ಸಂಗಡ ಇರು. ಏಕೆಂದರೆ ನೀನು ವಿದೇಶಿ. ನಿನ್ನ ದೇಶದಿಂದ ಸೆರೆಯಾಳಾಗಿ ಬಂದವನು.
וַיֹּ֤אמֶר הַמֶּ֙לֶךְ֙ אֶל־אִתַּ֣י הַגִּתִּ֔י לָ֧מָּה תֵלֵ֛ךְ גַּם־אַתָּ֖ה אִתָּ֑נוּ שׁ֣וּב וְשֵׁ֤ב עִם־הַמֶּ֙לֶךְ֙ כִּֽי־נָכְרִ֣י אַ֔תָּה וְגַם־גֹּלֶ֥ה אַתָּ֖ה לִמְקֹומֶֽךָ׃
20 ನೀನು ನಿನ್ನೆ ಬಂದವನು. ನಾನು ಎಲ್ಲಿಗೆ ಹೋಗುತ್ತೇನೋ ನನಗೇ ಗೊತ್ತಿಲ್ಲ. ಆದುದರಿಂದ ನಾನು ನಿನ್ನನ್ನು ನಮ್ಮ ಸಂಗಡ ಸುಮ್ಮನೇ ತಿರುಗಾಡಿಸುವುದು ಏಕೆ? ನೀನು ನಿನ್ನ ಸಹೋದರರನ್ನು ಕರೆದುಕೊಂಡು ಹಿಂದಕ್ಕೆ ಹೋಗು. ದಯೆಯೂ, ನಂಬಿಗಸ್ತಿಕೆಯೂ ನಿನ್ನ ಸಂಗಡ ಇರಲಿ,” ಎಂದನು.
תְּמֹ֣ול ׀ בֹּואֶ֗ךָ וְהַיֹּ֞ום אֲנֹועֲךָ (אֲנִֽיעֲךָ֤) עִמָּ֙נוּ֙ לָלֶ֔כֶת וַאֲנִ֣י הֹולֵ֔ךְ עַ֥ל אֲשֶׁר־אֲנִ֖י הֹולֵ֑ךְ שׁ֣וּב וְהָשֵׁ֧ב אֶת־אַחֶ֛יךָ עִמָּ֖ךְ חֶ֥סֶד וֶאֱמֶֽת׃
21 ಆದರೆ ಇತ್ತೈಯೂ ಅರಸನಿಗೆ ಉತ್ತರವಾಗಿ, “ಯೆಹೋವ ದೇವರ ಜೀವದಾಣೆ, ಅರಸನಾದ ನನ್ನ ಒಡೆಯನ ಜೀವದಾಣೆ, ಅರಸನಾದ ನನ್ನ ಒಡೆಯನು ಎಲ್ಲಿ ಇರುವನೋ, ಸಾವಾದರೂ ಬದುಕಾದರೂ ನಿಶ್ಚಯವಾಗಿ ಅಲ್ಲಿ ನಿನ್ನ ಸೇವಕನು ಇರುವನು,” ಎಂದನು.
וַיַּ֧עַן אִתַּ֛י אֶת־הַמֶּ֖לֶךְ וַיֹּאמַ֑ר חַי־יְהוָ֗ה וְחֵי֙ אֲדֹנִ֣י הַמֶּ֔לֶךְ כִּ֠י אִם־בִּמְקֹ֞ום אֲשֶׁ֥ר יִֽהְיֶה־שָּׁ֣ם ׀ אֲדֹנִ֣י הַמֶּ֗לֶךְ אִם־לְמָ֙וֶת֙ אִם־לְחַיִּ֔ים כִּי־שָׁ֖ם יִהְיֶ֥ה עַבְדֶּֽךָ׃
22 ಆಗ ದಾವೀದನು ಇತ್ತೈಗೆ, “ನೀನು ಹೋಗಿ ದಾಟು,” ಎಂದನು. ಆದ್ದರಿಂದ ಗಿತ್ತೀಯನಾದ ಇತ್ತೈಯೂ, ಅವನ ಸಮಸ್ತ ಮನುಷ್ಯರೂ, ಅವನ ಸಂಗಡ ಇರುವ ಸಮಸ್ತ ಚಿಕ್ಕವರೂ ಕೂಡ ದಾಟಿಹೋದರು.
וַיֹּ֧אמֶר דָּוִ֛ד אֶל־אִתַּ֖י לֵ֣ךְ וַעֲבֹ֑ר וַֽיַּעֲבֹ֞ר אִתַּ֤י הַגִּתִּי֙ וְכָל־אֲנָשָׁ֔יו וְכָל־הַטַּ֖ף אֲשֶׁ֥ר אִתֹּֽו׃
23 ಜನರೆಲ್ಲಾ ದಾಟಿಹೋಗುವಾಗ, ದೇಶದವರೆಲ್ಲಾ ಮಹಾಧ್ವನಿಯಿಂದ ಅತ್ತರು. ಅರಸನು ಕಿದ್ರೋನ್ ಹಳ್ಳವನ್ನು ದಾಟಿದನು. ಹಾಗೆಯೇ ಅವನ ಜನರೆಲ್ಲರೂ ದಾಟಿ ಮರುಭೂಮಿಯ ಮಾರ್ಗವಾಗಿ ನಡೆದುಹೋದರು.
וְכָל־הָאָ֗רֶץ בֹּוכִים֙ קֹ֣ול גָּדֹ֔ול וְכָל־הָעָ֖ם עֹֽבְרִ֑ים וְהַמֶּ֗לֶךְ עֹבֵר֙ בְּנַ֣חַל קִדְרֹ֔ון וְכָל־הָעָם֙ עֹבְרִ֔ים עַל־פְּנֵי־דֶ֖רֶךְ אֶת־הַמִּדְבָּֽר׃
24 ಚಾದೋಕನೂ, ಅವನ ಸಂಗಡ ಇರುವ ಸಮಸ್ತ ಲೇವಿಯರೂ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬಂದು ಇಳಿಸಿದರು. ಅಬಿಯಾತರನು, ಜನರೆಲ್ಲರು ಪಟ್ಟಣದಿಂದ ದಾಟಿಹೋಗುವವರೆಗೆ ಯಜ್ಞ ಸಮರ್ಪಿಸುತ್ತಾ ಮುಂದೆ ನಡೆಯುತ್ತಿದ್ದನು.
וְהִנֵּ֨ה גַם־צָדֹ֜וק וְכָֽל־הַלְוִיִּ֣ם אִתֹּ֗ו נֹֽשְׂאִים֙ אֶת־אֲרֹון֙ בְּרִ֣ית הָאֱלֹהִ֔ים וַיַּצִּ֙קוּ֙ אֶת־אֲרֹ֣ון הָאֱלֹהִ֔ים וַיַּ֖עַל אֶבְיָתָ֑ר עַד־תֹּ֥ם כָּל־הָעָ֖ם לַעֲבֹ֥ור מִן־הָעִֽיר׃
25 ಆಗ ಅರಸನು ಚಾದೋಕನಿಗೆ, “ದೇವರ ಮಂಜೂಷವನ್ನು ಪಟ್ಟಣಕ್ಕೆ ತಿರುಗಿ ತೆಗೆದುಕೊಂಡು ಹೋಗು. ಯೆಹೋವ ದೇವರ ದೃಷ್ಟಿಯಲ್ಲಿ ಮುಂದೆ ನನಗೆ ಕೃಪೆ ದೊರಕಿದರೆ, ಅವರು ತಿರುಗಿ ನನ್ನನ್ನು ಬರಮಾಡಿ ಅದನ್ನೂ, ಅದರ ವಾಸಸ್ಥಳವನ್ನೂ ನನಗೆ ತೋರಿಸುವರು.
וַיֹּ֤אמֶר הַמֶּ֙לֶךְ֙ לְצָדֹ֔וק הָשֵׁ֛ב אֶת־אֲרֹ֥ון הָאֱלֹהִ֖ים הָעִ֑יר אִם־אֶמְצָ֥א חֵן֙ בְּעֵינֵ֣י יְהוָ֔ה וֶהֱשִׁבַ֕נִי וְהִרְאַ֥נִי אֹתֹ֖ו וְאֶת־נָוֵֽהוּ׃
26 ಒಂದು ವೇಳೆ ಅವರು, ‘ನಿನ್ನಲ್ಲಿ ನನಗೆ ಇಷ್ಟವಿಲ್ಲವೆಂದು’ ಹೇಳಿದರೆ ಇಗೋ, ಅವರು ತಮ್ಮ ದೃಷ್ಟಿಗೆ ತೋಚಿದ ಹಾಗೆ ನನಗೆ ಮಾಡಲಿ,” ಎಂದನು.
וְאִם֙ כֹּ֣ה יֹאמַ֔ר לֹ֥א חָפַ֖צְתִּי בָּ֑ךְ הִנְנִ֕י יַֽעֲשֶׂה־לִּ֕י כַּאֲשֶׁ֥ר טֹ֖וב בְּעֵינָֽיו׃ ס
27 ಅರಸನು ಯಾಜಕನಾದ ಚಾದೋಕನಿಗೆ, “ನೀನು ದರ್ಶಿಯಲ್ಲವೇ? ನೀನು ಸಮಾಧಾನದಿಂದ ಪಟ್ಟಣಕ್ಕೆ ತಿರುಗಿ ಹೋಗು; ಇದಲ್ಲದೆ ನಿನ್ನ ಇಬ್ಬರು ಮಕ್ಕಳು ಅಹೀಮಾಚನೂ, ಅಬಿಯಾತರನ ಮಗ ಯೋನಾತಾನನೂ ನಿನ್ನ ಸಂಗಡ ಹೋಗಲಿ.
וַיֹּ֤אמֶר הַמֶּ֙לֶךְ֙ אֶל־צָדֹ֣וק הַכֹּהֵ֔ן הֲרֹואֶ֣ה אַתָּ֔ה שֻׁ֥בָה הָעִ֖יר בְּשָׁלֹ֑ום וַאֲחִימַ֨עַץ בִּנְךָ֜ וִיהֹונָתָ֧ן בֶּן־אֶבְיָתָ֛ר שְׁנֵ֥י בְנֵיכֶ֖ם אִתְּכֶֽם׃
28 ನೋಡು, ನನಗೆ ತಿಳಿಸುವುದಕ್ಕೆ ನಿಮ್ಮ ಬಳಿಯಿಂದ ವರ್ತಮಾನ ಬರುವವರೆಗೂ, ನಾನು ಮರುಭೂಮಿಯ ಬಳಿಯಲ್ಲಿ ಇರುವೆನು,” ಎಂದನು.
רְאוּ֙ אָנֹכִ֣י מִתְמַהְמֵ֔הַּ בְּעַבְרֹות (בְּעַֽרְבֹ֖ות) הַמִּדְבָּ֑ר עַ֣ד בֹּ֥וא דָבָ֛ר מֵעִמָּכֶ֖ם לְהַגִּ֥יד לִֽי׃
29 ಹಾಗೆಯೇ ಚಾದೋಕನೂ, ಅಬಿಯಾತರನೂ ದೇವರ ಮಂಜೂಷವನ್ನು ತಿರುಗಿ ಯೆರೂಸಲೇಮಿಗೆ ತೆಗೆದುಕೊಂಡುಹೋಗಿ ಅಲ್ಲಿದ್ದರು.
וַיָּ֨שֶׁב צָדֹ֧וק וְאֶבְיָתָ֛ר אֶת־אֲרֹ֥ון הָאֱלֹהִ֖ים יְרוּשָׁלָ֑͏ִם וַיֵּשְׁב֖וּ שָֽׁם׃
30 ದಾವೀದನು ಅಳುತ್ತಾ ತನ್ನ ತಲೆಯನ್ನು ಮುಚ್ಚಿಕೊಂಡು, ಬರಿಗಾಲಿನಿಂದ ಎಣ್ಣೆಮರಗಳ ಗುಡ್ಡವನ್ನು ಏರಿದನು. ಅವನ ಸಂಗಡ ಇರುವ ಸಮಸ್ತ ಜನರೂ, ತಮ್ಮ ತಮ್ಮ ತಲೆಗಳನ್ನು ಮುಚ್ಚಿಕೊಂಡು ಅಳುತ್ತಾ ಮೇಲಕ್ಕೆ ಏರಿದರು.
וְדָוִ֡ד עֹלֶה֩ בְמַעֲלֵ֨ה הַזֵּיתִ֜ים עֹלֶ֣ה ׀ וּבֹוכֶ֗ה וְרֹ֥אשׁ לֹו֙ חָפ֔וּי וְה֖וּא הֹלֵ֣ךְ יָחֵ֑ף וְכָל־הָעָ֣ם אֲשֶׁר־אִתֹּ֗ו חָפוּ֙ אִ֣ישׁ רֹאשֹׁ֔ו וְעָל֥וּ עָלֹ֖ה וּבָכֹֽה׃
31 ಅಹೀತೋಫೆಲನು ಅಬ್ಷಾಲೋಮನ ಬಳಿಯಲ್ಲಿ ಒಳಸಂಚಿನವರ ಸಂಗಡ ಇದ್ದಾನೆಂದು ದಾವೀದನಿಗೆ ತಿಳಿಸಲಾಯಿತು. ಆಗ ದಾವೀದನು, “ಯೆಹೋವ ದೇವರೇ, ಅಹೀತೋಫೆಲನ ಆಲೋಚನೆಯನ್ನು ಹುಚ್ಚುತನವನ್ನಾಗಿ ಮಾಡಿಬಿಡು,” ಎಂದನು.
וְדָוִד֙ הִגִּ֣יד לֵאמֹ֔ר אֲחִיתֹ֥פֶל בַּקֹּשְׁרִ֖ים עִם־אַבְשָׁלֹ֑ום וַיֹּ֣אמֶר דָּוִ֔ד סַכֶּל־נָ֛א אֶת־עֲצַ֥ת אֲחִיתֹ֖פֶל יְהוָֽה׃
32 ದಾವೀದನು ಪರ್ವತದ ತುದಿಗೆ ಬಂದು ಅಲ್ಲಿ ದೇವರನ್ನು ಆರಾಧಿಸಿದಾಗ, ಅರ್ಕಿಯನಾದ ಹೂಷೈ ತನ್ನ ಅಂಗಿಯನ್ನು ಹರಿದುಕೊಂಡು, ತನ್ನ ತಲೆಯ ಮೇಲೆ ಮಣ್ಣು ಹಾಕಿಕೊಂಡು, ಅವನನ್ನು ಎದುರುಗೊಳ್ಳಲು ಬಂದನು.
וַיְהִ֤י דָוִד֙ בָּ֣א עַד־הָרֹ֔אשׁ אֲשֶֽׁר־יִשְׁתַּחֲוֶ֥ה שָׁ֖ם לֵאלֹהִ֑ים וְהִנֵּ֤ה לִקְרָאתֹו֙ חוּשַׁ֣י הָאַרְכִּ֔י קָר֙וּעַ֙ כֻּתָּנְתֹּ֔ו וַאֲדָמָ֖ה עַל־רֹאשֹֽׁו׃
33 ಆಗ ದಾವೀದನು ಅವನಿಗೆ, “ನೀನು ನನ್ನ ಸಂಗಡ ಬಂದರೆ, ನನಗೆ ಭಾರವಾಗಿರುವೆ.
וַיֹּ֥אמֶר לֹ֖ו דָּוִ֑ד אִ֚ם עָבַ֣רְתָּ אִתִּ֔י וְהָיִ֥תָ עָלַ֖י לְמַשָּֽׂא׃
34 ನೀನು ಪಟ್ಟಣಕ್ಕೆ ತಿರುಗಿ ಹೋಗಿ ಅಬ್ಷಾಲೋಮನಿಗೆ, ‘ಅರಸನೇ, ನಾನು ನಿನ್ನ ಸೇವಕನಾಗಿರುವೆನು. ನಾನು ಇಂದಿನವರೆಗೂ ಹೇಗೆ ನಿನ್ನ ತಂದೆಗೆ ಸೇವಕನಾಗಿದ್ದೆನೋ, ಹಾಗೆಯೇ ಈಗ ನಿನ್ನ ಸೇವಕನಾಗಿರುವೆನು,’ ಎಂದು ಹೇಳಿದರೆ, ನೀನು ನನಗೋಸ್ಕರ ಅಹೀತೋಫೆಲನ ಆಲೋಚನೆಯನ್ನು ವ್ಯರ್ಥಮಾಡಬಹುದು.
וְאִם־הָעִ֣יר תָּשׁ֗וּב וְאָמַרְתָּ֤ לְאַבְשָׁלֹום֙ עַבְדְּךָ֙ אֲנִ֤י הַמֶּ֙לֶךְ֙ אֶֽהְיֶ֔ה עֶ֣בֶד אָבִ֤יךָ וַֽאֲנִי֙ מֵאָ֔ז וְעַתָּ֖ה וַאֲנִ֣י עַבְדֶּ֑ךָ וְהֵפַרְתָּ֣ה לִ֔י אֵ֖ת עֲצַ֥ת אֲחִיתֹֽפֶל׃
35 ಅಲ್ಲಿ ಯಾಜಕರಾದ ಚಾದೋಕನೂ, ಅಬಿಯಾತರನೂ ನಿನ್ನ ಬಳಿಯಲ್ಲಿ ಇಲ್ಲವೋ? ಆದ್ದರಿಂದ ನೀನು ಅರಸನ ಮನೆಯಲ್ಲಿ ಯಾವ ವರ್ತಮಾನವನ್ನು ಕೇಳುತ್ತೀಯೋ, ಅದನ್ನು ಯಾಜಕರಾದ ಚಾದೋಕನಿಗೂ, ಎಬ್ಯಾತಾರನಿಗೂ ತಿಳಿಸು.
וַהֲלֹ֤וא עִמְּךָ֙ שָׁ֔ם צָדֹ֥וק וְאֶבְיָתָ֖ר הַכֹּהֲנִ֑ים וְהָיָ֗ה כָּל־הַדָּבָר֙ אֲשֶׁ֤ר תִּשְׁמַע֙ מִבֵּ֣ית הַמֶּ֔לֶךְ תַּגִּ֕יד לְצָדֹ֥וק וּלְאֶבְיָתָ֖ר הַכֹּהֲנִֽים׃
36 ಅಲ್ಲಿ ಅವರ ಸಂಗಡ ಅವರ ಇಬ್ಬರು ಮಕ್ಕಳು ಇದ್ದಾರೆ. ಚಾದೋಕನ ಮಗ ಅಹೀಮಾಚನೂ, ಅಬಿಯಾತರನ ಮಗ ಯೋನಾತಾನನೂ. ನೀವು ಕೇಳಿದ ವರ್ತಮಾನವನ್ನೆಲ್ಲಾ ಅವರ ಕೈಯಿಂದ ನನಗೆ ಹೇಳಿ ಕಳುಹಿಸಬೇಕು,” ಎಂದನು.
הִנֵּה־שָׁ֤ם עִמָּם֙ שְׁנֵ֣י בְנֵיהֶ֔ם אֲחִימַ֣עַץ לְצָדֹ֔וק וִיהֹונָתָ֖ן לְאֶבְיָתָ֑ר וּשְׁלַחְתֶּ֤ם בְּיָדָם֙ אֵלַ֔י כָּל־דָּבָ֖ר אֲשֶׁ֥ר תִּשְׁמָֽעוּ׃
37 ಹಾಗೆಯೇ ದಾವೀದನ ಸ್ನೇಹಿತನಾದ ಹೂಷೈ ಪಟ್ಟಣದೊಳಗೆ ಬಂದನು. ಆಗ ಅಬ್ಷಾಲೋಮನು ಯೆರೂಸಲೇಮಿಗೆ ಬಂದನು.
וַיָּבֹ֥א חוּשַׁ֛י רֵעֶ֥ה דָוִ֖ד הָעִ֑יר וְאַבְשָׁלֹ֔ם יָבֹ֖א יְרוּשָׁלָֽ͏ִם׃

< ಸಮುವೇಲನು - ದ್ವಿತೀಯ ಭಾಗ 15 >