< ಪೇತ್ರನು ಬರೆದ ಎರಡನೆಯ ಪತ್ರಿಕೆ 1 >

1 ಕ್ರಿಸ್ತ ಯೇಸುವಿನ ದಾಸನೂ ಅಪೊಸ್ತಲನೂ ಆಗಿರುವ ಸೀಮೋನ ಪೇತ್ರನು, ನಮ್ಮ ದೇವರ ಮತ್ತು ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ನೀತಿಯ ಮೂಲಕ ನಮ್ಮಂತೆಯೇ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ ಬರೆಯುವುದು:
Simoni Peturo, Utumwi na tumwa owa Yesu Kilisti hwabhala bhambilile ololezyo lulola olwemonde nashi satahambilile ate, ololesyo lwali mhati mlyoli eya Ngolobhi ofwozi wetu OYesu Kilisti.
2 ದೇವರ ವಿಷಯವಾಗಿಯೂ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ವಿಷಯವಾಗಿಯೂ ಇರುವ ತಿಳುವಳಿಕೆಯ ಮೂಲಕ ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ದೊರೆಯಲಿ.
Owene ubhe hulimwe owinza wojelole ashelelee enjele enzya Ngolobhi no Gosi wetu oYesu Kilisti.
3 ದೇವರು ತಮ್ಮ ಸ್ವಂತ ಮಹಿಮೆಗಾಗಿಯೂ ಸದ್ಗುಣಕ್ಕಾಗಿಯೂ ನಮ್ಮನ್ನು ಕರೆದಿದ್ದಾರೆ. ಏಕೆಂದರೆ, ದೇವರ ತಿಳುವಳಿಕೆಯ ಮೂಲಕವಾಗಿ ಜೀವಕ್ಕೂ, ಭಕ್ತಿಗೂ ಬೇಕಾದದ್ದೆಲ್ಲವುಗಳನ್ನು ದೇವರ ಶಕ್ತಿಯು ನಮಗೆ ಕೊಡಲಾಗಿದೆ.
Ashelelee enjele ezya Ngolobhi zyajile enongwa zyekwe zyoti aeje oputi owesiku, Atume hwa Ngolobhi yatikwizi zye hu winza tutumle hwakwe.
4 ನೀವು ಲೋಕದಲ್ಲಿ ದುರಾಶೆಯಿಂದುಂಟಾದ ಕೆಟ್ಟತನಕ್ಕೆ ತಪ್ಪಿಸಿಕೊಂಡು ದೈವಸ್ವಭಾವದಲ್ಲಿ ಪಾಲನ್ನು ಹೊಂದುವವರಾಗಬೇಕೆಂದು ಅತ್ಯಂತ ಮಹತ್ವವುಳ್ಳ ಅಮೂಲ್ಯವಾದ ವಾಗ್ದಾನಗಳನ್ನು ದೇವರು ನಮಗೆ ದಯಪಾಲಿಸಿದ್ದಾರೆ.
Hwidala eli asobhezyezye nantele nakazye evintu abhambile eli nantele atibheshe bhagali hulisi zya Ngolobhe. Shatihwendelela azileshe embibhi ezyamusi ene.
5 ಈ ಕಾರಣದಿಂದಲೇ ನೀವು ಪೂರ್ಣಜಾಗ್ರತೆಯಿಂದ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ
Nantele humbombo ene digani alongozye owinza widala elinza lyenyu, nantele, owinza, njele.
6 ಜ್ಞಾನಕ್ಕೆ ಸ್ವಯಂ ನಿಯಂತ್ರಣವನ್ನೂ ಸ್ವಯಂ ನಿಯಂತ್ರಣಕ್ಕೆ ತಾಳ್ಮೆಯನ್ನೂ
Ashilile enjele hashe ashele hashe sabuli ashilile sabuli outauwa.
7 ತಾಳ್ಮೆಗೆ ಭಕ್ತಿಯನ್ನೂ ಭಕ್ತಿಗೆ ಸೋದರ ಸ್ನೇಹವನ್ನೂ ಸೋದರ ಸ್ನೇಹಕ್ಕೆ ಪ್ರೀತಿಯನ್ನೂ ಕೂಡಿಸಿರಿ.
Ashilile outauwa lugano olwa holo na shililo olugano olwaholo, nolugano.
8 ಈ ಗುಣಗಳು ನಿಮ್ಮಲ್ಲಿದ್ದು ಹೆಚ್ಚುತ್ತಾ ಬಂದರೆ, ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಅರಿತುಕೊಳ್ಳುವುದರಲ್ಲಿ ನೀವು ನಿಷ್ಪ್ರಯೋಜಕರೂ ನಿಷ್ಫಲರೂ ಆಗದಂತೆ ಮಾಡುತ್ತವೆ.
Nkashile enongwa ezi zi hweli muhati mwenyu, nkamuhwedelela akulemuhali mwenyu eshi amwe saga mbhe sembhe bhantu bhasepapa amadondolo nantele enjile ezye gosi wetu oYesu Kristi.
9 ಆದರೆ ಈ ಗುಣಗಳಿಲ್ಲದವನು ಕುರುಡನಾಗಿದ್ದಾನೆ. ಅವನು ದೂರದೃಷ್ಟಿಯಿಲ್ಲದವನಾಗಿದ್ದು ತನ್ನ ಹಿಂದಿನ ಪಾಪಗಳಿಂದ ಶುದ್ಧನಾದದ್ದನ್ನು ಮರೆತು ಬಿಟ್ಟಿದ್ದಾನೆ.
Nantele wawoli yasagali nenongwaezi, azilola eviluvili pepe wene, omwene sagalola ayewelwe alyozyo lwembibhi zya kwa hale.
10 ಆದ್ದರಿಂದ ಪ್ರಿಯರೇ, ನಿಮ್ಮ ಕರೆಯುವಿಕೆಯನ್ನೂ ಆಯ್ಕೆಯನ್ನೂ ದೃಢಪಡಿಸಿಕೊಳ್ಳಲು ಸರ್ವ ಪ್ರಯತ್ನವನ್ನು ಮಾಡಿರಿ. ಏಕೆಂದರೆ ಇವುಗಳನ್ನು ನೀವು ಮಾಡಿದರೆ ಎಂದಿಗೂ ಪಾಪದಲ್ಲಿ ಬಿದ್ದುಹೋಗುವುದಿಲ್ಲ.
Eshi mwaholobhane mbombo ahwiyomezwe nantele ohwiyenye oteule no kwizwo hwajili yetu nkashele mubhombe ego sagamubhabomele.
11 ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವು ತಮ್ಮ ನಿತ್ಯ ರಾಜ್ಯದಲ್ಲಿ ಪ್ರವೇಶಿಸುವ ಭಾಗ್ಯವನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವರು. (aiōnios g166)
Esho mbhahwipele evinji hundwango ogwahwijilelile mwa mwene owilawila hwa gosi wetu nofyozi oYesu Kilisti. (aiōnios g166)
12 ಆದ್ದರಿಂದ ನೀವು ಈ ಸಂಗತಿಗಳನ್ನು ತಿಳಿದವರಾಗಿ ಈಗಿನ ಸತ್ಯದಲ್ಲಿ ಸ್ಥಿರವಾಗಿದ್ದರೂ ಇವುಗಳನ್ನು ಯಾವಾಗಲೂ ನಿಮ್ಮ ನೆನಪಿಗೆ ತರಲು ನಾನು ಬಯಸುತ್ತೇನೆ.
Eshi ane embabhehani abhakombosye engwa ezyo wila hata nkashele mgamenye, neshi mlishinza ashilile hulyoli.
13 ನಾನು ನನ್ನ ದೇಹವೆಂಬ ಗುಡಾರದಲ್ಲಿ ಬಾಳುವ ತನಕ ನಿಮ್ಮ ನೆನಪಿಗೆ ತರುವುದು ಯುಕ್ತವೆಂದೆಣಿಸಿದ್ದೇನೆ.
Esebhaje endishinza abha damzye na bhakombosya juu yenogwa ene, sudi sehwi nantele mwihenje eli.
14 ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರು ನನಗೆ ಸ್ಪಷ್ಟ ಪಡಿಸಿದ ಪ್ರಕಾರ, ಈ ನನ್ನ ದೇಹವೆಂಬ ಗುಡಾರವನ್ನು ತೆಗೆದುಹಾಕುವ ಕಾಲ ಬೇಗನೆ ಬರುತ್ತದೆಂದು ನಾನು ಬಲ್ಲೆನು.
Nantele emenye aje esikundodo ebusongole ihenje lyane nashi ogosi oYesu Kilisti sandanjile.
15 ಆದರೂ ನೀವು ನನ್ನ ಮರಣಾನಂತರ ಇವುಗಳನ್ನು ಯಾವಾಗಲೂ ನೆನಪಿಟ್ಟುಕೊಳ್ಳುವಂತೆ ನನ್ನಿಂದಾದಷ್ಟು ಪ್ರಯಾಸಪಡುವೆನು.
Embajenzye nanali hwajili mkomboshe enongwa ezyo nkashile ane nasogola.
16 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಶಕ್ತಿಯ ಬಗ್ಗೆಯೂ ಅವರ ಪುನರಾಗಮನದ ಬಗ್ಗೆಯೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಕುತಂತ್ರವಾಗಿ ಕಲ್ಪಿಸಿದ ಕಥೆಗಳನ್ನು ನಾವು ಅನುಸರಿಸಲಿಲ್ಲ. ಆದರೆ ನಾವೇ ಕ್ರಿಸ್ತ ಯೇಸುವಿನ ಮಹತ್ತನ್ನು ಕಣ್ಣಾರೆ ಕಂಡವರಾಗಿ ತಿಳಿಯಪಡಿಸಿದೆವು.
Nkashi atesagatafwatile embagulwe zyazya hinjie nu sitadi pala patabhabholele juu ya nguvu na hwibhonesya hwa Gosi wetu oYesu Kilisti nantele atali bhashahidi owa hwitutamle hwakwe.
17 ಏಕೆಂದರೆ, “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ,” ಎಂಬ ಧ್ವನಿಯು ಮಹೋನ್ನತ ಮಹಿಮೆಯಿಂದ ಅವರಿಗೆ ಉಂಟಾದದ್ದರಲ್ಲಿ ಅವರು ತಂದೆ ದೇವರಿಂದ ಗೌರವವನ್ನೂ ಮಹಿಮೆಯನ್ನೂ ಹೊಂದಿದರಲ್ಲವೇ.
Omwene ahambilile otutumsane heshima afume hwa Ngolobhe baba pala izu hovwelwe afume hwa tutamu gosi uyanyile. Ono mwana wane yegene nantele ganewane yesangwelwe tee.”
18 ನಾವು ಪರಿಶುದ್ಧ ಪರ್ವತದ ಮೇಲೆ ಕ್ರಿಸ್ತ ಯೇಸುವಿನ ಸಂಗಡ ಇದ್ದಾಗ ಪರಲೋಕದಿಂದ ಬಂದ ಆ ಧ್ವನಿಯನ್ನು ನಾವೇ ಕೇಳಿದೆವು.
Tahovwe zyeizu eli palifuma humwanya pala patahali nawo hula hwigamba elinza.
19 ಮಾತ್ರವಲ್ಲದೆ ನಮಗೆ ಬಹು ನಿಶ್ಚಯವಾದ ಪ್ರವಾದನೆಯ ವಾಕ್ಯಗಳಿವೆ. ಉದಯ ನಕ್ಷತ್ರವಾಗಿರುವ ಕ್ರಿಸ್ತ ಯೇಸು ನಿಮ್ಮ ಹೃದಯಗಳಲ್ಲಿ ಉದಯಿಸುವಾಗ ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪದಂತೆ ಎಣಿಸಿ, ನೀವು ಆ ಪ್ರವಾದನಾ ವಾಕ್ಯಗಳಿಗೆ ಲಕ್ಷ್ಯಕೊಡುವುದು ಒಳ್ಳೆಯದು.
Abalyo hwelyo mubhomba shinza alenganye, nashi okhozyo palukhozya enkisi paka pahusha huntondwe zyazibhonehana mazasha zwazibhaneha humoyo genyu.
20 ಪವಿತ್ರ ವೇದದ ಯಾವ ಪ್ರವಾದನೆಯೂ ಕೇವಲ ಪ್ರವಾದಿಗಳಿಂದ ಸ್ವಂತವಾಗಿ ವಿವರಿಸತಕ್ಕದ್ದಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿರಿ.
Mmanye ega aje naumo okuwa wasimbwa hunsebho senbho hukuwa yoyo.
21 ಯಾವ ಪ್ರವಾದನೆಯೂ ಎಂದೂ ಮನುಷ್ಯನ ಚಿತ್ತದಿಂದ ಬರಲಿಲ್ಲ, ಆದರೆ ಪ್ರವಾದಿಗಳು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಪಡೆದುಕೊಂಡಿದ್ದನ್ನೇ ಮಾತನಾಡಿದರು.
Nantenamo okwa yahezeleda lya bhatu pewilwe Ompepo Fijiliya yajile fume hwa Ngolobhe.

< ಪೇತ್ರನು ಬರೆದ ಎರಡನೆಯ ಪತ್ರಿಕೆ 1 >