< ಅರಸುಗಳು - ದ್ವಿತೀಯ ಭಾಗ 15 >

1 ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ, ಯೆಹೂದದ ಅರಸನಾಗಿರುವ ಅಮಚ್ಯನ ಮಗ ಅಜರ್ಯನು ಆಳಲು ಆರಂಭಿಸಿದನು.
ဣသရေလရှင်ဘုရင်ယေရောဗောင် နန်းစံနှစ် ဆယ်ခုနစ်နှစ်တွင်၊
2 ಅವನು ಅರಸನಾದಾಗ, ಹದಿನಾರು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಐವತ್ತೆರಡು ವರ್ಷ ಆಳಿದನು. ಅವನ ತಾಯಿಯ ಹೆಸರು ಯೆಕೊಲ್ಯಳು, ಅವಳು ಯೆರೂಸಲೇಮಿನವಳು.
ယုဒရှင်ဘုရင် အာမဇိသား ဩဇိသည် အသက် တဆယ်ခြောက်နှစ်ရှိသော်၊ နန်းထိုင်၍ ယေရုရှလင်မြို့၌ ငါးဆယ်နှစ်နှစ်စိုးစံလေ၏။ မယ်တော်ကား၊ ယေရုရှလင် မြို့သူ ယေခေါလိအမည်ရှိ၏။
3 ಅವನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು.
ထိုမင်းသည် ခမည်းတော်အာမဇိပြုသမျှ အတိုင်း ထာဝရဘုရားရှေ့တော်၌ တရားသောအမှုကို ပြု၏။
4 ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು.
သို့ရာတွင် မြင့်သောအရပ်တို့ကို မပယ်ရှားသော ကြောင့်၊ လူတို့သည် ထိုအရပ်တို့၌ယဇ်ပူဇော်၍ နံ့သာ ပေါင်းကို မီးရှို့ကြ၏။
5 ಯೆಹೋವ ದೇವರು ಅರಸನನ್ನು ಮರಣದ ದಿವಸದವರೆಗೂ ಕುಷ್ಠರೋಗದಿಂದ ಬಾಧಿಸಿದ್ದರಿಂದ, ಅವನು ಪ್ರತ್ಯೇಕವಾದ ಮನೆಯಲ್ಲಿ ವಾಸವಾಗಿದ್ದನು. ಅರಸನ ಮಗ ಯೋತಾಮನು ರಾಜಗೃಹಾಧಿಪತ್ಯವನ್ನು ಮತ್ತು ಪ್ರಜಾಪಾಲನೆಯನ್ನೂ ನೋಡಿಕೊಳ್ಳುತ್ತಿದ್ದನು.
ထာဝရဘုရားသည် ဒဏ်ခတ်တော်မူသဖြင့်၊ ရှင်ဘုရင်သည် သေသည်တိုင်အောင် နူနာစွဲ၍ ခြားနား သော နန်း၌နေရ၏။ သားတော် ယောသံသည် နန်းတော် ကိုအုပ်၍ နိုင်ငံတော်မှုကို စီရင်ရ၏။
6 ಅಜರ್ಯನ ಇತರ ಕ್ರಿಯೆಗಳನ್ನು ಅವನು ಮಾಡಿದ ಸಮಸ್ತವನ್ನು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
ဩဇိပြုမူသော အမှုအရာကြွင်းလေသမျှ တို့သည် ယုဒရာဇဝင်၌ ရေးထားလျက်ရှိ၏။
7 ಅಜರ್ಯನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಯೋತಾಮನು ಅರಸನಾದನು.
ဩဇိသည် ဘိုးဘေးတို့နှင့် အိပ်ပျော်၍၊ သူတို့နှင့် အတူ ဒါဝိဒ်မြို့၌ သင်္ဂြိုဟ်ခြင်းကို ခံလေ၏။ သားတော် ယောသံသည် ခမည်းတော်အရာ၌ နန်းထိုင်၏။
8 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಯಾರೊಬ್ಬಾಮನ ಮಗನಾದ ಜೆಕರ್ಯನು ಸಮಾರ್ಯದಲ್ಲಿ ಇಸ್ರಾಯೇಲರ ಅರಸನಾದನು. ಅವನು ಆರು ತಿಂಗಳು ಆಳಿದನು.
ယုဒရှင်ဘုရင် ဩဇိနန်းစံသုံးဆယ်ရှစ်နှစ်တွင်၊ ယေရောဗောင်သားဇာခရိသည် ရှမာရိမြို့၌မင်းပြု၍ ဣသရေလနိုင်ငံကိုစိုးစံ၏။
9 ಅವನು ತನ್ನ ಪಿತೃಗಳು ಮಾಡಿದ ಪ್ರಕಾರ, ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.
ထိုမင်းသည် ဘိုးဘေးပြုသည်အတိုင်း၊ ထာဝရ ဘုရားရှေ့တော်၌ ဒုစရိုက်ကိုပြု၍၊ ဣသရေလအမျိုးကို ပြစ်မှားစေသောနေဗတ်သား ယေရောဗောင်၏ ဒုစရိုက် အပြစ်တို့ကို မစွန့်ဘဲနေ၏။
10 ಯಾಬೇಷನ ಮಗ ಶಲ್ಲೂಮನು ಜೆಕರ್ಯನ ಮೇಲೆ ಒಳಸಂಚುಮಾಡಿ, ಜನರ ಮುಂದೆ ಅವನನ್ನು ಹೊಡೆದು, ಕೊಂದುಹಾಕಿ, ಅವನಿಗೆ ಬದಲಾಗಿ ಅರಸನಾದನು.
၁၀ယာဖက်သားရှလ္လုံသည် ဇာခရိမင်းတဘက်၌ သင်းဖွဲ့၍ လူများရှေ့မှာ သေအောင်လုပ်ကြံပြီးလျှင် သူ၏ အရာ၌ နန်းထိုင်၏။
11 ಜೆಕರ್ಯನ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
၁၁ဇာခရိပြုမူသော အမှုအရာကြွင်းလေသမျှတို့ သည် ဣသရေလရာဇဝင်၌ ရေးထားလျက်ရှိ၏။
12 “ನಿನ್ನ ಸಂತತಿಯವರು ನಾಲ್ಕನೆಯ ತಲೆಮಾರಿನವರೆಗೂ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು,” ಎಂದು ಯೆಹೋವ ದೇವರು ಯೇಹುವಿಗೆ ಹೇಳಿದ ವಾಕ್ಯದಂತೆ ಇವೆಲ್ಲವೂ ನೆರವೇರಿತು.
၁၂ထိုသို့ ထာဝရဘုရားက၊ သင်၏သားမြေးလေး ဆက်တိုင်အောင် ဣသရေလနိုင်ငံရာဇပလ္လင်ပေါ်မှာ ထိုင်ရမည်ဟု ယေဟုအား မိန့်တော်မူ သောစကားတော် ပြည့်စုံသတည်း။
13 ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಯಾಬೇಷನ ಮಗ ಶಲ್ಲೂಮನು ಅರಸನಾಗಿ, ಸಮಾರ್ಯದಲ್ಲಿ ಒಂದು ತಿಂಗಳು ಆಳಿದನು.
၁၃ယုဒရှင်ဘုရင် ဩဇိနန်းစံ သုံးဆယ်ကိုးနှစ်တွင် ရှလ္လုံသည် နန်းထိုင်၍၊ ရှမာရိမြို့၌ တလစိုးစံလေ၏။
14 ಗಾದಿಯ ಮಗ ಮೆನಹೇಮನು ತಿರ್ಚದಿಂದ ಸಮಾರ್ಯಕ್ಕೆ ಬಂದು, ಸಮಾರ್ಯದಲ್ಲಿ ಯಾಬೇಷನ ಮಗ ಶಲ್ಲೂಮನನ್ನು ಹೊಡೆದು, ಕೊಂದುಹಾಕಿ ಅವನಿಗೆ ಬದಲಾಗಿ ಅರಸನಾದನು.
၁၄ဂါဒိသားမေနဟင်သည် တိရဇမြို့မှ ရှမာရိမြို့ သို့သွား၍၊ ယာဖက်သား ရှလ္လုံကိုသေအောင် လုပ်ကြံပြီး လျှင်၊ သူ၏အရာ၌ နန်းထိုင်၏။
15 ಶಲ್ಲೂಮನ ಇತರ ಕ್ರಿಯೆಗಳೂ ಅವನು ಮಾಡಿದ ಒಳಸಂಚೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
၁၅ရှလ္လုံပြုမူသောအမှုအရာကြွင်းလေသမျှတို့နှင့် သင်းဖွဲ့ခြင်းအရာသည် ဣသရေလရာဇဝင်၌ ရေးထား လျက်ရှိ၏။
16 ಆ ಸಮಯದಲ್ಲಿ ಮೆನಹೇಮನು ತಿರ್ಚದಿಂದ ತಿಪ್ಸಹು ಪಟ್ಟಣಕ್ಕೆ ಹೋದಾಗ ಅಲ್ಲಿಯವರು ತಮ್ಮ ಊರುಬಾಗಿಲುಗಳನ್ನು ತನಗೆ ತೆರೆಯದೆ ಇದ್ದುದರಿಂದ ಎಲ್ಲರನ್ನೂ, ಅದರ ಮೇರೆಗಳಲ್ಲಿದ್ದವರೆಲ್ಲರನ್ನೂ ಸಂಹರಿಸಿದನು. ತಿಪ್ಸಹವನ್ನು ಹಾಳು ಮಾಡಿ, ಎಲ್ಲಾ ಗರ್ಭಿಣಿಯರ ಹೊಟ್ಟೆಗಳನ್ನು ಸೀಳಿಸಿದನು.
၁၆ထိုအခါ မေနဟင်သည် တိဖသမြို့နှင့်မြို့သား များ၊ တိရဇမြို့ အလွန်တိဖသမြို့နယ်များတို့ကို လုပ်ကြံ ၏။ မြို့တံခါးကို သူ့အား မဖွင့်သောကြောင့် လုပ်ကြံ၍ ကိုယ်ဝန်ဆောင်သော မိန်းမအပေါင်းတို့၏ ဝမ်းကို ခွဲလေ၏။
17 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಗಾದಿಯ ಮಗ ಮೆನಹೇಮನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಹತ್ತು ವರ್ಷ ಆಳಿದನು.
၁၇ယုဒရှင်ဘုရင်ဩဇိနန်းစံသုံးဆယ်ကိုးနှစ်တွင်၊ ဂါဒိသားမေနဟင်သည် နန်းထိုင်၍၊ ရှမာရိမြို့၌ ဣသ ရေလနိုင်ငံကို ဆယ်နှစ်စိုးစံလေ၏။
18 ಅವನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ತನ್ನ ದಿವಸಗಳಲ್ಲೆಲ್ಲಾ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.
၁၈ထိုမင်းသည် ထာဝရဘုရားရှေ့တော်၌ ဒုစရိုက် ကိုပြု၍၊ ဣသရေလအမျိုးကို ပြစ်မှားစေသော နေဗတ် သား ယေရောဗောင်၏ ဒုစရိုက်အပြစ်တို့ကို မစွန့်ဘဲ နေ၏။
19 ಅಸ್ಸೀರಿಯಾ ದೇಶದ ಅರಸನಾದ ಪೂಲನು ಇಸ್ರಾಯೇಲ್ ದೇಶದ ಮೇಲೆ ಯುದ್ಧಕ್ಕೆ ಬಂದನು. ಆಗ ಮೆನಹೇಮನು ಅವನ ಬೆಂಬಲವನ್ನು ಪಡೆಯಲು ಮತ್ತು ರಾಜ್ಯವನ್ನು ದೃಢಪಡಿಸಲು ಪೂಲನಿಗೆ ಮೂವತ್ತು ನಾಲ್ಕು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟನು.
၁၉အာရှုရိရှင်ဘုရင် ပုလသည် ဣသရေလပြည်ကို တိုက်လာ၏။ မေနဟင်သည် မိမိအာဏာတည်စေမည် အကြောင်း၊ ပုလမင်းမစစေခြင်းငှါ၊ ငွေအခွက်တသောင်း ကို ဆက်ရ၏။
20 ಮೆನಹೇಮನು ಈ ಹಣವನ್ನು ಇಸ್ರಾಯೇಲಿನಿಂದ ವಸೂಲಿ ಮಾಡಿದನು. ಪ್ರತಿಯೊಬ್ಬ ಶ್ರೀಮಂತನು ಅಸ್ಸೀರಿಯದ ಅರಸನಿಗೆ ಕೊಡಬೇಕಾದ ಅರ್ಧ ಕಿಲೋಗ್ರಾಂ ಬೆಳ್ಳಿಯನ್ನು ನೀಡಬೇಕಾಗಿತ್ತು. ಆದ್ದರಿಂದ ಅಸ್ಸೀರಿಯದ ಅರಸನು ದೇಶದಲ್ಲಿ ನಿಲ್ಲದೆ ತನ್ನ ಸೈನ್ಯದೊಂದಿಗೆ ಹಿಂದಿರುಗಿ ಹೋದನು.
၂၀အာရှုရိရှင်ဘုရင်အား ဆက်စရာဘို့၊ မေနဟင် သည် ဣသရေလ အမျိုး၌ငွေခွဲ၍၊ ရတတ်သော သူတိုင်း အကျပ်ငါးဆယ်စီပေးရ၏။ ထိုကြောင့် အာရှုရိရှင်ဘုရင် သည် မနေ၊ မိမိပြည်သို့ ပြန်သွား၏။
21 ಮೆನಹೇಮನ ಇತರ ಕ್ರಿಯೆಗಳೂ ಅವನು ಮಾಡಿದ ಸಮಸ್ತವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
၂၁မေနဟင်ပြုမူသော အမှုအရာကြွင်းလေသမျှ တို့သည် ဣသရေလရာဇဝင်၌ ရေးထားလျက်ရှိ၏။
22 ಮೆನಹೇಮನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ಅವನ ಮಗ ಪೆಕಹ್ಯನು ಅವನಿಗೆ ಬದಲಾಗಿ ಅರಸನಾದನು.
၂၂မေနဟင်သည် ဘိုးဘေးတို့နှင့် အိပ်ပျော်၍၊ သားတော်ပေကတိသည် ခမည်းတော်အရာ၌နန်းထိုင်၏။
23 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತನೆಯ ವರ್ಷದಲ್ಲಿ ಮೆನಹೇಮನ ಮಗ ಪೆಕಹ್ಯನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸನಾಗಿ, ಎರಡು ವರ್ಷ ಆಳಿದನು.
၂၃ယုဒရှင်ဘုရင် ဩဇိနန်းစံငါးဆယ်တွင်၊ မေနဟင်သားပေကတိသည် နန်းထိုင်၍၊ ရှမာရိမြို့၌ ဣသရေလနိုင်ငံကို နှစ်နှစ်စိုးစံလေ၏။
24 ಪೆಕಹ್ಯನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆಯಲಿಲ್ಲ.
၂၄ထိုမင်းသည် ထာဝရဘုရားရှေ့တော်၌ ဒုစရိုက် ကိုပြု၍၊ ဣသရေလအမျိုးကိုပြစ်မှားစေသော နေဗတ် သား ယေရောဗောင်၏ ဒုစရိုက်အပြစ်တို့ကို မစွန့်ဘဲ နေ၏။
25 ಆದರೆ ಅವನ ಅಧಿಪತಿಯಾದಂಥ ರೆಮಲ್ಯನ ಮಗ ಪೆಕಹನು ಗಿಲ್ಯಾದಿನ ಐವತ್ತು ಮಂದಿಯನ್ನು ತನ್ನ ಸಂಗಡ ಕೂಡಿಸಿಕೊಂಡು ಪೆಕಹ್ಯನ ವಿರುದ್ಧ ಒಳಸಂಚುಮಾಡಿ, ಸಮಾರ್ಯದಲ್ಲಿರುವ ಅರಮನೆಯ ಗರ್ಭಗೃಹದಲ್ಲಿ ಪೆಕಹ್ಯನನ್ನು ಮತ್ತು ಅರ್ಗೋಬ್, ಅರ್ಯೇ ಎಂಬವರನ್ನು ಕೊಂದುಹಾಕಿದನು. ಅನಂತರ, ಪೆಕಹ್ಯನಿಗೆ ಬದಲಾಗಿ ಪೆಕಹನು ಅರಸನಾದನು.
၂၅အမှုတော်ထမ်းတပ်မှူး၊ ရေမလိသားပေကာသည် ပေကဟိမင်းတဘက်၌ သင်းဖွဲ့၍၊ အာဂေါဘနှင့် အရေဟအစရှိသော ဂိလဒ်ပြည်သား ငါးကျိပ်ပါလျက်၊ ရှမာရိမြို့၌နန်းတော်ထဲမှာ သေအောင်လုပ်ကြံ၍ သူ၏ အရာ၌ နန်းထိုင်၏။
26 ಪೆಕಹ್ಯನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
၂၆ပေကတိပြုမူသော အမှုအရာကြွင်းလေသမျှတို့ သည် ဣသရေလရာဇဝင်၌ ရေးထားလျက်ရှိ၏။
27 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತೆರಡನೆಯ ವರುಷದಲ್ಲಿ ರೆಮಲ್ಯನ ಮಗ ಪೆಕಹನು ಸಮಾರ್ಯದಲ್ಲಿ ಇಸ್ರಾಯೇಲರ ಅರಸನಾಗಿ, ಇಪ್ಪತ್ತು ವರ್ಷ ಆಳಿದನು.
၂၇ယုဒရှင်ဘုရင် ဩဇိနန်းစံငါးဆယ်နှစ်နှစ်တွင်၊ ရေမလိသားပေကာသည် နန်းထိုင်၍ ရှမာရိမြို့၌ ဣသ ရေလနိုင်ငံကို အနှစ်နှစ်ဆယ် စိုးစံလေ၏။
28 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ.
၂၈ထိုမင်းသည် ထာဝရဘုရားရှေ့တော်၌ ဒုစရိုက် ကိုပြု၍၊ ဣသရေလအမျိုးကို ပြစ်မှားစေသော နေဗတ် သား ယေရောဗောင်၏ ဒုစရိုက်ကိုပြု၍၊ ဣသရေလ အမျိုးကို ပြစ်မှားစေသော နေဗတ်သား ယေရောဗောင်၏ ဒုစရိုက် အပြစ်တို့ကို မစွန့်ဘဲနေ၏။
29 ಇಸ್ರಾಯೇಲಿನ ಅರಸನಾದ ಪೆಕಹನ ಕಾಲದಲ್ಲಿ ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸೆರನು ಬಂದು, ಇಯ್ಯೋನ್, ಆಬೇಲ್ ಬೇತ್ ಮಾಕಾ, ಯಾನೋಹ, ಕೆದೆಷ್, ಹಾಚೋರ್, ಗಿಲ್ಯಾದ್, ಗಲಿಲಾಯ ಮತ್ತು ನಫ್ತಾಲಿಯ ಎಲ್ಲಾ ಭೂಮಿಯನ್ನು ವಶಮಾಡಿಕೊಂಡು, ಜನರನ್ನು ಸೆರೆಯಾಗಿ ಅಸ್ಸೀರಿಯಾ ದೇಶಕ್ಕೆ ಒಯ್ದನು.
၂၉ဣသရေလရှင်ဘုရင် ပေကာလက်ထက်၊ အာရှု ရိရှင်ဘုရင် တိဂလတ်ပိလေသာသည်လာ၍ ဣယုန်မြို့၊ အဗေလဗက်မာခါမြို့၊ ယာနောမြို့၊ ကေဒေရှမြို့၊ ဟာဇော် မြို့နှင့်တကွ ဂိလဒ်ပြည်၊ ဂါလိလဲပြည်၊ နဿလိ ပြည်သား အပေါင်းတို့ကို လုပ်ကြံ၍၊ အာရှုရိပြည်သို့သိမ်းသွား၏။
30 ಇದಲ್ಲದೆ ಏಲನ ಮಗ ಹೋಶೇಯನು ರೆಮಲ್ಯನ ಮಗ ಪೆಕಹನ ವಿರುದ್ಧ ಒಳಸಂಚುಮಾಡಿ, ಇವನನ್ನು ಉಜ್ಜೀಯನ ಮಗ ಯೋತಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಸಂಹರಿಸಿ, ಅವನಿಗೆ ಬದಲಾಗಿ ಅರಸನಾದನು.
၃၀ဩဇိသား ယောသံနန်းစံနှစ်ဆယ်တွင်၊ ဧလာ သားဟောရှေသည် ရေမလိသား ပေကာမင်းတဘက်၌ သင်းဖွဲ့၍ သေအောင်လုပ်ကြံပြီးမှ၊ သူ၏အရာ၌ နန်းထိုင် ၏။
31 ಪೆಕಹನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
၃၁ပေကာပြုမူသောအမှုအရာ ကြွင်းလေသမျှတို့ သည် ဣသရေလရာဇဝင်၌ရေးထားလျက်ရှိ၏။
32 ಇಸ್ರಾಯೇಲಿನ ಅರಸನೂ, ರೆಮಲ್ಯನ ಮಗನೂ ಆದ ಪೆಕಹನ ಆಳಿಕೆಯ ಎರಡನೆಯ ವರ್ಷದಲ್ಲಿ ಯೆಹೂದದ ಅರಸನಾದ ಉಜ್ಜೀಯನ ಮಗ ಯೋತಾಮನು ಆಳಲು ಆರಂಭಿಸಿದನು.
၃၂ဣသရေလရှင်ဘုရင် ရေမလိသား ပေကာ နန်းစံနှစ်နှစ်တွင်၊ ယုဒရှင်ဘုရင်ဩဇိသား ယောသံသည် အသက်နှစ်ဆယ်ငါးနှစ်ရှိသော် နန်းထိုင်၍၊
33 ಯೋತಾಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷ ಅವನ ತಾಯಿ.
၃၃ယေရုရှလင်မြို့၌ ဣသရေလနိုင်ငံကို တဆယ် ခြောက်နှစ်စိုးစံလေ၏။ မယ်တော်ကား၊ ဇာဒုတ်သမီး ယေရုရှာအမည်ရှိ၏။
34 ಅವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು.
၃၄ထိုမင်းသည် ခမည်းတော် ဩဇိကျင့်သမျှ အတိုင်း၊ ထာဝရဘုရား ရှေ့တော်၌ တရားသော အမှုကို ပြု၏။
35 ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು. ಯೋತಾಮನು ಯೆಹೋವ ದೇವರ ಆಲಯದ ಮೇಲಿನ ಬಾಗಿಲನ್ನು ಕಟ್ಟಿಸಿದನು.
၃၅သို့ရာတွင် မြင့်သောအရပ်တို့ကို မပယ်ရှားသော ကြောင့်၊ လူတို့သည် ထိုအရပ်တို့၌ ယဇ်ပူဇော်၍၊ နံ့သာ ပေါင်းကိုမီးရှို့ကြ၏။ ထိုမင်းသည် ဗိမာန်တော်အထက် တံခါးကို လုပ်လေ၏။
36 ಯೋತಾಮನ ಇತರ ಕ್ರಿಯೆಗಳೂ ಅವನು ಮಾಡಿದ ಸಮಸ್ತವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
၃၆ယောသံပြုမူသော အမှုအရာကြွင်းလေသမျှ တို့သည် ယုဒရာဇဝင်၌ ရေးထားလျက်ရှိ၏၊
37 ಆ ದಿವಸಗಳಲ್ಲಿ ಯೆಹೋವ ದೇವರು ಅರಾಮಿನ ಅರಸನಾದ ರೆಚೀನನನ್ನೂ ರೆಮಲ್ಯನ ಮಗ ಪೆಕಹನನ್ನೂ ಯೆಹೂದದ ವಿರೋಧವಾಗಿ ಕಳುಹಿಸಲು ಆರಂಭಿಸಿದರು.
၃၇ထိုကာလတွင် ထာဝရဘုရားသည် ရှုရိရှင်ဘုရင် ရေဇိန်နှင့် ရေမလိသားပေကာကို ယုဒပြည်သို့ စေလွှတ် တော်မူ၏။
38 ಯೋತಾಮನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ತಂದೆಯಾದ ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸ್ಮಶಾನದಲ್ಲಿ ಸಮಾಧಿಮಾಡಿದರು. ಅವನ ಮಗ ಆಹಾಜನು ಅವನಿಗೆ ಬದಲಾಗಿ ಅರಸನಾದನು.
၃၈ယောသံသည် ဘိုးဘေးတို့နှင့် အိပ်ပျော်၍၊ သူတို့နှင့်အတူ အဘဒါဝိဒ်မြို့၌ သင်္ဂြိုဟ်ခြင်းကိုခံလေ၏။ သားတော်အာခတ်သည် ခမည်းတော်အရာ၌ နန်းထိုင် ၏။

< ಅರಸುಗಳು - ದ್ವಿತೀಯ ಭಾಗ 15 >