< ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ 9 >

1 ದೇವಜನರಿಗೆ ಸಹಾಯ ಮಾಡುವುದನ್ನು ಕುರಿತು ನಾನು ನಿಮಗೆ ಬರೆಯುವ ಅವಶ್ಯವಿಲ್ಲ.
Quanto á administração que se faz a favor dos sanctos, não necessito escrever-vos;
2 ಅಖಾಯದಲ್ಲಿರುವ ನೀವು ಕಳೆದ ಒಂದು ವರ್ಷದಿಂದ ಉದಾರವಾಗಿ ದಾನ ಮಾಡಲು ಸಿದ್ಧರಾಗಿದ್ದೀರಿ ಎಂಬ ವಿಷಯವನ್ನು ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳಿದ್ದೇನೆ. ನಿಮ್ಮ ಆಸಕ್ತಿಯನ್ನು ಕೇಳಿ ಮಕೆದೋನ್ಯದವರಲ್ಲಿ ಎಷ್ಟೋ ಮಂದಿ ಕಾರ್ಯರೂಪಕ್ಕೆ ಉತ್ತೇಜನಗೊಂಡಿರುತ್ತಾರೆ.
Porque bem sei a promptidão do vosso animo da qual me glorio de vós para com os macedonios; que a Achaia está prompta desde o anno passado, e o vosso zelo tem estimulado muitos.
3 ಆದರೂ ಈ ವಿಷಯದಲ್ಲಿ ನಿಮ್ಮ ಬಗ್ಗೆ ನಮಗಿರುವ ಹೊಗಳಿಕೆಯು ಸುಳ್ಳಾಗಿರಬಾರದೆಂದು ಸಹೋದರರನ್ನು ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. ನೀವು ಸಹ ನಾನು ನಿಮಗೆ ಹೇಳಿದಂತೆ, ಇದಕ್ಕಾಗಿ ಸಿದ್ಧರಾಗಿರುವಿರಿ ಎಂದು ಭಾವಿಸುತ್ತೇನೆ.
Porém enviei estes irmãos, para que a nossa gloria, ácerca de vós, não seja vã n'esta parte; para que (como já disse) possaes estar promptos:
4 ಏಕೆಂದರೆ, ಮಕೆದೋನ್ಯದವರಲ್ಲಿ ಯಾರಾದರೂ ನನ್ನ ಜೊತೆಯಲ್ಲಿ ಬಂದು, ನೀವು ಇನ್ನೂ ಸಿದ್ಧರಿಲ್ಲದೆ ಇರುವುದನ್ನು ಕಂಡರೆ, ನಿಮಗೆ ಬೇಸರವಾಗುವುದಲ್ಲದೆ, ನಿಮ್ಮ ಬಗ್ಗೆ ಭರವಸೆಯಿಟ್ಟಿರುವುದಕ್ಕೆ ನಾವು ಸಹ ನಾಚಿಕೆಪಡುವ ಸನ್ನಿವೇಶ ಬರಬಾರದು.
Para que, se acaso os macedonios vierem comigo, e vos acharem desapercebidos, não nos envergonhemos nós (para não dizermos vós) d'este firme fundamento de gloria.
5 ಆದ್ದರಿಂದ ಸಹೋದರರನ್ನು ಮುಂಚಿತವಾಗಿ ಹೋಗುವುದಕ್ಕೆ ನಾನು ಏರ್ಪಾಡು ಮಾಡಬೇಕಾಯಿತು. ಅವರು ಬಂದು ನೀವು ವಾಗ್ದಾನಮಾಡಿದ ಕೊಡುಗೆಯನ್ನು ಸಂಗ್ರಹಿಸುವ ಕಾರ್ಯವನ್ನು ಮುಗಿಸುವರು. ಹೀಗೆ ಈ ಉದಾರವಾಗಿರುವ ದಾನವು ಬಲಾತ್ಕಾರದ ವಸೂಲಿಯಾಗಿರದೆ ಮನಃಪೂರ್ವಕವಾಗಿ ಕೊಟ್ಟಿರುವ ಸಹಾಯ ಧನವಾಗಿರುವುದು.
Portanto, tive por coisa necessaria exhortar estes irmãos, para que primeiro fossem ter comvosco, e preparassem primeiro a vossa benção, já d'antes annunciada, para que esteja prompta como benção, e não como avareza.
6 ಸ್ವಲ್ಪವಾಗಿ ಬಿತ್ತುವವನು ಸ್ವಲ್ಪವಾಗಿ ಕೊಯ್ಯುವನು, ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು ಎಂಬ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿರಿ.
E digo isto: Que o que semeia pouco, pouco tambem ceifará; e o que semeia em abundancia, em abundancia tambem ceifará.
7 ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿರ್ಧರಿಸಿದ್ದನ್ನು ಕೊಡಲಿ. ಮನಸ್ಸಿಲ್ಲದ ಮನಸ್ಸಿನಿಂದಾಗಲಿ ಅಥವಾ ಬಲವಂತದಿಂದಾಗಲಿ ಕೊಡಬಾರದು. ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾರೆ.
Cada um contribua segundo propoz no seu coração; não com tristeza, ou por necessidade; porque Deus ama ao que dá com alegria.
8 ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತರಾಗಿರುವುದರಿಂದ ನೀವು ಯಾವಾಗಲೂ ಎಲ್ಲಾ ವಿಷಯಗಳಲ್ಲಿಯೂ ಪರಿಪೂರ್ಣತೆಯುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಿ.
E Deus é poderoso para fazer abundar em vós toda a graça, para que tendo sempre, em tudo, toda a sufficiencia, abundeis em toda a boa obra;
9 ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, “ಅವರು ಬಡವರಿಗೆ ದಾನಗಳನ್ನು ಧಾರಾಳವಾಗಿ ಹಂಚಿಕೊಟ್ಟರು; ಅವರ ನೀತಿಯು ಸದಾಕಾಲವೂ ನೆಲೆಯಾಗಿ ಇರುವುದು.” (aiōn g165)
Conforme está escripto: Espalhou, deu aos pobres: a sua justiça permanece para sempre. (aiōn g165)
10 ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಊಟವನ್ನು ಒದಗಿಸುವ ದೇವರು ನಿಮಗೂ ಬಿತ್ತುವುದಕ್ಕೆ ಬೀಜವನ್ನು ಕೊಟ್ಟು, ಹೆಚ್ಚಿಸಿ ನಿಮ್ಮ ನೀತಿಯ ಸುಗ್ಗಿಯನ್ನು ವೃದ್ಧಿಪಡಿಸುವರು.
Ora, aquelle que dá a semente ao que semeia, tambem dará pão para comer, e multiplicará a vossa sementeira, e augmentará os fructos da vossa justiça;
11 ನೀವು ಸದಾ ಉದಾರಿಗಳಾಗುವಂತೆ ನಿಮ್ಮನ್ನು ಎಲ್ಲಾ ವಿಷಯಗಳಲ್ಲಿಯೂ ಸಿರಿವಂತರನ್ನಾಗಿ ಮಾಡುವನು. ನಿಮ್ಮ ಕೊಡುಗೆಯು ನಮ್ಮ ಸೇವೆಯ ಮೂಲಕ ಬೇರೆಯವರಿಗೆ ಮುಟ್ಟಿ, ಅವರು ದೇವರನ್ನು ಕೃತಜ್ಞತೆಯಿಂದ ಸ್ಮರಿಸುವಂತೆ ನಡೆಸುವುದು.
Para que em tudo enriqueçaes para toda a beneficencia, a qual faz que por nós se deem graças a Deus.
12 ಈ ನಿಮ್ಮ ಸೇವೆಯು ಬರೀ ದೇವಜನರ ಕೊರತೆಯನ್ನು ನೀಗಿಸುವುದು ಮಾತ್ರವಲ್ಲ, ಅನೇಕರು ದೇವರಿಗೆ ತುಂಬಿ ಹರಿಯುವಷ್ಟು ಕೃತಜ್ಞತಾಸ್ತುತಿ ಸಲ್ಲಿಸುವಂತೆ ಮಾಡುವುದು.
Porque a administração d'este serviço, não só suppre as necessidades dos sanctos, mas tambem abunda em muitas graças, que se dão a Deus
13 ನಿಮ್ಮ ಸ್ವಭಾವವನ್ನು ರುಜುಪಡಿಸಿದ ಈ ಸೇವೆಯ ನಿಮಿತ್ತವಾಗಿಯೂ, ಕ್ರಿಸ್ತ ಯೇಸುವಿನ ಸುವಾರ್ತೆಯ ಅರಿಕೆಯನ್ನು ಅನುಸರಿಸುವ ನಿಮ್ಮ ವಿಧೇಯತೆಗಾಗಿಯೂ ಇತರರು ದೇವರನ್ನು ಸ್ತುತಿಸುವರು. ಹೀಗೆ, ನೀವು ಅವರಿಗೂ ಪ್ರತಿಯೊಬ್ಬರಿಗೂ ಎಷ್ಟು ಉದಾರಿಗಳಾಗಿದ್ದೀರಿ ಎಂಬುದನ್ನು ತಿಳಿದುಕೊಳ್ಳುವರು.
Portanto, na prova d'esta administração, glorificam a Deus pela submissão que confessaes quanto ao evangelho de Christo, e pela bondade da communicação para com elles, e para com todos;
14 ನಿಮಗೆ ದೊರೆತ ಮಿತಿಯಿಲ್ಲದ ದೇವರ ಕೃಪೆಯ ನಿಮಿತ್ತ, ಅವರು ನಿಮ್ಮನ್ನು ಕಾಣುವ ಬಯಕೆಯಿಂದ ನಿಮಗಾಗಿ ಪ್ರಾರ್ಥಿಸುವರು.
E pela sua oração por vós, tendo de vós saudades, por causa da excellente graça de Deus em vós.
15 ವರ್ಣಿಸಲು ಅಸಾಧ್ಯವಾದ ದೇವರ ಕೃಪಾವರಕ್ಕಾಗಿ ಅವರಿಗೆ ಸ್ತೋತ್ರವಾಗಲಿ!
Graças a Deus pois pelo seu dom ineffavel.

< ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ 9 >