< ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ 11 >

1 ನನ್ನ ಬುದ್ಧಿಹೀನತೆಯನ್ನು ನೀವು ಇನ್ನೂ ಸ್ವಲ್ಪ ಸಹಿಸಿಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಈಗಾಗಲೇ ನೀವು ಸಹಿಸಿಕೊಂಡಿದ್ದೀರಿ.
I mauki, komail en mueid on ia kijin pweipwei, iei ta komail pan mueid on ia.
2 ದೇವರು ನಿಮ್ಮ ವಿಷಯದಲ್ಲಿ ಅಸೂಯೆಪಡುವಂತೆ, ನಾನು ನಿಮ್ಮ ವಿಷಯದಲ್ಲಿ ಅಸೂಯೆಪಡುತ್ತಿದ್ದೇನೆ. ಹೇಗೆಂದರೆ, ನಿಮ್ಮನ್ನು ಶುದ್ಧ ಕನ್ನಿಕೆಯಾಗಿ ಕ್ರಿಸ್ತ ಯೇಸು ಎಂಬ ಒಬ್ಬರೇ ಪುರುಷನಿಗೆ ಒಪ್ಪಿಸಬೇಕೆಂದು ಆತನೊಂದಿಗೆ ನಾನು ನಿಶ್ಚಯ ಮಾಡಿದ್ದೆನಲ್ಲಾ.
Pwe nai me per kin komail dueta Kot, pwe nai me kileledier komail on ol amen, pwe i en kajale komail on Krijtuj duen jeripein makelekel amen.
3 ಆದರೆ ಹವ್ವಳು ಸರ್ಪದ ಕುಯುಕ್ತಿಗೆ ಸಿಕ್ಕಿಬಿದ್ದು, ಹೇಗೆ ಮೋಸ ಹೋದಳೋ, ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತ ಯೇಸುವಿನ ಮೇಲಿರಬೇಕಾದ ಯಥಾರ್ಥತೆಯನ್ನೂ ಶುದ್ಧ ಭಕ್ತಿಯನ್ನೂ ಬಿಟ್ಟುಹೋದೀತೆಂಬ ಭಯ ನನಗುಂಟು.
A i majak jerpent widinok, me kotaue Ewa, ma a jota pan pil kawela omail lamelam jan ni opampap en Krijtuj.
4 ಏಕೆಂದರೆ ಯಾವನಾದರೂ ನಿಮ್ಮ ಬಳಿಗೆ ಬಂದು ನಾನು ನಿಮಗೆ ಬೋಧಿಸದೆ ಇರುವ ಬೇರೊಬ್ಬ ಯೇಸುವಿನ ವಿಷಯ ಬೋಧಿಸಿದರೆ, ನೀವು ಸ್ವೀಕರಿಸುವಿರಿ. ನೀವು ಹೊಂದಿದ ಆತ್ಮನ ಬದಲಿಗೆ ಬೇರೊಂದು ಆತ್ಮವನ್ನು ಪಡೆಯುವಂತೆ ಮಾಡಿದರೆ, ನೀವು ಸ್ವಾಗತಿಸುತ್ತೀರಿ. ನೀವು ಕೇಳಿರುವ ಸುವಾರ್ತೆಯ ಬದಲು ಬೇರೊಂದು ಸುವಾರ್ತೆಯನ್ನು ಯಾರಾದರೂ ಬೋಧಿಸಿದರೆ, ನೀವು ಬೇಗನೇ ಒಪ್ಪಿಕೊಳ್ಳುತ್ತೀರಿ.
Pwe ma amen pan pwarado, me kin padaki duen amen Iejuj, me je jota padaki, de ma komail pan ale eu nen, me komail jota aleer, de eu ronamau, me komail jota wuki on, kaidin komail pan peren kida?
5 “ಅತ್ಯಂತ ಮಹಾ ಅಪೊಸ್ತಲರು” ಎಂದೆನಿಸಿದ ಇತರ ಅಪೊಸ್ತಲರಿಗಿಂತಲೂ ನಾನು ಕಡಿಮೆಯಾದವನಲ್ಲ ಎಂದು ಭಾವಿಸುತ್ತೇನೆ.
Pwe i lamelame, me nai kaidin tikitik jan wanporon lapalap akan.
6 ನನ್ನ ಮಾತಿನಲ್ಲಿ ಚಾತುರ್ಯ ಇಲ್ಲದಿದ್ದರೂ ನನಗೆ ತಿಳುವಳಿಕೆಯಿದೆ. ಇದನ್ನು ನಾನು ಪ್ರತಿಯೊಂದು ಸಂದರ್ಭಗಳಲ್ಲಿಯೂ ಬಹಳ ಸ್ಪಷ್ಟಪಡಿಸಿರುತ್ತೇನೆ.
A ma i jota koiok on lokaia a kaidin ni ai dedeki, pwe kit janjal on komail ni jon o waja karoj.
7 ಪ್ರತಿಫಲವನ್ನು ಎದುರುನೋಡದೇ, ದೇವರ ಸುವಾರ್ತೆಯನ್ನು ನೀವು ಉನ್ನತರಾಗಬೇಕೆಂದು, ನನ್ನನ್ನು ನಾನೇ ತಗ್ಗಿಸಿಕೊಂಡು ಉಚಿತವಾಗಿ ಸಾರಿದ್ದು ನನ್ನ ಪಾಪವೋ?
De nai me wiadar dip eu ni ai akmalkila pein nai? Pwe komail en indandala ki ai padaki on komail ronamau en Kot jo pwaipwai.
8 ನಿಮ್ಮ ಸೇವೆಯನ್ನು ಮಾಡುವುದಕ್ಕಾಗಿ ನಾನು ಬೇರೆ ಸಭೆಗಳಿಂದ ಸಹಾಯವನ್ನು ಹೊಂದಿ, ಅವರಿಂದ ವಸೂಲಿ ಮಾಡುತ್ತಿದ್ದೆ.
I atia jan momotijou tei kan ni ai aleer pwain en dodok, pwe I en kak dodok on komail.
9 ನಾನು ನಿಮ್ಮಲ್ಲಿದ್ದಾಗ, ನನಗೆ ಕೊರತೆಯಾದಾಗ, ನಾನು ನಿಮ್ಮಲ್ಲಿ ಯಾರಿಗೂ ಭಾರವಾಗಲಿಲ್ಲ. ಏಕೆಂದರೆ, ಮಕೆದೋನ್ಯದಿಂದ ಬಂದಿದ್ದ ಸಹೋದರರು ನನ್ನ ಅವಶ್ಯಕತೆಯನ್ನು ಪೂರೈಸಿದರು. ಹೀಗೆ ನಾನು ನಿಮ್ಮಲ್ಲಿ ಯಾರಿಗೂ ಭಾರವಾಗಲಿಲ್ಲ. ಇನ್ನು ಮುಂದೆಯೂ ಭಾರವಾಗಿರುವುದಿಲ್ಲ.
O ni ai mimi re omail o lao jamamala, kaidin amen, me i uki pa meakot, pwe ni ai jolar ai meakot, ri atail akan me kodo jan Majetonien me kija don ia; nai ari jota katoutoui komail ni meakot, o i pil pan due!
10 ಅಖಾಯ ಪ್ರಾಂತದಲ್ಲಿರುವ ಯಾರೂ ಈ ನನ್ನ ಹೊಗಳಿಕೆಯನ್ನು ನಿಲ್ಲಿಸಲಾರರು ಎಂದು ಕ್ರಿಸ್ತ ಯೇಸುವಿನ ಸತ್ಯ ನನ್ನಲ್ಲಿ ಇರುವ ನಿಶ್ಚಯದಿಂದ ಹೇಳುತ್ತೇನೆ.
A duen melel en Krijtuj mimi lol i, iduen i jota pan mueid on amen, en kawela kapin wet nan jap en Akaia kan.
11 ಏಕೆ? ನಾನು ನಿಮ್ಮನ್ನು ಪ್ರೀತಿ ಇಲ್ಲದ್ದರಿಂದಲೋ? ನಾನು ಪ್ರೀತಿಸುತ್ತೇನೆಂದು ದೇವರಿಗೆ ಗೊತ್ತುಂಟು!
Pwekida? Pweki ai jo pok on komail? Kot me kotin manier.
12 ತಾವು ಮಾಡುವ ಕಾರ್ಯಗಳ ಬಗ್ಗೆ ನಮ್ಮೊಂದಿಗೆ ಸರಿಸಮಾನವೆಂದು ಹೊಗಳಿಕೊಳ್ಳಲು ಅವಕಾಶವನ್ನು ಹುಡುಕುವವರಿಗೆ, ಯಾವ ಆಸ್ಪದವೂ ಸಿಗದಂತೆ ನಾನು ಮಾಡುತ್ತಿರುವುದನ್ನು ನಿಲ್ಲಿಸದೆ, ಇನ್ನು ಮುಂದೆಯೂ ಮಾಡುತ್ತಿರುವೆನು.
A me i kin wia, i me i pan wiada, pwen kawela karep en akai me inon ion karep en ar juaiki dene irail dueta kit, jota lipilipil ij i.
13 ಅಂಥಾ ಜನರು ಸುಳ್ಳು ಅಪೊಸ್ತಲರು, ವಂಚಿಸುವ ವರ್ತಕರು, ಕ್ರಿಸ್ತ ಯೇಸುವಿನ ಅಪೊಸ್ತಲರೆಂದು ವೇಷ ಹಾಕಿಕೊಂಡವರೂ ಆಗಿದ್ದಾರೆ.
Pwe wanporon likam pukat o toun dodok likam akan irail, kin kawukilan wanporon akan en Krijtuj pein irail.
14 ಇದರಲ್ಲಿ ಆಶ್ಚರ್ಯವೇನೂ ಇಲ್ಲ, ಸೈತಾನನೂ ಬೆಳಕಿನ ದೇವದೂತನಂತೆ ಕಾಣಿಸಿಕೊಳ್ಳಬಲ್ಲನು.
A kaidin kapuriamui eu, pwe iduen Jatan kin kawukila pein i, wuki on tounlan en marain amen.
15 ಆದ್ದರಿಂದ ಸೈತಾನನ ಸೇವಕರೂ ನೀತಿಯ ಸೇವಕರಂತೆ ಕಾಣಿಸಿಕೊಳ್ಳುವುದಕ್ಕೆ ತಮ್ಮನ್ನು ಮಾರ್ಪಡಿಸಿಕೊಳ್ಳುವುದು ಆಶ್ಚರ್ಯವೇನೂ ಅಲ್ಲ. ಅವರ ಕೃತ್ಯಗಳಿಗೆ ತಕ್ಕಂತೆ ಅವರಿಗೆ ಅಂತ್ಯವೂ ಇರುವುದು.
I me kaidin kapuriamui eu, ma na papa kan pil pan wukilan papa en pun kan; a imwilar pan duen ar wiawia kan.
16 ನಾನು ಬುದ್ಧಿಹೀನನೆಂದು ಯಾರೂ ನೆನಸಬಾರದೆಂದು ನಾನು ತಿರುಗಿ ಹೇಳುತ್ತೇನೆ. ಒಂದು ವೇಳೆ ಹಾಗೆ ನೆನಸಿದರೆ, ನೀವು ಬುದ್ಧಿಹೀನರನ್ನು ಸ್ವೀಕರಿಸುವಂತೆಯೇ, ನನ್ನನ್ನೂ ಸ್ವೀಕರಿಸಿರಿ. ಆಗ ನನ್ನನ್ನು ನಾನೇ ಪ್ರಶಂಶಿಸಿಕೊಳ್ಳಲು ನನಗೆ ಆಸ್ಪದವಾಗುವುದು.
I puron indada, jota amen en akpweipwei kin ia, a ma iei, komail ap maki on ia ai pweipwei, pwe i en juai kin ia ekij.
17 ಈ ಹೆಚ್ಚಳ ಪಡುವ ವಿಷಯದಲ್ಲಿ ನಾನು ಕರ್ತ ಯೇಸು ಬಯಸಿದಂತೆ ಮಾತನಾಡದೆ, ಬುದ್ಧಿಹೀನನಂತೆ ಮಾತನಾಡುತ್ತಿದ್ದೇನೆ.
A me i inda, kaidin Kaun o me i pwili jan, pwe a tapi jan ni tiak en pweipwei, pwe i juaiki pein nai;
18 ಅನೇಕರು ಪ್ರಾಪಂಚಿಕ ವಿಷಯಗಳಲ್ಲಿ ತಮ್ಮನ್ನು ಹೊಗಳಿಕೊಳ್ಳುವಂತೆ ನಾನೂ ಹೊಗಳಿಕೊಳ್ಳುವೆನು.
Pwe me toto kin juaiki ni pali uduk, i pil pan juaiki pein nai.
19 ಬುದ್ಧಿಹೀನರನ್ನು ಹರ್ಷದಿಂದ ಸಹಿಸಿಕೊಳ್ಳುತ್ತಿರುವ ಬುದ್ಧಿವಂತರು ನೀವು!
Pwe komail kin mauki me lolepon kan, pweki komail me lolekon.
20 ನಿಜವಾಗಿ ಹೇಳಬೇಕಾದರೆ, ಯಾರಾದರೂ ನಿಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡರೂ, ನಿಮ್ಮನ್ನು ಮರುಳುಗೊಳಿಸಿದರೂ, ತಮ್ಮ ಸ್ವಂತ ಪ್ರಯೋಜನಕ್ಕಾಗಿ ಬಳಸಿಕೊಂಡರೂ, ನಿಮ್ಮ ಕೆನ್ನೆಗೆ ಬಾರಿಸಿದರೂ, ನೀವು ಸಹಿಸಿಕೊಳ್ಳುತ್ತೀರಲ್ಲಾ.
Pwe komail kin mueid on amen, en wia kin komail ladu kan, de ma amen kaloke komail, de ma amen kuli komail edi, de ma amen aklapalap, de ma amen pikir komail.
21 ಹೀಗೆಲ್ಲಾ ಮಾಡಲು ಬಹಳ ಬಲಹೀನರಾದ ನಮಗೆ ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ! ಯಾವುದನ್ನು ಇತರರು ಹೊಗಳಿಕೊಳ್ಳುವುದಕ್ಕೆ ಧೈರ್ಯ ಮಾಡುತ್ತಾರೋ, ಅದನ್ನು ನಾನು ಬುದ್ಧಿಹೀನನಂತೆ ಹೊಗಳುವ ಧೈರ್ಯ ಮಾಡುತ್ತೇನೆ.
Mepukat i indan komail, pwen kanamenok ki komail, dene kit luetalar. A ma meamen aima, nai pil aima, i kin lokaia nin tiak en pweipwei.
22 ಅವರು ಹೀಬ್ರಿಯರೋ? ನಾನೂ ಹೀಬ್ರಿಯನೇ. ಅವರು ಇಸ್ರಾಯೇಲರೋ? ನಾನೂ ಇಸ್ರಾಯೇಲನೇ. ಅವರು ಅಬ್ರಹಾಮನ ಸಂತತಿಯವರೋ? ನಾನೂ ಕೂಡಾ ಅಬ್ರಹಾಮನ ಸಂತತಿಯೇ.
Irail men Ipru, pil nai; irail men Ijrael, pil nai; irail kadaudok en Apraam, pil nai;
23 ಅವರು ಕ್ರಿಸ್ತ ಯೇಸುವಿನ ಸೇವಕರೋ? ಅವರಿಗಿಂತ ಹೆಚ್ಚಾಗಿ ನಾನು ಸೇವೆ ಮಾಡಿದ್ದೇನೆ. ನಾನು ಬುದ್ಧಿಹೀನನಂತೆ ಮಾತನಾಡುತ್ತಿದ್ದೇನೆ. ನಾನು ಅತಿಯಾಗಿ ಪ್ರಯಾಸ ಪಟ್ಟಿರುತ್ತೇನೆ. ಅನೇಕಬಾರಿ ಸೆರೆಮನೆಗೆ ಹಾಕಲಾದೆನು. ಬಹು ಕ್ರೂರವಾದ ರೀತಿಯಲ್ಲಿ ಪೆಟ್ಟುಗಳನ್ನು ತಿಂದೆನು. ಅನೇಕಬಾರಿ ಮರಣವನ್ನು ಎದುರಿಸಿದೆನು.
Irail me papan Krijtuj, i kin lokaia dueta me iak amen, nai me lapa jan; ai dodok laud jan, i kalokolok laud jan; i jalidier toto jan, i koren ion mela pan pak toto.
24 ಯೆಹೂದ್ಯರ ಕೈಯಿಂದ ಐದು ಬಾರಿ ನಲ್ವತ್ತಕ್ಕೆ ಒಂದು ಕಡಿಮೆ ಛಡಿ ಏಟುಗಳನ್ನು ತಿಂದಿದ್ದೇನೆ.
Pan me limpak Juj oko ki on ia wok paeijok, eu katoror jan,
25 ಮೂರು ಸಾರಿ ದೊಣ್ಣೆಯಿಂದ ಬಡಿಸಿಕೊಂಡಿದ್ದೇನೆ. ಒಂದು ಸಾರಿ ಕಲ್ಲೆಸೆದು ನನ್ನನ್ನು ಕೊಲ್ಲಲು ನೋಡಿದರು. ಮೂರು ಬಾರಿ ನಾನು ಪ್ರಯಾಣಿಸುತ್ತಿದ್ದ ಹಡಗು ಒಡೆದು ನೀರು ಪಾಲಾಯಿತು. ಒಂದು ಇಡೀ ಹಗಲುರಾತ್ರಿ ನಾನು ಸಮುದ್ರದ ಮೇಲೆ ತೇಲಿದೆನು.
A pan me jilepak re woki kin ia jokon; pan mepak me i pakajuk; pan me jilepak takepa i jop olar; pon o ran, me i pepe jili nan madau.
26 ಊರಿಂದೂರಿಗೆ ಪ್ರಯಾಣ ಮಾಡುತ್ತಲೇ ಇದ್ದೆನು, ನದಿಗಳಿಂದ ಅಪಾಯ, ದಾರಿಗಳ್ಳರಿಂದ ಅಪಾಯ, ನನ್ನ ಸ್ವಂತ ಜನರಿಂದ ಅಪಾಯ, ಯೆಹೂದ್ಯರಲ್ಲದವರಿಂದ ಅಪಾಯ, ಪಟ್ಟಣಗಳಲ್ಲಿ ಅಪಾಯ, ಹೊರ ಪ್ರದೇಶಗಳಲ್ಲಿ ಅಪಾಯ, ಸಮುದ್ರದಲ್ಲಿ ಅಪಾಯ ಮತ್ತು ಸುಳ್ಳು ಸಹೋದರರಿಂದ ಅಪಾಯಗಳನ್ನೆಲ್ಲಾ ನಾನು ಎದುರಿಸಿದೆನು.
Ai jailok me toto; i diar ai apwal nan pilap akan; i diar ai apwal ren lolap akan; i diar ai apwal ren ai kainok; i diar ai apwal nan jap tan; i diar ai apwal nan madau; i diar ai apwal ren jaulan likam akan;
27 ನಾನು ಪ್ರಯಾಸಪಟ್ಟು ಮೈಮುರಿದು ಕೆಲಸ ಮಾಡಿದೆನು. ಎಷ್ಟೋ ಬಾರಿ ನಿದ್ರೆಗೆಟ್ಟೆನು. ಹಸಿವೆ ಬಾಯಾರಿಕೆಗಳೇನೆಂಬುದನ್ನು ಅರಿತೆನು. ಊಟವಿಲ್ಲದೆ ಎಷ್ಟೋ ಬಾರಿ ಉಪವಾಸ ಬಿದ್ದೆನು. ಸರಿಯಾದ ಬಟ್ಟೆ ಇಲ್ಲದೆ ಚಳಿಯಲ್ಲಿ ಬಹಳವಾಗಿ ಸಂಕಟಪಟ್ಟೆನು.
Ni dodok apwal, ni jonjonemaj, ni men manadar o men nim piladar, ni ijejol pan pak toto, ni pou o jo kidi pa;
28 ಇಷ್ಟೇ ಅಲ್ಲ, ಎಲ್ಲಾ ಸಭೆಗಳ ಮೇಲಿರುವ ಚಿಂತೆಯು ನನ್ನನ್ನು ದಿನನಿತ್ಯವೂ ಬಾಧಿಸುತ್ತಿದೆ.
O me pil kin lel on ia ni ran karoj, o ai apapwali momodijou akan karoj.
29 ನಿಮ್ಮಲ್ಲಿ ಯಾರಾದರೂ ಬಲಹೀನರಾಗಿದ್ದರೆ, ನಾನೂ ಬಲಹೀನನಾಗಿರುವುದಿಲ್ಲವೋ? ನಿಮ್ಮಲ್ಲಿ ಯಾವನಾದರೂ ಪಾಪದಲ್ಲಿ ಬಿದ್ದುಹೋದರೆ, ನಾನು ನೊಂದುಕೊಳ್ಳುವುದಿಲ್ಲವೋ?
Ij me luet, a nai jota pan luet? Ij me kin kamakar, a nai jo?
30 ನನ್ನನ್ನು ಹೊಗಳಿಕೊಳ್ಳಬೇಕಾಗಿದ್ದರೆ, ನಾನು ನನ್ನ ಬಲಹೀನತೆಯಲ್ಲಿ ಹೊಗಳಿಕೊಳ್ಳುವೆನು.
Ma i en juaiki, i pan juaiki ai luet.
31 ನಮ್ಮ ಕರ್ತ ಯೇಸುವಿನ ದೇವರೂ ತಂದೆಯೂ ನಾನು ಸುಳ್ಳು ಹೇಳುವುದಿಲ್ಲ ಎಂಬುದನ್ನು ಬಲ್ಲವರಾಗಿದ್ದಾರೆ. ಅವರಿಗೇ ನಿತ್ಯವೂ ಸ್ತುತಿ ಸಲ್ಲಲಿ. (aiōn g165)
Kot o Jam en Kaun Iejuj, me iajanai kokolata, kin mani, me i jota kin likam. (aiōn g165)
32 ದಮಸ್ಕದ ಅರಸನಾದ ಅರೇತನ ಆಜ್ಞೆಯ ಪ್ರಕಾರ, ಅಲ್ಲಿಯ ರಾಜ್ಯಪಾಲನು ನನ್ನನ್ನು ಹಿಡಿದು ಬಂಧಿಸಬೇಕೆಂದು ದಮಸ್ಕದ ಪಟ್ಟಣವನ್ನು ಕಾವಲಿರಿಸಿದನು.
Nan Damajkuj nain nanmarki Aretaj kopina amen jinjila kanim en men Damajkuj ni a inon ion jaik ia di.
33 ಆದರೆ ಪಟ್ಟಣದ ಕೋಟೆ ಗೋಡೆಯ ಕಿಟಿಕಿಯೊಳಗಿಂದ ಒಂದು ಬುಟ್ಟಿಯ ಮೂಲಕ ಕೆಳಗಿಳಿಸಲಾಗಿ, ಅವನ ಕೈಯೊಳಗಿಂದ ನಾನು ತಪ್ಪಿಸಿಕೊಂಡೆನು.
I ap apikidi kopou eu jan ni wanim tuk en kel o, ap piti jan ni pa a kan.

< ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ 11 >