< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 8 >
1 ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಯೆಹೋವ ದೇವರ ಆಲಯವನ್ನೂ, ತನ್ನ ಅರಮನೆಯನ್ನೂ ಕಟ್ಟಿಸಿ ತೀರಿಸಿದ ತರುವಾಯ,
सोलोमनले परमप्रभुको मन्दिर र आफ्नो राजमहल निर्माण गरेका बिस वर्षको समयको अन्तमा यस्तो भयो,
2 ಹೀರಾಮನು ಸೊಲೊಮೋನನಿಗೆ ತಿರುಗಿ ಕೊಟ್ಟ ಪಟ್ಟಣಗಳನ್ನು ಸೊಲೊಮೋನನು ಕಟ್ಟಿಸಿ, ಇಸ್ರಾಯೇಲರನ್ನು ಅಲ್ಲಿ ನಿವಾಸವಾಗಿರುವಂತೆ ಮಾಡಿದನು.
हीरामले सोलोमनलाई दिएका सहरहरूका तिनले पुनर्निर्माण गरे र तिनमा इस्राएलका मानिहरूलाई तिनले बसाले ।
3 ಸೊಲೊಮೋನನು ಹಮಾತ್ ಚೋಬವನ್ನು ವಶಪಡಿಸಿಕೊಂಡನು.
सोलोमनले हमातसोबालाई आक्रमण गरे र त्यसलाई हराए ।
4 ಅವನು ಮರುಭೂಮಿಯಲ್ಲಿರುವ ತದ್ಮೋರ್ ಪಟ್ಟಣವನ್ನೂ, ಹಮಾತಿನಲ್ಲಿರುವ ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.
तिनले उजाड-स्थानमा तदमोरको पुनर्निर्माण गरे र सबै भण्डारणका सहर जसलाई तिनले हमातमा बनाए ।
5 ಇವುಗಳಲ್ಲದೆ, ಮೇಲಿನ ಬೇತ್ ಹೋರೋನ್ ಮತ್ತು ಕೆಳಗಿನ ಬೇತ್ ಹೋರೋನ್ ಪಟ್ಟಣಗಳನ್ನು ಪುನಃ ನಿರ್ಮಿಸಿದನು. ಈ ಪಟ್ಟಣಗಳು ಬಲವಾದ ಗೋಡೆಗಳು, ಬಾಗಿಲುಗಳು ಮತ್ತು ಅಗುಳಿಗಳು ಉಳ್ಳ ಕೋಟೆ ಪಟ್ಟಣಗಳಾಗಿ ಸೊಲೊಮೋನನು ಕಟ್ಟಿಸಿದನು.
तिनले माथिल्लो बेथ होरोन र तल्लो बेथ होरोनलाई पर्खालहरू, ढोकाहरू र बारहरू लगाएर किल्लाबन्दी गरे ।
6 ಅಲ್ಲದೆ, ಬಾಲಾತ್ ಪಟ್ಟಣವನ್ನೂ, ಉಗ್ರಾಣದ ಪಟ್ಟಣಗಳನ್ನೂ, ತನ್ನ ರಾಹುತರಿಗೋಸ್ಕರ ಮತ್ತು ರಥಗಳಿಗೋಸ್ಕರ ಪಟ್ಟಣಗಳನ್ನೂ ಕಟ್ಟಿಸಿದನು. ಯೆರೂಸಲೇಮಿನಲ್ಲಿಯೂ ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತಗಳಲ್ಲಿಯೂ ತನಗೆ ಇಷ್ಟವಾದವುಗಳನ್ನೆಲ್ಲಾ ಕಟ್ಟಿಸಿದನು.
तिनले बालात आफूसँग भएका भण्डारणका सबै सहर र आफ्ना रथहरू सबै सहर र घोडाचडीहरूका निम्ति सहरहरू र यरूशलेममा, लेबनानमा र आफ्ना सारा राज्यमा सारा देशभरि आफूले जे इच्छा गरे त्यो तिनले बनाए ।
7 ಸೊಲೊಮೋನನು ಇಸ್ರಾಯೇಲರಲ್ಲದ ಅಮೋರಿಯರು, ಹಿತ್ತಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು, ಇವರಲ್ಲಿ ಉಳಿದ ಸಮಸ್ತ ಜನರನ್ನೂ
हित्ती, एमोरी, परिज्जी, हिव्वी र यबूसीहरूका सबै बाँकी रहेकाहरू, जो इस्राएलका थिएनन्,
8 ಇಸ್ರಾಯೇಲರು ಸಂಹರಿಸದೆ ಉಳಿಸಿದ್ದ ಅವರ ಮಕ್ಕಳನ್ನೂ ಸೊಲೊಮೋನನು ಇಂದಿನವರೆಗೂ ದಾಸತ್ವಕ್ಕಾಗಿ ನೇಮಿಸಿದನು.
तिनीहरूपछि देशमा छोडिएका तिनीहरूका सन्तानहरू, जसलाई इस्राएलीहरूले नाश गरेका थिएनन्—सोलोमनले तिनीहरूलाई ज्यालाबिनाका श्रमिक बनाए, जसमा तिनीहरू आजको दिनसम्मै रहेका छन् ।
9 ಆದರೆ ಸೊಲೊಮೋನನು ತನ್ನ ಕೆಲಸಕ್ಕಾಗಿ ಇಸ್ರಾಯೇಲರನ್ನು ದಾಸರಾಗಿ ಮಾಡಲಿಲ್ಲ. ಆದರೆ ಅವರು ಯುದ್ಧಭಟರಾಗಿಯೂ, ಅಧಿಪತಿಗಳಲ್ಲಿ ಪ್ರಧಾನರಾಗಿಯೂ, ತನ್ನ ರಥಗಳ ಮೇಲೆಯೂ, ರಾಹುತರ ಮೇಲೆಯೂ ಅಧಿಪತಿಗಳಾಗಿಯೂ ಇರುವಂತೆ ಮಾಡಿದನು.
तापनि सोलोमनले इस्राएलका मानिसलाई ज्यालाबिनाका श्रमिक बनाएनन् । बरु, तिनीहरू तिनका सिपाहीहरू, कमाण्डरहरू, अधिकारीहरू, अनि सारथि र घोडचडीका कमाण्डरहरू भए ।
10 ಇವರು ಅರಸನಾದ ಸೊಲೊಮೋನನ ಅಧಿಪತಿಗಳಲ್ಲಿ ಪ್ರಧಾನರಾಗಿದ್ದರು, ಇವರು ಇನ್ನೂರೈವತ್ತು ಮಂದಿ ಆಳುಗಳ ಮೇಲೆ ಅಧಿಕಾರಿಗಳಾಗಿದ್ದರು.
सोलोमनका निरीक्षकहरूका मुख्य अधिकारीहरू यिनैमध्येबाट भए जो २५० जना थिए, जसले काम गर्नेहरूको निरीक्षण गरे ।
11 ಸೊಲೊಮೋನನು, “ಯೆಹೋವ ದೇವರ ಒಡಂಬಡಿಕೆಯ ಮಂಜೂಷವಿದ್ದ ಸ್ಥಳಗಳು ಪರಿಶುದ್ಧವಾಗಿರುವುದರಿಂದ, ನನ್ನ ಹೆಂಡತಿಯು ಇಸ್ರಾಯೇಲಿನ ಅರಸನಾದ ದಾವೀದನ ಅರಮನೆಯಲ್ಲಿ ವಾಸವಾಗಿರಕೂಡದು,” ಎಂದು ಹೇಳಿ ಸೊಲೊಮೋನನು ಫರೋಹನ ಮಗಳನ್ನು ದಾವೀದನ ಪಟ್ಟಣದಲ್ಲಿರಿಸದೆ ತಾನು ಆಕೆಗೋಸ್ಕರ ಕಟ್ಟಿಸಿದ ಅರಮನೆಯಲ್ಲಿ ಅವಳನ್ನು ಇರಿಸಿದನು.
सोलोमनले फारोकी छोरीलाई दाऊदको सहरबाट तिनको निम्ति बनाएको महलमा ल्याए, किनकि तिनले भने, “मेरी पत्नी इस्राएलका राजा दाऊदको महलमा बस्नेछैनन्, किनभने परमप्रभुको सन्दूक ल्याइएका ठाउँहरू पवित्र छन् ।”
12 ಆಗ ಸೊಲೊಮೋನನು ದ್ವಾರಾಂಗಳದ ಮುಂದೆ ತಾನು ಕಟ್ಟಿಸಿದ ಯೆಹೋವ ದೇವರ ಬಲಿಪೀಠದ ಮೇಲೆ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಿದನು.
तब सोलोमनले दलानको अगाडिपट्टि आफूले बनाएको वेदीमा परमप्रभुको निम्ति होमबलिहरू चढाए ।
13 ದಿನಂಪ್ರತಿ ಮೋಶೆಯ ಆಜ್ಞೆಯ ಪ್ರಕಾರ ವಿಶ್ರಾಂತಿಯ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಯೂ ವರುಷಕ್ಕೆ ಮೂರು ಸಾರಿ ಪವಿತ್ರ ಹಬ್ಬಗಳಾದ ಹುಳಿಯಿಲ್ಲದ ರೊಟ್ಟಿಗಳ ಹಬ್ಬದಲ್ಲಿಯೂ ವಾರಗಳ ಹಬ್ಬದಲ್ಲಿಯೂ ಗುಡಾರಗಳ ಹಬ್ಬದಲ್ಲಿಯೂ ಬಲಿಗಳನ್ನು ಅರ್ಪಿಸಿದನು.
दिन-दिनको सूचीअनुसार तिनले बलिदानहरू चढाए । मोशाको आज्ञामा भएका निर्देशनबमोजिम तिनले शबाथ दिन, औंसी र वर्षेनी तिन पल्ट चढाउने चाडहरूः अखमिरी रोटीको चाड, साताहरूको चाड र छाप्रो-वासको चाडमा तोकिएबमिजिम तिनले चढाए ।
14 ಅವನು ತನ್ನ ತಂದೆಯಾದ ದಾವೀದನ ಕ್ರಮದ ಪ್ರಕಾರ, ಅವರ ಸೇವೆಗೆ ಯಾಜಕ ವರ್ಗಗಳವರನ್ನೂ ಪ್ರತಿ ದಿವಸಕ್ಕೆ ಬೇಕಾದ ಕಾರ್ಯದ ಪ್ರಕಾರ, ಯಾಜಕರ ಮುಂದೆ ಸ್ತುತಿಸುವುದಕ್ಕೂ, ಸೇವೆ ಮಾಡುವುದಕ್ಕೂ ತಮ್ಮ ವಿಚಾರಗಳಲ್ಲಿ ಲೇವಿಯರನ್ನೂ, ಸೇವೆಯ ಬಾಗಿಲಲ್ಲಿ ತಮ್ಮ ವರ್ಗಗಳ ಸರದಿಯ ಪ್ರಕಾರವಾಗಿ ದ್ವಾರಪಾಲಕರನ್ನೂ ನೇಮಿಸಿದನು. ಏಕೆಂದರೆ ದೇವರ ಮನುಷ್ಯನಾದ ದಾವೀದನು ಹಾಗೆಯೇ ನೇಮಿಸಿದ್ದನು.
आफ्ना पिता दाऊदको विधिहरू पालन गर्ने कुरामा सोलोमनले प्रतिदिनको लागि आवश्यक परेअनुसार पुजारीका दलहरूलाई आआफ्ना काममा र लेवीहरूलाई चाहिं परमेश्वरको स्तुति गर्ने र पुजारीहरूका अगि सेवा गर्ने तिनीहरूका दर्जामा नियुक्त गरे । हरेक ढोकामा तिनले ढोकाका रक्षकहरू आफ्ना दलअनुसार रहनलाई नियुक्त गरे, किनकि परमेश्वरका मानिस दाऊदले यसरी नै आज्ञा दिएका थिए ।
15 ಅವರು ಯಾವ ಕಾರ್ಯದಲ್ಲಾದರೂ, ಬೊಕ್ಕಸಗಳಲ್ಲಾದರೂ ಅರಸನು ಯಾಜಕರಿಗೂ ಲೇವಿಯರಿಗೂ ಹೇಳಿದ ಆಜ್ಞೆಯನ್ನು ಮೀರಲಿಲ್ಲ.
पुजारीहरू र लेवीहरूलाई कुनै पनि विषयमा वा अनि भण्डारण कोठाहरूका विषयमा राजाले दिएका आज्ञाबाट यी मानिसहरू तर्किएनन् ।
16 ಯೆಹೋವ ದೇವರ ಆಲಯದ ಅಸ್ತಿವಾರ ಹಾಕಿದ ದಿವಸದವರೆಗೂ ಅದನ್ನು ಕಟ್ಟಿಸಿ ತೀರಿಸುವವರೆಗೂ ಸೊಲೊಮೋನನ ಕೆಲಸವೆಲ್ಲಾ ಮುಗಿದು, ಯೆಹೋವ ದೇವರ ಆಲಯವು ಸಿದ್ಧವಾಯಿತು.
परमप्रभुका मन्दिरको जग बसालेदेखि त्यो पूरा नभएसम्म सोलोमनले आज्ञा गरेका सबै काम सम्पन्न भएको थियो । परमप्रभुको मन्दिर बनाउने काम सकियो ।
17 ಆಗ ಸೊಲೊಮೋನನು ಎದೋಮ್ ದೇಶದ ಸಮುದ್ರತೀರದ ಬಳಿಯಲ್ಲಿರುವ ಎಚ್ಯೋನ್ ಗೆಬೆರ್, ಏಲೋತ್ ಎಂಬ ಊರುಗಳಿಗೆ ಹೊರಟುಹೋದನು.
त्यसपछि सोलोमन एदोम देशको किनारमा भएको एस्योन-गेबेर र एलातमा गए ।
18 ಹೀರಾಮನು ತನ್ನ ಸೇವಕರ ಮುಖಾಂತರ ಹಡಗುಗಳನ್ನೂ, ಸಮುದ್ರ ಪ್ರಯಾಣದಲ್ಲಿ ನಿಪುಣರಾದ ತನ್ನ ನಾವಿಕರನ್ನು ಅವನ ಬಳಿಗೆ ಕಳುಹಿಸಿದನು. ಅವರು ಸೊಲೊಮೋನನ ಸೇವಕರ ಸಂಗಡ ಓಫೀರಿಗೆ ಹೋಗಿ, ಅಲ್ಲಿಂದ ಅರಸನಾದ ಸೊಲೊಮೋನನಿಗೆ 15,000 ಕಿಲೋಗ್ರಾಂ ಬಂಗಾರವನ್ನು ತೆಗೆದುಕೊಂಡು ಬಂದರು.
अनि हीरामले समुद्रको बारेमा जानकारी भएका मानिसहरूसहितका आफ्ना अधिकारीहरूका कमाण्डमा रहेका रहेका पानी जहाजहरू पठाइदिए र सोलोमनका सेवकहरूका साथमा तिनीहरू ओपीरमा गए र तिनीहरूले त्यहाँबाट सोह्र टन सुन ल्याए र त्यो सोलोमन राजालाई दिए ।