< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 4 >

1 ಇವುಗಳಲ್ಲದೆ, ಸೊಲೊಮೋನನು ಕಂಚಿನ ಬಲಿಪೀಠವನ್ನು ಮಾಡಿಸಿದನು; ಅದರ ಉದ್ದ ಒಂಬತ್ತು ಮೀಟರ್, ಅಗಲ ಒಂಬತ್ತು ಮೀಟರ್, ಎತ್ತರ ಸುಮಾರು ಐದು ಮೀಟರ್.
Depois fez um altar de bronze, vinte côvados de comprimento, vinte côvados de largura e dez côvados de altura.
2 ಅನಂತರ ಅವನು ಸಮುದ್ರಪಾತ್ರೆ ಎಂದು ಕರೆಯಲಾಗುವ ಎರಕದ ದೊಡ್ಡ ಪಾತ್ರೆಯನ್ನು ಮಾಡಿಸಿದನು; ಅದು ಚಕ್ರಾಕಾರವಾಗಿ ಅಂಚಿನಿಂದ ಅಂಚಿಗೆ ಸುಮಾರು ನಾಲ್ಕು ಮೀಟರ್; ಅದರ ಎತ್ತರ ಸುಮಾರು ಎರಡು ಮೀಟರ್; ಸುತ್ತಳತೆ ಸುಮಾರು ಹದಿನಾಲ್ಕು ಮೀಟರಾಗಿತ್ತು;
Também fez o mar derretido de dez côvados de borda a borda. Era redondo, cinco côvados de altura e trinta côvados de circunferência.
3 ಅದರ ಅಂಚಿನ ಕೆಳಭಾಗದಲ್ಲಿ ಅದರ ಸುತ್ತಲೂ ಎತ್ತುಗಳ ರೂಪಗಳಿದ್ದವು; ಅವು ಒಂದೊಂದು ಮೀಟರಿಗೆ ಹತ್ತರಂತೆ, ಆ ಕೊಳದ ಪಾತ್ರೆಯ ಸುತ್ತಲೂ ಇದ್ದವು; ಇದು ಎರಕ ಹೊಯ್ಯುವಾಗ, ಎತ್ತುಗಳ ರೂಪಗಳು ಎರಡು ಸಾಲಾಗಿ ಎರಕ ಹೊಯ್ಸಿದನು.
Debaixo dele estava a semelhança dos bois, que o circundavam, por dez côvados, circundando o mar. Os bois estavam em duas fileiras, fundidos quando foi fundido.
4 ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ, ಮೂರು ಪಶ್ಚಿಮಕ್ಕೂ, ಮೂರು ದಕ್ಷಿಣಕ್ಕೂ, ಮೂರು ಪೂರ್ವಕ್ಕೂ ಮುಖಮಾಡಿಕೊಂಡಿದ್ದವು. ಆ ಕೊಳವು ಅವುಗಳ ಮೇಲೆ ಇತ್ತು. ಅವುಗಳ ಹಿಂಭಾಗಗಳೆಲ್ಲಾ ಒಳಮುಖವಾಗಿದ್ದವು.
Estava sobre doze bois, três olhando para o norte, três olhando para o oeste, três olhando para o sul e três olhando para o leste; e o mar estava colocado sobre eles acima, e todos os seus quartos traseiros estavam para dentro.
5 ಅದರ ದಪ್ಪವು ಅಂಗೈ ಅಗಲದಷ್ಟಾಗಿಯೂ, ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ, ತಾವರೆ ಪುಷ್ಪದ ಹಾಗೆಯೂ ಇತ್ತು. ಅದು ಅರವತ್ತಾರು ಸಾವಿರ ಲೀಟರ್ ನೀರನ್ನು ಹಿಡಿಯುತ್ತಿತ್ತು.
Era uma largura de mão grossa. Sua borda era feita como a borda de um copo, como a flor de um lírio. Recebia e segurava três mil banhos.
6 ಇದಲ್ಲದೆ ಹತ್ತು ತೊಟ್ಟಿಗಳನ್ನು ಮಾಡಿಸಿ, ಅವುಗಳಲ್ಲಿ ತೊಳೆಯುವ ನಿಮಿತ್ತವಾಗಿ ಬಲಗಡೆಯಲ್ಲಿ ಐದನ್ನೂ, ಎಡಗಡೆಯಲ್ಲಿ ಐದನ್ನೂ ಇರಿಸಿದನು. ದಹನಬಲಿಗೋಸ್ಕರ ಅರ್ಪಿಸುವವುಗಳನ್ನು ಅವುಗಳಲ್ಲಿ ತೊಳೆಯುತ್ತಿದ್ದರು. ಆದರೆ ಆ ಕೊಳವು ಯಾಜಕರು ತೊಳೆದುಕೊಳ್ಳುವುದಕ್ಕೆ ಇತ್ತು.
Ele também fez dez bacias, e colocou cinco na mão direita e cinco na esquerda, para lavar nelas. As coisas que pertenciam ao holocausto eram lavadas nelas, mas o mar era para os sacerdotes se lavarem.
7 ಅವುಗಳ ಮಾದರಿಯ ಪ್ರಕಾರವಾಗಿ ಹತ್ತು ಬಂಗಾರದ ದೀಪಸ್ತಂಭಗಳನ್ನು ಮಾಡಿಸಿ, ಮಂದಿರದಲ್ಲಿ ಬಲಗಡೆ ಐದನ್ನೂ, ಎಡಗಡೆ ಐದನ್ನೂ ಇರಿಸಿದನು.
Ele fez os dez candeeiros de ouro de acordo com a portaria relativa a eles; e colocou-os no templo, cinco à direita e cinco à esquerda.
8 ಹಾಗೆಯೇ ಅವನು ಹತ್ತು ಮೇಜುಗಳನ್ನು ಮಾಡಿಸಿ, ಮಂದಿರದಲ್ಲಿ ಬಲಗಡೆ ಐದನ್ನೂ, ಎಡಗಡೆ ಐದನ್ನೂ ಇರಿಸಿದನು. ನೂರು ಬಂಗಾರದ ಬಟ್ಟಲುಗಳನ್ನು ಮಾಡಿಸಿದನು.
Ele também fez dez mesas, e as colocou no templo, cinco do lado direito e cinco do lado esquerdo. Ele fez cem bacias de ouro.
9 ಯಾಜಕರ ಅಂಗಳವನ್ನೂ, ದೊಡ್ಡ ಅಂಗಳವನ್ನೂ, ಅಂಗಳಗಳಿಗೋಸ್ಕರ ಬಾಗಿಲುಗಳನ್ನೂ ಮಾಡಿಸಿ, ಆ ಬಾಗಿಲುಗಳನ್ನು ಕಂಚಿನಿಂದ ಹೊದಿಸಿದನು.
Furthermore ele fez a corte dos sacerdotes, a grande corte e portas para a corte, e revestiu suas portas com bronze.
10 ಸಮುದ್ರ ಎಂದು ಕರೆಯಲಾದ ದೊಡ್ಡ ಪಾತ್ರೆಯನ್ನು ಬಲಗಡೆಯಲ್ಲಿ ಅಂದರೆ ಆಗ್ನೇಯ ದಿಕ್ಕಿನಲ್ಲಿ ಇರಿಸಿದನು.
Ele colocou o mar no lado direito da casa para o leste, em direção ao sul.
11 ಇದಲ್ಲದೆ ಹೂರಾಮನು ಪಾತ್ರೆಗಳನ್ನೂ, ಸಲಿಕೆಗಳನ್ನೂ, ಬಟ್ಟಲುಗಳನ್ನೂ ಮಾಡಿದನು. ಯೆಹೋವ ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊಮೋನನು ಒಪ್ಪಿಸಿದ ಎಲ್ಲಾ ಕೆಲಸಗಳನ್ನು ಹೂರಾಮನು ಮಾಡಿ ತೀರಿಸಿದನು:
Huram fez as panelas, as pás e as bacias. Assim Huram terminou o trabalho que fez para o rei Salomão na casa de Deus:
12 ಅವು ಯಾವುವೆಂದರೆ, ಎರಡು ಸ್ತಂಭಗಳು, ಆ ಸ್ತಂಭಗಳ ಮೇಲಿನ ಎರಡು ಕುಂಭಗಳು, ಆ ಎರಡು ಕುಂಭಗಳನ್ನು ಮುಚ್ಚುವ ಎರಡು ಜಾಲರಿಗಳು.
os dois pilares, as tigelas, as duas capitais que estavam no topo dos pilares, as duas redes para cobrir as duas tigelas das capitais que estavam no topo dos pilares,
13 ಎರಡು ಜಾಲರಿ ಸಾಮಾನುಗಳಿಗೆ ನಾನೂರು ದಾಳಿಂಬೆ ಹಣ್ಣುಗಳು, ಸ್ತಂಭಗಳ ಮೇಲೆ ಇರುವ ಎರಡು ಕುಂಭಗಳನ್ನು ಮುಚ್ಚುವಂತೆ ಒಂದು ಜಾಲರಿ ಸಲಕರಣೆಗಳಿಗೆ ಎರಡು ಸಾಲಿನ ದಾಳಿಂಬೆ ಹಣ್ಣುಗಳನ್ನು ಮಾಡಿದನು.
e as quatrocentas romãs para as duas redes - duas fileiras de romãs para cada rede, para cobrir as duas tigelas das capitais que estavam sobre os pilares.
14 ಇದಲ್ಲದೆ ಅವನು ಪೀಠಗಳನ್ನು ಅವುಗಳ ಮೇಲಿರುವ ತೊಟ್ಟಿಗಳನ್ನು ಮಾಡಿದನು.
Ele também fez as bases, e fez as bacias sobre as bases -
15 ಸಮುದ್ರಪಾತ್ರೆಯು ಅದರ ಕೆಳಗಿರುವ ಹನ್ನೆರಡು ಎತ್ತುಗಳು,
um mar, e os doze bois debaixo dele.
16 ಪಾತ್ರೆಗಳು, ಸಲಿಕೆಗಳು, ಮುಳ್ಳುಗಳು. ಅವುಗಳ ಎಲ್ಲಾ ವಸ್ತುಗಳನ್ನೂ ಅರಸನಾದ ಸೊಲೊಮೋನನಿಗೆ ಅವನ ತಂದೆಯು ಹೇಳಿದಂತೆ ಹೂರಾಮ ಅಬೀ ಹೊಳೆಯುವ ಕಂಚಿನಿಂದ ಯೆಹೋವ ದೇವರ ಆಲಯಕ್ಕೋಸ್ಕರ ಮಾಡಿದನು.
Huram-abi também fez as panelas, as pás, os garfos e todas suas embarcações para o rei Salomão, para a casa de Yahweh, de bronze brilhante.
17 ಯೊರ್ದನಿಗೆ ಸೇರಿದ ಬಯಲಾದ ಸುಕ್ಕೋತಿಗೂ ಚರೇದನಿಗೂ ನಡುವೆ ಇರುವ ಜೇಡಿಮಣ್ಣಿನ ಅಚ್ಚುಗಳಲ್ಲಿ ಅರಸನು ಅವುಗಳನ್ನು ಎರಕ ಹೊಯ್ಯಿಸಿದನು.
O rei os fundiu na planície do Jordão, na terra argilosa entre Succoth e Zeredah.
18 ಸೊಲೊಮೋನನು ಮಾಡಿಸಿದ ಈ ಸಲಕರಣೆಗಳೆಲ್ಲಾ ಬಹು ಹೆಚ್ಚಾಗಿದ್ದರಿಂದ ಆ ಕಂಚಿನ ತೂಕವು ಎಷ್ಟೆಂದು ನಿರ್ಧರಿಸಲಾಗಲಿಲ್ಲ.
Assim, Salomão fez todas estas embarcações em grande abundância, de modo que o peso do bronze não pôde ser determinado.
19 ಸೊಲೊಮೋನನು ದೇವರ ಆಲಯದ ಎಲ್ಲಾ ಸಲಕರಣೆಗಳನ್ನು ಮಾಡಿಸಿದನು. ಅವು ಯಾವುವೆಂದರೆ: ಬಂಗಾರದ ಧೂಪವೇದಿಯನ್ನು, ಸಮ್ಮುಖದ ರೊಟ್ಟಿಗಳನ್ನು ಇಡುವುದಕ್ಕೆ ಮೇಜುಗಳನ್ನು,
Salomão fez todos os vasos que estavam na casa de Deus: o altar dourado, as mesas com o pão de exposição,
20 ನಿಯಮದ ಪ್ರಕಾರ ಮಹಾಪರಿಶುದ್ಧ ಸ್ಥಳದ ಮುಂಭಾಗದಲ್ಲಿ ಶುದ್ಧ ಬಂಗಾರದ ದೀಪಸ್ತಂಭಗಳನ್ನೂ ಅವುಗಳ ದೀಪಗಳನ್ನೂ,
e as luminárias com suas lâmpadas para queimar de acordo com a ordenança perante o santuário interior, de ouro puro;
21 ಹೂವುಗಳನ್ನೂ, ದೀಪಗಳ ಚಿಮಟಿಗಳನ್ನೂ ಶುದ್ಧ ಬಂಗಾರದಿಂದ ಮಾಡಿಸಿದನು.
e as flores, as lâmpadas e as pinças de ouro mais puro;
22 ಶುದ್ಧ ಬಂಗಾರದಿಂದ ಕತ್ತರಿಗಳು, ಬೋಗುಣಿಗಳು, ಅಗ್ನಿಪಾತ್ರೆಗಳು, ಅಗ್ಗಿಷ್ಟಿಗೆ ಇವುಗಳನ್ನು ಮಾಡಿಸಿದನು. ಇದಲ್ಲದೆ ಆಲಯದ ಪ್ರವೇಶ ದ್ವಾರವೂ, ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯ ಬಾಗಿಲುಗಳೂ, ಮಂದಿರದ ಮನೆ ಬಾಗಿಲುಗಳೂ ಬಂಗಾರದವುಗಳಾಗಿದ್ದವು.
e os rapé, as bacias, as colheres e as panelas de fogo de ouro puro. Quanto à entrada da casa, suas portas internas para o lugar mais sagrado e as portas do salão principal do templo eram de ouro.

< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 4 >