< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 3 >

1 ಸೊಲೊಮೋನನು ಯೆರೂಸಲೇಮಿನಲ್ಲಿ ತನ್ನ ತಂದೆ ದಾವೀದನಿಗೆ ಯೆಹೋವ ದೇವರು ಕಾಣಿಸಿಕೊಂಡ ಸ್ಥಳವಾದ ಮೊರೀಯಾ ಬೆಟ್ಟದ ಮೇಲೆ, ದಾವೀದನು ಸಿದ್ಧಮಾಡಿದ ಸ್ಥಳವಾದ ಯೆಬೂಸಿಯನಾದ ಒರ್ನಾನನ ಕಣದಲ್ಲಿ ಯೆಹೋವ ದೇವರ ಆಲಯವನ್ನು ಕಟ್ಟಿಸಲು ಪ್ರಾರಂಭಿಸಿದನು.
[興工建殿]撒羅滿在耶路撒冷,即在他父親達味看見異像的摩黎雅山上,在耶步斯人敖爾難的禾場上,達味所準備的地方,興工建造上主的聖殿。
2 ತನ್ನ ಆಳಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿವಸದಲ್ಲಿ ಕಟ್ಟುವುದಕ್ಕೆ ಆರಂಭಿಸಿದನು.
撒羅滿在即位後第四年二月興工建造。
3 ದೇವರ ಆಲಯವನ್ನು ಕಟ್ಟುವುದಕ್ಕೆ ಸೊಲೊಮೋನನು ಹಾಕಿಸಿದ ಅಸ್ತಿವಾರಗಳು ಏನೆಂದರೆ ಮೊದಲಿನ ಅಳತೆಯ ಪ್ರಕಾರವಾಗಿ ಅದರ ಉದ್ದ ಸುಮಾರು 27 ಮೀಟರ್ ಮತ್ತು ಅದರ ಅಗಲ 9 ಮೀಟರ್;
撒羅滿為建造天主聖殿的基地,按照古尺度計算:長六十肘,寬爾十肘。
4 ಮುಂದೆ ಇರುವ ದ್ವಾರಾಂಗಳ ಆಲಯದ ಅಗಲದ ಪ್ರಕಾರ ಸುಮಾರು 9 ಮೀಟರ್ ಉದ್ದವಾಗಿತ್ತು; 54 ಮೀಟರ್ ಎತ್ತರವಾಗಿತ್ತು. ಅವನು ಅದನ್ನು ಒಳಗಡೆ ಶುದ್ಧ ಬಂಗಾರದಿಂದ ಹೊದಿಸಿದನು.
門廊的長度與聖殿的寬度相等,即二十肘,高二十肘,裏面全貼上純金。
5 ಅವನು ದೊಡ್ಡ ತುರಾಯಿ ಮರಗಳಿಂದ ಮುಚ್ಚಿದ ಕೋಣೆಯನ್ನು ಶುದ್ಧ ಬಂಗಾರದಿಂದ ಹೊದಿಸಿ, ಅದರ ಮೇಲೆ ಖರ್ಜೂರದ ಗಿಡಗಳನ್ನೂ, ಸರಪಣಿಗಳನ್ನೂ ಕೆತ್ತಿಸಿದನು.
大殿裏面先蓋上一層木板,再貼上純金,上面雕刻上棕樹和花環;
6 ಇದಲ್ಲದೆ ಸೌಂದರ್ಯದ ನಿಮಿತ್ತವಾಗಿ ಅಮೂಲ್ಯವಾದ ರತ್ನಗಳಿಂದ ಆ ಆಲಯವನ್ನು ಮುಚ್ಚಿದನು. ಅದರ ಬಂಗಾರವು ಪರ್ವಯಿಮ್ ದೇಶದ್ದು.
又以寶石點綴聖殿,甚是華麗;金子都是帕爾瓦因金。
7 ಆಲಯದ ತೊಲೆಗಳನ್ನೂ, ಸ್ತಂಭಗಳನ್ನೂ, ಗೋಡೆಗಳನ್ನೂ, ಬಾಗಿಲುಗಳನ್ನೂ, ಅವನು ಬಂಗಾರದಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳನ್ನೂ ಕೆತ್ತಿಸಿದನು.
正殿、棟樑、門限、牆壁,以及門扇,都貼上金子,牆上刻有革魯賓。[至聖所]
8 ಅವನು ಮಹಾಪರಿಶುದ್ಧವಾದ ಸ್ಥಳವನ್ನು ಕಟ್ಟಿದನು. ಅದರ ಉದ್ದವು ಆಲಯದ ಅಗಲದ ಪ್ರಕಾರ 9 ಮೀಟರ್; ಅದರ ಅಗಲ 9 ಮೀಟರ್. ಅವನು ಅದನ್ನು 20,000 ಕಿಲೋಗ್ರಾಂ ಶುದ್ಧ ಬಂಗಾರದಿಂದ ಹೊದಿಸಿದನು.
以後,建造了至聖所,長度與聖殿的寬度相等,即二十肘,寬度也是二十肘;內部貼了六百「塔冷通」純金。
9 ಅದರ ಮೊಳೆಗಳು ಐನೂರ ಎಪ್ಪತ್ತು ಕಿಲೋಗ್ರಾಂಗಳ ತೂಕ ಬಂಗಾರದ್ದಾಗಿತ್ತು. ಹಾಗೆಯೇ ಮೇಲಿನ ಕೊಠಡಿಗಳನ್ನು ಬಂಗಾರದಿಂದ ಹೊದಿಸಿದನು.
釘子重五十「協刻耳」金子;連樓閣也貼上了金子。
10 ಮಹಾಪರಿಶುದ್ಧವಾದ ಸ್ಥಳದಲ್ಲಿ ಎರಡು ಕೆರೂಬಿಗಳನ್ನು ಮಾಡಿಸಿ, ಬಂಗಾರದಿಂದ ಅವುಗಳನ್ನು ಹೊದಿಸಿದನು.
在至聖所內,以刻工刻了兩個革魯賓,外面包上了黃金;
11 ಕೆರೂಬಿಗಳ ರೆಕ್ಕೆಗಳು 9 ಮೀಟರ್ ಉದ್ದವಾಗಿದ್ದವು. ಒಂದು ರೆಕ್ಕೆಯು ಎರಡೂವರೆ ಮೀಟರ್ ಉದ್ದವಾಗಿದ್ದು, ಆಲಯದ ಗೋಡೆಯವರೆಗೆ ಮುಟ್ಟಿತ್ತು; ಮತ್ತೊಂದು ರೆಕ್ಕೆ ಎರಡೂವರೆ ಮೀಟರ್ ಉದ್ದವಾಗಿದ್ದು, ಇನ್ನೊಂದು ಕೆರೂಬಿಯ ರೆಕ್ಕೆಯವರೆಗೂ ಮುಟ್ಟಿತ್ತು.
革魯賓的翅膀,共長二十肘:這邊革魯賓的一個翅膀長五肘,伸至這邊殿牆;另一個翅膀也長五肘,與另一個革魯賓的翅膀相接連。
12 ಹಾಗೆಯೇ ಮತ್ತೊಂದು ಕೆರೂಬಿಯ ರೆಕ್ಕೆಯು ಎರಡೂವರೆ ಮೀಟರ್ ಉದ್ದವಾಗಿದ್ದು, ಆಲಯದ ಗೋಡೆಯವರೆಗೆ ಮುಟ್ಟಿತ್ತು; ಇನ್ನೊಂದು ರೆಕ್ಕೆಯು ಎರಡೂವರೆ ಮೀಟರ್ ಉದ್ದವಾಗಿದ್ದು, ಬೇರೆ ಇರುವ ಕೆರೂಬಿಯ ರೆಕ್ಕೆಗೆ ಕೂಡಿಕೊಂಡಿತ್ತು.
這一個革魯賓的一個翅膀,也長五肘,伸至那邊殿牆;另一個翅膀也長五肘,與前一個革魯賓的翅膀相接連。
13 ಈ ಕೆರೂಬಿಗಳ ರೆಕ್ಕೆಗಳು 9 ಮೀಟರ್ ಉದ್ದಕ್ಕೆ ಚಾಚಿಕೊಂಡವು. ಅವು ತಮ್ಮ ಕಾಲುಗಳ ಮೇಲೆ ನಿಂತವು. ಅವುಗಳ ಮುಖಗಳು ಒಳಗಡೆಯಾಗಿದ್ದವು.
兩個革魯賓的翅膀都伸開,共長二十肘;他們雙足站立,面向聖殿。
14 ಪರದೆಯನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ಹೊಸೆದ ನಾರಿನಿಂದ ಮಾಡಿಸಿ, ಅದರಲ್ಲಿ ಕೆರೂಬಿಗಳುಳ್ಳದ್ದನ್ನಾಗಿ ಮಾಡಿಸಿದನು.
又用藍線、紫線、朱紅線和細麻,作了一帳幔,上面繡上革魯賓。[圓柱]
15 ಇದಲ್ಲದೆ ಅವನು ಕಟ್ಟಡದ ಪ್ರವೇಶದ್ವಾರದಲ್ಲಿ ಎರಡು ಸ್ತಂಭಗಳನ್ನು ನಿರ್ಮಿಸಿದನು, ಪ್ರತಿಯೊಂದೂ ಹದಿನೈದು ಮೀಟರ್ ಎಪ್ಪತ್ತೈದು ಸೆಂಟಿಮೀಟರ್ ಎತ್ತರ, ಪ್ರತಿಯೊಂದರ ಮೇಲೆಯೂ ನಿರ್ಮಿಸಲಾದ ಪ್ರತಿಯೊಂದು ತಲೆಗಳು ಎರಡೂವರೆ ಮೀಟರ್ ಉದ್ದವಿತ್ತು.
他又在殿前造了兩根柱子,共長三十肘;每根柱子頂上有柱帽,高五肘。
16 ಗರ್ಭಗುಡಿಯಲ್ಲಿ ಸರಪಣಿಗಳಂತೆ ಮಾಡಿ, ಸ್ತಂಭಗಳ ತುದಿಗಳ ಮೇಲೆ ಇಟ್ಟು, ನೂರು ದಾಳಿಂಬೆ ಹಣ್ಣುಗಳನ್ನು ಮಾಡಿ, ಸರಪಣಿಗಳ ಮೇಲೆ ಇರಿಸಿದನು.
又做了類似項鍊的花環,置於柱頭上;又作了一百個石榴,懸在花環上。
17 ಆ ಸ್ತಂಭಗಳನ್ನು ಮಂದಿರದ ಮುಂಭಾಗದಲ್ಲಿ ಒಂದನ್ನು ಬಲಗಡೆಯಲ್ಲಿಯೂ, ಇನ್ನೊಂದನ್ನು ಎಡಗಡೆಯಲ್ಲಿಯೂ ನಿಲ್ಲಿಸಿದನು. ಬಲಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಯಾಕೀನ್ ಎಂದೂ, ಎಡಗಡೆಯ ಸ್ತಂಭಕ್ಕೆ ಬೋವಾಜ್ ಎಂದೂ ಹೆಸರಿಟ್ಟನು.
把兩根柱子立在殿前,一左一右:右邊的叫雅津,左邊的叫波阿次。

< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 3 >