< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 21 >

1 ಯೆಹೋಷಾಫಾಟನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದೊಳಗೆ ಅವನ ಪೂರ್ವಜರ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಆಗ ಅವನಿಗೆ ಬದಲಾಗಿ ಅವನ ಮಗನಾದ ಯೆಹೋರಾಮನು ಅರಸನಾದನು.
וַיִּשְׁכַּ֤ב יְהֽוֹשָׁפָט֙ עִם־אֲבֹתָ֔יו וַיִּקָּבֵ֥ר עִם־אֲבֹתָ֖יו בְּעִ֣יר דָּוִ֑יד וַיִּמְלֹ֛ךְ יְהוֹרָ֥ם בְּנ֖וֹ תַּחְתָּֽיו׃
2 ಇವನ ಸಹೋದರರಾಗಿರುವ ಯೆಹೋಷಾಫಾಟನ ಪುತ್ರರಾದ ಅಜರ್ಯನೂ, ಯೆಹೀಯೇಲನೂ, ಜೆಕರ್ಯನೂ, ಅಜರ್ಯನೂ, ಮೀಕಾಯೇಲನೂ, ಶೆಫಟ್ಯನೂ ಇದ್ದರು. ಇವರೆಲ್ಲರು ಯೆಹೂದ್ಯರ ಅರಸನಾದ ಯೆಹೋಷಾಫಾಟನ ಪುತ್ರರು.
וְלֽוֹ־אַחִ֞ים בְּנֵ֣י יְהוֹשָׁפָ֗ט עֲזַרְיָ֤ה וִֽיחִיאֵל֙ וּזְכַרְיָ֣הוּ וַעֲזַרְיָ֔הוּ וּמִיכָאֵ֖ל וּשְׁפַטְיָ֑הוּ כָּל־אֵ֕לֶּה בְּנֵ֥י יְהוֹשָׁפָ֖ט מֶ֥לֶךְ־יִשְׂרָאֵֽל׃
3 ಅವರ ತಂದೆ ಯೆಹೂದದಲ್ಲಿ ಕೋಟೆಯುಳ್ಳ ಪಟ್ಟಣಗಳ ಸಂಗಡ ಬೆಳ್ಳಿಯನ್ನೂ, ಬಂಗಾರವನ್ನೂ, ಬೆಲೆಯುಳ್ಳ ವಸ್ತುಗಳನ್ನೂ ಅವರಿಗೆ ದಾನಗಳಾಗಿ ಕೊಟ್ಟನು. ಆದರೆ ಯೆಹೋರಾಮನು ಚೊಚ್ಚಲ ಮಗನಾದುದರಿಂದ ಅವನಿಗೆ ರಾಜ್ಯವನ್ನು ಕೊಟ್ಟನು.
וַיִּתֵּ֣ן לָהֶ֣ם ׀ אֲ֠בִיהֶם מַתָּנ֨וֹת רַבּ֜וֹת לְכֶ֤סֶף וּלְזָהָב֙ וּלְמִגְדָּנ֔וֹת עִם־עָרֵ֥י מְצֻר֖וֹת בִּֽיהוּדָ֑ה וְאֶת־הַמַּמְלָכָ֛ה נָתַ֥ן לִֽיהוֹרָ֖ם כִּי־ה֥וּא הַבְּכֽוֹר׃ פ
4 ಯೆಹೋರಾಮನು ತನ್ನ ತಂದೆಯ ರಾಜ್ಯಕ್ಕೆ ಬಂದ ತರುವಾಯ, ಅವನು ತನ್ನನ್ನು ಬಲಪಡಿಸಿಕೊಂಡು ತನ್ನ ಸಮಸ್ತ ಸಹೋದರರನ್ನೂ, ಇಸ್ರಾಯೇಲಿನ ಪ್ರಧಾನರಲ್ಲಿ ಕೆಲವರನ್ನೂ ಖಡ್ಗದಿಂದ ಕೊಂದುಹಾಕಿದನು.
וַיָּ֨קָם יְהוֹרָ֜ם עַל־מַמְלֶ֤כַת אָבִיו֙ וַיִּתְחַזַּ֔ק וַיַּהֲרֹ֥ג אֶת־כָּל־אֶחָ֖יו בֶּחָ֑רֶב וְגַ֖ם מִשָּׂרֵ֥י יִשְׂרָאֵֽל׃
5 ಯೆಹೋರಾಮನು ಆಳಲಾರಂಭಿಸಿದಾಗ ಮೂವತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಎಂಟು ವರ್ಷ ಆಳಿದನು.
בֶּן־שְׁלֹשִׁ֥ים וּשְׁתַּ֛יִם שָׁנָ֖ה יְהוֹרָ֣ם בְּמָלְכ֑וֹ וּשְׁמוֹנֶ֣ה שָׁנִ֔ים מָלַ֖ךְ בִּירוּשָׁלִָֽם׃
6 ಅಹಾಬನ ಮಗಳು ಅವನಿಗೆ ಹೆಂಡತಿಯಾಗಿದ್ದರಿಂದ ಅವನು ಅಹಾಬನ ಮನೆಯವರು ನಡೆದ ಹಾಗೆ ಇಸ್ರಾಯೇಲರ ಅರಸರ ಮಾರ್ಗವನ್ನು ಅನುಸರಿಸಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
וַיֵּ֜לֶךְ בְּדֶ֣רֶךְ ׀ מַלְכֵ֣י יִשְׂרָאֵ֗ל כַּאֲשֶׁ֤ר עָשׂוּ֙ בֵּ֣ית אַחְאָ֔ב כִּ֚י בַּת־אַחְאָ֔ב הָ֥יְתָה לּ֖וֹ אִשָּׁ֑ה וַיַּ֥עַשׂ הָרַ֖ע בְּעֵינֵ֥י יְהוָֽה׃
7 ಆದರೆ ಯೆಹೋವ ದೇವರು ದಾವೀದನಿಗೆ, “ನಿನ್ನ ಮತ್ತು ನಿನ್ನ ಸಂತಾನದವರ ದೀಪವನ್ನು ಎಂದೂ ನಂದಿಸುವುದಿಲ್ಲ,” ಎಂದು ಪ್ರಮಾಣ ಮಾಡಿದ ಕಾರಣ, ದೇವರು ದಾವೀದನ ಮನೆತನದವರನ್ನು ನಾಶಮಾಡುವುದಕ್ಕೆ ಇಷ್ಟಪಡಲಿಲ್ಲ.
וְלֹא־אָבָ֣ה יְהוָ֗ה לְהַשְׁחִית֙ אֶת־בֵּ֣ית דָּוִ֔יד לְמַ֣עַן הַבְּרִ֔ית אֲשֶׁ֥ר כָּרַ֖ת לְדָוִ֑יד וְכַאֲשֶׁ֣ר אָמַ֗ר לָתֵ֨ת ל֥וֹ נִ֛יר וּלְבָנָ֖יו כָּל־הַיָּמִֽים׃
8 ಯೆಹೋರಾಮನ ದಿನಗಳಲ್ಲಿ ಯೆಹೂದದ ಕೈಕೆಳಗಿದ್ದ ಎದೋಮ್ಯರು ತಿರುಗಿಬಿದ್ದು, ತಮ್ಮ ಅರಸನನ್ನು ತಾವೇ ನೇಮಿಸಿಕೊಂಡರು.
בְּיָמָיו֙ פָּשַׁ֣ע אֱד֔וֹם מִתַּ֖חַת יַד־יְהוּדָ֑ה וַיַּמְלִ֥יכוּ עֲלֵיהֶ֖ם מֶֽלֶךְ׃
9 ಆಗ ಯೆಹೋರಾಮನು ತನ್ನ ಪ್ರಧಾನರ ಸಂಗಡ, ಎಲ್ಲಾ ರಥಬಲವನ್ನು ತೆಗೆದುಕೊಂಡುಹೋಗಿ, ರಾತ್ರಿಯಲ್ಲಿ ಎದ್ದು, ತನ್ನನ್ನೂ, ತನ್ನ ರಥಗಳ ಅಧಿಪತಿಗಳನ್ನೂ ಸುತ್ತುವರೆದಿದ್ದ ಎದೋಮ್ಯರನ್ನು ಸೋಲಿಸಿದನು.
וַיַּֽעֲבֹ֤ר יְהוֹרָם֙ עִם־שָׂרָ֔יו וְכָל־הָרֶ֖כֶב עִמּ֑וֹ וַיְהִי֙ קָ֣ם לַ֔יְלָה וַיַּ֗ךְ אֶת־אֱדוֹם֙ הַסּוֹבֵ֣ב אֵלָ֔יו וְאֵ֖ת שָׂרֵ֥י הָרָֽכֶב׃
10 ಯೆಹೂದ್ಯರಿಗೆ ವಿರೋಧವಾಗಿ ದಂಗೆಯೆದ್ದ ಎದೋಮ್ಯರು ಅಂದಿನಿಂದ ಇಂದಿನವರೆಗೂ ಸ್ವತಂತ್ರರಾಗಿದ್ದಾರೆ. ಅದೇ ಕಾಲದಲ್ಲಿ ಯೆಹೋರಾಮನು ತನ್ನ ಪಿತೃಗಳ ದೇವರಾದ ಯೆಹೋವ ದೇವರನ್ನು ಬಿಟ್ಟುಬಿಟ್ಟದ್ದರಿಂದ ಲಿಬ್ನದವರೂ ಅವನ ಕೈಯಿಂದ ತಪ್ಪಿಸಿಕೊಂಡು ಸ್ವತಂತ್ರರಾದರು.
וַיִּפְשַׁ֨ע אֱד֜וֹם מִתַּ֣חַת יַד־יְהוּדָ֗ה עַ֚ד הַיּ֣וֹם הַזֶּ֔ה אָ֣ז תִּפְשַׁ֥ע לִבְנָ֛ה בָּעֵ֥ת הַהִ֖יא מִתַּ֣חַת יָד֑וֹ כִּ֣י עָזַ֔ב אֶת־יְהוָ֖ה אֱלֹהֵ֥י אֲבֹתָֽיו׃
11 ಅವನು ಯೆಹೂದದ ಪರ್ವತಗಳಲ್ಲಿ ಉನ್ನತ ಪೂಜಾಸ್ಥಳಗಳನ್ನು ಮಾಡಿ, ಯೆರೂಸಲೇಮಿನ ನಿವಾಸಿಗಳನ್ನು ವ್ಯಭಿಚಾರ ಮಾಡಲು ಪ್ರೇರೇಪಿಸಿ, ಹಾಗೆಯೇ ಮಾಡಲು ಯೆಹೂದದವರನ್ನು ಬಲವಂತ ಮಾಡಿದನು.
גַּם־ה֥וּא עָשָֽׂה־בָמ֖וֹת בְּהָרֵ֣י יְהוּדָ֑ה וַיֶּ֙זֶן֙ אֶת־יֹשְׁבֵ֣י יְרוּשָׁלִַ֔ם וַיַּדַּ֖ח אֶת־יְהוּדָֽה׃ פ
12 ಆದಕಾರಣ ಪ್ರವಾದಿಯಾದ ಎಲೀಯನಿಂದ ಅವನಿಗೆ ಒಂದು ಪತ್ರವು ಬಂತು. ಅದರಲ್ಲಿ ಅವನು, “ನಿನ್ನ ತಂದೆಯಾದ ದಾವೀದನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನೀನು ನಿನ್ನ ತಂದೆಯಾದ ಯೆಹೋಷಾಫಾಟನ ಮಾರ್ಗಗಳಲ್ಲಿಯೂ, ಯೆಹೂದದ ಅರಸನಾದ ಆಸನ ಮಾರ್ಗಗಳಲ್ಲಿಯೂ ನಡೆಯದೆ,
וַיָּבֹ֤א אֵלָיו֙ מִכְתָּ֔ב מֵֽאֵלִיָּ֥הוּ הַנָּבִ֖יא לֵאמֹ֑ר כֹּ֣ה ׀ אָמַ֣ר יְהוָ֗ה אֱלֹהֵי֙ דָּוִ֣יד אָבִ֔יךָ תַּ֗חַת אֲשֶׁ֤ר לֹֽא־הָלַ֙כְתָּ֙ בְּדַרְכֵי֙ יְהוֹשָׁפָ֣ט אָבִ֔יךָ וּבְדַרְכֵ֖י אָסָ֥א מֶֽלֶךְ־יְהוּדָֽה׃
13 ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದು, ಅಹಾಬನ ಮನೆಯವರು ದೇವದ್ರೋಹ ಮಾಡಿದಂತೆ, ಯೆಹೂದದವರನ್ನೂ, ಯೆರೂಸಲೇಮಿನ ನಿವಾಸಿಗಳನ್ನೂ ದ್ರೋಹ ಮಾಡಲು ಪ್ರೇರೇಪಿಸಿ, ನಿನಗಿಂತ ಉತ್ತಮರಾಗಿರುವ ನಿನ್ನ ತಂದೆಯ ಮನೆಯವರಾದ ನಿನ್ನ ಸಹೋದರರನ್ನು ಕೊಂದುಹಾಕಿದ್ದರಿಂದ,
וַתֵּ֗לֶךְ בְּדֶ֙רֶךְ֙ מַלְכֵ֣י יִשְׂרָאֵ֔ל וַתַּזְנֶ֤ה אֶת־יְהוּדָה֙ וְאֶת־יֹשְׁבֵ֣י יְרוּשָׁלִַ֔ם כְּהַזְנ֖וֹת בֵּ֣ית אַחְאָ֑ב וְגַ֨ם אֶת־אַחֶ֧יךָ בֵית־אָבִ֛יךָ הַטּוֹבִ֥ים מִמְּךָ֖ הָרָֽגְתָּ׃
14 ಯೆಹೋವ ದೇವರು ದೊಡ್ಡ ಬಾಧೆಯಿಂದ ನಿನ್ನ ಜನರನ್ನೂ, ನಿನ್ನ ಮಕ್ಕಳನ್ನೂ, ನಿನ್ನ ಹೆಂಡತಿಯರನ್ನೂ, ನಿನ್ನ ಸಮಸ್ತ ಸ್ಥಿತಿಯನ್ನೂ ಬಾಧಿಸುತ್ತಾರೆ.
הִנֵּ֣ה יְהוָ֗ה נֹגֵ֛ף מַגֵּפָ֥ה גְדוֹלָ֖ה בְּעַמֶּ֑ךָ וּבְבָנֶ֥יךָ וּבְנָשֶׁ֖יךָ וּבְכָל־רְכוּשֶֽׁךָ׃
15 ಇದಲ್ಲದೆ ದಿನದಿನಕ್ಕೆ ರೋಗ ಅನುಭವಿಸುವುದರಿಂದ ನಿನ್ನ ಕರುಳುಗಳು ಹೊರಕ್ಕೆ ಬರುವವರೆಗೆ ಕರುಳುಬೇನೆಯ ರೋಗದಿಂದ ನಿನಗೆ ಕಠಿಣರೋಗ ಬರುವುದು,’” ಎಂದು ಬರೆದಿದ್ದನು.
וְאַתָּ֛ה בָּחֳלָיִ֥ים רַבִּ֖ים בְּמַחֲלֵ֣ה מֵעֶ֑יךָ עַד־יֵצְא֤וּ מֵעֶ֙יךָ֙ מִן־הַחֹ֔לִי יָמִ֖ים עַל־יָמִֽים׃
16 ಇದಲ್ಲದೆ ಕೂಷ್ಯರ ಬಳಿಯಲ್ಲಿದ್ದ ಫಿಲಿಷ್ಟಿಯರ ಮತ್ತು ಅರಬಿಯರ ಮನಸ್ಸನ್ನು ಯೆಹೋರಾಮನಿಗೆ ವಿರೋಧವಾಗಿ ಯೆಹೋವ ದೇವರು ಎಬ್ಬಿಸಿದರು.
וַיָּ֨עַר יְהוָ֜ה עַל־יְהוֹרָ֗ם אֵ֣ת ר֤וּחַ הַפְּלִשְׁתִּים֙ וְהָ֣עַרְבִ֔ים אֲשֶׁ֖ר עַל־יַ֥ד כּוּשִֽׁים׃
17 ಆಗ ಅವರು ಯೆಹೂದದ ಮೇಲೆ ಬಂದು ಅದರಲ್ಲಿ ನುಗ್ಗಿ, ಅರಸನ ಅರಮನೆಯಲ್ಲಿ ಸಿಕ್ಕಿದ ಸಮಸ್ತ ಸ್ಥಿತಿಯನ್ನೂ, ಅವನ ಪುತ್ರರನ್ನೂ, ಅವನ ಹೆಂಡತಿಯರನ್ನೂ ತೆಗೆದುಕೊಂಡು ಹೋದರು. ಆದ್ದರಿಂದ ಅವನ ಪುತ್ರರಲ್ಲಿ ಚಿಕ್ಕವನಾದ ಯೆಹೋವಾಹಾಜನ ಹೊರತು ಅವನಿಗೆ ಪುತ್ರರು ಯಾರೂ ಉಳಿಯಲಿಲ್ಲ.
וַיַּעֲל֤וּ בִֽיהוּדָה֙ וַיִּבְקָע֔וּהָ וַיִּשְׁבּ֗וּ אֵ֤ת כָּל־הָרְכוּשׁ֙ הַנִּמְצָ֣א לְבֵית־הַמֶּ֔לֶךְ וְגַם־בָּנָ֖יו וְנָשָׁ֑יו וְלֹ֤א נִשְׁאַר־לוֹ֙ בֵּ֔ן כִּ֥י אִם־יְהוֹאָחָ֖ז קְטֹ֥ן בָּנָֽיו׃
18 ಇದೆಲ್ಲದರ ತರುವಾಯ ಯೆಹೋವ ದೇವರು ಯೆಹೋರಾಮನ ಕರುಳುಗಳಲ್ಲಿ ವಾಸಿಯಾಗಲಾರದ ರೋಗದಿಂದ ಅವನನ್ನು ಬಾಧಿಸಿದರು.
וְאַחֲרֵ֖י כָּל־זֹ֑את נְגָפ֨וֹ יְהוָ֧ה ׀ בְּמֵעָ֛יו לָחֳלִ֖י לְאֵ֥ין מַרְפֵּֽא׃
19 ಎರಡು ವರ್ಷವಾದ ತರುವಾಯ, ಅವನ ರೋಗದಿಂದ ಅವನ ಕರುಳುಗಳು ಹೊರಕ್ಕೆ ಬಂದವು. ಹೀಗೆ ಅವನು ಕಡುಬೇನೆಯಿಂದ ಸತ್ತನು. ಅವನ ಜನರು ಅವನ ಪಿತೃಗಳಿಗೆ ಗೌರವಕ್ಕೋಸ್ಕರ ಅಗ್ನಿಕುಂಡ ಹಚ್ಚಲಿಲ್ಲ.
וַיְהִ֣י לְיָמִ֣ים ׀ מִיָּמִ֡ים וּכְעֵת֩ צֵ֨את הַקֵּ֜ץ לְיָמִ֣ים שְׁנַ֗יִם יָצְא֤וּ מֵעָיו֙ עִם־חָלְי֔וֹ וַיָּ֖מָת בְּתַחֲלֻאִ֣ים רָעִ֑ים וְלֹא־עָ֨שׂוּ ל֥וֹ עַמּ֛וֹ שְׂרֵפָ֖ה כִּשְׂרֵפַ֥ת אֲבֹתָֽיו׃
20 ಯೆಹೋರಾಮ್ ಆಳಲಾರಂಭಿಸಿದಾಗ ಮೂವತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಎಂಟು ವರ್ಷ ಆಳಿದನು. ಅವನು ಮರಣಹೊಂದಿದಾಗ ಯಾರೂ ಶೋಕಿಸಲಿಲ್ಲ ಆದರೂ ಅವರು ಅವನನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಆದರೆ ಅರಸರ ಸಮಾಧಿಗಳಲ್ಲಿ ಅಲ್ಲ.
בֶּן־שְׁלֹשִׁ֤ים וּשְׁתַּ֙יִם֙ הָיָ֣ה בְמָלְכ֔וֹ וּשְׁמוֹנֶ֣ה שָׁנִ֔ים מָלַ֖ךְ בִּירוּשָׁלִָ֑ם וַיֵּ֙לֶךְ֙ בְּלֹ֣א חֶמְדָּ֔ה וַֽיִּקְבְּרֻ֙הוּ֙ בְּעִ֣יר דָּוִ֔יד וְלֹ֖א בְּקִבְר֥וֹת הַמְּלָכִֽים׃

< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 21 >