< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 17 >
1 ಆಸನ ಮಗ ಯೆಹೋಷಾಫಾಟನು ಅವನಿಗೆ ಬದಲಾಗಿ ಆಳಿದನು. ಅವನು ಇಸ್ರಾಯೇಲಿಗೆ ವಿರೋಧವಾಗಿ ತನ್ನನ್ನು ಬಲಪಡಿಸಿಕೊಂಡನು.
Un viņa dēls Jehošafats palika par ķēniņu viņa vietā un tas palika spēcīgs pret Israēli.
2 ಇದಲ್ಲದೆ ಅವನು ಯೆಹೂದದಲ್ಲಿ ಸಮಸ್ತ ಕೋಟೆಯುಳ್ಳ ಪಟ್ಟಣಗಳಲ್ಲಿ ಸೈನ್ಯವನ್ನು ಇಟ್ಟು, ಯೆಹೂದದಲ್ಲಿಟ್ಟ ಹಾಗೆ ತನ್ನ ತಂದೆಯಾದ ಆಸನು ತೆಗೆದುಕೊಂಡ ಎಫ್ರಾಯೀಮನ ಪಟ್ಟಣಗಳಲ್ಲಿ ಸೈನ್ಯಗಳನ್ನು ಇಟ್ಟನು.
Un viņš ielika karavīrus visās stiprās Jūda pilsētās un karavīrus Jūda zemē un Efraīma pilsētās, ko viņa tēvs Asa bija uzņēmis.
3 ಯೆಹೋಷಾಫಾಟನು ಬಾಳ್ ದೇವರುಗಳನ್ನು ಅನುಸರಿಸದೆ, ತನ್ನ ತಂದೆ ದಾವೀದನ ಮೊದಲಿನ ಮಾರ್ಗದಲ್ಲಿ ನಡೆದದ್ದರಿಂದ, ಯೆಹೋವ ದೇವರು ಅವನ ಸಂಗಡ ಇದ್ದರು.
Un Tas Kungs bija ar Jehošafatu, jo viņš staigāja sava tēva Dāvida pirmajos ceļos un nemeklēja Baālus.
4 ತನ್ನ ತಂದೆಯ ದೇವರನ್ನು ಹುಡುಕಿ, ಇಸ್ರಾಯೇಲಿನ ಕ್ರಿಯೆಗಳ ಪ್ರಕಾರ ನಡೆಯದೆ, ದೇವರ ಆಜ್ಞೆಗಳಲ್ಲಿ ನಡೆದನು.
Bet viņš meklēja sava tēva Dievu un staigāja Viņa baušļos un ne pēc Israēla darbiem.
5 ಆದ್ದರಿಂದ ಯೆಹೋವ ದೇವರು ರಾಜ್ಯವನ್ನು ಅವನ ಕೈಯಲ್ಲಿ ಸ್ಥಿರಪಡಿಸಿದರು. ಯೆಹೂದವೆಲ್ಲವೂ ಯೆಹೋಷಾಫಾಟನಿಗೆ ಕಾಣಿಕೆಯನ್ನು ಕೊಟ್ಟದ್ದರಿಂದ, ಅವನಿಗೆ ಐಶ್ವರ್ಯವೂ, ಘನತೆಯೂ ಅಧಿಕವಾಯಿತು.
Tāpēc Tas Kungs apstiprināja to valstību viņa rokā, un visa Jūda valsts deva Jehošafatam dāvanas, un tam bija bagātības un godības papilnam.
6 ಅವನ ಹೃದಯವು ಯೆಹೋವ ದೇವರ ಮಾರ್ಗಗಳಲ್ಲಿ ಸಮರ್ಪಿತವಾಗಿತ್ತು. ಇದಲ್ಲದೆ ಅವನು ಯೆಹೂದದಲ್ಲಿದ್ದ ಉನ್ನತ ಪೂಜಾಸ್ಥಳಗಳನ್ನೂ, ಅಶೇರ ವಿಗ್ರಹ ಸ್ತಂಭಗಳನ್ನೂ ತೆಗೆದುಹಾಕಿದನು.
Un viņa sirds pieņēmās Tā Kunga ceļos, un viņš nopostīja vēl elku kalnus un Ašeras no Jūda.
7 ಅವನ ಆಳಿಕೆಯ ಮೂರನೆಯ ವರ್ಷದಲ್ಲಿ ಅವನು ತನ್ನ ಪ್ರಧಾನರಾದ ಬೆನ್ಹೈಲನನ್ನೂ, ಓಬದ್ಯನನ್ನೂ, ಜೆಕರ್ಯನನ್ನೂ, ನೆತನೆಯೇಲನನ್ನೂ, ಮೀಕಾಯನನ್ನೂ ಯೆಹೂದದ ಪಟ್ಟಣಗಳಲ್ಲಿ ಬೋಧಿಸಲು ಕರೆಕಳುಹಿಸಿದನು.
Un savas valdīšanas trešā gadā viņš sūtīja savus lielkungus, Benkaēlu un Obadiju un Zahariju un Nataneēli un Mikaju, mācīt Jūdu pilsētās.
8 ಅವರ ಸಂಗಡ ಲೇವಿಯರಾದ ಶೆಮಾಯನನ್ನೂ, ನೆತನ್ಯನನ್ನೂ, ಜೆಬದ್ಯನನ್ನೂ, ಅಸಾಯೇಲನನ್ನೂ, ಶೆಮೀರಾಮೋತನನ್ನೂ, ಯೆಹೋನಾತಾನನನ್ನೂ, ಅದೋನೀಯನನ್ನೂ, ಟೋಬೀಯನನ್ನೂ, ಟೋಬದೋನಿಯನನ್ನೂ, ಇವರ ಸಂಗಡ ಯಾಜಕರಾದ ಎಲೀಷಾಮನನ್ನೂ, ಯೆಹೋರಾಮನನ್ನೂ ಕಳುಹಿಸಿದನು.
Un ar tiem bija tie Leviti Šemaja un Neanija un Zebadija un Azaēls un Zemiramots un Jonatāns un Adonija un Tobija un TobAdonija, Leviti, un ar tiem Elišamus un Jorams, priesteri.
9 ಇವರು ಯೆಹೂದದಲ್ಲಿ ಬೋಧಿಸಿದರು. ಅವರ ಬಳಿಯಲ್ಲಿ ಯೆಹೋವ ದೇವರ ನಿಯಮದ ಗ್ರಂಥ ಇತ್ತು. ಯೆಹೂದದ ಸಮಸ್ತ ಪಟ್ಟಣಗಳನ್ನು ಸಂಚರಿಸಿ, ಜನರಿಗೆ ಬೋಧಿಸಿದರು.
Un tie mācīja Jūdā, un Tā Kunga bauslības grāmata tiem bija līdz, un tie gāja apkārt visās Jūda pilsētās un mācīja ļaudis.
10 ಯೆಹೋವ ದೇವರ ಭಯವು ಯೆಹೂದದ ಸುತ್ತಲಿರುವ ದೇಶಗಳ ಸಮಸ್ತ ರಾಜ್ಯಗಳ ಮೇಲೆ ಇದ್ದುದರಿಂದ, ಅವರು ಯೆಹೋಷಾಫಾಟನ ಮೇಲೆ ಯುದ್ಧಮಾಡಲಿಲ್ಲ.
Un bailes priekš Tā Kunga bija pār visām zemes valstīm apkārt ap Jūdu, ka tie pret Jehošafatu nekaroja.
11 ಇದಲ್ಲದೆ ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಗಳನ್ನೂ, ಕಪ್ಪದ ಹಣವನ್ನು ತಂದರು. ಅರಬಿಯ ದೇಶದವರು ತಮ್ಮ ಮಂದೆಗಳಿಂದ ಏಳು ಸಾವಿರದ ಏಳು ನೂರು ಟಗರುಗಳನ್ನೂ, ಏಳು ಸಾವಿರದ ಏಳು ನೂರು ಹೋತಗಳನ್ನೂ ತಂದರು.
Un no Fīlistiem Jehošafatam atnesa dāvanas, pulka sudraba. Un Arābi viņam deva sīkus lopus septiņtūkstoš un septiņsimt aunus un septiņtūkstoš un septiņsimt āžus.
12 ಯೆಹೋಷಾಫಾಟನು ಬರಬರುತ್ತಾ ಬಹಳ ಅಭಿವೃದ್ಧಿಯಾಗಿ ಯೆಹೂದದಲ್ಲಿ ಅರಮನೆಗಳನ್ನೂ, ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.
Un Jehošafats arvienu auga lielā augumā un uzcēla Jūdā pilis un labības pilsētas.
13 ಇದಲ್ಲದೆ ಯೆಹೂದದ ಪಟ್ಟಣಗಳಲ್ಲಿ ದವಸ ಧಾನ್ಯಗಳ ದೊಡ್ಡ ಮಳಿಗೆಯನ್ನು ಕಟ್ಟಿದನು. ಪರಾಕ್ರಮಶಾಲಿಗಳಾದ ಯುದ್ಧವೀರರು ಯೆರೂಸಲೇಮಿನಲ್ಲಿದ್ದರು.
Un viņam bija daudz mantas Jūda pilsētās un varen stipri karavīri Jeruzālemē.
14 ತಮ್ಮ ಪಿತೃಗಳ ಮನೆಯ ಪ್ರಕಾರವಾಗಿರುವ ಅವರ ಲೆಕ್ಕವೇನೆಂದರೆ: ಯೆಹೂದದ 1,000 ಅಧಿಪತಿಗಳಲ್ಲಿ ಅದ್ನಾನು ಮುಖ್ಯಸ್ಥನಾಗಿದ್ದನು. ಅವನ ಸಂಗಡ ಪರಾಕ್ರಮಶಾಲಿಗಳು 3,00,000 ಮಂದಿ ಇದ್ದರು.
Un tā tie tapa skaitīti pēc viņu tēvu namiem: Jūdā bija virsnieki pār tūkstošiem: virsnieks Adnus, un tam bija trīs simt tūkstoš kara vīri.
15 ಅವನ ತರುವಾಯ ಅಧಿಪತಿಯಾದ ಯೆಹೋಹಾನಾನನು; ಅವನ ಸಂಗಡ 2,80,000 ಮಂದಿಯು.
Viņam blakām bija virsnieks Johanans, un tam bija divsimt astoņdesmit tūkstoši.
16 ಇವನ ತರುವಾಯ ಯೆಹೋವ ದೇವರಿಗೆ ತನ್ನನ್ನು ಮನಃಪೂರ್ವಕವಾಗಿ ಒಪ್ಪಿಸಿದ ಜಿಕ್ರಿಯ ಮಗನಾದ ಅಮಸ್ಯನು; ಅವನ ಸಂಗಡ 2,00,000 ಮಂದಿ ಪರಾಕ್ರಮಶಾಲಿಗಳು.
Un tam blakām bija Amasija, Sihrus dēls, kas ar labu prātu Tam Kungam bija nodevies, un tam bija divsimt tūkstoš kara vīri.
17 ಬೆನ್ಯಾಮೀನ್ಯರಲ್ಲಿ ಪರಾಕ್ರಮಶಾಲಿಯಾದ ಎಲ್ಯಾದ; ಇವನ ಸಂಗಡ ಬಿಲ್ಲನ್ನೂ, ಗುರಾಣಿಯನ್ನೂ ಧರಿಸಿಕೊಂಡಿರುವ 2,00,000 ಮಂದಿಯು.
Un no Benjamina bija Elijadus, kara varonis, un tam bija divsimt tūkstoši ar stopiem un priekšturamām bruņām.
18 ಇವನ ತರುವಾಯ ಯೆಹೋಜಾಬಾದನು; ಅವನ ಸಂಗಡ ಯುದ್ಧಕ್ಕೆ ಸಿದ್ಧವಾಗಿರುವ 1,80,000 ಮಂದಿಯು.
Un tam blakām bija Jozabads, un tam bija simts astoņdesmit tūkstoši uz karu gatavi.
19 ಅರಸನಿಂದ ಸಮಸ್ತ ಯೆಹೂದದಲ್ಲಿರುವ ಕೋಟೆಯುಳ್ಳ ಪಟ್ಟಣಗಳಲ್ಲಿ ಇದ್ದವರ ಹೊರತಾಗಿ, ಇವರು ಅರಸನ ಬಳಿಯಲ್ಲಿ ಸೇವೆಮಾಡುತ್ತಿದ್ದರು.
Šie kalpoja ķēniņam, bez tiem, ko ķēniņš bija ielicis stiprās pilsētās pa visu Jūdu.