< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 14 >

1 ಅಬೀಯನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು, ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಆಸನು ಅವನಿಗೆ ಬದಲಾಗಿ ಅರಸನಾದನು, ಅವನ ದಿವಸಗಳಲ್ಲಿ ಹತ್ತು ವರ್ಷ ದೇಶವು ಶಾಂತವಾಗಿತ್ತು.
וַיִּשְׁכַּ֨ב אֲבִיָּ֜ה עִם־אֲבֹתָ֗יו וַיִּקְבְּר֤וּ אֹתֹו֙ בְּעִ֣יר דָּוִ֔יד וַיִּמְלֹ֛ךְ אָסָ֥א בְנֹ֖ו תַּחְתָּ֑יו בְּיָמָ֛יו שָׁקְטָ֥ה הָאָ֖רֶץ עֶ֥שֶׂר שָׁנִֽים׃ פ
2 ಆಸನು ತನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನೂ, ಸರಿಯಾದದ್ದನ್ನೂ ಮಾಡಿದನು.
וַיַּ֤עַשׂ אָסָא֙ הַטֹּ֣וב וְהַיָּשָׁ֔ר בְּעֵינֵ֖י יְהוָ֥ה אֱלֹהָֽיו׃
3 ಅವನು ಅನ್ಯದೇವರುಗಳ ಬಲಿಪೀಠಗಳನ್ನೂ, ಉನ್ನತ ಪೂಜಾಸ್ಥಳಗಳನ್ನೂ ತೆಗೆದುಹಾಕಿ, ವಿಗ್ರಹಗಳನ್ನು ಒಡೆದುಬಿಟ್ಟು, ಅವುಗಳ ಅಶೇರ ಸ್ತಂಭಗಳನ್ನು ಕಡಿದುಹಾಕಿದನು.
וַיָּ֛סַר אֶת־מִזְבְּחֹ֥ות הַנֵּכָ֖ר וְהַבָּמֹ֑ות וַיְשַׁבֵּר֙ אֶת־הַמַּצֵּבֹ֔ות וַיְגַדַּ֖ע אֶת־הָאֲשֵׁרִֽים׃
4 ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಹುಡುಕಲೂ, ನಿಯಮವನ್ನೂ, ಆಜ್ಞೆಯನ್ನೂ ಕೈಗೊಳ್ಳಲು ಯೆಹೂದ್ಯರಿಗೆ ಆಜ್ಞಾಪಿಸಿದನು.
וַיֹּ֙אמֶר֙ לִֽיהוּדָ֔ה לִדְרֹ֕ושׁ אֶת־יְהוָ֖ה אֱלֹהֵ֣י אֲבֹותֵיהֶ֑ם וְלַעֲשֹׂ֖ות הַתֹּורָ֥ה וְהַמִּצְוָֽה׃
5 ಇದಲ್ಲದೆ ಅವನು ಉನ್ನತ ಪೂಜಾಸ್ಥಳಗಳನ್ನೂ, ವಿಗ್ರಹಗಳನ್ನೂ ಯೆಹೂದದ ಸಮಸ್ತ ಪಟ್ಟಣಗಳಿಂದ ತೆಗೆದುಹಾಕಿದನು. ರಾಜ್ಯವು ಶಾಂತವಾಗಿತ್ತು.
וַיָּ֙סַר֙ מִכָּל־עָרֵ֣י יְהוּדָ֔ה אֶת־הַבָּמֹ֖ות וְאֶת־הַֽחַמָּנִ֑ים וַתִּשְׁקֹ֥ט הַמַּמְלָכָ֖ה לְפָנָֽיו׃
6 ಇದಲ್ಲದೆ ಅವನು ಯೆಹೂದದಲ್ಲಿ ಕೋಟೆಗಳುಳ್ಳ ಪಟ್ಟಣಗಳನ್ನು ಕಟ್ಟಿದನು. ಏಕೆಂದರೆ ದೇಶವು ಶಾಂತವಾಗಿತ್ತು. ಯೆಹೋವ ದೇವರು ಅವನಿಗೆ ವಿಶ್ರಾಂತಿ ಕೊಟ್ಟದ್ದರಿಂದ ಆ ವರ್ಷಗಳಲ್ಲಿ ಅವನಿಗೆ ಯುದ್ಧವಿರಲಿಲ್ಲ.
וַיִּ֛בֶן עָרֵ֥י מְצוּרָ֖ה בִּיהוּדָ֑ה כִּֽי־שָׁקְטָ֣ה הָאָ֗רֶץ וְאֵין־עִמֹּ֤ו מִלְחָמָה֙ בַּשָּׁנִ֣ים הָאֵ֔לֶּה כִּֽי־הֵנִ֥יחַ יְהוָ֖ה לֹֽו׃
7 ಅವನು ಯೆಹೂದದವರಿಗೆ, “ದೇಶವು ನಮ್ಮ ಮುಂದೆ ಇರುವಾಗ ಈ ಪಟ್ಟಣಗಳನ್ನು ಕಟ್ಟಿ, ಅವುಗಳ ಸುತ್ತಲೂ ಗೋಡೆಗಳನ್ನೂ, ಗೋಪುರಗಳನ್ನೂ, ಬಾಗಿಲುಗಳನ್ನೂ, ಅಗುಳಿಗಳನ್ನೂ ಮಾಡೋಣ. ಏಕೆಂದರೆ ನಾವು ನಮ್ಮ ದೇವರಾದ ಯೆಹೋವ ದೇವರನ್ನು ಹುಡುಕಿದೆವು. ನಾವು ಅವರನ್ನು ಹುಡುಕಿದ್ದರಿಂದ ಅವರು ಎಲ್ಲಾ ಕಡೆಯಲ್ಲಿಯೂ ನಮಗೆ ವಿಶ್ರಾಂತಿಯನ್ನು ಕೊಟ್ಟಿದ್ದಾರೆ,” ಎಂದನು. ಹಾಗೆಯೇ ಅವರು ಸೈನ್ಯವನ್ನು ಕಟ್ಟಿ ವೃದ್ಧಿಹೊಂದಿದರು.
וַיֹּ֨אמֶר לִֽיהוּדָ֜ה נִבְנֶ֣ה ׀ אֶת־הֶעָרִ֣ים הָאֵ֗לֶּה וְנָסֵ֨ב חֹומָ֣ה וּמִגְדָּלִים֮ דְּלָתַ֣יִם וּבְרִיחִים֒ עֹודֶ֨נּוּ הָאָ֜רֶץ לְפָנֵ֗ינוּ כִּ֤י דָרַ֙שְׁנוּ֙ אֶת־יְהוָ֣ה אֱלֹהֵ֔ינוּ דָּרַ֕שְׁנוּ וַיָּ֥נַֽח לָ֖נוּ מִסָּבִ֑יב וַיִּבְנ֖וּ וַיַּצְלִֽיחוּ׃ פ
8 ಇದಲ್ಲದೆ ಆಸನಿಗೆ ದೊಡ್ಡ ಗುರಾಣಿಗಳನ್ನೂ, ಈಟಿಗಳನ್ನೂ ಹಿಡಿಯುವ ಸೈನ್ಯವಿತ್ತು. ಯೆಹೂದದವರು ಮೂರು ಲಕ್ಷ ಮಂದಿಯೂ, ಬೆನ್ಯಾಮೀನವರಲ್ಲಿ ಚಿಕ್ಕ ಗುರಾಣಿಗಳನ್ನು ಹಿಡಿಯುವ, ಬಿಲ್ಲುಗಳನ್ನು ಎಸೆಯುವ ಎರಡು ಲಕ್ಷದ ಎಂಬತ್ತು ಸಾವಿರ ಮಂದಿಯೂ ಇದ್ದರು. ಇವರೆಲ್ಲರು ಪರಾಕ್ರಮಶಾಲಿ ಯುದ್ಧವೀರರಾಗಿದ್ದರು.
וַיְהִ֣י לְאָסָ֗א חַיִל֮ נֹשֵׂ֣א צִנָּ֣ה וָרֹמַח֒ מִֽיהוּדָה֙ שְׁלֹ֣שׁ מֵאֹ֣ות אֶ֔לֶף ס וּמִבִּנְיָמִ֗ן נֹשְׂאֵ֤י מָגֵן֙ וְדֹ֣רְכֵי קֶ֔שֶׁת מָאתַ֥יִם וּשְׁמֹונִ֖ים אָ֑לֶף כָּל־אֵ֖לֶּה גִּבֹּ֥ורֵי חָֽיִל׃
9 ಆದರೆ ಕೂಷ್ಯನಾದ ಜೆರಹನು ಅವರಿಗೆ ವಿರೋಧವಾಗಿ ಹೊರಟು, ಮಾರೇಷಾದ ಮಟ್ಟಿಗೂ ಬಂದನು. ಅವನ ಸಂಗಡ ಹತ್ತು ಲಕ್ಷ ಜನ ಯುದ್ಧವೀರರೂ, ಮುನ್ನೂರು ರಥಗಳೂ ಇದ್ದವು.
וַיֵּצֵ֨א אֲלֵיהֶ֜ם זֶ֣רַח הַכּוּשִׁ֗י בְּחַ֙יִל֙ אֶ֣לֶף אֲלָפִ֔ים וּמַרְכָּבֹ֖ות שְׁלֹ֣שׁ מֵאֹ֑ות וַיָּבֹ֖א עַד־מָרֵשָֽׁה׃
10 ಆಸನು ಅವನಿಗೆದುರಾಗಿ ಹೊರಟುಹೋದನು. ಮಾರೇಷಾದ ಬಳಿಯಲ್ಲಿ ಚೆಫಾತಾದ ತಗ್ಗಿನಲ್ಲಿ ವ್ಯೂಹ ಕಟ್ಟಿದರು.
וַיֵּצֵ֥א אָסָ֖א לְפָנָ֑יו וַיַּֽעַרְכוּ֙ מִלְחָמָ֔ה בְּגֵ֥יא צְפַ֖תָה לְמָרֵשָֽׁה׃
11 ಆಗ ಆಸನು ತನ್ನ ದೇವರಾದ ಯೆಹೋವ ದೇವರನ್ನು ಪ್ರಾರ್ಥಿಸಿ, “ಯೆಹೋವ ದೇವರೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯ ಕೊಡುವುದು ನಿಮಗೆ ಏನೂ ಅಲ್ಲ. ನಮ್ಮ ದೇವರಾದ ಯೆಹೋವ ದೇವರೇ, ನಮಗೆ ಸಹಾಯಮಾಡಿರಿ. ಏಕೆಂದರೆ ನಾವು ನಿಮ್ಮ ಮೇಲೆ ಆತುಕೊಂಡಿದ್ದೇವೆ. ನಿಮ್ಮ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ. ಯೆಹೋವ ದೇವರೇ, ನೀವೇ ನಮ್ಮ ದೇವರು. ಮನುಷ್ಯನು ನಿಮ್ಮೆದುರಿನಲ್ಲಿ ಬಲಗೊಳ್ಳದಿರಲಿ,” ಎಂದನು.
וַיִּקְרָ֨א אָסָ֜א אֶל־יְהוָ֣ה אֱלֹהָיו֮ וַיֹּאמַר֒ יְהוָ֗ה אֵֽין־עִמְּךָ֤ לַעְזֹור֙ בֵּ֥ין רַב֙ לְאֵ֣ין כֹּ֔חַ עָזְרֵ֜נוּ יְהוָ֤ה אֱלֹהֵ֙ינוּ֙ כִּֽי־עָלֶ֣יךָ נִשְׁעַ֔נּוּ וּבְשִׁמְךָ֣ בָ֔אנוּ עַל־הֶהָמֹ֖ון הַזֶּ֑ה יְהוָ֤ה אֱלֹהֵ֙ינוּ֙ אַ֔תָּה אַל־יַעְצֹ֥ר עִמְּךָ֖ אֱנֹֽושׁ׃ ס
12 ಆಗ ಯೆಹೋವ ದೇವರು ಕೂಷ್ಯರನ್ನು ಆಸನ ಮುಂದೆಯೂ, ಯೆಹೂದದವರ ಮುಂದೆಯೂ ಸೋಲುವಂತೆ ಮಾಡಿದರು. ಆದ್ದರಿಂದ ಕೂಷ್ಯರು ಓಡಿಹೋದರು.
וַיִּגֹּ֤ף יְהוָה֙ אֶת־הַכּוּשִׁ֔ים לִפְנֵ֥י אָסָ֖א וְלִפְנֵ֣י יְהוּדָ֑ה וַיָּנֻ֖סוּ הַכּוּשִֽׁים׃
13 ಆಗ ಆಸನೂ, ಅವನ ಸಂಗಡ ಇದ್ದ ಜನರೂ ಅವರನ್ನು ಗೆರಾರಿನವರೆಗೂ ಹಿಂದಟ್ಟಿದರು. ಹೆಚ್ಚಿನ ಸಂಖ್ಯೆಯಲ್ಲಿ ಕೂಷ್ಯರು ಸೋತುಹೋದರು. ಅವರು ಯೆಹೋವ ದೇವರ ಮುಂದೆಯೂ, ಅವರ ಸೈನ್ಯದ ಮುಂದೆಯೂ ನಾಶವಾದರು. ಯೆಹೂದ್ಯರು ಬಹು ಕೊಳ್ಳೆಯನ್ನು ಒಯ್ದರು.
וַיִּרְדְּפֵ֨ם אָסָ֜א וְהָעָ֣ם אֲשֶׁר־עִמֹּו֮ עַד־לִגְרָר֒ וַיִּפֹּ֤ל מִכּוּשִׁים֙ לְאֵ֣ין לָהֶ֣ם מִֽחְיָ֔ה כִּֽי־נִשְׁבְּר֥וּ לִפְנֵֽי־יְהוָ֖ה וְלִפְנֵ֣י מַחֲנֵ֑הוּ וַיִּשְׂא֥וּ שָׁלָ֖ל הַרְבֵּ֥ה מְאֹֽד׃
14 ಇದಲ್ಲದೆ ಅವರು ಗೆರಾರಿನ ಸುತ್ತಲಿರುವ ಸಮಸ್ತ ಪಟ್ಟಣಗಳನ್ನು ವಶಪಡಿಸಿಕೊಂಡರು. ಯೆಹೋವ ದೇವರ ಭಯವು ಅವರ ಮೇಲೆ ಇತ್ತು. ಆ ಪಟ್ಟಣಗಳಲ್ಲಿ ಬಹು ಕೊಳ್ಳೆ ಇದ್ದುದರಿಂದ, ಅವುಗಳನ್ನೆಲ್ಲಾ ವಶಪಡಿಸಿಕೊಂಡರು.
וַיַּכּ֗וּ אֵ֤ת כָּל־הֶֽעָרִים֙ סְבִיבֹ֣ות גְּרָ֔ר כִּי־הָיָ֥ה פַֽחַד־יְהוָ֖ה עֲלֵיהֶ֑ם וַיָּבֹ֙זּוּ֙ אֶת־כָּל־הֶ֣עָרִ֔ים כִּֽי־בִזָּ֥ה רַבָּ֖ה הָיְתָ֥ה בָהֶֽם׃
15 ಪಶುಗಳಿದ್ದ ಡೇರೆಗಳನ್ನೂ, ಕುರಿಗಳನ್ನೂ, ಒಂಟೆಗಳನ್ನೂ ಬಹಳವಾಗಿ ತೆಗೆದುಕೊಂಡು ಯೆರೂಸಲೇಮಿಗೆ ತಿರುಗಿ ಬಂದರು.
וְגַם־אָהֳלֵ֥י מִקְנֶ֖ה הִכּ֑וּ וַיִּשְׁבּ֨וּ צֹ֤אן לָרֹב֙ וּגְמַלִּ֔ים וַיָּשֻׁ֖בוּ יְרוּשָׁלָֽ͏ִם׃ ס

< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 14 >