< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 13 >

1 ಅರಸನಾದ ಯಾರೊಬ್ಬಾಮನ ಆಳಿಕೆಯ ಹದಿನೆಂಟನೆಯ ವರ್ಷದಲ್ಲಿ ಅಬೀಯನು ಯೆಹೂದದ ಅರಸನಾಗಿ,
בִּשְׁנַ֛ת שְׁמוֹנֶ֥ה עֶשְׂרֵ֖ה לַמֶּ֣לֶךְ יָרָבְעָ֑ם וַיִּמְלֹ֥ךְ אֲבִיָּ֖ה עַל־יְהוּדָֽה׃
2 ಯೆರೂಸಲೇಮಿನಲ್ಲಿ ಮೂರು ವರ್ಷ ಆಳಿದನು. ಅವನ ತಾಯಿಯ ಹೆಸರು ಮೀಕಾಯ, ಇವಳು ಗಿಬೆಯದ ಉರಿಯೇಲನ ಮಗಳು. ಅಬೀಯನಿಗೂ, ಯಾರೊಬ್ಬಾಮನಿಗೂ ಯುದ್ಧ ಉಂಟಾಗಿತ್ತು.
שָׁל֣וֹשׁ שָׁנִ֗ים מָלַךְ֙ בִּיר֣וּשָׁלִַ֔ם וְשֵׁ֣ם אִמּ֔וֹ מִיכָיָ֥הוּ בַת־אוּרִיאֵ֖ל מִן־גִּבְעָ֑ה וּמִלְחָמָ֥ה הָיְתָ֛ה בֵּ֥ין אֲבִיָּ֖ה וּבֵ֥ין יָרָבְעָֽם׃
3 ಆಗ ಅಬೀಯನು ಯುದ್ಧಭಟರಾದ ಪರಾಕ್ರಮಶಾಲಿಗಳ ಸೈನ್ಯವನ್ನು ಯುದ್ಧಕ್ಕೆ ಸಿದ್ಧಮಾಡಿದನು. ಆಯ್ಕೆಯಾದ ನಾಲ್ಕು ಲಕ್ಷ ಜನರಿದ್ದರು. ಯಾರೊಬ್ಬಾಮನು ಅವನಿಗೆ ಎದುರಾಗಿ ಎಂಟು ಲಕ್ಷಮಂದಿ ಆಯ್ಕೆಯಾದ ಪರಾಕ್ರಮಶಾಲಿಗಳನ್ನು ಯುದ್ಧಕ್ಕೆ ನಿಲ್ಲಿಸಿದನು.
וַיֶּאְסֹ֨ר אֲבִיָּ֜ה אֶת־הַמִּלְחָמָ֗ה בְּחַ֙יִל֙ גִּבּוֹרֵ֣י מִלְחָמָ֔ה אַרְבַּע־מֵא֥וֹת אֶ֖לֶף אִ֣ישׁ בָּח֑וּר ס וְיָרָבְעָ֗ם עָרַ֤ךְ עִמּוֹ֙ מִלְחָמָ֔ה בִּשְׁמוֹנֶ֨ה מֵא֥וֹת אֶ֛לֶף אִ֥ישׁ בָּח֖וּר גִּבּ֥וֹר חָֽיִל׃ ס
4 ಆಗ ಅಬೀಯನು ಎಫ್ರಾಯೀಮ್ ಬೆಟ್ಟದಲ್ಲಿರುವ ಚೆಮಾರಯಿಮ್ ಎಂಬ ಬೆಟ್ಟದ ಮೇಲೆ ನಿಂತು, “ಯಾರೊಬ್ಬಾಮನೇ, ಸಮಸ್ತ ಇಸ್ರಾಯೇಲರೇ, ನನ್ನ ಮಾತು ಕೇಳಿರಿ.
וַיָּ֣קָם אֲבִיָּ֗ה מֵעַל֙ לְהַ֣ר צְמָרַ֔יִם אֲשֶׁ֖ר בְּהַ֣ר אֶפְרָ֑יִם וַיֹּ֕אמֶר שְׁמָע֖וּנִי יָרָבְעָ֥ם וְכָל־יִשְׂרָאֵֽל׃
5 ಇಸ್ರಾಯೇಲಿನ ದೇವರಾದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ರಾಜ್ಯವನ್ನು ಎಂದೆಂದಿಗೂ ದಾವೀದನಿಗೂ, ಅವನ ವಂಶದವರಿಗೂ ಉಪ್ಪಿನ ಒಡಂಬಡಿಕೆಯಿಂದ ಕೊಟ್ಟರೆಂದು ನಿಮಗೆ ಗೊತ್ತಿಲ್ಲವೋ.
הֲלֹ֤א לָכֶם֙ לָדַ֔עַת כִּ֞י יְהוָ֣ה ׀ אֱלֹהֵ֣י יִשְׂרָאֵ֗ל נָתַ֨ן מַמְלָכָ֧ה לְדָוִ֛יד עַל־יִשְׂרָאֵ֖ל לְעוֹלָ֑ם ל֥וֹ וּלְבָנָ֖יו בְּרִ֥ית מֶֽלַח׃ ס
6 ಆದರೆ ದಾವೀದನ ಮಗ ಸೊಲೊಮೋನನ ಸೇವಕನಾಗಿದ್ದ ನೆಬಾಟನ ಮಗ ಯಾರೊಬ್ಬಾಮನು ತನ್ನ ಯಜಮಾನನ ಮೇಲೆ ತಿರುಗಿಬಿದ್ದನು.
וַיָּ֙קָם֙ יָרָבְעָ֣ם בֶּן־נְבָ֔ט עֶ֖בֶד שְׁלֹמֹ֣ה בֶן־דָּוִ֑יד וַיִּמְרֹ֖ד עַל־אֲדֹנָֽיו׃
7 ಇದಲ್ಲದೆ ನಿಷ್ಪ್ರಯೋಜಕರಾದ ದುಷ್ಟರು ಅವನ ಬಳಿಗೆ ಕೂಡಿಬಂದು, ಸೊಲೊಮೋನನ ಮಗ ರೆಹಬ್ಬಾಮನು ಎಳೆಯ ಪ್ರಾಯದವನೂ, ನಿರ್ಣಯಿಸಲಾಗದವನೂ ಅವರನ್ನು ಎದುರಿಸಲು ಬಲವಿಲ್ಲದವನೂ ಆಗಿರುವುದರಿಂದ ಅವನಿಗೆ ವಿರೋಧವಾಗಿ ತಮ್ಮನ್ನು ಬಲಪಡಿಸಿಕೊಂಡರು.
וַיִּקָּבְצ֣וּ עָלָ֗יו אֲנָשִׁ֤ים רֵקִים֙ בְּנֵ֣י בְלִיַּ֔עַל וַיִּֽתְאַמְּצ֖וּ עַל־רְחַבְעָ֣ם בֶּן־שְׁלֹמֹ֑ה וּרְחַבְעָ֗ם הָ֤יָה נַ֙עַר֙ וְרַךְ־לֵבָ֔ב וְלֹ֥א הִתְחַזַּ֖ק לִפְנֵיהֶֽם׃
8 “ಈಗ ದಾವೀದನ ವಂಶಜರ ಕೈಯಲ್ಲಿರುವ ಯೆಹೋವ ದೇವರ ರಾಜ್ಯವನ್ನು ಎದುರಿಸುತ್ತೇವೆಂದು ನೀವು ಹೇಳಿಕೊಳ್ಳುತ್ತೀರಿ. ಇದಲ್ಲದೆ ನೀವು ಬಹು ಗುಂಪಾಗಿದ್ದೀರಿ. ಯಾರೊಬ್ಬಾಮನು ದೇವರುಗಳಾಗಿ ನಿಮಗೆ ಮಾಡಿದ ಬಂಗಾರದ ಕರುಗಳು ನಿಮ್ಮಲ್ಲಿ ಉಂಟು.
וְעַתָּ֣ה ׀ אַתֶּ֣ם אֹֽמְרִ֗ים לְהִתְחַזֵּק֙ לִפְנֵי֙ מַמְלֶ֣כֶת יְהוָ֔ה בְּיַ֖ד בְּנֵ֣י דָוִ֑יד וְאַתֶּם֙ הָמ֣וֹן רָ֔ב וְעִמָּכֶם֙ עֶגְלֵ֣י זָהָ֔ב אֲשֶׁ֨ר עָשָׂ֥ה לָכֶ֛ם יָרָבְעָ֖ם לֵאלֹהִֽים׃
9 ನೀವು ಯೆಹೋವ ದೇವರ ಯಾಜಕರಾದ ಆರೋನನ ವಂಶದವರಾದ ಲೇವಿಯರನ್ನೂ ತಳ್ಳಿ ಹಾಕಿ, ಅನ್ಯದೇಶಗಳ ಜನರಂತೆ ನಿಮಗೆ ಯಾಜಕರನ್ನು ಮಾಡಿಕೊಳ್ಳಲಿಲ್ಲವೋ? ಯಾವನಾದರೂ ದನದ ಮರಿಯಾದ ಹೋರಿಯನ್ನೂ, ಏಳು ಟಗರುಗಳನ್ನೂ ತೆಗೆದುಕೊಂಡು ಬಂದು, ತನ್ನನ್ನು ಪ್ರತಿಷ್ಠೆ ಮಾಡಿದರೆ ಅವನು ದೇವರಲ್ಲದವುಗಳಿಗೆ ಯಾಜಕನಾಗಿರುವನಷ್ಟೇ.
הֲלֹ֤א הִדַּחְתֶּם֙ אֶת־כֹּהֲנֵ֣י יְהוָ֔ה אֶת־בְּנֵ֥י אַהֲרֹ֖ן וְהַלְוִיִּ֑ם וַתַּעֲשׂ֨וּ לָכֶ֤ם כֹּהֲנִים֙ כְּעַמֵּ֣י הָאֲרָצ֔וֹת כָּל־הַבָּ֗א לְמַלֵּ֨א יָד֜וֹ בְּפַ֤ר בֶּן־בָּקָר֙ וְאֵילִ֣ם שִׁבְעָ֔ה וְהָיָ֥ה כֹהֵ֖ן לְלֹ֥א אֱלֹהִֽים׃ ס
10 “ನಮಗಾದರೋ ಯೆಹೋವ ದೇವರು ದೇವರಾಗಿದ್ದಾರೆ. ನಾವು ಅವರನ್ನು ಬಿಡಲಿಲ್ಲ. ಇದಲ್ಲದೆ ಯೆಹೋವ ದೇವರಿಗೆ ಸೇವೆ ಮಾಡುವ ಯಾಜಕರು ಆರೋನನ ಮಕ್ಕಳು. ಲೇವಿಯರು ಅವರಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು.
וַאֲנַ֛חְנוּ יְהוָ֥ה אֱלֹהֵ֖ינוּ וְלֹ֣א עֲזַבְנֻ֑הוּ וְכֹ֨הֲנִ֜ים מְשָׁרְתִ֤ים לַֽיהוָה֙ בְּנֵ֣י אַהֲרֹ֔ן וְהַלְוִיִּ֖ם בַּמְלָֽאכֶת׃
11 ಅವರು ಪ್ರತಿ ಉದಯದಲ್ಲಿಯೂ, ಪ್ರತಿ ಸಾಯಂಕಾಲದಲ್ಲಿಯೂ ಯೆಹೋವ ದೇವರಿಗೆ ದಹನಬಲಿಗಳನ್ನೂ, ಸುಗಂಧ ಧೂಪವನ್ನೂ ಸುಡುತ್ತಾರೆ. ಇದಲ್ಲದೆ ಪರಿಶುದ್ಧ ಮೇಜಿನ ಮೇಲೆ ರೊಟ್ಟಿಗಳನ್ನು ಇಡುತ್ತಾ, ಪ್ರತಿ ಸಾಯಂಕಾಲದಲ್ಲಿ ಬಂಗಾರದ ದೀಪಸ್ತಂಭವನ್ನೂ, ಅದರ ದೀಪಗಳನ್ನೂ ಸಿದ್ಧಮಾಡಿ ಹಚ್ಚುತ್ತಾ ಇರುತ್ತಾರೆ. ನಾವು ನಮ್ಮ ದೇವರಾದ ಯೆಹೋವ ದೇವರ ಕಟ್ಟಳೆಯನ್ನು ಕೈಗೊಳ್ಳುತ್ತೇವೆ, ಆದರೆ ನೀವು ಅವರನ್ನು ಬಿಟ್ಟಿದ್ದೀರಿ.
וּמַקְטִרִ֣ים לַיהוָ֡ה עֹל֣וֹת בַּבֹּֽקֶר־בַּבֹּ֣קֶר וּבָעֶֽרֶב־בָּעֶ֣רֶב וּקְטֹֽרֶת־סַמִּים֩ וּמַעֲרֶ֨כֶת לֶ֜חֶם עַל־הַשֻּׁלְחָ֣ן הַטָּה֗וֹר וּמְנוֹרַ֨ת הַזָּהָ֤ב וְנֵרֹתֶ֙יהָ֙ לְבָעֵר֙ בָּעֶ֣רֶב בָּעֶ֔רֶב כִּֽי־שֹׁמְרִ֣ים אֲנַ֔חְנוּ אֶת־מִשְׁמֶ֖רֶת יְהוָ֣ה אֱלֹהֵ֑ינוּ וְאַתֶּ֖ם עֲזַבְתֶּ֥ם אֹתֽוֹ׃
12 ದೇವರು ತಾವೇ ಅಧಿಪತಿಯಾಗಿ ನಮ್ಮ ಸಂಗಡ ಇದ್ದಾರೆ. ಇದಲ್ಲದೆ ನಿಮಗೆ ವಿರೋಧವಾಗಿ ಜಯಧ್ವನಿ ಮಾಡುವ ತುತೂರಿಗಳನ್ನು ಹಿಡಿದುಕೊಂಡ ಅವರ ಯಾಜಕರು ನಮಗಿದ್ದಾರೆ. ಇಸ್ರಾಯೇಲರೇ, ನೀವು ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಯುದ್ಧಮಾಡಬೇಡಿರಿ. ನೀವು ಜಯಹೊಂದುವುದಿಲ್ಲ,” ಎಂದನು.
וְהִנֵּה֩ עִמָּ֨נוּ בָרֹ֜אשׁ הָאֱלֹהִ֧ים ׀ וְכֹהֲנָ֛יו וַחֲצֹצְר֥וֹת הַתְּרוּעָ֖ה לְהָרִ֣יעַ עֲלֵיכֶ֑ם בְּנֵ֣י יִשְׂרָאֵ֗ל אַל־תִּלָּֽחֲמ֛וּ עִם־יְהוָ֥ה אֱלֹהֵֽי־אֲבֹתֵיכֶ֖ם כִּי־לֹ֥א תַצְלִֽיחוּ׃
13 ಆದರೆ ಯಾರೊಬ್ಬಾಮನು ಅಡಗಿಕೊಂಡವರನ್ನು ಸುತ್ತಲೂ ಅವರ ಹಿಂದೆ ಬರಮಾಡಿದನು. ಆದ್ದರಿಂದ ಇಸ್ರಾಯೇಲರು ಯೆಹೂದದವರ ಮುಂದೆಯೂ, ಅವರ ಹಿಂದೆಯೂ ಬಂದರು.
וְיָֽרָבְעָ֗ם הֵסֵב֙ אֶת־הַמַּאְרָ֔ב לָב֖וֹא מֵֽאַחֲרֵיהֶ֑ם וַיִּֽהְיוּ֙ לִפְנֵ֣י יְהוּדָ֔ה וְהַמַּאְרָ֖ב מֵאַחֲרֵיהֶֽם׃
14 ಯೆಹೂದದವರು ಹಿಂದಕ್ಕೆ ನೋಡಿದಾಗ, ಯುದ್ಧವು ಅವರ ಮುಂದೆಯೂ ಹಿಂದೆಯೂ ಇತ್ತು. ಆಗ ಯೆಹೋವ ದೇವರಿಗೆ ಅವರು ಮೊರೆಯಿಟ್ಟರು. ಯಾಜಕರು ತುತೂರಿಗಳನ್ನು ಊದಿದರು.
וַיִּפְנ֣וּ יְהוּדָ֗ה וְהִנֵּ֨ה לָהֶ֤ם הַמִּלְחָמָה֙ פָּנִ֣ים וְאָח֔וֹר וַֽיִּצְעֲק֖וּ לַיהוָ֑ה וְהַכֹּ֣הֲנִ֔ים מַחְצְרִ֖ים בַּחֲצֹצְרֽוֹת׃
15 ಆಗ ಯೆಹೂದ್ಯರು ಆರ್ಭಟಿಸಿದರು. ಯೆಹೂದ್ಯರು ಆರ್ಭಟಿಸಿದಾಗ, ದೇವರು ಅಬೀಯನ ಮತ್ತು ಯೆಹೂದದವರ ಮುಂದೆ ಯಾರೊಬ್ಬಾಮನನ್ನೂ, ಸಮಸ್ತ ಇಸ್ರಾಯೇಲರನ್ನೂ ಅಪಜಯಗೊಳಿಸಿದರು.
וַיָּרִ֖יעוּ אִ֣ישׁ יְהוּדָ֑ה וַיְהִ֗י בְּהָרִ֙יעַ֙ אִ֣ישׁ יְהוּדָ֔ה וְהָאֱלֹהִ֗ים נָגַ֤ף אֶת־יָֽרָבְעָם֙ וְכָל־יִשְׂרָאֵ֔ל לִפְנֵ֥י אֲבִיָּ֖ה וִיהוּדָֽה׃
16 ಇಸ್ರಾಯೇಲರು ಯೆಹೂದದವರ ಎದುರಿನಿಂದ ಓಡಿಹೋದರು. ಹೀಗೆ ದೇವರು ಇಸ್ರಾಯೇಲರನ್ನು ಯೆಹೂದದವರ ಕೈಯಲ್ಲಿ ಒಪ್ಪಿಸಿದರು.
וַיָּנ֥וּסוּ בְנֵי־יִשְׂרָאֵ֖ל מִפְּנֵ֣י יְהוּדָ֑ה וַיִּתְּנֵ֥ם אֱלֹהִ֖ים בְּיָדָֽם׃
17 ಅಬೀಯನೂ, ಅವನ ಜನರೂ ಅವರಲ್ಲಿ ಬಹಳ ಮಂದಿಯನ್ನು ಹತಮಾಡಿದರು. ಇಸ್ರಾಯೇಲರಲ್ಲಿ ಐದು ಲಕ್ಷಮಂದಿ ಬಲಶಾಲಿಗಳಾದ ಸೈನಿಕರು ಹತರಾದರು.
וַיַּכּ֥וּ בָהֶ֛ם אֲבִיָּ֥ה וְעַמּ֖וֹ מַכָּ֣ה רַבָּ֑ה וַיִּפְּל֤וּ חֲלָלִים֙ מִיִּשְׂרָאֵ֔ל חֲמֵשׁ־מֵא֥וֹת אֶ֖לֶף אִ֥ישׁ בָּחֽוּר׃
18 ಹೀಗೆ ಆ ಕಾಲದಲ್ಲಿ ಇಸ್ರಾಯೇಲರು ತಗ್ಗಿಹೋದರು. ಆದರೆ ಯೆಹೂದದವರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರ ಮೇಲೆ ಆತುಕೊಂಡದ್ದರಿಂದ ಜಯ ಹೊಂದಿದರು.
וַיִּכָּנְע֥וּ בְנֵי־יִשְׂרָאֵ֖ל בָּעֵ֣ת הַהִ֑יא וַיֶּֽאֶמְצוּ֙ בְּנֵ֣י יְהוּדָ֔ה כִּ֣י נִשְׁעֲנ֔וּ עַל־יְהוָ֖ה אֱלֹהֵ֥י אֲבוֹתֵיהֶֽם׃
19 ಅಬೀಯನು ಯಾರೊಬ್ಬಾಮನನ್ನು ಹಿಂದಟ್ಟಿ ಅವನಿಂದ ಬೇತೇಲ್, ಯೆಷಾನಾ, ಎಫ್ರೋನ್ ಎಂಬ ಪಟ್ಟಣಗಳನ್ನೂ, ಅವುಗಳ ಗ್ರಾಮಗಳನ್ನೂ ವಶಪಡಿಸಿಕೊಂಡನು.
וַיִּרְדֹּ֣ף אֲבִיָּה֮ אַחֲרֵ֣י יָרָבְעָם֒ וַיִּלְכֹּ֤ד מִמֶּ֙נּוּ֙ עָרִ֔ים אֶת־בֵּֽית־אֵל֙ וְאֶת־בְּנוֹתֶ֔יהָ וְאֶת־יְשָׁנָ֖ה וְאֶת־בְּנוֹתֶ֑יהָ וְאֶת־עֶפְרַ֖יִן וּבְנֹתֶֽיהָ׃
20 ಯಾರೊಬ್ಬಾಮನು ಅಬೀಯನ ಜೀವಮಾನದಲ್ಲಿ ತಿರುಗಿ ಬಲಗೊಳ್ಳಲಿಲ್ಲ. ಯೆಹೋವ ದೇವರ ಶಿಕ್ಷೆಯಿಂದ ಯಾರೊಬ್ಬಾಮನು ಸತ್ತನು.
וְלֹֽא־עָצַ֧ר כֹּֽחַ־יָרָבְעָ֛ם ע֖וֹד בִּימֵ֣י אֲבִיָּ֑הוּ וַיִּגְּפֵ֥הוּ יְהוָ֖ה וַיָּמֹֽת׃ פ
21 ಅಬೀಯನು ಪ್ರಬಲನಾದನು. ಅವನಿಗೆ ಹದಿನಾಲ್ಕು ಮಂದಿ ಹೆಂಡತಿಯರೂ, ಇಪ್ಪತ್ತೆರಡು ಮಂದಿ ಪುತ್ರರೂ, ಹದಿನಾರು ಮಂದಿ ಪುತ್ರಿಯರೂ ಇದ್ದರು.
וַיִּתְחַזֵּ֣ק אֲבִיָּ֔הוּ וַיִּ֨שָּׂא־ל֔וֹ נָשִׁ֖ים אַרְבַּ֣ע עֶשְׂרֵ֑ה וַיּ֗וֹלֶד עֶשְׂרִ֤ים וּשְׁנַ֙יִם֙ בָּנִ֔ים וְשֵׁ֥שׁ עֶשְׂרֵ֖ה בָּנֽוֹת׃ ס
22 ಅಬೀಯನ ಮಿಕ್ಕಾದ ಕ್ರಿಯೆಗಳೂ, ಅವನ ನಡೆನುಡಿಗಳ ಮಾತುಗಳೂ ಪ್ರವಾದಿಯಾದ ಇದ್ದೋವನ ವರ್ತಮಾನಗಳಲ್ಲಿ ಬರೆದಿರುತ್ತವೆ.
וְיֶ֙תֶר֙ דִּבְרֵ֣י אֲבִיָּ֔ה וּדְרָכָ֖יו וּדְבָרָ֑יו כְּתוּבִ֕ים בְּמִדְרַ֖שׁ הַנָּבִ֥יא עִדּֽוֹ׃

< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 13 >