< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 12 >

1 ರೆಹಬ್ಬಾಮನು ರಾಜ್ಯವನ್ನು ಸ್ಥಿರಮಾಡಿ ತನ್ನನ್ನು ಬಲಪಡಿಸಿಕೊಂಡಾಗ, ಅವನೂ, ಅವನ ಸಂಗಡ ಸಮಸ್ತ ಇಸ್ರಾಯೇಲರೂ ಯೆಹೋವ ದೇವರ ನಿಯಮವನ್ನು ಬಿಟ್ಟುಬಿಟ್ಟರು.
וַיְהִ֗י כְּהָכִ֞ין מַלְכ֤וּת רְחַבְעָם֙ וּכְחֶזְקָתֹ֔ו עָזַ֖ב אֶת־תֹּורַ֣ת יְהוָ֑ה וְכָל־יִשְׂרָאֵ֖ל עִמֹּֽו׃ פ
2 ಅವರು ಯೆಹೋವ ದೇವರಿಗೆ ವಿಶ್ವಾಸದ್ರೋಹಮಾಡಿದ್ದರಿಂದ, ರೆಹಬ್ಬಾಮನು ಅರಸನಾದ ಐದನೆಯ ವರ್ಷದಲ್ಲಿ ಈಜಿಪ್ಟ್ ಅರಸನಾದ ಶೀಶಕನು ಯೆರೂಸಲೇಮಿನ ಮೇಲೆ ದಾಳಿಮಾಡಿದನು.
וַיְהִ֞י בַּשָּׁנָ֤ה הַֽחֲמִישִׁית֙ לַמֶּ֣לֶךְ רְחַבְעָ֔ם עָלָ֛ה שִׁישַׁ֥ק מֶֽלֶךְ־מִצְרַ֖יִם עַל־יְרוּשָׁלָ֑͏ִם כִּ֥י מָעֲל֖וּ בַּיהוָֽה׃
3 ಅವನ ಸಂಗಡ ಸಾವಿರದ ಇನ್ನೂರು ರಥಗಳೂ, ಅರವತ್ತು ಸಾವಿರ ರಾಹುತರೂ ಇದ್ದರು. ಇದಲ್ಲದೆ ತನ್ನ ಸಂಗಡ ಈಜಿಪ್ಟಿನಿಂದ ಬಂದ ಲಿಬಿಯದವರೂ, ಸುಕ್ಕೀಯರೂ, ಕೂಷ್ಯರೂ ಲೆಕ್ಕವಿಲ್ಲದಷ್ಟು ಬಂದರು.
בְּאֶ֤לֶף וּמָאתַ֙יִם֙ רֶ֔כֶב וּבְשִׁשִּׁ֥ים אֶ֖לֶף פָּרָשִׁ֑ים וְאֵ֣ין מִסְפָּ֗ר לָעָ֞ם אֲשֶׁר־בָּ֤אוּ עִמֹּו֙ מִמִּצְרַ֔יִם לוּבִ֥ים סֻכִּיִּ֖ים וְכוּשִֽׁים׃
4 ಅವನು ಯೆಹೂದಕ್ಕೆ ಇದ್ದ ಕೋಟೆಯುಳ್ಳ ಪಟ್ಟಣಗಳನ್ನು ಹಿಡಿದು ಯೆರೂಸಲೇಮಿಗೆ ಬಂದನು.
וַיִּלְכֹּ֛ד אֶת־עָרֵ֥י הַמְּצֻרֹ֖ות אֲשֶׁ֣ר לִֽיהוּדָ֑ה וַיָּבֹ֖א עַד־יְרוּשָׁלָֽ͏ִם׃ ס
5 ಆಗ ಪ್ರವಾದಿಯಾದ ಶೆಮಾಯನು ರೆಹಬ್ಬಾಮನ ಬಳಿಗೂ, ಶೀಶಕನ ನಿಮಿತ್ತ ಯೆರೂಸಲೇಮಿನಲ್ಲಿ ಕೂಡಿಕೊಂಡ ಯೆಹೂದದ ಪ್ರಧಾನರ ಬಳಿಗೂ ಬಂದು ಅವರಿಗೆ, “ನೀವು ನನ್ನನ್ನು ಬಿಟ್ಟುಬಿಟ್ಟದ್ದರಿಂದ ನಾನು ನಿಮ್ಮನ್ನು ಶೀಶಕನ ಕೈಯಲ್ಲಿ ಕೊಟ್ಟುಬಿಟ್ಟೆನೆಂದು ಯೆಹೋವ ದೇವರು ನಿಮಗೆ ಹೇಳುತ್ತಾರೆ,” ಎಂದನು.
וּֽשְׁמַֽעְיָ֤ה הַנָּבִיא֙ בָּ֣א אֶל־רְחַבְעָ֔ם וְשָׂרֵ֣י יְהוּדָ֔ה אֲשֶׁר־נֶאֶסְפ֥וּ אֶל־יְרוּשָׁלַ֖͏ִם מִפְּנֵ֣י שִׁישָׁ֑ק וַיֹּ֨אמֶר לָהֶ֜ם כֹּה־אָמַ֣ר יְהוָ֗ה אַתֶּם֙ עֲזַבְתֶּ֣ם אֹתִ֔י וְאַף־אֲנִ֛י עָזַ֥בְתִּי אֶתְכֶ֖ם בְּיַד־שִׁישָֽׁק׃
6 ಆದ್ದರಿಂದ ಇಸ್ರಾಯೇಲಿನ ಪ್ರಧಾನರೂ, ಅರಸನೂ ತಮ್ಮನ್ನು ತಗ್ಗಿಸಿಕೊಂಡು, “ಯೆಹೋವ ದೇವರು ನೀತಿವಂತರು,” ಎಂದರು.
וַיִּכָּנְע֥וּ שָׂרֵֽי־יִשְׂרָאֵ֖ל וְהַמֶּ֑לֶךְ וַיֹּאמְר֖וּ צַדִּ֥יק ׀ יְהוָֽה׃
7 ಅವರು ತಮ್ಮನ್ನು ತಗ್ಗಿಸಿಕೊಂಡದ್ದನ್ನು ಯೆಹೋವ ದೇವರು ನೋಡಿದಾಗ, ಯೆಹೋವ ದೇವರ ವಾಕ್ಯವು ಶೆಮಾಯನಿಗೆ ಉಂಟಾಗಿ, “ಅವರು ತಮ್ಮನ್ನು ತಗ್ಗಿಸಿಕೊಂಡದ್ದರಿಂದ ನಾನು ಅವರನ್ನು ನಾಶಮಾಡದೆ, ಅವರು ತಪ್ಪಿಸಿಕೊಳ್ಳುವಂತೆ ಮಾಡುವೆನು. ಶೀಶಕನ ಮುಖಾಂತರ ನನ್ನ ಕೋಪವನ್ನು ಯೆರೂಸಲೇಮಿನ ಮೇಲೆ ಸುರಿದುಬಿಡುವುದಿಲ್ಲ.
וּבִרְאֹ֤ות יְהוָה֙ כִּ֣י נִכְנָ֔עוּ הָיָה֩ דְבַר־יְהוָה֙ אֶל־שְׁמַֽעְיָ֧ה ׀ לֵאמֹ֛ר נִכְנְע֖וּ לֹ֣א אַשְׁחִיתֵ֑ם וְנָתַתִּ֨י לָהֶ֤ם כִּמְעַט֙ לִפְלֵיטָ֔ה וְלֹא־תִתַּ֧ךְ חֲמָתִ֛י בִּירוּשָׁלַ֖͏ִם בְּיַד־שִׁישָֽׁק׃
8 ಆದರೂ ಅವರು ನನ್ನ ಸೇವೆಗೂ, ದೇಶಗಳ ಅರಸರ ಸೇವೆಗೂ ಇರುವ ವ್ಯತ್ಯಾಸವನ್ನು ಇವರು ತಿಳಿಯುವ ಹಾಗೆ ಅವನಿಗೆ ಸೇವಕರಾಗುವರು,” ಎಂದು ಹೇಳಿದನು.
כִּ֥י יִהְיוּ־לֹ֖ו לַעֲבָדִ֑ים וְיֵדְעוּ֙ עֲבֹ֣ודָתִ֔י וַעֲבֹודַ֖ת מַמְלְכֹ֥ות הָאֲרָצֹֽות׃ ס
9 ಈಜಿಪ್ಟಿನ ಅರಸನಾದ ಶೀಶಕನು ಯೆರೂಸಲೇಮಿನ ಮೇಲೆ ದಾಳಿಮಾಡಿ ಯೆಹೋವ ದೇವರ ಆಲಯ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ದೋಚಿಕೊಂಡನು, ಇದಲ್ಲದೆ ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನು ಒಳಗೊಂಡಂತೆ ಅವನು ಸಮಸ್ತವನ್ನೂ ದೋಚಿಕೊಂಡು ಹೋದನು.
וַיַּ֨עַל שִׁישַׁ֥ק מֶֽלֶךְ־מִצְרַיִם֮ עַל־יְרוּשָׁלַ͏ִם֒ וַיִּקַּ֞ח אֶת־אֹצְרֹ֣ות בֵּית־יְהוָ֗ה וְאֶת־אֹֽצְרֹות֙ בֵּ֣ית הַמֶּ֔לֶךְ אֶת־הַכֹּ֖ל לָקָ֑ח וַיִּקַּח֙ אֶת־מָגִנֵּ֣י הַזָּהָ֔ב אֲשֶׁ֥ר עָשָׂ֖ה שְׁלֹמֹֽה׃
10 ಆದಕಾರಣ ಅರಸನಾದ ರೆಹಬ್ಬಾಮನು ಅವುಗಳಿಗೆ ಬದಲಾಗಿ ಕಂಚಿನ ಗುರಾಣಿಗಳನ್ನು ಮಾಡಿಸಿ, ಅವುಗಳನ್ನು ಅರಮನೆಯ ಪ್ರವೇಶದ್ವಾರದ ಕರ್ತವ್ಯದಲ್ಲಿದ್ದ ಕಾವಲುಗಾರರ ಅಧಿಪತಿಗಳ ಕೈಯಲ್ಲಿ ಒಪ್ಪಿಸಿದನು.
וַיַּ֨עַשׂ הַמֶּ֤לֶךְ רְחַבְעָם֙ תַּחְתֵּיהֶ֔ם מָגִנֵּ֖י נְחֹ֑שֶׁת וְהִפְקִ֗יד עַל־יַד֙ שָׂרֵ֣י הָרָצִ֔ים הַשֹּׁ֣מְרִ֔ים פֶּ֖תַח בֵּ֥ית הַמֶּֽלֶךְ׃
11 ಅರಸನು ಯೆಹೋವ ದೇವರ ಆಲಯಕ್ಕೆ ಹೋಗುವಾಗಲೆಲ್ಲಾ, ಕಾವಲುಗಾರರು ಅವುಗಳನ್ನು ಎತ್ತಿಕೊಂಡು ಬರುತ್ತಿದ್ದರು. ಅಲ್ಲಿಂದ ಹಿಂದಕ್ಕೆ ಬಂದ ನಂತರ ಕಾವಲಿನ ಚಾವಡಿಗೆ ತರುತ್ತಿದ್ದರು.
וַיְהִ֛י מִדֵּי־בֹ֥וא הַמֶּ֖לֶךְ בֵּ֣ית יְהוָ֑ה בָּ֤אוּ הָרָצִים֙ וּנְשָׂא֔וּם וֶהֱשִׁב֖וּם אֶל־תָּ֥א הָרָצִֽים׃
12 ರೆಹಬ್ಬಾಮನು ತನ್ನನ್ನು ತಗ್ಗಿಸಿಕೊಂಡಾಗ, ಯೆಹೋವ ದೇವರ ಕೋಪವು ಅವನನ್ನು ಬಿಟ್ಟು ತಿರುಗಿತು. ಆತನು ಪೂರ್ಣವಾಗಿ ನಾಶಮಾಡಲಿಲ್ಲ. ಯೆಹೂದದಲ್ಲಿ ಸಹ ಕೆಲವು ಕಾರ್ಯಗಳು ಸುಲಕ್ಷಣಗಳು ಕಂಡುಬಂದವು.
וּבְהִכָּֽנְעֹ֗ו שָׁ֤ב מִמֶּ֙נּוּ֙ אַף־יְהוָ֔ה וְלֹ֥א לְהַשְׁחִ֖ית לְכָלָ֑ה וְגַם֙ בִּֽיהוּדָ֔ה הָיָ֖ה דְּבָרִ֥ים טֹובִֽים׃ ס
13 ಅರಸನಾದ ರೆಹಬ್ಬಾಮನು ಯೆರೂಸಲೇಮಿನಲ್ಲಿ ತನ್ನನ್ನು ಬಲಪಡಿಸಿಕೊಂಡು ರಾಜ್ಯವನ್ನು ಆಳಿದನು. ರೆಹಬ್ಬಾಮನು ಆಳಲು ಆರಂಭಿಸಿದಾಗ, ನಲವತ್ತೊಂದು ವರ್ಷದವನಾಗಿದ್ದು, ಅಲ್ಲಿ ಯೆಹೋವ ದೇವರು ತಮ್ಮ ಹೆಸರಿಗೋಸ್ಕರ ಇಸ್ರಾಯೇಲಿನ ಸಮಸ್ತ ಗೋತ್ರಗಳಲ್ಲಿ ಆಯ್ದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ಹದಿನೇಳು ವರ್ಷ ಆಳಿದನು. ಅಮ್ಮೋನಿಯಳಾದ ಅವನ ತಾಯಿಯ ಹೆಸರು ನಯಮಾ.
וַיִּתְחַזֵּ֞ק הַמֶּ֧לֶךְ רְחַבְעָ֛ם בִּירוּשָׁלַ֖͏ִם וַיִּמְלֹ֑ךְ כִּ֣י בֶן־אַרְבָּעִ֣ים וְאַחַ֣ת שָׁנָה֩ רְחַבְעָ֨ם בְּמָלְכֹ֜ו וּֽשֲׁבַ֨ע עֶשְׂרֵ֥ה שָׁנָ֣ה ׀ מָלַ֣ךְ בִּֽירוּשָׁלַ֗͏ִם הָ֠עִיר אֲשֶׁר־בָּחַ֨ר יְהוָ֜ה לָשׂ֨וּם אֶת־שְׁמֹ֥ו שָׁם֙ מִכֹּל֙ שִׁבְטֵ֣י יִשְׂרָאֵ֔ל וְשֵׁ֣ם אִמֹּ֔ו נַעֲמָ֖ה הָֽעַמֹּנִֽית׃
14 ಅವನು ಯೆಹೋವ ದೇವರನ್ನು ಹುಡುಕಲು ತನ್ನ ಹೃದಯವನ್ನು ಸ್ಥಿರಪಡಿಸದೆ ಇದ್ದುದರಿಂದ, ಕೆಟ್ಟದ್ದನ್ನು ಮಾಡಿದನು.
וַיַּ֖עַשׂ הָרָ֑ע כִּ֣י לֹ֤א הֵכִין֙ לִבֹּ֔ו לִדְרֹ֖ושׁ אֶת־יְהוָֽה׃ ס
15 ರೆಹಬ್ಬಾಮನು ಅರಸನಾಗಿದ್ದಾಗ ತನ್ನ ಆಳ್ವಿಕೆಯ ಮೊದಲಿನಿಂದ ಕಡೆಯವರೆಗೆ ಮಾಡಿದ ಕಾರ್ಯಗಳು ಪ್ರವಾದಿಯಾದ ಶೆಮಾಯನ ಪುಸ್ತಕದಲ್ಲಿಯೂ, ವಂಶಾವಳಿಗಳನ್ನು ಕುರಿತು ಬರೆದ ದರ್ಶಿಯಾದ ಇದ್ದೋವನ ಪುಸ್ತಕದಲ್ಲಿಯೂ ಬರೆದಿರುತ್ತವೆ. ಇದಲ್ಲದೆ ರೆಹಬ್ಬಾಮನಿಗೂ, ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧಗಳಾಗುತ್ತಿದ್ದವು.
וְדִבְרֵ֣י רְחַבְעָ֗ם הָרִאשֹׁנִים֙ וְהָאֲ֣חַרֹונִ֔ים הֲלֹא־הֵ֨ם כְּתוּבִ֜ים בְּדִבְרֵ֨י שְׁמַֽעְיָ֧ה הַנָּבִ֛יא וְעִדֹּ֥ו הַחֹזֶ֖ה לְהִתְיַחֵ֑שׂ וּמִלְחֲמֹ֧ות רְחַבְעָ֛ם וְיָרָבְעָ֖ם כָּל־הַיָּמִֽים׃
16 ರೆಹಬ್ಬಾಮನು ಮೃತನಾಗಿ ತನ್ನ ಪಿತೃಗಳ ಬಳಿ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಅಬೀಯನು ಅವನಿಗೆ ಬದಲಾಗಿ ಅರಸನಾದನು.
וַיִּשְׁכַּ֤ב רְחַבְעָם֙ עִם־אֲבֹתָ֔יו וַיִּקָּבֵ֖ר בְּעִ֣יר דָּוִ֑יד וַיִּמְלֹ֛ךְ אֲבִיָּ֥ה בְנֹ֖ו תַּחְתָּֽיו׃ פ

< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 12 >