< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 11 >

1 ರೆಹಬ್ಬಾಮನು ಯೆರೂಸಲೇಮಿಗೆ ಬಂದ ತರುವಾಯ, ರಾಜ್ಯವನ್ನು ತಿರುಗಿ ಪಡೆಯುವ ಹಾಗೆ ಇಸ್ರಾಯೇಲಿಗೆ ವಿರೋಧವಾಗಿ ಯುದ್ಧಮಾಡಲು, ಯೆಹೂದ ಮತ್ತು ಬೆನ್ಯಾಮೀನವರ ಕುಟುಂಬಗಳಿಂದ 1,80,000 ಸಮರ್ಥ ಸೈನಿಕರನ್ನು ಆಯ್ದುಕೊಂಡು ಒಟ್ಟುಗೂಡಿಸಿದನು.
וַיָּבֹ֣א רְחַבְעָם֮ יְרוּשָׁלַ͏ִם֒ וַיַּקְהֵל֩ אֶת־בֵּ֨ית יְהוּדָ֜ה וּבִנְיָמִ֗ן מֵאָ֨ה וּשְׁמֹונִ֥ים אֶ֛לֶף בָּח֖וּר עֹשֵׂ֣ה מִלְחָמָ֑ה לְהִלָּחֵם֙ עִם־יִשְׂרָאֵ֔ל לְהָשִׁ֥יב אֶת־הַמַּמְלָכָ֖ה לִרְחַבְעָֽם׃ פ
2 ಆದರೆ ಯೆಹೋವ ದೇವರ ವಾಕ್ಯವು ದೇವರ ಮನುಷ್ಯನಾಗಿರುವ ಶೆಮಾಯನಿಗೆ ಉಂಟಾಗಿ,
וַיְהִי֙ דְּבַר־יְהוָ֔ה אֶל־שְׁמַֽעְיָ֥הוּ אִישׁ־הָאֱלֹהִ֖ים לֵאמֹֽר׃
3 “ನೀನು ಯೆಹೂದದ ಅರಸನಾದ ಸೊಲೊಮೋನನ ಮಗನಾಗಿರುವ ರೆಹಬ್ಬಾಮನಿಗೂ, ಯೆಹೂದ ಬೆನ್ಯಾಮೀನರಲ್ಲಿರುವ ಸಮಸ್ತ ಇಸ್ರಾಯೇಲರಿಗೂ ಹೇಳಬೇಕಾದದ್ದೇನೆಂದರೆ,
אֱמֹ֕ר אֶל־רְחַבְעָ֥ם בֶּן־שְׁלֹמֹ֖ה מֶ֣לֶךְ יְהוּדָ֑ה וְאֶל֙ כָּל־יִשְׂרָאֵ֔ל בִּיהוּדָ֥ה וּבִנְיָמִ֖ן לֵאמֹֽר׃
4 ‘ನೀವು ನಿಮ್ಮ ಸಹೋದರರಿಗೆ ವಿರೋಧವಾಗಿ ಯುದ್ಧಮಾಡಲು ಹೋಗಬೇಡಿರಿ. ಪ್ರತಿ ಮನುಷ್ಯನು ತನ್ನ ಮನೆಗೆ ಹಿಂದಿರುಗಲಿ. ಏಕೆಂದರೆ ಈ ಕಾರ್ಯವು ತಮ್ಮಿಂದ ಉಂಟಾಯಿತೆಂದು ಯೆಹೋವ ದೇವರು ಹೇಳುತ್ತಾರೆ,’” ಎಂದನು. ಆದ್ದರಿಂದ ಅವರು ಯೆಹೋವ ದೇವರ ವಾಕ್ಯವನ್ನು ಕೇಳಿ, ಯಾರೊಬ್ಬಾಮನ ಮೇಲೆ ಹೋಗದೆ ಹಿಂದಿರುಗಿ ಹೋದರು.
כֹּ֣ה אָמַ֣ר יְהוָ֡ה לֹא־תַעֲלוּ֩ וְלֹא־תִלָּ֨חֲמ֜וּ עִם־אֲחֵיכֶ֗ם שׁ֚וּבוּ אִ֣ישׁ לְבֵיתֹ֔ו כִּ֧י מֵֽאִתִּ֛י נִהְיָ֖ה הַדָּבָ֣ר הַזֶּ֑ה וַֽיִּשְׁמְעוּ֙ אֶת־דִּבְרֵ֣י יְהוָ֔ה וַיָּשֻׁ֖בוּ מִלֶּ֥כֶת אֶל־יָרָבְעָֽם׃ פ
5 ರೆಹಬ್ಬಾಮನು ಯೆರೂಸಲೇಮಿನಲ್ಲಿ ವಾಸಮಾಡಿ, ಯೆಹೂದದಲ್ಲಿ ಕೋಟೆಯುಳ್ಳ ಪಟ್ಟಣಗಳನ್ನು ಕಟ್ಟಿಸಿದನು.
וַיֵּ֥שֶׁב רְחַבְעָ֖ם בִּירוּשָׁלָ֑͏ִם וַיִּ֧בֶן עָרִ֛ים לְמָצֹ֖ור בִּיהוּדָֽה׃
6 ಅವನು ಬೇತ್ಲೆಹೇಮನ್ನೂ, ಏಟಾಮನ್ನೂ, ತೆಕೋವನ್ನೂ,
וַיִּ֧בֶן אֶת־בֵּֽית־לֶ֛חֶם וְאֶת־עֵיטָ֖ם וְאֶת־תְּקֹֽועַ׃
7 ಬೇತ್ ಚೂರ್ ಪಟ್ಯಣವನ್ನೂ, ಸೋಕೋನನ್ನೂ, ಅದುಲ್ಲಾಮನ್ನೂ,
וְאֶת־בֵּֽית־צ֥וּר וְאֶת־שֹׂוכֹ֖ו וְאֶת־עֲדֻלָּֽם׃
8 ಗತ್ ಊರನ್ನೂ ಮಾರೇಷಾವನ್ನೂ ಜೀಫನ್ನೂ,
וְאֶת־גַּ֥ת וְאֶת־מָרֵשָׁ֖ה וְאֶת־זִֽיף׃
9 ಅದೋರೈಮನ್ನೂ, ಲಾಕೀಷನ್ನೂ, ಅಜೇಕವನ್ನೂ,
וְאֶת־אֲדֹורַ֥יִם וְאֶת־לָכִ֖ישׁ וְאֶת־עֲזֵקָֽה׃
10 ಚೊರ್ಗವನ್ನೂ, ಅಯ್ಯಾಲೋನನ್ನೂ, ಹೆಬ್ರೋನನ್ನೂ ಕಟ್ಟಿಸಿದನು. ಇವು ಯೆಹೂದದಲ್ಲಿಯೂ, ಬೆನ್ಯಾಮೀನರಲ್ಲಿಯೂ ಕೋಟೆಯುಳ್ಳ ಪಟ್ಟಣಗಳಾಗಿವೆ.
וְאֶת־צָרְעָה֙ וְאֶת־אַיָּלֹ֔ון וְאֶת־חֶבְרֹ֔ון אֲשֶׁ֥ר בִּיהוּדָ֖ה וּבְבִנְיָמִ֑ן עָרֵ֖י מְצֻרֹֽות׃
11 ಇದಲ್ಲದೆ ಅವನು ಕೋಟೆಗಳನ್ನು ಬಲಪಡಿಸಿ, ಅವುಗಳಲ್ಲಿ ನಾಯಕರನ್ನೂ, ಆಹಾರ, ಎಣ್ಣೆ, ದ್ರಾಕ್ಷಾರಸ ಇರುವ ಉಗ್ರಾಣಗಳನ್ನೂ ಇಟ್ಟನು.
וַיְחַזֵּ֖ק אֶת־הַמְּצֻרֹ֑ות וַיִּתֵּ֤ן בָּהֶם֙ נְגִידִ֔ים וְאֹצְרֹ֥ות מַאֲכָ֖ל וְשֶׁ֥מֶן וָיָֽיִן׃
12 ಪ್ರತಿ ಪಟ್ಟಣದಲ್ಲಿ ಖೇಡ್ಯಗಳನ್ನೂ, ಈಟಿಗಳನ್ನೂ ಇಟ್ಟು ಯೆಹೂದ ಬೆನ್ಯಾಮೀನವರು ಅವನ ಕಡೆ ಇದ್ದುದರಿಂದ, ಅವುಗಳನ್ನು ಭದ್ರಪಡಿಸಿದನು.
וּבְכָל־עִ֤יר וָעִיר֙ צִנֹּ֣ות וּרְמָחִ֔ים וַֽיְחַזְּקֵ֖ם לְהַרְבֵּ֣ה מְאֹ֑ד וַיְהִי־לֹ֖ו יְהוּדָ֥ה וּבִנְיָמִֽן׃ ס
13 ಸಮಸ್ತ ಇಸ್ರಾಯೇಲಿನಲ್ಲಿದ್ದ ಯಾಜಕರೂ, ಲೇವಿಯರೂ ತಮ್ಮ ಸಮಸ್ತ ಪ್ರಾಂತಗಳಿಂದ ಅವನ ಬಳಿಗೆ ಪುನಃ ಬಂದರು.
וְהַכֹּהֲנִים֙ וְהַלְוִיִּ֔ם אֲשֶׁ֖ר בְּכָל־יִשְׂרָאֵ֑ל הִֽתְיַצְּב֥וּ עָלָ֖יו מִכָּל־גְּבוּלָֽם׃
14 ಲೇವಿಯರು ತಮ್ಮ ಹುಲ್ಲುಗಾವಲು ಮತ್ತು ಆಸ್ತಿಯನ್ನು ತ್ಯಜಿಸಿ ಯೆಹೂದ ಮತ್ತು ಯೆರೂಸಲೇಮಿಗೆ ಬಂದರು, ಏಕೆಂದರೆ ಯಾರೊಬ್ಬಾಮನೂ ಅವನ ಮಕ್ಕಳು ಯೆಹೋವ ದೇವರಿಗೆ ಯಾಜಕ ಸೇವೆ ಮಾಡದ ಹಾಗೆ ತಿರಸ್ಕರಿಸಿದನು.
כִּֽי־עָזְב֣וּ הַלְוִיִּ֗ם אֶת־מִגְרְשֵׁיהֶם֙ וַאֲחֻזָּתָ֔ם וַיֵּלְכ֥וּ לִיהוּדָ֖ה וְלִֽירוּשָׁלָ֑͏ִם כִּֽי־הִזְנִיחָ֤ם יָֽרָבְעָם֙ וּבָנָ֔יו מִכַּהֵ֖ן לַיהוָֽה׃
15 ಉನ್ನತ ಸ್ಥಳಗಳಿಗೋಸ್ಕರವೂ ದೆವ್ವಗಳಿಗೋಸ್ಕರವೂ, ಯಾರೊಬ್ಬಾಮನು ಮಾಡಿದ ಕರುಗಳ ಮೂರ್ತಿಪೂಜೆಗಾಗಿ ತಾನೇ ಯಾಜಕರನ್ನು ನೇಮಿಸಿದ್ದರಿಂದ,
וַיַּֽעֲמֶד־לֹו֙ כֹּֽהֲנִ֔ים לַבָּמֹ֖ות וְלַשְּׂעִירִ֑ים וְלָעֲגָלִ֖ים אֲשֶׁ֥ר עָשָֽׂה׃
16 ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಹುಡುಕುವ ಮನಸ್ಸು ಮಾಡಿದ ಇಸ್ರಾಯೇಲಿನ ಪ್ರತಿಯೊಂದು ಕುಲಗಳಿಂದ ಕೆಲವರು ತಮ್ಮ ಪೂರ್ವಜರ ದೇವರಾದ ಯೆಹೋವ ದೇವರಿಗೆ ಯಜ್ಞಗಳನ್ನು ಅರ್ಪಿಸಲು ಲೇವಿಯರನ್ನು ಹಿಂಬಾಲಿಸಿ ಯೆರೂಸಲೇಮಿಗೆ ಬಂದರು.
וְאַחֲרֵיהֶ֗ם מִכֹּל֙ שִׁבְטֵ֣י יִשְׂרָאֵ֔ל הַנֹּֽתְנִים֙ אֶת־לְבָבָ֔ם לְבַקֵּ֕שׁ אֶת־יְהוָ֖ה אֱלֹהֵ֣י יִשְׂרָאֵ֑ל בָּ֚אוּ יְר֣וּשָׁלַ֔͏ִם לִזְבֹּ֕וחַ לַיהוָ֖ה אֱלֹהֵ֥י אֲבֹותֵיהֶֽם׃
17 ಹೀಗೆ ಅವರು ಯೆಹೂದ ರಾಜ್ಯವನ್ನು ದೃಢಪಡಿಸಿ, ಸೊಲೊಮೋನನ ಮಗ ರೆಹಬ್ಬಾಮನನ್ನು ಮೂರು ವರ್ಷಗಳವರೆಗೂ ಬಲಪಡಿಸಿದರು. ಅವರು ಮೂರು ವರ್ಷಗಳವರೆಗೂ ದಾವೀದನ, ಸೊಲೊಮೋನನ ಮಾರ್ಗದಲ್ಲಿ ನಡೆದರು.
וַֽיְחַזְּקוּ֙ אֶת־מַלְכ֣וּת יְהוּדָ֔ה וַֽיְאַמְּצ֛וּ אֶת־רְחַבְעָ֥ם בֶּן־שְׁלֹמֹ֖ה לְשָׁנִ֣ים שָׁלֹ֑ושׁ כִּ֣י הָֽלְכ֗וּ בְּדֶ֧רֶךְ דָּוִ֛יד וּשְׁלֹמֹ֖ה לְשָׁנִ֥ים שָׁלֹֽושׁ׃
18 ರೆಹಬ್ಬಾಮನು ಮಹಲತ್ ಎಂಬಾಕೆಯನ್ನು ಮದುವೆಮಾಡಿಕೊಂಡನು. ಈ ಮಹಲತ್ ದಾವೀದನ ಮಗ ಯೆರೀಮೋತ್ ಹಾಗು ಅಬೀಹೈಲರ ಮಗಳು. ಈ ಅಬೀಹೈಲಳು ಇಷಯನ ಮೊಮ್ಮಗಳೂ, ಎಲೀಯಾಬನ ಮಗಳೂ ಆಗಿದ್ದಳು.
וַיִּֽקַּֽח־לֹ֤ו רְחַבְעָם֙ אִשָּׁ֔ה אֶת־מָ֣חֲלַ֔ת בֶּן (בַּת)־יְרִימֹ֖ות בֶּן־דָּוִ֑יד אֲבִיהַ֕יִל בַּת־אֱלִיאָ֖ב בֶּן־יִשָֽׁי׃
19 ಅಬೀಹಾಯಿಲಳು ಯೆಗೂಷ್, ಶೆಮರ್ಯ, ಜಹಾಮ್ ಎಂಬ ಮಕ್ಕಳನ್ನು ಅವನಿಗೆ ಹೆತ್ತಳು.
וַתֵּ֥לֶד לֹ֖ו בָּנִ֑ים אֶת־יְע֥וּשׁ וְאֶת־שְׁמַרְיָ֖ה וְאֶת־זָֽהַם׃
20 ಇವಳ ತರುವಾಯ ಅವನು ಅಬ್ಷಾಲೋಮನ ಮಗಳಾದ ಮಾಕ ಎಂಬವಳನ್ನು ಮದುವೆಮಾಡಿಕೊಂಡನು. ಇವಳು ಅವನಿಗೆ ಅಬೀಯನನ್ನೂ, ಅತ್ತೈಯನ್ನೂ, ಜೀಜನನ್ನೂ, ಶೆಲೋಮೀತನನ್ನೂ ಹೆತ್ತಳು.
וְאַחֲרֶ֣יהָ לָקַ֔ח אֶֽת־מַעֲכָ֖ה בַּת־אַבְשָׁלֹ֑ום וַתֵּ֣לֶד לֹ֗ו אֶת־אֲבִיָּה֙ וְאֶת־עַתַּ֔י וְאֶת־זִיזָ֖א וְאֶת־שְׁלֹמִֽית׃
21 ರೆಹಬ್ಬಾಮನಿಗೆ ಹದಿನೆಂಟು ಮಂದಿ ಹೆಂಡತಿಯರೂ, ಅರವತ್ತು ಮಂದಿ ಉಪಪತ್ನಿಯರೂ ಇದ್ದರು. ಅವನು ಇಪ್ಪತ್ತೆಂಟು ಮಂದಿ ಪುತ್ರರನ್ನೂ, ಅರವತ್ತು ಮಂದಿ ಪುತ್ರಿಯರನ್ನೂ ಪಡೆದನು. ಆದರೆ ಅವನು ತನ್ನ ಎಲ್ಲಾ ಹೆಂಡತಿಯರಿಗಿಂತಲೂ, ಉಪಪತ್ನಿಯರಿಗಿಂತಲೂ ಅಬ್ಷಾಲೋಮನ ಮಗಳಾದ ಮಾಕ ಎಂಬವಳನ್ನು ಹೆಚ್ಚಾಗಿ ಪ್ರೀತಿಮಾಡಿದನು.
וַיֶּאֱהַ֨ב רְחַבְעָ֜ם אֶת־מַעֲכָ֣ה בַת־אַבְשָׁלֹ֗ום מִכָּל־נָשָׁיו֙ וּפִ֣ילַגְשָׁ֔יו כִּ֠י נָשִׁ֤ים שְׁמֹונֶֽה־עֶשְׂרֵה֙ נָשָׂ֔א וּפִֽילַגְשִׁ֖ים שִׁשִּׁ֑ים וַיֹּ֗ולֶד עֶשְׂרִ֧ים וּשְׁמֹונָ֛ה בָּנִ֖ים וְשִׁשִּׁ֥ים בָּנֹֽות׃
22 ರೆಹಬ್ಬಾಮನು ಮಾಕ ಎಂಬವಳ ಮಗನಾದ ಅಬೀಯನನ್ನು ಅವನ ಸಹೋದರರಲ್ಲಿ ಯುವರಾಜನನ್ನಾಗಿ ಮಾಡಿದನು. ಏಕೆಂದರೆ ಅವನನ್ನು ಅರಸನಾಗಿ ಮಾಡಲು ಮನಸ್ಸುಳ್ಳವನಾಗಿದ್ದನು.
וַיַּֽעֲמֵ֨ד לָרֹ֧אשׁ רְחַבְעָ֛ם אֶת־אֲבִיָּ֥ה בֶֽן־מַעֲכָ֖ה לְנָגִ֣יד בְּאֶחָ֑יו כִּ֖י לְהַמְלִיכֹֽו׃
23 ಇದಲ್ಲದೆ ಅವನು ವಿವೇಕವಾಗಿ ನಡೆದು ತನ್ನ ಎಲ್ಲಾ ಮಕ್ಕಳನ್ನು ಯೆಹೂದ ಬೆನ್ಯಾಮೀನಿನ ದೇಶಗಳಲ್ಲಿ ಇರುವ ಎಲ್ಲಾ ಬಲವಾದ ಪಟ್ಟಣಗಳಲ್ಲಿ ಚದರಿಸಿ, ಅವರಿಗೆ ಬಹಳ ದವಸಧಾನ್ಯಗಳನ್ನು ಕೊಟ್ಟನು. ಅವರಿಗೆ ಅನೇಕ ಹೆಂಡತಿಯರನ್ನು ಕೊಟ್ಟನು.
וַיָּבֶן֩ וַיִּפְרֹ֨ץ מִכָּל־בָּנָ֜יו לְֽכָל־אַרְצֹ֧ות יְהוּדָ֣ה וּבִנְיָמִ֗ן לְכֹל֙ עָרֵ֣י הַמְּצֻרֹ֔ות וַיִּתֵּ֥ן לָהֶ֛ם הַמָּזֹ֖ון לָרֹ֑ב וַיִּשְׁאַ֖ל הֲמֹ֥ון נָשִֽׁים׃

< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 11 >