< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 10 >
1 ರೆಹಬ್ಬಾಮನು ಶೆಕೆಮಿಗೆ ಹೋದನು; ಅವನನ್ನು ಅರಸನಾಗಿ ಮಾಡುವುದಕ್ಕೆ ಸಮಸ್ತ ಇಸ್ರಾಯೇಲರು ಶೆಕೆಮಿಗೆ ಬಂದರು.
Rehoboam went to Shechem, for all Israel was coming to Shechem to make him king.
2 ಅರಸನಾದ ಸೊಲೊಮೋನನ ಸಮ್ಮುಖದಿಂದ ಓಡಿಹೋಗಿ ಈಜಿಪ್ಟಿನಲ್ಲಿ ವಾಸವಾಗಿದ್ದ ನೆಬಾಟನ ಮಗ ಯಾರೊಬ್ಬಾಮನು ಇದನ್ನು ಕೇಳಿದಾಗ, ಅವನು ಈಜಿಪ್ಟಿನಿಂದ ತಿರುಗಿಬಂದನು.
When Jeroboam the son of Nebat heard this (for he was in Egypt, where he had fled from King Solomon), he returned from Egypt.
3 ಆಗ ಯಾರೊಬ್ಬಾಮನೂ ಸಮಸ್ತ ಇಸ್ರಾಯೇಲರೂ ರೆಹಬ್ಬಾಮನ ಬಳಿಗೆ ಬಂದು ಅವನ ಸಂಗಡ ಮಾತನಾಡಿ,
So they sent and called him, and Jeroboam and all Israel came; they spoke to Rehoboam and said,
4 “ನಿನ್ನ ತಂದೆಯು ನಮ್ಮ ನೊಗವನ್ನು ಭಾರವಾಗಿ ಮಾಡಿದನು. ಈಗ ನೀನು ನಿನ್ನ ತಂದೆಯ ಕಠಿಣವಾದ ಸೇವೆಯನ್ನೂ, ಅವನು ನಮ್ಮ ಮೇಲೆ ಹಾಕಿದ ಅವನ ಭಾರವಾದ ನೊಗವನ್ನೂ ಹಗುರಮಾಡಿದರೆ, ನಾವು ನಿನಗೆ ಸೇವೆಮಾಡುತ್ತೇವೆ,” ಎಂದರು.
“Your father made our yoke difficult. Now therefore, make your father's hard work easier, and lighten the heavy yoke that he put on us, and we will serve you.”
5 ಅದಕ್ಕೆ ರೆಹಬ್ಬಾಮನು ಅವರಿಗೆ, “ಮೂರು ದಿವಸಗಳಾದ ತರುವಾಯ ತಿರುಗಿ ನನ್ನ ಬಳಿಗೆ ಬನ್ನಿರಿ,” ಎಂದು ಹೇಳಿದ್ದರಿಂದ ಜನರು ಹೊರಟು ಹೋದರು.
Rehoboam said to them, “Come again to me after three days.” So the people left.
6 ಆಗ ಅರಸನಾದ ರೆಹಬ್ಬಾಮನು, ತನ್ನ ತಂದೆ ಸೊಲೊಮೋನನು ಬದುಕಿರುವಾಗ, ಮಂತ್ರಿಗಳಾಗಿದ್ದ ಹಿರಿಯರನ್ನು ಕೂಡಿಸಿ ಅವರಿಗೆ, “ನಾನು ಈ ಜನರಿಗೆ ಪ್ರತ್ಯುತ್ತರವನ್ನು ಕೊಡಲು ನಿಮ್ಮ ಆಲೋಚನೆಯೇನು?” ಎಂದು ಕೇಳಿದನು.
King Rehoboam consulted with the old men who had stood before Solomon his father while he was alive; he said, “How would you advise me to bring an answer to these people?”
7 ಅವರು ಅವನಿಗೆ, “ನೀನು ಈ ಜನರಿಗೆ ದಯವುಳ್ಳವನಾಗಿ ಅವರನ್ನು ಮೆಚ್ಚಿಸಿ, ಒಳ್ಳೆಯ ಮಾತುಗಳಿಂದ ಅವರಿಗೆ ಉತ್ತರವನ್ನು ಕೊಡು, ಆಗ ಅವರು ನಿರಂತರವಾಗಿ ನಿನ್ನ ಸೇವಕರಾಗಿರುವರು,” ಎಂದು ಹೇಳಿದರು.
They spoke to him and said, “If you are good to this people and please them, and say good words to them, then they will always be your servants.”
8 ಆದರೆ ರೆಹಬ್ಬಾಮನು, ಹಿರಿಯರು ತನಗೆ ಹೇಳಿದ ಆಲೋಚನೆಯನ್ನು ಬಿಟ್ಟು, ತನ್ನ ಸಂಗಡ ಬೆಳೆದು ತನ್ನ ಮುಂದೆ ನಿಂತಿರುವ ಯೌವನಸ್ಥರ ಆಲೋಚನೆಯನ್ನು ಕೇಳಿ,
But Rehoboam ignored the advice of the old men that they had given him, and consulted with the young men who had grown up with him, who stood before him.
9 ಅವನು ಅವರಿಗೆ, “ನಿನ್ನ ತಂದೆಯು ನಮ್ಮ ಮೇಲೆ ಹಾಕಿದ ನೊಗವನ್ನು ಹಗುರ ಮಾಡೆಂದು ನನಗೆ ಹೇಳಿದ ಈ ಜನರಿಗೆ ಉತ್ತರ ಕೊಡಲು ನಿಮ್ಮ ಆಲೋಚನೆ ಏನು?” ಎಂದು ಕೇಳಿದನು.
He said to them, “What advice do you give me, so that we may answer the people who spoke to me and said, 'Lighten the yoke that your father put on us'?”
10 ಆಗ ಅವನ ಸಂಗಡ ಬೆಳೆದ ಯೌವನಸ್ಥರು ಅವನಿಗೆ, “ನಿನ್ನ ತಂದೆಯು ನಮ್ಮ ನೊಗವನ್ನು ಭಾರಮಾಡಿದನು; ಆದರೆ ನೀನು ಅದನ್ನು ನಮಗೆ ಹಗುರ ಮಾಡೆಂದು ನಿನ್ನ ಸಂಗಡ ಮಾತನಾಡಿದ ಈ ಜನರಿಗೆ, ‘ನನ್ನ ಕಿರುಬೆರಳು ನನ್ನ ತಂದೆಯ ನಡುವಿಗಿಂತ ದಪ್ಪವಾಗಿರುವುದು.
The young men who had grown up with Rehoboam spoke to him, saying, “This is how you should speak to the people who told you that your father Solomon made their yoke heavy, but that you must make it lighter. This is what you should say to them, 'My little finger is thicker than my father's waist.
11 ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹೊರಿಸಿದನು. ಆದರೆ ನಾನು ನಿಮ್ಮ ನೊಗವನ್ನು ಇನ್ನೂ ಹೆಚ್ಚು ಭಾರವಾಗಿ ಮಾಡುವೆನು. ನನ್ನ ತಂದೆಯು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ, ನಾನಾದರೋ ನಿಮ್ಮನ್ನು ಚೇಳು ಕೊರಡೆಗಳಿಂದ ಶಿಕ್ಷಿಸುವೆನು,’ ಎಂದು ನೀನು ಅವರಿಗೆ ಹೇಳು,” ಎಂದರು.
So now, although my father burdened you with a heavy yoke, I will add to your yoke. My father punished you with whips, but I will punish you with scorpions.'”
12 ಆಗ, “ಮೂರನೆಯ ದಿವಸದಲ್ಲಿ ನನ್ನ ಬಳಿಗೆ ಬನ್ನಿರಿ” ಎಂದು ಅರಸನು ಹೇಳಿದ ಪ್ರಕಾರ ಮೂರನೆಯ ದಿವಸದಲ್ಲಿ ಯಾರೊಬ್ಬಾಮನೂ, ಸಮಸ್ತ ಜನರೂ ಅರಸನಾದ ರೆಹಬ್ಬಾಮನ ಬಳಿಗೆ ಬಂದರು.
So Jeroboam and all the people came to Rehoboam on the third day, as the king said, “Come back to me on the third day.”
13 ಆದರೆ ಅರಸನು ಜನರಿಗೆ ಕಠಿಣವಾದ ಉತ್ತರವನ್ನು ಕೊಟ್ಟು, ಹಿರಿಯರು ಅವನಿಗೆ ಕೊಟ್ಟ ಆಲೋಚನೆಯನ್ನು ನಿರಾಕರಿಸಿ,
Rehoboam spoke to them harshly, ignoring the advice of the old men.
14 ಯುವಕರ ಆಲೋಚನೆಯ ಪ್ರಕಾರ ಅವರ ಸಂಗಡ ಮಾತನಾಡಿ ಅವರಿಗೆ, “ನನ್ನ ತಂದೆಯು ನಿಮ್ಮ ನೊಗವನ್ನು ಭಾರವಾಗಿ ಮಾಡಿದನು. ನಾನು ಅದನ್ನು ಇನ್ನೂ ಹೆಚ್ಚು ಭಾರ ಮಾಡುತ್ತೇನೆ. ನನ್ನ ತಂದೆಯು ನಿಮ್ಮನ್ನು ಬಾರುಕೋಲುಗಳಿಂದ ಶಿಕ್ಷಿಸಿದನು; ಆದರೆ ನಾನು ಮುಳ್ಳು ಕೊರಡೆಗಳಿಂದ ಶಿಕ್ಷಿಸುವೆನು,” ಎಂದನು.
He spoke to them following the advice of the young men, saying, “My father made your yoke heavy, but I will add to it. My father punished you with whips, but I will punish you with scorpions.”
15 ಅರಸನು ಜನರ ಮಾತನ್ನು ಕೇಳದೆಹೋದದ್ದು ದೇವರಿಂದಲೇ. ಹೀಗೆ ಯೆಹೋವ ದೇವರು ಶೀಲೋವಿನವನಾದ ಅಹೀಯನ ಮುಖಾಂತರವಾಗಿ ನೆಬಾಟನ ಮಗನಾದ ಯಾರೊಬ್ಬಾಮನಿಗೆ ಹೇಳಿಸಿದ ಮಾತು ಈಡೇರುವುದಕ್ಕೆ ಕಾರಣವಾಯಿತು.
So the king did not listen to the people, for it was a turn in events brought about by God, that Yahweh might carry out his word that Ahijah the Shilonite had spoken to Jeroboam son of Nebat.
16 ಅರಸನು ಅವರ ಮಾತನ್ನು ಕೇಳದೆ ಹೋದನೆಂದು ಸಮಸ್ತ ಇಸ್ರಾಯೇಲರು ತಿಳಿದಾಗ, ಜನರು ಅರಸನಿಗೆ ಉತ್ತರವಾಗಿ, “ದಾವೀದನಲ್ಲಿ ನಮಗೆ ಭಾಗವೇನು? ಇಷಯನ ಮಗನಲ್ಲಿ ನಮಗೆ ಬಾಧ್ಯತೆ ಏನು? ಇಸ್ರಾಯೇಲರೇ, ನಿಮ್ಮ ಡೇರೆಗಳಿಗೆ ಹೋಗಿರಿ. ದಾವೀದನೇ, ಈಗ ನಿನ್ನ ಕುಟುಂಬವನ್ನು ನೀನೇ ನೋಡಿಕೋ,” ಎಂದು ಹೇಳಿ ಇಸ್ರಾಯೇಲರೆಲ್ಲರು ತಮ್ಮ ತಮ್ಮ ಡೇರೆಗಳಿಗೆ ಹೋದರು.
When all Israel saw that the king did not listen to them, the people answered him and said, “What share do we have in David? We have no inheritance in the son of Jesse! Each of you should go back to his tent, Israel. Now see to your own house, David.” So all Israel returned to their tents.
17 ಆದರೆ ಯೆಹೂದದ ಪಟ್ಟಣಗಳಲ್ಲಿ ವಾಸವಾಗಿರುವ ಇಸ್ರಾಯೇಲರ ಮೇಲೆ ರೆಹಬ್ಬಾಮನು ಆಳಿದನು.
But as for the people of Israel who lived in the cities of Judah, Rehoboam reigned over them.
18 ಆಗ ರೆಹಬ್ಬಾಮನು ದಾಸರ ಮೇಲ್ವಿಚಾರಕನಾದ ಅದೋನೀರಾಮನನ್ನು ಕಳುಹಿಸಿದನು. ಆದರೆ ಇಸ್ರಾಯೇಲರು ಅವನ ಮೇಲೆ ಕಲ್ಲೆಸೆದು ಕೊಂದುಹಾಕಿದರು. ಆದ್ದರಿಂದ ಅರಸನಾದ ರೆಹಬ್ಬಾಮನು ಆತುರಪಟ್ಟು ತನ್ನ ರಥವನ್ನೇರಿ ಯೆರೂಸಲೇಮಿಗೆ ಓಡಿಹೋದನು.
Then King Rehoboam sent Adoniram, who was over the forced laborers, but the people of Israel stoned him to death with stones. King Rehoboam fled quickly in his chariot to Jerusalem.
19 ಹೀಗೆ ಇಂದಿನವರೆಗೂ ಇಸ್ರಾಯೇಲರು ದಾವೀದನ ಕುಟುಂಬದವರೊಡನೆ ವಿರೋಧವಾಗಿ ತಿರುಗಿಬೀಳುತ್ತಲೇ ಇದ್ದಾರೆ.
So Israel has been in rebellion against the house of David to this day.