< ತಿಮೊಥೆಯನಿಗೆ ಬರೆದ ಮೊದಲನೆಯ ಪತ್ರಿಕೆ 6 >

1 ದೇವರ ನಾಮವೂ ನಮ್ಮ ಬೋಧನೆಯೂ ದೂಷಣೆಗೆ ಗುರಿಯಾಗದಂತೆ ದಾಸತ್ವದ ನೊಗ ಹೊತ್ತಿರುವವರು ತಮ್ಮ ಸ್ವಂತ ಯಜಮಾನರನ್ನು ಪೂರ್ಣ ಗೌರವಕ್ಕೆ ಯೋಗ್ಯರೆಂದೆಣಿಸಲಿ.
Bhala wonti bhabhali pansi yijoko hansi abhatumwa bhabhajele agosi bhao hansi bhi iheshima zyonti, bhahanziwa awombe esho ili itawa lya Ngolobhe na amanyizyo gagajialigwe.
2 ವಿಶ್ವಾಸಿಗಳಾದ ಯಜಮಾನರಿರುವವರು ಆ ಯಜಮಾನರು ಸಹೋದರನಾಗಿರುವುದರಿಂದ ಅವರನ್ನು ತಾತ್ಸಾರ ಮಾಡದಿರಲಿ. ಏಕೆಂದರೆ ತಮ್ಮ ಸೇವೆಯಿಂದ ಲಾಭ ಹೊಂದುವವರು ವಿಶ್ವಾಸಿಗಳು ಮತ್ತು ತಮಗೆ ಪ್ರಿಯರಾಗಿದ್ದಾರೆ ಎಂದು ತಿಳಿದು ಅವರಿಗೆ ಉತ್ತಮ ಸೇವೆಮಾಡಲಿ. ಇವುಗಳನ್ನು ಅವರಿಗೆ ಬೋಧಿಸಿ ಎಚ್ಚರಿಸು.
Abhatumwa bhabhali nu gosi bhabheteshe bhangajehubhasyoshele kwa sababu abhene holo. Badala yakwe bhabhatumishile hani. Kwasababu agosi bhabhahavwa imbombo zyawo bhabheteshe nabhaganilwe. Fundizyaga na lumbelele amambo ego.
3 ಯಾವನಾದರೂ ಬೇರೆ ವಿಧವಾದ ಉಪದೇಶವನ್ನು ಮಾಡಿ, ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಶುದ್ಧವಾದ ಮಾತುಗಳಿಗೂ ಭಕ್ತಿಗೆ ಅನುಸಾರವಾದ ಬೋಧನೆಗೂ ಸಮ್ಮತಿಸದೆ ಹೋದರೆ,
Nkesho umuntu omo amanyizya whateje na sagahugeteha amaelekezo agetu gawhaminishe, gagali mazu ga Gosi wetu uYesu Kristi, nkasagabhahulyeteha imanyizyo lililongozya hugolosu.
4 ಅಂಥವರು ಅಹಂಕಾರಿಯೂ ವಿವೇಕರಹಿತನಾಗಿದ್ದಾರೆ. ಅವರು ಹೊಟ್ಟೆಕಿಚ್ಚು, ಜಗಳ, ದೂಷಣೆ, ದುಸ್ಸಂಶಯಪಡುವ ಭ್ರಾಂತರಾಗಿ ಸತ್ಯವನ್ನು ಬಿಟ್ಟು, ಕುತರ್ಕ ವಾಗ್ವಾದಗಳನ್ನು ಮಾಡುವವರಾಗಿದ್ದಾರೆ.
Umuntu oyo ahujidai sagamenye hohonti. Badala yakwe nu pezu namadalihanyo pamwanya yinjago, injango ezi zipapa uwivu, iwo, indigo, ishauku imbibhi,
5 ಹೀಗೆ ಅನಾರೋಗ್ಯಕರವಾದ ವಿವಾದಗಳನ್ನೂ ಕೆಲವು ಮಾತುಗಳ ಕುರಿತಾಗಿರುವ ತರ್ಕಗಳನ್ನೂ ಸೃಷ್ಟಿಸುವ ಪ್ರಸಿದ್ಧರಾಗಿದ್ದಾರೆ. ಅಂಥವರು ದೇವಭಕ್ತಿಯನ್ನು ಆರ್ಥಿಕ ಲಾಭವನ್ನಾಗಿ ಭಾವಿಸುವವರಾಗಿದ್ದಾರೆ.
nu pezu wimara kwa mara kati yi bhantu bhe njele zizinanjishe bhasebha aje uwutanwa lidala lyabhe bhatabhazi”
6 ಸಂತೃಪ್ತಿಯೊಂದಿಗಿರುವ ದೇವಭಕ್ತಿಯೇ ದೊಡ್ಡ ಲಾಭವು.
Eshi uwugolosu nalizishe faida ingosi.
7 ನಾವು ಲೋಕದೊಳಗೆ ಏನನ್ನೂ ತೆಗೆದುಕೊಂಡು ಬರಲಿಲ್ಲ. ಅದರೊಳಗಿಂದ ಏನೂ ತೆಗೆದುಕೊಂಡು ಹೋಗಲಾರೆವು.
Kwa sababu sagatahenzele na shoshonti panse. Wala sagatiwezya aheje shoshonti afume panse.
8 ಆದರೆ ಅನ್ನವಸ್ತ್ರಗಳು ನಮಗಿರುವುದಾದರೆ, ನಾವು ಅದರಲ್ಲಿ ತೃಪ್ತರಾಗಿರೋಣ.
Ibadala yakwe titosewe ni shalye na menda.
9 ಆದರೆ ಐಶ್ವರ್ಯವಂತರಾಗಬೇಕೆಂದು ಬಯಸುವವರು ಶೋಧನೆಯಲ್ಲಿಯೂ ಉರುಲಿನಲ್ಲಿಯೂ ಬಿದ್ದು ಅನೇಕ ಬುದ್ಧಿಹೀನವಾದ ಹಾಗೂ ಹಾನಿಕರವಾದ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರ ವಿನಾಶನಗಳಲ್ಲಿ ಮುಳುಗಿಸುತ್ತವೆ.
Eshi ewo bhabha whanza abhe ni ntabhazi bhagwa hunjelo, katika umtego. Bhagwa huukwelengusu umwinji ni nyanyu imbibhi, na hushintu shoshonti, shishihubhawomba abhantu bhadwine na maangamizi unanganyi.
10 ಹಣದ ಪ್ರೀತಿಯು ಸಕಲ ವಿಧವಾದ ಕೆಟ್ಟತನಕ್ಕೆ ಬೇರಾಗಿದೆ. ಕೆಲವರು ಹಣಕ್ಕಾಗಿ ಆತುರಪಟ್ಟು ನಂಬಿಕೆಯಿಂದ ದೂರಹೋಗಿ ಅನೇಕ ದುಃಖಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.
Afwatanaje asongwe ihela ni wandilo wiaina zyonti zimbibhi. Abhantu ambao bhanyonywa eyo, bhateywiwhilwe uhutali nulweteho na bhajoshizye bhene nsewo inyingi.
11 ದೇವರ ಮನುಷ್ಯನೇ, ನೀನಾದರೋ ಇವುಗಳಿಂದ ಓಡಿಹೋಗು. ನೀತಿ, ಭಕ್ತಿ, ನಂಬಿಕೆ, ಪ್ರೀತಿ, ತಾಳ್ಮೆ, ಸಾತ್ವಿಕತ್ವ ಇವುಗಳನ್ನು ಹಿಂಬಾಲಿಸು.
Eshi awe wamuntu wa Ngolobhe, gashembele amambo ego. Fwata ilyoli, ugolosu, uwinza, ulugano, ujivwi, nuu pomakati.
12 ವಿಶ್ವಾಸದ ಒಳ್ಳೆಯ ಹೋರಾಟವನ್ನು ಮಾಡು. ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿಯೇ ದೇವರು ನಿನ್ನನ್ನು ಕರೆದಿದ್ದಾರೆ. ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೆಯ ಅರಿಕೆಯನ್ನು ಮಾಡಿದ್ದೀಯಲ್ಲಾ? (aiōnios g166)
Khoma iwo ilinza lilweteho. Lemelela uwomi wiwila wakwiziwilwe. Yali husababu ene aje ufumye usimishizi whilongolela lya simishizi abhinji whalila lililinza. (aiōnios g166)
13 ಎಲ್ಲಕ್ಕೂ ಜೀವ ನೀಡುವ ದೇವರ ಮುಂದೆಯೂ ಪೊಂತ್ಯ ಪಿಲಾತನ ಮುಂದೆ ಒಳ್ಳೆಯ ಅರಿಕೆಯನ್ನು ಸಾಕ್ಷಿಯಾಗಿ ನೀಡಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಖಂಡಿತವಾಗಿ ಹೇಳವುದೇನೆಂದರೆ:
Ihapela indajizyo ene whilongelela lya Ngolobhe, wasababisya ivintu vyonti akhae, na whilongolela lya Yesu Ukristi, wayanjile yili lyoli wha Pontio uPilato:
14 ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರು ಪ್ರತ್ಯಕ್ಷರಾಗುವ ತನಕ ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ನೀನು ಕಾಪಾಡಬೇಕು.
Yibheshe indajizyo whilyoli bila amashaka, hadi Ugosi wetu lyayihenza uYesu uKristi.
15 ರಾಜಾಧಿರಾಜನೂ ಕರ್ತರ ಕರ್ತನೂ ಭಾಗ್ಯವಂತರಾದ ಏಕಾಧಿಪತಿಯು ತಮ್ಮ ಸಮಯಗಳಲ್ಲೆ ಕ್ರಿಸ್ತ ಯೇಸುವನ್ನು ಪ್ರತ್ಯಕ್ಷಪಡಿಸುವರು.
Ongolobhe ayidhihilisya ulwenzo lyakwe umuda gog- Ungolobhe, Unsayiwe, engovo yene, umwene watabhala, ugosi walongozya.
16 ದೇವರೊಬ್ಬರೇ ಅಮರತ್ವವುಳ್ಳವರೂ ಯಾರೂ ಸಮೀಪಿಸಲಾರದ ಬೆಳಕಿನಲ್ಲಿ ವಾಸಿಸುವವರೂ ಆಗಿದ್ದಾರೆ. ಯಾವ ಮನುಷ್ಯನೂ ದೇವರನ್ನು ಕಾಣಲಿಲ್ಲ. ಯಾರೂ ಕಾಣಲಾರರು. ದೇವರಿಗೆ ಮಾನವೂ ಬಲವೂ ಸದಾಕಾಲಕ್ಕೂ ಇರಲಿ. ಆಮೆನ್. (aiōnios g166)
Mwene akhala wila wakhala mu mwuzelu wosojelelwa. Nomo umuntu wawezya hunolo wala tete humwenye. Hukwakwe ibheheshimu nuuweno wiwila. Amina. (aiōnios g166)
17 ಈ ಲೋಕದಲ್ಲಿ ಅಹಂಕಾರಿಗಳಾಗಿರದೆ, ಅಸ್ತಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಸುಖಕ್ಕೋಸ್ಕರ ಎಲ್ಲವನ್ನೂ ಸಮೃದ್ಧಿಯಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂದು ಐಶ್ವರ್ಯವಂತರಿಗೆ ಆಜ್ಞಾಪಿಸು. (aiōn g165)
Bhawozye atabhazi monse omu bhangajihyituntumule, na bhangajitegemele uwutabhazi, wuwuli sagawiuhakika. Ibadayakwe, bhahanziwa ategemele Ongolobhe. Waliutipela utabhazi wonti wilyoli ili tisongwe. (aiōn g165)
18 ಅಂಥವರು ಒಳ್ಳೆಯದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲು ಕೊಡುವುದರಲ್ಲಿ ಸಿದ್ಧರಾಗಿರುವವರೂ ಪರೋಪಕಾರ ಮಾಡುವವರೂ ಆಗಿರಬೇಕೆಂದು ಅವರನ್ನು ಪ್ರಬೋಧಿಸು.
Bhawozye bhawombaje aminza, bhatajilishe humbombo inyinza, bhabhe bhabhe bhakalibizi numutayali wafumye.
19 ಹೀಗೆ ಮುಂದಿನ ಕಾಲಕ್ಕೆ ಯಥಾರ್ಥ ಜೀವವಾಗಿರುವ ನಿತ್ಯಜೀವವನ್ನು ಹಿಡಿದುಕೊಳ್ಳುವಂತೆ ತಮಗೋಸ್ಕರ ಸ್ಥಿರವಾದ ಅಸ್ತಿವಾರಕ್ಕಾಗಿ ನಿಕ್ಷೇಪಗಳನ್ನು ಕೂಡಿಸಿಟ್ಟುಕೊಳ್ಳಲಿ.
Whidala elyo bhanzahujibheshe umusingi umwinza humambo gagawhenza ili bhawezye akhate ukholo wowo.
20 ತಿಮೊಥೆಯನೇ, ನಿನ್ನ ವಶಕ್ಕೆ ಕೊಟ್ಟಿರುವುದನ್ನು ಕಾಪಾಡು. ದೇವಭಕ್ತಿಗೆ ಅನುಗುಣವಾಗದ ಹರಟೆ ಮಾತುಗಳಿಗೂ ಜ್ಞಾನದಿಂದ ವಿಚಾರಪಡಿಸುವ ಸುಳ್ಳು ತರ್ಕಗಳಿಗೂ ಒಳಪಡದಿರು.
I Timothewo, ulinda shila shupewilwe. Jefwe namapanjizanyo gishikwelengusu amadalihanyo gahujikhane gagali gilenga gahwetwa njele.
21 ಕೆಲವರು ಇಂಥವುಗಳಿಗೆ ಒಳಪಟ್ಟು ನಂಬಿಕೆಯಿಂದ ಗುರಿತಪ್ಪಿ ಹೋಗಿದ್ದಾರೆ. ಕೃಪೆಯು ನಿಮ್ಮೊಂದಿಗಿರಲಿ.
Baazi ya bhantu bhahugatangazya amambo ego nesho bhakosile ulweteho. Ineema ibhe pamoja nawe.

< ತಿಮೊಥೆಯನಿಗೆ ಬರೆದ ಮೊದಲನೆಯ ಪತ್ರಿಕೆ 6 >