< ಸಮುವೇಲನು - ಪ್ರಥಮ ಭಾಗ 29 >

1 ಫಿಲಿಷ್ಟಿಯರು ತಮ್ಮ ಸಮಸ್ತ ಸೈನ್ಯಗಳನ್ನು ಅಫೇಕದಲ್ಲಿ ಕೂಡಿಸಿಕೊಂಡರು. ಹಾಗೆಯೇ ಇಸ್ರಾಯೇಲರು ಇಜ್ರೆಯೇಲ್ ಎಂಬ ಬುಗ್ಗೆಯ ಬಳಿಯಲ್ಲಿ ದಂಡಿಳಿದರು.
וַיִּקְבְּצוּ פְלִשְׁתִּים אֶת־כׇּל־מַחֲנֵיהֶם אֲפֵקָה וְיִשְׂרָאֵל חֹנִים בַּעַיִן אֲשֶׁר בְּיִזְרְעֶֽאל׃
2 ಫಿಲಿಷ್ಟಿಯರ ಅಧಿಪತಿಗಳು ನೂರು ನೂರಾಗಿಯೂ, ಸಾವಿರ ಸಾವಿರವಾಗಿಯೂ ನಡೆದು ಬಂದರು. ದಾವೀದನೂ, ಅವನ ಜನರೂ ಆಕೀಷನ ಸಂಗಡ ಹಿಂದಿನ ದಂಡಿನಲ್ಲಿ ಬಂದರು.
וְסַרְנֵי פְלִשְׁתִּים עֹֽבְרִים לְמֵאוֹת וְלַאֲלָפִים וְדָוִד וַאֲנָשָׁיו עֹבְרִים בָּאַחֲרֹנָה עִם־אָכִֽישׁ׃
3 ಆಗ ಫಿಲಿಷ್ಟಿಯರ ಅಧಿಪತಿಗಳು, “ಈ ಹಿಬ್ರಿಯರು ಏಕೆ?” ಎಂದರು. ಆಕೀಷನು ಫಿಲಿಷ್ಟಿಯರ ಅಧಿಪತಿಗಳಿಗೆ, “ಇಸ್ರಾಯೇಲಿನ ಅರಸನಾದ ಸೌಲನ ದಾಸನಾದ ಈ ದಾವೀದನು ಇಷ್ಟು ದಿವಸಗಳೂ, ಇಷ್ಟು ವರ್ಷಗಳೂ ನನ್ನ ಸಂಗಡ ಇದ್ದಾನೆ? ಸೌಲನನ್ನು ಬಿಟ್ಟು ನನ್ನ ಹತ್ತಿರ ಬಂದ ದಿವಸ ಮೊದಲುಗೊಂಡು ಇಂದಿನವರೆಗೂ ನಾನು ಅವನಲ್ಲಿ ಒಂದು ಅಪರಾಧವನ್ನಾದರೂ ಕಂಡುಕೊಳ್ಳಲಿಲ್ಲ,” ಎಂದನು.
וַיֹּֽאמְרוּ שָׂרֵי פְלִשְׁתִּים מָה הָעִבְרִים הָאֵלֶּה וַיֹּאמֶר אָכִישׁ אֶל־שָׂרֵי פְלִשְׁתִּים הֲלוֹא־זֶה דָוִד עֶבֶד ׀ שָׁאוּל מֶלֶךְ־יִשְׂרָאֵל אֲשֶׁר הָיָה אִתִּי זֶה יָמִים אוֹ־זֶה שָׁנִים וְלֹֽא־מָצָאתִי בוֹ מְאוּמָה מִיּוֹם נׇפְלוֹ עַד־הַיּוֹם הַזֶּֽה׃
4 ಆದರೆ ಫಿಲಿಷ್ಟಿಯರ ಅಧಿಪತಿಗಳು ಆಕೀಷನ ಮೇಲೆ ಕೋಪಗೊಂಡು ಅವನಿಗೆ, “ಇವನು ಯುದ್ಧದಲ್ಲಿ ನಮಗೆ ಶತ್ರುವಾಗಿರದಂತೆ, ಯುದ್ಧಕ್ಕೆ ನಮ್ಮ ಸಂಗಡ ಇವನನ್ನು ಬರಗೊಡದೆ, ನೀನು ಅವನಿಗೆ ನೇಮಿಸಿದ ಸ್ಥಳಕ್ಕೆ ತಿರುಗಿ ಹೋಗುವಹಾಗೆ ಅವನನ್ನು ಕಳುಹಿಸಿಬಿಡು. ಏಕೆಂದರೆ ಇವನು ಯಾವುದರಿಂದ ತನ್ನ ಯಜಮಾನನ ಮೆಚ್ಚಿಗೆ ಪಡೆದುಕೊಳ್ಳುವನು. ಅದು ಈ ಮನುಷ್ಯರ ತಲೆಗಳಿಂದಲ್ಲವೇ?
וַיִּקְצְפוּ עָלָיו שָׂרֵי פְלִשְׁתִּים וַיֹּאמְרוּ לוֹ שָׂרֵי פְלִשְׁתִּים הָשֵׁב אֶת־הָאִישׁ וְיָשֹׁב אֶל־מְקוֹמוֹ אֲשֶׁר הִפְקַדְתּוֹ שָׁם וְלֹא־יֵרֵד עִמָּנוּ בַּמִּלְחָמָה וְלֹא־יִֽהְיֶה־לָּנוּ לְשָׂטָן בַּמִּלְחָמָה וּבַמֶּה יִתְרַצֶּה זֶה אֶל־אֲדֹנָיו הֲלוֹא בְּרָאשֵׁי הָאֲנָשִׁים הָהֵֽם׃
5 ಸ್ತ್ರೀಯರು ತಮ್ಮ ನೃತ್ಯಗಳಲ್ಲಿ ಹಾಡಿದ ದಾವೀದನು ಇವನಲ್ಲವೇ: “‘ಸೌಲನು ಸಾವಿರ ಜನರನ್ನೂ, ದಾವೀದನು ಹತ್ತು ಸಾವಿರ ಜನರನ್ನೂ ಹೊಡೆದನು.’”
הֲלוֹא־זֶה דָוִד אֲשֶׁר יַעֲנוּ־לוֹ בַּמְּחֹלוֹת לֵאמֹר הִכָּה שָׁאוּל בַּאֲלָפָיו וְדָוִד בְּרִבְבֹתָֽו׃
6 ಆಗ ಆಕೀಷನು ದಾವೀದನನ್ನು ಕರೆದು ಅವನಿಗೆ, “ನಿಜವಾಗಿಯೂ ಯೆಹೋವ ದೇವರಾಣೆ, ನೀನು ಯಥಾರ್ಥನು, ನೀನು ನನ್ನ ಸಂಗಡ ದಂಡಿನಲ್ಲಿ ಹೋಗುತ್ತಾ ಬರುತ್ತಾ ಇರುವುದು ನನ್ನ ದೃಷ್ಟಿಗೆ ಒಳ್ಳೆಯದು. ನೀನು ನನ್ನ ಬಳಿಗೆ ಬಂದ ದಿನದಿಂದ ಈವರೆಗೂ ನಿನ್ನಲ್ಲಿ ಕೆಟ್ಟದ್ದನ್ನು ಕಂಡಿಲ್ಲ. ಆದರೆ ಈಗ ನೀನು ಅಧಿಪತಿಗಳ ದೃಷ್ಟಿಗೆ ಒಳ್ಳೆಯವನಲ್ಲ.
וַיִּקְרָא אָכִישׁ אֶל־דָּוִד וַיֹּאמֶר אֵלָיו חַי־יְהֹוָה כִּֽי־יָשָׁר אַתָּה וְטוֹב בְּעֵינַי צֵאתְךָ וּבֹאֲךָ אִתִּי בַּֽמַּחֲנֶה כִּי לֹֽא־מָצָאתִֽי בְךָ רָעָה מִיּוֹם בֹּאֲךָ אֵלַי עַד־הַיּוֹם הַזֶּה וּבְעֵינֵי הַסְּרָנִים לֹא־טוֹב אָֽתָּה׃
7 ಆದ್ದರಿಂದ ನೀನು ಫಿಲಿಷ್ಟಿಯರ ಅಧಿಪತಿಗಳ ದೃಷ್ಟಿಗೆ ಮೆಚ್ಚಿಗೆ ಇಲ್ಲದ್ದರಿಂದ ಈಗ ಸಮಾಧಾನವಾಗಿ ಹಿಂದಕ್ಕೆ ನಿನ್ನ ಸ್ಥಳಕ್ಕೆ ಹೋಗು,” ಎಂದನು.
וְעַתָּה שׁוּב וְלֵךְ בְּשָׁלוֹם וְלֹא־תַעֲשֶׂה רָע בְּעֵינֵי סַרְנֵי פְלִשְׁתִּֽים׃
8 ದಾವೀದನು ಆಕೀಷನಿಗೆ, “ನನ್ನ ಯಜಮಾನನಾದ ಅರಸನ ಶತ್ರುಗಳ ಸಂಗಡ ಯುದ್ಧಮಾಡಲು ಹೋಗದ ಹಾಗೆ ನಾನೇನು ಮಾಡಿದೆನು? ನಿನ್ನ ದಾಸನು ನಿನ್ನ ಬಳಿಗೆ ಬಂದಂದಿನಿಂದ ಈ ದಿನದವರೆಗೂ ನನ್ನಲ್ಲಿ ಏನು ಕಂಡುಕೊಂಡಿ?” ಎಂದನು.
וַיֹּאמֶר דָּוִד אֶל־אָכִישׁ כִּי מֶה עָשִׂיתִי וּמַה־מָּצָאתָ בְעַבְדְּךָ מִיּוֹם אֲשֶׁר הָיִיתִי לְפָנֶיךָ עַד הַיּוֹם הַזֶּה כִּי לֹא אָבוֹא וְנִלְחַמְתִּי בְּאֹיְבֵי אֲדֹנִי הַמֶּֽלֶךְ׃
9 ಆಕೀಷನು ದಾವೀದನಿಗೆ ಉತ್ತರವಾಗಿ, “ನೀನು ನನ್ನ ದೃಷ್ಟಿಯಲ್ಲಿ ಒಬ್ಬ ದೇವದೂತನ ಹಾಗೆಯೇ ಉತ್ತಮನಾಗಿದ್ದೀ ಎಂದು ನಾನು ಬಲ್ಲೆನು. ಆದರೆ, ‘ಯುದ್ಧಕ್ಕೆ ಇವನು ನಮ್ಮ ಸಂಗಡ ಬರಬಾರದು,’ ಎಂದು ಫಿಲಿಷ್ಟಿಯರ ಅಧಿಪತಿಗಳು ಹೇಳಿದ್ದಾರೆ.
וַיַּעַן אָכִישׁ וַיֹּאמֶר אֶל־דָּוִד יָדַעְתִּי כִּי טוֹב אַתָּה בְּעֵינַי כְּמַלְאַךְ אֱלֹהִים אַךְ שָׂרֵי פְלִשְׁתִּים אָֽמְרוּ לֹא־יַעֲלֶה עִמָּנוּ בַּמִּלְחָמָֽה׃
10 ಆದ್ದರಿಂದ ನಾಳೆ ಉದಯಕ್ಕೆ ಎದ್ದು ನಿನ್ನ ಸಂಗಡ ಬಂದ ನಿನ್ನ ಯಜಮಾನನ ಸೇವಕರನ್ನು ಕರಕೊಂಡು, ಅವರ ಸಂಗಡ ಉದಯದಲ್ಲಿ ಬೆಳಕು ಆಗುವಾಗ ಹೊರಟು ಹೋಗು,” ಎಂದನು.
וְעַתָּה הַשְׁכֵּם בַּבֹּקֶר וְעַבְדֵי אֲדֹנֶיךָ אֲשֶׁר־בָּאוּ אִתָּךְ וְהִשְׁכַּמְתֶּם בַּבֹּקֶר וְאוֹר לָכֶם וָלֵֽכוּ׃
11 ಹಾಗೆಯೇ ದಾವೀದನೂ, ಅವನು ಜನರೂ ಉದಯದಲ್ಲಿ ಫಿಲಿಷ್ಟಿಯರ ದೇಶಕ್ಕೆ ತಿರುಗಿ ಹೋಗಲು ಮುಂಜಾನೆ ಎದ್ದರು. ಫಿಲಿಷ್ಟಿಯರು ಇಜ್ರೆಯೇಲ್ ಎಂಬ ಪಟ್ಟಣಕ್ಕೆ ಹೊರಟು ಹೋದರು.
וַיַּשְׁכֵּם דָּוִד הוּא וַאֲנָשָׁיו לָלֶכֶת בַּבֹּקֶר לָשׁוּב אֶל־אֶרֶץ פְּלִשְׁתִּים וּפְלִשְׁתִּים עָלוּ יִזְרְעֶֽאל׃

< ಸಮುವೇಲನು - ಪ್ರಥಮ ಭಾಗ 29 >