< ಸಮುವೇಲನು - ಪ್ರಥಮ ಭಾಗ 26 >

1 ಜೀಫ್ಯರು ಗಿಬೆಯದಲ್ಲಿರುವ ಸೌಲನ ಬಳಿಗೆ ಬಂದು, “ದಾವೀದನು ಯೆಷಿಮೋನಿಗೆ ಎದುರಾದ ಹಕೀಲಾ ಬೆಟ್ಟದಲ್ಲಿ ಅಡಗಿಕೊಂಡಿದ್ದಾನೆ,” ಎಂದರು.
Zifawa suka je wurin Shawulu a Gibeya suka ce, “Ashe, ba Dawuda ne ya ɓuya a tudun Hakila da yake fuskantar Yeshimon ba?”
2 ಆಗ ಸೌಲನು ಎದ್ದು ಜೀಫ್ ಮರುಭೂಮಿಯಲ್ಲಿರುವ ದಾವೀದನನ್ನು ಹುಡುಕಲು ಇಸ್ರಾಯೇಲಿನಲ್ಲಿ ಆಯ್ದ ಮೂರು ಸಾವಿರ ಜನರ ಸಂಗಡ ಜೀಫ್ ಮರುಭೂಮಿಗೆ ಹೊರಟುಹೋಗಿ,
Sai Shawulu ya tashi ya gangara zuwa Jejin Zif, tare da zaɓaɓɓun mutane dubu uku na Isra’ila. Suka fita neman Dawuda a can.
3 ಯೆಷಿಮೋನಿಗೆ ಎದುರಾದ ಮಾರ್ಗದಲ್ಲಿರುವ ಹಕೀಲಾ ಬೆಟ್ಟದಲ್ಲಿ ದಂಡಿಳಿಸಿದನು. ದಾವೀದನು ಸೌಲನು ತನ್ನ ಹಿಂದೆ ಮರುಭೂಮಿಗೆ ಬಂದದ್ದನ್ನು ನೋಡಿ, ಮರುಭೂಮಿಯಲ್ಲಿ ನಿಂತನು.
Shawulu ya yi sansani a bakin hanyar zuwa tudun Hakila mai fuskantar Yeshimon. Amma Dawuda yana zaune a jeji. Sa’ad da ya ga Shawulu ya biyo shi har zuwa can,
4 ದಾವೀದನು ಗೂಢಚಾರರನ್ನು ಕಳುಹಿಸಿ, ಸೌಲನು ಬಂದದ್ದು ನಿಶ್ಚಯವೆಂದು ತಿಳಿದುಕೊಂಡನು.
sai ya aiki’yan leƙen asiri su tabbata lalle Shawulu ya iso can.
5 ದಾವೀದನು ಎದ್ದು ಸೌಲನು ಇಳಿದುಕೊಂಡಿದ್ದ ಸ್ಥಳಕ್ಕೆ ಬಂದನು. ಸೌಲನೂ, ಅವನ ದಂಡಿನ ನಾಯಕನಾಗಿರುವ ನೇರನ ಮಗನಾದ ಅಬ್ನೇರನೂ ಮಲಗಿರುವ ಸ್ಥಳವನ್ನು ದಾವೀದನು ನೋಡಿದನು. ಸೌಲನು ಮಧ್ಯದಲ್ಲಿ ಮಲಗಿದ್ದನು. ಜನರು ಅವನ ಸುತ್ತಲೂ ದಂಡಾಗಿ ಇಳಿದುಕೊಂಡಿದ್ದರು.
Sai Dawuda ya kintsa ya tafi inda Shawulu ya yi sansani. Ya ga inda Shawulu da Abner ɗan Ner shugaban ƙungiyar soja suka kwanta. Shawulu yana kwance a cikin sansani tare da sojoji kewaye da shi.
6 ಆಗ ದಾವೀದನು ಹಿತ್ತಿಯನಾದ ಅಹೀಮೆಲೆಕನನ್ನು ಮತ್ತು ಚೆರೂಯಳ ಮಗನಾಗಿರುವ ಯೋವಾಬನ ಸಹೋದರ ಅಬೀಷೈಯನ್ನು ನೋಡಿ, “ನನ್ನ ಸಂಗಡ ಸೌಲನ ದಂಡಿನಲ್ಲಿ ಪ್ರವೇಶಿಸಲು ಬರುವವರು ಯಾರು?” ಎಂದು ಕೇಳಿದನು. ಅದಕ್ಕೆ ಅಬೀಷೈಯನು, “ನಾನು ನಿನ್ನ ಸಂಗಡ ಬರುವೆನು,” ಎಂದನು.
Sai Dawuda ya ce wa Ahimelek mutumin Hitti da Abishai ɗan Zeruhiya ɗan’uwan Yowab, “Wa zai gangara tare da ni zuwa sansanin Shawulu?” Sai Abishai ya ce, “Zan tafi tare da kai.”
7 ದಾವೀದನೂ, ಅಬೀಷೈಯನೂ ರಾತ್ರಿಯಲ್ಲಿ ಆ ಜನರ ಬಳಿಗೆ ಬಂದರು. ಸೌಲನು ಕಂದಕದೊಳಗೆ ಮಲಗಿ ನಿದ್ರೆ ಮಾಡುತ್ತಿದ್ದನು. ಅವನ ಈಟಿಯು ಅವನ ತಲೆದಿಂಬಿನ ಬಳಿಯಲ್ಲಿ ನೆಟ್ಟಿತ್ತು. ಆದರೆ ಅವನ ಸುತ್ತಲು ಅಬ್ನೇರನೂ, ಜನರೂ ಮಲಗಿದ್ದರು.
Saboda haka Dawuda da Abishai suka gangara zuwa wurin rundunar da dare, sai ga Shawulu kwance yana barci a cikin sansani da māshinsa a kafe a ƙasa kusa da kansa. Abner kuwa tare da sojoji suna kwance kewaye da shi.
8 ಆಗ ಅಬೀಷೈಯನು ದಾವೀದನಿಗೆ, “ಈ ಹೊತ್ತು ದೇವರು ನಿನ್ನ ಶತ್ರುವನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾರೆ; ಈಗ ನಾನು ಅವನನ್ನು ಈಟಿಯಿಂದ ಒಂದೇ ಪೆಟ್ಟಿನಿಂದ ನೆಲಕ್ಕೆ ಹತ್ತುವಂತೆ ತಿವಿಯಲು ಅಪ್ಪಣೆಕೊಡಬೇಕು; ಎರಡು ಸಾರಿ ಹೊಡೆಯುವುದಿಲ್ಲ,” ಎಂದನು.
Abishai ya ce wa Dawuda, “Yau Allah ya ba da maƙiyinka a hannunka. Bari in kafe shi da ƙasa da māshina, zan soke shi da māshi sau ɗaya tak, ba na bukata in soke shi sau biyu.”
9 ಆದರೆ ದಾವೀದನು ಅಬೀಷೈಯನಿಗೆ, “ಅವನನ್ನು ಸಂಹರಿಸಬೇಡ. ಏಕೆಂದರೆ ಅಪರಾಧವಿಲ್ಲದೆ ಯೆಹೋವ ದೇವರ ಅಭಿಷಿಕ್ತನ ವಿರೋಧವಾಗಿ ಕೈ ಹಾಕುವವನು ಯಾರು?” ಎಂದನು.
Amma Dawuda ya ce wa Abishai, “Kada ka hallaka shi. Wa zai sa hannu a kan shafaffe na Ubangiji, har yă tsira?
10 ಇದಲ್ಲದೆ ಇನ್ನೂ ದಾವೀದನು, “ಯೆಹೋವ ದೇವರ ಜೀವದಾಣೆ, ಯೆಹೋವ ದೇವರೇ ಅವನನ್ನು ಹೊಡೆಯುವರು, ಇಲ್ಲವೆ ಅವನ ಕಾಲ ಬಂದು ಅವನು ಸಾಯುವನು, ಇಲ್ಲವೆ ಯುದ್ಧಕ್ಕೆ ಹೋಗಿ ನಾಶವಾಗುವನು.
Muddin Ubangiji yana a raye, Ubangiji da kansa zai buge shi, ko yă mutu a lokacinsa, ko kuma yă mutu a wurin yaƙi.
11 ನಾನು ನನ್ನ ಕೈಯನ್ನು ಯೆಹೋವ ದೇವರ ಅಭಿಷಿಕ್ತನ ಮೇಲೆ ಹಾಕದ ಹಾಗೆ ಯೆಹೋವ ದೇವರು ನನಗೆ ತಡೆಯಲಿ. ಈಗ ಅವನ ತಲೆದಿಂಬಿನ ಬಳಿಯಲ್ಲಿರುವ ಈಟಿಯನ್ನೂ, ನೀರಿನ ತಂಬಿಗೆಯನ್ನೂ ತೆಗೆದುಕೋ ನಾವು ಹೋಗೋಣ,” ಎಂದನು.
Amma Allah yă sawwaƙa in sa hannu a shafaffen Ubangiji, ka ɗauki māshin da butar ruwan da take kusa da kansa mu tafi.”
12 ದಾವೀದನು ಸೌಲನ ತಲೆದಿಂಬಿನ ಬಳಿಯಲ್ಲಿದ್ದ ಈಟಿಯನ್ನೂ, ನೀರಿನ ತಂಬಿಗೆಯನ್ನೂ ತೆಗೆದುಕೊಂಡನು. ಅವರು ಹೊರಟು ಹೋದರು. ಒಬ್ಬರಾದರೂ ನೋಡಲಿಲ್ಲ ಇಲ್ಲವೆ ತಿಳಿದುಕೊಳ್ಳಲಿಲ್ಲ, ಅರಿತಿದ್ದಿಲ್ಲ, ಯಾರೂ ಎಚ್ಚೆತ್ತಿರಲಿಲ್ಲ. ಏಕೆಂದರೆ ಯೆಹೋವ ದೇವರಿಂದ ಗಾಢನಿದ್ರೆಯು ಅವರ ಮೇಲೆ ಇಳಿದ ಕಾರಣ ಅವರೆಲ್ಲರು ಗಾಢ ನಿದ್ರೆಯಲ್ಲಿದ್ದರು.
Saboda haka Dawuda ya ɗauki māshin da butar ruwan da take kusa da Shawulu suka tafi. Ba wanda ya gan su, ba wanda ya san abin da ya faru, ba kuwa wanda ya farka, dukansu suna barci gama Ubangiji ya sa barci mai nauyi ya ɗauke su.
13 ದಾವೀದನು ದಾಟಿ ಆ ಕಡೆಗೆ ಹೋಗಿ ತಮಗೂ, ಅವರಿಗೂ ಮಧ್ಯದಲ್ಲಿ ಬಹಳ ಸ್ಥಳ ಉಂಟಾಗುವ ಹಾಗೆ ದೂರವಾಗಿರುವ ಒಂದು ಬೆಟ್ಟದ ಕೊನೆಯಲ್ಲಿ ನಿಂತು,
Sa’an nan Dawuda ya haye zuwa wancan gefen kwarin, ya hau kan wani tudu mai ɗan nisa inda Shawulu tare da mutanensa suke. Akwai babban fili tsakaninsu.
14 ಸೈನಿಕರಿಗೂ ನೇರನ ಮಗನಾದ ಅಬ್ನೇರನಿಗೂ ಕೇಳಿಸುವಂತೆ ಕೂಗಿ, “ಅಬ್ನೇರನೇ, ನೀನು ಉತ್ತರ ಕೊಡುವುದಿಲ್ಲವೋ?” ಎಂದನು. ಅದಕ್ಕೆ ಅಬ್ನೇರನು ಉತ್ತರವಾಗಿ, “ಅರಸನಿಗೆ ಎದುರಾಗಿ ಕೂಗುವ ನೀನು ಯಾರು?” ಎಂದನು.
Sai Dawuda ya kira sojojin Shawulu da kuma Abner ɗan Ner ya ce, “Abner ba za ka amsa mini ba?” Abner ya ce, “Wane ne yake kira yana damun sarki haka?”
15 ಆಗ ದಾವೀದನು ಅಬ್ನೇರನಿಗೆ, “ನೀನು ಪರಾಕ್ರಮಶಾಲಿಯಲ್ಲವೇ? ಇಸ್ರಾಯೇಲಿನಲ್ಲಿ ನಿನಗೆ ಸಮಾನನಾದವನು ಯಾರು? ಆದರೆ ನೀನು ನಿನ್ನ ಒಡೆಯನಾದ ಅರಸನನ್ನು ಕಾಯದೆ ಹೋದದ್ದೇನು? ಜನರಲ್ಲಿ ಒಬ್ಬನು ನಿನ್ನ ಒಡೆಯನಾದ ಅರಸನನ್ನು ಸಂಹರಿಸುವುದಕ್ಕೆ ಬಂದಿದ್ದನು.
Dawuda ya ce wa Abner, “Wane irin mutum ne kai? Ba kai ne soja mafi iya yaƙi a Isra’ila ba? Don me ba ka yi gadin ranka yă daɗe, sarki da kyau ba? Ɗazu wani ya shiga tsakiyarku don yă kashe ranka yă daɗe, sarki.
16 ನೀನು ಮಾಡಿದ ಈ ಕಾರ್ಯ ಒಳ್ಳೆಯದಲ್ಲ. ಯೆಹೋವ ದೇವರ ಜೀವದಾಣೆ, ಯೆಹೋವ ದೇವರ ಅಭಿಷಿಕ್ತನಾದ ನಿಮ್ಮ ಒಡೆಯನನ್ನು ಕಾಯದೆ ಹೋದದ್ದರಿಂದ, ನೀವು ಮರಣಕ್ಕೆ ಯೋಗ್ಯರು. ಈಗ ಅರಸನ ತಲೆದಿಂಬಿನ ಬಳಿಯಲ್ಲಿದ್ದ ಅವನ ಈಟಿಯೂ, ನೀರಿನ ತಂಬಿಗೆಯೂ ಎಲ್ಲಿ ಇವೆಯೋ ನೋಡು,” ಎಂದನು.
Abin da ka yi bai yi kyau ba. Muddin Ubangiji yana a raye kai da mutanenka kun cancanci mutuwa, domin ba ku lura da maigidanku shafaffe na Ubangiji ba. Ka duba kewaye da kai, ina māshi da kuma butar ruwan da suke kusa da kansa?”
17 ಆಗ ಸೌಲನು ದಾವೀದನ ಸ್ವರವನ್ನು ತಿಳಿದುಕೊಂಡು, “ನನ್ನ ಪುತ್ರನಾದ ದಾವೀದನೇ, ಇದು ನಿನ್ನ ಸ್ವರವಲ್ಲವೋ?” ಎಂದನು. ದಾವೀದನು, “ಅರಸನಾದ ನನ್ನ ಒಡೆಯನೇ, ನನ್ನ ಧ್ವನಿಯೇ ಹೌದು,” ಎಂದನು.
Shawulu ya gane muryar Dawuda, sai ya ce, “Muryarka ke nan ɗana Dawuda?” Dawuda ya ce, “I, muryata ce ya ranka yă daɗe, sarki.”
18 “ನನ್ನ ಒಡೆಯನು ತನ್ನ ಸೇವಕನನ್ನು ಹೀಗೆ ಹಿಂದಟ್ಟುವುದೇನು? ನಾನೇನು ಮಾಡಿದೆನು?
Ya ƙara da cewa, “Don me ranka yă daɗe, yake fafarata? Mene ne na yi? Wane abu ne aka same ni da laifi a kai?
19 ನನ್ನ ಕೈಯಲ್ಲಿ ಏನು ಕೆಟ್ಟತನವಿದೆ? ಈಗ ಅರಸನಾದ ನನ್ನ ಒಡೆಯನು ದಯಮಾಡಿ ತನ್ನ ಸೇವಕನ ಮಾತುಗಳನ್ನು ಕೇಳಲಿ. ಯೆಹೋವ ದೇವರು ನಿನ್ನನ್ನು ನನಗೆ ವಿರೋಧವಾಗಿ ಪ್ರೇರೇಪಿಸಿದರೆ, ಕಾಣಿಕೆಯನ್ನು ಅಂಗೀಕರಿಸಲಿ. ಆದರೆ ಮಾನವರು ಇದನ್ನು ಮಾಡಿದರೆ, ಅವರು ಯೆಹೋವ ದೇವರ ಮುಂದೆ ಶಾಪಗ್ರಸ್ತರಾಗಿರಲಿ. ಏಕೆಂದರೆ, ‘ನೀನು ಹೋಗಿ? ಅನ್ಯದೇವರುಗಳನ್ನು ಸೇವಿಸು,’ ಎಂದು ಹೇಳಿ ಅವರು ಈ ಹೊತ್ತು ನನ್ನನ್ನು ಯೆಹೋವ ದೇವರ ಬಾಧ್ಯತೆಯಲ್ಲಿ ಇರದ ಹಾಗೆ ಓಡಿಸಿಬಿಟ್ಟರು.
To, bari ranka yă daɗe, sarkina yă kasa kunne yă ji abin da zan faɗa. Idan Ubangiji ne ya sa ka yi fushi da ni, bari yă karɓi hadaya ta hatsi. Amma idan mutane ne suka sa ka, bari a la’anta su, Ubangiji ne shaidata. Gama sun kore ni don kada in sami rabo cikin gādon Ubangiji, suna cewa, ‘Ka je ka bauta wa waɗansu alloli.’
20 ಆದ್ದರಿಂದ ಯೆಹೋವ ದೇವರ ಮುಖದ ಮುಂದೆ ನನ್ನ ರಕ್ತವು ನೆಲದ ಮೇಲೆ ಬೀಳದಿರಲಿ. ಒಬ್ಬನು ಬೆಟ್ಟಗಳಲ್ಲಿ ಕೌಜುಗವನ್ನು ಬೇಟೆಯಾಡುವಂತೆ, ಇಸ್ರಾಯೇಲಿನ ಅರಸನು ಒಂದು ನೊಣವನ್ನು ಹುಡುಕಲು ಹೊರಟನು,” ಎಂದನು.
Kada ka yarda jinina yă zuba a ƙasa nesa da gaban Ubangiji. Sarkin Isra’ila ya fito yă nemi kuɗin cizo kamar mai farautar kazan duwatsu.”
21 ಆಗ ಸೌಲನು, “ನಾನು ಪಾಪಮಾಡಿದೆನು. ನನ್ನ ಮಗನಾದ ದಾವೀದನೇ ತಿರುಗಿ ಬಾ. ಏಕೆಂದರೆ ನನ್ನ ಪ್ರಾಣ ಈ ಹೊತ್ತು ನಿನ್ನ ದೃಷ್ಟಿಗೆ ಅಮೂಲ್ಯವಾಗಿದ್ದರಿಂದ ನಾನು ಇನ್ನು ಮೇಲೆ ನಿನಗೆ ಕೇಡು ಮಾಡೆನು. ಇದುವರೆಗೆ ನಾನು ಮಾಡಿದ್ದು ಹುಚ್ಚುತನವೂ, ದೊಡ್ಡ ತಪ್ಪೂ ಆಗಿದೆ,” ಎಂದನು.
Sai Shawulu ya ce, “Na yi zunubi ka dawo Dawuda ɗana. Ba zan yi maka kome ba, domin ka darajarta raina yau. Lalle na yi wawanci! Na yi babban kuskure.”
22 ದಾವೀದನು ಉತ್ತರವಾಗಿ, “ಅರಸನ ಈಟಿಯು ಇಲ್ಲಿ ಇದೆ. ಸೇವಕರಲ್ಲಿ ಒಬ್ಬನು ಈ ಕಡೆಗೆ ಬಂದು, ಅದನ್ನು ತೆಗೆದುಕೊಂಡು ಹೋಗಲಿ.
Dawuda ya ce, “Ga māshin sarki, ka aiko wani saurayi yă zo yă karɓa.
23 ಆದರೆ ಯೆಹೋವ ದೇವರು ಪ್ರತಿಯೊಬ್ಬನಿಗೆ ಅವನ ನೀತಿಗೂ, ಅವನ ನಂಬಿಗಸ್ತಿಕೆಗೂ ತಕ್ಕ ಫಲವನ್ನು ಕೊಡಲಿ. ಯೆಹೋವ ದೇವರು ಈ ಹೊತ್ತು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರು. ಆದರೆ ನಾನು ಯೆಹೋವ ದೇವರ ಅಭಿಷಿಕ್ತನ ಮೇಲೆ ನನ್ನ ಕೈ ಚಾಚಲು ಮನಸ್ಸಿಲ್ಲದೆ ಇದ್ದೆನು.
Ubangiji yakan sāka wa kowa bisa ga adalcinsa da amincinsa. Ubangiji ya bashe ka a hannuna yau, amma ba zan sa hannuna a kan shafaffe na Ubangiji ba.
24 ಈ ದಿನ ನಿನ್ನ ಪ್ರಾಣವು ನನ್ನ ದೃಷ್ಟಿಗೆ ಹೇಗೆ ದೊಡ್ಡದಾಗಿತ್ತೋ, ಹಾಗೆಯೇ ನನ್ನ ಪ್ರಾಣವು ಯೆಹೋವ ದೇವರ ದೃಷ್ಟಿಗೆ ದೊಡ್ಡದಾಗಿರಲಿ. ಅವರು ನನ್ನನ್ನು ಎಲ್ಲಾ ಸಂಕಟದಿಂದ ತಪ್ಪಿಸಿಬಿಡಲಿ,” ಎಂದನು.
Kamar yadda na ga darajar ranka yau. Haka ma bari Ubangiji yă ga darajar raina, yă cece ni daga dukan wahala.”
25 ಆಗ ಸೌಲನು ದಾವೀದನಿಗೆ, “ನನ್ನ ಮಗನಾದ ದಾವೀದನೇ, ದೇವರು ನಿನ್ನನ್ನು ಆಶೀರ್ವದಿಸಲಿ. ನೀನು ಮಹತ್ಕಾರ್ಯಗಳನ್ನು ಮಾಡುವೆ, ಗೆದ್ದೇ ಗೆಲ್ಲುವೆ,” ಎಂದನು. ಹಾಗೆಯೇ ದಾವೀದನು ತನ್ನ ಮಾರ್ಗವಾಗಿ ಹೋದನು. ಸೌಲನು ತನ್ನ ಸ್ಥಳಕ್ಕೆ ಹಿಂದಿರುಗಿ ಹೋದನು.
Sai Shawulu ya ce wa Dawuda, “Allah yă albarkace ka ɗana, Dawuda, za ka yi manyan abubuwa, tabbatacce kuma ka yi nasara.” Sai Dawuda ya yi tafiyarsa, Shawulu kuwa ya koma gida.

< ಸಮುವೇಲನು - ಪ್ರಥಮ ಭಾಗ 26 >