< ಸಮುವೇಲನು - ಪ್ರಥಮ ಭಾಗ 25 >

1 ಸಮುಯೇಲನು ಮರಣಹೊಂದಿದನು. ಇಸ್ರಾಯೇಲರೆಲ್ಲರು ಕೂಡಿಬಂದು ಅವನಿಗೋಸ್ಕರ ಗೋಳಾಡಿ, ರಾಮದಲ್ಲಿರುವ ಅವನ ಮನೆಯ ಅಂಗಳದಲ್ಲಿ ಅವನನ್ನು ಸಮಾಧಿಮಾಡಿದರು. ಅನಂತರ ದಾವೀದನು ಹೊರಟು ಪಾರಾನ್ ಮರುಭೂಮಿಗೆ ಹೋದನು.
سموئیل وفات یافت و همۀ اسرائیل جمع شده، برای او عزاداری کردند. سپس او را در شهر خودش «رامه» دفن کردند. در این هنگام، داوود به صحرای معون رفت.
2 ಆದರೆ ಕರ್ಮೆಲಿನಲ್ಲಿ ಸೊತ್ತುಗಳಿರುವ ಮಾವೋನಿನ ಒಬ್ಬ ಮನುಷ್ಯನಿದ್ದನು. ಅವನು ಬಹು ಸಿರಿವಂತನಾಗಿದ್ದನು. ಅವನಿಗೆ ಮೂರು ಸಾವಿರ ಕುರಿಗಳೂ ಸಾವಿರ ಮೇಕೆಗಳೂ ಇದ್ದವು.
در آنجا مرد ثروتمندی از خاندان کالیب به نام نابال زندگی می‌کرد. او املاکی در کرمل داشت و صاحب سه هزار گوسفند و هزار بز بود. همسر او اَبیجایِل نام داشت و زنی زیبا و باهوش بود، اما خود او خشن و بدرفتار بود. یک روز وقتی نابال در کرمل مشغول چیدن پشم گوسفندانش بود،
3 ಅವನು ಕರ್ಮೆಲಿನಲ್ಲಿ ತನ್ನ ಕುರಿಗಳ ಉಣ್ಣೆ ಕತ್ತರಿಸುತ್ತಿದ್ದನು. ಈ ಮನುಷ್ಯನ ಹೆಸರು ನಾಬಾಲನು. ಅವನ ಹೆಂಡತಿಯ ಹೆಸರು ಅಬೀಗೈಲಳು. ಆ ಸ್ತ್ರೀಯು ಬಹು ಬುದ್ಧಿವಂತೆ ಹಾಗು ಸುಂದರಿ. ಆದರೆ ಆ ಮನುಷ್ಯನು ಒರಟಾದವನೂ ದುಷ್ಕರ್ಮಿಯೂ ಆಗಿದ್ದನು. ಅವನು ಕಾಲೇಬನ ವಂಶಸ್ಥನು.
4 ನಾಬಾಲನು ತನ್ನ ಕುರಿಗಳ ಉಣ್ಣೆ ಕತ್ತರಿಸುವ ವರ್ತಮಾನವನ್ನು ದಾವೀದನು ಮರುಭೂಮಿಯಲ್ಲಿ ಕೇಳಿದನು.
5 ಆಗ ದಾವೀದನು ಹತ್ತು ಮಂದಿ ಯುವಕರನ್ನು ಕಳುಹಿಸಿದನು. ದಾವೀದನು ಅವರಿಗೆ, “ನೀವು ಕರ್ಮೆಲಿಗೆ ಹೋಗಿ ನಾಬಾಲನ ಬಳಿಗೆ ಸೇರಿದಾಗ, ನನ್ನ ಹೆಸರಿನಿಂದ ಅವನ ಕ್ಷೇಮಸಮಾಚಾರವನ್ನು ಕೇಳಿ, ಬಾಳುವವನಾದ ಅವನಿಗೆ ಹೇಳಬೇಕಾದದ್ದೇನೆಂದರೆ:
داوود ده نفر از افراد خود را نزد او فرستاد تا سلامش را به وی برسانند و چنین بگویند:
6 ‘ನಿನಗೆ ಸಮಾಧಾನವೂ, ನಿನ್ನ ಮನೆಗೆ ಸಮಾಧಾನವೂ ನಿನ್ನ ಸರ್ವಸಂಪತ್ತಿಗೂ ಸಮಾಧಾನವೂ ಆಗಲಿ.
«خدا تو و خانواده‌ات را کامیاب سازد و اموالت را برکت دهد.
7 “‘ಈಗ ನಿನಗೆ ಕುರಿಗಳ ಉಣ್ಣೆ ಕತ್ತರಿಸುವವರು ಉಂಟೆಂದು ಕೇಳಿದ್ದೇನೆ. ಆದರೆ ನಮ್ಮ ಸಂಗಡವಿದ್ದ ನಿನ್ನ ಕುರಿಕಾಯುವವರು ಕರ್ಮೆಲಿನಲ್ಲಿದ್ದ ದಿವಸಗಳೆಲ್ಲಾ ನಾವು ಅವರಿಗೆ ತೊಂದರೆಪಡಿಸಲಿಲ್ಲ. ಅವರು ಒಂದಾದರೂ ಕಳೆದುಕೊಳ್ಳಲಿಲ್ಲ.
شنیده‌ام مشغول چیدن پشم گوسفندانت هستی. ما به چوپانان تو که در این مدت در میان ما بوده‌اند آزاری نرسانده‌ایم و نگذاشته‌ایم حتی یکی از گوسفندانت که در کرمل هستند، گم شود.
8 ನಿನ್ನ ಸೇವಕರನ್ನು ಕೇಳು. ಅವರು ನಿನಗೆ ಹೇಳುವರು. ಆದ್ದರಿಂದ ಈಗ ಈ ಯುವಕರಿಗೆ ನಿನ್ನ ದೃಷ್ಟಿಯಲ್ಲಿ ದಯೆ ದೊರಕಲಿ. ಏಕೆಂದರೆ ಒಳ್ಳೆಯ ದಿವಸದಲ್ಲಿ ಬಂದೆವು. ನಿನ್ನ ಕೈಯಲ್ಲಿ ದೊರಕುವುದನ್ನು ನಿನ್ನ ಸೇವಕರಿಗೂ, ನಿನ್ನ ಪುತ್ರನಾದ ದಾವೀದನಿಗೂ ದಯಪಾಲಿಸು ಎಂದು ಅವನಿಗೆ ಹೇಳಿರಿ,’” ಎಂದು ಅವರನ್ನು ಕಳುಹಿಸಿದನು.
از چوپانان خود بپرس که ما راست می‌گوییم یا نه. پس حال که افرادم را نزد تو می‌فرستم، خواهش می‌کنم لطفی در حق آنها بکن و در این عید هر چه از دستت برآید به غلامانت و به دوستت داوود، بده.»
9 ದಾವೀದನ ಯುವಕರು ಬಂದು ಈ ಮಾತುಗಳನ್ನೆಲ್ಲಾ ದಾವೀದನ ಹೆಸರಿನಲ್ಲಿ ನಾಬಾಲನಿಗೆ ಹೇಳಿ ಮೌನವಾದರು.
افراد داوود پیغام را به نابال رساندند و منتظر پاسخ ماندند.
10 ನಾಬಾಲನು ದಾವೀದನ ಸೇವಕರಿಗೆ ಉತ್ತರವಾಗಿ, “ದಾವೀದನು ಯಾರು? ಇಷಯನ ಮಗನು ಯಾರು? ತಮ್ಮ ಯಜಮಾನನನ್ನು ಬಿಟ್ಟು ಅಗಲಿ ಹೋಗುವ ಸೇವಕರು ಈ ದಿವಸಗಳಲ್ಲಿ ಅನೇಕರು ಉಂಟು.
نابال گفت: «این داوود دیگر کیست و پسر یَسا چه کسی است؟ در این روزها نوکرانی که از نزد اربابان فرار می‌کنند، زیاد شده‌اند.
11 ನಾನು ನನ್ನ ರೊಟ್ಟಿಯನ್ನೂ ನೀರನ್ನೂ ಉಣ್ಣೆ ಕತ್ತರಿಸುವವರಿಗೋಸ್ಕರ ನಾನು ಸಿದ್ಧಮಾಡಿಸಿದ ಮಾಂಸವನ್ನು ತೆಗೆದು, ಎಲ್ಲಿಯವರೆಂದು ನಾನರಿಯದ ಮನುಷ್ಯರಿಗೆ ಕೊಡುವೆನೋ?” ಎಂದನು.
می‌خواهید نان و آب و گوشت را از دهان کارگرانم بگیرم و به شما که معلوم نیست از کجا آمده‌اید، بدهم؟»
12 ಹೀಗೆ ದಾವೀದನ ಯುವಕರು ತಮ್ಮ ಮಾರ್ಗವಾಗಿ ಹಿಂದಕ್ಕೆ ತಿರುಗಿ ದಾವೀದನ ಬಳಿಗೆ ಬಂದು, ಈ ಮಾತುಗಳನ್ನೆಲ್ಲಾ ತಿಳಿಸಿದರು.
افراد داوود نزد او برگشتند و آنچه را که نابال گفته بود برایش تعریف کردند.
13 ಆಗ ದಾವೀದನು ತನ್ನ ಜನರಿಗೆ, “ನಿಮ್ಮಲ್ಲಿ ಒಬ್ಬೊಬ್ಬನೂ ನಿಮ್ಮ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಳ್ಳಿರಿ,” ಎಂದನು. ಪ್ರತಿಯೊಬ್ಬನೂ ತನ್ನ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡನು. ಹಾಗೆಯೇ ದಾವೀದನೂ ತನ್ನ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಂಡನು. ದಾವೀದನ ಹಿಂದೆ ಹೆಚ್ಚು ಕಡಿಮೆ ನಾನೂರು ಮಂದಿ ಹೋದರು. ಇನ್ನೂರು ಮಂದಿ ಸಲಕರಣೆಗಳ ಬಳಿಯಲ್ಲಿ ನಿಂತರು.
داوود در حالی که شمشیر خود را به کمر می‌بست، به افرادش دستور داد که شمشیرهای خود را بردارند. چهارصد نفر شمشیر به دست همراه داوود به راه افتادند و دویست نفر نزد اثاثیه ماندند.
14 ಆಗ ಕೆಲಸದವರಲ್ಲಿ ಯುವಕನಾದವನೊಬ್ಬನು ನಾಬಾಲನ ಹೆಂಡತಿಯಾದ ಅಬೀಗೈಲಳಿಗೆ, “ನಮ್ಮ ಯಜಮಾನನನ್ನು ವಂದಿಸಲು ದಾವೀದನು ಮರುಭೂಮಿಯಿಂದ ದೂತರನ್ನು ಕಳುಹಿಸಿದನು.
در این موقع یکی از نوکران نابال نزد اَبیجایِل رفت و به او گفت: «داوود، افراد خود را از صحرا نزد ارباب ما فرستاد تا سلامش را به او برسانند، ولی ارباب ما به آنها اهانت نمود.
15 ಆದರೆ ಇವನು ಅವರನ್ನು ನಿಂದಿಸಿದನು. ಆ ಜನರು ನಮಗೆ ಮಹಾ ಉಪಕಾರಿಗಳಾಗಿದ್ದರು. ನಾವು ಹೊರಗೆ ಇರುವಾಗ ಅವರು ನಮ್ಮಲ್ಲಿ ಸಂಚರಿಸುತ್ತಿದ್ದ ದಿನಗಳೆಲ್ಲಾ ನಾವು ತೊಂದರೆ ಪಡಲಿಲ್ಲ. ಒಂದನ್ನಾದರೂ ಕಳೆದುಕೊಳ್ಳಲಿಲ್ಲ.
در صورتی که افراد داوود با ما رفتار خوبی داشته‌اند و هرگز آزارشان به ما نرسیده است، بلکه شب و روز برای ما و گوسفندانمان چون حصار بوده‌اند و تا وقتی که در صحرا نزد آنها بودیم حتی یک گوسفند از گلهٔ ما دزدیده نشد.
16 ಇದಲ್ಲದೆ ಅವರ ಸಂಗಡ ನಾವು ಕುರಿಗಳನ್ನು ಮೇಯಿಸಿಕೊಂಡು ಇದ್ದ ದಿನಗಳೆಲ್ಲಾ ನಮಗೆ ಅವರು ರಾತ್ರಿ ಹಗಲು ಒಂದು ಕೋಟೆಯಂತೆ ಗೋಡೆಯಾಗಿದ್ದರು.
17 ಈಗ ನೀನು ಮಾಡಬೇಕಾದದ್ದೇನೆಂದು ಆಲೋಚಿಸಿ ನೋಡು. ಏಕೆಂದರೆ ಕೇಡು ನಮ್ಮ ಯಜಮಾನನ ಮೇಲೂ ಅವನ ಮನೆಯ ಮೇಲೆಯೂ ನಿಶ್ಚಯವಾಗಿದೆ. ದುಷ್ಟನಾಗಿರುವ ಅವನ ಸಂಗಡ ಮಾತನಾಡುವುದು ಅಸಾಧ್ಯ,” ಎಂದನು.
بهتر است تا دیر نشده فکری به حال ارباب و خانواده‌اش بکنی، چون جانشان در خطر است. ارباب به قدری بداخلاق است که نمی‌شود با او حرف زد.»
18 ಆಗ ಅಬೀಗೈಲಳು ತೀವ್ರವಾಗಿ ಇನ್ನೂರು ರೊಟ್ಟಿಗಳನ್ನೂ ಎರಡು ಬುದ್ದಲಿ ದ್ರಾಕ್ಷಾರಸವನ್ನೂ ಬೇಯಿಸಿದ ಐದು ಕುರಿಗಳ ಮಾಂಸವನ್ನೂ ಐವತ್ತು ಸೇರು ಹುರಿದ ಧಾನ್ಯವನ್ನೂ ಒಣಗಿದ ನೂರು ದ್ರಾಕ್ಷಿ ಗೊನೆಗಳನ್ನೂ ಒಣಗಿದ ಇನ್ನೂರು ಅಂಜೂರದ ಉಂಡೆಗಳನ್ನೂ ಕತ್ತೆಗಳ ಮೇಲೆ ಹೇರಿಸಿಕೊಂಡು,
آنگاه اَبیجایِل با عجله دویست نان، دو مشک شراب، پنج گوسفند کباب شده، هفده کیلو غلهٔ برشته و صد نان کشمشی و دویست نان انجیری برداشته، آنها را روی چند الاغ گذاشت
19 ತನ್ನ ಸೇವಕರಿಗೆ, “ನನಗೆ ಮುಂದಾಗಿ ಹೋಗಿರಿ. ನಾನು ನಿಮ್ಮ ಹಿಂದೆ ಬರುವೆನು,” ಎಂದು ಹೇಳಿದಳು. ಆದರೆ ತನ್ನ ಗಂಡನಾದ ನಾಬಾಲನಿಗೆ ಇದನ್ನು ತಿಳಿಸಲಿಲ್ಲ.
و به نوکران خود گفت: «شما جلوتر بروید و من هم به دنبال شما خواهم آمد.» ولی در این مورد چیزی به شوهرش نگفت.
20 ಆಗ, ಅವಳು ಒಂದು ಕತ್ತೆಯ ಮೇಲೆ ಹತ್ತಿಕೊಂಡು ಮಾರ್ಗದಲ್ಲಿ ಬೆಟ್ಟದ ಮರೆಗೆ ಬಂದಾಗ, ದಾವೀದನೂ ಅವನ ಜನರೂ ಅವಳಿಗೆ ಎದುರಾಗಿ ಇಳಿದು ಬಂದರು. ಅವಳು ಅವರನ್ನು ಎದುರುಗೊಂಡಳು.
ابیجایل بر الاغ خود سوار شد و به راه افتاد. وقتی در کوه به سر یک پیچ رسید، داوود و افرادش را دید که به طرف او می‌آیند.
21 ಅಷ್ಟರಲ್ಲಿ ದಾವೀದನು ತನ್ನ ಜನರಿಗೆ, “ಅಡವಿಯಲ್ಲಿದ್ದ ಇವನ ಆಸ್ತಿಯಲ್ಲಿ ಏನೂ ನಷ್ಟವಾಗದಂತೆ ನಾನು ಕಾಪಾಡಿದ್ದು ವ್ಯರ್ಥವಾಯಿತು. ಅವನು ನಾನು ಮಾಡಿದ ಉಪಕಾರಕ್ಕೆ ಅಪಕಾರ ಮಾಡಿದ್ದಾನೆ.
داوود پیش خود چنین فکر کرده بود: «من در حق این مرد بسیار خوبی کردم. گله‌های او را محافظت نمودم و نگذاشتم چیزی از آنها دزدیده شود، اما او این خوبی مرا با بدی جبران کرد.
22 ಬೆಳಗಾಗುವಷ್ಟರಲ್ಲಿ ಅವನ ಜನರಲ್ಲಿ ನಾನು ಒಬ್ಬ ಗಂಡಸನನ್ನಾದರೂ ಉಳಿಸಿದರೆ, ದೇವರು ದಾವೀದನಾದ ನನಗೆ ಹೀಗೆಯೂ ಇದಕ್ಕಿಂತ ಅಧಿಕವಾಗಿಯೂ ಮಾಡಲಿ,” ಎಂದು ಹೇಳಿದ್ದನು.
خدا مرا سخت مجازات کند اگر تا فردا صبح یکی از افراد او را زنده بگذارم!»
23 ಅಬೀಗೈಲಳು ದಾವೀದನನ್ನು ಕಂಡಾಗ, ಕತ್ತೆಯಿಂದಿಳಿದು ದಾವೀದನಿಗೆ ಎದುರಾಗಿ ಹೋಗಿ, ಅವನ ಮುಂದೆ ಬೋರಲು ಬಿದ್ದು ನಮಸ್ಕರಿಸಿದಳು.
وقتی ابیجایل داوود را دید فوری از الاغ پیاده شد و به او تعظیم نمود.
24 ಆಮೇಲೆ ಅವನ ಪಾದಗಳ ಮೇಲೆ ಬಿದ್ದು, “ನನ್ನ ಒಡೆಯನೇ, ಈ ಅಕ್ರಮವು ನನ್ನ ಮೇಲಿರಲಿ; ದಯಮಾಡಿ ನಿನ್ನ ದಾಸಿಯಾದ ನಾನು ಮಾತಾಡುವುದಕ್ಕೆ ಅಪ್ಪಣೆಯಾಗಲಿ. ನಿನ್ನ ದಾಸಿಯ ಮಾತುಗಳನ್ನು ಕೇಳು.
او به پاهای داوود افتاده، گفت: «سرور من، تمام این تقصیرات را به گردن من بگذارید، ولی اجازه بفرمایید بگویم قضیه از چه قرار است:
25 ನನ್ನ ಒಡೆಯನೇ, ದಯಮಾಡಿ ದುಷ್ಟನಾದ ನಾಬಾಲನ ಮೇಲೆ ಲಕ್ಷ್ಯವಿಡಬೇಡ. ಏಕೆಂದರೆ ಅವನ ಹೆಸರು ಹೇಗೋ, ಹಾಗೆಯೇ ಅವನು. ಅವನು ನಾಬಾಲನೆಂಬ ಹೆಸರುಳ್ಳವನು. ಬುದ್ಧಿಹೀನತೆ ಅವನಲ್ಲಿ ಇದೆ. ಆದರೆ ನನ್ನ ಒಡೆಯನಾದ ನೀನು ಕಳುಹಿಸಿದ ನಿನ್ನ ಸೇವಕರನ್ನು ನಿನ್ನ ದಾಸಿಯಾದ ನಾನು ನೋಡಲಿಲ್ಲ.
نابال آدم بداخلاقی است. پس خواهش می‌کنم به حرفهایی که زده است توجه نکنید. همان‌گونه که از اسمش هم پیداست او شخص نادانی است. متأسفانه من از آمدن افراد شما مطلع نشدم.
26 ಆದಕಾರಣ ನನ್ನ ಒಡೆಯನೇ, ನೀನು ರಕ್ತ ಚೆಲ್ಲುವುದಕ್ಕೂ, ನಿನ್ನ ಕೈಯಿಂದ ನಿನಗೆ ಮುಯ್ಯಿ ತೀರಿಸಿಕೊಳ್ಳುವುದಕ್ಕೂ ಹೋಗುವುದನ್ನು ದೇವರು ತಡೆದದ್ದರಿಂದ, ಯೆಹೋವ ದೇವರ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ ನಿನ್ನ ಶತ್ರುಗಳೂ, ನನ್ನ ಒಡೆಯನಿಗೆ ಕೇಡನ್ನು ಹುಡುಕುವವರೂ ನಾಬಾಲನ ಹಾಗೆಯೇ ಆಗಲಿ.
سرور من، خداوند نمی‌خواهد دست شما به خون دشمنانتان آلوده شود و خودتان از آنها انتقام بگیرید، به حیات خداوند و به جان شما قسم که همهٔ دشمنان و بدخواهانتان مانند نابال هلاک خواهند شد.
27 ಈಗ ನಿನ್ನ ದಾಸಿಯು ನನ್ನ ಒಡೆಯನಿಗೆ ತೆಗೆದುಕೊಂಡು ಬಂದ ಈ ಕಾಣಿಕೆಯು ನನ್ನ ಒಡೆಯನ ಹೆಜ್ಜೆಯಲ್ಲಿ ನಡೆಯುವವರಿಗೆ ಸಲ್ಲಲಿ.
حال، خواهش می‌کنم این هدیهٔ کنیزتان را که برای افرادتان آورده است، قبول فرمایید
28 “ನೀನು ದಯಮಾಡಿ ನಿನ್ನ ದಾಸಿಯ ತಪ್ಪನ್ನು ಮನ್ನಿಸಬೇಕು. ಏಕೆಂದರೆ ನನ್ನ ಒಡೆಯನು ಯೆಹೋವ ದೇವರ ಯುದ್ಧಗಳನ್ನು ನಡೆಸುತ್ತಾನೆ. ಆದ್ದರಿಂದ ನಿನ್ನ ಜೀವಮಾನದಲ್ಲೆಲ್ಲಾ ನಿನ್ನಲ್ಲಿ ಕೆಟ್ಟತನ ಕಾಣದಿರಲಿ. ಯೆಹೋವ ದೇವರು ನಿಶ್ಚಯವಾಗಿ ನನ್ನ ಒಡೆಯನಾದ ನಿನಗೆ ಶಾಶ್ವತ ರಾಜ್ಯವನ್ನು ಸ್ಥಿರಪಡಿಸುವರು.
و مرا ببخشید. خداوند، شما و فرزندانتان را بر تخت سلطنت خواهد نشاند، چون برای اوست که می‌جنگید، و در تمام طول عمرتان هیچ بدی به شما نخواهد رسید.
29 ಈಗ ನಿನ್ನನ್ನು ಹಿಂದಟ್ಟಿ ನಿನ್ನ ಪ್ರಾಣವನ್ನು ಹುಡುಕುವುದಕ್ಕೆ ಒಬ್ಬನು ಎದ್ದಿದ್ದಾನೆ. ಆದರೂ ನನ್ನ ಒಡೆಯನ ಪ್ರಾಣವು ದೇವರಾದ ಯೆಹೋವ ದೇವರ ಬಳಿಯ ಜೀವದ ಕಟ್ಟಿನಲ್ಲಿ ಕಟ್ಟಿರುವುದು. ನಿನ್ನ ಶತ್ರುಗಳ ಪ್ರಾಣವನ್ನು ಕವಣೆಯ ಮಧ್ಯದಲ್ಲಿಟ್ಟು ಎಸೆದ ಹಾಗೆಯೇ ದೇವರು ಎಸೆದುಬಿಡುವರು.
هر وقت کسی بخواهد به شما حمله کند و شما را بکشد، خداوند، خدایتان جان شما را حفظ خواهد کرد، همان‌طور که گنج گرانبها را حفظ می‌کنند و دشمنانتان را دور خواهد انداخت، همان‌گونه که سنگها را در فلاخن گذاشته، می‌اندازند.
30 ಇದಲ್ಲದೆ ನನ್ನ ಒಡೆಯನಾದ ನಿನ್ನನ್ನು ಕುರಿತು ಯೆಹೋವ ದೇವರು ಹೇಳಿದ ಒಳ್ಳೆಯದೆಲ್ಲವನ್ನು ನಿನಗೆ ಮಾಡಿ, ನಿನ್ನನ್ನು ಇಸ್ರಾಯೇಲರ ಮೇಲೆ ನಾಯಕನಾಗಿ ನೇಮಿಸಿದಾಗ,
وقتی خداوند تمام وعده‌های خوب خود را در حق شما انجام دهد و شما را به سلطنت اسرائیل برساند،
31 ನೀನು ಸುಮ್ಮನೆ ನಿರಪರಾಧಿಯ ರಕ್ತವನ್ನು ಸುರಿಸಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡದ್ದರಿಂದ ಉಂಟಾಗುವ ಪಶ್ಚಾತ್ತಾಪ ಮನೋವ್ಯಥೆಗಳಿಗೆ ಕಾರಣವಿರುವದಿಲ್ಲ. ಆದರೆ ನನ್ನ ಒಡೆಯನನ್ನು ಯೆಹೋವ ದೇವರು ಚೆನ್ನಾಗಿ ನಡೆಸಿದಾಗ, ನಿನ್ನ ದಾಸಿಯನ್ನು ಜ್ಞಾಪಕಮಾಡಿಕೊಳ್ಳಬೇಕು,” ಎಂದಳು.
آنگاه از اینکه بی‌سبب دستتان را به خون آلوده نکردید و انتقام نگرفتند، پشیمان نخواهید شد. هنگامی که خداوند به شما توفیق دهد، کنیزتان را نیز به یاد آورید.»
32 ಆಗ ದಾವೀದನು ಅಬೀಗೈಲಳಿಗೆ, “ನನ್ನನ್ನು ಎದುರುಗೊಳ್ಳುವುದಕ್ಕೆ ಈ ಹೊತ್ತು ನಿನ್ನನ್ನು ಕಳುಹಿಸಿದ ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ.
داوود به ابیجایل پاسخ داد: «متبارک باد خداوند، خدای اسرائیل که امروز تو را نزد من فرستاد!
33 ನಿನ್ನ ಬುದ್ಧಿಮಾತಿಗಾಗಿಯೂ, ನಾನು ರಕ್ತ ಚೆಲ್ಲುವುದಕ್ಕೂ, ನನ್ನ ಕೈಯಿಂದ ನನಗೆ ಮುಯ್ಯಿ ತೀರಿಸಿಕೊಳ್ಳುವುದಕ್ಕೂ ಈ ಹೊತ್ತು ನನ್ನನ್ನು ತಡೆದ ನಿನಗೆ ಆಶೀರ್ವಾದ ಆಗಲಿ.
خدا تو را برکت دهد که چنین حکمتی داری و نگذاشتی دستهایم به خون مردم آلوده شود و با دستهای خود انتقام بگیرم.
34 ಏಕೆಂದರೆ ನಿನಗೆ ಕೇಡು ಆಗದ ಹಾಗೆ ನನ್ನನ್ನು ತಡೆದ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಜೀವದಾಣೆ, ನೀನು ತ್ವರೆಯಾಗಿ ನನ್ನನ್ನು ಎದುರುಗೊಳ್ಳದಿದ್ದರೆ, ಉದಯವಾಗುವಷ್ಟರಲ್ಲಿ ನಾಬಾಲನಿಗೆ ಒಬ್ಬನಾದರೂ ಉಳಿಯುತ್ತಿರಲಿಲ್ಲ,” ಎಂದು ಹೇಳಿದನು.
زیرا به حیات خداوند، خدای اسرائیل که نگذاشت به تو آسیبی برسانم قسم که اگر تو نزد من نمی‌آمدی تا فردا صبح کسی را از افراد نابال زنده نمی‌گذاشتم.»
35 ಅವಳು ತನಗೆ ತಂದದ್ದನ್ನು ದಾವೀದನು ತೆಗೆದುಕೊಂಡು ಅವಳಿಗೆ, “ನೀನು ಸಮಾಧಾನವಾಗಿ ನಿನ್ನ ಮನೆಗೆ ಹೋಗು; ನಾನು ನಿನ್ನ ಮಾತನ್ನು ಕೇಳಿ ನಿನ್ನ ಮುಖ ದಾಕ್ಷಿಣ್ಯವನ್ನು ನೋಡಿದೆನು,” ಎಂದನು.
آنگاه داوود هدایای او را قبول کرد و به او گفت: «به سلامتی به خانه‌ات برگرد، چون حرفهایت را شنیدم و مطابق خواهش تو عمل خواهم کرد.»
36 ಅಬೀಗೈಲಳು ನಾಬಾಲನ ಬಳಿಗೆ ಬಂದಾಗ, ಅರಸನ ಔತಣಕ್ಕೆ ಸಮಾನವಾದ ಔತಣ ಅವನ ಮನೆಯಲ್ಲಿತ್ತು. ಅವನು ಬಹಳವಾಗಿ ಕುಡಿದದ್ದರಿಂದ ಅವನ ಹೃದಯವು ಅವನಲ್ಲಿ ಉಲ್ಲಾಸಗೊಂಡಿತ್ತು. ಆದಕಾರಣ ಅವಳು ಉದಯವಾಗುವವರೆಗೆ ಅವನಿಗೆ ಕಡಿಮೆಯಾದದ್ದನ್ನಾಗಲಿ, ಹೆಚ್ಚಾದದ್ದನ್ನಾಗಲಿ ತಿಳಿಸಲಿಲ್ಲ.
وقتی اَبیجایِل به خانه رسید دید که شوهرش یک مهمانی شاهانه ترتیب داده و خودش هم سرمست از باده است. پس چیزی به او نگفت.
37 ಉದಯದಲ್ಲಿ ನಾಬಾಲನ ದ್ರಾಕ್ಷಾರಸದ ಅಮಲು ಇಳಿದಾಗ, ಅವನ ಹೆಂಡತಿಯು ಈ ಮಾತುಗಳನ್ನು ಅವನಿಗೆ ತಿಳಿಸಲು, ಹೃದಯಾಘಾತವಾಗಿ ಅವನು ಕಲ್ಲಿನ ಹಾಗಾದನು.
صبح روز بعد که مستی از سر نابال پریده بود، زنش همۀ وقایع را برای او تعریف کرد. ناگهان قلب نابال از حرکت بازایستاد و او مثل تکه سنگی بر بستر خود افتاد.
38 ಹೆಚ್ಚು ಕಡಿಮೆ ಹತ್ತು ದಿವಸಗಳಾದ ತರುವಾಯ, ಯೆಹೋವ ದೇವರ ದಂಡನೆಯ ನಿಮಿತ್ತ ನಾಬಾಲನು ಸತ್ತುಹೋದನು.
و بعد از ده روز خداوند بلایی به جانش فرستاد و او مرد.
39 ನಾಬಾಲನು ಸತ್ತನೆಂದು ದಾವೀದನು ಕೇಳಿದಾಗ, “ನನ್ನ ನಿಂದೆಯ ವ್ಯಾಜ್ಯವನ್ನು ನಾಬಾಲನಿಂದ ವಿಚಾರಿಸಿ, ತನ್ನ ಸೇವಕನನ್ನು ಕೇಡು ಮಾಡಗೊಡದ ಹಾಗೆ ತಡೆದ ಯೆಹೋವ ದೇವರು ಸ್ತುತಿಹೊಂದಲಿ. ಏಕೆಂದರೆ ಯೆಹೋವ ದೇವರು ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆ ಬರಮಾಡಿದರು,” ಎಂದನು. ದಾವೀದನು ಅಬೀಗೈಲಳನ್ನು ತನಗೆ ಹೆಂಡತಿಯಾಗಿ ತೆಗೆದುಕೊಳ್ಳುವುದಕ್ಕಾಗಿ ಅವಳ ಸಂಗಡ ಮಾತನಾಡಲು ಸೇವಕರನ್ನು ಕಳುಹಿಸಿದನು.
داوود وقتی شنید نابال مرده است، گفت: «خدا خود انتقام مرا از نابال گرفت و نگذاشت خدمتگزارش دستش به خون آلوده شود. سپاس بر خداوند که نابال را به سزای عمل بدش رسانید.» آنگاه داوود قاصدانی نزد اَبیجایِل فرستاد تا او را برای وی خواستگاری کنند.
40 ದಾವೀದನ ಸೇವಕರು ಕರ್ಮೆಲಿನಲ್ಲಿರುವ ಅಬೀಗೈಲಳ ಬಳಿಗೆ ಬಂದಾಗ ಅವಳಿಗೆ, “ದಾವೀದನು ನಿನ್ನನ್ನು ತನಗೆ ಹೆಂಡತಿಯಾಗಿ ತೆಗೆದುಕೊಳ್ಳುವುದಕ್ಕಾಗಿ ನಮ್ಮನ್ನು ನಿನ್ನ ಬಳಿಗೆ ಕಳುಹಿಸಿದನು,” ಎಂದು ಹೇಳಿದರು.
چون قاصدان به کرمل رسیدند به اَبیجایِل گفتند: «داوود ما را فرستاده تا تو را برایش به زنی بگیریم».
41 ಆಗ ಅವಳು ಎದ್ದು ಬೋರಲು ಬಿದ್ದು, “ನಿನ್ನ ದಾಸಿಯಾದ ನಾನು ನನ್ನ ಒಡೆಯನ ಸೇವಕರ ಪಾದಗಳನ್ನು ತೊಳೆಯುವುದಕ್ಕೂ ಸಿದ್ಧಳಾಗಿದ್ದೇನೆ,” ಎಂದಳು.
اَبیجایِل تعظیم کرده، جواب داد: «من کنیز او هستم و آماده‌ام تا پاهای خدمتگزارانش را بشویم.»
42 ಅಬೀಗೈಲಳು ತ್ವರೆಯಾಗಿ ಎದ್ದು ಕತ್ತೆಯ ಮೇಲೆ ಹತ್ತಿಕೊಂಡು, ತನ್ನ ಸಂಗಡ ಇರುವ ಐದು ಮಂದಿ ದಾಸಿಯರನ್ನು ಕರೆದುಕೊಂಡು ದಾವೀದನ ಸೇವಕರ ಹಿಂದೆ ಹೋಗಿ, ಅವನಿಗೆ ಹೆಂಡತಿಯಾದಳು.
او فوری از جا برخاست و پنج کنیزش را با خود برداشته، سوار بر الاغ شد و همراه قاصدان نزد داوود رفت و زن او شد.
43 ಇದಲ್ಲದೆ ದಾವೀದನು ಇಜ್ರೆಯೇಲ್ ಊರಿನವಳಾದ ಅಹೀನೋವಮಳನ್ನು ಮದುವೆ ಮಾಡಿಕೊಂಡಿದ್ದನು. ಅವರಿಬ್ಬರೂ ಅವನ ಹೆಂಡತಿಯರಾದರು.
داوود زن دیگری نیز به نام اخینوعم یزرعیلی داشت.
44 ಆದರೆ ಸೌಲನು ದಾವೀದನ ಹೆಂಡತಿಯಾಗಿದ್ದ ಮೀಕಲಳೆಂಬ ತನ್ನ ಮಗಳನ್ನು ಗಲ್ಲೀಮ್ ಪಟ್ಟಣದ ಲಯಿಷನ ಮಗನಾದ ಪಲ್ಟೀ ಎಂಬವನಿಗೆ ಮದುವೆ ಮಾಡಿಕೊಟ್ಟಿದ್ದನು.
در ضمن شائول دخترش میکال را که زن داوود بود به مردی به نام فلطی (پسر لایش) از اهالی جلیم داده بود.

< ಸಮುವೇಲನು - ಪ್ರಥಮ ಭಾಗ 25 >