< ಸಮುವೇಲನು - ಪ್ರಥಮ ಭಾಗ 20 >
1 ದಾವೀದನು ರಾಮದ ನಯೋತಿನಿಂದ ಓಡಿಹೋಗಿ ಯೋನಾತಾನನ ಬಳಿಗೆ ಬಂದು, ಅವನ ಮುಂದೆ, “ನಾನು ಏನು ಮಾಡಿದೆನು? ನನ್ನ ಅಕ್ರಮವೇನು? ನಿನ್ನ ತಂದೆಯು ನನ್ನ ಪ್ರಾಣವನ್ನು ಹುಡುಕುವ ಹಾಗೆ ನಾನು ಅವನಿಗೆ ಮಾಡಿದ ದ್ರೋಹವೇನು?” ಎಂದನು.
E Davi fugiu de Naiote que é em Ramá, e veio diante de Jônatas, e disse: Que fiz eu? qual é minha maldade, ou qual meu pecado contra teu pai, que ele busca minha vida?
2 ಯೋನಾತಾನನು ಅವನಿಗೆ, “ಅದು ಆಗಬಾರದು. ನೀನು ಸಾಯುವುದಿಲ್ಲ; ನನ್ನ ತಂದೆಯು ನನಗೆ ತಿಳಿಸದೆ ಯಾವ ಚಿಕ್ಕ ಕಾರ್ಯವನ್ನಾದರೂ, ದೊಡ್ಡ ಕಾರ್ಯವನ್ನಾದರೂ ಮಾಡುವುದಿಲ್ಲ. ಈ ಕಾರ್ಯವನ್ನು ಯಾತಕ್ಕೆ ನನ್ನ ತಂದೆಯು ನನಗೆ ಬಚ್ಚಿಟ್ಟನು? ಹಾಗೆ ಆಗದು,” ಎಂದನು.
E ele lhe disse: Em nenhuma maneira; não morrerás. Eis que meu pai nenhuma coisa fará, grande nem pequena, que não a revele a mim; por que pois me encobrirá meu pai este negócio? Não será assim.
3 ದಾವೀದನು ಪ್ರಮಾಣಮಾಡಿ, “ನಿನ್ನ ಕಣ್ಣು ಮುಂದೆ ನನಗೆ ದಯೆ ದೊರಕಿತೆಂದು ನಿನ್ನ ತಂದೆಯು ನಿಶ್ಚಲವಾಗಿ ಬಲ್ಲನು. ಆದಕಾರಣ ಅವನು ಯೋನಾತಾನನು ವ್ಯಥೆಪಡದ ಹಾಗೆ, ‘ಅವನು ಇದನ್ನು ತಿಳಿಯಬಾರದು,’ ಎಂದು ಹೇಳುತ್ತಾನೆ. ನಿಶ್ಚಯವಾಗಿ ಯೆಹೋವ ದೇವರಾಣೆ, ನನ್ನ ಪ್ರಾಣದಾಣೆ, ನನಗೂ ಮರಣಕ್ಕೂ ಒಂದು ಹೆಜ್ಜೆ ಮಾತ್ರ ದೂರ ಇದೆ,” ಎಂದನು.
E Davi voltou a jurar, dizendo: Teu pai sabe claramente que eu achei favor diante de teus olhos, e dirá: Não saiba isto Jônatas, para que não tenha pesar: e certamente, vive o SENHOR e vive tua alma, que apenas há um passo entre mim e a morte.
4 ಆಗ ಯೋನಾತಾನನು ದಾವೀದನಿಗೆ, “ನಿನ್ನ ಪ್ರಾಣವು ಏನೇನು ಹೇಳುತ್ತದೋ, ನಿನಗೋಸ್ಕರ ನಾನು ಅದನ್ನು ಮಾಡುವೆನು,” ಎಂದನು.
E Jônatas disse a Davi: Que diga tua alma, e eu o farei por ti?
5 ದಾವೀದನು ಯೋನಾತಾನನಿಗೆ, “ನಾಳೆ ಅಮಾವಾಸ್ಯೆ, ಆದ್ದರಿಂದ ನಾನು ಅರಸನ ಸಂಗಡ ಪಂಕ್ತಿಯಲ್ಲಿ ಊಟ ಮಾಡಲೇ ಬೇಕಾಗಿರುವುದು. ನಾನು ಮೂರನೆಯ ದಿವಸದ ಸಾಯಂಕಾಲದವರೆಗೆ ಹೊಲದಲ್ಲಿ ಬಚ್ಚಿಟ್ಟುಕೊಂಡಿರಲು, ನನ್ನನ್ನು ಹೋಗಗೊಡಿಸು.
E Davi respondeu a Jônatas: Eis que amanhã será nova lua, e eu costumo sentar-me com o rei a comer: mas tu deixarás que me esconda no campo até à tarde do terceiro dia.
6 ನಿನ್ನ ತಂದೆಯು ನಾನು ಅಲ್ಲಿ ಇಲ್ಲದಿರುವುದನ್ನು ಕಂಡು, ಶ್ರದ್ಧೆಯಿಂದ ವಿಚಾರಿಸಿ ಅವನು ಎಲ್ಲಿ? ಎಂದು ಕೇಳಿದರೆ, ‘ದಾವೀದನು ತನ್ನ ಊರಾದ ಬೇತ್ಲೆಹೇಮಿಗೆ ಹೋಗಬೇಕೆಂದು ನನ್ನನ್ನು ಬಹಳವಾಗಿ ಬೇಡಿಕೊಂಡನು. ಏಕೆಂದರೆ ತನ್ನ ಸಮಸ್ತ ಕುಟುಂಬಕ್ಕೋಸ್ಕರ ವರುಷದ ಯಜ್ಞ ಮಾಡುತ್ತಾರೆ,’ ಎಂದು ಹೇಳು.
Se teu pai fizer menção de mim, dirás: Rogo-me muito que o deixasse ir logo a Belém sua cidade, porque todos os de sua linhagem têm ali sacrifício anual.
7 ಅದಕ್ಕೆ ಅವನು, ‘ಒಳ್ಳೆಯದು,’ ಎಂದು ಹೇಳಿದರೆ, ನಿನ್ನ ಸೇವಕನಿಗೆ ಸಮಾಧಾನವಾಗಿರುವುದು. ಅವನು ಬಹಳ ಕೋಪ ಮಾಡಿದರೆ, ಅವನಿಂದ ಕೇಡು ಸಿದ್ಧವಾಗಿದೆ ಎಂದು ತಿಳಿದುಕೋ.
Se ele disser, Está bem, teu servo terá paz; mas se se irar, sabe que a malícia está nele completa.
8 ಆದ್ದರಿಂದ ನೀನು ನಿನ್ನ ಸೇವಕನ ಮೇಲೆ ದಯೆ ತೋರಿಸಬೇಕು. ಏಕೆಂದರೆ ಯೆಹೋವ ದೇವರ ಒಡಂಬಡಿಕೆಯನ್ನು ನಿನ್ನ ಸೇವಕನೊಂದಿಗೆ ಮಾಡಿಕೊಂಡಿದ್ದೀಯಲ್ಲಾ. ಆದರೂ ನನ್ನಲ್ಲಿ ಅಕ್ರಮವಿದ್ದರೆ, ನೀನೇ ನನ್ನನ್ನು ಕೊಂದುಹಾಕು. ನನ್ನನ್ನು ನಿನ್ನ ತಂದೆಯ ಬಳಿಗೆ ಕರೆದುಕೊಂಡು ಹೋಗುವುದು ಏಕೆ?” ಎಂದನು.
Farás, pois, misericórdia com teu servo, já que trouxeste teu servo a aliança do SENHOR contigo: e se maldade há em mim mata-me tu, que não há necessidade de levar-me até teu pai.
9 ಆಗ ಯೋನಾತಾನನು, “ಅದು ನಿನಗೆ ದೂರವಾಗಿರಲಿ. ಏಕೆಂದರೆ ನಿನಗೆ ನನ್ನ ತಂದೆಯಿಂದ ಕೇಡು ಸಿದ್ಧವಾಗಿದ್ದರೆ, ನಾನು ಅದನ್ನು ನಿನಗೆ ತಿಳಿಸದೆ ಇರುವೆನೋ?” ಎಂದನು.
E Jônatas lhe disse: Nunca tal te suceda; antes bem, se eu entendesse ser completa a malícia de meu pai, para vir sobre ti, não havia eu de revelá-lo a ti?
10 ದಾವೀದನು ಯೋನಾತಾನನಿಗೆ, “ನಿನ್ನ ತಂದೆಯು ನಿನಗೆ ಕಠಿಣವಾದ ಉತ್ತರ ಹೇಳಿದರೆ, ಅದನ್ನು ನನಗೆ ತಿಳಿಸುವವರು ಯಾರು?” ಎಂದನು.
Disse então Davi a Jônatas: Quem me dará aviso? Ou que se teu pai te responder asperamente?
11 ಆಗ ಯೋನಾತಾನನು ದಾವೀದನಿಗೆ, “ನಾವು ಹೊಲಕ್ಕೆ ಹೋಗೋಣ ಬಾ,” ಎಂದನು. ಹಾಗೆಯೇ ಅವರಿಬ್ಬರೂ ಹೊಲಕ್ಕೆ ಹೊರಟು ಹೋದರು.
E Jônatas disse a Davi: Vem, saiamos ao campo. E saíram ambos ao campo.
12 ಯೋನಾತಾನನು ದಾವೀದನಿಗೆ, “ಇಸ್ರಾಯೇಲರ ದೇವರಾದ ಯೆಹೋವ ದೇವರೇ, ನಾನು ನಾಳೆ ನಾಡಿದ್ದರೊಳಗೆ ನನ್ನ ತಂದೆಯನ್ನು ವಿಚಾರಿಸಲು, ದಾವೀದನ ಮೇಲೆ ದಯೆ ಇದ್ದರೆ ನಿನಗೆ ತಿಳಿಸುವ ಹಾಗೆ ಹೇಳಿಕಳುಹಿಸದೆ ಇದ್ದರೆ, ಯೆಹೋವ ದೇವರು ಯೋನಾತಾನನಿಗೆ ಅದಕ್ಕಿಂತ ಅಧಿಕವಾಗಿ ಮಾಡಲಿ.
Então disse Jônatas a Davi: Ó SENHOR Deus de Israel, quando houver eu perguntado a meu pai amanhã a esta hora, ou depois de amanhã, e ele parecer bem para com Davi, se então não enviar a ti, e o revelar a ti,
13 ಆದರೆ ನಿನಗೆ ಕೇಡು ಮಾಡಲು ನನ್ನ ತಂದೆಗೆ ಮನಸ್ಸಾಗಿದ್ದರೆ, ಅದನ್ನು ನಿನಗೆ ತಿಳಿಸಿ ನೀನು ಸಮಾಧಾನದಿಂದ ಹೋಗುವಹಾಗೆ ನಿನ್ನನ್ನು ಕಳುಹಿಸುವೆನು. ಯೆಹೋವ ದೇವರು ನನ್ನ ತಂದೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರಲಿ.
O SENHOR faça assim a Jônatas, e isto acrescente. Mas se a meu pai parecer bem fazer-te mal, também te o revelarei, e te enviarei, e te irás em paz: e seja o SENHOR contigo, como foi com meu pai.
14 ಆದರೆ ನಾನು ಇನ್ನೂ ಬದುಕುತ್ತಿರುವಾಗ ನಾನು ಸಾಯದ ಹಾಗೆ ನೀನು ಯೆಹೋವ ದೇವರ ದಯೆಯನ್ನು ನನ್ನ ಮೇಲೆ ತೋರಿಸಿಬೇಕಾದದ್ದಲ್ಲದೆ,
E se eu viver, farás comigo misericórdia do SENHOR; mas se for morto,
15 ಯೆಹೋವ ದೇವರು ದಾವೀದನ ಶತ್ರುಗಳಲ್ಲಿ ಒಬ್ಬನೂ ಇಲ್ಲದ ಹಾಗೆ ಭೂಮಿಯಿಂದ ತೆಗೆದುಬಿಟ್ಟಾಗ, ಎಂದಿಗೂ ನಿನ್ನ ದಯೆಯನ್ನು ನನ್ನ ಮನೆಯಿಂದ ತೆಗೆದುಹಾಕಬಾರದು,” ಎಂದನು.
Não tirarás perpetuamente tua misericórdia de minha casa, nem quando o SENHOR exterminar um por um os inimigos de Davi da face da terra.
16 ಹೀಗೆಯೇ ಯೋನಾತಾನನು ದಾವೀದನ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು, “ಅಗಲಿದರೆ ಯೆಹೋವ ದೇವರೇ ಶತ್ರುಗಳ ಕೈಯಿಂದ ದಾವೀದನಿಗೆ ಮುಯ್ಯಿ ತೀರಿಸಲಿ,” ಎಂದನು.
Assim Jônatas fez aliança com a casa de Davi, dizendo: O SENHOR o exija da mão dos inimigos de Davi.
17 ಯೋನಾತಾನನು ದಾವೀದನನ್ನು ಪ್ರೀತಿಮಾಡಿದ್ದರಿಂದ, ಅವನಿಂದ ತಿರುಗಿ ಪ್ರಮಾಣ ತೆಗೆದುಕೊಂಡನು. ಅವನು ತನ್ನ ಪ್ರಾಣವನ್ನು ಪ್ರೀತಿಮಾಡಿದ ಹಾಗೆಯೇ, ಅವನನ್ನು ಪ್ರೀತಿಮಾಡಿದನು.
E voltou Jônatas a jurar a Davi, porque o amava, porque o amava como à sua alma.
18 ಯೋನಾತಾನನು ದಾವೀದನಿಗೆ, “ನಾಳೆ ಅಮಾವಾಸ್ಯೆ; ನೀನು ಅಲ್ಲಿ ಇಲ್ಲದಿರುವುದರಿಂದ ನಿನ್ನ ಸ್ಥಳವು ಬರಿದಾಗಿರುವುದು.
Disse-lhe logo Jônatas: Amanhã é lua nova, e tua falta será percebida, porque teu assento estará vazio.
19 ನೀನು ಮೂರು ದಿವಸ ತಡೆದ ತರುವಾಯ, ಕೆಲಸವು ನಡೆಯುತ್ತಿರುವಾಗ ನೀನು ಬಚ್ಚಿಟ್ಟುಕೊಂಡಿದ್ದ ಸ್ಥಳಕ್ಕೆ ತ್ವರೆಯಾಗಿ ತಿರುಗಿಬಂದು, ಏಜಲ್ ಎಂಬ ಕಲ್ಲಿನ ಬಳಿಯಲ್ಲಿ ಕುಳಿತಿರು.
Estarás, pois, três dias, e logo descerás, e virás ao lugar de onde estavas escondido o dia do incidente, e esperarás junto à pedra de Ezel;
20 ಆಗ ನಾನು ಗುರಿಯಿಟ್ಟವನ ಹಾಗೆ ಅದರ ಕಡೆಗೆ ಮೂರು ಬಾಣಗಳನ್ನು ಎಸೆಯುವೆನು.
E eu atirarei três flechas até aquele lado, como que me exercitando ao alvo.
21 ಅನಂತರ ಹುಡುಗನನ್ನು ಕಳುಹಿಸಿ, ‘ಆ ಬಾಣಗಳನ್ನು ಹುಡುಕಿಕೊಂಡು ಬಾ,’ ಎಂದು ಹೇಳುವೆನು. ‘ಆ ಬಾಣಗಳು ನಿನಗೆ ಈಚೆ ಬಿದ್ದಿವೆ, ಅವುಗಳನ್ನು ತೆಗೆದುಕೊಂಡು ಬಾ,’ ಎಂದು ನಾನು ಹುಡುಗನಿಗೆ ಹೇಳಿದರೆ, ನೀನು ಬರಬಹುದು. ಏಕೆಂದರೆ ಯೆಹೋವ ದೇವರಾಣೆ, ನಿನಗೆ ಕೇಡಿಲ್ಲದೆ ಸಮಾಧಾನವಿರುವುದು.
E logo enviarei o criado dizendo-lhe: Vai, busca as flechas. E se disser ao jovem: Eis ali as flechas mais aqui de ti, toma-as: tu virás, porque tens paz, e nada há de mal, vive o SENHOR.
22 ಆದರೆ, ‘ಇಗೋ, ಬಾಣಗಳು ನಿನ್ನ ಆಚೆ ಬಿದ್ದಿವೆ,’ ಎಂದು ಹುಡುಗನಿಗೆ ಹೇಳಿದರೆ, ಹೊರಟು ಹೋಗು. ಏಕೆಂದರೆ ಯೆಹೋವ ದೇವರು ನಿನ್ನನ್ನು ದೂರ ಕಳುಹಿಸಿದರು.
Mas se eu disser ao jovem assim: Eis ali as flechas mais ali de ti: vai-te, porque o SENHOR te enviou.
23 ನಾನೂ, ನೀನೂ ಮಾತನಾಡಿಕೊಂಡ ಈ ಕಾರ್ಯಕ್ಕೆ ಯೆಹೋವ ದೇವರು ನನಗೂ, ನಿನಗೂ ಮಧ್ಯೆ ಎಂದೆಂದಿಗೂ ಸಾಕ್ಷಿಯಾಗಿರುವರು,” ಎಂದು ಹೇಳಿದನು.
E quanto às palavras que eu e tu falamos, seja o SENHOR entre mim e ti para sempre.
24 ಹಾಗೆಯೇ ದಾವೀದನು ಹೊಲದಲ್ಲಿ ಬಚ್ಚಿಟ್ಟುಕೊಂಡಿದ್ದನು. ಅಮಾವಾಸ್ಯೆಯಾದಾಗ ಅರಸನು ಭೋಜನವನ್ನು ಮಾಡಲು ಕುಳಿತನು.
Então Davi se escondeu no campo, e vinda que foi a lua nova, sentou-se o rei a comer pão.
25 ಅರಸನು ಎಂದಿನಂತೆ ಗೋಡೆಯ ಬಳಿಯಲ್ಲಿ ಇರುವ ತನ್ನ ಆಸನದ ಮೇಲೆ ಕುಳಿತಾಗ, ಯೋನಾತಾನನು ಎದ್ದನು ಆದರೆ ಅಬ್ನೇರನು ಸೌಲನ ಬಳಿಯಲ್ಲಿ ಕುಳಿತನು. ದಾವೀದನು ಇರುವ ಸ್ಥಳವು ಬರಿದಾಗಿತ್ತು.
E o rei se sentou em sua cadeira, como costumava, no assento junto à parede, e Jônatas se levantou, e sentou-se Abner ao lado de Saul, e o lugar de Davi estava vazio.
26 ಆದರೂ ಸೌಲನು ಆ ದಿವಸದಲ್ಲಿ ಅವನನ್ನು ಕುರಿತು ಏನೂ ಹೇಳದೆ, “ಅವನಿಗೆ ಏನಾದರೂ ಸಂಭವಿಸಿರಬೇಕು; ಅವನು ಅಶುಚಿಯಾಗಿರಬಹುದು; ನಿಶ್ಚಯವಾಗಿ ಅಶುಚಿಯಾಗಿದ್ದಾನೆ,” ಎಂದು ಹೇಳಿಕೊಂಡನು.
Mas aquele dia Saul não disse nada, porque se dizia: Haverá lhe acontecido algo, e não está limpo; não estará purificado.
27 ಅಮಾವಾಸ್ಯೆಯ ಮಾರನೆಯ ದಿವಸದಲ್ಲಿ ಅಂದರೆ ತಿಂಗಳಿನ ಎರಡನೆಯ ದಿವಸದಲ್ಲಿ ದಾವೀದನು ಕೂಡುವ ಸ್ಥಳವು ಹಾಗೆಯೇ ಬರಿದಾಗಿತ್ತು. ಆದ್ದರಿಂದ ಸೌಲನು, “ಇಷಯನ ಮಗನು ನಿನ್ನೆಯೂ ಈ ಹೊತ್ತೂ ಭೋಜನಕ್ಕೆ ಏಕೆ ಬರಲಿಲ್ಲ?” ಎಂದು ತನ್ನ ಪುತ್ರನಾದ ಯೋನಾತಾನನನ್ನು ಕೇಳಿದನು.
O dia seguinte, o segundo dia da lua nova, aconteceu também que o assento de Davi estava vazio. E Saul disse a Jônatas seu filho: Por que não veio a comer o filho de Jessé hoje nem ontem?
28 ಯೋನಾತಾನನು ಸೌಲನಿಗೆ ಉತ್ತರವಾಗಿ, “ಬೇತ್ಲೆಹೇಮಿನವರೆಗೂ ಹೋಗಿ ಬರಲು ದಾವೀದನು ನನ್ನನ್ನು ಬಹಳವಾಗಿ ಬೇಡಿಕೊಂಡನು.
E Jônatas respondeu a Saul: Davi me pediu encarecidamente lhe deixasse ir até Belém.
29 ಅವನು ನನಗೆ, ‘ದಯಮಾಡಿ ನನಗೆ ಅಪ್ಪಣೆಕೊಡು. ಏಕೆಂದರೆ ಊರೊಳಗೆ ನಮ್ಮ ಕುಟುಂಬಕ್ಕೆ ಯಜ್ಞ ಮಾಡುವುದಿದೆ. ನನ್ನ ಸಹೋದರರು ನನ್ನನ್ನು ಬರಲು ಹೇಳಿ ಕಳುಹಿಸಿದರು. ಈಗ ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿದರೆ, ನಾನು ಅಪ್ಪಣೆ ತೆಗೆದುಕೊಂಡು ನನ್ನ ಸಹೋದರರನ್ನು ಕಾಣುವುದಕ್ಕೆ ಹೋಗುತ್ತೇನೆ,’ ಎಂದನು. ಆದ್ದರಿಂದ ಅವನು ಅರಸನ ಮೇಜಿಗೆ ಬರಲಿಲ್ಲ,” ಎಂದನು.
E disse: Rogo-te que me deixes ir, porque temos sacrifício os de nossa linhagem na cidade, e meu irmão mesmo me mandou; portanto, se achei graça em teus olhos, farei uma escapada agora, e visitarei a meus irmãos. Por isto, pois, não veio.
30 ಆಗ ಸೌಲನು ಯೋನಾತಾನನ ಮೇಲೆ ಕೋಪಗೊಂಡು ಅವನಿಗೆ, “ವಕ್ರವಾಗಿ ಎದುರು ಬೀಳುವ ಸ್ತ್ರೀಯ ಮಗನೇ, ನಿನಗೆ ನಾಚಿಕೆಯಾಗುವ ಹಾಗೆಯೂ, ಇಷಯನ ಮಗನನ್ನು ನೀನು ಆರಿಸಿಕೊಂಡಿದ್ದೀ ಎಂದು ನಾನರಿಯೆನೋ? ಇದರಿಂದ ನಿನಗೂ ನಿನ್ನನ್ನು ಹೆತ್ತವಳಿಗೂ ಅಸಹ್ಯವಾಗುವುದು.
Então Saul se acendeu contra Jônatas, e disse-lhe: Filho da pervertida e rebelde! Não sei eu que tu escolheste ao filho de Jessé para vergonha tua, e para vergonha da nudez de tua mãe?
31 ಏಕೆಂದರೆ ಇಷಯನ ಮಗನು ಭೂಮಿಯ ಮೇಲೆ ಬದುಕುವ ದಿವಸಗಳವರೆಗೂ ನೀನಾದರೂ, ನಿನ್ನ ರಾಜ್ಯವಾದರೂ ಸ್ಥಿರವಾಗುವುದಿಲ್ಲ. ಆದ್ದರಿಂದ ಈಗ ನೀನು ಅವನನ್ನು ಕರೆಕಳುಹಿಸಿ, ನನ್ನ ಬಳಿಗೆ ತೆಗೆದುಕೊಂಡು ಬಾ. ಏಕೆಂದರೆ ಅವನು ನಿಜವಾಗಿ ಸಾಯಲೇಬೇಕು,” ಎಂದನು.
Porque todo o tempo que o filho de Jessé viver sobre a terra, nem tu serás firme, nem teu reino. Envia, pois, agora, e traze-o a mim, porque morrerá.
32 ಅದಕ್ಕೆ ಯೋನಾತಾನನು ತನ್ನ ತಂದೆ ಸೌಲನಿಗೆ ಉತ್ತರವಾಗಿ, “ಅವನನ್ನು ಏಕೆ ಕೊಲೆಮಾಡಬೇಕು? ಅವನು ಏನು ಮಾಡಿದನು?” ಎಂದನು.
E Jônatas respondeu a seu pai Saul, e disse-lhe: Por que morrerá? O que ele fez?
33 ಆಗ ಸೌಲನು ಅವನನ್ನು ಹೊಡೆಯಲು ಈಟಿಯನ್ನು ಅವನ ಮೇಲೆ ಎಸೆದನು. ಆದ್ದರಿಂದ ಯೋನಾತಾನನು ತನ್ನ ತಂದೆಯು ದಾವೀದನನ್ನು ಕೊಂದುಹಾಕಲು ದೃಢಮಾಡಿದನೆಂದು ತಿಳಿದುಕೊಂಡನು.
Então Saul lhe lançou uma lança para feri-lo: de onde entendeu Jônatas que seu pai estava determinado a matar a Davi.
34 ಯೋನಾತಾನನು ಕೋಪದಿಂದ ಉರಿಗೊಂಡು ಮೇಜಿನಿಂದ ಎದ್ದು ಹೋದನು. ಹಬ್ಬದ ಎರಡನೆಯ ದಿನವಾಗಿದ್ದ ಅಂದು ಅವನು ಊಟ ಮಾಡಲಿಲ್ಲ. ಏಕೆಂದರೆ ತನ್ನ ತಂದೆಯು ದಾವೀದನಿಗೆ ಅವಮಾನ ಮಾಡಿದ್ದರಿಂದ, ಅವನಿಗೋಸ್ಕರ ವ್ಯಥೆಪಟ್ಟನು.
E levantou-se Jônatas da mesa com exaltada ira, e não comeu pão o segundo dia da lua nova: porque tinha dor por causa de Davi, porque seu pai lhe havia afrontado.
35 ಉದಯದಲ್ಲಿ ಯೋನಾತಾನನು ದಾವೀದನಿಗೆ ನೇಮಿಸಿದ ವೇಳೆಯ ಪ್ರಕಾರವೇ ಒಬ್ಬ ಚಿಕ್ಕ ಹುಡುಗನನ್ನು ಕರೆದುಕೊಂಡು,
Ao outro dia de manhã, saiu Jônatas ao campo, ao tempo marcado com Davi, e um jovem pequeno com ele.
36 ಹೊಲಕ್ಕೆ ಹೊರಟುಹೋಗಿ ಹುಡುಗನಿಗೆ, “ನೀನು ಓಡಿಹೋಗಿ ನಾನು ಎಸೆಯುವ ಬಾಣಗಳನ್ನು ಹುಡುಕಿಕೊಂಡು ಬಾ,” ಎಂದು ಹೇಳಿ, ಆ ಹುಡುಗನು ಓಡುವಾಗ ಅವನಿಗೆ, ಆಚೆ ಹೋಗುವಹಾಗೆ ಬಾಣವನ್ನು ಎಸೆದನು.
E disse a seu jovem: Corre e busca as flechas que eu atirar. E quando o jovem ia correndo, ele atirava a flecha que passava mais além dele.
37 ಯೋನಾತಾನನು ಎಸೆದ ಬಾಣವಿರುವ ಸ್ಥಳದವರೆಗೆ ಹುಡುಗನು ಹೋದಾಗ, “ಬಾಣವು ನಿನ್ನ ಆಚೆ ಇಲ್ಲವೋ?” ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿದನು.
E chegando o jovem onde estava a flecha que Jônatas havia atirado, Jônatas deu vozes atrás o jovem, dizendo: Não está a flecha mais além de ti?
38 “ನೀನು ಆಲಸ್ಯಮಾಡದೇ ತ್ವರೆಯಾಗಿ ಹೋಗು,” ಎಂದು ಯೋನಾತಾನನು ಹುಡುಗನ ಹಿಂದೆ ಕೂಗಿ ಹೇಳಿದನು. ಹಾಗೆಯೇ ಯೋನಾತಾನನ ಹುಡುಗನು ಬಾಣಗಳನ್ನು ಕೂಡಿಸಿಕೊಂಡು, ತನ್ನ ಯಜಮಾನನ ಬಳಿಗೆ ತಂದನು.
E voltou a gritar Jônatas atrás o jovem: Apressa-te, corre, não pares. E o jovem de Jônatas agarrou as flechas, e veio a seu senhor.
39 ಆ ಹುಡುಗನು ಏನೂ ತಿಳಿಯದೆ ಇದ್ದನು. ಯೋನಾತಾನನೂ, ದಾವೀದನೂ ಮಾತ್ರ ಆ ಸಂಗತಿಯನ್ನು ತಿಳಿದುಕೊಂಡಿದ್ದರು.
Porém nenhuma coisa entendeu o jovem: somente Jônatas e Davi entendiam o negócio.
40 ಆಗ ಯೋನಾತಾನನು ತನ್ನ ಆಯುಧಗಳನ್ನು ತನ್ನ ಹುಡುಗನಿಗೆ ಕೊಟ್ಟು ಅವನಿಗೆ, “ಅವುಗಳನ್ನು ಪಟ್ಟಣದೊಳಕ್ಕೆ ತೆಗೆದುಕೊಂಡು ಹೋಗು,” ಎಂದನು.
Logo deu Jônatas suas armas a seu jovem, e disse-lhe: Vai-te e leva-as à cidade.
41 ಹುಡುಗನು ಹೋಗುತ್ತಲೇ ದಾವೀದನು ದಕ್ಷಿಣ ಕಡೆಯಿಂದ ಎದ್ದು ಬಂದು ಯೋನಾತಾನನ ಮುಂದೆ ಬೋರಲು ಬಿದ್ದು ಮೂರು ಸಾರಿ ವಂದಿಸಿದನು. ಅವರು ಒಬ್ಬರಿಗೊಬ್ಬರು ಮುದ್ದಿಟ್ಟುಕೊಂಡು, ಒಬ್ಬರನ್ನೊಬ್ಬರು ನೋಡಿ ಅತ್ತರು. ದಾವೀದನು ಬಹಳವಾಗಿ ಅತ್ತನು.
E logo que o jovem se havia ido, se levantou Davi da parte do sul, e inclinou-se três vezes prostrando-se até a terra: e beijando-se o um ao outro, choraram o um com o outro, ainda que Davi chorou mais.
42 ಆಗ ಯೋನಾತಾನನು ದಾವೀದನಿಗೆ, “ನೀನು ಸಮಾಧಾನವಾಗಿ ಹೋಗು, ಯೆಹೋವ ದೇವರು ಎಂದೆಂದಿಗೂ ನನಗೂ, ನಿನಗೂ, ನನ್ನ ಸಂತಾನಕ್ಕೂ, ನಿನ್ನ ಸಂತಾನಕ್ಕೂ ಸಾಕ್ಷಿಯಾಗಿರಲೆಂದು ಮಧ್ಯದಲ್ಲಿ ಯೆಹೋವ ದೇವರ ಹೆಸರಿನಿಂದ ಆಣೆಯಿಟ್ಟು ನಾವಿಬ್ಬರೂ ಪ್ರಮಾಣ ಮಾಡಿಕೊಂಡೆವಲ್ಲಾ,” ಎಂದನು. ಆಗ ದಾವೀದನು ಎದ್ದು ಹೋದನು. ಯೋನಾತಾನನು ಪಟ್ಟಣಕ್ಕೆ ಹೋದನು.
E Jônatas disse a Davi: Vai-te em paz, que ambos juramos pelo nome do SENHOR, dizendo: o SENHOR seja entre mim e ti, entre minha descendência e a tua descendência para sempre.