< ಸಮುವೇಲನು - ಪ್ರಥಮ ಭಾಗ 2 >

1 ಹನ್ನಳು ಪ್ರಾರ್ಥಿಸಿ ಹೇಳಿದ್ದೇನೆಂದರೆ, “ನನ್ನ ಹೃದಯವು ಯೆಹೋವ ದೇವರಲ್ಲಿ ಸಂತೋಷಿಸಿತು. ನನ್ನ ಕೊಂಬು ಯೆಹೋವ ದೇವರಲ್ಲಿ ಉನ್ನತವಾಯಿತು. ನನ್ನ ಶತ್ರುಗಳ ಮುಂದೆ ನನ್ನ ಬಾಯಿ ಹೆಚ್ಚಳಪಟ್ಟಿತು. ಏಕೆಂದರೆ ನಾನು ನಿಮ್ಮ ರಕ್ಷಣೆಯಲ್ಲಿ ಹರ್ಷಿಸುತ್ತೇನೆ.
וַתִּתְפַּלֵּל חַנָּה וַתֹּאמַר עָלַץ לִבִּי בַּֽיהֹוָה רָמָה קַרְנִי בַּֽיהֹוָה רָחַב פִּי עַל־אוֹיְבַי כִּי שָׂמַחְתִּי בִּישׁוּעָתֶֽךָ׃
2 “ಯೆಹೋವ ದೇವರ ಹಾಗೆ ಪರಿಶುದ್ಧರಾದವರಿಲ್ಲ. ನಿಶ್ಚಯವಾಗಿ ನಿಮ್ಮ ಹೊರತು ಮತ್ತೊಬ್ಬರಿಲ್ಲ. ನಮ್ಮ ದೇವರ ಹಾಗೆಯೇ ಆಶ್ರಯದುರ್ಗ ಇಲ್ಲ.
אֵין־קָדוֹשׁ כַּיהֹוָה כִּי אֵין בִּלְתֶּךָ וְאֵין צוּר כֵּאלֹהֵֽינוּ׃
3 “ಇನ್ನು ಮೇಲೆ ಗರ್ವದಿಂದ ಮಾತನಾಡಬೇಡಿರಿ. ನಿಮ್ಮ ಬಾಯಿಂದ ಕಠಿಣ ಮಾತು ಹೊರಡದಿರಲಿ. ಏಕೆಂದರೆ ಯೆಹೋವ ದೇವರು ತಿಳುವಳಿಕೆಯುಳ್ಳ ದೇವರು. ಅವರು ಮನುಷ್ಯರ ಕಾರ್ಯಗಳನ್ನು ತೂಗಿನೋಡುವರು.
אַל־תַּרְבּוּ תְדַבְּרוּ גְּבֹהָה גְבֹהָה יֵצֵא עָתָק מִפִּיכֶם כִּי אֵל דֵּעוֹת יְהֹוָה (ולא) [וְלוֹ] נִתְכְּנוּ עֲלִלֽוֹת׃
4 “ಪರಾಕ್ರಮಶಾಲಿಗಳ ಬಿಲ್ಲುಗಳು ಮುರಿದು ಬಿದ್ದಿವೆ, ಎಡವಿದವರು ಬಲದಿಂದ ನಡುಕಟ್ಟಿ ನಿಂತಿದ್ದಾರೆ.
קֶשֶׁת גִּבֹּרִים חַתִּים וְנִכְשָׁלִים אָזְרוּ חָֽיִל׃
5 ತೃಪ್ತಿಪಟ್ಟವರು ಆಹಾರಕ್ಕಾಗಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಹಸಿದವರು ಇನ್ನು ಮುಂದೆ ಹಸಿಯರು. ಬಂಜೆಯಾದವಳು ಏಳುಮಂದಿ ಮಕ್ಕಳನ್ನು ಹೆತ್ತಳು. ಅನೇಕ ಮಂದಿ ಮಕ್ಕಳನ್ನು ಹೆತ್ತವಳು ಬಲಹೀನಳಾದಳು.
שְׂבֵעִים בַּלֶּחֶם נִשְׂכָּרוּ וּרְעֵבִים חָדֵלּוּ עַד־עֲקָרָה יָלְדָה שִׁבְעָה וְרַבַּת בָּנִים אֻמְלָֽלָה׃
6 “ಯೆಹೋವ ದೇವರು ಮರಣ ತರುವವರೂ, ಬದುಕಿಸುವವರೂ ಆಗಿದ್ದಾರೆ. ಪಾತಾಳಕ್ಕೆ ಇಳಿಯುವಂತೆ ಮಾಡುತ್ತಾರೆ, ಮೇಲಕ್ಕೆ ತರುತ್ತಾರೆ. (Sheol h7585)
יְהֹוָה מֵמִית וּמְחַיֶּה מוֹרִיד שְׁאוֹל וַיָּֽעַל׃ (Sheol h7585)
7 ಯೆಹೋವ ದೇವರು ಬಡತನವನ್ನು, ಐಶ್ವರ್ಯವನ್ನು ಕೊಡುವವರೂ, ತಗ್ಗಿಸುವವರೂ, ಉನ್ನತ ಮಾಡುವವರೂ ಆಗಿದ್ದಾರೆ.
יְהֹוָה מוֹרִישׁ וּמַעֲשִׁיר מַשְׁפִּיל אַף־מְרוֹמֵֽם׃
8 ದೇವರು ದರಿದ್ರನನ್ನು ಭೂಮಿಯ ಧೂಳಿನಿಂದ ಎತ್ತುತ್ತಾರೆ. ಭಿಕ್ಷುಕನನ್ನು ತಿಪ್ಪೆ ಗುಂಡಿಯಿಂದ ತೆಗೆದು ಉನ್ನತಕ್ಕೇರಿಸುವವರೂ ಆಗಿದ್ದಾರೆ. ಅವರನ್ನು ಪ್ರಧಾನರ ಮಧ್ಯದಲ್ಲಿ ಕೂಡ್ರಿಸುತ್ತಾರೆ. ಘನತೆಯ ಸಿಂಹಾಸನವನ್ನು ಬಾಧ್ಯವಾಗಿ ಕೊಡುತ್ತಾರೆ. “ಭೂಮಿಯ ಆಧಾರ ಸ್ತಂಭಗಳು ಯೆಹೋವ ದೇವರದ್ದೇ. ಭೂಲೋಕವನ್ನು ಅವುಗಳ ಮೇಲೆ ಇಟ್ಟಿದ್ದಾರೆ.
מֵקִים מֵעָפָר דָּל מֵֽאַשְׁפֹּת יָרִים אֶבְיוֹן לְהוֹשִׁיב עִם־נְדִיבִים וְכִסֵּא כָבוֹד יַנְחִלֵם כִּי לַֽיהֹוָה מְצֻקֵי אֶרֶץ וַיָּשֶׁת עֲלֵיהֶם תֵּבֵֽל׃
9 ಅವರು ತಮ್ಮ ಪರಿಶುದ್ಧರ ಪಾದಗಳನ್ನು ಕಾಯುವರು. ಆದರೆ ದುಷ್ಟರು ಕತ್ತಲಲ್ಲಿ ಮೌನವಾಗಿರುವರು. “ತನ್ನ ಶಕ್ತಿಯಿಂದ ಒಬ್ಬನೂ ಜಯಿಸನು.
רַגְלֵי חֲסִידָו יִשְׁמֹר וּרְשָׁעִים בַּחֹשֶׁךְ יִדָּמּוּ כִּי־לֹא בְכֹחַ יִגְבַּר־אִֽישׁ׃
10 ಯೆಹೋವ ದೇವರ ಸಂಗಡ ವಿವಾದಿಸುವವರು ಚದರಿಹೋಗುವರು. ಅವರು ಆಕಾಶದಲ್ಲಿಂದ ಅವರ ಮೇಲೆ ಗುಡುಗುವರು, ಯೆಹೋವ ದೇವರು ಲೋಕಾಂತ್ಯದವರೆಗೂ ನ್ಯಾಯತೀರಿಸುವರು. “ತಮ್ಮ ಅರಸನಿಗೆ ಬಲ ಕೊಡುವರು. ತಮ್ಮ ಅಭಿಷಿಕ್ತನ ಕೊಂಬನ್ನು ಉನ್ನತ ಮಾಡುವರು.”
יְהֹוָה יֵחַתּוּ מְרִיבָו עָלָו בַּשָּׁמַיִם יַרְעֵם יְהֹוָה יָדִין אַפְסֵי־אָרֶץ וְיִתֶּן־עֹז לְמַלְכּוֹ וְיָרֵם קֶרֶן מְשִׁיחֽוֹ׃
11 ಎಲ್ಕಾನನು ರಾಮದಲ್ಲಿರುವ ತನ್ನ ಮನೆಗೆ ಹೋದನು. ಆದರೆ ಆ ಹುಡುಗನು ಯಾಜಕನಾದ ಏಲಿಯ ಸಮ್ಮುಖದಲ್ಲಿ ಯೆಹೋವ ದೇವರ ಸೇವೆ ಮಾಡುತ್ತಿದ್ದನು.
וַיֵּלֶךְ אֶלְקָנָה הָרָמָתָה עַל־בֵּיתוֹ וְהַנַּעַר הָיָה מְשָׁרֵת אֶת־יְהֹוָה אֶת־פְּנֵי עֵלִי הַכֹּהֵֽן׃
12 ಆದರೆ ಏಲಿಯ ಪುತ್ರರು ಯೆಹೋವ ದೇವರನ್ನು ಗೌರವಿಸದೆ ದುಷ್ಟರಾಗಿದ್ದರು.
וּבְנֵי עֵלִי בְּנֵי בְלִיָּעַל לֹא יָדְעוּ אֶת־יְהֹוָֽה׃
13 ಆ ಯಾಜಕರು ಜನರನ್ನು ನಡೆಸಿದ ವಿಧ ಏನೆಂದರೆ: ಯಾವನಾದರೂ ಬಲಿ ಅರ್ಪಿಸಿದರೆ, ಆ ಅರ್ಪಿಸಿದ ಬಲಿಯ ಮಾಂಸವನ್ನು ಬೇಯಿಸುವಾಗ, ಯಾಜಕನ ಸೇವಕನು ಮೂರು ಶೂಲವುಳ್ಳ ಆಯುಧವನ್ನು ತೆಗೆದುಕೊಂಡು ಬಂದು,
וּמִשְׁפַּט הַכֹּהֲנִים אֶת־הָעָם כׇּל־אִישׁ זֹבֵחַ זֶבַח וּבָא נַעַר הַכֹּהֵן כְּבַשֵּׁל הַבָּשָׂר וְהַמַּזְלֵג שְׁלֹשׁ הַשִּׁנַּיִם בְּיָדֽוֹ׃
14 ಅದನ್ನು ತಪ್ಪಲೆಯಲ್ಲಾಗಲಿ, ಪಾತ್ರೆಯಲ್ಲಾಗಲಿ, ಗಡಿಗೆಯಲ್ಲಾಗಲಿ ಚುಚ್ಚುವನು. ಆ ಆಯುಧದಲ್ಲಿ ಬರುವುದನ್ನೆಲ್ಲಾ ಯಾಜಕನು ತನಗೆ ತೆಗೆದುಕೊಳ್ಳುವನು. ಹೀಗೆಯೇ ಅವರು ಶೀಲೋವಿನಲ್ಲಿ ಅಲ್ಲಿಗೆ ಬರುವ ಸಮಸ್ತ ಇಸ್ರಾಯೇಲರಿಗೆ ಮಾಡಿದರು.
וְהִכָּה בַכִּיּוֹר אוֹ בַדּוּד אוֹ בַקַּלַּחַת אוֹ בַפָּרוּר כֹּל אֲשֶׁר יַעֲלֶה הַמַּזְלֵג יִקַּח הַכֹּהֵן בּוֹ כָּכָה יַעֲשׂוּ לְכׇל־יִשְׂרָאֵל הַבָּאִים שָׁם בְּשִׁלֹֽה׃
15 ಇದಲ್ಲದೆ ಕೊಬ್ಬನ್ನು ಬಲಿ ಅರ್ಪಿಸುವುದಕ್ಕಿಂತ ಮುಂಚೆ ಯಾಜಕನ ಸೇವಕನು ಬಂದು, ಬಲಿಯನ್ನು ಅರ್ಪಿಸುವವನ ಸಂಗಡ, “ಯಾಜಕನಿಗೆ ಸುಡುವುದಕ್ಕೆ ಮಾಂಸವನ್ನು ಕೊಡು. ಅವನು ನಿನ್ನ ಕೈಯಿಂದ ಬೆಂದ ಮಾಂಸವನ್ನು ತೆಗೆದುಕೊಳ್ಳುವುದಿಲ್ಲ. ಅದು ಹಸಿಯಾಗಿರಬೇಕು,” ಎನ್ನುತ್ತಿದ್ದನು.
גַּם בְּטֶרֶם יַקְטִרוּן אֶת־הַחֵלֶב וּבָא ׀ נַעַר הַכֹּהֵן וְאָמַר לָאִישׁ הַזֹּבֵחַ תְּנָה בָשָׂר לִצְלוֹת לַכֹּהֵן וְלֹא־יִקַּח מִמְּךָ בָּשָׂר מְבֻשָּׁל כִּי אִם־חָֽי׃
16 “ಮೊದಲು ಕೊಬ್ಬನ್ನು ಸುಡಲಿ, ಅನಂತರ ನಿನಗೆ ಬೇಕಾದದ್ದನ್ನು ತೆಗೆದುಕೋ,” ಎಂದು ಯಾರಾದರೂ ಹೇಳಿದರೆ; ಸೇವಕನು, “ಇಲ್ಲ ಈಗಲೇ ಕೊಡು. ನೀನು ಕೊಡದಿದ್ದರೆ, ನಾನು ಒತ್ತಾಯದಿಂದ ತೆಗೆದುಕೊಳ್ಳುವೆನು,” ಎನ್ನುತ್ತಿದ್ದನು.
וַיֹּאמֶר אֵלָיו הָאִישׁ קַטֵּר יַקְטִירוּן כַּיּוֹם הַחֵלֶב וְקַח־לְךָ כַּאֲשֶׁר תְּאַוֶּה נַפְשֶׁךָ וְאָמַר ׀ [לֹא] (לו) כִּי עַתָּה תִתֵּן וְאִם־לֹא לָקַחְתִּי בְחׇזְקָֽה׃
17 ಈ ಯುವಕರ ಪಾಪವು ಯೆಹೋವ ದೇವರ ದೃಷ್ಟಿಯಲ್ಲಿ ಅಧಿಕವಾಗಿತ್ತು. ಏಕೆಂದರೆ ಅವರು ಯೆಹೋವ ದೇವರ ನೈವೇದ್ಯವನ್ನು ತುಚ್ಛವಾಗಿ ಕಂಡರು.
וַתְּהִי חַטַּאת הַנְּעָרִים גְּדוֹלָה מְאֹד אֶת־פְּנֵי יְהֹוָה כִּי נִֽאֲצוּ הָאֲנָשִׁים אֵת מִנְחַת יְהֹוָֽה׃
18 ಬಾಲಕನಾದ ಸಮುಯೇಲನು ನಾರುಮಡಿಯ ಏಫೋದನ್ನು ಕಟ್ಟಿಕೊಂಡು ಯೆಹೋವ ದೇವರ ಸನ್ನಿಧಿಯಲ್ಲಿ ಸೇವೆ ಮಾಡುತ್ತಿದ್ದನು.
וּשְׁמוּאֵל מְשָׁרֵת אֶת־פְּנֵי יְהֹוָה נַעַר חָגוּר אֵפוֹד בָּֽד׃
19 ಅವನ ತಾಯಿ ಪ್ರತಿ ವರುಷದಲ್ಲೂ ವರುಷದ ಬಲಿಯನ್ನು ಅರ್ಪಿಸಲು ತನ್ನ ಗಂಡನ ಸಂಗಡ ಬರುವಾಗ, ಅವನಿಗೆ ಒಂದು ಚಿಕ್ಕ ನಿಲುವಂಗಿಯನ್ನು ಮಾಡಿಕೊಂಡು ಬರುವಳು.
וּמְעִיל קָטֹן תַּעֲשֶׂה־לּוֹ אִמּוֹ וְהַעַלְתָה לוֹ מִיָּמִים ׀ יָמִימָה בַּֽעֲלוֹתָהּ אֶת־אִישָׁהּ לִזְבֹּחַ אֶת־זֶבַח הַיָּמִֽים׃
20 ಆಗ ಏಲಿಯು ಎಲ್ಕಾನನನ್ನೂ, ಅವನ ಹೆಂಡತಿಯನ್ನೂ, “ಯೆಹೋವ ದೇವರಿಗೆ ಸಮರ್ಪಿಸಿಬಿಟ್ಟ ಈ ಮಗನಿಗೆ ಬದಲಾಗಿ ಈ ಹನ್ನಳಿಂದ ಯೆಹೋವ ದೇವರು ನಿನಗೆ ಬೇರೆ ಮಕ್ಕಳನ್ನು ದಯಪಾಲಿಸಲಿ,” ಎಂದು ಆಶೀರ್ವದಿಸುತ್ತಿದ್ದನು. ಅನಂತರ ಅವರು ತಿರುಗಿ ತಮ್ಮ ಮನೆಗೆ ಹಿಂದಿರುಗುತ್ತಿದ್ದರು.
וּבֵרַךְ עֵלִי אֶת־אֶלְקָנָה וְאֶת־אִשְׁתּוֹ וְאָמַר יָשֵׂם יְהֹוָה לְךָ זֶרַע מִן־הָאִשָּׁה הַזֹּאת תַּחַת הַשְּׁאֵלָה אֲשֶׁר שָׁאַל לַֽיהֹוָה וְהָלְכוּ לִמְקוֹמֽוֹ׃
21 ಹಾಗೆಯೇ ಯೆಹೋವ ದೇವರು ಹನ್ನಳಿಗೆ ಕೃಪೆ ತೋರಿಸಿದ್ದರಿಂದ, ಅವಳು ಗರ್ಭಧರಿಸಿ ಮೂವರು ಪುತ್ರರನ್ನೂ, ಇಬ್ಬರು ಪುತ್ರಿಯರನ್ನೂ ಹೆತ್ತಳು. ಇದಲ್ಲದೆ ಬಾಲಕನಾದ ಸಮುಯೇಲನು ಯೆಹೋವ ದೇವರ ಸನ್ನಿಧಿಯಲ್ಲಿ ಬೆಳೆಯುತ್ತಿದ್ದನು.
כִּֽי־פָקַד יְהֹוָה אֶת־חַנָּה וַתַּהַר וַתֵּלֶד שְׁלֹשָֽׁה־בָנִים וּשְׁתֵּי בָנוֹת וַיִּגְדַּל הַנַּעַר שְׁמוּאֵל עִם־יְהֹוָֽה׃
22 ಏಲಿಯು ಬಹಳ ವೃದ್ಧನಾಗಿದ್ದನು. ಅವನು ತನ್ನ ಪುತ್ರರು ಇಸ್ರಾಯೇಲ್ ಜನರಿಗೆ ಮಾಡುವುದೆಲ್ಲವನ್ನೂ, ಅವರು ದೇವದರ್ಶನ ಗುಡಾರದ ಬಾಗಿಲ ಬಳಿಯಲ್ಲಿ ಕೂಡಿಬರುವ ಸ್ತ್ರೀಯರ ಸಂಗಡ ಮಲಗಿದ್ದರೆಂಬುದನ್ನೂ ಕೇಳಿ ಅವರಿಗೆ,
וְעֵלִי זָקֵן מְאֹד וְשָׁמַע אֵת כׇּל־אֲשֶׁר יַעֲשׂוּן בָּנָיו לְכׇל־יִשְׂרָאֵל וְאֵת אֲשֶֽׁר־יִשְׁכְּבוּן אֶת־הַנָּשִׁים הַצֹּבְאוֹת פֶּתַח אֹהֶל מוֹעֵֽד׃
23 “ನೀವು ಇಂಥಾ ಕಾರ್ಯಗಳನ್ನು ಮಾಡುವುದೇನು? ನಾನು ಎಲ್ಲ ಜನರಿಂದ ಈ ನಿಮ್ಮ ಕೆಟ್ಟ ಕೃತ್ಯಗಳನ್ನು ಕೇಳುತ್ತೇನೆ.
וַיֹּאמֶר לָהֶם לָמָּה תַעֲשׂוּן כַּדְּבָרִים הָאֵלֶּה אֲשֶׁר אָנֹכִי שֹׁמֵעַ אֶת־דִּבְרֵיכֶם רָעִים מֵאֵת כׇּל־הָעָם אֵֽלֶּה׃
24 ನನ್ನ ಮಕ್ಕಳೇ, ಹಾಗೆ ಮಾಡಬೇಡಿರಿ. ಏಕೆಂದರೆ ಯೆಹೋವ ದೇವರ ಜನರಲ್ಲಿ ನೀವು ಮಾಡಿರುವ ಕಾರ್ಯಗಳ ವರ್ತಮಾನವು ಹರಡಿದ್ದು ಒಳ್ಳೆಯದಲ್ಲ.
אַל בָּנָי כִּי לֽוֹא־טוֹבָה הַשְּׁמֻעָה אֲשֶׁר אָנֹכִי שֹׁמֵעַ מַעֲבִרִים עַם־יְהֹוָֽה׃
25 ಮನುಷ್ಯನಿಗೆ ವಿರೋಧವಾಗಿ ಮನುಷ್ಯನು ಪಾಪಮಾಡಿದರೆ, ದೇವರು ಅಪರಾಧಿಗಾಗಿ ಮಧ್ಯಸ್ಥಿಕೆಯನ್ನು ವಹಿಸುವರು. ಆದರೆ ಒಬ್ಬನು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದರೆ, ಅವನಿಗೋಸ್ಕರ ವಿಜ್ಞಾಪನೆ ಮಾಡತಕ್ಕವರು ಯಾರು?” ಎಂದನು. ಆದರೂ ಅವರು ತಮ್ಮ ತಂದೆಯ ಮಾತನ್ನು ಕೇಳದೆ ಹೋದರು. ಯೆಹೋವ ದೇವರು ಅವರನ್ನು ಮರಣದಂಡನೆಗೆ ಒಪ್ಪಿಸಬೇಕೆಂದಿದ್ದರು.
אִם־יֶחֱטָא אִישׁ לְאִישׁ וּפִֽלְלוֹ אֱלֹהִים וְאִם לַֽיהֹוָה יֶחֱטָא־אִישׁ מִי יִתְפַּלֶּל־לוֹ וְלֹא יִשְׁמְעוּ לְקוֹל אֲבִיהֶם כִּֽי־חָפֵץ יְהֹוָה לַהֲמִיתָֽם׃
26 ಆದರೆ ಬಾಲಕನಾದ ಸಮುಯೇಲನು ನಿಲುವಿನಿಂದಲೂ ಯೆಹೋವ ದೇವರ ಕೃಪೆಯಲ್ಲಿಯೂ ಜನರೊಂದಿಗೂ ಬೆಳೆಯುತ್ತಾ ಬಂದನು.
וְהַנַּעַר שְׁמוּאֵל הֹלֵךְ וְגָדֵל וָטוֹב גַּם עִם־יְהֹוָה וְגַם עִם־אֲנָשִֽׁים׃
27 ದೇವರ ಮನುಷ್ಯನು ಏಲಿಯ ಬಳಿಗೆ ಬಂದು ಅವನಿಗೆ, “ಯೆಹೋವ ದೇವರು ನಿನಗೆ ಹೇಳುವದೇನೆಂದರೆ: ‘ನಿನ್ನ ತಂದೆಯ ಮನೆಯವರು ಈಜಿಪ್ಟಿನಿಂದ ಫರೋಹನ ಮನೆಯೊಳಗೆ ಇರುವಾಗ, ನಾನು ಅವರಿಗೆ ಪ್ರತ್ಯಕ್ಷವಾದದ್ದು ಸ್ಪಷ್ಟವಾಗಲಿಲ್ಲವೋ?
וַיָּבֹא אִישׁ־אֱלֹהִים אֶל־עֵלִי וַיֹּאמֶר אֵלָיו כֹּה אָמַר יְהֹוָה הֲנִגְלֹה נִגְלֵיתִי אֶל־בֵּית אָבִיךָ בִּֽהְיוֹתָם בְּמִצְרַיִם לְבֵית פַּרְעֹֽה׃
28 ನನ್ನ ಬಲಿಪೀಠದ ಮೇಲೆ ಬಲಿಯನ್ನು ಅರ್ಪಿಸುವುದಕ್ಕೂ, ಧೂಪವನ್ನು ಸುಡುವುದಕ್ಕೂ, ನನ್ನ ಮುಂದೆ ಏಫೋದನ್ನು ಧರಿಸಿಕೊಂಡಿರುವುದಕ್ಕೂ, ನಾನು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದ ನನಗೆ ಯಾಜಕನಾಗಿರಬೇಕೆಂದು ನಾನು ಅವನನ್ನು ಆಯ್ದುಕೊಳ್ಳಲಿಲ್ಲವೋ? ನಿನ್ನ ತಂದೆಯ ಮನೆಗೆ ಇಸ್ರಾಯೇಲರು ಮಾಡುವ ದಹನಬಲಿಗಳನ್ನೆಲ್ಲಾ ಕೊಡಲಿಲ್ಲವೋ?
וּבָחֹר אֹתוֹ מִכׇּל־שִׁבְטֵי יִשְׂרָאֵל לִי לְכֹהֵן לַעֲלוֹת עַֽל־מִזְבְּחִי לְהַקְטִיר קְטֹרֶת לָשֵׂאת אֵפוֹד לְפָנָי וָֽאֶתְּנָה לְבֵית אָבִיךָ אֶת־כׇּל־אִשֵּׁי בְּנֵי יִשְׂרָאֵֽל׃
29 ನನ್ನ ಜನರಾದ ಇಸ್ರಾಯೇಲರು ನನಗೆ ಅರ್ಪಿಸುವ ತಮ್ಮ ಅರ್ಪಣೆಗಳಲ್ಲಿ ಪ್ರಾಮುಖ್ಯವಾದವುಗಳಿಂದ ನಿಮ್ಮನ್ನು ಕೊಬ್ಬಿಸಿಕೊಳ್ಳುವುದಕ್ಕೆ ನನ್ನ ವಾಸಸ್ಥಳದಲ್ಲಿ ನಾನು ಆಜ್ಞಾಪಿಸಿದ ನನ್ನ ಬಲಿಯನ್ನೂ, ಅರ್ಪಣೆಯನ್ನೂ ನೀವು ಒದ್ದು, ನನಗಿಂತ ನಿನ್ನ ಮಕ್ಕಳನ್ನು ಘನಪಡಿಸುವುದೇನು?’
לָמָּה תִבְעֲטוּ בְּזִבְחִי וּבְמִנְחָתִי אֲשֶׁר צִוִּיתִי מָעוֹן וַתְּכַבֵּד אֶת־בָּנֶיךָ מִמֶּנִּי לְהַבְרִיאֲכֶם מֵרֵאשִׁית כׇּל־מִנְחַת יִשְׂרָאֵל לְעַמִּֽי׃
30 “ಆದ್ದರಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, ‘ನಿನ್ನ ಮನೆಯವರೂ ನಿನ್ನ ತಂದೆಯ ಮನೆಯವರೂ ಎಂದೆಂದಿಗೂ ನನ್ನ ಸನ್ನಿಧಿಯಲ್ಲಿ ನಡೆದುಕೊಳ್ಳುವರೆಂದು ನಾನು ನಿಜವಾಗಿ ಹೇಳಿದ್ದೆನು. ಆದರೆ ಈಗ ಯೆಹೋವ ದೇವರು ಹೇಳುವುದೇನೆಂದರೆ: ನನಗೆ ಅದು ದೂರವಾಗಿರಲಿ. ಏಕೆಂದರೆ ನನ್ನನ್ನು ಸನ್ಮಾನಿಸುವವರನ್ನು ನಾನು ಸನ್ಮಾನಿಸುವೆನು. ನನ್ನನ್ನು ತಿರಸ್ಕರಿಸುವವರನ್ನು ನಾನು ತಿರಸ್ಕರಿಸುವೆನು.
לָכֵן נְאֻם־יְהֹוָה אֱלֹהֵי יִשְׂרָאֵל אָמוֹר אָמַרְתִּי בֵּֽיתְךָ וּבֵית אָבִיךָ יִתְהַלְּכוּ לְפָנַי עַד־עוֹלָם וְעַתָּה נְאֻם־יְהֹוָה חָלִילָה לִּי כִּֽי־מְכַבְּדַי אֲכַבֵּד וּבֹזַי יֵקָֽלּוּ׃
31 ನಿನ್ನ ಮನೆಯಲ್ಲಿ ಯಾರೂ ಪೂರ್ಣಾಯುಷ್ಯವನ್ನು ಮುಟ್ಟದಹಾಗೆ, ನಿನ್ನ ತೋಳನ್ನೂ ನಿನ್ನ ತಂದೆಯ ಮನೆಯವರ ತೋಳನ್ನೂ ನಾನು ಛೇದಿಸುವ ದಿನಗಳು ಬರುವುವು.
הִנֵּה יָמִים בָּאִים וְגָֽדַעְתִּי אֶת־זְרֹעֲךָ וְאֶת־זְרֹעַ בֵּית אָבִיךָ מִֽהְיוֹת זָקֵן בְּבֵיתֶֽךָ׃
32 ಇದಲ್ಲದೆ ಇಸ್ರಾಯೇಲಿಗೆ ಮಾಡುವ ಸಕಲ ಉತ್ತಮವಾದವುಗಳಿಗೆ ಬದಲಾಗಿ, ನೀನು ನನ್ನ ವಾಸಸ್ಥಳದಲ್ಲಿ ಒಬ್ಬ ವೈರಿಯನ್ನು ಕಾಣುವೆ. ಎಂದಿಗೂ ನಿನ್ನ ಮನೆಯಲ್ಲಿ ಒಬ್ಬ ವೃದ್ಧನೂ ಇರುವುದಿಲ್ಲ.
וְהִבַּטְתָּ צַר מָעוֹן בְּכֹל אֲשֶׁר־יֵיטִיב אֶת־יִשְׂרָאֵל וְלֹא־יִֽהְיֶה זָקֵן בְּבֵיתְךָ כׇּל־הַיָּמִֽים׃
33 ನನ್ನ ಬಲಿಪೀಠದ ಸೇವೆಯಿಂದ ನಾನು ತೆಗೆದು ಬಿಡದ ಮನುಷ್ಯನು, ನಿನ್ನ ಕಣ್ಣುಗಳನ್ನು ಕುಂದಿಸಿ, ನಿನ್ನ ಹೃದಯವನ್ನು ವೇದನೆ ಪಡಿಸುವುದಕ್ಕೆ ಇರುವನು. ನಿನ್ನ ಮನೆಯ ಸಂತತಿಯವರೆಲ್ಲಾ ಯೌವನ ಪ್ರಾಯದಲ್ಲಿಯೇ ಖಡ್ಗದಿಂದ ಸಾಯುವರು.
וְאִישׁ לֹֽא־אַכְרִית לְךָ מֵעִם מִזְבְּחִי לְכַלּוֹת אֶת־עֵינֶיךָ וְלַאֲדִיב אֶת־נַפְשֶׁךָ וְכׇל־מַרְבִּית בֵּיתְךָ יָמוּתוּ אֲנָשִֽׁים׃
34 “‘ಇದಲ್ಲದೆ ನಿನಗೆ ಗುರುತಾಗಿ ಹೊಫ್ನಿಯು, ಫೀನೆಹಾಸನು ಎಂಬ ಇಬ್ಬರು ಮಕ್ಕಳು ಒಂದೇ ದಿವಸದಲ್ಲಿ ಸಾಯುವರು.
וְזֶה־לְּךָ הָאוֹת אֲשֶׁר יָבֹא אֶל־שְׁנֵי בָנֶיךָ אֶל־חׇפְנִי וּפִֽינְחָס בְּיוֹם אֶחָד יָמוּתוּ שְׁנֵיהֶֽם׃
35 ಆದರೆ ನನ್ನ ಹೃದಯಕ್ಕೂ, ನನ್ನ ಮನಸ್ಸಿಗೂ ಸಮರ್ಪಕವಾದದ್ದನ್ನೇ ಮಾಡುವ ನಂಬಿಗಸ್ತನಾದ ಒಬ್ಬ ಯಾಜಕನನ್ನು ನನಗೋಸ್ಕರ ಎಬ್ಬಿಸಿ, ಅವನಿಗೆ ಸ್ಥಿರವಾದ ಮನೆಯನ್ನು ಕಟ್ಟುವೆನು. ಅವನು ನನ್ನ ಅಭಿಷಿಕ್ತನ ಮುಂದೆ ನಿರಂತರವಾಗಿ ಸೇವೆಮಾಡುವನು.
וַהֲקִימֹתִי לִי כֹּהֵן נֶאֱמָן כַּאֲשֶׁר בִּלְבָבִי וּבְנַפְשִׁי יַעֲשֶׂה וּבָנִיתִי לוֹ בַּיִת נֶאֱמָן וְהִתְהַלֵּךְ לִפְנֵֽי־מְשִׁיחִי כׇּל־הַיָּמִֽים׃
36 ಆಗ ನಿನ್ನ ಮನೆಯಲ್ಲಿ ಉಳಿದವರೆಲ್ಲಾ ಬಂದು ಅವನಿಗೆ ಅಡ್ಡಬಿದ್ದು, ಒಂದು ಬೆಳ್ಳಿಯ ಹಣವನ್ನೂ, ಒಂದು ರೊಟ್ಟಿಯ ಚೂರನ್ನೂ ಬೇಡುತ್ತಾ, “ನಾನು ಸ್ವಲ್ಪ ರೊಟ್ಟಿಯನ್ನು ತಿನ್ನುವ ಹಾಗೆ ದಯಮಾಡಿ ನನ್ನನ್ನು ಯಾಜಕ ಸೇವೆಯಲ್ಲಿ ಸೇರಿಸಿಕೋ, ಎಂದು ಹೇಳುವರು,” ಎಂದರು.’”
וְהָיָה כׇּל־הַנּוֹתָר בְּבֵיתְךָ יָבוֹא לְהִשְׁתַּחֲוֺת לוֹ לַאֲגוֹרַת כֶּסֶף וְכִכַּר־לָחֶם וְאָמַר סְפָחֵנִי נָא אֶל־אַחַת הַכְּהֻנּוֹת לֶאֱכֹל פַּת־לָֽחֶם׃

< ಸಮುವೇಲನು - ಪ್ರಥಮ ಭಾಗ 2 >