< ಸಮುವೇಲನು - ಪ್ರಥಮ ಭಾಗ 16 >

1 ಯೆಹೋವ ದೇವರು ಸಮುಯೇಲನಿಗೆ, “ಇಸ್ರಾಯೇಲಿನ ಅರಸನಾಗಿರದ ಹಾಗೆ ನಾನು ಅಲಕ್ಷ್ಯಮಾಡಿದ ಸೌಲನಿಗೋಸ್ಕರ ನೀನು ಎಷ್ಟರವರೆಗೆ ದುಃಖವುಳ್ಳವನಾಗಿರುವೆ? ನೀನು ನಿನ್ನ ಕೊಂಬನ್ನು ತೈಲದಿಂದ ತುಂಬಿಸಿಕೊಂಡು ಬಾ. ಬೇತ್ಲೆಹೇಮಿನವನಾದ ಇಷಯನ ಬಳಿಗೆ ನಿನ್ನನ್ನು ಕಳುಹಿಸುವೆನು. ಏಕೆಂದರೆ ಅವನ ಮಕ್ಕಳಲ್ಲಿ ನಾನು ಒಬ್ಬನನ್ನು ಅರಸನಾಗಿ ಆಯ್ದುಕೊಂಡೆನು,” ಎಂದರು.
וַיֹּאמֶר יְהֹוָה אֶל־שְׁמוּאֵל עַד־מָתַי אַתָּה מִתְאַבֵּל אֶל־שָׁאוּל וַאֲנִי מְאַסְתִּיו מִמְּלֹךְ עַל־יִשְׂרָאֵל מַלֵּא קַרְנְךָ שֶׁמֶן וְלֵךְ אֶֽשְׁלָחֲךָ אֶל־יִשַׁי בֵּֽית־הַלַּחְמִי כִּֽי־רָאִיתִי בְּבָנָיו לִי מֶֽלֶךְ׃
2 ಆಗ ಸಮುಯೇಲನು, “ನಾನು ಹೋಗುವುದು ಹೇಗೆ? ಸೌಲನು ಅದನ್ನು ಕೇಳಿದರೆ, ನನ್ನನ್ನು ಕೊಂದುಹಾಕುವನು,” ಎಂದನು. ಅದಕ್ಕೆ ಯೆಹೋವ ದೇವರು, “ನೀನು ಒಂದು ಕಡಸನ್ನು ನಿನ್ನ ಸಂಗಡ ತೆಗೆದುಕೊಂಡುಹೋಗಿ, ‘ನಾನು ಯೆಹೋವ ದೇವರಿಗಾಗಿ ಯಜ್ಞಮಾಡುವುದಕ್ಕೆ ಬಂದೆನು,’ ಎಂದು ಹೇಳಿ,
וַיֹּאמֶר שְׁמוּאֵל אֵיךְ אֵלֵךְ וְשָׁמַע שָׁאוּל וַהֲרָגָנִי וַיֹּאמֶר יְהֹוָה עֶגְלַת בָּקָר תִּקַּח בְּיָדֶךָ וְאָמַרְתָּ לִזְבֹּחַ לַיהֹוָה בָּֽאתִי׃
3 ಇಷಯನನ್ನು ಯಜ್ಞವನ್ನು ಅರ್ಪಿಸುವುದಕ್ಕೆ ಕರೆಯಬೇಕು; ಆಗ ನೀನು ಮಾಡಬೇಕಾದದ್ದನ್ನು ನಾನು ನಿನಗೆ ತಿಳಿಸುವೆನು. ನಾನು ನಿನಗೆ ಯಾರನ್ನು ತೋರಿಸುತ್ತೇನೋ, ಅವನನ್ನು ನೀನು ನನಗೋಸ್ಕರ ಅಭಿಷೇಕಿಸಬೇಕು,” ಎಂದರು.
וְקָרָאתָ לְיִשַׁי בַּזָּבַח וְאָנֹכִי אוֹדִֽיעֲךָ אֵת אֲשֶֽׁר־תַּעֲשֶׂה וּמָשַׁחְתָּ לִי אֵת אֲשֶׁר־אֹמַר אֵלֶֽיךָ׃
4 ಯೆಹೋವ ದೇವರು ಹೇಳಿದ ಪ್ರಕಾರ ಸಮುಯೇಲನು ಮಾಡಿ, ಬೇತ್ಲೆಹೇಮಿಗೆ ಬಂದನು. ಆಗ ಊರಿನ ಹಿರಿಯರು ಅವನ ಬರುವಿಕೆಯನ್ನು ಕಂಡು ನಡುಗಿ, ಅವನಿಗೆ, “ಸಮಾಧಾನವಾಗಿ ಬಂದೆಯೋ?” ಎಂದರು.
וַיַּעַשׂ שְׁמוּאֵל אֵת אֲשֶׁר דִּבֶּר יְהֹוָה וַיָּבֹא בֵּית לָחֶם וַיֶּחֶרְדוּ זִקְנֵי הָעִיר לִקְרָאתוֹ וַיֹּאמֶר שָׁלֹם בּוֹאֶֽךָ׃
5 ಅದಕ್ಕವನು, “ಸಮಾಧಾನವೇ, ಯೆಹೋವ ದೇವರಿಗೆ ಬಲಿಯನ್ನು ಅರ್ಪಿಸ ಬಂದೆನು. ನೀವು ನಿಮ್ಮನ್ನು ಪರಿಶುದ್ಧ ಮಾಡಿಕೊಂಡು ನನ್ನ ಸಂಗಡ ಯಜ್ಞಮಾಡುವುದಕ್ಕೆ ಬನ್ನಿರಿ,” ಎಂದನು. ಇಷಯನನ್ನೂ, ಅವನ ಮಕ್ಕಳನ್ನೂ ಶುದ್ಧಮಾಡಿ, ಅವರನ್ನು ಯಜ್ಞಮಾಡುವುದಕ್ಕೆ ಕರೆದನು.
וַיֹּאמֶר ׀ שָׁלוֹם לִזְבֹּחַ לַֽיהֹוָה בָּאתִי הִֽתְקַדְּשׁוּ וּבָאתֶם אִתִּי בַּזָּבַח וַיְקַדֵּשׁ אֶת־יִשַׁי וְאֶת־בָּנָיו וַיִּקְרָא לָהֶם לַזָּֽבַח׃
6 ಅವರು ಬಂದಾಗ, ಅವನು ಎಲೀಯಾಬನನ್ನು ಕಂಡು, “ನಿಶ್ಚಯವಾಗಿ ಯೆಹೋವ ದೇವರ ಅಭಿಷಿಕ್ತನು ಅವರ ಮುಂದೆ ಇದ್ದಾನೆ,” ಎಂದುಕೊಂಡನು.
וַיְהִי בְּבוֹאָם וַיַּרְא אֶת־אֱלִיאָב וַיֹּאמֶר אַךְ נֶגֶד יְהֹוָה מְשִׁיחֽוֹ׃
7 ಆದರೆ ಯೆಹೋವ ದೇವರು ಸಮುಯೇಲನಿಗೆ, “ನೀನು ಅವನ ರೂಪವನ್ನೂ, ಅವನ ದೇಹದ ಎತ್ತರವನ್ನೂ ದೃಷ್ಟಿಸಬೇಡ. ಏಕೆಂದರೆ ಅವನನ್ನು ನಾನು ತಿರಸ್ಕರಿಸಿದೆನು; ಏಕೆಂದರೆ ಯೆಹೋವ ದೇವರು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ಮಾತ್ರ ನೋಡದೆ, ಹೃದಯವನ್ನೇ ನೋಡುವರು,” ಎಂದನು.
וַיֹּאמֶר יְהֹוָה אֶל־שְׁמוּאֵל אַל־תַּבֵּט אֶל־מַרְאֵהוּ וְאֶל־גְּבֹהַּ קוֹמָתוֹ כִּי מְאַסְתִּיהוּ כִּי ׀ לֹא אֲשֶׁר יִרְאֶה הָאָדָם כִּי הָאָדָם יִרְאֶה לַעֵינַיִם וַיהֹוָה יִרְאֶה לַלֵּבָֽב׃
8 ಆಗ ಇಷಯನು ಅಬೀನಾದಾಬನನ್ನು ಕರೆದು ಅವನನ್ನು ಸಮುಯೇಲನ ಮುಂದೆ ಬರಮಾಡಿದನು. ಆದರೆ ಅವನು ಇವನನ್ನು, “ಯೆಹೋವ ದೇವರು ಆರಿಸಿಕೊಳ್ಳಲಿಲ್ಲ,” ಎಂದನು.
וַיִּקְרָא יִשַׁי אֶל־אֲבִינָדָב וַיַּעֲבִרֵהוּ לִפְנֵי שְׁמוּאֵל וַיֹּאמֶר גַּם־בָּזֶה לֹא־בָחַר יְהֹוָֽה׃
9 ಇಷಯನು ಶಮ್ಮನನ್ನು ಬರಮಾಡಿದನು; ಆದರೆ ಅವನು, “ಇವನನ್ನು ಯೆಹೋವ ದೇವರು ಆಯ್ದುಕೊಳ್ಳಲಿಲ್ಲ,” ಎಂದನು.
וַיַּעֲבֵר יִשַׁי שַׁמָּה וַיֹּאמֶר גַּם־בָּזֶה לֹא־בָחַר יְהֹוָֽה׃
10 ಅನಂತರ ಇಷಯನು ತನ್ನ ಏಳುಮಂದಿ ಪುತ್ರರನ್ನು ಸಮುಯೇಲನ ಮುಂದೆ ಬರಮಾಡಿದನು. ಆದರೆ ಸಮುಯೇಲನು ಇಷಯನಿಗೆ, “ಯೆಹೋವ ದೇವರು ಇವರಲ್ಲಿ ಒಬ್ಬನನ್ನಾದರೂ ಆಯ್ದುಕೊಳ್ಳಲಿಲ್ಲ,” ಎಂದನು.
וַיַּעֲבֵר יִשַׁי שִׁבְעַת בָּנָיו לִפְנֵי שְׁמוּאֵל וַיֹּאמֶר שְׁמוּאֵל אֶל־יִשַׁי לֹא־בָחַר יְהֹוָה בָּאֵֽלֶּה׃
11 ಸಮುಯೇಲನು, “ನಿನಗಿರುವ ಮಕ್ಕಳು ಇಷ್ಟೇನೋ?” ಎಂದು ಇಷಯನನ್ನು ಕೇಳಿದನು. ಅದಕ್ಕವನು, “ಇವರೆಲ್ಲರಿಗಿಂತಲೂ ಚಿಕ್ಕವನೊಬ್ಬನು ಉಳಿದಿದ್ದಾನೆ. ಅವನು ಕುರಿಗಳನ್ನು ಕಾಯುತ್ತಾ ಇದ್ದಾನೆ,” ಎಂದನು. ಆಗ ಸಮುಯೇಲನು ಇಷಯನಿಗೆ, “ಅವನನ್ನು ಕರೆಕಳುಹಿಸು. ಏಕೆಂದರೆ ಅವನು ಇಲ್ಲಿಗೆ ಬರುವವರೆಗೆ ನಾವು ಕುಳಿತುಕೊಳ್ಳಬಾರದು,” ಎಂದನು.
וַיֹּאמֶר שְׁמוּאֵל אֶל־יִשַׁי הֲתַמּוּ הַנְּעָרִים וַיֹּאמֶר עוֹד שָׁאַר הַקָּטָן וְהִנֵּה רֹעֶה בַּצֹּאן וַיֹּאמֶר שְׁמוּאֵל אֶל־יִשַׁי שִׁלְחָה וְקָחֶנּוּ כִּי לֹֽא־נָסֹב עַד־בֹּאוֹ פֹֽה׃
12 ಆಗ ಇಷಯನು ಅವನನ್ನು ಕರೆಯಕಳುಹಿಸಿದನು. ಅವನು ಕೆಂಪಾದ ಮೈಬಣ್ಣದವನಾಗಿಯೂ, ಸುಂದರ ಮುಖವುಳ್ಳವನಾಗಿಯೂ, ನೋಟಕ್ಕೆ ಚೆಲುವಿಕೆಯುಳ್ಳವನಾಗಿಯೂ ಇದ್ದನು. ಆಗ ಯೆಹೋವ ದೇವರು ಸಮುಯೇಲನಿಗೆ, “ನೀನೆದ್ದು ಇವನನ್ನು ಅಭಿಷೇಕಿಸು. ಇವನು ಅವನೇ,” ಎಂದರು.
וַיִּשְׁלַח וַיְבִיאֵהוּ וְהוּא אַדְמוֹנִי עִם־יְפֵה עֵינַיִם וְטוֹב רֹאִי וַיֹּאמֶר יְהֹוָה קוּם מְשָׁחֵהוּ כִּי־זֶה הֽוּא׃
13 ಸಮುಯೇಲನು ಎಣ್ಣೆ ಇರುವ ಕೊಂಬನ್ನು ತೆಗೆದುಕೊಂಡು, ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕ ಮಾಡಿದನು. ಆ ದಿವಸದಲ್ಲೇ ಯೆಹೋವ ದೇವರ ಆತ್ಮರು ಕೂಡಲೆ ದಾವೀದನ ಮೇಲೆ ಇಳಿದು ಬಂದರು. ಅನಂತರ ಸಮುಯೇಲನು ಎದ್ದು ರಾಮಕ್ಕೆ ಹೋದನು.
וַיִּקַּח שְׁמוּאֵל אֶת־קֶרֶן הַשֶּׁמֶן וַיִּמְשַׁח אֹתוֹ בְּקֶרֶב אֶחָיו וַתִּצְלַח רֽוּחַ־יְהֹוָה אֶל־דָּוִד מֵהַיּוֹם הַהוּא וָמָעְלָה וַיָּקׇם שְׁמוּאֵל וַיֵּלֶךְ הָרָמָֽתָה׃
14 ಯೆಹೋವ ದೇವರ ಆತ್ಮರು ಸೌಲನನ್ನು ಬಿಟ್ಟುಹೋಗಲು, ದೇವರಿಂದ ಬಂದ ದುರಾತ್ಮವು ಅವನನ್ನು ಪೀಡಿಸಿತು.
וְרוּחַ יְהֹוָה סָרָה מֵעִם שָׁאוּל וּבִעֲתַתּוּ רֽוּחַ־רָעָה מֵאֵת יְהֹוָֽה׃
15 ಆಗ ಸೌಲನ ಸೇವಕರು ಅವನಿಗೆ, “ಇಗೋ, ದೇವರಿಂದ ಬಂದ ದುರಾತ್ಮವು ನಿನ್ನನ್ನು ಹೆದರಿಸುತ್ತದೆ.
וַיֹּאמְרוּ עַבְדֵֽי־שָׁאוּל אֵלָיו הִנֵּה־נָא רוּחַ־אֱלֹהִים רָעָה מְבַעִתֶּֽךָ׃
16 ಕಿನ್ನರಿಯನ್ನು ಬಾರಿಸಲು ನಿಪುಣನಾದ ಒಬ್ಬನನ್ನು ಹುಡುಕುವ ಹಾಗೆ ನಮ್ಮ ಒಡೆಯನಾದ ನೀನು ನಿನ್ನ ಸನ್ನಿಧಿಯಲ್ಲಿರುವ ನಿನ್ನ ಸೇವಕರಿಗೆ ಹೇಳಬೇಕು. ದೇವರಿಂದ ಬಂದ ದುರಾತ್ಮವು ನಿನ್ನ ಮೇಲೆ ಬಂದಿರುವಾಗ, ಅವನು ತನ್ನ ಕೈಯಿಂದ ವಾದ್ಯ ಬಾರಿಸಿದರೆ, ನಿನಗೆ ಒಳ್ಳೆಯದಾಗಿರುವುದು,” ಎಂದರು.
יֹֽאמַר־נָא אֲדֹנֵנוּ עֲבָדֶיךָ לְפָנֶיךָ יְבַקְשׁוּ אִישׁ יֹדֵעַ מְנַגֵּן בַּכִּנּוֹר וְהָיָה בִּֽהְיוֹת עָלֶיךָ רֽוּחַ־אֱלֹהִים רָעָה וְנִגֵּן בְּיָדוֹ וְטוֹב לָֽךְ׃
17 ಸೌಲನು ತನ್ನ ಸೇವಕರಿಗೆ, “ವಾದ್ಯ ಚೆನ್ನಾಗಿ ಬಾರಿಸಬಲ್ಲವನಾದ ಒಬ್ಬನನ್ನು ನನಗೋಸ್ಕರ ನೋಡಿ ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,” ಎಂದನು.
וַיֹּאמֶר שָׁאוּל אֶל־עֲבָדָיו רְאוּ־נָא לִי אִישׁ מֵיטִיב לְנַגֵּן וַהֲבִיאוֹתֶם אֵלָֽי׃
18 ಆಗ ಸೇವಕರಲ್ಲಿ ಒಬ್ಬನು ಅವನಿಗೆ ಉತ್ತರವಾಗಿ, “ವಾದ್ಯ ಬಾರಿಸಲು ನಿಪುಣನಾದಂಥ ಬೇತ್ಲೆಹೇಮಿನವನಾದ ಇಷಯನ ಮಗನನ್ನು ಕಂಡೆನು. ಅವನು ಧೈರ್ಯಶಾಲಿಯೂ, ಪರಾಕ್ರಮಶಾಲಿಯೂ, ರಣಶೂರನೂ, ವಾಕ್ಚತುರನೂ, ಸುಂದರನೂ ಆಗಿದ್ದಾನೆ. ಇದಲ್ಲದೆ ಯೆಹೋವ ದೇವರು ಅವನ ಸಂಗಡ ಇದ್ದಾರೆ,” ಎಂದನು.
וַיַּעַן אֶחָד מֵהַנְּעָרִים וַיֹּאמֶר הִנֵּה רָאִיתִי בֵּן לְיִשַׁי בֵּית הַלַּחְמִי יֹדֵעַ נַגֵּן וְגִבּוֹר חַיִל וְאִישׁ מִלְחָמָה וּנְבוֹן דָּבָר וְאִישׁ תֹּאַר וַיהֹוָה עִמּֽוֹ׃
19 ಆದಕಾರಣ ಸೌಲನು ಇಷಯನ ಬಳಿಗೆ ದೂತರನ್ನು ಕಳುಹಿಸಿ, “ಕುರಿಗಳ ಬಳಿಯಲ್ಲಿ ಇರುವ ನಿನ್ನ ಪುತ್ರನಾದ ದಾವೀದನನ್ನು ನನ್ನ ಬಳಿಗೆ ಕಳುಹಿಸು,” ಎಂದನು.
וַיִּשְׁלַח שָׁאוּל מַלְאָכִים אֶל־יִשָׁי וַיֹּאמֶר שִׁלְחָה אֵלַי אֶת־דָּוִד בִּנְךָ אֲשֶׁר בַּצֹּֽאן׃
20 ಆಗ ಇಷಯನು ರೊಟ್ಟಿಯನ್ನೂ, ಒಂದು ಬುದ್ದಲಿ ದ್ರಾಕ್ಷಾರಸವನ್ನೂ, ಒಂದು ಮೇಕೆಯ ಮರಿಯನ್ನೂ ಕತ್ತೆಯ ಮೇಲೆ ಹೇರಿ, ತನ್ನ ಮಗನಾದ ದಾವೀದನ ಮೂಲಕ ಸೌಲನಿಗೆ ಕಳುಹಿಸಿದನು.
וַיִּקַּח יִשַׁי חֲמוֹר לֶחֶם וְנֹאד יַיִן וּגְדִי עִזִּים אֶחָד וַיִּשְׁלַח בְּיַד־דָּוִד בְּנוֹ אֶל־שָׁאֽוּל׃
21 ಹಾಗೆಯೇ ದಾವೀದನು ಸೌಲನ ಬಳಿಗೆ ಬಂದು ಅವನ ಸೇವಕನಾದನು. ಸೌಲನು ಇವನನ್ನು ಬಹಳವಾಗಿ ಮೆಚ್ಚಿದನು. ಅವನನ್ನು ತನ್ನ ಆಯುಧ ಹೊರುವವರಲ್ಲಿ ಒಬ್ಬನನ್ನಾಗಿ ನೇಮಿಸಿಕೊಂಡನು.
וַיָּבֹא דָוִד אֶל־שָׁאוּל וַֽיַּעֲמֹד לְפָנָיו וַיֶּאֱהָבֵהֽוּ מְאֹד וַֽיְהִי־לוֹ נֹשֵׂא כֵלִֽים׃
22 ಸೌಲನು ಇಷಯನ ಬಳಿಗೆ ಮನುಷ್ಯನನ್ನು ಕಳುಹಿಸಿ, “ದಾವೀದನು ನನ್ನ ಸಮ್ಮುಖದಲ್ಲಿ ಸೇವೆಮಾಡಲಿ. ಏಕೆಂದರೆ ನಾನು ದಾವೀದನನ್ನು ಮೆಚ್ಚಿದ್ದೇನೆ,” ಎಂದನು.
וַיִּשְׁלַח שָׁאוּל אֶל־יִשַׁי לֵאמֹר יַעֲמׇד־נָא דָוִד לְפָנַי כִּי־מָצָא חֵן בְּעֵינָֽי׃
23 ಹಾಗೆಯೇ ದೇವರಿಂದ ಬಂದ ದುರಾತ್ಮವು ಸೌಲನ ಮೇಲೆ ಬಂದಾಗ, ದಾವೀದನು ಕಿನ್ನರಿಯನ್ನು ತೆಗೆದುಕೊಂಡು, ತನ್ನ ಕೈಯಿಂದ ಬಾರಿಸುವನು. ಅದರಿಂದ ಸೌಲನು ಉಪಶಮನ ಹೊಂದಿ ಚೆನ್ನಾಗಿರುವನು; ದುರಾತ್ಮವು ಅವನನ್ನು ಬಿಟ್ಟು ಹೋಗುವುದು.
וְהָיָה בִּֽהְיוֹת רֽוּחַ־אֱלֹהִים אֶל־שָׁאוּל וְלָקַח דָּוִד אֶת־הַכִּנּוֹר וְנִגֵּן בְּיָדוֹ וְרָוַח לְשָׁאוּל וְטוֹב לוֹ וְסָרָה מֵעָלָיו רוּחַ הָרָעָֽה׃

< ಸಮುವೇಲನು - ಪ್ರಥಮ ಭಾಗ 16 >