< ಸಮುವೇಲನು - ಪ್ರಥಮ ಭಾಗ 1 >

1 ಎಫ್ರಾಯೀಮ್ ಬೆಟ್ಟದ ಪ್ರದೇಶ ರಾಮತಾಯೀಮ್ ಚೋಫಿಮಿನಲ್ಲಿ ಎಲ್ಕಾನ ಎಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. ಅವನು ಎಫ್ರಾಯೀಮ್ಯನಾದ ಚೂಫನ ಮೊಮ್ಮಗನೂ ತೋಹುವಿನ ಮಗನೂ ಆದ ಎಲೀಹುವಿನ ಮಗನಾದ ಯೆರೋಹಾಮನ ಮಗನಾಗಿದ್ದನು.
וַיְהִי אִישׁ אֶחָד מִן־הָרָמָתַיִם צוֹפִים מֵהַר אֶפְרָיִם וּשְׁמוֹ אֶלְקָנָה בֶּן־יְרֹחָם בֶּן־אֱלִיהוּא בֶּן־תֹּחוּ בֶן־צוּף אֶפְרָתִֽי׃
2 ಅವನಿಗೆ ಇಬ್ಬರು ಹೆಂಡತಿಯರು. ಒಬ್ಬಳ ಹೆಸರು ಹನ್ನ, ಮತ್ತೊಬ್ಬಳ ಹೆಸರು ಪೆನಿನ್ನ. ಪೆನಿನ್ನಳಿಗೆ ಮಕ್ಕಳಿದ್ದರು. ಆದರೆ ಹನ್ನಳಿಗೆ ಮಕ್ಕಳಿರಲಿಲ್ಲ.
וְלוֹ שְׁתֵּי נָשִׁים שֵׁם אַחַת חַנָּה וְשֵׁם הַשֵּׁנִית פְּנִנָּה וַיְהִי לִפְנִנָּה יְלָדִים וּלְחַנָּה אֵין יְלָדִֽים׃
3 ಅವನು ಶೀಲೋವಿನಲ್ಲಿ ಸೇನಾಧೀಶ್ವರ ಯೆಹೋವ ದೇವರನ್ನು ಆರಾಧಿಸಲೂ, ಅವರಿಗೆ ಬಲಿಯನ್ನು ಅರ್ಪಿಸಲೂ ಪ್ರತಿವರ್ಷ ಪಟ್ಟಣದಿಂದ ಹೋಗುತ್ತಿದ್ದನು. ಯೆಹೋವ ದೇವರ ಯಾಜಕ ಏಲಿಯ ಮಕ್ಕಳಿಬ್ಬರಾದ ಹೊಫ್ನಿಯೂ, ಫೀನೆಹಾಸನೂ ಅಲ್ಲಿ ಇದ್ದರು.
וְעָלָה הָאִישׁ הַהוּא מֵֽעִירוֹ מִיָּמִים ׀ יָמִימָה לְהִֽשְׁתַּחֲוֺת וְלִזְבֹּחַ לַיהֹוָה צְבָאוֹת בְּשִׁלֹה וְשָׁם שְׁנֵי בְנֵֽי־עֵלִי חׇפְנִי וּפִנְחָס כֹּהֲנִים לַיהֹוָֽה׃
4 ಎಲ್ಕಾನನು ಬಲಿ ಅರ್ಪಿಸುವ ಕಾಲದಲ್ಲಿ ಅವನು ತನ್ನ ಹೆಂಡತಿ ಪೆನಿನ್ನಳಿಗೂ, ಅವಳ ಸಮಸ್ತ ಪುತ್ರಪುತ್ರಿಯರಿಗೂ ಪಾಲನ್ನು ಕೊಡುತ್ತಿದ್ದನು.
וַיְהִי הַיּוֹם וַיִּזְבַּח אֶלְקָנָה וְנָתַן לִפְנִנָּה אִשְׁתּוֹ וּֽלְכׇל־בָּנֶיהָ וּבְנוֹתֶיהָ מָנֽוֹת׃
5 ಅವನು ಹನ್ನಳನ್ನು ಪ್ರೀತಿಸಿದ್ದರಿಂದ ಹನ್ನಳಿಗೆ ಎರಡಷ್ಟು ಪಾಲನ್ನು ಕೊಡುತ್ತಿದ್ದನು. ಆದರೆ ಯೆಹೋವ ದೇವರು ಹನ್ನಳ ಗರ್ಭವನ್ನು ಮುಚ್ಚಿಬಿಟ್ಟಿದ್ದರು.
וּלְחַנָּה יִתֵּן מָנָה אַחַת אַפָּיִם כִּי אֶת־חַנָּה אָהֵב וַיהֹוָה סָגַר רַחְמָֽהּ׃
6 ಯೆಹೋವ ದೇವರು ಅವಳ ಗರ್ಭವನ್ನು ಮುಚ್ಚಿದ್ದರಿಂದ, ಅವಳ ಪ್ರತಿಸ್ಪರ್ಧಿಯಾದ ಪೆನಿನ್ನಳು ಹನ್ನಳಿಗೆ ಮನಗುಂದುವ ಹಾಗೆ ಬಹಳ ಕೆಣಕಿ ಬಾಧಿಸಿದಳು.
וְכִעֲסַתָּה צָרָתָהּ גַּם־כַּעַס בַּעֲבוּר הַרְּעִמָהּ כִּֽי־סָגַר יְהֹוָה בְּעַד רַחְמָֽהּ׃
7 ಹೀಗೆಯೇ ಅವನು ಪ್ರತಿ ಸಂವತ್ಸರದಲ್ಲಿಯೂ ಮಾಡುತ್ತಿದ್ದನು, ಇವಳು ಯೆಹೋವ ದೇವರ ಮನೆಗೆ ಹೋಗುತ್ತಿರುವಾಗ ಆ ರೀತಿಯಾಗಿ ಹನ್ನಳನ್ನು ಬಾಧಿಸುತ್ತಿದ್ದಳು. ಅದರಿಂದ ಹನ್ನಳು ಊಟಮಾಡದೆ ಅಳುತ್ತಾ ಇದ್ದಳು.
וְכֵן יַעֲשֶׂה שָׁנָה בְשָׁנָה מִדֵּי עֲלֹתָהּ בְּבֵית יְהֹוָה כֵּן תַּכְעִסֶנָּה וַתִּבְכֶּה וְלֹא תֹאכַֽל׃
8 ಆಗ ಅವಳ ಗಂಡ ಎಲ್ಕಾನನು ಅವಳಿಗೆ, “ಹನ್ನಳೇ, ಏಕೆ ಅಳುತ್ತೀ? ಏಕೆ ಊಟಮಾಡದೆ ಇದ್ದೀ? ನಿನ್ನ ಮನ ಏಕೆ ಕುಂದಿದೆ? ಹತ್ತು ಮಂದಿ ಪುತ್ರರಿಗಿಂತ ನಾನು ನಿನಗೆ ಹೆಚ್ಚಲ್ಲವೆ?” ಎಂದನು.
וַיֹּאמֶר לָהּ אֶלְקָנָה אִישָׁהּ חַנָּה לָמֶה תִבְכִּי וְלָמֶה לֹא תֹֽאכְלִי וְלָמֶה יֵרַע לְבָבֵךְ הֲלוֹא אָֽנֹכִי טוֹב לָךְ מֵעֲשָׂרָה בָּנִֽים׃
9 ಅವರು ಶೀಲೋವಿನಲ್ಲಿ ಊಟಮಾಡಿದ ತರುವಾಯ ಹನ್ನಳು ಎದ್ದು ನಿಂತಳು. ಯಾಜಕನಾದ ಏಲಿ ಯೆಹೋವ ದೇವರ ಮಂದಿರದ ಸ್ತಂಭದ ಬಳಿ ಆಸನದ ಮೇಲೆ ಕುಳಿತಿರುವಾಗ,
וַתָּקׇם חַנָּה אַחֲרֵי אׇכְלָהֿ בְשִׁלֹה וְאַחֲרֵי שָׁתֹה וְעֵלִי הַכֹּהֵן יֹשֵׁב עַל־הַכִּסֵּא עַל־מְזוּזַת הֵיכַל יְהֹוָֽה׃
10 ಅವಳು ಬಹಳ ಮನಗುಂದಿದವಳಾಗಿ ಯೆಹೋವ ದೇವರನ್ನು ಪ್ರಾರ್ಥಿಸಿ, ಅತ್ತು ಒಂದು
וְהִיא מָרַת נָפֶשׁ וַתִּתְפַּלֵּל עַל־יְהֹוָה וּבָכֹה תִבְכֶּֽה׃
11 ಹರಕೆಮಾಡಿ, “ಸೇನಾಧೀಶ್ವರ ಯೆಹೋವ ದೇವರೇ, ನೀವು ನಿಶ್ಚಯವಾಗಿ ನಿಮ್ಮ ದಾಸಿಯ ದೀನತೆಯನ್ನು ಕಂಡು, ನಿಮ್ಮ ದಾಸಿಯನ್ನು ಮರೆಯದೆ, ನನ್ನನ್ನು ನೆನಸಿ, ನಿಮ್ಮ ದಾಸಿಗೆ ಗಂಡು ಮಗುವನ್ನು ಕೊಟ್ಟರೆ, ಅವನು ಬದುಕುವ ಸಕಲ ದಿವಸಗಳಲ್ಲಿ ಅವನನ್ನು ಯೆಹೋವ ದೇವರಿಗೆ ಒಪ್ಪಿಸಿಕೊಡುವೆನು. ಅವನ ತಲೆಯ ಮೇಲೆ ಕ್ಷೌರಿಕನ ಕತ್ತಿ ಬೀಳುವುದಿಲ್ಲ,” ಎಂದಳು.
וַתִּדֹּר נֶדֶר וַתֹּאמַר יְהֹוָה צְבָאוֹת אִם־רָאֹה תִרְאֶה ׀ בׇּעֳנִי אֲמָתֶךָ וּזְכַרְתַּנִי וְלֹֽא־תִשְׁכַּח אֶת־אֲמָתֶךָ וְנָתַתָּה לַאֲמָתְךָ זֶרַע אֲנָשִׁים וּנְתַתִּיו לַֽיהֹוָה כׇּל־יְמֵי חַיָּיו וּמוֹרָה לֹא־יַעֲלֶה עַל־רֹאשֽׁוֹ׃
12 ಅವಳು ಯೆಹೋವ ದೇವರ ಮುಂದೆ ಹೆಚ್ಚಾಗಿ ಪ್ರಾರ್ಥನೆ ಮಾಡುತ್ತಿರುವಾಗ, ಏಲಿಯು ಅವಳ ಬಾಯನ್ನೇ ನೋಡುತ್ತಿದ್ದನು.
וְהָיָה כִּי הִרְבְּתָה לְהִתְפַּלֵּל לִפְנֵי יְהֹוָה וְעֵלִי שֹׁמֵר אֶת־פִּֽיהָ׃
13 ಹನ್ನಳು ತನ್ನ ಹೃದಯದಲ್ಲೇ ಮಾತನಾಡುತ್ತಾ, ತನ್ನ ತುಟಿಗಳನ್ನು ಮಾತ್ರ ಆಡಿಸುತ್ತಾ ಇದ್ದುದರಿಂದ ಅವಳ ಶಬ್ದವು ಕೇಳಿಸಲಿಲ್ಲ. ಆದ್ದರಿಂದ ಏಲಿಯು ಅವಳು ಅಮಲೇರಿದ್ದಾಳೆಂದು ನೆನಸಿದನು.
וְחַנָּה הִיא מְדַבֶּרֶת עַל־לִבָּהּ רַק שְׂפָתֶיהָ נָּעוֹת וְקוֹלָהּ לֹא יִשָּׁמֵעַ וַיַּחְשְׁבֶהָ עֵלִי לְשִׁכֹּרָֽה׃
14 ಏಲಿಯು ಅವಳಿಗೆ, “ಎಷ್ಟರವರೆಗೂ ಅಮಲೇರಿದವಳಾಗಿರುವೆ? ನಿನ್ನ ಬಳಿಯಿಂದ ನಿನ್ನ ದ್ರಾಕ್ಷಾರಸವನ್ನು ತೊರೆದುಬಿಡು,” ಎಂದನು.
וַיֹּאמֶר אֵלֶיהָ עֵלִי עַד־מָתַי תִּשְׁתַּכָּרִין הָסִירִי אֶת־יֵינֵךְ מֵֽעָלָֽיִךְ׃
15 ಅದಕ್ಕೆ ಹನ್ನಳು ಅವನಿಗೆ ಉತ್ತರವಾಗಿ, “ನನ್ನ ಒಡೆಯನೇ, ಹಾಗಲ್ಲ. ನಾನು ದುಃಖದ ಆತ್ಮವುಳ್ಳ ಸ್ತ್ರೀಯಾಗಿದ್ದೇನೆ. ನಾನು ದ್ರಾಕ್ಷಾರಸವನ್ನಾದರೂ ಮದ್ಯಪಾನವನ್ನಾದರೂ ಕುಡಿದವಳಲ್ಲ. ನಾನು ಯೆಹೋವ ದೇವರ ಮುಂದೆ ನನ್ನ ಮನೋವೇದನೆಯನ್ನೆಲ್ಲಾ ತೋಡಿಕೊಳ್ಳುತ್ತಾ ಇದ್ದೇನೆ.
וַתַּעַן חַנָּה וַתֹּאמֶר לֹא אֲדֹנִי אִשָּׁה קְשַׁת־רוּחַ אָנֹכִי וְיַיִן וְשֵׁכָר לֹא שָׁתִיתִי וָאֶשְׁפֹּךְ אֶת־נַפְשִׁי לִפְנֵי יְהֹוָֽה׃
16 ನಿನ್ನ ದಾಸಿಯನ್ನು ದುಷ್ಟಳೆಂದು ನೆನಸಬೇಡ. ನನ್ನ ಹೆಚ್ಚಾದ ಚಿಂತೆಯಿಂದಲೂ, ದುಃಖದಿಂದಲೂ ಈವರೆಗೂ ಮಾತನಾಡಿಕೊಳ್ಳುತ್ತಾ ಇದ್ದೆನು,” ಎಂದಳು.
אַל־תִּתֵּן אֶת־אֲמָתְךָ לִפְנֵי בַּת־בְּלִיָּעַל כִּֽי־מֵרֹב שִׂיחִי וְכַעְסִי דִּבַּרְתִּי עַד־הֵֽנָּה׃
17 ಆಗ ಏಲಿಯು ಅವಳಿಗೆ, “ಸಮಾಧಾನದಿಂದ ಹೋಗು. ಇಸ್ರಾಯೇಲಿನ ದೇವರು, ಅವರಿಂದ ನೀನು ಬೇಡಿಕೊಂಡ ನಿನ್ನ ವಿಜ್ಞಾಪನೆಯಂತೆ ನಿನಗೆ ಕೊಡಲಿ,” ಎಂದನು.
וַיַּעַן עֵלִי וַיֹּאמֶר לְכִי לְשָׁלוֹם וֵאלֹהֵי יִשְׂרָאֵל יִתֵּן אֶת־שֵׁלָתֵךְ אֲשֶׁר שָׁאַלְתְּ מֵעִמּֽוֹ׃
18 ಅದಕ್ಕವಳು, “ನಿನ್ನ ಸೇವಕಿಗೆ ನಿನ್ನ ದೃಷ್ಟಿಯಲ್ಲಿ ದಯೆ ತೋರಲಿ,” ಎಂದಳು. ಆ ಸ್ತ್ರೀಯು ಹೊರಟುಹೋಗಿ ಊಟ ಮಾಡಿದಳು. ಆಮೇಲೆ ಅವಳ ಮುಖದಲ್ಲಿ ದುಃಖವು ಕಾಣಲಿಲ್ಲ.
וַתֹּאמֶר תִּמְצָא שִׁפְחָתְךָ חֵן בְּעֵינֶיךָ וַתֵּלֶךְ הָֽאִשָּׁה לְדַרְכָּהּ וַתֹּאכַל וּפָנֶיהָ לֹא־הָֽיוּ־לָהּ עֽוֹד׃
19 ಅವರು ಉದಯದಲ್ಲಿ ಎದ್ದು, ಯೆಹೋವ ದೇವರನ್ನು ಆರಾಧಿಸಿ, ಹಿಂದಿರುಗಿಕೊಂಡು ರಾಮದಲ್ಲಿರುವ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಳನ್ನು ಸಂಗಮಿಸಲು, ಆಗ ಯೆಹೋವ ದೇವರು ಅವಳನ್ನು ಜ್ಞಾಪಕಮಾಡಿಕೊಂಡರು.
וַיַּשְׁכִּמוּ בַבֹּקֶר וַיִּֽשְׁתַּחֲווּ לִפְנֵי יְהֹוָה וַיָּשֻׁבוּ וַיָּבֹאוּ אֶל־בֵּיתָם הָרָמָתָה וַיֵּדַע אֶלְקָנָה אֶת־חַנָּה אִשְׁתּוֹ וַֽיִּזְכְּרֶהָ יְהֹוָֽה׃
20 ಹನ್ನಳು ಗರ್ಭವತಿಯಾಗಿ, ಕಾಲವು ಪೂರ್ತಿಯಾದ ತರುವಾಯ ಮಗನನ್ನು ಹೆತ್ತು, “ನಾನು ಇವನಿಗಾಗಿ ಯೆಹೋವ ದೇವರನ್ನು ಬೇಡಿ ಪಡೆದುಕೊಂಡೆನು,” ಎಂದು ಹೇಳಿ ಅವನಿಗೆ, ಸಮುಯೇಲ ಎಂದು ಹೆಸರಿಟ್ಟಳು.
וַֽיְהִי לִתְקֻפוֹת הַיָּמִים וַתַּהַר חַנָּה וַתֵּלֶד בֵּן וַתִּקְרָא אֶת־שְׁמוֹ שְׁמוּאֵל כִּי מֵיְהֹוָה שְׁאִלְתִּֽיו׃
21 ಎಲ್ಕಾನನು ಯೆಹೋವ ದೇವರಿಗೆ ಪ್ರತಿ ವರುಷದ ಬಲಿಯನ್ನೂ, ತನ್ನ ಹರಕೆಯನ್ನೂ ಸಲ್ಲಿಸುವುದಕ್ಕೆ ತನ್ನ ಮನೆಯವರೆಲ್ಲರ ಸಂಗಡ ಹೋಗುವಾಗ,
וַיַּעַל הָאִישׁ אֶלְקָנָה וְכׇל־בֵּיתוֹ לִזְבֹּחַ לַיהֹוָה אֶת־זֶבַח הַיָּמִים וְאֶת־נִדְרֽוֹ׃
22 ಹನ್ನಳು ಹೋಗದೆ ತನ್ನ ಗಂಡನಿಗೆ, “ಮಗುವು ಎದೆಹಾಲು ಕುಡಿಯುವುದನ್ನು ಬಿಡುವವರೆಗೂ ನಾನು ಬರುವುದಿಲ್ಲ. ಅವನು ಯೆಹೋವ ದೇವರ ಸನ್ನಿಧಿಯ ದರ್ಶನಕ್ಕೂ ಅಲ್ಲಿ ಎಂದೆಂದಿಗೂ ಇರುವುದಕ್ಕೂ ನಾನು ಅವನನ್ನು ಆಮೇಲೆ ತೆಗೆದುಕೊಂಡು ಬರುವೆನು,” ಎಂದಳು.
וְחַנָּה לֹא עָלָתָה כִּֽי־אָמְרָה לְאִישָׁהּ עַד יִגָּמֵל הַנַּעַר וַהֲבִאֹתִיו וְנִרְאָה אֶת־פְּנֵי יְהֹוָה וְיָשַׁב שָׁם עַד־עוֹלָֽם׃
23 ಅದಕ್ಕೆ ಅವಳ ಗಂಡನಾದ ಎಲ್ಕಾನನು ಅವಳಿಗೆ, “ನೀನು ನಿನಗೆ ಒಳ್ಳೆಯದಾಗಿ ತೋರುವ ಹಾಗೆ ಮಾಡು. ಅವನು ಎದೆಹಾಲು ಕುಡಿಯುವುದನ್ನು ಬಿಡುವವರೆಗೂ ಕಾದುಕೊಂಡಿರು. ಯೆಹೋವ ದೇವರು ತಮ್ಮ ವಾಕ್ಯವನ್ನು ಪೂರೈಸಲಿ,” ಎಂದನು. ಹಾಗೆಯೇ ಅವಳು ನಿಂತು ತನ್ನ ಮಗುವು ಎದೆಹಾಲು ಬಿಡುವವರೆಗೂ ಅವನಿಗೆ ಎದೆಹಾಲು ಕೊಡುತ್ತಿದ್ದಳು.
וַיֹּאמֶר לָהּ אֶלְקָנָה אִישָׁהּ עֲשִׂי הַטּוֹב בְּעֵינַיִךְ שְׁבִי עַד־גׇּמְלֵךְ אֹתוֹ אַךְ יָקֵם יְהֹוָה אֶת־דְּבָרוֹ וַתֵּשֶׁב הָֽאִשָּׁה וַתֵּינֶק אֶת־בְּנָהּ עַד־גׇּמְלָהּ אֹתֽוֹ׃
24 ಅವನು ಎದೆಹಾಲು ಕುಡಿಯುವುದನ್ನು ಬಿಟ್ಟ ತರುವಾಯ, ಅವನನ್ನು ತನ್ನ ಸಂಗಡ ತೆಗೆದುಕೊಂಡು, ಮೂರು ವರ್ಷದ ಹೋರಿಯೊಂದನ್ನೂ, ಸುಮಾರು ಹದಿನಾರು ಕಿಲೋಗ್ರಾಂ ಹಿಟ್ಟನ್ನೂ, ಒಂದು ಬುದ್ದಲಿ ದ್ರಾಕ್ಷಾರಸವನ್ನೂ ತೆಗೆದುಕೊಂಡು ಶೀಲೋವಿನಲ್ಲಿರುವ ಯೆಹೋವ ದೇವರ ಮನೆಗೆ ಹೋದಳು.
וַתַּֽעֲלֵהוּ עִמָּהּ כַּאֲשֶׁר גְּמָלַתּוּ בְּפָרִים שְׁלֹשָׁה וְאֵיפָה אַחַת קֶמַח וְנֵבֶל יַיִן וַתְּבִאֵהוּ בֵית־יְהֹוָה שִׁלוֹ וְהַנַּעַר נָֽעַר׃
25 ಆಗ ಆ ಮಗುವು ಚಿಕ್ಕದಾಗಿತ್ತು. ಅವರು ಹೋರಿಯನ್ನು ಸಮರ್ಪಣೆ ಮಾಡಿದ ತರುವಾಯ, ಮಗುವನ್ನು ಏಲಿಯ ಬಳಿಗೆ ತಂದರು.
וַֽיִּשְׁחֲטוּ אֶת־הַפָּר וַיָּבִאוּ אֶת־הַנַּעַר אֶל־עֵלִֽי׃
26 “ನನ್ನ ಒಡೆಯನೇ, ನಿನ್ನ ಪ್ರಾಣದ ಸಾಕ್ಷಿ, ಇಲ್ಲಿ ಯೆಹೋವ ದೇವರಿಗೆ ಪ್ರಾರ್ಥನೆಮಾಡಿ, ಇಲ್ಲಿ ನಿನ್ನ ಬಳಿಯಲ್ಲಿ ನಿಂತಿದ್ದ ಸ್ತ್ರೀಯು ನಾನೇ. ಈ ಮಗುವಿಗೋಸ್ಕರ ಪ್ರಾರ್ಥನೆ ಮಾಡಿದೆನು.
וַתֹּאמֶר בִּי אֲדֹנִי חֵי נַפְשְׁךָ אֲדֹנִי אֲנִי הָאִשָּׁה הַנִּצֶּבֶת עִמְּכָה בָּזֶה לְהִתְפַּלֵּל אֶל־יְהֹוָֽה׃
27 ನಾನು ಯೆಹೋವ ದೇವರಿಗೆ ವಿಜ್ಞಾಪನೆ ಮಾಡಿದ್ದನ್ನು ಅವರು ನನಗೆ ಕೊಟ್ಟರು.
אֶל־הַנַּעַר הַזֶּה הִתְפַּלָּלְתִּי וַיִּתֵּן יְהֹוָה לִי אֶת־שְׁאֵלָתִי אֲשֶׁר שָׁאַלְתִּי מֵֽעִמּֽוֹ׃
28 ಆದ್ದರಿಂದ ನಾನು ಅವನನ್ನು ಯೆಹೋವ ದೇವರಿಗೆ ಒಪ್ಪಿಸಿದ್ದೇನೆ. ಅವನು ಜೀವಿಸಿರುವವರೆಗೆ ಯೆಹೋವ ದೇವರಿಗೆ ಸಮರ್ಪಿತನಾಗಿರುವನು,” ಎಂದಳು. ಆಮೇಲೆ ಅವರೆಲ್ಲರೂ ಅಲ್ಲಿ ಯೆಹೋವ ದೇವರನ್ನು ಆರಾಧಿಸಿದರು.
וְגַם אָנֹכִי הִשְׁאִלְתִּהוּ לַֽיהֹוָה כׇּל־הַיָּמִים אֲשֶׁר הָיָה הוּא שָׁאוּל לַיהֹוָה וַיִּשְׁתַּחוּ שָׁם לַֽיהֹוָֽה׃

< ಸಮುವೇಲನು - ಪ್ರಥಮ ಭಾಗ 1 >