< ಪೇತ್ರನು ಬರೆದ ಮೊದಲನೆಯ ಪತ್ರಿಕೆ 5 >
1 ಜೊತೆ ಹಿರಿಯನೂ ಕ್ರಿಸ್ತ ಯೇಸುವಿನ ಶ್ರಮೆಗಳ ಸಾಕ್ಷಿಯೂ ಪ್ರತ್ಯಕ್ಷವಾಗಲಿರುವ ಮಹಿಮೆಯಲ್ಲಿ ಪಾಲುಗಾರನೂ ಆಗಿರುವ ನಾನು ನಿಮ್ಮಲ್ಲಿರುವ ಹಿರಿಯರನ್ನು ಬೇಡಿಕೊಳ್ಳುವುದು.
Abadala abaphakathi kwenu ngiyabakhuthaza engingomdala kanye labo lomfakazi wenhlupheko zikaKristu, lomhlanganyeli wenkazimulo ezakwembulwa:
2 ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ, ಆದರೆ ದೇವರ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚ ದ್ರವ್ಯಾಶೆಯಿಂದಲ್ಲ, ಸಿದ್ಧಮನಸ್ಸಿನಿಂದಲೂ ಮೇಲ್ವಿಚಾರಣೆ ಮಾಡಿರಿ.
Yelusani umhlambi kaNkulunkulu ophakathi kwenu, liwubonise kungabi ngokubanjwa ngamandla, kodwa ngesihle; njalo kungabi ngenxa yenzuzo elihlazo, kodwa ngokuvuma,
3 ದೇವರ ಸ್ವಾಸ್ತ್ಯದ ಮೇಲೆ ದೊರೆತನ ಮಾಡುವವರಂತೆ ನಡೆಯದೆ ಮಂದೆಗೆ ಆದರ್ಶವಾಗಿಯೇ ನಡೆದುಕೊಳ್ಳಿರಿ.
futhi lingabi njengababusi kulabo elabelwa bona, kodwa libe yizibonelo zomhlambi.
4 ಪ್ರಧಾನ ಕುರುಬ ಆಗಿರುವವರು ಪ್ರತ್ಯಕ್ಷರಾಗುವಾಗ ನೀವು ಎಂದಿಗೂ ಬಾಡದ ಮಹಿಮೆಯುಳ್ಳ ಕಿರೀಟವನ್ನು ಹೊಂದುವಿರಿ.
Kuzakuthi lapho uMelusi omkhulu esebonakele lizakwemukela umqhele wobukhosi ongabuniyo.
5 ಅದೇ ರೀತಿಯಾಗಿ ಯೌವನಸ್ಥರೇ, ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ ದೀನತೆಯೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಅಧೀನರಾಗಿರಿ. ಏಕೆಂದರೆ, “ದೇವರು ಅಹಂಕಾರಿಗಳನ್ನು ಎದುರಿಸುತ್ತಾರೆ, ದೀನರಿಗಾದರೋ ಕೃಪೆಯನ್ನು ಕೊಡುತ್ತಾರೆ!”
Ngokunjalo, batsha, zehliseleni ngaphansi kwabadala; njalo lonke zehliseni omunye komunye, zembathiseni ukuthobeka; ngoba uNkulunkulu umelana labazigqajayo, kodwa abathobekileyo uyabapha umusa.
6 ಹೀಗಿರುವುದರಿಂದ ದೇವರ ಪರಾಕ್ರಮವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ, ಆಗ ದೇವರು ಸಕಾಲದಲ್ಲಿ ನಿಮ್ಮನ್ನು ಮೇಲಕ್ಕೆತ್ತುವರು.
Ngakho zehliseleni ngaphansi kwesandla sikaNkulunkulu esilamandla, ukuze aliphakamise ngesikhathi esifaneleyo,
7 ನಿಮ್ಮ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿರಿ. ಅವರು ನಿಮಗೋಸ್ಕರ ಚಿಂತಿಸುತ್ತಾರೆ.
liphosela phezu kwakhe inkathazo zenu zonke, ngoba yena uyalikhathalela.
8 ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.
Qondani, lilinde, ngoba isitha senu, udiyabhola, siyabhoda njengesilwane esibhongayo sidinga esingamginya;
9 ನೀವು ನಂಬಿಕೆಯಲ್ಲಿ ದೃಢವಾಗಿದ್ದು ಸೈತಾನನನ್ನು ಎದುರಿಸಿರಿ. ಲೋಕದಲ್ಲಿರುವ ನಿಮ್ಮ ಸಹೋದರರಿಗೂ ಸಹೋದರಿಯರಿಗೂ ಅಂಥಾ ಬಾಧೆಗಳೇ ಸಂಭವಿಸುತ್ತವೆ ಎಂದು ನಿಮಗೆ ತಿಳಿದದೆಯಲ್ಲಾ.
limelane laye liqinile ekholweni, lisazi ukuthi zona lezonhlupho zapheleliswa kubazalwane benu abasemhlabeni.
10 ಕ್ರಿಸ್ತ ಯೇಸುವಿನ ಮೂಲಕ ನಿಮ್ಮನ್ನು ತಮ್ಮ ನಿತ್ಯ ಪ್ರಭಾವಕ್ಕೆ ಕರೆದ ಕೃಪಾಪೂರ್ಣ ಆಗಿರುವ ದೇವರು ನೀವು ಸ್ವಲ್ಪಕಾಲ ಬಾಧೆಪಟ್ಟ ಮೇಲೆ ತಾವೇ ನಿಮ್ಮನ್ನು ಪರಿಪೂರ್ಣಮಾಡಿ, ಸ್ಥಿರಪಡಿಸಿ, ಬಲಪಡಿಸಿ ನೆಲೆಗೊಳಿಸುವರು. (aiōnios )
Kodwa uNkulunkulu womusa wonke, owasibizela ebukhosini bakhe obuphakade kuKristu Jesu, sesihlupheke okwesikhatshana, sengathi yena angaliphelelisa, aliqinise, alinike amandla, alisekele. (aiōnios )
11 ಅವರಿಗೆ ಸರ್ವಾಧಿಪತ್ಯವೂ ಯುಗಯುಗಾಂತರಗಳಲ್ಲಿ ಇರಲಿ. ಆಮೆನ್. (aiōn )
Kakube kuye inkazimulo lamandla kuze kube nini lanini. Ameni. (aiōn )
12 ನಿಮ್ಮನ್ನು ಪ್ರೋತ್ಸಾಹಿಸುವುದಕ್ಕೂ ಇದೇ ದೇವರ ನಿಜವಾದ ಕೃಪೆ ಎಂದು ಸಾಕ್ಷಿ ಹೇಳುವುದಕ್ಕೂ ನಿಮಗೆ ನಂಬಿಗಸ್ತ ಆಗಿರುವ ಸಹೋದರನೆಂದು ನಾನು ಎಣಿಸುವ ಸಿಲ್ವಾನನ ಸಹಾಯದಿಂದ ಸಂಕ್ಷೇಪವಾಗಿ ಇದನ್ನು ಬರೆದಿದ್ದೇನೆ. ನಿಜವಾದ ಕೃಪೆಯಲ್ಲಿ ನೀವು ನಿಂತವರಾಗಿದ್ದೀರಿ.
NgoSilivanu ongumzalwane othembekileyo kini, ngokubona kwami, ngibhale ngokufitshane, ngikhuthaza njalo ngifakaza ukuthi lo ngumusa oqotho kaNkulunkulu, elimi kuwo.
13 ನಿಮ್ಮೊಂದಿಗೆ ಆರಿಸಿಕೊಂಡಂಥ ಬಾಬಿಲೋನಿನಲ್ಲಿರುವ ಸಭೆಯು ನಿಮಗೆ ವಂದನೆ ಹೇಳುತ್ತದೆ. ನನ್ನ ಮಗನಾದ ಮಾರ್ಕನು ಸಹ ವಂದನೆ ಹೇಳುತ್ತಾನೆ.
Ibandla eliseBhabhiloni elikhethiweyo kanye lani liyalibingelela, loMarko indodana yami.
14 ಪ್ರೀತಿಯಿಂದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತ ಯೇಸುವಿನಲ್ಲಿರುವ ನಿಮ್ಮೆಲ್ಲರಿಗೆ ಶಾಂತಿಯಿರಲಿ!
Bingelelanani ngokwanga kothando. Ukuthula kakube kini lonke elikuKristu Jesu. Ameni.