< ಪೇತ್ರನು ಬರೆದ ಮೊದಲನೆಯ ಪತ್ರಿಕೆ 4 >
1 ಆದ್ದರಿಂದ ಕ್ರಿಸ್ತ ಯೇಸುವು ನಮಗೋಸ್ಕರ ತಮ್ಮ ಮಾಂಸದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ ಅವರಿಗಿದ್ದ ಮನೋಭಾವವನ್ನು ಧರಿಸಿಕೊಳ್ಳಿರಿ. ಏಕೆಂದರೆ ಮಾಂಸದಲ್ಲಿ ಬಾಧೆಪಟ್ಟವರು ಪಾಪಮಾಡುವುದನ್ನು ನಿಲ್ಲಿಸಿಬಿಡುವರು.
အသ္မာကံ ဝိနိမယေန ခြီၐ္ဋး ၑရီရသမ္ဗန္ဓေ ဒဏ္ဍံ ဘုက္တဝါန် အတော ဟေတေား ၑရီရသမ္ဗန္ဓေ ယော ဒဏ္ဍံ ဘုက္တဝါန် သ ပါပါတ် မုက္တ
2 ಅಂಥವರು ಉಳಿದಿರುವ ತಮ್ಮ ಭೂಲೋಕದ ಬಾಳಲ್ಲಿ ಮನುಷ್ಯರ ದುರಾಶೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವರು.
ဣတိဘာဝေန ယူယမပိ သုသဇ္ဇီဘူယ ဒေဟဝါသသျာဝၑိၐ္ဋံ သမယံ ပုနရ္မာနဝါနာမ် ဣစ္ဆာသာဓနာရ္ထံ နဟိ ကိန္တွီၑွရသျေစ္ဆာသာဓနာရ္ထံ ယာပယတ၊
3 ದೇವರನ್ನು ಅರಿಯದ ಜನರು ಮಾಡಲು ಇಚ್ಛಿಸುವುದನ್ನೆಲ್ಲಾ ನೀವು ಗತಕಾಲದಲ್ಲಿ ಸಾಕಷ್ಟು ಮಾಡಿದ್ದೀರಿ. ಆಗ ನೀವು ಅಶ್ಲೀಲತೆ, ದುರಾಶೆಗಳು, ಕುಡುಕತನ, ಅಮಲೇರುವಿಕೆ, ದುಂದು ಔತಣಗಳು, ಅಸಹ್ಯವಾದ ವಿಗ್ರಹಾರಾಧನೆಗಳು ಇವುಗಳನ್ನು ಮಾಡುತ್ತಿದ್ದೀರಿ.
အာယုၐော ယး သမယော ဝျတီတသ္တသ္မိန် ယုၐ္မာဘိ ရျဒ် ဒေဝပူဇကာနာမ် ဣစ္ဆာသာဓနံ ကာမကုတ္သိတာဘိလာၐမဒျပါနရင်္ဂရသမတ္တတာဃၖဏာရှဒေဝပူဇာစရဏဉ္စာကာရိ တေန ဗာဟုလျံ၊
4 ಆದುದರಿಂದ ನಿಮ್ಮ ಹಳೆಯ ಸ್ನೇಹಿತರೊಂದಿಗೆ ನೀವು ಮುಂಚಿನಂತೆ ಹಳೆಯ ದುಷ್ಕಾರ್ಯಗಳಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು ನಿಮ್ಮನ್ನು ದೂಷಿಸುತ್ತಾರೆ.
ယူယံ တဲး သဟ တသ္မိန် သရွွနာၑပင်္ကေ မဇ္ဇိတုံ န ဓာဝထ, ဣတျနေနာၑ္စရျျံ ဝိဇ္ဉာယ တေ ယုၐ္မာန် နိန္ဒန္တိ၊
5 ಅಂಥವರು ಬದುಕುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕಾಗಿ ಸಿದ್ಧವಾಗಿರುವ ದೇವರಿಗೆ ಲೆಕ್ಕ ಕೊಡಬೇಕಾಗುವುದು.
ကိန္တု ယော ဇီဝတာံ မၖတာနာဉ္စ ဝိစာရံ ကရ္တ္တုမ် ဥဒျတော'သ္တိ တသ္မဲ တဲရုတ္တရံ ဒါယိၐျတေ၊
6 ಈ ಕಾರಣದಿಂದಲೇ ಈಗ ಸತ್ತಿರುವವರಿಗೂ ಸಹ ಬದುಕಿದ್ದಾಗ ಸುವಾರ್ತೆ ಸಾರಲಾಯಿತು. ಆದ್ದರಿಂದ ಎಲ್ಲಾ ಮನುಷ್ಯರಿಗೆ ನೇಮಿಸಿದ ನ್ಯಾಯತೀರ್ಪಿನಂತೆ ಅವರು ದೇಹದಲ್ಲಿ ಮರಣ ಹೊಂದಿದ್ದರೂ, ತಮ್ಮ ಆತ್ಮದಲ್ಲಿ ದೇವರಿಗಾಗಿ ಜೀವಿಸುವರು.
ယတော ဟေတော ရျေ မၖတာသ္တေၐာံ ယတ် မာနဝေါဒ္ဒေၑျး ၑာရီရိကဝိစာရး ကိန္တွီၑွရောဒ္ဒေၑျမ် အာတ္မိကဇီဝနံ ဘဝတ် တဒရ္ထံ တေၐာမပိ သန္နိဓော် သုသမာစာရး ပြကာၑိတော'ဘဝတ်၊
7 ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಸ್ವಸ್ಥಚಿತ್ತರಾಗಿಯೂ ಜಾಗ್ರತರಾಗಿಯೂ ಪ್ರಾರ್ಥನೆಗೆ ಸಿದ್ಧವಾಗಿರಿ.
သရွွေၐာမ် အန္တိမကာလ ဥပသ္ထိတသ္တသ္မာဒ် ယူယံ သုဗုဒ္ဓယး ပြာရ္ထနာရ္ထံ ဇာဂြတၑ္စ ဘဝတ၊
8 ಎಲ್ಲಕ್ಕೂ ಮಿಗಿಲಾಗಿ ನಿಮ್ಮನಿಮ್ಮೊಳಗೆ ಯಥಾರ್ಥವಾದ ಪ್ರೀತಿ ಇರಲಿ. ಏಕೆಂದರೆ ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.
ဝိၑေၐတး ပရသ္ပရံ ဂါဎံ ပြေမ ကုရုတ, ယတး, ပါပါနာမပိ ဗာဟုလျံ ပြေမ္နဲဝါစ္ဆာဒယိၐျတေ၊
9 ಗೊಣಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ.
ကာတရောက္တိံ ဝိနာ ပရသ္ပရမ် အာတိထျံ ကၖရုတ၊
10 ನೀವು ದೇವರಿಂದ ವಿವಿಧ ಕೃಪಾವರಗಳನ್ನು ಹೊಂದಿರಲಾಗಿ ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿರುವ ವರಗಳನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ.
ယေန ယော ဝရော လဗ္ဓသ္တေနဲဝ သ ပရမ် ဥပကရောတၖ, ဣတ္ထံ ယူယမ် ဤၑွရသျ ဗဟုဝိဓပြသာဒသျောတ္တမာ ဘာဏ္ဍာဂါရာဓိပါ ဘဝတ၊
11 ಒಬ್ಬನು ಬೋಧಿಸುವವನಾದರೆ ದೇವರ ವಾಕ್ಯವನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ. ಇದರಿಂದ ಎಲ್ಲದರಲ್ಲಿ ಕ್ರಿಸ್ತ ಯೇಸುವಿನ ಮೂಲಕ ದೇವರಿಗೆ ಮಹಿಮೆಯೂ ಸ್ತೋತ್ರವೂ ಅಧಿಪತ್ಯವೂ ಯುಗಯುಗಾಂತರಗಳಲ್ಲಿ ಇರಲಿ. ಆಮೆನ್. (aiōn )
ယော ဝါကျံ ကထယတိ သ ဤၑွရသျ ဝါကျမိဝ ကထယတု ယၑ္စ ပရမ် ဥပကရောတိ သ ဤၑွရဒတ္တသာမရ္ထျာဒိဝေါပကရောတု၊ သရွွဝိၐယေ ယီၑုခြီၐ္ဋေနေၑွရသျ ဂေါ်ရဝံ ပြကာၑျတာံ တသျဲဝ ဂေါ်ရဝံ ပရာကြမၑ္စ သရွွဒါ ဘူယာတ်၊ အာမေန၊ (aiōn )
12 ಪ್ರಿಯರೇ, ನಿಮ್ಮನ್ನು ಶೋಧಿಸಲು ಬರುವ ಅಗ್ನಿಪರೀಕ್ಷೆಗೆ ನೀವು ಆಶ್ಚರ್ಯಪಡಬೇಡಿರಿ. ಅಪೂರ್ವವಾದ ಸಂಗತಿ ನಿಮಗೆ ಸಂಭವಿಸಿತೆಂದು ಯೋಚಿಸಬೇಡಿರಿ.
ဟေ ပြိယတမား, ယုၐ္မာကံ ပရီက္ၐာရ္ထံ ယသ္တာပေါ ယုၐ္မာသု ဝရ္တ္တတေ တမ် အသမ္ဘဝဃဋိတံ မတွာ နာၑ္စရျျံ ဇာနီတ,
13 ನೀವು ಕ್ರಿಸ್ತ ಯೇಸುವಿನ ಬಾಧೆಗಳಲ್ಲಿ ಪಾಲುಗಾರರಾಗಿರುವುದರಿಂದ ಸಂತೋಷವುಳ್ಳವರಾಗಿರಿ. ಆಗ ಕ್ರಿಸ್ತ ಯೇಸುವಿನ ಮಹಿಮೆಯ ಪ್ರತ್ಯಕ್ಷತೆಯಲ್ಲಿ ನೀವು ಸಂತೋಷಪಟ್ಟು ಅತ್ಯಂತ ಉಲ್ಲಾಸಗೊಳ್ಳುವಿರಿ.
ကိန္တု ခြီၐ္ဋေန က္လေၑာနာံ သဟဘာဂိတွာဒ် အာနန္ဒတ တေန တသျ ပြတာပပြကာၑေ'ပျာနနန္ဒေန ပြဖုလ္လာ ဘဝိၐျထ၊
14 ನೀವು ಕ್ರಿಸ್ತ ಯೇಸುವಿನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ, ಧನ್ಯರು. ಏಕೆಂದರೆ, ಮಹಿಮೆಯ ಆತ್ಮರೂ, ದೇವರೂ ನಿಮ್ಮಲ್ಲಿ ವಾಸಿಸುತ್ತಾರೆ.
ယဒိ ခြီၐ္ဋသျ နာမဟေတုနာ ယုၐ္မာကံ နိန္ဒာ ဘဝတိ တရှိ ယူယံ ဓနျာ ယတော ဂေါ်ရဝဒါယက ဤၑွရသျာတ္မာ ယုၐ္မာသွဓိတိၐ္ဌတိ တေၐာံ မဓျေ သ နိန္ဒျတေ ကိန္တု ယုၐ္မန္မဓျေ ပြၑံသျတေ၊
15 ನಿಮ್ಮಲ್ಲಿ ಯಾವನಾದರೂ ಕೊಲೆಗಾರನು, ಕಳ್ಳನು, ದುಷ್ಟನು ಪರರ ಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಬಾಧೆಯನ್ನು ಅನುಭವಿಸಬಾರದು.
ကိန္တု ယုၐ္မာကံ ကော'ပိ ဟန္တာ ဝါ စဲရော ဝါ ဒုၐ္ကရ္မ္မကၖဒ် ဝါ ပရာဓိကာရစရ္စ္စက ဣဝ ဒဏ္ဍံ န ဘုင်္က္တာံ၊
16 ನೀವು ಕ್ರಿಸ್ತ ಯೇಸುವನ್ನು ಹಿಂಬಾಲಿಸುವವರಾಗಿ ಬಾಧೆಪಟ್ಟರೆ ನಾಚಿಕೆಪಡಬೇಡಿರಿ. ಆ ಹೆಸರನ್ನು ಹೊಂದಿದ್ದಕ್ಕಾಗಿ ದೇವರನ್ನು ಘನಪಡಿಸಲಿ.
ယဒိ စ ခြီၐ္ဋီယာန ဣဝ ဒဏ္ဍံ ဘုင်္က္တေ တရှိ သ န လဇ္ဇမာနသ္တတ္ကာရဏာဒ် ဤၑွရံ ပြၑံသတု၊
17 ಏಕೆಂದರೆ ದೇವರ ಮನೆಯಲ್ಲಿ ಪ್ರಾರಂಭವಾಗತಕ್ಕ ನ್ಯಾಯತೀರ್ಪಿನ ಸಮಯವು ಬಂದಿದೆ. ಅದು ಮೊದಲು ನಮ್ಮಲ್ಲಿ ಪ್ರಾರಂಭವಾದರೆ ದೇವರ ಸುವಾರ್ತೆಗೆ ಅವಿಧೇಯರಾದವರ ಅಂತ್ಯವು ಏನಾಗಿರಬಹುದು?
ယတော ဝိစာရသျာရမ္ဘသမယေ ဤၑွရသျ မန္ဒိရေ ယုဇျတေ ယဒိ စာသ္မတ္သွာရဘတေ တရှီၑွရီယသုသံဝါဒါဂြာဟိဏာံ ၑေၐဒၑာ ကာ ဘဝိၐျတိ?
18 ಮತ್ತು, “ನೀತಿವಂತನೇ ರಕ್ಷಣೆ ಹೊಂದುವುದು ಕಷ್ಟವಾದರೆ, ಭಕ್ತಿಹೀನನೂ ಪಾಪಿಷ್ಠನೂ ಆಗಿರುವವನ ಗತಿ ಏನು?”
ဓာရ္မ္မိကေနာပိ စေတ် တြာဏမ် အတိကၖစ္ဆြေဏ ဂမျတေ၊ တရှျဓာရ္မ္မိကပါပိဘျာမ် အာၑြယး ကုတြ လပ္သျတေ၊
19 ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ತಮ್ಮ ಆತ್ಮಗಳನ್ನು ನಂಬಿಗಸ್ತ ಆಗಿರುವ ಸೃಷ್ಟಿಕರ್ತ ದೇವರಿಗೆ ಒಪ್ಪಿಸಿ, ಒಳ್ಳೆಯದನ್ನು ಮಾಡಲಿ.
အတ ဤၑွရေစ္ဆာတော ယေ ဒုးခံ ဘုဉ္ဇတေ တေ သဒါစာရေဏ သွာတ္မာနော ဝိၑွာသျသြၐ္ဋုရီၑွသျ ကရာဘျာံ နိဒဓတာံ၊