< ಅರಸುಗಳು - ಪ್ರಥಮ ಭಾಗ 1 >

1 ಅರಸನಾದ ದಾವೀದನು ವೃದ್ಧನಾಗಿಯೂ, ಬಹಳ ಪ್ರಾಯ ಹೋದವನಾಗಿಯೂ ಇರುವಾಗ, ಅವನ ಮೇಲೆ ಹೊದಿಕೆಗಳನ್ನು ಹಾಕಿದರೂ, ಅವನಿಗೆ ಬೆಚ್ಚಗಾಗುತ್ತಿರಲಿಲ್ಲ.
וְהַמֶּלֶךְ דָּוִד זָקֵן בָּא בַּיָּמִים וַיְכַסֻּהוּ בַּבְּגָדִים וְלֹא יִחַם לֽוֹ׃
2 ಆದ್ದರಿಂದ ಅವನ ಸೇವಕರು ಅವನಿಗೆ, “ಅರಸ, ನಮ್ಮ ಒಡೆಯನಿಗೋಸ್ಕರ ಕನ್ನಿಕೆಯನ್ನು ಹುಡುಕುವೆವು. ಅವಳು ಅರಸನ ಬಳಿಯಲ್ಲಿ ನಿಂತು, ಅವನನ್ನು ಜೋಪಾನ ಮಾಡಲಿ. ಅರಸನಾದ ನಮ್ಮ ಒಡೆಯನಿಗೆ ಬೆಚ್ಚಗೆ ಆಗುವ ಹಾಗೆ, ಅವನ ಮಗ್ಗುಲಲ್ಲಿ ಅವಳು ಮಲಗಲಿ,” ಎಂದರು.
וַיֹּאמְרוּ לוֹ עֲבָדָיו יְבַקְשׁוּ לַאדֹנִי הַמֶּלֶךְ נַעֲרָה בְתוּלָה וְעָֽמְדָה לִפְנֵי הַמֶּלֶךְ וּתְהִי־לוֹ סֹכֶנֶת וְשָׁכְבָה בְחֵיקֶךָ וְחַם לַאדֹנִי הַמֶּֽלֶךְ׃
3 ಹಾಗೆಯೇ ಅವರು ಸೌಂದರ್ಯವತಿಯಾದ ಹುಡುಗಿಗೋಸ್ಕರ ಇಸ್ರಾಯೇಲಿನ ಮೇರೆಗಳಲ್ಲೆಲ್ಲಾ ಹುಡುಕಿ, ಶೂನೇಮ್ಯಳಾದ ಅಬೀಷಗ್ ಎಂಬವಳನ್ನು ಕಂಡುಕೊಂಡು, ಅವಳನ್ನು ಅರಸನ ಬಳಿಗೆ ತಂದರು.
וַיְבַקְשׁוּ נַעֲרָה יָפָה בְּכֹל גְּבוּל יִשְׂרָאֵל וַֽיִּמְצְאוּ אֶת־אֲבִישַׁג הַשּׁוּנַמִּית וַיָּבִאוּ אֹתָהּ לַמֶּֽלֶךְ׃
4 ಈ ಸೌಂದರ್ಯವತಿಯಾದ ಹುಡುಗಿಯು ಅರಸನ ಆರೈಕೆ ಮಾಡುತ್ತಾ, ಅವನ ಸೇವೆ ಮಾಡುತ್ತಿದ್ದಳು. ಅರಸನು ಅವಳೊಂದಿಗೆ ಸಂಪರ್ಕ ಮಾಡಲಿಲ್ಲ.
וְהַֽנַּעֲרָה יָפָה עַד־מְאֹד וַתְּהִי לַמֶּלֶךְ סֹכֶנֶת וַתְּשָׁרְתֵהוּ וְהַמֶּלֶךְ לֹא יְדָעָֽהּ׃
5 ಆಗ ಹಗ್ಗೀತಳ ಮಗನಾದ ಅದೋನೀಯನು ತನ್ನನ್ನು ಹೆಚ್ಚಿಸಿಕೊಂಡು, “ನಾನು ಅರಸನಾಗಿರಬೇಕು,” ಎಂದುಕೊಂಡು, ತನಗೋಸ್ಕರ ರಥಗಳನ್ನೂ, ಸಾರಥಿಯರನ್ನೂ, ತನ್ನ ಮುಂದೆ ಓಡುವುದಕ್ಕೆ ಐವತ್ತು ಮಂದಿ ಪುರುಷರನ್ನೂ ಸಿದ್ಧಮಾಡಿದನು.
וַאֲדֹנִיָּה בֶן־חַגִּית מִתְנַשֵּׂא לֵאמֹר אֲנִי אֶמְלֹךְ וַיַּעַשׂ לוֹ רֶכֶב וּפָרָשִׁים וַחֲמִשִּׁים אִישׁ רָצִים לְפָנָֽיו׃
6 ಅವನ ತಂದೆಯು ಎಂದಾದರೂ, “ನೀನು ಹೀಗೆ ಏಕೆ ಮಾಡಿದೆ?” ಎಂದು ಹೇಳಿ ಅವನನ್ನು ಗದರಿಸಲಿಲ್ಲ. ಅವನು ಬಹು ಒಳ್ಳೆಯ ರೂಪವಂತನಾಗಿದ್ದನು. ಅಬ್ಷಾಲೋಮನ ತರುವಾಯ ಅವನ ತಾಯಿ ಅವನನ್ನು ಹೆತ್ತಳು.
וְלֹֽא־עֲצָבוֹ אָבִיו מִיָּמָיו לֵאמֹר מַדּוּעַ כָּכָה עָשִׂיתָ וְגַם־הוּא טֽוֹב־תֹּאַר מְאֹד וְאֹתוֹ יָלְדָה אַחֲרֵי אַבְשָׁלֽוֹם׃
7 ಅದೋನೀಯನು ಚೆರೂಯಳ ಮಗ ಯೋವಾಬ, ಯಾಜಕ ಅಬಿಯಾತರನ ಜೊತೆ ಸೇರಿ ಮಾತುಕತೆ ಮಾಡಿದನು. ಅವರು ಅದೋನೀಯನನ್ನು ಹಿಂಬಾಲಿಸಿ, ಅವನಿಗೆ ಸಹಾಯಕರಾಗಿದ್ದರು.
וַיִּהְיוּ דְבָרָיו עִם יוֹאָב בֶּן־צְרוּיָה וְעִם אֶבְיָתָר הַכֹּהֵן וַֽיַּעְזְרוּ אַחֲרֵי אֲדֹנִיָּֽה׃
8 ಆದರೆ ಯಾಜಕನಾದ ಚಾದೋಕನೂ, ಯೆಹೋಯಾದಾವನ ಮಗ ಬೆನಾಯನೂ, ಪ್ರವಾದಿಯಾದ ನಾತಾನನೂ, ಶಿಮ್ಮಿಯೂ, ರೇಯಿಯೂ, ದಾವೀದನ ಪರಾಕ್ರಮಶಾಲಿಗಳೂ ಅದೋನೀಯನ ಸಂಗಡ ಹೋಗಲಿಲ್ಲ.
וְצָדוֹק הַכֹּהֵן וּבְנָיָהוּ בֶן־יְהוֹיָדָע וְנָתָן הַנָּבִיא וְשִׁמְעִי וְרֵעִי וְהַגִּבּוֹרִים אֲשֶׁר לְדָוִד לֹא הָיוּ עִם־אֲדֹנִיָּֽהוּ׃
9 ಅದೋನೀಯನು ಏನ್ ರೋಗೆಲಿನ ಬಳಿಯಲ್ಲಿರುವ ಚೋಹೆಲೆತ್ ಎಂಬ ಕಲ್ಲಿನ ಹತ್ತಿರ ಕುರಿಗಳನ್ನೂ, ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ ಕೊಲ್ಲಿಸಿ, ಅರಸನ ಮಕ್ಕಳಾದ ತನ್ನ ಸಮಸ್ತ ಸಹೋದರರನ್ನೂ, ಅರಸನ ಸೇವಕರಾದ ಸಮಸ್ತ ಯೆಹೂದದ ಜನರನ್ನೂ ಔತಣಕ್ಕೆ ಕರೆದನು.
וַיִּזְבַּח אֲדֹנִיָּהוּ צֹאן וּבָקָר וּמְרִיא עִם אֶבֶן הַזֹּחֶלֶת אֲשֶׁר־אֵצֶל עֵין רֹגֵל וַיִּקְרָא אֶת־כָּל־אֶחָיו בְּנֵי הַמֶּלֶךְ וּלְכָל־אַנְשֵׁי יְהוּדָה עַבְדֵי הַמֶּֽלֶךְ׃
10 ಆದರೆ ಪ್ರವಾದಿಯಾದ ನಾತಾನನನ್ನೂ, ಬೆನಾಯನನ್ನೂ, ಪರಾಕ್ರಮಶಾಲಿಗಳನ್ನೂ, ತನ್ನ ಸಹೋದರನಾದ ಸೊಲೊಮೋನನನ್ನೂ ಕರೆಯಲಿಲ್ಲ.
וְֽאֶת־נָתָן הַנָּבִיא וּבְנָיָהוּ וְאֶת־הַגִּבּוֹרִים וְאֶת־שְׁלֹמֹה אָחִיו לֹא קָרָֽא׃
11 ಆಗ ನಾತಾನನು ಸೊಲೊಮೋನನ ತಾಯಿ ಬತ್ಷೆಬೆಳಿಗೆ, “ನಮ್ಮ ಒಡೆಯ ದಾವೀದನು ಅರಿಯದಿರುವಾಗ, ಹಗ್ಗೀತಳ ಮಗ ಅದೋನೀಯನು ಅರಸನಾಗಿದ್ದಾನೆ, ಎಂದು ನೀನು ಕೇಳಲಿಲ್ಲವೋ?
וַיֹּאמֶר נָתָן אֶל־בַּת־שֶׁבַע אֵם־שְׁלֹמֹה לֵאמֹר הֲלוֹא שָׁמַעַתְּ כִּי מָלַךְ אֲדֹנִיָּהוּ בֶן־חַגִּית וַאֲדֹנֵינוּ דָוִד לֹא יָדָֽע׃
12 ಆದ್ದರಿಂದ ನೀನು ನಿನ್ನ ಪ್ರಾಣವನ್ನೂ, ನಿನ್ನ ಮಗ ಸೊಲೊಮೋನನ ಪ್ರಾಣವನ್ನೂ ರಕ್ಷಿಸಿಕೊಳ್ಳುವ ಹಾಗೆ ಅಪ್ಪಣೆಯಾದರೆ, ನಿನಗೆ ಆಲೋಚನೆ ಹೇಳುತ್ತೇನೆ.
וְעַתָּה לְכִי אִיעָצֵךְ נָא עֵצָה וּמַלְּטִי אֶת־נַפְשֵׁךְ וְאֶת־נֶפֶשׁ בְּנֵךְ שְׁלֹמֹֽה׃
13 ನೀನು ಅರಸನಾದ ದಾವೀದನ ಬಳಿಗೆ ಹೋಗಿ ಅವನಿಗೆ, ‘ಅರಸನಾದ ನನ್ನ ಒಡೆಯನೇ, “ನಿಶ್ಚಯವಾಗಿ ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ, ಅವನು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ,” ನೀವು ನಿನ್ನ ದಾಸಿಗೆ ಆಣೆ ಇಟ್ಟು ಹೇಳಲಿಲ್ಲವೋ? ಹೀಗಿರಲಾಗಿ ಅದೋನೀಯನು ಆಳುವುದು ಏಕೆ?’ ಎಂದು ಕೇಳು.
לְכִי וּבֹאִי ׀ אֶל־הַמֶּלֶךְ דָּוִד וְאָמַרְתְּ אֵלָיו הֲלֹֽא־אַתָּה אֲדֹנִי הַמֶּלֶךְ נִשְׁבַּעְתָּ לַאֲמָֽתְךָ לֵאמֹר כִּֽי־שְׁלֹמֹה בְנֵךְ יִמְלֹךְ אַחֲרַי וְהוּא יֵשֵׁב עַל־כִּסְאִי וּמַדּוּעַ מָלַךְ אֲדֹנִיָֽהוּ׃
14 ನೀನು, ಇನ್ನೂ ಅರಸನ ಸಂಗಡ ಮಾತನಾಡುತ್ತಿರುವಾಗ, ನಾನು ನಿನ್ನ ಹಿಂದೆಯೇ ಒಳಗೆ ಬಂದು, ನಿನ್ನ ಮಾತುಗಳನ್ನು ಸ್ಥಿರಮಾಡುವೆನು,” ಎಂದನು.
הִנֵּה עוֹדָךְ מְדַבֶּרֶת שָׁם עִם־הַמֶּלֶךְ וַאֲנִי אָבוֹא אַחֲרַיִךְ וּמִלֵּאתִי אֶת־דְּבָרָֽיִךְ׃
15 ಆಗ ಬತ್ಷೆಬೆಳು ಬಹು ವೃದ್ಧನಾಗಿದ್ದ ದಾವೀದನನ್ನು ನೋಡಲು ಅರಸನ ಕೊಠಡಿಯೊಳಗೆ ಹೋದಳು. ಅಲ್ಲಿ ಶೂನೇಮ್ಯಳಾದ ಅಬೀಷಗ್ ಅರಸನಿಗೆ ಸೇವೆಮಾಡುತ್ತಾ ಇದ್ದಳು.
וַתָּבֹא בַת־שֶׁבֶע אֶל־הַמֶּלֶךְ הַחַדְרָה וְהַמֶּלֶךְ זָקֵן מְאֹד וַֽאֲבִישַׁג הַשּׁוּנַמִּית מְשָׁרַת אֶת־הַמֶּֽלֶךְ׃
16 ಆಗ ಬತ್ಷೆಬೆಳು ಅರಸನಿಗೆ ಬಾಗಿ ನಮಸ್ಕರಿಸಿದಳು. ಅರಸನಾದ ದಾವೀದನು, “ನಿನಗೇನು ಬೇಕು?” ಎಂದನು.
וַתִּקֹּד בַּת־שֶׁבַע וַתִּשְׁתַּחוּ לַמֶּלֶךְ וַיֹּאמֶר הַמֶּלֶךְ מַה־לָּֽךְ׃
17 ಆಕೆಯು ಅರಸನಿಗೆ, “ನನ್ನ ಒಡೆಯನೇ, ನಿಶ್ಚಯವಾಗಿ ನಿನ್ನ ಮಗ ಸೊಲೊಮೋನನು ಆಳುವನೆಂದೂ, ಅವನು ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ, ನೀವು ನಿನ್ನ ದಾಸಿಗೆ ನಿನ್ನ ದೇವರಾದ ಯೆಹೋವ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದಿರಿ.
וַתֹּאמֶר לוֹ אֲדֹנִי אַתָּה נִשְׁבַּעְתָּ בַּֽיהוָה אֱלֹהֶיךָ לַֽאֲמָתֶךָ כִּֽי־שְׁלֹמֹה בְנֵךְ יִמְלֹךְ אַחֲרָי וְהוּא יֵשֵׁב עַל־כִּסְאִֽי׃
18 ಆದರೆ, ಅರಸನಾಗಿರುವ ನನ್ನ ಒಡೆಯನಾದ ನೀವು ಅರಿಯದೆ ಇರುವಾಗ, ಅದೋನೀಯನು ರಾಜನಾಗಿಬಿಟ್ಟಿದ್ದಾನೆ.
וְעַתָּה הִנֵּה אֲדֹנִיָּה מָלָךְ וְעַתָּה אֲדֹנִי הַמֶּלֶךְ לֹא יָדָֽעְתָּ׃
19 ಇದಲ್ಲದೆ ಅವನು ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ, ಕುರಿಗಳನ್ನೂ ಬಲಿಯಾಗಿ ಅರ್ಪಿಸಿದ್ದಾನೆ, ಅರಸನ ಮಕ್ಕಳೆಲ್ಲರನ್ನೂ, ಯಾಜಕನಾದ ಅಬಿಯಾತರನನ್ನೂ, ಸೇನಾಧಿಪತಿ ಯೋವಾಬನನ್ನೂ ಔತಣಕ್ಕೆ ಕರೆದಿದ್ದಾನೆ. ಆದರೆ ನಿನ್ನ ಸೇವಕನಾದ ಸೊಲೊಮೋನನನ್ನು ಅವನು ಕರೆಯಲಿಲ್ಲ.
וַיִּזְבַּח שׁוֹר וּֽמְרִיא־וְצֹאן לָרֹב וַיִּקְרָא לְכָל־בְּנֵי הַמֶּלֶךְ וּלְאֶבְיָתָר הַכֹּהֵן וּלְיֹאָב שַׂר הַצָּבָא וְלִשְׁלֹמֹה עַבְדְּךָ לֹא קָרָֽא׃
20 ಆದ್ದರಿಂದ ಅರಸನಾದ ನನ್ನ ಒಡೆಯನೇ, ನಿಮ್ಮ ತರುವಾಯ ನನ್ನ ಒಡೆಯನಾದ ಅರಸನ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನು ಯಾರೆಂದು ನೀವು ಹೇಳುವ ಹಾಗೆ, ಸಮಸ್ತ ಇಸ್ರಾಯೇಲರ ಕಣ್ಣುಗಳು ನಿಮ್ಮ ಮೇಲೆ ಇರುತ್ತವೆ.
וְאַתָּה אֲדֹנִי הַמֶּלֶךְ עֵינֵי כָל־יִשְׂרָאֵל עָלֶיךָ לְהַגִּיד לָהֶם מִי יֵשֵׁב עַל־כִּסֵּא אֲדֹנִֽי־הַמֶּלֶךְ אַחֲרָֽיו׃
21 ಇಲ್ಲದಿದ್ದರೆ ನನ್ನ ಒಡೆಯನೂ ಅರಸನೂ ತನ್ನ ಪಿತೃಗಳ ಸಂಗಡ ಸಮಾಧಿ ಸೇರಿದಾಗ, ನಾನೂ, ನನ್ನ ಮಗ ಸೊಲೊಮೋನನೂ ಅಪರಾಧಿಗಳಾಗಿ ಎಣಿಕೆಯಾಗುವೆವು,” ಎಂದಳು.
וְהָיָה כִּשְׁכַב אֲדֹנִֽי־הַמֶּלֶךְ עִם־אֲבֹתָיו וְהָיִיתִי אֲנִי וּבְנִי שְׁלֹמֹה חַטָּאִֽים׃
22 ಅವಳು ಅರಸನ ಸಂಗಡ ಇನ್ನೂ ಮಾತನಾಡುತ್ತಿರುವಾಗ, ಪ್ರವಾದಿಯಾದ ನಾತಾನನು ಬಂದನು.
וְהִנֵּה עוֹדֶנָּה מְדַבֶּרֶת עִם־הַמֶּלֶךְ וְנָתָן הַנָּבִיא בָּֽא׃
23 ಆಗ ಅರಸನಿಗೆ, “ಪ್ರವಾದಿಯಾದ ನಾತಾನನು,” ಎಂದರು. ಅವನು ಒಳಗೆ ಅರಸನ ಮುಂದೆ ಬಂದಾಗ, ಮೋರೆ ಕೆಳಗಾಗಿ ನೆಲಕ್ಕೆ ಅಡ್ಡಬಿದ್ದನು.
וַיַּגִּידוּ לַמֶּלֶךְ לֵאמֹר הִנֵּה נָתָן הַנָּבִיא וַיָּבֹא לִפְנֵי הַמֶּלֶךְ וַיִּשְׁתַּחוּ לַמֶּלֶךְ עַל־אַפָּיו אָֽרְצָה׃
24 ಆಗ ನಾತಾನನು, “ಅರಸನಾದ ನನ್ನ ಒಡೆಯನೇ, ಅದೋನೀಯನು, ನನ್ನ ತರುವಾಯ ಆಳುವನೆಂದೂ, ನನ್ನ ಸಿಂಹಾಸನ ಮೇಲೆ ಕುಳಿತುಕೊಳ್ಳುವನೆಂದೂ, ನೀವು ಹೇಳಿದ್ದು ಹೌದೋ?
וַיֹּאמֶר נָתָן אֲדֹנִי הַמֶּלֶךְ אַתָּה אָמַרְתָּ אֲדֹנִיָּהוּ יִמְלֹךְ אַחֲרָי וְהוּא יֵשֵׁב עַל־כִּסְאִֽי׃
25 ಏಕೆಂದರೆ ಈ ಹೊತ್ತು ಅವನು ಇಳಿದು ಹೋಗಿ, ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ, ಕುರಿಗಳನ್ನೂ ಕೊಲ್ಲಿಸಿ, ಅರಸನ ಮಕ್ಕಳೆಲ್ಲರನ್ನೂ, ಸೈನ್ಯಾಧಿಪತಿಗಳನ್ನೂ, ಯಾಜಕನಾದ ಅಬಿಯಾತರನನ್ನೂ ಕರೆದಿದ್ದಾನೆ. ಅವರು ಅವನ ಮುಂದೆ ತಿಂದು, ಕುಡಿದು, ‘ಅರಸನಾದ ಅದೋನೀಯನು ಚಿರಂಜೀವಿಯಾಗಿರಲಿ,’ ಎಂದು ಹೇಳುತ್ತಿದ್ದಾರೆ.
כִּי ׀ יָרַד הַיּוֹם וַיִּזְבַּח שׁוֹר וּֽמְרִיא־וְצֹאן לָרֹב וַיִּקְרָא לְכָל־בְּנֵי הַמֶּלֶךְ וּלְשָׂרֵי הַצָּבָא וּלְאֶבְיָתָר הַכֹּהֵן וְהִנָּם אֹכְלִים וְשֹׁתִים לְפָנָיו וַיֹּאמְרוּ יְחִי הַמֶּלֶךְ אֲדֹנִיָּֽהוּ׃
26 ಆದರೆ ನಿನ್ನ ಸೇವಕನಾದ ನನ್ನನ್ನೂ, ಯಾಜಕನಾದ ಚಾದೋಕನನ್ನೂ, ಯೆಹೋಯಾದಾವನ ಮಗ ಬೆನಾಯನನ್ನೂ, ನಿಮ್ಮ ಸೇವಕನಾದ ಸೊಲೊಮೋನನನ್ನೂ, ಅವನು ಕರೆಯಲೇ ಇಲ್ಲ.
וְלִי אֲנִֽי־עַבְדֶּךָ וּלְצָדֹק הַכֹּהֵן וְלִבְנָיָהוּ בֶן־יְהוֹיָדָע וְלִשְׁלֹמֹה עַבְדְּךָ לֹא קָרָֽא׃
27 ಅರಸನಾದ ನನ್ನ ಒಡೆಯನಿಂದ ಈ ಕಾರ್ಯವಾಯಿತೋ? ಅರಸನಾದ ನನ್ನ ಒಡೆಯನು, ತನ್ನ ತರುವಾಯ ತನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನು ಯಾರೆಂದು ನಿಮ್ಮ ಸೇವಕನಾದ ನನಗೆ ನೀವು ತಿಳಿಸದೆ ಹೋದಿರೋ?” ಎಂದನು.
אִם מֵאֵת אֲדֹנִי הַמֶּלֶךְ נִהְיָה הַדָּבָר הַזֶּה וְלֹא הוֹדַעְתָּ אֶֽת־עבדיך עַבְדְּךָ מִי יֵשֵׁב עַל־כִּסֵּא אֲדֹנִֽי־הַמֶּלֶךְ אַחֲרָֽיו׃
28 ಆಗ ಅರಸನಾದ ದಾವೀದನು ಉತ್ತರವಾಗಿ, “ಬತ್ಷೆಬೆಳನ್ನು ನನ್ನ ಬಳಿಗೆ ಕರೆಯಿರಿ,” ಎಂದನು. ಅವಳು ಅರಸನ ಸನ್ನಿಧಾನಕ್ಕೆ ಬಂದು ಅರಸನ ಮುಂದೆ ನಿಂತಳು.
וַיַּעַן הַמֶּלֶךְ דָּוִד וַיֹּאמֶר קִרְאוּ־לִי לְבַת־שָׁבַע וַתָּבֹא לִפְנֵי הַמֶּלֶךְ וַֽתַּעֲמֹד לִפְנֵי הַמֶּֽלֶךְ׃
29 ಅರಸನು ಆಕೆಗೆ, “ನಿಶ್ಚಯವಾಗಿ, ನಿನ್ನ ಮಗ ಸೊಲೊಮೋನನು ನನ್ನ ತರುವಾಯ ಆಳುವನೆಂದೂ,
וַיִּשָּׁבַע הַמֶּלֶךְ וַיֹּאמַר חַי־יְהוָה אֲשֶׁר־פָּדָה אֶת־נַפְשִׁי מִכָּל־צָרָֽה׃
30 ಅವನು ನನಗೆ ಬದಲಾಗಿ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಾನು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಹೆಸರಿನಲ್ಲಿ ನಿನಗೆ ಹೇಗೆ ಆಣೆ ಇಟ್ಟು ಹೇಳಿದೆನೋ ಹಾಗೆಯೇ, ಈ ದಿನ ನಿಶ್ಚಯವಾಗಿ ಮಾಡುವೆನೆಂದೂ ಸಮಸ್ತ ಇಕ್ಕಟ್ಟಿನೊಳಗಿಂದ ನನ್ನ ಪ್ರಾಣವನ್ನು ವಿಮೋಚಿಸಿದ ಯೆಹೋವ ದೇವರ ಮೇಲೆ ಆಣೆ ಇಡುತ್ತೇನೆ,” ಎಂದೂ ಪ್ರಮಾಣವಾಗಿ ಹೇಳಿದನು.
כִּי כַּאֲשֶׁר נִשְׁבַּעְתִּי לָךְ בַּיהוָה אֱלֹהֵי יִשְׂרָאֵל לֵאמֹר כִּֽי־שְׁלֹמֹה בְנֵךְ יִמְלֹךְ אַחֲרַי וְהוּא יֵשֵׁב עַל־כִּסְאִי תַּחְתָּי כִּי כֵּן אֶעֱשֶׂה הַיּוֹם הַזֶּֽה׃
31 ಬತ್ಷೆಬೆಳು ಮುಖವನ್ನು ನೆಲಕ್ಕೆ ಬಗ್ಗಿಸಿ, ಅರಸನನ್ನು ವಂದಿಸಿ, “ನನ್ನ ಒಡೆಯನೂ, ಅರಸನೂ ಆದ ದಾವೀದನು ಎಂದೆಂದಿಗೂ ಬದುಕಲಿ,” ಎಂದಳು.
וַתִּקֹּד בַּת־שֶׁבַע אַפַּיִם אֶרֶץ וַתִּשְׁתַּחוּ לַמֶּלֶךְ וַתֹּאמֶר יְחִי אֲדֹנִי הַמֶּלֶךְ דָּוִד לְעֹלָֽם׃
32 ಆಗ ಅರಸನಾದ ದಾವೀದನು, “ಯಾಜಕನಾದ ಚಾದೋಕನನ್ನೂ, ಪ್ರವಾದಿಯಾದ ನಾತಾನನನ್ನೂ, ಯೆಹೋಯಾದಾವನ ಮಗ ಬೆನಾಯನನ್ನೂ ನನ್ನ ಬಳಿಗೆ ಕರೆಯಿರಿ,” ಎಂದನು. ಅವರು ಅರಸನ ಸಮ್ಮುಖಕ್ಕೆ ಬಂದರು.
וַיֹּאמֶר ׀ הַמֶּלֶךְ דָּוִד קִרְאוּ־לִי לְצָדוֹק הַכֹּהֵן וּלְנָתָן הַנָּבִיא וְלִבְנָיָהוּ בֶּן־יְהוֹיָדָע וַיָּבֹאוּ לִפְנֵי הַמֶּֽלֶךְ׃
33 ಅರಸನು ಅವರಿಗೆ, “ನೀವು ನಿಮ್ಮ ಯಜಮಾನನ ಸೇವಕರನ್ನು ಕರೆದುಕೊಂಡು ಹೋಗಿ ನನ್ನ ಮಗ ಸೊಲೊಮೋನನನ್ನು ನನ್ನ ಸ್ವಂತ ಹೇಸರಕತ್ತೆಯ ಮೇಲೆ ಏರಿಸಿ ಗೀಹೋನಿಗೆ ಅವನನ್ನು ಕರೆದುಕೊಂಡು ಹೋಗಿರಿ.
וַיֹּאמֶר הַמֶּלֶךְ לָהֶם קְחוּ עִמָּכֶם אֶת־עַבְדֵי אֲדֹנֵיכֶם וְהִרְכַּבְתֶּם אֶת־שְׁלֹמֹה בְנִי עַל־הַפִּרְדָּה אֲשֶׁר־לִי וְהוֹרַדְתֶּם אֹתוֹ אֶל־גִּחֽוֹן׃
34 ಅಲ್ಲಿ ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ ಅವನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕಿಸಲಿ. ತುತೂರಿಯನ್ನು ಊದಿ, ‘ಅರಸ ಸೊಲೊಮೋನನು ಚಿರಂಜೀವಿಯಾಗಿರಲಿ!’ ಎಂದು ಘೋಷಿಸಿರಿ.
וּמָשַׁח אֹתוֹ שָׁם צָדוֹק הַכֹּהֵן וְנָתָן הַנָּבִיא לְמֶלֶךְ עַל־יִשְׂרָאֵל וּתְקַעְתֶּם בַּשּׁוֹפָר וַאֲמַרְתֶּם יְחִי הַמֶּלֶךְ שְׁלֹמֹֽה׃
35 ಆಗ ಅವನು ಬಂದು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಹಾಗೆ, ನೀವು ಅವನ ಹಿಂದೆ ಬನ್ನಿರಿ. ಏಕೆಂದರೆ ಅವನು ನನಗೆ ಬದಲಾಗಿ ಅರಸನಾಗಿರುವನು. ಇಸ್ರಾಯೇಲಿನ ಮೇಲೆಯೂ, ಯೆಹೂದದ ಮೇಲೆಯೂ, ನಾಯಕನಾಗಿರಲು ನಾನು ಅವನನ್ನು ನೇಮಿಸಿದ್ದೇನೆ,” ಎಂದನು.
וַעֲלִיתֶם אַחֲרָיו וּבָא וְיָשַׁב עַל־כִּסְאִי וְהוּא יִמְלֹךְ תַּחְתָּי וְאֹתוֹ צִוִּיתִי לִֽהְיוֹת נָגִיד עַל־יִשְׂרָאֵל וְעַל־יְהוּדָֽה׃
36 ಯೆಹೋಯಾದಾವನ ಮಗ ಬೆನಾಯನು ಅರಸನಿಗೆ ಉತ್ತರವಾಗಿ, “ಆಮೆನ್, ಅರಸನಾದ ನನ್ನ ಒಡೆಯನ ದೇವರಾದ ಯೆಹೋವ ದೇವರು ಹಾಗೆಯೇ ಹೇಳಲಿ.
וַיַּעַן בְּנָיָהוּ בֶן־יְהֽוֹיָדָע אֶת־הַמֶּלֶךְ וַיֹּאמֶר ׀ אָמֵן כֵּן יֹאמַר יְהוָה אֱלֹהֵי אֲדֹנִי הַמֶּֽלֶךְ׃
37 ಯೆಹೋವ ದೇವರು ಅರಸನಾದ ನನ್ನ ಒಡೆಯನ ಸಂಗಡ ಹೇಗೆ ಇದ್ದರೋ, ಹಾಗೆಯೇ ಸೊಲೊಮೋನನ ಸಂಗಡ ಇದ್ದು, ನನ್ನ ಒಡೆಯನೂ, ಅರಸನೂ ಆದ ದಾವೀದನ ಸಿಂಹಾಸನಕ್ಕಿಂತ ಇವನ ಸಿಂಹಾಸನವನ್ನು ಅಧಿಕವಾಗಿ ಮಾಡಲಿ,” ಎಂದನು.
כַּאֲשֶׁר הָיָה יְהוָה עִם־אֲדֹנִי הַמֶּלֶךְ כֵּן יהי יִֽהְיֶה עִם־שְׁלֹמֹה וִֽיגַדֵּל אֶת־כִּסְאוֹ מִכִּסֵּא אֲדֹנִי הַמֶּלֶךְ דָּוִֽד׃
38 ಆಗ ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ, ಯೆಹೋಯಾದಾವನ ಮಗ ಬೆನಾಯನೂ, ಕೆರೇತ್ಯರೂ, ಪೆಲೇತ್ಯರೂ ಹೋಗಿ, ಸೊಲೊಮೋನನನ್ನು ಅರಸನಾದ ದಾವೀದನ ಹೇಸರಕತ್ತೆಯ ಮೇಲೆ ಕುಳ್ಳಿರಿಸಿಕೊಂಡು ಗೀಹೋನಿಗೆ ಕರೆತಂದರು.
וַיֵּרֶד צָדוֹק הַכֹּהֵן וְנָתָן הַנָּבִיא וּבְנָיָהוּ בֶן־יְהוֹיָדָע וְהַכְּרֵתִי וְהַפְּלֵתִי וַיַּרְכִּבוּ אֶת־שְׁלֹמֹה עַל־פִּרְדַּת הַמֶּלֶךְ דָּוִד וַיֹּלִכוּ אֹתוֹ עַל־גִּחֽוֹן׃
39 ಆಗ ಯಾಜಕನಾದ ಚಾದೋಕನು ಗುಡಾರದೊಳಗಿಂದ ತೈಲದ ಕೊಂಬನ್ನು ತಂದು ಸೊಲೊಮೋನನನ್ನು ಅಭಿಷೇಕಿಸಿದನು. ಅವರು ತುತೂರಿಯನ್ನು ಊದಿದರು. ಆಗ ಜನರೆಲ್ಲರು, “ಅರಸನಾದ ಸೊಲೊಮೋನನು ಚಿರಂಜೀವಿಯಾಗಿರಲಿ,” ಎಂದರು.
וַיִּקַּח צָדוֹק הַכֹּהֵן אֶת־קֶרֶן הַשֶּׁמֶן מִן־הָאֹהֶל וַיִּמְשַׁח אֶת־שְׁלֹמֹה וַֽיִּתְקְעוּ בַּשּׁוֹפָר וַיֹּֽאמְרוּ כָּל־הָעָם יְחִי הַמֶּלֶךְ שְׁלֹמֹֽה׃
40 ಇದಲ್ಲದೆ ಜನರೆಲ್ಲರೂ ಅವನನ್ನು ಹಿಂಬಾಲಿಸಿದರು. ಜನರು ಕೊಳಲು ಊದಿ ಮಹಾ ಆನಂದದಿಂದ ಸಂತೋಷಿಸಿದರು. ಅವರ ಶಬ್ದದಿಂದ ಭೂಮಿಯು ಕಂಪಿಸಿತು.
וַיַּעֲלוּ כָל־הָעָם אֽ͏ַחֲרָיו וְהָעָם מְחַלְּלִים בַּחֲלִלִים וּשְׂמֵחִים שִׂמְחָה גְדוֹלָה וַתִּבָּקַע הָאָרֶץ בְּקוֹלָֽם׃
41 ಆಗ ಅದೋನೀಯನೂ, ಅವನ ಸಂಗಡ ಕರೆಹೊಂದಿದವರೂ ತಿಂದು, ತೀರಿಸಿದಾಗ ಅದನ್ನು ಕೇಳಿದರು. ಯೋವಾಬನು ತುತೂರಿಯ ಶಬ್ದವನ್ನು ಕೇಳಿದಾಗ, “ಪಟ್ಟಣದಲ್ಲಿ ಗದ್ದಲದ ಶಬ್ದವೇಕೆ?” ಎಂದನು.
וַיִּשְׁמַע אֲדֹנִיָּהוּ וְכָל־הַקְּרֻאִים אֲשֶׁר אִתּוֹ וְהֵם כִּלּוּ לֶאֱכֹל וַיִּשְׁמַע יוֹאָב אֶת־קוֹל הַשּׁוֹפָר וַיֹּאמֶר מַדּוּעַ קֽוֹל־הַקִּרְיָה הוֹמָֽה׃
42 ಅವನು ಇನ್ನೂ ಮಾತನಾಡುತ್ತಿರುವಾಗ, ಯಾಜಕನಾಗಿರುವ ಅಬಿಯಾತರನ ಮಗ ಯೋನಾತಾನನು ಬಂದನು. ಅದೋನೀಯನು ಅವನಿಗೆ, “ಒಳಗೆ ಬಾ. ಏಕೆಂದರೆ ನೀನು ಯೋಗ್ಯ ಮನುಷ್ಯನೂ, ಒಳ್ಳೆಯ ಸಮಾಚಾರ ತರುವವನೂ ಆಗಿರುತ್ತೀ?” ಎಂದನು.
עוֹדֶנּוּ מְדַבֵּר וְהִנֵּה יוֹנָתָן בֶּן־אֶבְיָתָר הַכֹּהֵן בָּא וַיֹּאמֶר אֲדֹנִיָּהוּ בֹּא כִּי אִישׁ חַיִל אַתָּה וְטוֹב תְּבַשֵּֽׂר׃
43 ಆಗ ಯೋನಾತಾನನು ಅದೋನೀಯನಿಗೆ, ನಿಶ್ಚಯವಾಗಿ ಒಳ್ಳೆಯ ಸಮಾಚಾರವಲ್ಲ! “ನಮ್ಮ ಒಡೆಯನೂ ಅರಸನೂ ಆಗಿರುವ ದಾವೀದನು ಸೊಲೊಮೋನನನ್ನು ಅರಸನಾಗಿ ಮಾಡಿದ್ದಾನೆ.
וַיַּעַן יוֹנָתָן וַיֹּאמֶר לַאֲדֹנִיָּהוּ אֲבָל אֲדֹנֵינוּ הַמֶּֽלֶךְ־דָּוִד הִמְלִיךְ אֶת־שְׁלֹמֹֽה׃
44 ಇದಲ್ಲದೆ ಅರಸನು ಅವನ ಸಂಗಡ ಯಾಜಕನಾದ ಚಾದೋಕನನ್ನೂ, ಪ್ರವಾದಿ ನಾತಾನನನ್ನೂ, ಯೆಹೋಯಾದಾವನ ಮಗ ಬೆನಾಯನನ್ನೂ, ಕೆರೇತ್ಯರನ್ನೂ, ಪೆಲೇತ್ಯರನ್ನೂ ಕಳುಹಿಸಿದ್ದಾನೆ. ಅವರು ಅವನನ್ನು ಅರಸನ ಹೇಸರಕತ್ತೆಯ ಮೇಲೆ ಕೂಡಿಸಿಕೊಂಡು ಹೋಗಿ,
וַיִּשְׁלַח אִתּֽוֹ־הַמֶּלֶךְ אֶת־צָדוֹק הַכֹּהֵן וְאֶת־נָתָן הַנָּבִיא וּבְנָיָהוּ בֶּן־יְהוֹיָדָע וְהַכְּרֵתִי וְהַפְּלֵתִי וַיַּרְכִּבוּ אֹתוֹ עַל פִּרְדַּת הַמֶּֽלֶךְ׃
45 ಯಾಜಕನಾದ ಚಾದೋಕನೂ, ಪ್ರವಾದಿಯಾದ ನಾತಾನನೂ ಸೊಲೊಮೋನನನ್ನು ಗೀಹೋನಿನಲ್ಲಿ ಅರಸನಾಗಿರಲು ಅಭಿಷೇಕಿಸಿದ್ದಾರೆ. ಅವರು ಸಂತೋಷಪಡುತ್ತಾ ಅಲ್ಲಿಂದ ಬಂದ ಕಾರಣ ಪಟ್ಟಣವು ಗದ್ದಲವಾಯಿತು. ನೀವು ಕೇಳುವ ಆರ್ಭಟವು ಇದೇ.
וַיִּמְשְׁחוּ אֹתוֹ צָדוֹק הַכֹּהֵן וְנָתָן הַנָּבִיא לְמֶלֶךְ בְּגִחוֹן וַיַּעֲלוּ מִשָּׁם שְׂמֵחִים וַתֵּהֹם הַקִּרְיָה הוּא הַקּוֹל אֲשֶׁר שְׁמַעְתֶּֽם׃
46 ಇದಲ್ಲದೆ ಸೊಲೊಮೋನನು ರಾಜ್ಯ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ.
וְגַם יָשַׁב שְׁלֹמֹה עַל כִּסֵּא הַמְּלוּכָֽה׃
47 ಇದರ ಹೊರತು ಅರಸನ ಸೇವಕರೂ, ನಮ್ಮ ಯಜಮಾನನೂ, ಅರಸನೂ ಆದ ದಾವೀದನನ್ನು ಆಶೀರ್ವದಿಸಲು ಬಂದು, ‘ದೇವರು ಸೊಲೊಮೋನನ ಹೆಸರನ್ನು ನಿಮ್ಮ ಹೆಸರಿಗಿಂತಲೂ ಪ್ರಸಿದ್ಧ ಮಾಡಲಿ. ಅವನ ಸಿಂಹಾಸನವನ್ನು ನಿಮ್ಮ ಸಿಂಹಾಸನಕ್ಕಿಂತ ದೊಡ್ಡದಾಗಿ ಮಾಡಲಿ,’ ಎಂದೂ ಹೇಳುತ್ತಿರುವಾಗ, ಅರಸನು ಮಂಚದ ಮೇಲೆ ಬಾಗಿ,
וְגַם־בָּאוּ עַבְדֵי הַמֶּלֶךְ לְבָרֵךְ אֶת־אֲדֹנֵינוּ הַמֶּלֶךְ דָּוִד לֵאמֹר יֵיטֵב אלהיך אֱלֹהִים אֶת־שֵׁם שְׁלֹמֹה מִשְּׁמֶךָ וִֽיגַדֵּל אֶת־כִּסְאוֹ מִכִּסְאֶךָ וַיִּשְׁתַּחוּ הַמֶּלֶךְ עַל־הַמִּשְׁכָּֽב׃
48 ‘ಕಣ್ಣುಗಳು ನೋಡುತ್ತಿರುವಾಗ ಇಂದು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಉತ್ತರಾಧಿಕಾರಿಯನ್ನು ನನಗೆ ಕೊಟ್ಟಿರುವ ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ,’ ಎಂದು ಹೇಳಿದ್ದಾರೆ,” ಎಂದನು.
וְגַם־כָּכָה אָמַר הַמֶּלֶךְ בָּרוּךְ יְהוָה אֱלֹהֵי יִשְׂרָאֵל אֲשֶׁר נָתַן הַיּוֹם יֹשֵׁב עַל־כִּסְאִי וְעֵינַי רֹאֽוֹת׃
49 ಆಗ ಅದೋನೀಯನ ಸಂಗಡ ಔತಣಕ್ಕೆ ಬಂದಿದ್ದ ಎಲ್ಲರೂ ಹೆದರಿಕೊಂಡು ಎದ್ದು, ತಮ್ಮ ತಮ್ಮ ಸ್ಥಳಗಳಿಗೆ ಹೊರಟು ಹೋದರು.
וַיּֽ͏ֶחֶרְדוּ וַיָּקֻמוּ כָּל־הַקְּרֻאִים אֲשֶׁר לַאֲדֹנִיָּהוּ וַיֵּלְכוּ אִישׁ לְדַרְכּֽוֹ׃
50 ಆದರೆ ಅದೋನೀಯನು ಸೊಲೊಮೋನನಿಗೆ ಭಯಪಟ್ಟದ್ದರಿಂದ ಎದ್ದು ಹೋಗಿ ಬಲಿಪೀಠದ ಕೊಂಬುಗಳನ್ನು ಹಿಡಿದುಕೊಂಡನು.
וַאֲדֹנִיָּהוּ יָרֵא מִפְּנֵי שְׁלֹמֹה וַיָּקָם וַיֵּלֶךְ וַֽיַּחֲזֵק בְּקַרְנוֹת הַמִּזְבֵּֽחַ׃
51 ಆಗ ಒಬ್ಬನು ಅರಸನಾದ ಸೊಲೊಮೋನನಿಗೆ, “ಅದೋನೀಯನು, ನಿನಗೆ ಭಯಪಡುತ್ತಾನೆ. ಏಕೆಂದರೆ ಇಗೋ, ಅವನು ಬಲಿಪೀಠದ ಕೊಂಬುಗಳನ್ನು ಹಿಡಿದು, ‘ಅರಸನಾದ ಸೊಲೊಮೋನನು ಖಡ್ಗದಿಂದ ತನ್ನ ಸೇವಕನನ್ನು ಕೊಲ್ಲುವುದಿಲ್ಲವೆಂದು ಈ ಹೊತ್ತು ನನಗೆ ಆಣೆ ಇಡಲಿ,’ ಎಂದು ಹೇಳುತ್ತಾನೆ,” ಎಂದನು.
וַיֻּגַּד לִשְׁלֹמֹה לֵאמֹר הִנֵּה אֲדֹנִיָּהוּ יָרֵא אֶת־הַמֶּלֶךְ שְׁלֹמֹה וְהִנֵּה אָחַז בְּקַרְנוֹת הַמִּזְבֵּחַ לֵאמֹר יִשָּֽׁבַֽע־לִי כַיּוֹם הַמֶּלֶךְ שְׁלֹמֹה אִם־יָמִית אֶת־עַבְדּוֹ בֶּחָֽרֶב׃
52 ಅದಕ್ಕೆ ಸೊಲೊಮೋನನು, “ಅವನು ಉತ್ತಮನಾಗಿ ನಡೆಯುವುದಾದರೆ, ಅವನ ಕೂದಲಲ್ಲಿ ಒಂದಾದರೂ ನೆಲಕ್ಕೆ ಬೀಳದು. ಆದರೆ ಅವನಲ್ಲಿ ಕೆಟ್ಟತನವು ಸಿಕ್ಕಿದರೆ ಅವನು ಸಾಯುವನು,” ಎಂದನು.
וַיֹּאמֶר שְׁלֹמֹה אִם יִהְיֶה לְבֶן־חַיִל לֹֽא־יִפֹּל מִשַּׂעֲרָתוֹ אָרְצָה וְאִם־רָעָה תִמָּצֵא־בוֹ וָמֵֽת׃
53 ಅರಸನಾದ ಸೊಲೊಮೋನನು ಅವನನ್ನು ಕರೆಸಿದಾಗ, ಬಲಿಪೀಠದ ಬಳಿಯಿಂದ ಅವನನ್ನು ಕರೆದುಕೊಂಡು ಬಂದರು. ಆಗ ಅವನು ಬಂದು ಅರಸನಾದ ಸೊಲೊಮೋನನಿಗೆ ಅಡ್ಡಬಿದ್ದನು. ಸೊಲೊಮೋನನು ಅವನಿಗೆ, “ನಿನ್ನ ಮನೆಗೆ ಹೋಗು,” ಎಂದನು.
וַיִּשְׁלַח הַמֶּלֶךְ שְׁלֹמֹה וַיֹּרִדֻהוּ מֵעַל הַמִּזְבֵּחַ וַיָּבֹא וַיִּשְׁתַּחוּ לַמֶּלֶךְ שְׁלֹמֹה וַיֹּֽאמֶר־לוֹ שְׁלֹמֹה לֵךְ לְבֵיתֶֽךָ׃

< ಅರಸುಗಳು - ಪ್ರಥಮ ಭಾಗ 1 >