< ಅರಸುಗಳು - ಪ್ರಥಮ ಭಾಗ 7 >

1 ಇದಲ್ಲದೆ ಸೊಲೊಮೋನನು ತನ್ನ ಅರಮನೆಯನ್ನು ಹದಿಮೂರು ವರ್ಷಗಳಲ್ಲಿ ಕಟ್ಟಿಸಿ ಮುಗಿಸಿದನು.
တဖန်ရှောလမုန်သည် တဆယ်သုံးနှစ်ပတ်လုံး နန်းတော်ကို တည်ဆောက်၍ လက်စသတ်လေ၏။
2 ಅವನು ಲೆಬನೋನಿನ ಅಡವಿಯ ಮನೆಯನ್ನು ಕಟ್ಟಿಸಿದನು. ಅದು 44 ಮೀಟರ್ ಉದ್ದ, 22 ಮೀಟರ್ ಅಗಲ, 13.5 ಮೀಟರ್ ಎತ್ತರವೂ ಆಗಿತ್ತು. ಅದು ನಾಲ್ಕು ಸಾಲು ದೇವದಾರು ಕಂಬಗಳ ಮೇಲೆ ಇತ್ತು. ದೇವದಾರು ತೊಲೆಗಳು ಕಂಬಗಳ ಮೇಲೆ ಇದ್ದವು.
နန်းတော်ကို လေဗနုန်တောသစ်သားဖြင့် ဆောက်၍၊ အလျားအတောင်တရာ၊ အနံအတောင် ငါးဆယ်၊ အမြင့်အတောင်သုံးဆယ်ရှိ၏။ အာရဇ်တိုင် လေးစဉ်၊ အာရဇ်ရက်မများနှင့် ဆောက်၏။
3 ಒಂದೊಂದು ಸಾಲು ಹದಿನೈದು ಕಂಬಗಳಾಗಿ ನಲವತ್ತೈದು ಕಂಬಗಳ ಮೇಲೆ ಇರುವ ತೊಲೆಗಳು ದೇವದಾರಿನ ಹಲಿಗೆಗಳಿಂದ ಮಾಡಿದ ಮಾಳಿಗೆಯಿತ್ತು.
တိုင်တစဉ်လျှင် ဆယ်ငါးတိုင်စီရှိ၍ တိုင် ပေါင်းခြောက်ဆယ်အပေါ်မှာ အခြင်တို့ကို တင်လျက်၊ အာရဇ်ပျဉ်ပြားနှင့်မိုးလေ၏။
4 ಮೂರು ಸಾಲು ಕಿಟಕಿಗಳು ಇದ್ದವು. ಮೂರು ಸಾಲುಗಳಲ್ಲಿ ಬೆಳಕಿನ ಕಿಂಡಿಗಳಿದ್ದವು.
အလင်းဝင်စရာပြတင်းပေါက်သုံးတန်စီ အဆင့် ဆင့်မျက်နှာချင်းဆိုင်လျက် တဘက်တချက်၌ ရှိကြ၏။
5 ಕಿಟಕಿಗಳಲ್ಲಿ ಬಾಗಿಲುಗಳೂ, ನಿಲುವುಗಳೂ ಎಲ್ಲಾ ಚೌಕವಾಗಿದ್ದವು. ಮೂರು ಮೂರು ಸಾಲುಗಳಲ್ಲಿ ಬೆಳಕಿನ ಕಿಂಡಿಗಳು ಎದುರೆದುರಾಗಿದ್ದವು.
တံခါးပေါက်ရှိသမျှတံခါးတိုင်ရှိသမျှတို့သည် စတုရန်း လေးထောင့်ဖြစ်ကြ၏။
6 22 ಮೀಟರ್ ಉದ್ದವೂ, 13.5 ಮೀಟರ್ ಅಗಲವೂ ಆದ ಮಂಟಪವನ್ನು ಸ್ತಂಭಗಳಿಂದ ಮಾಡಿಸಿದನು. ಈ ಮಂಟಪವೂ, ಸ್ತಂಭಗಳೂ, ತೊಲೆಗಳೂ, ಮನೆಯ ಸ್ತಂಭಗಳಿಗೂ, ತೊಲೆಗಳಿಗೂ ಎದುರೆದುರಾಗಿದ್ದವು.
တိုင်များ၊ ထုပ်ကြီးများနှင့်ပြည့်စုံ၍ အလျား အတောင်ငါးဆယ်၊ အနံအတောင်သုံးဆယ်ရှိသော ကနားပြင်ကိုလည်း လုပ်လေ၏။
7 ಅಲ್ಲಿ ನ್ಯಾಯತೀರಿಸಲು ನ್ಯಾಯಾಸನದ ಮಂಟಪವನ್ನು ಮಾಡಿ, ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ದೇವದಾರುಗಳನ್ನು ಹೊದಿಸಿದನು.
တရားစီရင်ရာ ကနားပြင်တည်းဟူသော တရား ပလ္လင်တည်ရာ ကနားပြင်ကိုလည်းလုပ်၍၊ ကြမ်းတဘက် မှ တဘက်တိုင်အောင် အာရဇ်ပျဉ်ပြားတို့နှင့်မိုးလေ၏။
8 ತಾನು ವಾಸವಾಗಿರುವ ತನ್ನ ಅರಮನೆಯಲ್ಲಿ ಮಂಟಪದ ಒಳಭಾಗದಲ್ಲಿ ಈ ಕೆಲಸದ ಹಾಗೆಯೇ ಬೇರೆ ಒಂದು ಅಂಗಳವಿತ್ತು. ಇದಲ್ಲದೆ ಸೊಲೊಮೋನನು ತನ್ನ ಹೆಂಡತಿಯಾದ ಫರೋಹನ ಮಗಳಿಗೂ ಈ ಮಂಟಪದ ಹಾಗೆಯೇ ಇನ್ನೊಂದು ಮನೆಯನ್ನು ಕಟ್ಟಿಸಿದನು.
နန်းတော်နှင့်ဆိုင်သော ထိုကနားပြင်နှစ်ဆောင် စပ်ကြားမှာ တန်တိုင်းလည်းရှိ၏။ ရှောလမုန်စုံဘက်သော ဖာရောဘုရင်၏ သမီးစံနန်းကိုလည်း တရားစီရင်ရာ ကနားပြင်နှင့်တူအောင် ဆောက်လေ၏။
9 ಇವೆಲ್ಲಾ ಒಳಗೂ, ಹೊರಗೂ ಅಸ್ತಿವಾರಗಳು ಮೊದಲುಗೊಂಡು, ಕಡೇ ವರಸೆಯವರೆಗೂ ಹೊರಗಿರುವ ದೊಡ್ಡ ಅಂಗಳದ ಮಟ್ಟಿಗೂ, ಅಳತೆಯ ಪ್ರಕಾರ ಗರಗಸದಿಂದ ಕೊಯ್ಯಲಾದ ಬೆಲೆಯುಳ್ಳ ಕೆತ್ತಿದ ಕಲ್ಲುಗಳಾಗಿದ್ದವು.
တန်တိုင်းကြီး ပြင်ဘက်တိုင်အောင်၎င်း၊ အမြစ်မှစ၍ ထိပ်တိုင်အောင်၎င်း၊ ကျောက်ဆစ်ပမာဏနှင့်အညီ၊ နှစ်ဘက်စလုံးလွှနှင့်တိုက်သော ကျောက်၊ ထူးဆန်းသော ကျောက်တို့ဖြင့် ပြီးကြ၏။ အမြစ်သည်လည်း အလျား ရှစ်တောင်၊ ဆယ်တောင်ရှိသော ကျောက်၊ ထူးဆန်းသော ကျောက်တို့ဖြင့် ပြီးကြ၏။
10 ಅಸ್ತಿವಾರವು 4.5 ಮೀಟರ್ ಕಲ್ಲುಗಳೂ, 3.5 ಮೀಟರ್ ಕಲ್ಲುಗಳೂ ಬೆಲೆಯುಳ್ಳ ಕಲ್ಲುಗಳಾಗಿದ್ದವು. ಅವು ದೊಡ್ಡ ಕಲ್ಲುಗಳಾಗಿಯೂ ಇದ್ದವು.
၁၀အမြစ်သည်လည်း အလျားရှစ်တောင်၊ ဆယ် တောင်ရှိသော ကျောက်၊ ထူးဆန်းသောကျောက်ကြီးတို့ ဖြင့် ပြီး၏။
11 ಅದರ ಮೇಲೆ ಕೆತ್ತಿದ ಕಲ್ಲುಗಳ ಅಳತೆಯ ಪ್ರಕಾರ ಬೆಲೆಯುಳ್ಳ ಕಲ್ಲುಗಳೂ, ದೇವದಾರು ತೊಲೆಗಳೂ ಇದ್ದವು.
၁၁အမြစ်ပေါ်မှာလည်း ကျောက်ဆစ်ပမာဏနှင့် အညီ လုပ်သော ကျောက်၊ ထူးဆန်းသော ကျောက်နှင့် အာရဇ်သစ်သားရှိ၏။
12 ದೊಡ್ಡ ಅಂಗಳವು ಸುತ್ತಲೂ ಮೂರು ತರ ಕೆತ್ತಿದ ಕಲ್ಲುಗಳೂ, ಒಂದು ತರ ದೇವದಾರು ಮರದ ತೊಲೆಗಳೂ ಆಗಿದ್ದವು. ಯೆಹೋವ ದೇವರ ಆಲಯದ ಒಳ ಅಂಗಳಕ್ಕೂ, ಆಲಯದ ಮಂಟಪಕ್ಕೂ ಹಾಗೆಯೇ ಇದ್ದವು.
၁၂တန်တိုင်းကြီးသည် ဆစ်သောကျောက်သုံးတန်း၊ အာရဇ်သစ်ကြီးတတန်းဖြင့်ပြီး၏။ ဗိမာန်တော်အတွင်း တန်တိုင်း၊ နန်းတော်ကနားပြင်တန်တိုင်းတို့သည် ထိုအတူ ပြီးကြ၏။
13 ಅರಸನಾದ ಸೊಲೊಮೋನನು ಹೂರಾಮನನ್ನು ಟೈರಿನಿಂದ ಕರೆಕಳುಹಿಸಿದನು.
၁၃ရှောလမုန်သည်လည်း၊ လူကိုစေလွှတ်၍ တုရုမြို့ မှ ဟိရံကို ခေါ်လေ၏။
14 ಇವನು ನಫ್ತಾಲಿಯ ಗೋತ್ರದವಳಾದ ಒಬ್ಬ ವಿಧವೆಯ ಮಗನು, ಅವನ ತಂದೆ ಟೈರ್ ಪಟ್ಟಣದ ಕಂಚುಗಾರನಾಗಿದ್ದನು. ಹೂರಾಮನು ಜ್ಞಾನದಿಂದಲೂ ಗ್ರಹಿಕೆಯಿಂದಲೂ ತಿಳುವಳಿಕೆಯಿಂದಲೂ ಎಲ್ಲಾ ತರಹದ ಕಂಚಿನ ಕೆಲಸವನ್ನು ಮಾಡುವ ಅನುಭವಶಾಲಿಯಾಗಿದ್ದನು. ಅವನು ಅರಸನಾದ ಸೊಲೊಮೋನನ ಬಳಿಗೆ ಬಂದು, ಅವನ ಕೆಲಸವನ್ನೆಲ್ಲಾ ಮಾಡಿದನು.
၁၄ထိုဟိရံကား၊ နဿလိအမျိုးမုတ်ဆိုးမသား ဖြစ်၏။ သူ၏အဘကား၊ တုရုအမျိုးသားပန်းတဉ်းသမား ဖြစ်၏။ သားသည်လည်း ကြေးဝါအလုပ်ခပ်သိမ်းကို လုပ်တတ်သော ဥာဏ်ပညာနှင့်ပြည့်စုံသဖြင့်၊ ရှောလမုန် မင်းကြီးထံသို့လာ၍ အလုပ်ရှိသမျှကို ပြီးစီးစေ၏။
15 ಅವನು ಎರಡು ಕಂಚಿನ ಸ್ತಂಭಗಳನ್ನು ಮಾಡಿದನು. ಒಂದೊಂದು ಸ್ತಂಭ 8 ಮೀಟರ್ ಉದ್ದ. ಒಂದೊಂದು ಸ್ತಂಭದ ಸುತ್ತಳತೆ 5.3 ಮೀಟರ್ ನೂಲಳತೆ ಇತ್ತು.
၁၅ထိုသူသည်အမြင့်တဆယ်ရှစ်တောင်၊ လုံးပတ် တဆယ်နှစ်တောင်ရှိသော ကြေးဝါတိုင်နှစ်တိုင်ကို သွန်းလေ၏။
16 ಆ ಸ್ತಂಭಗಳ ಮೇಲೆ ಇರಿಸಲು ಕಂಚಿನ ಎರಕ ಹೊಯ್ದ ಎರಡು ಕುಂಭಗಳನ್ನು ಮಾಡಿದನು. ಒಂದೊಂದು ಕುಂಭವು 2.2 ಮೀಟರ್ ಎತ್ತರವಾಗಿತ್ತು.
၁၆တိုင်အပေါ်မှာ တင်စရာဘို့ အမြင့်ငါးတောင်ရှိ သော ကြေးဝါတိုင်ထိပ်နှစ်ခုကိုလည်း သွန်းလေ၏။
17 ಸ್ತಂಭಗಳ ಕೊನೆಯಲ್ಲಿ ಇರುವ ಕುಂಭಗಳಿಗೆ ಜಾಲರಿಯ ಹಾಗೆ ಇರುವ ಹಣತೆಗಳೂ, ಸರಪಣಿಗಳ ಹಾಗಿರುವ ಗೊಂಡೆಗಳೂ ಇದ್ದವು. ಅವು ಒಂದೊಂದು ಕಂಬಕ್ಕೆ ಏಳು ಇದ್ದವು.
၁၇ကြေးဝါကွန်ရွက်နှင့်ကြေးဝါကြိုးတို့ကိုလည်း လုပ်၍၊ တိုင်တတိုင်လျှင် ကွန်ရွက်ခုနစ်ခုစီဖြင့် တိုင်ထိပ် ပေါ်မှာ ဖုံးလွှမ်းလေ၏။
18 ಸ್ತಂಭಗಳಿಗೆ ಇನ್ನೂ ಮಾಡಿದ್ದು ಹೇಗೆಂದರೆ, ಕೊನೆಯಲ್ಲಿರುವ ಕುಂಭಗಳನ್ನು ಮುಚ್ಚುವ ಹಾಗೆ ಕುಂಭಗಳೊಳಗೆ ಒಂದೊಂದರಲ್ಲಿ ಜಾಲರಿ ಕೆಲಸದ ಮೇಲೆ ಸುತ್ತಲೂ ಎರಡು ಸಾಲು ದಾಳಿಂಬೆ ಹಣ್ಣುಗಳನ್ನು ಮಾಡಿದನು.
၁၈ကြေးဝါသလဲသီးတို့ကိုလည်း လုပ်၍၊ တိုင်ထိပ် ကွန်ရွက်အပေါ်မှာ ထိပ်တခုလျှင် သလဲသီးနှစ်တန်းစီဖြင့် တန်ဆာဆင်လေ၏။
19 ಮಂಟಪದ ಮುಂದಿರುವ, ಆ ಸ್ತಂಭಗಳ ಕೊನೆಯ ಮೇಲಿರುವ ಕುಂಭಗಳು ತಾವರೆ ಪುಷ್ಪಗಳ ಕೃತಿ 2 ಮೀಟರ್ ಎತ್ತರವಾಗಿದ್ದವು.
၁၉ကနားပြင်ထဲမှာ စိုက်ထားသော ထိုတိုင်ထိပ်တို့ သည် ကြာပွင့်နှင့် ပုံတူ၍ အချင်းလေးတောင်ရှိ၏။
20 ಎರಡು ಸ್ತಂಭಗಳ ಮೇಲಿರುವ ಕುಂಭಗಳಲ್ಲಿ ಉನ್ನತ ಜಾಲರಿಯ ಕೃತಿಯ ಸಮೀಪದಲ್ಲಿರುವ ಅದರ ಹೊಟ್ಟೆಯ ಎದುರಾಗಿ, ಇನ್ನೂರು ದಾಳಿಂಬೆಗಳು ಸಾಲುಗಳಾಗಿ ಸುತ್ತಲೂ ಇದ್ದವು. ಮತ್ತೊಂದು ಕುಂಭಕ್ಕೂ ಹೀಗೆಯೇ ಇತ್ತು.
၂၀တိုင်ထိပ်နှစ်ခုတို့သည် ကွန်ရွက်နှင့် နီးစပ်သော ထုပိကာအပေါ်မှာ တည်လျက်၊ တိုင်ထိပ်တခု၌သလဲသီး နှစ်တန်းစီနှင့် အလုံးနှစ်ရာစီရှိကြ၏။
21 ಆ ಸ್ತಂಭಗಳನ್ನು ಮಂದಿರದ ಮಂಟಪದ ಮುಂದೆ ನಿಲ್ಲಿಸಿದನು. ಅವನು ಬಲಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಯಾಕೀನ್ ಎಂದೂ, ಎಡಗಡೆಯ ಸ್ತಂಭಕ್ಕೆ ಬೋವಾಜ್ ಎಂದೂ ಹೆಸರಿಟ್ಟನು.
၂၁ထိုတိုင်တို့ကို ဗိမာန်တော်ကနားပြင်ထဲမှာ စိုက် ထား၍ လက်ျာတိုင်ကိုယာခိန်၊ လက်ဝဲတိုင်ကို ဗောဇ အမည်ဖြင့် မှည့်လေ၏။
22 ಸ್ತಂಭಗಳ ತಲೆಯಲ್ಲಿ ತಾವರೆ ಪುಷ್ಪಗಳ ಕೆಲಸವಾಗಿತ್ತು. ಹೀಗೆ ಸ್ತಂಭಗಳ ಕೃತಿಯು ಮುಗಿಯಿತು.
၂၂တိုင်ထိပ်အပေါ်မှာ ကြာပွင့်အပြောက်ရှိသည် ဖြစ်၍ တိုင်တို့သည် စေ့စုံကြ၏။
23 ಅನಂತರ ಅವನು ಸಮುದ್ರಪಾತ್ರೆ ಎಂದು ಕರೆಯಲಾಗುವ ಎರಕದ ದೊಡ್ಡ ಪಾತ್ರೆಯನ್ನು ಮಾಡಿಸಿದನು. ಅದು ಚಕ್ರಾಕಾರವಾಗಿ ಅಂಚಿನಿಂದ ಅಂಚಿಗೆ ಸುಮಾರು ನಾಲ್ಕು ಮೀಟರ್. ಅದರ ಎತ್ತರ ಸುಮಾರು ಎರಡು ಮೀಟರ್. ಸುತ್ತಳತೆ ಸುಮಾರು ಹದಿನಾಲ್ಕು ಮೀಟರಾಗಿತ್ತು.
၂၃အချင်းဆယ်တောင်၊ အဝန်းအတောင်သုံးဆယ်၊ အစောက်ငါးတောင်ရှိသော ကြေးဝါရေကန်ကိုလည်း လုပ်လေ၏။
24 ಅದರ ಅಂಚಿನ ಕೆಳಭಾಗದಲ್ಲಿ ಅದರ ಸುತ್ತಲೂ ಅಲಂಕಾರದ ಕಾಯಿಗಳಿದ್ದವು. ಅವು ಒಂದೊಂದು ಮೀಟರಿಗೆ ಹತ್ತರಂತೆ, ಆ ಕೊಳದ ಪಾತ್ರೆಯ ಸುತ್ತಲೂ ಇದ್ದವು. ಇದು ಎರಕ ಹೊಯ್ಯುವಾಗ ಅಲಂಕಾರದ ಕಾಯಿಗಳು ಎರಡು ಸಾಲಾಗಿ ಎರಕ ಹೊಯ್ದಿದ್ದವು.
၂၄ရေကန်အနားပတ် အောက်ပတ်လည်၌ အတောင်တတောင်လျှင် ဘူးသီးဆယ်လုံးစီစေ့အောင် ဘူးသီးနှစ်ပတ်ကို ရေကန်နှင့်တစပ်တည်း သွန်းလေ၏။
25 ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ, ಮೂರು ಪಶ್ಚಿಮಕ್ಕೂ, ಮೂರು ದಕ್ಷಿಣಕ್ಕೂ, ಮೂರು ಪೂರ್ವಕ್ಕೂ ಮುಖಮಾಡಿಕೊಂಡಿದ್ದವು. ಆ ಕೊಳವು ಅವುಗಳ ಮೇಲೆ ಇತ್ತು. ಅವುಗಳ ಹಿಂಭಾಗಗಳೆಲ್ಲಾ ಒಳಮುಖವಾಗಿದ್ದವು.
၂၅ထိုရေကန်သည် နွားတဆယ်နှစ်ခုအပေါ်မှာ တည်လျက်ရှိ၏။ နွားတို့သည် အတွင်းသို့နောက်ခိုင်း၍ အရှေ့အနောက်တောင်မြောက်အရပ်လေးမျက်နှာသို့ တမျက်နှာလျှင် သုံးခုစီ မျက်နှာပြုကြ၏။
26 ಅದರ ದಪ್ಪವು ಅಂಗೈ ಅಗಲದಷ್ಟಾಗಿಯೂ, ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ, ತಾವರೆ ಪುಷ್ಪದ ಹಾಗೆಯೂ ಇತ್ತು. ಅದು ನಾಲ್ವತ್ತು ನಾಲ್ಕು ಸಾವಿರ ಲೀಟರ್ ನೀರನ್ನು ಹಿಡಿಯುತ್ತಿತ್ತು.
၂၆ရေကန်သည် ဒုလက်တဝါးရှိ၏။ အပေါ်အနား ပတ်လည်ဖလား အနားပတ်ကဲ့သို့ ကြာပွင့်အပြောက်နှင့် ပြည့်စုံ၏။ ရေဗတ်နှစ်ထောင်ဝင်၏။
27 ಅವನು ಹತ್ತು ಕಂಚಿನ ಚಲಿಸುವ ಪೀಠಗಳನ್ನು ಮಾಡಿದನು. ಒಂದೊಂದು ಪೀಠವು 1.8 ಮೀಟರ್ ಉದ್ದವೂ, 1.8 ಮೀಟರ್ ಅಗಲವೂ, 1.4 ಮೀಟರ್ ಎತ್ತರವೂ ಆಗಿದ್ದವು.
၂၇တဖန်အလျားလေးတောင်၊ အနံလေးတောင် အမြင့်သုံးတောင် ပမာဏရှိသော ကြေးဝါခုံတဆယ်ကို လုပ်လေ၏။
28 ಆ ಪೀಠಗಳ ಮೇಲಿರುವ ಕೆಲಸ ಹೇಗೆಂದರೆ, ಅವುಗಳಿಗೆ ಅಂಚುಗಳಿದ್ದವು. ಅವು ಅಂಚುಗಳ ಹಲಗೆಗಳ ನಡುವೆ ಇದ್ದವು.
၂၈ထိုခုံပုံသဏ္ဌာန်ဟူမူကား၊ ခုံပတ်လည်၌ အနား ရစ်အဆင့်ဆင့်ရှိ၍ အနားရစ်ကြားမှာ၊
29 ಹಲಗೆಗಳ ನಡುವೆ ಇರುವ ಆ ಅಂಚುಗಳಲ್ಲಿ ಸಿಂಹಗಳೂ, ಎತ್ತುಗಳೂ, ಕೆರೂಬಿಗಳೂ ಇದ್ದವು. ಹಲಗೆಗಳ ಮೇಲ್ಭಾಗದಲ್ಲಿ ಒಂದು ಅಂಚು ಇತ್ತು. ಸಿಂಹಗಳಿಗೂ, ಎತ್ತುಗಳಿಗೂ ಕೆಳಭಾಗದಲ್ಲಿ ತೋರಣಗಳು ಅದರ ಸಂಗಡ ಇದ್ದವು.
၂၉ခြင်္သေ့၊ နွား၊ ခေရုဗိမ်အပြောက်ရှိ၏။ အနားရစ် အပေါ်မှာ ခုံတခုတင်လျက် ရှိ၏။ ခြင်္သေ့နှင့်နွားအောက် ၌လည်း အပြောက်မျိုးရှိ၏။
30 ಒಂದೊಂದು ಪೀಠಕ್ಕೆ ನಾಲ್ಕು ಕಂಚಿನ ಗಾಲಿಗಳೂ, ಕಂಚಿನ ಅಚ್ಚುಗಳೂ ಇದ್ದವು. ಅದರ ನಾಲ್ಕು ಮೂಲೆಗಳಿಗೂ ಹೂಗಳ ತೋರಣಗಳ ಜೋಡಣೆಗಳಿದ್ದವು.
၃၀ခုံတခု၌ကြေးဝါလှည်းဘီးလေးခုစီ၊ ကြေးဝါဝင်ရိုး နှင့်တကွရှိ၏။ အင်တုံတင်စရာဘို့ ခုံလေးထောင့်၌ပခုံး တို့ကို ခုံနှင့်တစပ်တည်း သွန်းလေ၏။
31 ಅಂಚಿಗೆ ಒಳಗಾದ ಅದರ ಬಾಯಿ ಮೇಲೆ ಒಂದು ಮೊಳ ಉದ್ದವಾಗಿತ್ತು. ಚಕ್ರಾಕಾರವಾಗಿದ್ದ ಈ ಬಾಯಿ ಒಂದೂವರೆ ಮೊಳ ಅಗಲವಾಗಿತ್ತು. ಅದರ ಬಾಯಿಯ ಮೇಲೆ ಚಿತ್ರಗಳಿದ್ದವು. ಅದರ ಚಿತ್ರಗಳು ದುಂಡಾಗಿರದೆ ಚೌಕವಾಗಿದ್ದವು.
၃၁အင်တုံဝ၌ပါသော အကွပ်သည် အကျယ်တတောင်ရှိ၏။ အဝသည် ဝိုင်း၍ အချင်းတတောင်ထွာ ရှိ၏။ စတုရန်းလေးထောင့်၌ အပြောက်နှင့်ပြည့်စုံ၏။
32 ಅಂಚುಗಳ ಕೆಳಗೆ ನಾಲ್ಕು ಗಾಲಿಗಳಿದ್ದವು. ಗಾಲಿಗಳ ಅಚ್ಚುಗಳು ಪೀಠದಲ್ಲಿದ್ದವು. ಒಂದೊಂದು ಗಾಲಿಯು ಒಂದೂವರೆ ಮೊಳವಾಗಿತ್ತು. ಗಾಲಿಗಳ ಮೇಲೆ ಇದ್ದ ಕೆಲಸವು ರಥದ ಗಾಲಿಯ ಕೆಲಸದ ಹಾಗೆ ಇತ್ತು.
၃၂ဘီးလေးခုတို့သည် ခုံမျက်နှာအောက်မှာနေရာ ကျလျက်၊ ဝင်ရိုးတို့သည် ခုံနှင့်စပ်လျက်၊ ဘီးအမြင့် တတောင်ထွာရှိ၏။
33 ಅವುಗಳ ಇರುಸುಗಳೂ, ಅಣಸುಗಳೂ, ಚಕ್ರಗಳೂ, ಅವುಗಳ ಕಂಬಿಗಳೂ ಎರಕ ಹೊಯ್ದ ಕಂಚಿನಿಂದ ಮಾಡಲಾಗಿತ್ತು.
၃၃ဘီးပုံကား ရထားဘီးနှင့်တူ၏။ ဝင်ရိုး၊ ဝင်ရိုး အိမ်၊ အကန့်၊ အကွပ်များကို သွန်းလေ၏။
34 ಒಂದೊಂದು ಪೀಠದ ನಾಲ್ಕು ಮೂಲೆಗಳಲ್ಲಿ ಅಂಚುಗಳಿದ್ದವು. ಪೀಠದಲ್ಲಿಂದಲೇ ಅಖಂಡವಾಗಿದ್ದವು.
၃၄ခုံလေးထောင့်၌ တစပ်တည်းသွန်းသော ပခုံး လေးခုရှိသဖြင့်၊
35 ಪೀಠದ ತಲೆಯಲ್ಲಿ 23 ಸೆಂಟಿಮೀಟರ್ ದುಂಡಾದ ಬಾಯಿ ಇತ್ತು. ಪೀಠದ ತಲೆಯ ಮೇಲೆ ಅದರ ಕೈಪಿಡಿಗಳೂ, ಅದರ ಅಂಚುಗಳೂ ಅಖಂಡವಾಗಿದ್ದವು.
၃၅ထိုပခုံးပေါ်မှာလုံးပတ်တထွာရှိသော ကွင်းကို တပ်၍၊ ခုံပေါ်မှာ အနားရစ်နှင့် ကိုင်စရာများတို့ကို ခုံနှင့် တစပ်တည်း သွန်းလေ၏။
36 ಅದರದರ ಪ್ರಮಾಣದ ಪ್ರಕಾರ ಹಲಗೆಗಳ ಕೈಹಿಡಿಗಳ ಮೇಲೆಯೂ ಅಂಚುಗಳ ಮೇಲೆಯೂ ಕೆರೂಬಿ, ಸಿಂಹ ಖರ್ಜೂರ ವೃಕ್ಷಗಳನ್ನು ಚಿತ್ರಿಸಿದನು. ಸುತ್ತಲೂ ಅದರದರ ಪ್ರಮಾಣದ ಪ್ರಕಾರ ಪುಷ್ಪ ತೋರಣಗಳನ್ನು ಚಿತ್ರಿಸಿದನು.
၃၆ကိုင်စရာမျက်နှာနှင့် ခုံမျက်နှာပြင်၌ ခေရုဗိမ်၊ ခြင်္သေ့၊ စွန်ပလွံပင်အစရှိသော အပြောက်မျိုး အသီး အသီးထင်ပေါ်လျက်ရှိ၏။
37 ಈ ಪ್ರಕಾರ ಆ ಹತ್ತು ಪೀಠಗಳನ್ನು ಮಾಡಿದನು. ಅವುಗಳಿಗೆಲ್ಲಾ ಒಂದೇ ಎರಕವೂ, ಒಂದೇ ಅಳತೆಯೂ, ಒಂದೇ ಪ್ರಮಾಣವೂ ಇದ್ದವು.
၃၇ထိုသို့ပုံသဏ္ဌာန်အလုံးအရပ်တူအောင်၊ အင်တုံ တင်ရာခုံတဆယ်ကို သွန်း၍ပြီးလေ၏။
38 ಹತ್ತು ಕಂಚಿನ ತೊಟ್ಟಿಗಳನ್ನು ಮಾಡಿದನು. ಒಂದೊಂದು ತೊಟ್ಟಿಯು 800 ಲೀಟರ್ ನೀರು ಹಿಡಿಯುತ್ತಿತ್ತು. ಒಂದೊಂದು ತೊಟ್ಟಿಯು 2 ಮೀಟರ್ ಇದ್ದವು. ಪ್ರತಿಯೊಂದು ಪೀಠಗಳ ಮೇಲೆ ಒಂದೊಂದು ತೊಟ್ಟಿಯನ್ನು ಇಟ್ಟನು.
၃၈အဝန်းလေးတောင်ကျယ်၍၊ ရေဗတ်လေးဆယ် ဝင်နိုင်သော ကြေးဝါအင်တုံတဆယ်ကိုလည်း လုပ်၍၊ ခုံတခုပေါ်မှာ အင်တုံတလုံးစီ တင်ထားလေ၏။
39 ಆಲಯದ ದಕ್ಷಿಣ ದಿಕ್ಕಿಗೆ ಐದು ಪೀಠಗಳನ್ನೂ, ಆಲಯದ ಉತ್ತರ ದಿಕ್ಕಿಗೆ ಐದು ಪೀಠಗಳನ್ನೂ ಇಟ್ಟನು. ಆದರೆ ಜಲಾಶಯವನ್ನು ಆಲಯದ ದಕ್ಷಿಣ ದಿಕ್ಕಿಗೆ ಅಂದರೆ ಆಲಯದ ಆಗ್ನೇಯ ಮೂಲೆಯಲ್ಲಿ ಇಟ್ಟನು.
၃၉အိမ်တော်လက်ျာဘက်၌ ခုံငါးခု၊ လက်ဝဲဘက်၌ ငါးခုကိုထား၍ ရေကန်ကိုကား၊ အိမ်တော်လက်ျာဘက် အရှေ့တောင်ထောင့်၌ နေရာချ၏။
40 ಇದಲ್ಲದೆ ಹೂರಾಮನು ಪಾತ್ರೆಗಳನ್ನೂ, ಸಲಿಕೆಗಳನ್ನೂ, ಬಟ್ಟಲುಗಳನ್ನೂ ಮಾಡಿದನು. ಯೆಹೋವ ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊಮೋನನು ಒಪ್ಪಿಸಿದ ಎಲ್ಲಾ ಕೆಲಸಗಳನ್ನು ಹೂರಾಮನು ಮಾಡಿ ತೀರಿಸಿದನು:
၄၀ဟိရံသည်အိုးများ၊ ရေမှုတ်များ၊ အင်တုံငယ်များ ကိုလည်း လုပ်သဖြင့်၊ ရှောလမုန် မင်းကြီးအဘို့ ထာဝရ ဘုရား၏အိမ်တော်၌ လက်စသတ်သောအရာများဟူမူ ကား၊
41 ಅವು ಯಾವುವೆಂದರೆ, ಎರಡು ಸ್ತಂಭಗಳು, ಆ ಸ್ತಂಭಗಳ ಮೇಲಿನ ಎರಡು ಕುಂಭಗಳು, ಆ ಎರಡು ಕುಂಭಗಳನ್ನು ಮುಚ್ಚುವ ಎರಡು ಜಾಲರಿಗಳು.
၄၁တိုင်နှစ်တိုင်၊ တိုင်ထိပ်အထွဋ်နှစ်ခု၊ တိုင်ထိပ် အထွဋ်ကို ဖုံးလွှမ်းစရာကွန်ရွက်နှစ်ရွက်၊
42 ಎರಡು ಜಾಲರಿ ಸಾಮಾನುಗಳಿಗೆ ನಾನೂರು ದಾಳಿಂಬೆ ಹಣ್ಣುಗಳು, ಸ್ತಂಭಗಳ ಮೇಲೆ ಇರುವ ಎರಡು ಕುಂಭಗಳನ್ನು ಮುಚ್ಚುವಂತೆ ಒಂದು ಜಾಲರಿ ಸಲಕರಣೆಗಳಿಗೆ ಎರಡು ಸಾಲಿನ ದಾಳಿಂಬೆ ಹಣ್ಣುಗಳು,
၄၂ဖုံးလွှမ်းစရာကွန်ရွက် တရွက်အဘို့သလဲသီး နှစ်တန်းစီ၊ သလဲသီးပေါင်းလေးရာ၊
43 ಹತ್ತು ಪೀಠಗಳು, ಅವುಗಳ ಮೇಲಿರುವ ಹತ್ತು ತೊಟ್ಟಿಗಳು,
၄၃ခုံဆယ်ခု၊ ခုံပေါ်မှာ တင်ထားသော အင်တုံ ဆယ်လုံး၊ ရေကန်တကန်၊ ရေကန်ကို ထောက်သော နွားတဆယ်နှစ်ခု၊ အိုးများ၊ ရေမှုတ်များ၊ အင်တုံငယ်များ တည်း။
44 ಸಮುದ್ರಪಾತ್ರೆಯು ಅದರ ಕೆಳಗಿರುವ ಹನ್ನೆರಡು ಎತ್ತುಗಳು,
၄၄
45 ಪಾತ್ರೆಗಳು, ಸಲಿಕೆಗಳು, ಬೋಗುಣಿಗಳು. ಯೆಹೋವ ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊಮೋನನಿಗೆ ಹೂರಾಮನು ಮಾಡಿದ ಈ ಸಲಕರಣೆಗಳೆಲ್ಲಾ ಹೊಳೆಯುವ ಕಂಚಿನವುಗಳಾಗಿದ್ದವು.
၄၅ရှောလမုန်မင်းကြီးအဘို့ ဟိရံလုပ်သမျှသော ထာဝရဘုရား၏ အိမ်တော်တန်ဆာတို့သည် ပြောင် ပြောင်တောက်သော ကြေးဝါဖြင့် ပြီးကြ၏။
46 ಯೊರ್ದನಿಗೆ ಸೇರಿದ ಬಯಲಾದ ಸುಕ್ಕೋತಿಗೂ, ಚಾರೆತಾನಿಗೂ ನಡುವೆ ಇರುವ ಜೇಡಿಮಣ್ಣಿನ ಅಚ್ಚುಗಳಲ್ಲಿ ಅರಸನು ಅವುಗಳನ್ನು ಎರಕ ಹೊಯ್ಯಿಸಿದನು.
၄၆ယော်ဒန်ချိုင့်၊ သကုတ်မြို့နှင့် ဇာသန်မြို့ စပ်ကြားတွင် သရွတ်လုပ်စရာကောင်းသော မြေ၌ ရှင်ဘုရင်သွန်းလေ၏။
47 ಸೊಲೊಮೋನನು ಮಾಡಿಸಿದ ಈ ಸಲಕರಣೆಗಳೆಲ್ಲಾ ಬಹು ಹೆಚ್ಚಾಗಿದ್ದರಿಂದ ಅವುಗಳನ್ನು ಎಣಿಸದೆ ಬಿಟ್ಟನು, ಹೀಗಾಗಿ ಕಂಚಿನ ತೂಕವು ಎಷ್ಟೆಂದು ನಿರ್ಧರಿಸಲಾಗಲಿಲ್ಲ.
၄၇ထိုတန်ဆာတို့သည် အလွန်များသောကြောင့်၊ ရှောလမုန်သည် မချိန်ဘဲသွန်းထား၏။ ကြေးဝါအချိန်ကို အဘယ်သူမျှမသိ။
48 ಸೊಲೊಮೋನನು ಯೆಹೋವ ದೇವರ ಆಲಯದ ಎಲ್ಲಾ ಸಲಕರಣೆಗಳನ್ನು ಮಾಡಿಸಿದನು. ಅವು ಯಾವುವೆಂದರೆ: ಬಂಗಾರದ ಧೂಪವೇದಿಯನ್ನು ಸಮ್ಮುಖದ ರೊಟ್ಟಿಗಳನ್ನು ಇಡುವುದಕ್ಕೆ ಚಿನ್ನದ ಮೇಜೂ,
၄၈ရှောလမုန်သည်လည်း ထာဝရဘုရား၏ အိမ်တော်နှင့် ဆိုင်သမျှသော တန်ဆာများတည်းဟူသော ရွှေယဇ်ပလ္လင်၊ ရှေ့တော်မုန့်တင်စရာ ရွှေစားပွဲ၊
49 ಮಹಾಪರಿಶುದ್ಧ ಸ್ಥಳದ ಮುಂಭಾಗದ ಬಲಗಡೆಯಲ್ಲಿ ಐದು, ಎಡಗಡೆಯಲ್ಲಿ ಐದು ಶುದ್ಧ ಬಂಗಾರದ ದೀಪಸ್ತಂಭಗಳೂ, ಅದರ ಬಂಗಾರದ ಹೂವುಗಳೂ, ದೀಪಗಳೂ, ಚಿಮಟಗಳೂ,
၄၉ဗျာဒိတ်ဌာနတော်ရှေ့၊ လက်ျာဘက်၌ ရွှေစင် မီးခုံငါးခု၊ လက်ဝဲဘက်၌ငါးခု၊ ရွှေပန်းပွင့်၊ ရွှေမီးခွက်၊ မီးကိုင်တန်ဆာ၊
50 ಶುದ್ಧ ಬಂಗಾರದಿಂದ ಕತ್ತರಿಗಳು, ಬೋಗುಣಿಗಳು, ಅಗ್ನಿಪಾತ್ರೆಗಳು, ಅಗ್ಗಿಷ್ಟಿಗೆ ಇವುಗಳನ್ನು ಮಾಡಿಸಿದನು. ಇದಲ್ಲದೆ ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯ ಬಾಗಿಲುಗಳಿಗೂ, ಮಂದಿರದ ಮನೆಯ ಬಾಗಿಲುಗಳಿಗೂ ಬಂಗಾರದ ಕೀಲುಗಳನ್ನು ಮಾಡಿಸಿದನು.
၅၀ရွှေစင်ဖြင့်ပြီးသောခွက်များ၊ မီးညှပ်၊ လင်ပန်း၊ ဇွန်း၊ ပြာခံစရာအိုးများ၊ အလွန်သန့်ရှင်းရာဌာနတော် အတွင်းခန်းတံခါးနှင့် ဗိမာန်တော်ပြင်ခန်းတံခါး ဆွဲထား သော ရွှေပတ္တာများတို့ကို လုပ်လေ၏။
51 ಹೀಗೆಯೇ ಅರಸನಾದ ಸೊಲೊಮೋನನು ಯೆಹೋವ ದೇವರ ಆಲಯಕ್ಕೋಸ್ಕರ ಮಾಡಿಸಿದ ಕೆಲಸವೆಲ್ಲಾ ಮುಗಿಯಿತು. ಆಗ ಸೊಲೊಮೋನನು ತನ್ನ ತಂದೆ ದಾವೀದನು ಪ್ರತಿಷ್ಠೆ ಮಾಡಿದ ಬೆಳ್ಳಿಯನ್ನೂ, ಬಂಗಾರವನ್ನೂ, ಎಲ್ಲಾ ಸಲಕರಣೆಗಳನ್ನೂ ಯೆಹೋವ ದೇವರ ಆಲಯದ ಬೊಕ್ಕಸಗಳಲ್ಲಿ ಇಟ್ಟನು.
၅၁ထိုသို့ရှောလမုန်မင်းကြီးသည် ထာဝရဘုရား၏ အိမ်တော်အဘို့ ပြုလုပ်စီရင်သမျှအလုံးစုံတို့ကို လက် စသတ်ပြီးမှ၊ ခမည်းတော် ဒါဝိဒ်လှူသော ရွှေငွေ တန်ဆာများကို ဆောင်ခဲ့၍၊ ထာဝရဘုရား၏အိမ်တော် ဘဏ္ဍာစုထဲမှာ သွင်းထားလေ၏။

< ಅರಸುಗಳು - ಪ್ರಥಮ ಭಾಗ 7 >