< ಅರಸುಗಳು - ಪ್ರಥಮ ಭಾಗ 4 >
1 ಹೀಗೆ ಅರಸನಾದ ಸೊಲೊಮೋನನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನಾಗಿದ್ದನು.
राजा सोलोमन सारा इस्राएलमाथि राजा भए ।
2 ಅವನಿಗೆ ಇದ್ದ ಮುಖ್ಯ ಅಧಿಕಾರಿಗಳು ಯಾರೆಂದರೆ: ಚಾದೋಕನ ಮಗ ಅಜರ್ಯನು ಮುಖ್ಯಯಾಜಕನಾಗಿದ್ದನು.
तिनका अधिकारीहरू यी नै हुन्: सादोकका छोरा अजर्याह पुजारी थिए ।
3 ಶೀಷನ ಮಕ್ಕಳಾದ ಎಲೀಹೋರೆಫ್ ಹಾಗು ಅಹೀಯಾಹು ಎಂಬವರು ಕಾರ್ಯದರ್ಶಿಗಳು. ಅಹೀಲೂದನ ಮಗನಾದ ಯೆಹೋಷಾಫಾಟನು ಅವನ ಲೇಖಕ.
शीशाका छोराहरू एलीहोरेफ र अहियाह सचिवहरू थिए । अहीलूदका छोरा यहोशापात लेखापाल थिए ।
4 ಯೆಹೋಯಾದಾವನ ಮಗ ಬೆನಾಯನು ಸೈನ್ಯದ ಅಧಿಪತಿಯು, ಚಾದೋಕನೂ, ಅಬಿಯಾತರನೂ ಯಾಜಕರು.
यहोयादाका छोरा बनायाह सेनापति थिए । सादोक र पुजारी अबियाथार हरू थिए ।
5 ನಾತಾನನ ಮಗ ಅಜರ್ಯನು ಅಧಿಪತಿಗಳ ಮೇಲ್ವಿಚಾರಕನು. ನಾತಾನನ ಮಗ ಜಾಬೂದನು ಯಾಜಕನು ಹಾಗು ಅರಸನ ವೈಯಕ್ತಿಕ ಸಲಹೆಗಾರನು.
नातानका छोरा अजर्याह जिल्ला-जिल्लाका अधिकृतहरूका जिम्मावाल थिए । नातानका छोरा जाबूद पुजारी र राजाका मित्र थिए ।
6 ಅಹಿಷಾರನು ರಾಜ್ಯ ಗೃಹಾಧಿಪತಿ. ಅಬ್ದನ ಮಗ ಅದೋನೀರಾಮನು ದಾಸರ ಮೇಲೆ ಉಸ್ತುವಾರಿಮಾಡಿಸುವವನಾಗಿದ್ದನು.
अहीशार राजमहलका जिम्मावाल थिए । अब्दाका छोरा अदोनिराम बेगार काम गर्नेहरूका जिम्मावाल थिए ।
7 ಇದಲ್ಲದೆ ಅರಸನಿಗೂ, ಅವನ ಮನೆಗೂ ಆಹಾರವನ್ನು ಸಿದ್ಧಮಾಡಿಸುವುದಕ್ಕೋಸ್ಕರ ಸೊಲೊಮೋನನಿಗೆ ಸಮಸ್ತ ಇಸ್ರಾಯೇಲಿನ ಮೇಲೆ ಹನ್ನೆರಡು ಜಿಲ್ಲಾಧಿಕಾರಿಗಳು ಇದ್ದರು. ಪ್ರತಿಯೊಬ್ಬನೂ ತನಗೆ ವರುಷದಲ್ಲಿ ನೇಮಕವಾದ ತಿಂಗಳು ಬಂದಾಗ, ದವಸಧಾನ್ಯಗಳನ್ನು ಒದಗಿಸುತ್ತಿದ್ದನು.
सारा इस्राएलमा सोलोमनका बाह्र जना जिल्ला-जिल्लाका जिल्लापाल थिए जसले राजा तथा राज घरानालाई भोजन जुटाउने काम गर्थे । हरेक मानिसले वर्षमा एक-एक महिनाको भोजन जुटाउनुपर्थ्यो ।
8 ಅವರ ಹೆಸರುಗಳು, ಅವರ ಜಿಲ್ಲೆಗಳು: ಬೆನ್ ಹೂರ್ ಎಫ್ರಾಯೀಮ್ ಪರ್ವತ ಪ್ರದೇಶದ ಅಧಿಕಾರಿ.
तिनीहरूका नाउँ यी नै हुन्: एफ्राइमको पहाडी देशमा बेन-हूर;
9 ಬೆನ್ ಡೆಕೆರ್ ಮಾಕಾಚ್, ಶಾಲ್ಬೀಮ್, ಬೇತ್ ಷೆಮೆಷ್, ಏಲೋನ್ ಹಾಗು ಬೇತ್ ಹಾನಾನ್‌ಗಳಲ್ಲಿ ಅಧಿಕಾರಿ.
माकाज, शाल्बीम, बेथ-शेमेश र एलोन-बेथहानानमा बेन-देकेर;
10 ಬೆನ್ ಹೆಸೆದ್ ಅರುಬ್ಬೋತದಲ್ಲಿ ಅಧಿಕಾರಿ. ಸೋಕೋ ಮತ್ತು ಹೇಫೆರಿನ ಎಲ್ಲಾ ಪ್ರದೇಶಗಳು ಅವನವಾಗಿದ್ದವು.
अरूब्बोतमा बेन-हेसेद (तिनको जिम्मामा सोको र हेपेरका सबै क्षेत्र थिए);
11 ಬೆನ್ ಅಬೀನಾದಾಬ್ ನಾಫೋತ್ ದೋರ್‌ದಲ್ಲಿ ಅಧಿಕಾರಿ. ಅವನು ಸೊಲೊಮೋನನ ಮಗಳಾದ ಟಾಫತಳನ್ನು ಮದುವೆಯಾಗಿದ್ದನು.
सारा नापोत डोरमा बेन-अबीनादाब (सोलोमनकी छोरी ताफातलाई तिनले विवाह गरेका थिए);
12 ಅಹೀಲೂದನ ಮಗ ಬಾಣಾ ಎಂಬವನು ತಾನಕ್, ಮೆಗಿದ್ದೋ, ಬೇತ್ ಷೆಯಾನಿನ ಎಲ್ಲಾ ಕಡೆಗಳಲ್ಲಿಯೂ ಆಳಿಕೆಮಾಡುತ್ತಿದ್ದನು. ಬೇತ್ ಶಾನ್ ಚಾರೆತಾನಿನ ಪಕ್ಕದಲ್ಲಿದ್ದ ಇಜ್ರೆಯೇಲ್ ಎಂಬ ಪಟ್ಟಣದ ಕೆಳಗಿತ್ತು. ಅವನ ಪ್ರಾಂತವು ಬೇತ್ ಷೆಯಾನಿನಿಂದ ಆಬೇಲ್ ಮೆಹೋಲದವರೆಗೆ ಯೊಕ್ಮೆಯಾಮಿನಲ್ಲಿ ಅಂತ್ಯಗೊಂಡಿತ್ತು.
तानाक र मगिद्दोसाथै यिजरेलमुनिको सार्तानको छेउमा भएका सारा बेथ-शान, हाबिल-महोला र योक्मामसम्ममा अहीलूदका छोरा बाना;
13 ಬೆನ್ ಗೆಬೆರ್ ಗಿಲ್ಯಾದಿನ ರಾಮೋತ್ ಎಂಬ ಊರಿಗೆ ಅಧಿಕಾರಿಯಾಗಿದ್ದನು. ಈ ಗಿಲ್ಯಾದಿನ ಪ್ರಾಂತದಲ್ಲಿ ಮನಸ್ಸೆಯ ಮಗ ಯಾಯೀರನ ಗ್ರಾಮಗಳಿಗೂ, ಬಾಷಾನಿನಲ್ಲಿ ಪೌಳಿ ಗೋಡೆಗಳಿಂದಲೂ, ಕಬ್ಬಿಣದ ಅಗುಳಿಗಳಿಂದಲೂ ಭದ್ರಮಾಡಲಾಗಿದ್ದ ಅರವತ್ತು ಪಟ್ಟಣಗಳಲ್ಲಿದ್ದ ಅರ್ಗೋಬ್ ಪ್ರದೇಶಕ್ಕೂ ಅಧಿಕಾರಿಯಾಗಿದ್ದನು.
रामोत-गिलादमा बेन-गेबेर (तिनको जिम्मामा गिलादमा भएका मनश्शेका छोरा याईरका सहरहरू र बाशानमा भएको अर्गोबको क्षेत्रसाथै मूल ढोकामा काँसाका बार भएका पर्खालले घेरिएका साठीवटा ठुला-ठुला सहर पनि थिए);
14 ಇದ್ದೋ ಎಂಬವನ ಮಗನಾದ ಅಹೀನಾದಾಬ್ ಮಹನಯಿಮ್ ಎಂಬ ಸ್ಥಳಕ್ಕೆ ಅಧಿಕಾರಿ.
महनोममा इद्दोका छोरा अहीनादाब;
15 ಅಹೀಮಾಚ್ ನಫ್ತಾಲಿಯಲ್ಲಿ ಅಧಿಕಾರಿ. ಅವನಿಗೆ ಸೊಲೊಮೋನನ ಮಗಳಾದ ಬಾಸೆಮತ್ ಹೆಂಡತಿಯಾಗಿದ್ದಳು.
नप्तालीमा अहीमास (तिनले सोलोमनकी छोरी बासमतलाई विवाह गरेका थिए);
16 ಹೂಷೈಯ ಮಗ ಬಾಣಾ ಆಶೇರದಲ್ಲಿ ಮತ್ತು ಆಲೋತಿನಲ್ಲಿ ಅಧಿಕಾರಿ.
आशेर र आलोतमा हूशैका छोरा बाना;
17 ಫಾರೂಹನ ಮಗ ಯೆಹೋಷಾಫಾಟನು ಇಸ್ಸಾಕಾರ್ ಪ್ರಾಂತದಲ್ಲಿ ಅಧಿಕಾರಿ.
इस्साखारमा पारूहका छोरा यहोशापात;
18 ಏಲನ ಮಗ ಶಿಮ್ಮಿಯು ಬೆನ್ಯಾಮೀನ್ ಪ್ರಾಂತದಲ್ಲಿ ಅಧಿಕಾರಿ.
बेन्यामीनमा एलाका छोरा शिमी;
19 ಊರಿಯನ ಮಗ ಗೆಬೆರನು ಗಿಲ್ಯಾದಿನಲ್ಲಿ ಅಧಿಕಾರಿ. ಅಮೋರಿಯರ ಅರಸನಾದ ಸೀಹೋನನ ದೇಶಕ್ಕೂ ಬಾಷಾನಿನ ಅರಸನಾದ ಓಗನ ದೇಶಕ್ಕೂ ಅವನೊಬ್ಬನೇ ಅಧಿಪತಿಯಾಗಿದ್ದನು.
गिलादमा ऊरीका छोरा गेबेर (एमोरीहरूका राजा सीहोन र बाशानका राजा ओगको देश), र तिनी त्यस जिल्लाका एक मात्र जिल्लापाल थिए ।
20 ಯೆಹೂದ ಮತ್ತು ಇಸ್ರಾಯೇಲಿನ ಜನರು ಸಮುದ್ರದ ಮರಳಿನ ಹಾಗೆ ಅಸಂಖ್ಯಾತರಾದರು. ಅವರು ಉಂಡು ಕುಡಿದು ಸುಖದಿಂದ ಇದ್ದರು.
यहूदा र इस्राएलका मानिसहरू समुद्र छेउका बालुवाजत्तिकै असङ्ख्य थिए । तिनीहरू खाँदै र पिउँदै थिए अनि खुसी थिए ।
21 ಇದಲ್ಲದೆ ಸೊಲೊಮೋನನು ಯೂಫ್ರೇಟೀಸ್ ಮೊದಲುಗೊಂಡು ಫಿಲಿಷ್ಟಿಯರ ದೇಶ ಮತ್ತು ಈಜಿಪ್ಟಿನ ಮೇರೆಯವರೆಗೂ ಇರುವ ಸಮಸ್ತ ರಾಜ್ಯಗಳನ್ನು ಆಳುತ್ತಿದ್ದನು. ಆ ರಾಜ್ಯಗಳವರು ಸೊಲೊಮೋನನು ಜೀವಿಸಿರುವ ದಿವಸಗಳೆಲ್ಲಾ ಕಪ್ಪಗಳನ್ನು ಕೊಡುವವರಾಗಿ ಅವನಿಗೆ ಅಧೀನರಾಗಿದ್ದರು.
सोलोमनले यूफ्रेटिस नदीदेखि पलिश्तिहरूको देश र मिश्रको सिमानासम्म राज्य गर्थे । सोलोमनको जीवनभर तिनीहरूले तिनीकहाँ कर ल्याए र तिनको सेवा गरे ।
22 ಸೊಲೊಮೋನನು ಒಂದು ದಿನದ ಭೋಜನಕ್ಕೆ ಕೊಡುತ್ತಿದ್ದ ಆಹಾರ ಪದಾರ್ಥಗಳು 5,000 ಕಿಲೋಗ್ರಾಂ ನಯವಾದ ಗೋಧಿಯ ಹಿಟ್ಟು, 10,000 ಕಿಲೋಗ್ರಾಂ ಜವೆಗೋಧಿ,
सोलोमनको एक दिनको खाना पचहत्तर मुरी मसिनो पिठो, एक सय पचास मुरी अन्न,
23 ಕೊಬ್ಬಿದ ಎತ್ತುಗಳು ಹತ್ತು, ಮೇಯುವ ಎತ್ತುಗಳು ಇಪ್ಪತ್ತು, ಕುರಿಗಳು ನೂರು. ಇವುಗಳ ಹೊರತಾಗಿ ದುಪ್ಪಿಗಳೂ, ಜಿಂಕೆಗಳೂ, ಕೆಂದ ಜಿಂಕೆಗಳೂ, ಕೊಬ್ಬಿದ ಕೋಳಿಗಳೂ ಆಗಿದ್ದವು.
पोसिएका दसवटा गाई-गोरु, खर्कमा पालेका बिसवटा गाई-गोरु, एक सयवटा भेडा-बाख्रा अनि मृग, हरिण, बराँठ र कुखुराहरू थिए ।
24 ಯೂಫ್ರೇಟೀಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲುಗೊಂಡು ಗಾಜದವರೆಗೂ, ನದಿಯ ಈಚೆಯಲ್ಲಿರುವ ಸಮಸ್ತ ಅರಸರ ಮೇಲೆ ಅವನು ಅಧಿಕಾರಿಯಾಗಿದ್ದನು. ಇದಲ್ಲದೆ ಅವನಿಗೆ ಸುತ್ತಲಿರುವ ಸಮಸ್ತ ದಿಕ್ಕಿನಲ್ಲಿ ಅವನಿಗೆ ಸಮಾಧಾನವಿತ್ತು.
किनकि तिनले युफ्रेटिस नदीको पश्चिमपट्टिका सबै देश अर्थात् तिफसादेखि गाजासम्मा राज्य गर्थे, र तिनको वरिपरि भएकाहरू सबैसित तिनी शान्तिमा बस्थे ।
25 ಹೀಗೆಯೇ ದಾನ್ ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ, ಸೊಲೊಮೋನನ ಸಮಸ್ತ ದಿವಸಗಳಲ್ಲಿ ಯೆಹೂದ ಮತ್ತು ಇಸ್ರಾಯೇಲಿನಲ್ಲಿರುವ ಪ್ರತಿಯೊಬ್ಬ ಮನುಷ್ಯನು ತನ್ನ ದ್ರಾಕ್ಷಿಬಳ್ಳಿಯ ಕೆಳಗೂ, ತನ್ನ ಅಂಜೂರದ ಮರದ ಕೆಳಗೂ ಸುರಕ್ಷಿತವಾಗಿ ವಾಸವಾಗಿದ್ದರು.
यहूदा र इस्राएल सुरक्षित थिए । सोलोमनको जीवनभर दानदेखि बेर्शेबासम्म हरेक मानिस आ-आफ्नै दाख र नेभाराको मुनि सुरक्षितसाथ बस्थ्यो ।
26 ಸೊಲೊಮೋನನಿಗೆ ತನ್ನ ರಥಗಳಿಗೋಸ್ಕರ ನಲವತ್ತು ಸಾವಿರ ಕುದುರೆಗಳಿಗೆ ಸ್ಥಳವಿತ್ತು, ಹನ್ನೆರಡು ಸಾವಿರ ರಾಹುತರೂ ಇದ್ದರು.
सोलोमनका रथहरूका लागि घोडाहरूका चालिस हजारवटा तबेला, र बाह्र हजार घोडचढी थिए ।
27 ಆ ಅಧಿಪತಿಗಳು ತಮಗೆ ನೇಮಕವಾದ ತಿಂಗಳಲ್ಲಿ ಅರಸನಾದ ಸೊಲೊಮೋನನಿಗೋಸ್ಕರವೂ, ಅರಸನ ಮೇಜಿಗೆ ಬರುವವರೆಲ್ಲರಿಗೋಸ್ಕರವೂ ಸಿದ್ಧಮಾಡಿದ್ದರು. ಅವರಿಗೆ ಕೊರತೆಯಾದದ್ದು ಒಂದೂ ಇರಲಿಲ್ಲ.
जिल्ला-जिल्लाका अधिकृतहरूले प्रत्येक महिना पालैपालो राजा सोलोमन र तिनको टेबुलमा बसेर खानेहरू सबैका निम्ति भोजन जुटाउँथे । तिनीहरूलाई कुनै कुराको कमी थिएन ।
28 ಹೀಗೆಯೇ ಪ್ರತಿಯೊಬ್ಬನು ತನ್ನ ನೇಮಕದ ಪ್ರಕಾರ ಕುದುರೆಗಳಿಗೋಸ್ಕರವೂ, ಸವಾರಿ ಒಂಟೆಗಳಿಗೋಸ್ಕರವೂ, ಅವುಗಳ ಸ್ಥಳಕ್ಕೆ ಜವೆಗೋಧಿಯನ್ನೂ, ಹುಲ್ಲನ್ನೂ ತಂದರು.
रथका घोडाहरू र अन्य घोडाहरूका लागि पनि तिनीहरूले तोकिएका आ-आफ्नै जौ र पराल ल्याउने गर्थे ।
29 ದೇವರು ಸೊಲೊಮೋನನಿಗೆ ಅತ್ಯಧಿಕವಾಗಿ ಜ್ಞಾನವನ್ನೂ, ಗ್ರಹಿಕೆಯನ್ನೂ, ಸಮುದ್ರ ತೀರದಲ್ಲಿಯ ಮರಳಿನ ಹಾಗೆಯೇ ವಿವೇಕವನ್ನೂ ಕೊಟ್ಟರು.
परमेश्वरले सोलोमनलाई महान् बुद्धि र समुद्रीतटका बालुवाजस्तै फराकिलो समझशक्ति दिनुभयो ।
30 ಸೊಲೊಮೋನನ ಜ್ಞಾನವು ಮೂಡಣ ದೇಶದ ಸಮಸ್ತರ ಜ್ಞಾನಕ್ಕಿಂತಲೂ, ಈಜಿಪ್ಟಿನ ಸಮಸ್ತರ ಜ್ಞಾನಕ್ಕಿಂತಲೂ ಅಧಿಕವಾಗಿತ್ತು.
पूर्वका सबै मानिस र मिश्रका सबै बुद्धिभन्दा सोलोमनको बुद्धि श्रेष्ठ थियो । तिनी सबै मानिसभन्दा बुद्धिमानी थिए ।
31 ಜೇರಹನ ಮಗನಾದ ಏತಾನನು, ಮಹೋಲನ ಮಕ್ಕಳಾದ ಹೇಮಾನನು, ಕಲ್ಕೋಲನು, ದರ್ದನು ಮೊದಲಾದ ಸಮಸ್ತ ಮನುಷ್ಯರಿಗಿಂತಲೂ ಅವನು ಜ್ಞಾನಿಯಾಗಿದ್ದನು. ಸುತ್ತಲಿರುವ ಸಕಲ ದೇಶಗಳಲ್ಲಿ ಅವನ ಕೀರ್ತಿ ಇತ್ತು.
तिनी एज्री एतान, माहोलका छोराहरू हेमान, कलकोल र दर्दाभन्दा बुद्धिमानी थिए अनि तिनको ख्याति वरिपरिका सबै जातिहरूमा फैलिएको थियो ।
32 ಅವನು ಮೂರು ಸಾವಿರ ಜ್ಞಾನೋಕ್ತಿಗಳನ್ನು ಹೇಳಿದನು. ಅವನ ಹಾಡುಗಳು ಸಾವಿರದ ಐದು.
तिनले तिन हजारवटा हितोपदेशको रचना गरे, र तिनका गीतहरूको सङ्ख्या एक हजार पाँचवटा थियो ।
33 ಅವನು ಮರಗಳನ್ನು ಕುರಿತು ಲೆಬನೋನಿನಲ್ಲಿರುವ ದೇವದಾರು ಮರ ಮೊದಲುಗೊಂಡು ಗೋಡೆಯ ಮೇಲೆ ಬೆಳೆಯುವ ಹಿಸ್ಸೋಪಿನವರೆಗೂ ಹೇಳಿದನು. ಇದಲ್ಲದೆ ಮೃಗಗಳನ್ನು ಕುರಿತೂ, ಪಕ್ಷಿಗಳನ್ನು ಕುರಿತೂ, ಕ್ರಿಮಿಗಳನ್ನು ಕುರಿತೂ, ಮೀನುಗಳನ್ನು ಕುರಿತೂ ಪ್ರಸ್ತಾಪಿಸಬಲ್ಲವನಾಗಿದ್ದನು.
तिनले बोट बिरुवाहरूको विषयमा लेबनानको देवदारुदेखि लिएर भित्तामा उम्रने हिसपसम्मका बिरुवाहरूको वर्णन गरे । तिनले पशुपक्षी, घस्रने प्राणीहरू र माछाको बारेमा पनि वर्णन गरे ।
34 ಸೊಲೊಮೋನನ ಜ್ಞಾನವನ್ನು ಕುರಿತು ಕೇಳಿದ ಭೂಮಿಯ ಮೇಲಿರುವ ಸಮಸ್ತ ಅರಸರ ಬಳಿಯಿಂದ ಎಲ್ಲಾ ಜನಗಳು ಅವನ ಜ್ಞಾನವನ್ನು ಕೇಳಲು ಬಂದರು.
सोलोमनको बुद्धि सुन्न सबै जातिका मानिसहरू आउने गर्थे । तिनको बुद्धि सुनेका पृथ्वीका सबै राजाका प्रतिनिधिहरू तिनीकहाँ आउने गर्थे ।