< ಅರಸುಗಳು - ಪ್ರಥಮ ಭಾಗ 13 >

1 ಯಾರೊಬ್ಬಾಮನು ಧೂಪವನ್ನರ್ಪಿಸಲು ಬಲಿಪೀಠದ ಬಳಿಯಲ್ಲಿ ನಿಂತಿರುವಾಗ, ಯೆಹೂದದಿಂದ ಬೇತೇಲಿಗೆ ಯೆಹೋವ ದೇವರ ಮಾತಿನಂತೆ ಒಬ್ಬ ದೇವರ ಮನುಷ್ಯ ಬಂದನು.
那时,有一个神人奉耶和华的命从犹大来到伯特利。耶罗波安正站在坛旁要烧香;
2 ಅವನು ಯೆಹೋವ ದೇವರ ಅಪ್ಪಣೆಯಿಂದ ಆ ಪೀಠವನ್ನು ಕುರಿತು: “ಪೀಠವೇ, ಪೀಠವೇ! ದಾವೀದನ ಸಂತಾನದಲ್ಲಿ ಯೋಷೀಯ ಎಂಬ ಹೆಸರುಳ್ಳ ಒಬ್ಬ ಮಗನು ಹುಟ್ಟುವನು. ಅವನು ನಿನ್ನ ಮೇಲೆ ಧೂಪವನ್ನರ್ಪಿಸುವ ಪೂಜಾಸ್ಥಳಗಳ ಯಾಜಕರನ್ನು ಹಿಡಿದು ಬಲಿಯಾಗಿ ಅರ್ಪಿಸುವನು. ಮನುಷ್ಯರ ಎಲುಬುಗಳನ್ನು ನಿನ್ನ ಮೇಲೆ ಸುಡಲಾಗುವವು,” ಎಂದು ಯೆಹೋವ ದೇವರು ಹೇಳುತ್ತಾರೆ ಎಂದನು.
神人奉耶和华的命向坛呼叫,说:“坛哪,坛哪!耶和华如此说:大卫家里必生一个儿子,名叫约西亚,他必将邱坛的祭司,就是在你上面烧香的,杀在你上面,人的骨头也必烧在你上面。”
3 ಅದೇ ದಿವಸದಲ್ಲಿ ಅವನು ಗುರುತನ್ನು ಕೊಟ್ಟು ಅವರಿಗೆ, “ಯೆಹೋವ ದೇವರು ಇದಕ್ಕೆ ಹೇಳಿದ ಗುರುತೇನೆಂದರೆ, ಇಗೋ, ಬಲಿಪೀಠವು ಸೀಳಿಹೋಗಿ, ಅದರ ಮೇಲೆ ಇರುವ ಬೂದಿಯು ಬಿದ್ದುಹೋಗುವುದು,” ಎಂದನು.
当日,神人设个预兆,说:“这坛必破裂,坛上的灰必倾撒,这是耶和华说的预兆。”
4 ಅರಸನಾದ ಯಾರೊಬ್ಬಾಮನು ಬೇತೇಲಿನಲ್ಲಿರುವ ಬಲಿಪೀಠಕ್ಕೆ ವಿರೋಧವಾಗಿ ದೇವರ ಮನುಷ್ಯನು ಹೇಳಿದ ಮಾತನ್ನು ಕೇಳಿದಾಗ, ಅವನು ಪೀಠದ ಬಳಿಯಿಂದ ತನ್ನ ಕೈಚಾಚಿ, “ಅವನನ್ನು ಹಿಡಿಯಿರಿ,” ಎಂದನು. ಆಗ ಅವನಿಗೆ ವಿರೋಧವಾಗಿ ಚಾಚಿದ ಅವನ ಕೈ ಹಿಂದಕ್ಕೆ ಎಳೆದುಕೊಳ್ಳದ ಹಾಗೆ ಒಣಗಿ ಹೋಯಿತು.
耶罗波安王听见神人向伯特利的坛所呼叫的话,就从坛上伸手,说:“拿住他吧!”王向神人所伸的手就枯干了,不能弯回;
5 ಇದಲ್ಲದೆ ಯೆಹೋವ ದೇವರ ಮಾತಿನಿಂದ ದೇವರ ಮನುಷ್ಯನು ಕೊಟ್ಟ ಗುರುತಿನ ಪ್ರಕಾರವೇ ಬಲಿಪೀಠವು ಸೀಳಿಹೋಗಿ, ಬೂದಿಯು ಬಲಿಪೀಠದಿಂದ ಬಿದ್ದುಹೋಯಿತು.
坛也破裂了,坛上的灰倾撒了,正如神人奉耶和华的命所设的预兆。
6 ಆಗ ಅರಸನು ಉತ್ತರವಾಗಿ ದೇವರ ಮನುಷ್ಯನಿಗೆ, “ನನ್ನ ಕೈ ಗುಣವಾಗುವ ಹಾಗೆ ನೀನು ನಿನ್ನ ದೇವರಾದ ಯೆಹೋವ ದೇವರ ಕಟಾಕ್ಷವನ್ನು ಬೇಡಿಕೊಂಡು, ನನಗೋಸ್ಕರ ಪ್ರಾರ್ಥನೆ ಮಾಡು,” ಎಂದನು. ಆಗ ದೇವರ ಮನುಷ್ಯನು ಯೆಹೋವ ದೇವರ ಕಟಾಕ್ಷವನ್ನು ಬೇಡಿಕೊಂಡದ್ದರಿಂದ ಅರಸನ ಕೈಗುಣವಾಗಿ, ಮುಂಚಿನ ಹಾಗೆ ಆಯಿತು.
王对神人说:“请你为我祷告,求耶和华—你 神的恩典使我的手复原。”于是神人祈祷耶和华,王的手就复了原,仍如寻常一样。
7 ಅರಸನು ದೇವರ ಮನುಷ್ಯನಿಗೆ, “ನೀನು ನನ್ನ ಮನೆಗೆ ಬಂದು ಊಟಮಾಡಿ ವಿಶ್ರಮಿಸಿಕೋ, ನಾನು ನಿನಗೆ ಬಹುಮಾನ ಕೊಡುವೆನು,” ಎಂದನು.
王对神人说:“请你同我回去吃饭,加添心力,我也必给你赏赐。”
8 ಆದರೆ ದೇವರ ಮನುಷ್ಯನು ಅರಸನಿಗೆ ಉತ್ತರವಾಗಿ, “ನೀನು ನನಗೆ ನಿನ್ನ ಅರ್ಧ ಆಸ್ತಿಯನ್ನು ಕೊಟ್ಟರೂ, ನಾನು ನಿನ್ನ ಸಂಗಡ ಹೋಗುವುದಿಲ್ಲ. ಈ ಸ್ಥಳದಲ್ಲಿ ರೊಟ್ಟಿ ತಿನ್ನುವುದಿಲ್ಲ, ಕುಡಿಯುವುದಿಲ್ಲ.
神人对王说:“你就是把你的宫一半给我,我也不同你进去,也不在这地方吃饭喝水;
9 ಏಕೆಂದರೆ, ‘ನೀನು ರೊಟ್ಟಿ ತಿನ್ನಬೇಡ, ನೀರನ್ನು ಕುಡಿಯಬೇಡ, ನೀನು ಬಂದ ಮಾರ್ಗದಿಂದ ಹಿಂದಿರುಗಿ ಹೋಗಬೇಡ,’ ಎಂದು ಯೆಹೋವ ದೇವರ ವಾಕ್ಯದಿಂದ ನನಗೆ ಆಜ್ಞೆಯಾಗಿದೆ,” ಎಂದನು.
因为有耶和华的话嘱咐我,说不可在伯特利吃饭喝水,也不可从你去的原路回来。”
10 ಆದ್ದರಿಂದ ಅವನು ಬೇತೇಲಿಗೆ ಬಂದ ಮಾರ್ಗದಿಂದ ಹಿಂದಿರುಗಿ ಹೋಗದೆ, ಮತ್ತೊಂದು ಮಾರ್ಗವಾಗಿ ಹೋದನು.
于是神人从别的路回去,不从伯特利来的原路回去。
11 ಬೇತೇಲಿನಲ್ಲಿ ಒಬ್ಬ ವೃದ್ಧ ಪ್ರವಾದಿಯು ವಾಸವಾಗಿದ್ದನು. ಅವನ ಮಕ್ಕಳು ಬಂದು ಆ ದಿನದಲ್ಲಿ ಬೇತೇಲಿನಲ್ಲಿ ದೇವರ ಮನುಷ್ಯನು ಮಾಡಿದ ಸಮಸ್ತ ಕ್ರಿಯೆಗಳನ್ನು ಮತ್ತು ಅರಸನಿಗೆ ಹೇಳಿದ ಮಾತುಗಳನ್ನು ತಮ್ಮ ತಂದೆಗೆ ತಿಳಿಸಿದರು.
有一个老先知住在伯特利,他儿子们来,将神人当日在伯特利所行的一切事和向王所说的话都告诉了父亲。
12 ಆಗ ಅವರ ತಂದೆ ಅವರಿಗೆ, “ಅವನು ಯಾವ ಮಾರ್ಗವಾಗಿ ಹೋದನು,” ಎಂದನು. ಯೆಹೂದದಿಂದ ಬಂದ ದೇವರ ಮನುಷ್ಯನು ಹೋದ ಮಾರ್ಗವನ್ನು ಅವನ ಮಕ್ಕಳಿಗೆ ತೋರಿಸಿದರು.
父亲问他们说:“神人从哪条路去了呢?”儿子们就告诉他;原来他们看见那从犹大来的神人所去的路。
13 ಆದ್ದರಿಂದ ಅವನು ತನ್ನ ಮಕ್ಕಳಿಗೆ, “ಕತ್ತೆಗೆ ತಡಿ ಹಾಕಿರಿ,” ಎಂದನು. ಅವರು ಕತ್ತೆಗೆ ತಡಿ ಹಾಕಿದರು. ಅವನು ಅದರ ಮೇಲೆ ಏರಿ,
老先知就吩咐他儿子们说:“你们为我备驴。”他们备好了驴,他就骑上,
14 ದೇವರ ಮನುಷ್ಯನ ಹಿಂದೆ ಹೋಗಿ, ಅವನು ಏಲಾ ಮರದ ಕೆಳಗೆ ಕುಳಿತುಕೊಂಡಿರುವುದನ್ನು ಕಂಡನು. ಆಗ ಅವನು, “ನೀನು ಯೆಹೂದದಿಂದ ಬಂದ ದೇವರ ಮನುಷ್ಯನೋ?” ಎಂದನು. ಅದಕ್ಕವನು, “ನಾನೇ,” ಎಂದನು.
去追赶神人,遇见他坐在橡树底下,就问他说:“你是从犹大来的神人不是?”他说:“是。”
15 ಆಗ ವೃದ್ಧ ಪ್ರವಾದಿಯು ಅವನಿಗೆ, “ನೀನು ನನ್ನ ಮನೆಗೆ ಬಂದು ರೊಟ್ಟಿ ತಿನ್ನು,” ಎಂದನು.
老先知对他说:“请你同我回家吃饭。”
16 ಅದಕ್ಕವನು, “ನಾನು ನಿನ್ನ ಸಂಗಡ ಹಿಂದಿರುಗಲೂ ಕೂಡದು, ಹೋಗಲೂ ಕೂಡದು. ಈ ಸ್ಥಳದಲ್ಲಿ ನಿನ್ನ ಸಂಗಡ ರೊಟ್ಟಿ ತಿನ್ನುವುದಿಲ್ಲ, ನೀರು ಕುಡಿಯುವುದಿಲ್ಲ.
神人说:“我不可同你回去进你的家,也不可在这里同你吃饭喝水;
17 ಏಕೆಂದರೆ, ‘ನೀನು ಅಲ್ಲಿ ರೊಟ್ಟಿ ತಿನ್ನಬೇಡ, ನೀರು ಕುಡಿಯಬೇಡ, ಬಂದ ಮಾರ್ಗದಿಂದ ತಿರುಗಿ ಹೋಗಬೇಡ,’ ಎಂದು ಯೆಹೋವ ದೇವರ ಮಾತಿನಿಂದ ನನಗೆ ಅಪ್ಪಣೆಯಾಗಿದೆ,” ಎಂದನು.
因为有耶和华的话嘱咐我说:‘你在那里不可吃饭喝水,也不可从你去的原路回来。’”
18 ಆಗ ವೃದ್ಧನು, “ನಾನು ನಿನ್ನ ಹಾಗೆಯೇ ಪ್ರವಾದಿಯಾಗಿದ್ದೇನೆ. ಒಬ್ಬ ದೇವದೂತನ ಮುಖಾಂತರ ನನಗೆ ಯೆಹೋವ ದೇವರ ವಾಕ್ಯವು ಉಂಟಾಗಿ, ನಿನ್ನನ್ನು ಹಿಂದಕ್ಕೆ ಕರಕೊಂಡು ಬರಬೇಕೆಂದೂ ನಿನಗೆ ಅನ್ನಪಾನಗಳನ್ನು ಕೊಡಬೇಕೆಂದೂ ಆಜ್ಞೆಯಾಗಿದೆ ಎಂದು ಹೇಳಿದನು.” ಆದರೆ ವೃದ್ಧನು ಅವನಿಗೆ ಸುಳ್ಳು ಹೇಳಿದನು.
老先知对他说:“我也是先知,和你一样。有天使奉耶和华的命对我说:‘你去把他带回你的家,叫他吃饭喝水。’”这都是老先知诓哄他。
19 ಹಾಗೆಯೇ ದೇವರ ಮನುಷ್ಯನು ವೃದ್ಧನ ಸಂಗಡ ಹಿಂದಿರುಗಿ ಹೋಗಿ, ಅವನ ಮನೆಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡನು.
于是神人同老先知回去,在他家里吃饭喝水。
20 ಅವರು ಊಟಕ್ಕೆ ಕುಳಿತಿರುವಾಗ, ಅವನನ್ನು ಹಿಂದಕ್ಕೆ ಕರೆತಂದ ವೃದ್ಧ ಪ್ರವಾದಿಗೆ ಯೆಹೋವ ದೇವರ ವಾಕ್ಯವು ಉಂಟಾಗಿ,
二人坐席的时候,耶和华的话临到那带神人回来的先知,
21 ಅವನು ಯೆಹೂದ ದೇಶದವನಾದ ಆ ದೇವರ ಮನುಷ್ಯನಿಗೆ, “ನೀನು ಯೆಹೋವ ದೇವರ ಮಾತಿಗೆ ತಿರುಗಿಬಿದ್ದು, ನಿನ್ನ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನು ಕೈಗೊಳ್ಳದೆ, ಹಿಂದಕ್ಕೆ ಬಂದು, ‘ರೊಟ್ಟಿ ತಿನ್ನಬೇಡ, ನೀರು ಕುಡಿಯಬೇಡ,’ ಎಂದು ಯೆಹೋವ ದೇವರು ನಿನಗೆ ಹೇಳಿದ ಸ್ಥಳದಲ್ಲಿ
他就对那从犹大来的神人说:“耶和华如此说:你既违背耶和华的话,不遵守耶和华—你 神的命令,
22 ನೀನು ಹಿಂದಿರುಗಿ ಬಂದು, ನೀನು ರೊಟ್ಟಿ ತಿಂದು, ನೀರು ಕುಡಿದಿದ್ದರಿಂದ, ನಿನ್ನ ಹೆಣ ನಿನ್ನ ಪಿತೃಗಳ ಸಮಾಧಿಗೆ ಸೇರುವುದಿಲ್ಲವೆಂದು ಯೆಹೋವ ದೇವರು ಹೇಳುತ್ತಾರೆ,” ಎಂದು ಹೇಳಿದನು.
反倒回来,在耶和华禁止你吃饭喝水的地方吃了喝了,因此你的尸身不得入你列祖的坟墓。”
23 ದೇವರ ಮನುಷ್ಯನು ರೊಟ್ಟಿ ತಿಂದು, ನೀರು ಕುಡಿದ ತುರುವಾಯ, ಅವನು ತಾನು ಕರೆದುತಂದ ಪ್ರವಾದಿಗೋಸ್ಕರ ಕತ್ತೆಗೆ ತಡಿ ಹಾಕಿದನು.
吃喝完了,老先知为所带回来的先知备驴。
24 ಅವನು ಹೋದ ತರುವಾಯ, ಸಿಂಹವು ಅವನನ್ನು ದಾರಿಯಲ್ಲಿ ಹಿಡಿದು ಕೊಂದುಹಾಕಿತು. ಅವನ ಹೆಣ ದಾರಿಯಲ್ಲಿ ಬಿದ್ದಿತ್ತು. ಕತ್ತೆಯೂ ಮತ್ತು ಸಿಂಹವೂ ಹೆಣದ ಬಳಿಯಲ್ಲಿ ನಿಂತಿದ್ದವು.
他就去了,在路上有个狮子遇见他,将他咬死,尸身倒在路上,驴站在尸身旁边,狮子也站在尸身旁边。
25 ಆಗ ಮನುಷ್ಯರು ಹಾದು ಹೋಗಿ ಮಾರ್ಗದಲ್ಲಿ ಬಿದ್ದಿರುವ ಹೆಣವನ್ನೂ, ಹೆಣದ ಬಳಿಯಲ್ಲಿ ನಿಂತಿರುವ ಸಿಂಹವನ್ನೂ ಕಂಡು, ವೃದ್ಧ ಪ್ರವಾದಿಯು ವಾಸವಾಗಿರುವ ಪಟ್ಟಣಕ್ಕೆ ಬಂದು ತಿಳಿಸಿದರು.
有人从那里经过,看见尸身倒在路上,狮子站在尸身旁边,就来到老先知所住的城里述说这事。
26 ಅವನನ್ನು ಮಾರ್ಗದಿಂದ ಹಿಂದಕ್ಕೆ ಕರೆತಂದ ಪ್ರವಾದಿಯು ಆ ವರ್ತಮಾನವನ್ನು ಕೇಳಿ, “ಇವನೇ ಯೆಹೋವ ದೇವರ ಮಾತಿಗೆ ಅವಿಧೇಯನಾದ ದೇವರ ಮನುಷ್ಯನು, ಯೆಹೋವ ದೇವರು ಅವನನ್ನು ಸಿಂಹಕ್ಕೆ ಒಪ್ಪಿಸಿದ್ದಾರೆ, ಅದು ಅವನನ್ನು ಸೀಳಿ ಕೊಂದುಹಾಕಿತು,” ಎಂದನು.
那带神人回来的先知听见这事,就说:“这是那违背了耶和华命令的神人,所以耶和华把他交给狮子;狮子抓伤他,咬死他,是应验耶和华对他说的话。”
27 ತನ್ನ ಮಕ್ಕಳಿಗೆ, “ಕತ್ತೆಗೆ ತಡಿ ಹಾಕಿರಿ,” ಎಂದನು. ಅವರು ತಡಿ ಹಾಕಿದರು.
老先知就吩咐他儿子们说:“你们为我备驴。”他们就备了驴。
28 ಅವನು ಹೋಗಿ ಇವನ ಹೆಣವು ದಾರಿಯಲ್ಲಿ ಬಿದ್ದಿರುವುದನ್ನೂ, ಕತ್ತೆಯೂ, ಸಿಂಹವೂ ಹೆಣದ ಬಳಿಯಲ್ಲಿ ನಿಂತಿರುವುದನ್ನೂ ಕಂಡನು.
他去了,看见神人的尸身倒在路上,驴和狮子站在尸身旁边,狮子却没有吃尸身,也没有抓伤驴。
29 ಸಿಂಹವು ಹೆಣವನ್ನು ತಿನ್ನದೆ, ಕತ್ತೆಯನ್ನು ಸೀಳಿ ಹಾಕದೆ ಇತ್ತು. ಆಗ ಪ್ರವಾದಿಯು ದೇವರ ಮನುಷ್ಯನ ಹೆಣವನ್ನು ಎತ್ತಿ, ಕತ್ತೆಯ ಮೇಲೆ ಹಾಕಿಕೊಂಡು ಗೋಳಾಡುವುದಕ್ಕೂ, ಅವನನ್ನು ಹೂಳುವುದಕ್ಕೂ ಪಟ್ಟಣಕ್ಕೆ ತಂದನು.
老先知就把神人的尸身驮在驴上,带回自己的城里,要哀哭他,葬埋他;
30 ಅವನ ಹೆಣವನ್ನು ತನ್ನ ಸಮಾಧಿಯಲ್ಲಿ ಹೂಳಿಟ್ಟನು. ಆಗ ಅವರು, “ಅಯ್ಯೋ, ನಮ್ಮ ಸಹೋದರನೇ!” ಎಂದು ಅವನಿಗೋಸ್ಕರ ಗೋಳಾಡಿದರು.
就把他的尸身葬在自己的坟墓里,哀哭他,说:“哀哉!我兄啊。”
31 ವೃದ್ಧ ಪ್ರವಾದಿಯು ಅವನನ್ನು ಹೂಳಿಟ್ಟ ತರುವಾಯ, ಅವನು ತನ್ನ ಮಕ್ಕಳಿಗೆ, “ನಾನು ಸತ್ತಾಗ ದೇವರ ಮನುಷ್ಯನನ್ನು ಹೂಳಿಟ್ಟ ಸಮಾಧಿಯಲ್ಲಿ ನನ್ನನ್ನು ಹೂಳಿಡಿರಿ. ನನ್ನ ಎಲುಬುಗಳನ್ನು ಅವನ ಎಲುಬುಗಳ ಬಳಿಯಲ್ಲಿ ಇಡಿರಿ.
安葬之后,老先知对他儿子们说:“我死了,你们要葬我在神人的坟墓里,使我的尸骨靠近他的尸骨,
32 ಏಕೆಂದರೆ ಅವನು ಬೇತೇಲಿನಲ್ಲಿರುವ ಬಲಿಪೀಠಕ್ಕೆ ವಿರೋಧವಾಗಿಯೂ, ಸಮಾರ್ಯ ಪಟ್ಟಣಗಳಲ್ಲಿರುವ ಪೂಜಾಸ್ಥಳಗಳ ಸಮಸ್ತ ಮನೆಗಳಿಗೆ ವಿರೋಧವಾಗಿಯೂ, ಯೆಹೋವ ದೇವರ ಮಾತಿನಿಂದ ಕೂಗಿದ ಮಾತು ನಿಶ್ಚಯವಾಗಿ ಆಗುವುದು,” ಎಂದನು.
因为他奉耶和华的命指着伯特利的坛和撒马利亚各城有邱坛之殿所说的话必定应验。”
33 ಈ ಕಾರ್ಯದ ತರುವಾಯ ಯಾರೊಬ್ಬಾಮನು ತನ್ನ ಕೆಟ್ಟ ಮಾರ್ಗವನ್ನು ಬಿಟ್ಟು ತಿರುಗದೆ, ಪೂಜಾ ಸ್ಥಳಗಳಿಗೆ ಕನಿಷ್ಠ ಜನರಿಂದ ಪುನಃ ಯಾಜಕರನ್ನು ನೇಮಿಸಿದನು. ಯಾವನಿಗೆ ಮನಸ್ಸಿತ್ತೋ ಅವನನ್ನು ಇವನು ಪ್ರತಿಷ್ಠೆ ಮಾಡಿಸಿದ್ದರಿಂದ, ಪೂಜಾಸ್ಥಳಗಳ ಯಾಜಕರಲ್ಲಿ ಅವನು ಒಬ್ಬನಾಗುವನು.
这事以后,耶罗波安仍不离开他的恶道,将凡民立为邱坛的祭司;凡愿意的,他都分别为圣,立为邱坛的祭司。
34 ಯಾರೊಬ್ಬಾಮನ ಮನೆಯವರನ್ನು ಭೂಮಿಯಿಂದ ಸಂಹರಿಸುವುದಕ್ಕೂ, ನಾಶಮಾಡುವುದಕ್ಕೂ ಈ ಪಾಪವು ಅವರಿಗೆ ಕಾರಣವಾಯಿತು.
这事叫耶罗波安的家陷在罪里,甚至他的家从地上除灭了。

< ಅರಸುಗಳು - ಪ್ರಥಮ ಭಾಗ 13 >