< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 9 >
1 ನಾನು ಸ್ವತಂತ್ರನಲ್ಲವೇ? ನಾನೂ ಅಪೊಸ್ತಲನಲ್ಲವೇ? ನಾನು ನಮ್ಮ ಕರ್ತ ಆಗಿರುವ ಯೇಸುವನ್ನು ಕಂಡವನಲ್ಲವೇ? ನಾನು ಕರ್ತ ದೇವರಲ್ಲಿ ಮಾಡಿದ ಕೆಲಸದ ಫಲವು ನೀವಲ್ಲವೇ?
Am I not an apostle? Have I not seen Jesus our Lord? Are not ye my work in the Lord?
2 ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗೆ ನಾನು ಅಪೊಸ್ತಲನಾಗಿದ್ದೇನೆ! ನನ್ನ ಅಪೊಸ್ತಲ ಸೇವೆಯ ಮುದ್ರೆಯು ಕರ್ತ ದೇವರಲ್ಲಿ ನೀವೇ ಆಗಿದ್ದೀರಷ್ಟೇ.
If I am not an apostle to others, yet surely I am to you; for the seal of my apostleship are ye in the Lord.
3 ನನ್ನ ಮೇಲೆ ತಪ್ಪು ಹೊರಿಸುವವರಿಗೆ ಇದೇ ನನ್ನ ಪ್ರತಿವಾದ:
This is my answer to those who question my authority.
4 ಅನ್ನಪಾನಗಳಿಗಾಗಿ ನಮಗೆ ಹಕ್ಕಿಲ್ಲವೇ?
Have we not a right to eat and drink?
5 ಮಿಕ್ಕ ಅಪೊಸ್ತಲರಂತೆಯೂ ಕರ್ತದೇವರ ತಮ್ಮಂದಿರಂತೆಯೂ ಕೇಫನಂತೆಯೂ ವಿಶ್ವಾಸಿಯಾದ ಒಬ್ಬಳನ್ನು ಮದುವೆಮಾಡಿಕೊಳ್ಳಲು ನಮಗೆ ಹಕ್ಕಿಲ್ಲವೇ?
Have we not a right to carry about with us a sister as a wife, as well as the other apostles, and the brothers of the Lord, and Cephas?
6 ಇಲ್ಲವೆ ಉಪಜೀವನಕ್ಕಾಗಿ ನಾನೂ ಮತ್ತು ಬಾರ್ನಬನೂ ಮಾತ್ರವೇ ಕೆಲಸಮಾಡಬೇಕೋ?
Or am I alone and Barnabas bound to labor with our own hands?
7 ಸೈನಿಕ ಸೇವೆಯನ್ನು ಯಾವನಾದರೂ ಸ್ವಂತ ಖರ್ಚಿನಿಂದ ಮಾಡುವುದುಂಟೋ? ದ್ರಾಕ್ಷಿಯ ತೋಟವನ್ನು ಮಾಡಿ ಅದರ ಫಲವನ್ನು ತಿನ್ನದೇ ಇರುವವರುಂಟೋ? ಮಂದೆಯನ್ನು ಮೇಯಿಸುವವನು ಹಾಲನ್ನು ಕುಡಿಯದೇ ಇರುವುದುಂಟೋ?
Who ever serveth as a soldier at his own charges? Who planteth a vineyard without eating its fruit? Or who tendeth a flock and doth not eat of the milk of the flock?
8 ನಾನು ಕೇವಲ ಮಾನವೀಯ ನೋಟದಲ್ಲಿ ಮಾತನಾಡುತ್ತಿದ್ದೇನೋ? ನಿಯಮವು ಸಹ ಇದನ್ನು ಹೇಳುವುದಿಲ್ಲವೋ?
Is it on man's authority that I am saying these things, or doth not the Law too say the same?
9 “ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು,” ಎಂದು ಮೋಶೆಯ ನಿಯಮದಲ್ಲಿ ಬರೆದಿದೆ. ಇಲ್ಲಿ ದೇವರಿಗೆ ಎತ್ತಿನ ಬಗ್ಗೆ ಮಾತ್ರ ಚಿಂತೆಯಿದೆಯೋ?
For it is written in the law of Moses: “Thou shalt not muzzle an ox while treading out grain.” Is it for oxen that God careth?
10 ನಿಶ್ಚಯವಾಗಿಯೂ, ದೇವರು ನಮಗೋಸ್ಕರ ಇವೆಲ್ಲವನ್ನು ಹೇಳುತ್ತಾರೆ ಅಲ್ಲವೇ? ಹೌದು, ಪವಿತ್ರ ವೇದವು ನಮಗೋಸ್ಕರವಾಗಿಯೇ ಬರೆಯಲಾಗಿದೆ. ಉಳುವವನು ಉಳುವಾಗ, ಒಕ್ಕುವವನು ಒಕ್ಕುವಾಗ ಸುಗ್ಗಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿಂದ ಹಾಗೆ ಮಾಡಬೇಕು.
Or doth he say it altogether on our account? On our account, no doubt, it was written, that he who plougheth ought to plough in hope, and that he who thrasheth should do it in the hope of partaking.
11 ನಾವು ನಿಮ್ಮಲ್ಲಿ ಆತ್ಮಿಕ ಸಂಗತಿಗಳನ್ನು ಬಿತ್ತಿದ ಮೇಲೆ, ನಿಮ್ಮಿಂದ ಭೌತಿಕ ಸುಗ್ಗಿಯನ್ನು ಕೊಯ್ಯುವುದು ದೊಡ್ಡದೋ?
If we have sown to you spiritual things, is it a great thing if we reap from you things for the body?
12 ಇತರರಿಗೆ ನಿಮ್ಮ ಸಹಾಯದಲ್ಲಿ ಪಾಲು ಇದ್ದರೆ, ಅದರಲ್ಲಿ ನಮಗೂ ಹೆಚ್ಚು ಪಾಲು ಇರಬೇಕಲ್ಲಾ? ಆದರೆ ನಾವು ಈ ಅಧಿಕಾರವನ್ನು ಚಲಾಯಿಸಿಲ್ಲ. ಕ್ರಿಸ್ತ ಯೇಸುವಿಗೆ ಸೇರಿದ ಸುವಾರ್ತೆಗೆ ಅಡ್ಡಿಯಾಗಬಾರದೆಂದು ಎಲ್ಲವನ್ನೂ ಸಹಿಸಿಕೊಂಡೆವು.
If others possess this right in relation to you, do not we still more? But we have not used this right; but we submit to all things, that we may occasion no hindrance to the gospel of Christ.
13 ದೇವಾಲಯದಲ್ಲಿ ಸೇವೆಮಾಡುವವರು, ದೇವಾಲಯದಲ್ಲಿ ಊಟ ಪಡೆಯುತ್ತಾರೆಂಬುದೂ; ಬಲಿಪೀಠದ ಬಳಿಯಲ್ಲಿ ಸೇವೆಮಾಡುವವರು, ಆ ಬಲಿಪೀಠದ ಮೇಲೆ ಸಮರ್ಪಿಸಿದ್ದರಲ್ಲಿ ಪಾಲು ಹೊಂದುತ್ತಾರೆಂಬುದೂ ನಿಮಗೆ ತಿಳಿಯದೋ?
Do ye not know, that they who minister in the offerings of the temple live from the temple? that they who serve at the altar share with the altar?
14 ಅದೇ ರೀತಿಯಾಗಿ ಸುವಾರ್ತೆಯನ್ನು ಸಾರುವವರು, ಸುವಾರ್ತೆಯಿಂದಲೇ ಜೀವನ ಮಾಡಬೇಕೆಂದು ಕರ್ತದೇವರು ಸಹ ಆಜ್ಞಾಪಿಸಿದ್ದಾರೆ.
In like manner also did the Lord ordain that they who preach the gospel should live from the gospel.
15 ಆದರೆ ನಾನಂತೂ ಇವುಗಳಲ್ಲಿ ಒಂದು ಹಕ್ಕನ್ನೂ ಉಪಯೋಗಿಸಿಕೊಂಡಿಲ್ಲ. ಅಂಥವುಗಳನ್ನು ನನಗೆ ನೀವು ಮಾಡಬೇಕೆಂಬ ಅಪೇಕ್ಷೆಯಿಂದ ಈ ಸಂಗತಿಗಳನ್ನು ನಾನು ಬರೆಯಲಿಲ್ಲ. ಯಾರಾದರೂ ಈ ಹೆಮ್ಮೆಯನ್ನು ನನ್ನಿಂದ ಅಪಹರಿಸುವುದಕ್ಕಿಂತಲೂ ಸಾಯುವುದೇ ಲೇಸು.
But I have used no right of this kind; nor have I written thus that anything of this kind should be done for me; for it were better for me to die, than that any one should take from me what I glory in.
16 ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಸಿಕೊಳ್ಳುವ ಯಾವ ಆಸೆಯೂ ನನಗೆ ಇಲ್ಲ. ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಸಾಲಗಾರನಾಗಿದ್ದೇನೆ. ಸುವಾರ್ತೆಯನ್ನು ಸಾರದಿದ್ದರೆ, ನನ್ನ ಗತಿ ಏನೆಂದು ಹೇಳಲಿ!
For in preaching the gospel, I have nothing to glory in; for I am under a necessity to do so; yea, woe is to me, if I preach not the gospel!
17 ನಾನು ಇಷ್ಟಪೂರ್ವಕವಾಗಿ ಸುವಾರ್ತೆ ಸಾರಿದರೆ, ನನಗೆ ಬಹುಮಾನವಿರುವುದು. ಇಷ್ಟವಿಲ್ಲದೆ ಮಾಡಿದರೆ, ನನ್ನ ವಶಕ್ಕೆ ಒಪ್ಪಿಸಲಾದ ಕಾರ್ಯಭಾರವನ್ನು ನಾನು ನೆರವೇರಿಸಿದಂತಾಗುತ್ತದೆ.
For if I do this willingly, I have a reward; but if unwillingly, still I have been intrusted with a stewardship.
18 ಹಾಗಾದರೆ ನನಗೆ ದೊರೆಯುವ ಬಹುಮಾನವೇನು? ನಾನು ಸುವಾರ್ತೆಯನ್ನು ಸಾರುವಾಗ, ಅದನ್ನು ಉಚಿತವಾಗಿ ಸಾರುತ್ತಾ, ಸುವಾರ್ತೆಯ ಪ್ರಸಂಗಿಯಾಗಿ ನನ್ನ ಪೂರ್ಣ ಹಕ್ಕನ್ನು ಉಪಯೋಗಿಸದಿರುವುದೇ ನನ್ನ ಬಹುಮಾನ.
What then is my reward? It is that, when I preach the gospel, I may make the gospel free of charge, that I use not to the full my right as a preacher of the gospel.
19 ನಾನು ಸ್ವತಂತ್ರನಾಗಿದ್ದರೂ, ಯಾರಿಗೂ ಸೇರಿದವನಾಗಿರದಿದ್ದರೂ, ಹೆಚ್ಚು ಜನರನ್ನು ಸಂಪಾದಿಸಿಕೊಳ್ಳಬೇಕೆಂಬ ಉದ್ದೇಶದಿಂದ ನನ್ನನ್ನು ಎಲ್ಲರಿಗೂ ಗುಲಾಮನನ್ನಾಗಿ ಮಾಡಿಕೊಂಡೆನು.
For being free from all men, yet I made myself a servant to all, that I might gain the more;
20 ಯೆಹೂದ್ಯರನ್ನು ಸಂಪಾದಿಸಿಕೊಳ್ಳುವಂತೆ ಯೆಹೂದ್ಯರಿಗೆ ಯೆಹೂದ್ಯನಂತಾದೆನು. ನಾನು ನಿಯಮಕ್ಕೆ ಅಧೀನನಲ್ಲದಿದ್ದರೂ ನಿಯಮಕ್ಕೆ ಅಧೀನರಾದವರನ್ನು ಸಂಪಾದಿಸಿಕೊಳ್ಳುವಂತೆ ಅವರಿಗಾಗಿ ನಿಯಮಕ್ಕೆ ಅಧೀನನಂತಾದೆನು.
and to the Jews I became as a Jew, that I might gain Jews; to those under the Law, as under the Law, not being myself under the Law, that I might gain those under the Law;
21 ನಾನು ನಿಯಮ ಇಲ್ಲದವರನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಅವರಿಗೆ ನಿಯಮವಿಲ್ಲದವನಂತಾದೆನು. ನಾನು ಕ್ರಿಸ್ತ ಯೇಸುವಿನ ನಿಯಮಕ್ಕೆ ಒಳಗಾದವನಾಗಿದ್ದರೂ ನಾನು ದೇವರ ನಿಯಮದಿಂದ ಸ್ವತಂತ್ರವಾದವನಲ್ಲ.
to those without the Law, as without the Law, being not without a law before God, but under the law of Christ, that I might gain those without the Law;
22 ಬಲವಿಲ್ಲದವರನ್ನು ಸಂಪಾದಿಸುವುದಕ್ಕಾಗಿ ಬಲವಿಲ್ಲದವರಿಗೆ ಬಲವಿಲ್ಲದವನಾದೆನು. ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಎಲ್ಲರಿಗೂ ಎಲ್ಲವೂ ಆದೆನು.
to the weak I became weak, that I might gain the weak; I have become all things to all, that I might by all means save some.
23 ನಾನು ಸುವಾರ್ತೆಯ ಆಶೀರ್ವಾದಗಳಲ್ಲಿ ಪಾಲುಗಾರನಾಗಬೇಕೆಂದು ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡುತ್ತೇನೆ.
And I do all for the sake of the gospel, that I may with others partake of it.
24 ಪಂದ್ಯಗಳಲ್ಲಿ ಎಲ್ಲರೂ ಓಡುತ್ತಾರೆ. ಆದರೆ ಒಬ್ಬನಿಗೆ ಮಾತ್ರ ಬಹುಮಾನ ದೊರೆಯುತ್ತದೆ ಎಂಬುದು ನಿಮಗೆ ತಿಳಿಯದೋ? ಬಹುಮಾನವನ್ನು ಪಡಕೊಳ್ಳಬೇಕೆಂದು ನೀವೂ ಓಡಿರಿ.
Know ye not, that of those who run in the race-course all run, but one receiveth the prize? Thus run, that ye may obtain.
25 ಆಟಗಳಲ್ಲಿ ಪಂದ್ಯಕ್ಕೆ ಭಾಗವಹಿಸುವವರೆಲ್ಲರೂ, ಕಠಿಣವಾದ ತರಬೇತಿಯನ್ನು ಹೊಂದುತ್ತಾರೆ. ಅವರು ಬಹುದಿನ ಉಳಿಯದೇ ಇರುವ ಕಿರೀಟವನ್ನು ಪಡೆಯುವುದಕ್ಕೆ ಇದನ್ನು ಮಾಡುತ್ತಾರೆ. ಆದರೆ ನಾವು ಎಂದೆಂದಿಗೂ ಉಳಿಯುವ ಕಿರೀಟ ಹೊಂದಲು ಹೋರಾಡುವವರಾಗಿದ್ದೇವೆ.
And every one who contendeth in the games is temperate in all things; they, however, to obtain a perishable crown, but we, an imperishable.
26 ಗೊತ್ತುಗುರಿ ಇಲ್ಲದವನ ಹಾಗೆ ನಾನು ಓಡುವುದಿಲ್ಲ, ಗಾಳಿಯನ್ನು ಗುದ್ದುವವನ ಹಾಗೆ ನಾನು ಹೋರಾಡುವುದಿಲ್ಲ.
I therefore so run, not as one uncertain; I so fight, not as one striking the air;
27 ನಾನು ಇತರರಿಗೆ ಸುವಾರ್ತೆ ಸಾರಿದ ಮೇಲೆ, ನಾನೇ ಬಹುಮಾನ ಹೊಂದಲು ಅಯೋಗ್ಯನಾಗದಂತೆ ನನ್ನ ದೇಹವನ್ನು ದಂಡಿಸಿ, ನನ್ನ ಸ್ವಾಧೀನದಲ್ಲಿಟ್ಟುಕೊಳ್ಳುತ್ತೇನೆ.
but I beat down my body, and bring it into subjection, lest perhaps, when I have been a herald to others, I should myself be rejected as unworthy.