< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 8 >
1 ಈಗ ವಿಗ್ರಹಕ್ಕೆ ನೈವೇದ್ಯ ಮಾಡಿದ ಆಹಾರ ಪದಾರ್ಥಗಳ ವಿಷಯ: “ನಮ್ಮೆಲ್ಲರಿಗೂ ತಿಳುವಳಿಕೆಯಿದೆ,” ಎಂದು ಬಲ್ಲೆವು. ತಿಳುವಳಿಕೆಯು ಅಹಂಕಾರಿಗಳನ್ನಾಗಿ ಮಾಡುತ್ತದೆ. ಆದರೆ ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.
А за месо што је клато идолима знамо, јер сви разум имамо. Разум, дакле, надима, а љубав поправља.
2 ಯಾರಾದರೂ ತಾನು ಏನನ್ನಾದರೂ ತಿಳಿದಿರುವುದಾಗಿ ಭಾವಿಸಿದರೆ, ಅಂಥವನು ತಿಳಿಯಬೇಕಾದ ರೀತಿಯಲ್ಲಿ ಇನ್ನೂ ತಿಳಿದುಕೊಂಡಿರುವುದಿಲ್ಲ.
Ако ли ко мисли да шта зна, не зна још ништа као што треба знати.
3 ಆದರೆ ದೇವರನ್ನು ಪ್ರೀತಿಸುವವರನ್ನು ದೇವರು ತಿಳಿದುಕೊಂಡಿರುತ್ತಾರೆ.
А ако ко љуби Бога, Бог га је научио.
4 ಹಾಗಾದರೆ, ವಿಗ್ರಹಗಳಿಗೆ ನೈವೇದ್ಯ ಮಾಡಿದ ಆಹಾರ ಪದಾರ್ಥಗಳನ್ನು ತಿನ್ನುವುದರ ವಿಷಯ: “ಲೋಕದಲ್ಲಿ ವಿಗ್ರಹವು ಏನೂ ಅಲ್ಲ. ಒಬ್ಬ ದೇವರೇ ಹೊರತು ಬೇರೆ ದೇವರಿಲ್ಲ,” ಎಂದು ನಮಗೆ ಗೊತ್ತಿದೆ.
А за јело идолских жртава, знамо да идол није ништа на свету, и да нема другог Бога осим једног.
5 ಆಕಾಶದಲ್ಲಾಗಲಿ, ಭೂಮಿಯ ಮೇಲೆ ಆಗಲಿ, ದೇವರುಗಳು ಎಂದು ಎನ್ನಿಸಿಕೊಳ್ಳುವವರು ಉಂಟು. ಅನೇಕರಿಗೆ ಅಂಥ “ದೇವರುಗಳು” ಹಾಗೂ “ಸ್ವಾಮಿಗಳು” ಇದ್ದಾರೆ.
Јер ако и има који се богови зову, или на небу или на земљи, као што има много богова и много господа:
6 ನಮಗಾದರೋ ತಂದೆ ದೇವರು ಒಬ್ಬರೇ ಇರುತ್ತಾರೆ. ಅವರಿಂದಲೇ ಸಮಸ್ತವೂ ಉಂಟಾಯಿತು. ಅವರಿಗಾಗಿಯೇ ನಾವು ಜೀವಿಸುತ್ತೇವೆ. ನಮಗಿರುವ ಕರ್ತದೇವರು ಒಬ್ಬರೇ. ಅವರೇ ಕ್ರಿಸ್ತ ಯೇಸು. ಅವರಿಂದಲೇ ಸಮಸ್ತವೂ ಉಂಟಾಯಿತು. ಅವರ ಮುಖಾಂತರವೇ ನಾವು ಜೀವಿಸುತ್ತೇವೆ.
Али ми имамо само једног Бога Оца, од ког је све, и ми у Њему, и једног Господа Исуса Христа, кроз ког је све, и ми кроза Њ.
7 ಆದರೆ ಈ ತಿಳುವಳಿಕೆಯು ಎಲ್ಲರಲ್ಲಿಯೂ ಇಲ್ಲ. ಕೆಲವರು ಇದುವರೆಗೂ ವಿಗ್ರಹಕ್ಕೆ ಅರ್ಪಿತವಾದದ್ದನ್ನು ತಿನ್ನುವ ರೂಢಿಯಲ್ಲಿದ್ದು, ಅವರು ವಿಗ್ರಹಕ್ಕೆ ನೈವೇದ್ಯ ಮಾಡಿ ತಿನ್ನುವುದಾಗಿ ಭಾವಿಸಿಕೊಳ್ಳುತ್ತಾರೆ. ಹೀಗೆ ಅವರ ಮನಸ್ಸಾಕ್ಷಿ ಬಲಹೀನವಾಗಿರುವುದರಿಂದ, ಅದು ಅಶುದ್ಧವಾಗಿರುತ್ತದೆ.
Али нема свако разума; јер неки који још и сад мисле да су идоли нешто, као идолске жртве једу, и савест њихова, слаба будући, погани се.
8 ಆದರೆ ಆಹಾರವು ನಮ್ಮನ್ನು ದೇವರ ಸಮೀಪಕ್ಕೆ ಸೇರಿಸಲಾರದು. ಅದನ್ನು ತಿನ್ನದಿದ್ದರೆ ನಮಗೆ ನಷ್ಟವಿಲ್ಲ, ತಿಂದರೆ ನಮಗೆ ಲಾಭವಿಲ್ಲ.
Али јело нас не поставља пред Богом: јер нити ћемо бити већи ако једемо, ни мањи ако не једемо.
9 ಆದರೆ ಈ ನಿಮ್ಮ ಸ್ವಾತಂತ್ರ್ಯವು ಬಲಹೀನರಿಗೆ ವಿಘ್ನವಾಗದಂತೆ ಜಾಗರೂಕರಾಗಿರಿ.
Али се чувајте да како ова слобода ваша не постане спотицање слабима.
10 ಎಲ್ಲಾ ತಿಳುವಳಿಕೆಯಿರುವ ನೀನು ವಿಗ್ರಹದ ಗುಡಿಯಲ್ಲಿ ತಿನ್ನುವುದನ್ನು ನೋಡಿದರೆ ಬಲಹೀನ ಮನಸ್ಸಾಕ್ಷಿಯುಳ್ಳ ಸಹೋದರನು, ತಾನೂ ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನು ತಿನ್ನುವುದಕ್ಕೆ ಧೈರ್ಯಗೊಳ್ಳುವನಲ್ಲವೇ?
Јер ако тебе, који имаш разум, види ко у идолској цркви где седиш за трпезом, неће ли његова савест, слаба будући, ослободити се да једе идолске жртве?
11 ಆ ಬಲಹೀನನು ನಿನ್ನ ತಿಳುವಳಿಕೆಯಿಂದ ನಾಶವಾಗುತ್ತಾನೆ. ಆ ಸಹೋದರನಿಗಾಗಿಯೂ ಕ್ರಿಸ್ತ ಯೇಸುವು ತಮ್ಮ ಪ್ರಾಣವನ್ನು ಕೊಟ್ಟರಲ್ಲವೇ?
И с твог разума погинуће слаби брат, за ког Христос умре.
12 ಹೀಗೆ ನಿನ್ನ ಸಹೋದರರ ವಿರುದ್ಧ ಪಾಪಮಾಡಿ, ಬಲಹೀನವಾದ ಅವರ ಮನಸ್ಸನ್ನು ನೋಯಿಸಿ, ಕ್ರಿಸ್ತ ಯೇಸುವಿಗೆ ವಿರುದ್ಧವಾಗಿ ಪಾಪಮಾಡುವವನಾಗಿರುತ್ತಿ.
Тако кад се грешите о браћу, и бијете њихову слабу савест, о Христа се грешите.
13 ಆದ್ದರಿಂದ ನಾನು ತಿನ್ನುವಂಥದ್ದು ನನ್ನ ಸಹೋದರನನ್ನು ಪಾಪದಲ್ಲಿ ಬೀಳುವಂತೆ ಮಾಡುವುದಾದರೆ, ಎಂದಿಗೂ ನಾನು ಮಾಂಸವನ್ನು ತಿನ್ನುವುದೇ ಇಲ್ಲ. ಅವನ ಬೀಳುವಿಕೆಗೆ ಕಾರಣವಾಗುವುದೂ ಇಲ್ಲ. (aiōn )
Зато, ако јело саблажњава брата мог, нећу јести меса довека, да не саблазним брата свог. (aiōn )