< ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ 7 >
1 ನೀವು ಬರೆದ ಸಂಗತಿಗಳನ್ನು ಕುರಿತಾಗಿ ಹೇಳುವುದೇನೆಂದರೆ, “ಸ್ತ್ರೀಸಂಪರ್ಕವಿಲ್ಲದೆ ಇರುವುದು ಮನುಷ್ಯನಿಗೆ ಒಳ್ಳೆಯದು.”
Men vedkommende det som I skrev om, da er det godt for et menneske ikke å røre en kvinne;
2 ಆದರೆ ಲೈಂಗಿಕ ಅನೈತಿಕತೆ ಹೆಚ್ಚಾಗಿರುವುದರಿಂದ, ಪ್ರತಿಯೊಬ್ಬನಿಗೆ ಸ್ವಂತ ಹೆಂಡತಿ ಇರಲಿ, ಪ್ರತಿಯೊಬ್ಬಳಿಗೆ ಸ್ವಂತ ಗಂಡನಿರಲಿ.
men for hors skyld skal hver mann ha sin egen hustru, og hver kvinne sin egen mann.
3 ಗಂಡನು ಹೆಂಡತಿಗೆ, ಹೆಂಡತಿಯು ಗಂಡನಿಗೆ ದಾಂಪತ್ಯ ಧರ್ಮ ಪೂರೈಸಲಿ.
Mannen gjøre sin skyldighet mot hustruen, og likeså hustruen mot mannen;
4 ಹೆಂಡತಿಯ ಸ್ವಂತ ದೇಹದ ಮೇಲೆ ಆಕೆಗೆ ಅಧಿಕಾರವಿಲ್ಲ, ಅದು ಗಂಡನಿಗಿದೆ. ಹಾಗೆಯೇ, ಗಂಡನ ಸ್ವಂತ ದೇಹದ ಮೇಲೆ ಅವನಿಗೆ ಅಧಿಕಾರವಿಲ್ಲ, ಅದು ಅವನ ಹೆಂಡತಿಗಿದೆ.
hustruen råder ikke over sitt eget legeme, men mannen; likeså råder heller ikke mannen over sitt eget legeme, men hustruen.
5 ಗಂಡ ಹೆಂಡತಿ ಪರಸ್ಪರ ಸಮ್ಮತಿಯಿಂದ ಸ್ವಲ್ಪಕಾಲ ಪ್ರಾರ್ಥನೆಗಾಗಿ ಅಗಲಿರಬಹುದಷ್ಟೇ. ಇಲ್ಲದಿದ್ದರೆ, ಸೈತಾನನು ನಿಮ್ಮ ಸಂಯಮ ಇಲ್ಲದಿರುವುದನ್ನು ನೋಡಿ ನಿಮ್ಮನ್ನು ಶೋಧಿಸದಂತೆ ಒಂದುಗೂಡಬೇಕು.
Hold eder ikke fra hverandre uten efter samråd, for en tid, for å leve i bønn, og kom så sammen igjen, forat ikke Satan skal friste eder, fordi I ikke makter å være avholdende!
6 ಹೀಗೆ ನಾನು ಹೇಳುವುದು ಸಲಹೆಯೇ ಹೊರತು ಆಜ್ಞೆಯಲ್ಲ.
Dette sier jeg som tillatelse, ikke som påbud;
7 ನಾನಿರುವಂತೆಯೇ ಎಲ್ಲಾ ಮನುಷ್ಯರು ಇರಬೇಕೆಂಬುದು ನನ್ನ ಇಷ್ಟ. ಆದರೆ ಒಬ್ಬರು ಒಂದು ವಿಧವಾಗಿಯೂ ಮತ್ತೊಬ್ಬರು ಇನ್ನೊಂದು ವಿಧವಾಗಿಯೂ ಸ್ವಂತ ವರವನ್ನು ದೇವರಿಂದ ಪಡೆದುಕೊಂಡಿರುತ್ತಾರೆ.
jeg ønsker at alle mennesker var som jeg; men hver har sin egen nådegave av Gud, den ene så, den andre så.
8 ಮದುವೆಯಾಗದವರಿಗೂ ವಿಧವೆಯರಿಗೂ ನಾನು ಹೇಳುವುದೇನೆಂದರೆ: ನಾನಿರುವಂತೆಯೇ ಮದುವೆಯಾಗದೇ ಇರುವುದು ಅವರಿಗೆ ಒಳ್ಳೆಯದು.
Til de ugifte og til enkene sier jeg: Det er godt for dem om de vedblir å være som jeg;
9 ಅವರಿಗೆ ಸ್ವಯಂನಿಯಂತ್ರಣ ಇಲ್ಲದಿದ್ದರೆ, ಮದುವೆಮಾಡಿಕೊಳ್ಳಲಿ, ಕಾಮದಾಶೆ ಪಡುವುದಕ್ಕಿಂತ ಮದುವೆ ಮಾಡಿಕೊಳ್ಳುವುದು ಉತ್ತಮ.
men kan de ikke være avholdende, da la dem gifte sig! for det er bedre å gifte sig enn å lide brynde.
10 ಮದುವೆ ಮಾಡಿಕೊಂಡಿರುವವರಿಗೆ ನನ್ನ ಅಪ್ಪಣೆ ಅಲ್ಲ, ನಿಜವಾಗಿ ಕರ್ತದೇವರ ಅಪ್ಪಣೆಯಾಗಿದೆ: ಏನೆಂದರೆ, ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು.
De gifte byder jeg, dog ikke jeg, men Herren, at en hustru ikke skal skille sig fra sin mann;
11 ಒಂದು ವೇಳೆ ಅಗಲಿದರೆ ಆಕೆಯು ಮದುವೆಯಿಲ್ಲದೆ ಇರಬೇಕು. ಇಲ್ಲವೆ ಗಂಡನ ಸಂಗಡ ಸಂಧಾನವಾಗಬೇಕು ಮತ್ತು ಗಂಡನು ಹೆಂಡತಿಯನ್ನು ಬಿಟ್ಟುಬಿಡಬಾರದು.
men er hun skilt fra ham, da vedbli hun å være ugift eller forlike sig med sin mann - og at en mann ikke skal skille sig fra sin hustru.
12 ಉಳಿದವರಿಗೆ ಕರ್ತ ದೇವರಿಂದ ಮಾತು ಇಲ್ಲವಾದರೂ ನಾನು ಹೇಳುವುದೇನೆಂದರೆ: ಒಬ್ಬ ಸಹೋದರನಿಗೆ ಕ್ರೈಸ್ತ ವಿಶ್ವಾಸಿಯಲ್ಲದ ಹೆಂಡತಿಯಿರಲಾಗಿ, ಆಕೆ ಅವನೊಂದಿಗೆ ಬಾಳುವುದಕ್ಕೆ ಸಮ್ಮತಿಸಿದರೆ, ಅವನು ಆಕೆಯನ್ನು ಬಿಡದಿರಲಿ.
Til de andre sier jeg, ikke Herren: Dersom en bror har en vantro hustru, og hun samtykker i å bo hos ham, da skille han sig ikke fra henne!
13 ಒಬ್ಬ ಸ್ತ್ರೀಗೆ ಅವಿಶ್ವಾಸಿಯಾದ ಗಂಡನಿರಲಾಗಿ ಅವನು ಆಕೆಯೊಂದಿಗೆ ಬಾಳುವುದಕ್ಕೆ ಸಮ್ಮತಿಸಿದರೆ, ಆಕೆಯು ಅವನನ್ನು ಬಿಡದಿರಲಿ.
og om en hustru har en vantro mann, og denne samtykker i å bo hos henne, da skille hun sig ikke fra sin mann!
14 ಏಕೆಂದರೆ, ಅವಿಶ್ವಾಸಿಯಾದ ಗಂಡನು ವಿಶ್ವಾಸಿಯಾದ ತನ್ನ ಹೆಂಡತಿಯಿಂದ ಮತ್ತು ಅವಿಶ್ವಾಸಿಯಾದ ಹೆಂಡತಿಯು ವಿಶ್ವಾಸಿಯಾದ ತನ್ನ ಗಂಡನಿಂದ ದೇವಜನರೊಂದಿಗೆ ಸಂಬಂಧವುಳ್ಳವರಾಗಿದ್ದಾರೆ. ಹಾಗಲ್ಲದಿದ್ದರೆ, ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ದೇವರಿಗಾಗಿ ಪವಿತ್ರರಾಗಿದ್ದಾರೆ.
For den vantro mann er helliget ved sin hustru, og den vantro hustru er helliget ved broren; ellers var jo eders barn urene, men nu er de hellige.
15 ಆದರೆ ಅವಿಶ್ವಾಸಿಯಾದವರು ಅಗಲಬೇಕೆಂದಿದ್ದರೆ ಅಗಲಿ ಹೋಗಲಿ. ಇಂಥಾ ವಿಷಯಗಳಲ್ಲಿ ವಿಶ್ವಾಸಿಯಾದ ಸಹೋದರನಾಗಲೀ, ಸಹೋದರಿಯಾಗಲೀ ಬದ್ಧರಲ್ಲ. ಸಮಾಧಾನದಲ್ಲಿ ಬಾಳುವುದಕ್ಕೆ ದೇವರು ನಮ್ಮನ್ನು ಕರೆದಿದ್ದಾರೆ.
Men dersom den vantro skiller sig, da får han så gjøre; broren eller søsteren er ikke trælbundet i slike ting, men Gud har kalt oss til fred.
16 ಸ್ತ್ರೀಯೇ, ನಿನ್ನ ಗಂಡನನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು? ಪುರುಷನೇ, ನಿನ್ನ ಹೆಂಡತಿಯನ್ನು ರಕ್ಷಿಸುವೆಯೋ ಏನೋ ನಿನಗೇನು ಗೊತ್ತು?
For hvad vet du, hustru, om du kan frelse din mann? eller hvad vet du, mann, om du kan frelse din hustru?
17 ಆದರೂ ಕರ್ತದೇವರು ಪ್ರತಿಯೊಬ್ಬನಿಗೆ ನೇಮಿಸಿದಂತೆಯೂ ದೇವರು ಪ್ರತಿಯೊಬ್ಬನನ್ನು ಕರೆದಂತೆಯೂ ನಡೆದುಕೊಳ್ಳಲಿ. ಎಲ್ಲಾ ಸಭೆಗಳಲ್ಲಿಯೂ ಇರಬೇಕೆಂದು ನಾನು ಕೊಡುವ ನಿಯಮವು ಇದೇ.
Dog vandre hver således som Herren har gitt ham, som Gud har kalt ham! Og således foreskriver jeg i alle menigheter.
18 ಸುನ್ನತಿ ಮಾಡಿಸಿಕೊಂಡವನು ದೇವರ ಕರೆಹೊಂದಿದ್ದರೆ, ಅವನು ಸುನ್ನತಿಯಿಲ್ಲದವನಂತೆ ಇರಬಾರದು. ಸುನ್ನತಿ ಮಾಡಿಸಿಕೊಳ್ಳದವನು ದೇವರ ಕರೆಹೊಂದಿದ್ದರೆ, ಅವನು ಸುನ್ನತಿ ಮಾಡಿಸಿಕೊಳ್ಳಬೇಕಾಗಿಲ್ಲ.
En blev kalt som omskåret, han dra ikke forhud over; en er blitt kalt som uomskåret, han la sig ikke omskjære!
19 ಸುನ್ನತಿಯಿದ್ದರೂ ಪ್ರಯೋಜನವಿಲ್ಲ, ಸುನ್ನತಿಯಿಲ್ಲದಿದ್ದರೂ ಪ್ರಯೋಜನವಿಲ್ಲ. ದೇವರ ಆಜ್ಞೆಗಳನ್ನು ಕೈಗೊಳ್ಳುವುದೇ ಪ್ರಯೋಜನಕರ.
Det kommer ikke an på omskjærelse, og det kommer ikke an på forhud, men på å holde Guds bud.
20 ಪ್ರತಿಯೊಬ್ಬನು ದೇವರು ಕರೆದಾಗ, ಯಾವ ಸ್ಥಿತಿಯಲ್ಲಿದ್ದನೋ ಆ ಸ್ಥಿತಿಯಲ್ಲಿಯೇ ಇರಲಿ.
Hver bli i det kall han blev kalt i!
21 ದೇವರು ಕರೆದಾಗ ನೀನು ಮತ್ತೊಬ್ಬನ ದಾಸನಾಗಿದ್ದೀಯೋ? ಅದಕ್ಕೆ ಚಿಂತೆ ಮಾಡಬೇಡ. ಆದರೆ ಬಿಡುಗಡೆಯಾಗುವುದಕ್ಕೆ ನೀನು ಶಕ್ತನಾದರೆ ಅದನ್ನೇ ಮಾಡು.
Blev du kalt som træl, da gjør dig ingen sorg av det; men kan du også bli fri, så gjør heller bruk derav!
22 ದೇವರು ಕರೆದಾಗ ಒಬ್ಬನು ದಾಸನಾಗಿದ್ದರೂ, ಅವನು ಕರ್ತ ದೇವರಲ್ಲಿ ಸ್ವತಂತ್ರನು. ಅದೇ ಪ್ರಕಾರ, ಒಬ್ಬನು ಸ್ವತಂತ್ರನಾಗಿದ್ದಾಗ ಕರ್ತದೇವರ ಕರೆಹೊಂದಿದ್ದರೆ, ಅವನು ಕ್ರಿಸ್ತನಿಗೆ ದಾಸನು.
For den træl som er kalt i Herren, er Herrens frigitte; likeså er også den frie som er kalt, Kristi træl.
23 ನಿಮ್ಮನ್ನು ಕ್ರಯಕ್ಕೆ ಕೊಳ್ಳಲಾಗಿದೆ. ಆದ್ದರಿಂದ ಮನುಷ್ಯರಿಗೆ ಗುಲಾಮರಾಗಬೇಡಿರಿ.
I er dyrt kjøpt; bli ikke menneskers træler!
24 ಪ್ರಿಯರೇ, ದೇವರು ಕರೆದಾಗ ಒಬ್ಬನು ಯಾವ ಸ್ಥಿತಿಯಲ್ಲಿ ಇದ್ದನೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ನೆಲೆಸಿರಲಿ.
I den stand enhver blev kalt i, brødre, i den bli han hos Gud!
25 ಕನ್ಯೆಯರನ್ನು ಕುರಿತು ಕರ್ತ ಯೇಸುವಿನಿಂದ ನನಗೆ ಯಾವ ಆಜ್ಞೆಯೂ ಇಲ್ಲ. ಆದರೂ ಕರ್ತ ಯೇಸುವಿನಿಂದ ಕರುಣೆಯನ್ನು ಪಡೆದು ನಂಬಿಗಸ್ತನಾಗಿರುವ ನಾನು ನನ್ನ ಅಭಿಪ್ರಾಯವನ್ನು ಕೊಡುತ್ತೇನೆ.
Om jomfruene har jeg ikke noget bud av Herren, men jeg sier min mening som en som har fått miskunn av Herren til å være troverdig.
26 ಇಂದಿನ ಕಷ್ಟಕಾಲದ ಪರಿಸ್ಥಿತಿಯಲ್ಲಿ ನೀವು ಇದ್ದ ಹಾಗೇ ಇರುವುದು ನಿಮಗೆ ಒಳ್ಳೆಯದೆಂದು ನಾನು ಭಾವಿಸುತ್ತೇನೆ.
Jeg mener da dette at det for den nærværende nøds skyld er godt for et menneske å leve således.
27 ನಿನಗೆ ಹೆಂಡತಿಯಿದ್ದರೆ? ವಿಚ್ಛೇದನಕ್ಕೆ ಯತ್ನಿಸಬೇಡ. ನೀನು ಹೆಂಡತಿಯಿಂದ ಬಿಡುಗಡೆಯಾಗಿದ್ದರೆ? ಹೆಂಡತಿಗಾಗಿ ಹುಡುಕಬೇಡ.
Er du bundet til en kvinne, da søk ikke å bli løst fra henne; er du ikke bundet til en kvinne, da søk ikke en kvinne!
28 ಒಂದು ವೇಳೆ ನೀನು ಮದುವೆ ಮಾಡಿಕೊಂಡರೆ, ಅದು ಪಾಪವಲ್ಲ. ಕನ್ಯೆಯು ಮದುವೆ ಮಾಡಿಕೊಂಡರೆ, ಅದು ಸಹ ಪಾಪವಲ್ಲ. ಆದರೆ ಮದುವೆ ಮಾಡಿಕೊಳ್ಳುವವರು ಈ ಜೀವನದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುವರು. ನಾನು ನಿಮ್ಮನ್ನು ಇದರಿಂದ ತಪ್ಪಿಸಬೇಕೆಂದು ಅಪೇಕ್ಷಿಸುತ್ತೇನೆ.
Men om du også gifter dig, synder du ikke, og om jomfruen gifter sig, synder hun ikke; men de som det gjør, vil få trengsel for sitt kjød, jeg derimot vil spare eder.
29 ಪ್ರಿಯರೇ, ಸಮಯವು ಕೊಂಚವಾಗಿರುವುದರಿಂದ ಇನ್ನು ಮೇಲೆ, ಮದುವೆಯಾದವರು ಮದುವೆಯಾಗದವರಂತೆಯೂ
Men dette sier jeg, brødre: Tiden er kort, så at herefter de som har hustruer, skal være som de som ingen har,
30 ದುಃಖಪಡುವವರು ದುಃಖಪಡದವರಂತೆಯೂ ಆನಂದ ಪಡುವವರು ಆನಂದಪಡದವರಂತೆಯೂ ವಸ್ತುಗಳ್ನು ಕೊಂಡುಕೊಳ್ಳುವವರು ತಾವು ಕೊಂಡುಕೊಂಡದ್ದು ತಮ್ಮದಲ್ಲ ಎಂಬಂತೆಯೂ
og de som gråter, som de som ikke gråter, og de som gleder sig, som de som ikke gleder sig, og de som kjøper, som de som ikke eier noget,
31 ಲೋಕದ ವಸ್ತುಗಳನ್ನು ಉಪಯೋಗಿಸುವವರು ಅದರಲ್ಲಿಯೇ ಮಗ್ನರಾಗದಿರಲಿ. ಏಕೆಂದರೆ ಈಗಿರುವ ಪ್ರಪಂಚ ಗತಿಸಿಹೋಗುತ್ತಿದೆ.
og de som bruker verden, som de som ikke bruker den; for denne verdens skikkelse forgår.
32 ನೀವು ಚಿಂತೆ ಇಲ್ಲದೆ ಇರಬೇಕೆಂಬುದು ನನ್ನ ಇಷ್ಟ. ಮದುವೆ ಆಗದವನು ಕರ್ತ ಯೇಸುವನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತ ಯೇಸುವಿನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ.
Jeg vil gjerne at I skal være fri for omsorg. Den ugifte har omsorg for det som hører Herren til, hvorledes han kan tekkes Herren;
33 ಮದುವೆಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಮಗ್ನನಾಗಿರುತ್ತಾನೆ.
men den gifte har omsorg for det som hører verden til, hvorledes han kan tekkes sin hustru.
34 ಇದರಿಂದ ಅವನ ಆಸಕ್ತಿಗಳಲ್ಲಿ ಭಿನ್ನತೆಯಿರುತ್ತದೆ. ಮದುವೆಯಾಗದ ಮಹಿಳೆ ಅಥವಾ ಕನ್ಯೆ ದೇಹಾತ್ಮಗಳಲ್ಲಿ ಕರ್ತ ಯೇಸುವಿಗೆ ಸಮರ್ಪಿತರಾಗಿರುವ ಉದ್ದೇಶ ಹೊಂದಿದವರಾಗಿ, ಕರ್ತ ಯೇಸುವಿನ ಕಾರ್ಯಗಳಲ್ಲಿ ಆಸಕ್ತಳಾಗಿರುತ್ತಾರೆ. ಆದರೆ ಮದುವೆಯಾದವಳು, ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ.
Og det er forskjell på hustruen og jomfruen; den ugifte kvinne har omsorg for det som hører Herren til, at hun kan være hellig både på legeme og ånd; men den gifte kvinne har omsorg for det som hører verden til, hvorledes hun kan tekkes sin mann.
35 ನಾನು ನಿಮಗೆ ಬಂಧನ ಹಾಕಬೇಕೆಂದು ಇದನ್ನು ಹೇಳದೆ, ಗಮನ ಸೆಳೆಯದ ಭಕ್ತಿಯಿಂದ ಕರ್ತ ಯೇಸುವಿನ ಸೇವೆಯನ್ನು ಮಾಡುವವರಾಗಿ ನೀವು ಜೀವಿಸಬೇಕೆಂದು ನಿಮ್ಮ ಒಳ್ಳೆಯದಕ್ಕಾಗಿಯೇ ಹೇಳುತ್ತಿದ್ದೇನೆ.
Dette sier jeg til eders eget gagn, ikke for å sette en snare for eder, men for å fremme det som sømmer sig: å henge fast ved Herren.
36 ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವುದು ಮರ್ಯಾದೆಯಿಲ್ಲವೆಂದು ಭಾವಿಸಿದರೆ, ಆಕೆಗೆ ಪ್ರಾಯ ಕಳೆದು ಹೋಗುತ್ತಿದ್ದರೆ, ಮದುವೆಯಾಗುವುದು ಅವಶ್ಯವೆಂದು ಅವನಿಗೆ ಕಂಡರೆ, ತನ್ನಿಷ್ಟದಂತೆ ಮಾಡಲಿ. ಇದರಿಂದ ಅವನು ಪಾಪಮಾಡುವುದಿಲ್ಲ, ಮದುವೆ ಮಾಡಿಕೊಡಲಿ.
Men dersom nogen mener at han gjør urett mot sin ugifte datter om hun er over ungdomsalderen, og det må så være, han gjøre det han vil; han synder ikke; la dem gifte sig!
37 ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ, ತನ್ನಿಷ್ಟವನ್ನು ನಡೆಸುವುದಕ್ಕೆ ಹಕ್ಕುಳ್ಳವನಾಗಿ ತನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ತನ್ನೊಳಗೆ ನಿರ್ಣಯಿಸಿಕೊಂಡರೆ, ಅವನು ಹಾಗೆ ಮಾಡುವುದು ಒಳ್ಳೆಯದು.
Men den som står fast i sitt hjerte og ikke har noget som tvinger ham, men har frihet til å følge sin egen vilje og har satt sig dette fore i sitt hjerte at han vil holde sin datter ugift, han gjør vel.
38 ಹಾಗಾದರೆ, ತನ್ನ ಮಗಳನ್ನು ಮದುವೆ ಮಾಡಿಕೊಡುವವನು ಒಳ್ಳೆಯದನ್ನು ಮಾಡುತ್ತಾನೆ. ಮದುವೆ ಮಾಡಿಕೊಡದೆ ಇರುವವನು ಉತ್ತಮವಾದುದನ್ನು ಮಾಡುತ್ತಾನೆ.
Så gjør da den vel som bortgifter, og den gjør bedre som ikke bortgifter.
39 ಹೆಂಡತಿಯು ತನ್ನ ಗಂಡನು ಜೀವದಿಂದಿರುವ ತನಕ ಅವನಿಗೆ ಬದ್ಧಳಾಗಿದ್ದಾಳೆ. ಗಂಡನು ಸತ್ತಿದ್ದರೆ, ಆಕೆಯು ತನಗೆ ಬೇಕಾದವನನ್ನು ಮದುವೆ ಮಾಡಿಕೊಳ್ಳುವುದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೆ ಆ ವ್ಯಕ್ತಿಯು ಕರ್ತ ದೇವರಲ್ಲಿ ವಿಶ್ವಾಸಿಯಾಗಿರಬೇಕು.
En hustru er bundet så lenge hennes mann lever; men når hennes mann er hensovet, da har hun frihet til å gifte sig med hvem hun vil, bare det skjer i Herren.
40 ಆಕೆ ಮದುವೆ ಮಾಡಿಕೊಳ್ಳದೆ ಇರುವುದು ಬಹಳ ಸಂತೋಷಕರವಾದದ್ದೆಂದು ನನ್ನ ಅಭಿಪ್ರಾಯ. ನನಗೂ ದೇವರಾತ್ಮ ಇರುವುದಾಗಿ ಭಾವಿಸುತ್ತೇನೆ.
Men lykkeligere er hun om hun blir som hun er, efter min mening; men jeg tror også å ha Guds Ånd.