< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 6 >

1 ಲೇವಿಯ ಪುತ್ರರು: ಗೇರ್ಷೋನ್, ಕೊಹಾತ್, ಮೆರಾರೀ.
ଲେବୀର ପୁତ୍ର ଗେର୍ଶୋନ‍, କହାତ ଓ ମରାରି।
2 ಕೊಹಾತನ ಪುತ್ರರು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲನು.
କହାତର ପୁତ୍ର ଅମ୍ରାମ୍‍, ଯିଷ୍‍ହର ଓ ହିବ୍ରୋଣ ଓ ଉଷୀୟେଲ।
3 ಅಮ್ರಾಮನ ಪುತ್ರರು: ಆರೋನನು, ಮೋಶೆಯು, ಮಿರ್ಯಾಮಳು. ಆರೋನನ ಪುತ್ರರು: ನಾದಾಬ್, ಅಬೀಹೂ, ಎಲಿಯಾಜರ್, ಈತಾಮಾರ್.
ଅମ୍ରାମ୍‍ର ସନ୍ତାନ ହାରୋଣ ଓ ମୋଶା ଓ ମରୀୟମ। ପୁଣି, ହାରୋଣର ପୁତ୍ର ନାଦବ୍‍ ଓ ଅବୀହୂ, ଇଲୀୟାସର ଓ ଈଥାମର।
4 ಎಲಿಯಾಜರನು ಫೀನೆಹಾಸನನ್ನು ಪಡೆದನು, ಫೀನೆಹಾಸನು ಅಬೀಷೂವನನ್ನು ಪಡೆದನು,
ଇଲୀୟାସର ପୀନହସ୍‍କୁ ଜାତ କଲା, ପୀନହସ୍‍ ଅବୀଶୂୟକୁ ଜାତ କଲା;
5 ಅಬೀಷೂವನು ಬುಕ್ಕೀಯನನ್ನು ಪಡೆದನು, ಬುಕ್ಕೀಯನು ಉಜ್ಜೀಯನನ್ನು ಪಡೆದನು,
ପୁଣି, ଅବୀଶୂୟ ବୁକ୍କିକୁ ଜାତ କଲା ଓ ବୁକ୍କୁ ଉଷିକୁ ଜାତ କଲା;
6 ಉಜ್ಜೀಯನು ಜೆರಹ್ಯನನ್ನು ಪಡೆದನು, ಜೆರಹ್ಯನು ಮೆರಾಯೋತನನ್ನು ಪಡೆದನು,
ଆଉ ଉଷି ସରହୀୟକୁ ଜାତ କଲା ଓ ସରହୀୟ ମରାୟୋତ୍‍କୁ ଜାତ କଲା;
7 ಮೆರಾಯೋತನು ಅಮರ್ಯನನ್ನು ಪಡೆದನು, ಅಮರ್ಯನು ಅಹೀಟೂಬನನ್ನು ಪಡೆದನು,
ମରାୟୋତ୍‍ ଅମରୀୟକୁ ଜାତ କଲା, ଅମରୀୟ ଅହୀଟୂବ୍‍କୁ ଜାତ କଲା।
8 ಅಹೀಟೂಬನು ಚಾದೋಕನನ್ನು ಪಡೆದನು, ಚಾದೋಕನು ಅಹೀಮಾಚನನ್ನು ಪಡೆದನು,
ଆଉ ଅହୀଟୂବ୍‍ ସାଦୋକକୁ ଜାତ କଲା, ସାଦୋକ ଅହୀମାସ୍‍କୁ ଜାତ କଲା;
9 ಅಹೀಮಾಚನು ಅಜರ್ಯನನ್ನು ಪಡೆದನು, ಅಜರ್ಯನು ಯೋಹಾನಾನನನ್ನು ಪಡೆದನು;
ଅହୀମାସ୍‍ ଅସରୀୟକୁ ଜାତ କଲା, ଅସରୀୟ ଯୋହାନନ୍‍କୁ ଜାତ କଲା;
10 ಯೋಹಾನಾನನು ಅಜರ್ಯನನ್ನು ಪಡೆದನು. ಅಜರ್ಯನು ಯೆರೂಸಲೇಮಿನಲ್ಲಿ ಸೊಲೊಮೋನನು ಕಟ್ಟಿಸಿದ ದೇವಾಲಯದೊಳಗೆ ಯಾಜಕ ಸೇವೆ ಮಾಡುತ್ತಿದ್ದವನು.
ଆଉ ଯୋହାନନ୍‍ ଅସରୀୟକୁ ଜାତ କଲା, ଏହି ଅସରୀୟ ଯିରୂଶାଲମରେ ଶଲୋମନ ନିର୍ମିତ ମନ୍ଦିରରେ ଯାଜକ କର୍ମ କଲା।
11 ಅಜರ್ಯನು ಅಮರ್ಯನನ್ನು ಪಡೆದನು, ಅಮರ್ಯನು ಅಹೀಟೂಬನನ್ನು ಪಡೆದನು,
ଅସରୀୟ ଅମରୀୟକୁ ଜାତ କଲା, ଅମରୀୟ ଅହୀଟୂବ୍‍କୁ ଜାତ କଲା;
12 ಅಹೀಟೂಬನು ಚಾದೋಕನನ್ನು ಪಡೆದನು, ಚಾದೋಕನು ಶಲ್ಲೂಮನನ್ನು ಪಡೆದನು,
ପୁଣି, ଅହୀଟୂବ୍‍ ସାଦୋକକୁ ଜାତ କଲା, ସାଦୋକ ଶଲ୍ଲୁମ୍‍କୁ ଜାତ କଲା;
13 ಶಲ್ಲೂಮನು ಹಿಲ್ಕೀಯನನ್ನು ಪಡೆದನು, ಹಿಲ್ಕೀಯನು ಅಜರ್ಯನನ್ನು ಪಡೆದನು,
ଶଲ୍ଲୁମ୍‍ ହିଲ୍‍କୀୟକୁ ଜାତ କଲା, ହିଲ୍‍କୀୟ ଅସରୀୟକୁ ଜାତ କଲା;
14 ಅಜರ್ಯನು ಸೆರಾಯನನ್ನು ಪಡೆದನು, ಸೆರಾಯನು ಯೆಹೋಚಾದಾಕನನ್ನು ಪಡೆದನು,
ଆଉ ଅସରୀୟ ସରାୟକୁ ଜାତ କଲା ଓ ସରାୟ ଯିହୋଷାଦକଙ୍କୁ ଜାତ କଲା।
15 ಯೆಹೋವ ದೇವರು ನೆಬೂಕದ್ನೆಚ್ಚರನ ಕೈಯಿಂದ ಯೆಹೂದ, ಯೆರೂಸಲೇಮಿನವರನ್ನು ಸೆರೆಯಾಗಿ ಒಯ್ದಾಗ ಯೆಹೋಚಾದಾಕನು ಸೆರೆಯಾಗಿ ಹೋದನು.
ପୁଣି, ସଦାପ୍ରଭୁ ନବୂଖଦ୍‍ନିତ୍ସରର ହସ୍ତ ଦ୍ୱାରା ଯିହୁଦା ଓ ଯିରୂଶାଲମକୁ ନିର୍ବାସନ କରିବା ସମୟରେ ଏହି ଯିହୋଷାଦକ ବନ୍ଦୀ ହୋଇଗଲା।
16 ಲೇವಿಯ ಪುತ್ರರು: ಗೇರ್ಷೋಮ್, ಕೊಹಾತ್, ಮೆರಾರೀ ಎಂಬುವರು.
ଲେବୀର ପୁତ୍ର ଗେର୍ଶୋମ, କହାତ ଓ ମରାରି ଥିଲେ।
17 ಗೇರ್ಷೋಮನ ಪುತ್ರರ ಹೆಸರುಗಳು: ಲಿಬ್ನೀ, ಶಿಮ್ಮೀ.
ଗେର୍ଶୋମର ପୁତ୍ରମାନଙ୍କ ନାମ ଲିବ୍‍ନି ଓ ଶିମୀୟି।
18 ಕೊಹಾತನ ಪುತ್ರರು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್.
କହାତର ପୁତ୍ର ଅମ୍ରାମ୍‍, ଯିଷ୍‍ହର, ହିବ୍ରୋଣ ଓ ଉଷୀୟେଲ।
19 ಮೆರಾರೀಯ ಪುತ್ರರು: ಮಹ್ಲೀ, ಮೂಷೀ. ಲೇವಿಯರ ಸಂತತಿಗಳು ತಮ್ಮ ಪಿತೃಗಳ ಪ್ರಕಾರವಾಗಿ:
ମରାରିର ପୁତ୍ର ମହଲି ଓ ମୂଶି; ଆଉ ଆପଣା ଆପଣା ପିତୃବଂଶାନୁସାରେ ଏସମସ୍ତେ ଲେବୀୟ ଗୋଷ୍ଠୀ।
20 ಗೇರ್ಷೋಮಿನವರು: ಅವನ ಮಗ ಲಿಬ್ನೀ, ಅವನ ಮಗ ಯಹತ್, ಅವನ ಮಗ ಜಿಮ್ಮ,
ଗେର୍ଶୋମର (ସନ୍ତାନ); ତାହାର ପୁତ୍ର ଲିବ୍‍ନି, ତାହାର ପୁତ୍ର ଯହତ୍‍, ତାହାର ପୁତ୍ର ସିମ୍ମ;
21 ಅವನ ಮಗ ಯೋವಾಹ, ಅವನ ಮಗ ಇದ್ದೋ, ಅವನ ಮಗನಾದ ಜೆರಹ, ಅವನ ಮಗ ಯೆವತ್ರೈ.
ତାହାର ପୁତ୍ର ଯୋୟାହ, ତାହାର ପୁତ୍ର ଇଦ୍ଦୋ, ତାହାର ପୁତ୍ର ସେରହ, ତାହାର ପୁତ୍ର ଯୀୟତ୍ରୟ।
22 ಕೊಹಾತನ ಪುತ್ರರು: ಅವನ ಮಗ ಅಮ್ಮೀನಾದಾಬ್, ಅವನ ಮಗ ಕೋರಹ, ಅವನ ಮಗ ಅಸ್ಸೀರ್,
କହାତର ସନ୍ତାନ; ତାହାର ପୁତ୍ର ଅମ୍ମୀନାଦବ, ତାହାର ପୁତ୍ର କୋରହ, ତାହାର ପୁତ୍ର ଅସୀର;
23 ಅವನ ಮಗ ಎಲ್ಕಾನಾ, ಅವನ ಮಗ ಎಬ್ಯಾಸಾಫ್, ಅವನ ಮಗ ಅಸ್ಸೀರ್,
ତାହାର ପୁତ୍ର ଇଲ୍‍କାନା, ତାହାର ପୁତ୍ର ଅବୀୟାସଫ, ତାହାର ପୁତ୍ର ଅସୀର;
24 ಅವನ ಮಗ ತಹತ್, ಅವನ ಮಗ ಉರೀಯೇಲ್, ಅವನ ಮಗ ಉಜ್ಜೀಯ, ಅವನ ಮಗ ಸೌಲ್.
ତାହାର ପୁତ୍ର ତହତ, ତାହାର ପୁତ୍ର ଊରୀୟେଲ, ତାହାର ପୁତ୍ର ଉଷୀୟ, ତାହାର ପୁତ୍ର ଶୌଲ।
25 ಎಲ್ಕಾನನ ವಂಶಜರು: ಅಮಾಸೈ, ಅಹಿಮೋತ್,
ଇଲ୍‍କାନାର ସନ୍ତାନ ଅମାସୟ ଓ ଅହୀମୋତ୍‍।
26 ಅವನ ಮಗ ಎಲ್ಕಾನ, ಅವನ ಮಗ ಚೋಫೈ, ಅವನ ಮಗ ನಹತ್,
ଇଲ୍‍କାନା; ଇଲ୍‍କାନାର ସନ୍ତାନ; ତାହାର ପୁତ୍ର ସୋଫୀ, ତାହାର ପୁତ୍ର ନହତ୍‍;
27 ಅವನ ಮಗ ಎಲೀಯಾಬ್, ಅವನ ಮಗ ಯೆರೋಹಾಮ್, ಅವನ ಮಗ ಎಲ್ಕಾನ, ಅವನ ಮಗ ಸಮುಯೇಲ್.
ତାହାର ପୁତ୍ର ଇଲୀୟାବ୍‍, ତାହାର ପୁତ୍ର ଯିରୋହମ, ତାହାର ପୁତ୍ର ଇଲ୍‍କାନା।
28 ಸಮುಯೇಲನ ಪುತ್ರರು: ಚೊಚ್ಚಲ ಮಗ ವಷ್ಣಿ ಎಂಬ ಯೋಯೇಲ್ ಮತ್ತು ಎರಡನೆಯ ಮಗ ಅಬೀಯ.
ଶାମୁୟେଲଙ୍କର ସନ୍ତାନ; ପ୍ରଥମଜାତ ଯୋୟେଲ ଓ ଦ୍ୱିତୀୟ ଅବୀୟ।
29 ಮೆರಾರೀಯ ವಂಶಜರು: ಮಹ್ಲೀ, ಅವನ ಮಗ ಲಿಬ್ನೀ, ಅವನ ಮಗ ಶಿಮ್ಮಿ; ಅವನ ಮಗ ಉಜ್ಜ,
ମରାରିର ସନ୍ତାନ ମହଲି, ତାହାର ପୁତ୍ର ଲିବ୍‍ନି, ତାହାର ପୁତ୍ର ଶିମୀୟି, ତାହାର ପୁତ୍ର ଉଷଃ;
30 ಅವನ ಮಗ ಶಿಮ್ಮಾ, ಅವನ ಮಗ ಹಗ್ಗೀಯ, ಅವನ ಮಗ ಅಸಾಯ.
ତାହାର ପୁତ୍ର ଶିମୀୟ, ତାହାର ପୁତ୍ର ହଗୀୟ, ତାହାର ପୁତ୍ର ଅସାୟ।
31 ಮಂಜೂಷವನ್ನು ನೆಲೆಗೊಳಿಸಿದ ತರುವಾಯ ದಾವೀದನು ಯೆಹೋವ ದೇವರ ಮನೆಯಲ್ಲಿ ವಾದ್ಯಗಾರರನ್ನು ನೇಮಿಸಿದನು.
(ନିୟମ)ସିନ୍ଦୁକ ବିଶ୍ରାମ-ସ୍ଥାନ ପାଇଲା ଉତ୍ତାରେ ଦାଉଦ ଯେଉଁମାନଙ୍କୁ ସଦାପ୍ରଭୁଙ୍କ ଗୃହର ଗାନ-ସେବାରେ ନିଯୁକ୍ତ କରିଥିଲେ, ସେମାନଙ୍କର ନାମ ଏହି।
32 ಸೊಲೊಮೋನನು ಯೆರೂಸಲೇಮಿನಲ್ಲಿ ಯೆಹೋವ ದೇವರ ಆಲಯವನ್ನು ಕಟ್ಟುವವರೆಗೆ, ಈ ವಾದ್ಯಗಾರರು ಸಭೆಯ ಗುಡಾರದ ನಿವಾಸದ ಮುಂದೆ ಸೇವಿಸುತ್ತಾ ಇದ್ದರು. ಆಗ ಅವರು ತಮ್ಮ ಸೇವೆಯಲ್ಲಿ ಕ್ರಮದ ಪ್ರಕಾರ ಕಾಯುತ್ತಿದ್ದರು.
ପୁଣି, ଶଲୋମନ ଯିରୂଶାଲମରେ ସଦାପ୍ରଭୁଙ୍କ ଗୃହ ନିର୍ମାଣ ନ କରିବା ପର୍ଯ୍ୟନ୍ତ ସେମାନେ ସମାଗମ-ତମ୍ବୁରୂପ ଆବାସ ସମ୍ମୁଖରେ ଗାନ ଦ୍ୱାରା ପରିଚର୍ଯ୍ୟା କଲେ ଓ ସେମାନେ ଆପଣା ଆପଣା ପାଳି ଅନୁସାରେ ସ୍ୱ ସ୍ୱ ପଦରେ ସେବା କଲେ।
33 ಸೇವೆಗೆ ಆಯ್ಕೆಯಾದ ವ್ಯಕ್ತಿಗಳು ಮತ್ತು ಅವರ ಪುತ್ರರ ಹೆಸರುಗಳು ಹೀಗಿವೆ: ಕೊಹಾತ್ಯರ ಮಕ್ಕಳಲ್ಲಿ ಸಂಗೀತಗಾರನಾದ ಹೇಮಾನನು. ಅವನು ಯೋಯೇಲನ ಮಗನು, ಅವನು ಸಮುಯೇಲನ ಮಗನು,
ଆଉ ସେହି ସେବାକାରୀ ଲୋକମାନେ ଓ ସେମାନଙ୍କ ସନ୍ତାନଗଣ, ଯଥା, କହାତୀୟ ସନ୍ତାନଗଣ ମଧ୍ୟରେ ହେମନ ଗାୟକ, ସେ ଯୋୟେଲର ପୁତ୍ର, ସେ ଶାମୁୟେଲଙ୍କର ପୁତ୍ର;
34 ಅವನು ಎಲ್ಕಾನನ ಮಗನು, ಅವನು ಯೆರೋಹಾಮನ ಮಗನು, ಅವನು ಎಲೀಯೇಲನ ಮಗನು, ಅವನು ತೋಹನ ಮಗನು,
ସେ ଇଲ୍‍କାନାର ପୁତ୍ର, ସେ ଯିରୋହମର ପୁତ୍ର, ସେ ଇଲୀୟେଲ୍‍ର ପୁତ୍ର, ସେ ତୋହର ପୁତ୍ର;
35 ಅವನು ಚೂಫನ ಮಗನು, ಅವನು ಎಲ್ಕಾನನ ಮಗನು, ಅವನು ಮಹತನ ಮಗನು, ಅವನು ಅಮಾಸೈಯ ಮಗನು,
ସେ ସୂଫର ପୁତ୍ର, ସେ ଇଲ୍‍କାନାର ପୁତ୍ର, ସେ ମାହତ୍‍ର ପୁତ୍ର, ସେ ଅମାସୟର ପୁତ୍ର;
36 ಅವನು ಎಲ್ಕಾನನ ಮಗನು, ಅವನು ಯೋಯೇಲನ ಮಗನು, ಅವನು ಅಜರ್ಯನ ಮಗನು, ಅವನು ಚೆಫನ್ಯನ ಮಗನು,
ସେ ଇଲ୍‍କାନାର ପୁତ୍ର, ସେ ଯୋୟେଲର ପୁତ୍ର, ସେ ଅସରୀୟର ପୁତ୍ର, ସେ ସଫନୀୟର ପୁତ୍ର;
37 ಅವನು ತಹತನ ಮಗನು, ಅವನು ಅಸ್ಸೀರನ ಮಗನು, ಅವನು ಎಬ್ಯಾಸಾಫನ ಮಗನು, ಅವನು ಕೋರಹನ ಮಗನು,
ସେ ତହତର ପୁତ୍ର, ସେ ଅସୀରର ପୁତ୍ର, ସେ ଅବୀୟାସଫର ପୁତ୍ର, ସେ କୋରହର ପୁତ୍ର;
38 ಅವನು ಇಚ್ಹಾರನ ಮಗನು, ಅವನು ಕೊಹಾತನ ಮಗನು, ಅವನು ಲೇವಿಯನ ಮಗನು, ಅವನು ಇಸ್ರಾಯೇಲನ ಮಗನು.
ସେ ଯିଷ୍‍ହରିର ପୁତ୍ର, ସେ କହାତର ପୁତ୍ର, ସେ ଲେବୀର ପୁତ୍ର, ସେ ଇସ୍ରାଏଲର ପୁତ୍ର।
39 ಹೇಮಾನನ ಬಲಗಡೆಯಲ್ಲಿ ನಿಲ್ಲುತ್ತಿದ್ದ ಅವನ ಸಹೋದರನಾದ ಆಸಾಫನು ಜೊತೆಸೇವಕನಾಗಿದ್ದನು. ಈ ಆಸಾಫನು ಬೆರೆಕ್ಯನ ಮಗನು, ಅವನು ಶಿಮ್ಮನ ಮಗನು.
ହେମନର ଭ୍ରାତା ଆସଫ ତାହାର ଦକ୍ଷିଣରେ ଠିଆ ହେଲା, ସେହି ଆସଫ ବେରିଖୀୟର ପୁତ୍ର, ସେ ଶିମୀୟର ପୁତ୍ର;
40 ಅವನು ಮೀಕಾಯೇಲನ ಮಗನು, ಅವನು ಬಾಸೇಯನ ಮಗನು, ಅವನು ಮಲ್ಕೀಯನ ಮಗನು,
ସେ ମୀଖାୟେଲର ପୁତ୍ର, ସେ ବାସେୟର ପୁତ୍ର, ସେ ମଲ୍‍କୀୟର ପୁତ୍ର;
41 ಅವನು ಎತ್ನಿಯ ಮಗನು, ಅವನು ಜೆರಹನ ಮಗನು, ಅವನು ಅದಾಯನ ಮಗನು,
ସେ ଇତ୍‍ନିର ପୁତ୍ର, ସେ ସେରହର ପୁତ୍ର, ସେ ଅଦାୟାର ପୁତ୍ର;
42 ಅವನು ಏತಾನನ ಮಗನು, ಅವನು ಜಿಮ್ಮನ ಮಗನು, ಅವನು ಶಿಮ್ಮಿಯ ಮಗನು,
ସେ ଏଥନ୍‍ର ପୁତ୍ର, ସେ ସିମ୍ମର ପୁତ୍ର, ସେ ଶିମୀୟିର ପୁତ୍ର।
43 ಅವನು ಯಹತನ ಮಗನು, ಅವನು ಗೇರ್ಷೋಮನ ಮಗನು, ಅವನು ಲೇವಿಯ ಮಗನು.
ସେ ଯହତ୍‍ର ପୁତ୍ର, ସେ ଗେର୍ଶୋମର ପୁତ୍ର, ସେ ଲେବୀର ପୁତ୍ର।
44 ಅವರ ಸಹೋದ್ಯೋಗಿ ಮೆರಾರೀಯ ಪುತ್ರರು ಎಡಗಡೆಯಲ್ಲಿ ನಿಂತಿದ್ದರು. ಏತಾನನು ಕೀಷೀಯ ಮಗನು, ಅವನು ಅಬ್ದೀಯ ಮಗನು, ಅವನು ಮಲ್ಲೂಕನ ಮಗನು,
ବାମ ଭାଗରେ ସେମାନଙ୍କ ଭ୍ରାତୃଗଣ ମରାରିର ସନ୍ତାନମାନେ ଠିଆ ହେଲେ; ଏଥନ୍‍ କୀଶିର ପୁତ୍ର, ସେ ଅବ୍‍ଦିର ପୁତ୍ର, ସେ ମଲ୍ଲୁକର ପୁତ୍ର;
45 ಅವನು ಹಷಬ್ಯನ ಮಗನು, ಅವನು ಅಮಚ್ಯನ ಮಗನು, ಅವನು ಹಿಲ್ಕೀಯನ ಮಗನು,
ସେ ହଶବୀୟର ପୁତ୍ର, ସେ ଅମତ୍‍ସୀୟର ପୁତ୍ର, ସେ ହିଲ୍‍କୀୟର ପୁତ୍ର;
46 ಅವನು ಅಮ್ಚೀಯ ಮಗನು, ಅವನು ಬಾನೀಯ ಮಗನು, ಅವನು ಶೆಮೆರನ ಮಗನು,
ସେ ଅମ୍ସିର ପୁତ୍ର, ସେ ବାନିର ପୁତ୍ର, ସେ ଶେମରର ପୁତ୍ର;
47 ಅವನು ಮಹ್ಲೀಯ ಮಗನು, ಅವನು ಮೂಷೀಯ ಮಗನು, ಅವನು ಮೆರಾರೀಯ ಮಗನು, ಅವನು ಲೇವಿಯ ಮಗನು.
ସେ ମହଲିର ପୁତ୍ର, ସେ ମୂଶିର ପୁତ୍ର, ସେ ମରାରିର ପୁତ୍ର, ସେ ଲେବୀର ପୁତ୍ର।
48 ಅವರ ಸಹೋದರರಾದ ಇತರ ಲೇವಿಯರು ದೇವರ ಮನೆಯ ಗುಡಾರದ ಸಮಸ್ತ ಸೇವೆಗೆ ನೇಮಕವಾಗಿದ್ದರು.
ସେମାନଙ୍କ ଭ୍ରାତୃଗଣ ଲେବୀୟମାନେ ପରମେଶ୍ୱରଙ୍କ ଗୃହରୂପ ଆବାସର ସମସ୍ତ ସେବାରେ ନିଯୁକ୍ତ ଥିଲେ।
49 ಆದರೆ ಆರೋನನೂ, ಅವನ ಪುತ್ರರೂ ದಹನಬಲಿಯ ಪೀಠದ ಮೇಲೆಯೂ, ಧೂಪವನ್ನು ಪೀಠದ ಮೇಲೆಯೂ ಅರ್ಪಿಸುತ್ತಿದ್ದರು. ದೇವರ ಸೇವಕನಾದ ಮೋಶೆ ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಅವರು ಮಹಾಪರಿಶುದ್ಧ ಸ್ಥಳದ ಸಮಸ್ತ ಕಾರ್ಯಕ್ಕೂ, ಇಸ್ರಾಯೇಲಿಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕೂ ನೇಮಕವಾಗಿದ್ದರು.
ମାତ୍ର ହାରୋଣ ଓ ତାଙ୍କର ପୁତ୍ରଗଣ ପରମେଶ୍ୱରଙ୍କ ସେବକ ମୋଶାଙ୍କର ସମସ୍ତ ଆଜ୍ଞା ପ୍ରମାଣେ ମହାପବିତ୍ର ସ୍ଥାନର ସମସ୍ତ କାର୍ଯ୍ୟ ନିମନ୍ତେ ଓ ଇସ୍ରାଏଲ ପାଇଁ ପ୍ରାୟଶ୍ଚିତ୍ତ କରିବା ନିମନ୍ତେ ହୋମାର୍ଥକ ବେଦି ଉପରେ ଓ ଧୂପାର୍ଥକ ବେଦି ଉପରେ ଉତ୍ସର୍ଗ କଲେ।
50 ಆರೋನನ ವಂಶಜರು: ಅವನ ಮಗನು ಎಲಿಯಾಜರನು, ಅವನ ಮಗನು ಫೀನೆಹಾಸನು, ಅವನ ಮಗನು ಅಬೀಷೂವನು,
ହାରୋଣଙ୍କର ସନ୍ତାନଗଣ; ହାରୋଣଙ୍କର ପୁତ୍ର ଇଲୀୟାସର, ତାହାର ପୁତ୍ର ପୀନହସ୍‍, ତାହାର ପୁତ୍ର ଅବୀଶୂୟ
51 ಅವನ ಮಗನು ಬುಕ್ಕೀಯು, ಅವನ ಮಗನು ಉಜ್ಜೀ, ಅವನ ಮಗನು ಜೆರಹ್ಯಾಹನು,
ତାହାର ପୁତ୍ର ବୁକ୍କି, ତାହାର ପୁତ୍ର ଉଷି, ତାହାର ପୁତ୍ର ସରହୀୟ;
52 ಅವನ ಮಗನು ಮೆರಾಯೋತನು, ಅವನ ಮಗನು ಅಮರ್ಯನು, ಅವನ ಮಗನು ಅಹೀಟೂಬನು,
ତାହାର ପୁତ୍ର ମରାୟୋତ୍‍, ତାହାର ପୁତ୍ର ଅମରୀୟ, ତାହାର ପୁତ୍ର ଅହୀଟୂବ୍‍;
53 ಅವನ ಮಗನು ಚಾದೋಕನು, ಅವನ ಮಗನು ಅಹೀಮಾಚನು.
ତାହାର ପୁତ୍ର ସାଦୋକ, ତାହାର ପୁତ୍ର ଅହୀମାସ୍‍।
54 ಕೊಹಾತನ ಗೋತ್ರದ ಆರೋನನ ವಂಶಜರಿಗೆ ನೇಮಕವಾದ ಪ್ರಾಂತ್ಯ ಇದು: ಅವರಿಗೆಂದು ಪ್ರತ್ಯೇಕಿಸಿದ ಪ್ರದೇಶದ ಪ್ರಥಮ ಚೀಟಿನ ಪಾಲನ್ನು ಅವರು ಪಡೆದುಕೊಂಡರು.
ଆଉ ସେମାନଙ୍କ ସ୍ୱ ସ୍ୱ ସୀମାରେ ଛାଉଣିର ସ୍ଥାପନାନୁସାରେ ଏହିସବୁ ସେମାନଙ୍କର ବସତି ସ୍ଥାନ। ଯଥା, ହାରୋଣଙ୍କର ସନ୍ତାନଗଣ କହାତୀୟ ଗୋଷ୍ଠୀର ପ୍ରଥମ ବାଣ୍ଟ ଥିଲା,
55 ಅವು ಯಾವುವೆಂದರೆ: ಕೊಹಾತ್ಯರ ಕುಟುಂಬಗಳಿಗೆ ಚೀಟು ಬಿದ್ದ ಪ್ರಕಾರ, ಯೆಹೂದ ದೇಶದಲ್ಲಿ ಹೆಬ್ರೋನ್ ಪಟ್ಟಣವೂ, ಅದರ ಸುತ್ತಲಿರುವ ಗೋಮಾಳಗಳೂ ಅವರಿಗೆ ದೊರೆತವು.
ଏହେତୁ ସେମାନଙ୍କୁ ଯିହୁଦା ଦେଶସ୍ଥ ହିବ୍ରୋଣ ଓ ତହିଁର ଚତୁର୍ଦ୍ଦିଗସ୍ଥ ତଳିଭୂମି ଦିଆଗଲା।
56 ಆದರೆ ಆ ಪಟ್ಟಣದ ಹೊಲಗಳನ್ನೂ, ಅದರ ಗ್ರಾಮಗಳನ್ನೂ, ಯೆಫುನ್ನೆಯ ಮಗ ಕಾಲೇಬನಿಗೆ ಕೊಟ್ಟರು.
ମାତ୍ର ନଗରର କ୍ଷେତ୍ର ଓ ତହିଁର ଗ୍ରାମସବୁ ଯିଫୁନ୍ନିର ପୁତ୍ର କାଲେବଙ୍କୁ ଦିଆଗଲା।
57 ಯೆಹೂದದ ಕುಲಗಳಲ್ಲಿ ಆರೋನನ ಪುತ್ರರಿಗೆ ಕೊಟ್ಟ ಪಟ್ಟಣಗಳು ಯಾವುವೆಂದರೆ: ಆಶ್ರಯ ನಗರವಾದ ಹೆಬ್ರೋನ್, ಲಿಬ್ನವೂ, ಯತ್ತೀರೂ, ಎಷ್ಟೆಮೋವವೂ, ಅವುಗಳ ಉಪನಗರಗಳೂ;
ପୁଣି, ହାରୋଣଙ୍କର ସନ୍ତାନମାନଙ୍କୁ ଆଶ୍ରୟ ନଗରସବୁ, ହିବ୍ରୋଣ; ଲିବ୍‍ନା, ତହିଁର ତଳିଭୂମି ଓ ଯତ୍ତୀର ଓ ଇଷ୍ଟିମୋୟ, ତହିଁର ତଳିଭୂମି;
58 ಹೀಲೇನ್, ದೆಬೀರ್,
ହିଲେନ୍‍, ତହିଁର ତଳିଭୂମି, ଦବୀର, ତହିଁର ତଳିଭୂମି;
59 ಆಷಾನ್, ಯುತಾಹ ಮತ್ತು ಬೇತ್ ಷೆಮೆಷ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು.
ଆଶନ୍‍, ତହିଁର ତଳିଭୂମି ଓ ବେଥ୍-ଶେମଶ, ତହିଁର ତଳିଭୂମି;
60 ಬೆನ್ಯಾಮೀನನ ಗೋತ್ರದಿಂದ ಕೊಟ್ಟವುಗಳು, ಗಿಬ್ಯೋನ್, ಗೆಬಾ, ಆಲೆಮೆತೂ, ಅನಾತೋತೂ, ಅದರ ಗೋಮಾಳುಗಳು. ಇವರ ಕುಟುಂಬಗಳಿಗೆ ದೊರಕಿದ ಎಲ್ಲಾ ಪಟ್ಟಣಗಳು ಹದಿಮೂರು.
ପୁଣି, ବିନ୍ୟାମୀନ୍ ବଂଶଠାରୁ ଗେବା, ତହିଁର ତଳିଭୂମି ଓ ଆଲେମତ୍‍, ତହିଁର ତଳିଭୂମି ଓ ଅନାଥୋତ୍‍, ତହିଁର ତଳିଭୂମି ଦିଆଗଲା। ସେମାନଙ୍କ ସମୁଦାୟ ବଂଶର ସର୍ବସୁଦ୍ଧା ତେର ନଗର ଥିଲା।
61 ಆ ಗೋತ್ರದ ಕುಟುಂಬಗಳಲ್ಲಿ ಉಳಿದ ಕೊಹಾತನ ಪುತ್ರರಿಗೂ ಚೀಟುಹಾಕಿ ಮನಸ್ಸೆಯ ಅರ್ಧ ಗೋತ್ರದಿಂದ ಹತ್ತು ಪಟ್ಟಣಗಳು ದೊರೆತವು.
ପୁଣି, କହାତର ଅବଶିଷ୍ଟ ସନ୍ତାନମାନଙ୍କୁ ଗୁଲିବାଣ୍ଟ ଦ୍ୱାରା ବଂଶୀୟ ଗୋଷ୍ଠୀଠାରୁ, ଅର୍ଦ୍ଧ ବଂଶ, ଅର୍ଥାତ୍‍, ମନଃଶିର ଅର୍ଦ୍ଧାଂଶଠାରୁ ଦଶ ନଗର ଦିଆଗଲା।
62 ಗೇರ್ಷೋಮನ ಪುತ್ರರಿಗೆ ತಮ್ಮ ಕುಟುಂಬಗಳ ಪ್ರಕಾರವೇ ಇಸ್ಸಾಕಾರನ ಗೋತ್ರದಿಂದಲೂ, ಆಶೇರನ ಗೋತ್ರದಿಂದಲೂ, ನಫ್ತಾಲಿಯ ಗೋತ್ರದಿಂದಲೂ, ಬಾಷಾನಿನಲ್ಲಿರುವ ಮನಸ್ಸೆಯ ಗೋತ್ರದಿಂದಲೂ ಹದಿಮೂರು ಪಟ್ಟಣಗಳು ದೊರಕಿದ್ದವು.
ଆଉ ଗେର୍ଶୋମର ସନ୍ତାନଗଣକୁ ସେମାନଙ୍କ ଗୋଷ୍ଠୀ ଅନୁସାରେ ଇଷାଖର-ବଂଶଠାରୁ ଓ ଆଶେର-ବଂଶଠାରୁ ଓ ନପ୍ତାଲି-ବଂଶଠାରୁ ଓ ବାଶନସ୍ଥ ମନଃଶି-ବଂଶଠାରୁ ତେର ନଗର ଦିଆଗଲା।
63 ಮೆರಾರೀಯ ಪುತ್ರರಿಗೂ ಅವರ ಕುಟುಂಬಗಳ ಪ್ರಕಾರ ಚೀಟುಹಾಕಿ, ರೂಬೇನನ ಗೋತ್ರದಿಂದಲೂ, ಗಾದನ ಗೋತ್ರದಿಂದಲೂ, ಜೆಬುಲೂನನ ಗೋತ್ರದಿಂದಲೂ ಹನ್ನೆರಡು ಪಟ್ಟಣಗಳು ದೊರಕಿದ್ದವು.
ମରାରିର ସନ୍ତାନଗଣକୁ ସେମାନଙ୍କ ଗୋଷ୍ଠୀ ଅନୁସାରେ ଗୁଲିବାଣ୍ଟ ଦ୍ୱାରା ରୁବେନ୍‍-ବଂଶଠାରୁ ଓ ଗାଦ୍‍ ବଂଶଠାରୁ ଓ ସବୂଲୂନ-ବଂଶଠାରୁ ବାର ନଗର ଦିଆଗଲା।
64 ಇಸ್ರಾಯೇಲರು ಲೇವಿಯರಿಗೆ ಈ ಪಟ್ಟಣಗಳನ್ನೂ, ಅವುಗಳ ಉಪನಗರಗಳನ್ನೂ ಕೂಡಾ ಕೊಟ್ಟರು.
ପୁଣି, ଇସ୍ରାଏଲ-ସନ୍ତାନଗଣ ଲେବୀୟମାନଙ୍କୁ ତଳିଭୂମି ସହିତ ନଗରମାନ ଦେଲେ।
65 ಅವರು ಚೀಟುಹಾಕಿ ಯೆಹೂದ ಸಿಮೆಯೋನ್ ಬೆನ್ಯಾಮೀನ್ ಕುಲಗಳಿಂದ ಮೇಲೆ ಹೆಸರು ಹೇಳಿದ ಪಟ್ಟಣಗಳನ್ನು ಕೊಟ್ಟರು.
ସେମାନେ ଗୁଲିବାଣ୍ଟ ଦ୍ୱାରା ନାମରେ ଉଲ୍ଲିଖିତ ଏହି ନଗରସବୁ ଯିହୁଦା-ସନ୍ତାନଗଣର ବଂଶଠାରୁ ଓ ଶିମୀୟୋନ-ସନ୍ତାନଗଣର ବଂଶଠାରୁ ଓ ବିନ୍ୟାମୀନ୍-ସନ୍ତାନଗଣର ବଂଶଠାରୁ ସେମାନଙ୍କୁ ଦେଲେ।
66 ಕೊಹಾತನ ಪುತ್ರರ ಮಿಕ್ಕಾದ ಕುಟುಂಬಗಳಿಗೂ, ಅವರ ಮೇರೆಗಳಲ್ಲಿ ಎಫ್ರಾಯೀಮನ ಗೋತ್ರದೊಳಗೆ ಪಟ್ಟಣಗಳು ದೊರೆತಿದ್ದವು.
ପୁଣି, କହାତ-ସନ୍ତାନଗଣର କୌଣସି କୌଣସି ଗୋଷ୍ଠୀ ଇଫ୍ରୟିମ-ବଂଶଠାରୁ ସ୍ୱ ସ୍ୱ ସୀମାସ୍ଥ ନଗର ପାଇଲେ।
67 ಇದಲ್ಲದೆ ಎಫ್ರಾಯೀಮ್ ಬೆಟ್ಟದಲ್ಲಿರುವ ಶೆಕೆಮ್ ಎಂಬ ಆಶ್ರಯ ನಗರ, ಗೆಜೆರ್ ಮತ್ತು ಅದರ ಉಪನಗರಗಳನ್ನೂ,
ଆଉ ସେମାନେ ସେମାନଙ୍କୁ ଆଶ୍ରୟ-ନଗରମାନ ଦେଲେ, ଇଫ୍ରୟିମର ପର୍ବତମୟ ଦେଶରେ ତଳିଭୂମି ସହିତ ଶିଖିମ; ତଳିଭୂମି ସହିତ ଗେଷର;
68 ಯೊಕ್ಮೆಯಾಮನ್ನೂ, ಬೇತ್ ಹೋರೋನ್,
ତଳିଭୂମି ସହିତ ଯକମୀୟାମ୍‍ ଓ ତଳିଭୂମି ସହିତ ବେଥ୍-ହୋରଣ;
69 ಅಯ್ಯಾಲೋನ್, ಗತ್ ರಿಮ್ಮೋನನ್ನೂ, ಅದರ ಉಪನಗರಗಳನ್ನೂ ಕೊಟ್ಟರು.
ତଳିଭୂମି ସହିତ ଅୟାଲୋନ୍‍ ଓ ତଳିଭୂମି ସହିତ ଗାଥ୍‍-ରିମ୍ମୋନ;
70 ಇದಲ್ಲದೆ ಕೊಹಾತನ ಪುತ್ರರ ಮಿಕ್ಕಾದ ಕುಟುಂಬಕ್ಕೋಸ್ಕರ ಮನಸ್ಸೆಯ ಅರ್ಧ ಗೋತ್ರದಿಂದ ಆನೇರನ್ನೂ, ಅದರ ಉಪನಗರಗಳನ್ನೂ; ಬಿಳ್ಳಾಮ್ ಉಪನಗರಗಳನ್ನೂ ಕೊಟ್ಟರು.
ପୁଣି, ମନଃଶିର ଅର୍ଦ୍ଧ ବଂଶଠାରୁ ତଳିଭୂମି ସହିତ ଆନେର୍‍ ଓ ତଳିଭୂମି ସହିତ ବିଲୀୟମ୍‍, ଏହିସବୁ ନଗର କହାତ-ସନ୍ତାନଗଣର ଅବଶିଷ୍ଟ ଗୋଷ୍ଠୀକୁ ଦେଲେ।
71 ಮನಸ್ಸೆಯ ಅರ್ಧ ಗೋತ್ರದಿಂದ ಗೇರ್ಷೋಮನ ಪುತ್ರರಿಗೆ ಬಾಷಾನಿನಲ್ಲಿರುವ ಗೋಲಾನೂ, ಅದರ ಉಪನಗರಗಳನ್ನೂ; ಅಷ್ಟಾರೋತ್ ಅದರ ಉಪನಗರಗಳನ್ನೂ;
ଗେର୍ଶୋମର ସନ୍ତାନମାନଙ୍କୁ ମନଃଶିର ଅର୍ଦ୍ଧ ବଂଶର ଗୋଷ୍ଠୀଠାରୁ ତଳିଭୂମି ସହିତ ବାଶନସ୍ଥ ଗୋଲନ୍‍ ଓ ତଳିଭୂମି ସହିତ ଅଷ୍ଟାରୋତ୍‍;
72 ಇಸ್ಸಾಕಾರನ ಗೋತ್ರದಿಂದ ಕೆದೆಷ್, ಅದರ ಉಪನಗರಗಳನ್ನೂ; ದಾಬೆರತ್ ಅದರ ಉಪನಗರಗಳನ್ನೂ;
ଆଉ ଇଷାଖରର ଗୋଷ୍ଠୀଠାରୁ ତଳିଭୂମି ସହିତ କେଦଶ୍‍, ତଳିଭୂମି ସହିତ ଦାବରତ୍‍;
73 ರಾಮೋತ್ ಅದರ ಉಪನಗರಗಳನ್ನೂ; ಅನೇಮ್, ಅದರ ಉಪನಗರಗಳನ್ನೂ;
ତଳିଭୂମି ସହିତ ରାମୋତ୍‍ ଓ ତଳିଭୂମି ସହିତ ଆନେମ୍‍;
74 ಆಶೇರನ ಗೋತ್ರದಿಂದ ಮಷಾಲ್, ಅಬ್ದೋನ್
ଆଉ ଆଶେର-ବଂଶଠାରୁ ତଳିଭୂମି ସହିତ ମଶାଲ୍‍, ତଳିଭୂମି ସହିତ ଅବଦୋନ୍‍;
75 ಹೂಕೋಕ್, ಅದರ ಉಪನಗರಗಳನ್ನೂ; ರೆಹೋಬ್, ಅದರ ಉಪನಗರಗಳನ್ನೂ;
ତଳିଭୂମି ସହିତ ହୁକ୍କୋକ୍‍ ଓ ତଳିଭୂମି ସହିତ ରହୋବ;
76 ನಫ್ತಾಲಿ ಗೋತ್ರದಿಂದ ಗಲಿಲಾಯದಲ್ಲಿರುವ ಕೆದೆಷ್, ಅದರ ಉಪನಗರಗಳನ್ನೂ; ಹಮ್ಮೋನ್, ಅದರ ಉಪನಗರಗಳನ್ನೂ; ಕಿರ್ಯಾತಯಿಮ್, ಅದರ ಉಪನಗರಗಳೂ ದೊರಕಿದ್ದವು.
ଆଉ ନପ୍ତାଲି-ବଂଶଠାରୁ ତଳିଭୂମି ସହିତ ଗାଲିଲୀସ୍ଥ କେଦଶ, ତଳିଭୂମି ସହିତ ହମ୍ମୋନ ଓ ତଳିଭୂମି ସହିତ କିରୀୟାଥୟିମ ଦିଆଗଲା।
77 ಮೆರಾರೀಯ ಉಳಿದ ಮಕ್ಕಳಿಗೂ, ಜೆಬುಲೂನನ ಗೋತ್ರದಿಂದ ರಿಮ್ಮೋನೋ, ಅದರ ಉಪನಗರಗಳೂ, ತಾಬೋರ್, ಅದರ ಉಪನಗರಗಳೂ;
ମରାରି-ସନ୍ତାନଗଣର ଅବଶିଷ୍ଟ ଲେବୀୟମାନଙ୍କୁ ସବୂଲୂନ-ବଂଶଠାରୁ ତଳିଭୂମି ସହିତ ରିମ୍ମୋନ୍‍, ତଳିଭୂମି ସହିତ ତାବୋର୍‍ ଦିଆଗଲା।
78 ರೂಬೇನನ ಗೋತ್ರದಿಂದ ಯೆರಿಕೋವಿನ ಬಳಿಯಲ್ಲಿ ಯೊರ್ದನ್ ನದಿಯ ಪೂರ್ವದಿಕ್ಕಿನ ಮರುಭೂಮಿಯಲ್ಲಿರುವ ಬೆಚೆರ್, ಅದರ ಉಪನಗರಗಳೂ; ಯಹಚ, ಅದರ ಉಪನಗರಗಳೂ;
ଆଉ ଯର୍ଦ୍ଦନର ସେପାରି ଯିରୀହୋ ନିକଟରେ ଯର୍ଦ୍ଦନର ପୂର୍ବ ଦିଗରେ ରୁବେନ୍‍-ବଂଶଠାରୁ ତଳିଭୂମି ସହିତ ପ୍ରାନ୍ତରସ୍ଥ ବେତ୍ସର ଓ ତଳିଭୂମି ସହିତ ଯହସ
79 ಕೆದೇಮೋತ್, ಮೇಫಾತ್ ಅದರ ಉಪನಗರಗಳೂ;
ଓ ତଳିଭୂମି ସହିତ କଦେମୋତ୍‍ ଓ ତଳିଭୂମି ସହିତ ମେଫାତ୍‍;
80 ಗಾದನ ಗೋತ್ರದಿಂದ ಗಿಲ್ಯಾದಿನ ರಾಮೋತ್, ಅದರ ಉಪನಗರಗಳೂ; ಮಹನಯಿಮ್ ಅದರ ಉಪನಗರಗಳೂ;
ଆଉ ଗାଦ୍‍ ବଂଶଠାରୁ ତଳିଭୂମି ସହିତ ଗିଲୀୟଦସ୍ଥ ରାମୋତ୍‍, ତଳିଭୂମି ସହିତ ମହନୟିମ,
81 ಹೆಷ್ಬೋನ್, ಯಜ್ಜೇರ್ ಮತ್ತು ಅದರ ಉಪನಗರಗಳೂ ದೊರೆತವು.
ତଳିଭୂମି ସହିତ ହିଷ୍‍ବୋନ ଓ ତଳିଭୂମି ସହିତ ଯାସେର ଦିଆଗଲା।

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 6 >