< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 4 >

1 ಯೆಹೂದನ ವಂಶಜರು: ಪೆರೆಚನು, ಹೆಚ್ರೋನನು, ಕರ್ಮೀ, ಹೂರನು, ಶೋಬಾಲನು.
Los hijos de Judá fueron Fares, Jesrón, Carmi, Jur, y Sobal.
2 ಶೋಬಾಲನ ಮಗನಾದ ರೆವಾಯನು ಯಹತನ ತಂದೆ. ಯಹತನು ಅಹೂಮೈ ಮತ್ತು ಲಹದ್ ಎಂಬವರ ತಂದೆ. ಇವರೇ ಚೊರ್‍ರದ ಕುಟುಂಬದವರು.
Y Raias, hijo de Sobal, engendró a Jahat; y Jahat engendró a Ahumai, y a Laad. Estas son las familias de los Saratitas.
3 ಏಟಾಮನ ಪುತ್ರರು: ಇಜ್ರೆಯೇಲ್, ಇಷ್ಮ ಮತ್ತು ಇಬ್ಬಾಷ್ ಮತ್ತು ಇವರ ತಂಗಿ ಹಚೆಲೆಲ್‌ಪೋನೀ ಎಂಬವರು.
Y estas son las del padre de Etam; Jezrael, Jesema, y Jedebos. Y el nombre de su hermana fue Asalefuni.
4 ಪೆನೂಯೇಲ್, ಗೆದೋರ್ ವಂಶದವರಿಗೆ ಮೂಲಪುರುಷನಾಗಿದ್ದನು. ಏಜೆರ್ ಹೂಷಾಹರ ಮೂಲಪುರುಷನಾಗಿದ್ದನು. ಇವರು ಎಫ್ರಾತಾಹ ಎಂಬಾಕೆಯ ಚೊಚ್ಚಲಮಗನಾದ ಹೂರನ ಮಕ್ಕಳು; ಈ ಹೂರನೇ ಬೇತ್ಲೆಹೇಮ್ ವಂಶದವರಿಗೆ ಮೂಲಪುರುಷನು.
Y Fanuel fue padre de Gedor; y Ezer padre de Hosa. Estos fueron los hijos de Jur primogénito de Efrata padre de Belén.
5 ತೆಕೋವದ ತಂದೆ ಅಷ್ಹೂರನಿಗೆ ಹೆಲಾಹ, ನಾರ ಎಂಬ ಇಬ್ಬರು ಪತ್ನಿಯರಿದ್ದರು.
Y Assur padre de Tecua tuvo dos mujeres, es a saber, Halaa, y Naraa.
6 ನಾರಳು ಅವನಿಗೆ ಅಹುಜ್ಜಾಮ್, ಹೇಫೆರ್, ತೇಮಾನಿ, ಅಹಷ್ಟಾರ್ಯನನ್ನು ಹೆತ್ತಳು. ಇವರೇ ನಾರಳ ಮಕ್ಕಳು.
Y Naraa le parió a Oozán, Hefer, Temani, y Ahastari. Estos fueron los hijos de Naara.
7 ಹೆಲಾಹಳ ಪುತ್ರರು: ಚೆರೆತ್, ಇಚ್ಹಾರ್, ಎತ್ನಾನ್.
Y los hijos de Halaa fueron Seret, Sahar, y Etnán.
8 ಕೋಚನು ಅನೂಬ್‌ನನ್ನೂ, ಚೊಬೇಬನನ್ನೂ, ಹಾರುಮನ ಮಗನಾದ ಅಹರ‍್ಹೇಲನ ಸಂತತಿಗಳನ್ನೂ ಪಡೆದನು.
Ítem, Cos engendró a Anob y a Soboba, y la familia de Aharehel, hijo de Arum.
9 ಯಾಬೇಚನು ತನ್ನ ಸಹೋದರರಿಗಿಂತ ಘನವುಳ್ಳವನಾಗಿದ್ದನು. ಅವನ ತಾಯಿ, “ನಾನು ಇವನನ್ನು ವ್ಯಥೆಯಿಂದ ಹೆತ್ತೆನು,” ಎಂದು ಅವನಿಗೆ ಯಾಬೇಚನೆಂಬ ಹೆಸರಿಟ್ಟಳು.
Y Jabes fue más ilustre que sus hermanos, al cual su madre llamó Jabes, diciendo: Por cuanto yo le parí en dolor.
10 ಆದರೆ ಯಾಬೇಚನು ಇಸ್ರಾಯೇಲಿನ ದೇವರಿಗೆ, “ನೀವು ನನ್ನನ್ನು ನಿಜವಾಗಿ ಆಶೀರ್ವದಿಸಬೇಕು; ನನ್ನ ಮೇರೆಯನ್ನು ವಿಸ್ತರಿಸಬೇಕು; ನಿಮ್ಮ ಹಸ್ತವು ನನ್ನ ಸಂಗಡ ಇರಲಿ; ನನ್ನನ್ನು ವ್ಯಥೆಪಡಿಸದ ಹಾಗೆ ನನ್ನನ್ನು ಕೇಡಿನಿಂದ ತಪ್ಪಿಸಿರಿ,” ಎಂದು ಮೊರೆಯಿಟ್ಟನು. ದೇವರು ಅವನು ಬೇಡಿಕೊಂಡದ್ದನ್ನು ಅನುಗ್ರಹಿಸಿದರು.
E invocó Jabes al Dios de Israel, diciendo: Si me dieres bendición, y ensanchares mi término, y si tu mano fuere conmigo, y me librares de mal, que no me duela. E hizo Dios que le viniese lo que pidió.
11 ಶೂಹನ ಸಹೋದರ ಕೆಲೂಬನು ಎಷ್ಟೋನನ ತಂದೆ ಮೆಹೀರನನ್ನು ಪಡೆದನು.
Y Caleb hermano de Sua, engendró a Maquir, el cual fue padre de Estón.
12 ಎಷ್ಟೋನನಿಂದ ಬೇತ್ ರಾಫಾ, ಪಾಸೇಹ, ತೆಹಿನ್ನ ಎಂಬ ಮೂವರು ಮಕ್ಕಳು ಇದ್ದರು. ತೆಹಿನ್ನ ನಾಹಷ್ ಪಟ್ಟಣದ ಸ್ಥಾಪಕ. ಈ ಜನರ ವಂಶಜರು ರೇಕಾ ಎಂಬಲ್ಲಿ ವಾಸಿಸಿದ್ದರು.
Y Estón engendró a Bet-rafa, a Fese, y a Tehinna, padre de la ciudad de Naas: estos son los varones de Reca.
13 ಕೆನಾಜನ ಪುತ್ರರು: ಒತ್ನಿಯೇಲನು ಸೆರಾಯನು. ಒತ್ನಿಯೇಲನ ಪುತ್ರರು: ಹತತ್ ಹಾಗು ಮೆಯೋನೋತೈ.
Los hijos de Cenes fueron Otoniel, y Saraías. Los hijos de Otoniel, Hatat,
14 ಮೆಯೋನೋತೈ ಒಫ್ರಾಹನನ್ನು ಪಡೆದನು. ಸೆರಾಯನು ಶಿಲ್ಪಿಗರಾಗಿರುವ ಗೇಹರಾಷೀಮರ ಸ್ಥಾಪಕನಾದ ಯೋವಾಬನ ತಂದೆ. ಈ ಜನರು ಕೈಕೆಲಸದವರಾದ್ದರಿಂದ ಗೇಹರಾಷೀಮರು ಎಂಬ ಹೆಸರು ಬಂತು.
Y Maonati, el cual engendró a Ofra: y Saraías engendró a Joab, padre de Genarassim, porque fueron artífices.
15 ಯೆಫುನ್ನೆಯ ಮಗನಾದ ಕಾಲೇಬನ ಪುತ್ರರು: ಈರು, ಏಲ, ನಾಮ್ ಎಂಬವರು; ಏಲನ ಮಗನು ಕೆನಜ್.
Los hijos de Caleb, hijo de Jefone, fueron Hir, Ela, y Naham: e hijo de Ela fue Cenez.
16 ಯೆಹಲ್ಲೆಲೇಲನ ಪುತ್ರರು: ಜೀಫನು, ಜಿಫಾಹನು, ತೀರ್ಯನು, ಅಸರೇಲನು.
Los hijos de Jalaleel fueron Zif, Zifas, Tirias y Asrael.
17 ಎಜ್ರನ ಪುತ್ರರು: ಯೆತೆರ್, ಮೆರೆದ್, ಏಫೆರ್, ಯಾಲೋನ್ ಎಂಬವರು. ಮೇರದನ ಹೆಂಡತಿಯು ಅವನಿಗೆ ಮಿರ್ಯಾಮ್, ಶಮ್ಮಾಯ, ಎಷ್ಟೆಮೋವನ ತಂದೆ ಇಷ್ಬಾಹನನ್ನೂ ಹೆತ್ತಳು.
Y los hijos de Ezra fueron Jeter, Mered, Efer, y Jalon; también engendró a María, y a Sammaí, y a Jesba padre de Estamo.
18 ಇವರು ಮೆರೆದನು ಮದುವೆಯಾದ ಫರೋಹನ ಮಗಳು ಬಿತ್ಯಳ ಮಕ್ಕಳು. ಇದಲ್ಲದೆ ಯೆಹೂದ್ಯಳಾದ ಅವನ ಇನ್ನೊಬ್ಬ ಹೆಂಡತಿ, ಗೆದೋರ್ಯನ ತಂದೆ ಯೆರೆದನನ್ನೂ, ಸೋಕೋವಿನ ತಂದೆ ಹೆಬೆರನನ್ನೂ, ಜಾನೋಹನ ತಂದೆ ಯೆಕೂತೀಯೇಲನನ್ನೂ ಹೆತ್ತಳು.
Y su mujer Judaia le parió a Jared padre de Gedor, y a Jeber padre de Soco, y a Jecutiel padre de Zaneo. Estos fueron los hijos de Betia, hija de Faraón, con la cual casó Mered.
19 ಹೋದೀಯನು ನಹಮನ ಸಹೋದರಿಯನ್ನು ಮದುವೆಯಾದನು. ಇವರ ಸಂತತಿಯವರು ಕೆಯೀಲದಲ್ಲಿ ವಾಸಿಸಿದ ಗರ್ಮ್ಯ ಗೋತ್ರದ ಮತ್ತು ಎಷ್ಟೆಮೋವಾಬದಲ್ಲಿ ವಾಸಿಸಿದ ಮಾಕಾತ್ ಗೋತ್ರದ ಪೂರ್ವಜರು.
Y los hijos de la mujer de Odías, hermana de Natán, padre de Ceila, fueron Garmi, Estamo el de Macati.
20 ಶೀಮೋನನ ಪುತ್ರರು: ಅಮ್ನೋನನು, ರಿನ್ನನು, ಬೆನ್ಹನಾನನು, ತಿಲೋನನು. ಇಷ್ಷೀಯನ ಸಂತತಿ: ಜೋಹೆತನು, ಬೆನ್ ಜೋಹೆತನು.
Ítem, los hijos de Simón fueron Amnón y Rinna, hijo de Hanán, y Tilón. Y los hijos de Jesi fueron Zohet y Ben-zohet.
21 ಯೆಹೂದನ ಮಗ ಶೇಲಹನ ಪುತ್ರರು: ಲೇಕಾಹ್ಯನ ತಂದೆ ಏರನು, ಮಾರೇಷನ ತಂದೆ ಲದ್ದ; ಬೇತ್ ಅಷ್ಬೇಯ ಪಟ್ಟಣದಲ್ಲಿ ವಾಸಿಸಿದ ನೇಕಾರರ ಕುಟುಂಬಗಳವರು,
Los hijos de Sela, hijo de Judá, fueron Er, padre de Leca, y Laada padre de Maresa, y de la familia de la casa del oficio del lino en la casa de Asbea.
22 ಕೋಜೇಬದವರಾದ ಯೊಕೀಮ್ಯರೂ, ಯೋವಾಷನು, ಸಾರಾಫ ಮೋವಾಬ್ ಮತ್ತು ಯೆಷೂಬಿ ಲೆಹೇಮಿನಲ್ಲಿ ಅಧಿಕಾರವುಳ್ಳವರಾಗಿದ್ದರು. ಈ ದಾಖಲೆಗಳು ಪ್ರಾಚೀನ ಕಾಲದಿಂದ ಬಂದವು.
Y Joacim, y los varones de Cozeba, y Joas, y Sarof, los cuales dominaron en Moab, y Jasubi-la-hem, que son palabras antiguas,
23 ಇವರೇ ನೆಟಾಯಿಮ್, ಗೆದೇರ ಎಂಬ ಸ್ಥಳಗಳಲ್ಲಿ ವಾಸವಾಗಿದ್ದ ಕುಂಬಾರರು. ಅವರು ಅಲ್ಲಿಯೇ ಇದ್ದು ಅರಸನಿಗೋಸ್ಕರ ಕೆಲಸ ಮಾಡುತ್ತಿದ್ದರು.
Estos fueron olleros, y moradores de sembrados, y de cercados, los cuales moraron allá con el rey en su obra.
24 ಸಿಮೆಯೋನನ ವಂಶಜರು: ನೆಮೂಯೇಲನು, ಯಾಮೀನನು, ಯಾರೀಬನು, ಜೆರಹನು ಮತ್ತು ಸೌಲನು.
Los hijos de Simeón fueron Namuel, Jamín, Jarib, Zara, Saul.
25 ಅವನ ಮಗನಾದ ಶಲ್ಲೂಮನು, ಅವನ ಮಗನಾದ ಮಿಬ್ಸಾಮನು, ಅವನ ಮಗನಾದ ಮಿಷ್ಮಾವನು.
También Sellum fue su hijo, Mabsán su hijo, y Masma su hijo.
26 ಮಿಷ್ಮಾವನ ವಂಶಜರು: ಅವನ ಮಗ ಹಮ್ಮೂಯೇಲನು, ಅವನ ಮಗ ಜಕ್ಕೂರನು, ಅವನ ಮಗನಾದ ಶಿಮ್ಮಿಯಿ.
Los hijos de Masma fueron Hamuel su hijo, Zacur su hijo, y Semeí su hijo.
27 ಶಿಮ್ಮಿಯಿಗೆ ಹದಿನಾರು ಮಂದಿ ಪುತ್ರರೂ, ಆರು ಮಂದಿ ಪುತ್ರಿಯರೂ ಇದ್ದರು. ಆದರೆ ಅವನ ಸಹೋದರರಿಗೆ ಬಹಳ ಮಕ್ಕಳಿರಲಿಲ್ಲ. ಅವರ ಸಮಸ್ತ ಸಂತತಿಯು ಯೆಹೂದದ ಮಕ್ಕಳ ಹಾಗೆ ಹೆಚ್ಚಾಗಿರಲಿಲ್ಲ.
Los hijos de Semeí fueron diez y seis, y seis hijas; mas sus hermanos no tuvieron muchos hijos, ni multiplicaron toda su familia, como los hijos de Judá.
28 ಇವರು ಬೇರ್ಷೆಬದಲ್ಲಿಯೂ; ಮೋಲಾದದಲ್ಲಿಯೂ; ಹಚರ್ ಷೂವಾಲ್ ಎಂಬಲ್ಲಿಯೂ;
Y habitaron en Beer-seba, y en Molada, y en Hasar-subal,
29 ಬಿಲ್ಹದಲ್ಲಿಯೂ ಎಚೆಮಿನಲ್ಲಿಯೂ, ತೋಲಾದ್,
Y en Bala, y en Hasón, y en Tolad,
30 ಬೆತೂಯೇಲ್, ಹೊರ್ಮದಲ್ಲಿಯೂ; ಚಿಕ್ಲಗಿನಲ್ಲಿಯೂ;
Y en Batuel, y en Jorma, y en Siceleg,
31 ಬೇತ್ ಮರ್ಕಾಬೋತ್, ಹಚರ್ ಸೂಸೀಮ್, ಬೇತ್ ಬಿರೀ ಮತ್ತು ಶಾರಯಿಮ್‌ನಲ್ಲಿಯೂ ವಾಸವಾಗಿದ್ದರು. ದಾವೀದನ ಆಳ್ವಿಕೆಯವರೆಗೂ ಇವು ಅವರ ಪಟ್ಟಣಗಳಾಗಿದ್ದವು.
Y en Bet-marcabot, y en Hasarusim, y en Bet-berai, y en Saraim. Estas fueron sus ciudades hasta el reino de David.
32 ಅವರ ಸುತ್ತಲಿನ ಗ್ರಾಮಗಳು ಯಾವುವೆಂದರೆ: ಏಟಾಮ್, ಆಯಿನ್, ರಿಮ್ಮೋನ್, ತೋಕೆನ್, ಆಷಾನ್ ಎಂಬ ಐದು ಪಟ್ಟಣಗಳು.
Y sus aldeas fueron Etam, Aén, Remmón, y Taocem, y Asán, cinco pueblos:
33 ಇದಲ್ಲದೆ ಆ ಪಟ್ಟಣಗಳ ಸುತ್ತಲಿದ್ದ ಊರುಗಳು ಬಾಳ್ ಪಟ್ಟಣದವರೆಗೆ ವಾಸವಾಗಿದ್ದರು. ಇವೇ ಅವರು ವಾಸವಾಗಿರುವ ಸ್ಥಳಗಳೂ, ಅವರ ವಂಶಾವಳಿಗಳೂ:
Y todos sus villajes que estaban al rededor de estas ciudades hasta Baal. Esta fue su habitación, y esta fue su descendencia.
34 ಮೆಷೋಬಾಬನು, ಯಮ್ಲೇಕನು, ಅಮಚ್ಯನ ಮಗನಾದ ಯೋಷನು,
Mosobab, y Jemlec, y Josías, hijo de Amasías,
35 ಯೋಯೇಲನು, ಅಸಿಯೇಲನ ಮಗನಾದ ಸೆರಾಯನ ಮಗ ಯೊಷಿಬ್ಯನ ಮಗ ಯೇಹೂವು.
Joel, y Jehú, hijo de Josabías, hijo de Saraías, hijo de Aziel,
36 ಎಲ್ಯೋವೇನೈ, ಯಾಕೋಬ, ಯೆಷೋಹಾಯ, ಅಸಾಯ, ಅದೀಯೇಲ್, ಯೆಸೀಮಿಯೇಲ್, ಬೆನಾಯಾ.
Y Elioenai, Jacoba, Isuhaia, Asaías, Adiel, Ismiel, Banaías,
37 ಶೆಮಾಯನ ಮಗ ಶಿಮ್ರಿಯ ಮಗ ಯೆದಾಯನ ಮಗ ಅಲ್ಲೋನನ ಮಗ ಶಿಪ್ಫಿಯ ಮಗ ಜೀಜನು.
Y Ziza, hijo de Sefei, hijo de Allón, hijo de Idaías, hijo de Semrí, hijo de Samaías.
38 ಹೆಸರು ಹೆಸರಾಗಿ ಬರೆಯಲಾದ ಇವರು ತಮ್ಮ ಕುಟುಂಬಗಳಲ್ಲಿ ನಾಯಕರಾಗಿದ್ದರು. ಅವರ ಪಿತೃಗಳ ಮನೆ ಬಹಳ ಅಭಿವೃದ್ಧಿಯಾಯಿತು.
Estos por sus nombres son los principales que vinieron en sus familias, y que fueron multiplicados en multitud en las casas de sus padres.
39 ತಮ್ಮ ಮಂದೆಗಳಿಗೆ ಮೇವನ್ನು ಹುಡುಕಲು ತಗ್ಗಿನ ಪೂರ್ವದಿಕ್ಕಿನಲ್ಲಿರುವ ಗೆದೋರು ಎಂಬ ಸ್ಥಳದ ಪ್ರವೇಶದವರೆಗೂ ಹೋದರು.
Y llegaron hasta la entrada de Gador hasta el oriente del valle, buscando pastos para sus ganados.
40 ಅವರು ರಸವತ್ತಾದ ಒಳ್ಳೆಯ ಮೇವನ್ನು ಕಂಡುಕೊಂಡರು. ಆ ದೇಶವು ವಿಸ್ತಾರವಾಗಿಯೂ, ಶಾಂತವಾಗಿಯೂ, ಸಮಾಧಾನವಾಗಿಯೂ ಇತ್ತು. ಪೂರ್ವದಲ್ಲಿ ಹಾಮನ ವಂಶದವರು ಅಲ್ಲಿ ವಾಸವಾಗಿದ್ದರು.
Y hallaron gruesos y buenos pastos, y tierra ancha y espaciosa, y quieta y reposada, porque los hijos de Cam la habitaban de antes.
41 ಹೆಸರು ಹೆಸರಾಗಿ ಬರೆದಿರುವವರಾದ ಇವರು ಯೆಹೂದದ ಅರಸನಾದ ಹಿಜ್ಕೀಯನ ದಿವಸಗಳಲ್ಲಿ ಅಲ್ಲಿಗೆ ಹೋಗಿ ಹಾಮ್ಯರ ಡೇರೆಗಳನ್ನೂ ಅಲ್ಲಿ ಸಿಕ್ಕಿದ ಮೆಗೂನ್ಯರನ್ನೂ ಸಂಪೂರ್ಣವಾಗಿ ನಾಶಮಾಡಿದರು. ಅಲ್ಲಿ ತಮ್ಮ ಮಂದೆಗಳಿಗೆ ಮೇವು ಇರುವುದರಿಂದ ಇಂದಿನವರೆಗೂ ಅವರ ಸ್ಥಳದಲ್ಲಿ ವಾಸಿಸಿದರು.
Y estos, que han sido escritos por nombres, vinieron en días de Ezequías rey de Judá, e hirieron sus tiendas y estancias que hallaron allí, y destruyéronlos hasta hoy; y habitaron allí en lugar de ellos, por cuanto había allí pastos para sus ganados.
42 ಇದಲ್ಲದೆ ಅವರಲ್ಲಿ ಸಿಮೆಯೋನನ ಪುತ್ರರಲ್ಲಿ ಐನೂರು ಮಂದಿ ಇಷ್ಷೀಯ ಪುತ್ರರಾದ ಪೆಲಟ್ಯ, ನೆಯರ್ಯ, ರೆಫಾಯ, ಉಜ್ಜೀಯೇಲ್ ಎಂಬವರನ್ನು ತಮ್ಮ ಅಧಿಪತಿಗಳಾಗಿ ಮಾಡಿಕೊಂಡು. ಸೇಯೀರ್ ಎಂಬ ಪರ್ವತ ದೇಶಕ್ಕೆ ಹೋದರು.
Y asimismo quinientos hombres de ellos de los hijos de Simeón se fueron al monte de Seir, llevando por capitanes a Paltías, y a Naarías, y a Rafaias, y a Oziel, hijos de Jesi;
43 ಅವರು ತಪ್ಪಿಸಿಕೊಂಡ ಉಳಿದ ಅಮಾಲೇಕ್ಯರನ್ನು ಕೊಂದು, ಅಲ್ಲಿ ಇಂದಿನವರೆಗೂ ವಾಸವಾಗಿದ್ದಾರೆ.
E hirieron a los restos que habían quedado de Amalec, y habitaron allí hasta hoy.

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 4 >