< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 3 >
1 ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಪುತ್ರರು ಯಾರೆಂದರೆ: ಇಜ್ರೆಯೇಲ್ ಪಟ್ಟಣದ ಅಹೀನೋವಮಳ ಚೊಚ್ಚಲ ಮಗ ಅಮ್ನೋನನು; ಕರ್ಮೇಲ್ಯಳಾದ ಅಬೀಗೈಲಳಿಂದ ಹುಟ್ಟಿದ ಎರಡನೆಯವನಾದ ದಾನಿಯೇಲನು,
Ezek a Dávid fiai, a kik Hebronban születének néki: elsőszülötte vala Amnon, a Jezréelből való Ahinoámtól; második vala Dániel, a Kármelből való Abigailtól.
2 ಗೆಷೂರಿನ ಅರಸನಾಗಿರುವ ತಲ್ಮಾಯನ ಮಗಳಾದ ಮಾಕಳಿಂದ ಹುಟ್ಟಿದ ಅವನ ಮೂರನೆಯ ಮಗ ಅಬ್ಷಾಲೋಮನು, ಹಗ್ಗೀತಳಿಂದ ಹುಟ್ಟಿದ ನಾಲ್ಕನೆಯ ಮಗ ಅದೋನೀಯನು.
Harmadik Absolon, a ki Maakának, a Gessurbeli Talmai király leányának volt a fia; negyedik Adónia, Haggittól való.
3 ಅಬೀಟಾಲಳಿಂದ ಹುಟ್ಟಿದ ಐದನೆಯ ಮಗ ಶೆಫಟ್ಯನು, ದಾವೀದನ ಹೆಂಡತಿ ಎಗ್ಲಳಿಂದ ಹುಟ್ಟಿದ ಆರನೆಯ ಮಗ ಇತ್ರಾಮನು.
Ötödik Sefátia, Abitáltól való; hatodik Jitreám, az ő feleségétől, Eglától való.
4 ಈ ಆರು ಮಂದಿ ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದವರು. ಅಲ್ಲಿ ಅವನು ಏಳುವರೆ ವರ್ಷ ಆಳಿದನು. ಯೆರೂಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳಿದನು.
E hat fia születék néki Hebronban, a hol hét esztendeig és hat hónapig uralkodott; Jeruzsálemben pedig harminczhárom esztendeig uralkodék.
5 ಯೆರೂಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು: ದಾವೀದನ ಹೆಂಡತಿ ಬತ್ಷೆಬೆಳು ಅಮ್ಮಿಯೇಲನ ಮಗಳು. ಆಕೆಗೆ ಶಮ್ಮೂವ ಎಂಬ ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಜನ ಗಂಡು ಮಕ್ಕಳು ಜನಿಸಿದರು.
Jeruzsálemben pedig ezek születének néki: Simea, Sóbáb, Nátán és Salamon, négyen, Bathsuától, az Ammiel leányától.
6 ಇದಲ್ಲದೆ ಇಬ್ಹಾರ್, ಎಲೀಷಾಮ, ಎಲೀಫೆಲೆಟ್,
És Ibhár, Elisáma és Elifélet.
8 ಎಲೀಷಾಮ, ಎಲ್ಯಾದ, ಎಲೀಫೆಲೆಟ್, ಈ ಒಂಬತ್ತು ಮಂದಿ ಮಕ್ಕಳಿದ್ದರು.
És Elisáma, Eljada és Elifélet, kilenczen.
9 ಉಪಪತ್ನಿಗಳ ಮಕ್ಕಳು ಹೊರತಾಗಿ ಇವರೆಲ್ಲರು ದಾವೀದನ ಮಕ್ಕಳಾಗಿದ್ದರು; ತಾಮಾರಳು ಇವರ ಸಹೋದರಿಯಾಗಿದ್ದಳು.
Mindezek a Dávid fiai, az ő ágyastársainak fiain kivül; és ezeknek a huga, Támár.
10 ಸೊಲೊಮೋನನ ಮಗನು ರೆಹಬ್ಬಾಮನು; ಇವನ ಮಗನು ಅಬೀಯನು; ಇವನ ಮಗನು ಆಸನು; ಇವನ ಮಗನು ಯೆಹೋಷಾಫಾಟನು;
Salamonnak pedig fia volt Roboám; ennek fia Abija, ennek fia Asa, ennek fia Josafát.
11 ಇವನ ಮಗನು ಯೆಹೋರಾಮನು; ಇವನ ಮಗನು ಅಹಜ್ಯನು; ಇವನ ಮಗನು ಯೋವಾಷನು.
Ennek fia Jórám, ennek fia Akházia, ennek fia Joás.
12 ಇವನ ಮಗನು ಅಮಚ್ಯನು; ಇವನ ಮಗನು ಅಜರ್ಯನು; ಇವನ ಮಗನು ಯೋತಾಮನು.
Ennek fia Amásia, ennek fia Azária; ennek fia Jótám.
13 ಇವನ ಮಗನು ಆಹಾಜನು; ಇವನ ಮಗನು ಹಿಜ್ಕೀಯನು; ಇವನ ಮಗನು ಮನಸ್ಸೆಯು.
Ennek fia Akház, ennek fia Ezékiás, ennek fia Manasse.
14 ಇವನ ಮಗನು ಆಮೋನನು; ಇವನ ಮಗನು ಯೋಷೀಯನು.
Ennek fia Amon, ennek fia Jósiás.
15 ಯೋಷೀಯನ ಮಕ್ಕಳು: ಚೊಚ್ಚಲಮಗನಾದ ಯೋಹಾನಾನ್, ಎರಡನೆಯವನಾದ ಯೆಹೋಯಾಕೀಮ್, ಮೂರನೆಯವನಾದ ಚಿದ್ಕೀಯ, ನಾಲ್ಕನೆಯವನಾದ ಶಲ್ಲೂಮ್.
Jósiásnak pedig fiai: elsőszülötte Johanán, második Jójákim, harmadik Sédékiás, Sallum negyedik.
16 ಯೆಹೋಯಾಕೀಮನ ಮಕ್ಕಳು: ಇವನ ಮಗನಾದ ಯೆಕೊನ್ಯ; ಇವನ ಮಗನು ಚಿದ್ಕೀಯ.
Jójákim fiai: az ő fia Jékoniás, ennek fia Sédékiás.
17 ಯೆಹೋಯಾಕೀನನು ಸೆರೆಯಲ್ಲಿದ್ದಾಗ ಅವನ ವಂಶಜರು: ಇವನ ಮಗ ಶೆಯಲ್ತಿಯೇಲ್,
Jékóniásnak fiai: Assir, ennek fia Saálthiel.
18 ಮಲ್ಕೀರಾಮ, ಪೆದಾಯ್, ಶೆನಚ್ಚರ, ಯೆಕಮ್ಯ, ಹೋಷಾಮ ಮತ್ತು ನೆದಬ್ಯ.
És Málkirám, Pedája, Sénasár, Jékámia, Hosáma és Nédábia.
19 ಪೆದಾಯನ ಮಕ್ಕಳು: ಜೆರುಬ್ಬಾಬೆಲನು, ಶಿಮ್ಮೀ. ಜೆರುಬ್ಬಾಬೆಲನ ಮಕ್ಕಳು: ಮೆಷುಲ್ಲಾಮನು, ಹನನ್ಯನು. ಇವರ ಸಹೋದರಿಯಾದ ಶೆಲೋಮೀತಳು.
Pedája fiai: Zerubábel és Simei. Zerubábel fiai: Mesullám, Hanánia; és az ő hugok vala Selómit.
20 ಇವರಲ್ಲದೆ ಐವರು ಗಂಡು ಮಕ್ಕಳು ಅವನಿಗಿದ್ದರು: ಹಷುಬನು, ಓಹೆಲನು, ಬೆರೆಕ್ಯನು, ಹಸದ್ಯ, ಯೂಷಬ್ಹೆಸೆದ್
És Hásuba, Ohel, Berekia, Hasádia és Jusáb-Hésed, ezek öten.
21 ಹನನ್ಯನ ವಂಶಜರು: ಪೆಲಟ್ಯನು, ಯೆಶಾಯನು; ರೆಫಾಯನ ಮಕ್ಕಳು, ಅರ್ನಾನನ ಮಕ್ಕಳು, ಓಬದ್ಯನ ಮಕ್ಕಳು, ಶೆಕನ್ಯನ ಮಕ್ಕಳು.
Hanánia fiai: Pelátia és Jésaia; és Refája fiai és Arnám fiai, Obádia fiai, Sekánia fiai.
22 ಶೆಕನ್ಯನ ವಂಶಜರು: ಶೆಮಾಯನ ಮತ್ತು ಅವನ ಮಕ್ಕಳು ಹಟ್ಟೂಷ್, ಇಗಾಲ್, ಬಾರೀಹ, ನೆಯರ್ಯ, ಶಾಫಾಟ್, ಈ ಆರು ಮಂದಿಯು.
És Sekánia fiai: Semája. Semája fiai: Hattus, Jigeál, Báriah, Neárja és Sáfát, ezek hatan.
23 ನೆಯರ್ಯನ ಮಕ್ಕಳು: ಎಲ್ಯೋವೇನೈನು, ಹಿಜ್ಕೀಯನು, ಅಜ್ರೀಕಾಮನು, ಈ ಮೂರು ಮಂದಿಯು.
Neárja fiai: Eljohénai, Ezékiás és Azrikám, ezek hárman.
24 ಎಲ್ಯೋವೇನೈನ ಮಕ್ಕಳು: ಹೋದವ್ಯ, ಎಲ್ಯಾಷೀಬ್, ಪೆಲಾಯ, ಅಕ್ಕೂಬ್, ಯೋಹಾನಾನ್, ದೆಲಾಯ, ಅನಾನೀ ಎಂಬ ಏಳುಮಂದಿ.
Eljohénai fiai: Hódajéva, Eliásib, Pelája, Akkub, Johanán, Delája és Anáni; ezek heten.