< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 29 >

1 ಇದಲ್ಲದೆ ಅರಸನಾದ ದಾವೀದನು ಸಮಸ್ತ ಸಭೆಗೆ ಹೇಳಿದ್ದೇನೆಂದರೆ, “ದೇವರು ಒಬ್ಬನನ್ನೇ ಆಯ್ದುಕೊಂಡ ನನ್ನ ಮಗ ಸೊಲೊಮೋನನು ಚಿಕ್ಕವನೂ ಎಳೆಯ ಪ್ರಾಯದವನೂ ಆಗಿದ್ದಾನೆ. ಆದರೆ ಕೆಲಸವು ದೊಡ್ಡದು. ಈ ಮಹಾ ಕಟ್ಟಡವು ಮನುಷ್ಯರಿಗೋಸ್ಕರವಲ್ಲ, ದೇವರಾದ ಯೆಹೋವ ದೇವರಿಗೋಸ್ಕರವೇ,
וַיֹּאמֶר דָּוִיד הַמֶּלֶךְ לְכָל־הַקָּהָל שְׁלֹמֹה בְנִי אֶחָד בָּֽחַר־בּוֹ אֱלֹהִים נַעַר וָרָךְ וְהַמְּלָאכָה גְדוֹלָה כִּי לֹא לְאָדָם הַבִּירָה כִּי לַיהוָה אֱלֹהִֽים׃
2 ಆದರೆ ನಾನು ನನ್ನ ಸಮಸ್ತ ಶಕ್ತಿಯಿಂದ ನನ್ನ ದೇವರ ಮನೆಯ ನಿಮಿತ್ತ, ಬಂಗಾರದ ಕೆಲಸಕ್ಕೋಸ್ಕರ ಬಂಗಾರವನ್ನೂ, ಬೆಳ್ಳಿಯ ಕೆಲಸಕ್ಕೋಸ್ಕರ ಬೆಳ್ಳಿಯನ್ನೂ, ಕಂಚಿನ ಕೆಲಸಕ್ಕೋಸ್ಕರ ಕಂಚನ್ನೂ, ಕಬ್ಬಿಣದ ಕೆಲಸಕ್ಕೋಸ್ಕರ ಕಬ್ಬಿಣವನ್ನೂ, ಮರದ ಕೆಲಸಕ್ಕೋಸ್ಕರ ಮರವನ್ನೂ, ಗೋಮೇಧಿಕ ರತ್ನಗಳನ್ನೂ; ಕೆತ್ತುವುದಕ್ಕೆ ರತ್ನ ವಿಚಿತ್ರವಾದಂಥ ಕಲ್ಲುಗಳನ್ನೂ; ಸಕಲ ಅಮೂಲ್ಯವಾದ ಕಲ್ಲುಗಳನ್ನೂ. ಅಮೃತ ಶಿಲೆಗಳನ್ನೂ ಬಹಳಷ್ಟು ಸಿದ್ಧಮಾಡಿದ್ದೇನೆ.
וּֽכְכָל־כֹּחִי הֲכִינוֹתִי לְבֵית־אֱלֹהַי הַזָּהָב ׀ לַזָּהָב וְהַכֶּסֶף לַכֶּסֶף וְהַנְּחֹשֶׁת לַנְּחֹשֶׁת הַבַּרְזֶל לַבַּרְזֶל וְהָעֵצִים לָעֵצִים אַבְנֵי־שֹׁהַם וּמִלּוּאִים אַבְנֵי־פוּךְ וְרִקְמָה וְכֹל אֶבֶן יְקָרָה וְאַבְנֵי־שַׁיִשׁ לָרֹֽב׃
3 ಇದಲ್ಲದೆ ನಾನು ನನ್ನ ದೇವರ ಮನೆಯ ಮೇಲೆ ನನಗೆ ಭಕ್ತಿ ಇರುವುದರಿಂದ, ನಾನು ಪರಿಶುದ್ಧ ಮನೆಗೋಸ್ಕರ ಸಿದ್ಧಮಾಡಿದ ಎಲ್ಲಾದರ ಹೊರತು, ನನ್ನ ಸ್ವಂತ ಸ್ವತ್ತಿನಿಂದ ಬಂಗಾರವನ್ನೂ, ಬೆಳ್ಳಿಯನ್ನೂ ನನ್ನ ಪವಿತ್ರ ದೇವರ ಮನೆಗೆ ಕೊಟ್ಟಿದ್ದೇನೆ.
וְעוֹד בִּרְצוֹתִי בְּבֵית אֱלֹהַי יֶשׁ־לִי סְגֻלָּה זָהָב וָכָסֶף נָתַתִּי לְבֵית־אֱלֹהַי לְמַעְלָה מִכָּל־הֲכִינוֹתִי לְבֵית הַקֹּֽדֶשׁ׃
4 ಮನೆಗಳ ಗೋಡೆಗಳನ್ನು ಹೊದಿಸುವುದಕ್ಕೆ ಓಫೀರ್ ಬಂಗಾರದಲ್ಲಿ 100 ಮೆಟ್ರಿಕ್ ಟನ್ ಬಂಗಾರವನ್ನೂ, 240 ಮೆಟ್ರಿಕ್ ಟನ್ ಚೊಕ್ಕ ಬೆಳ್ಳಿಯನ್ನೂ ಕೊಟ್ಟಿದ್ದೇನೆ.
שְׁלֹשֶׁת אֲלָפִים כִּכְּרֵי זָהָב מִזְּהַב אוֹפִיר וְשִׁבְעַת אֲלָפִים כִּכַּר־כֶּסֶף מְזֻקָּק לָטוּחַ קִירוֹת הַבָּתִּֽים׃
5 ಅಕ್ಕಸಾಲಿಗರು ಮಾಡಬಹುದಾದ ಎಲ್ಲಾ ತರದ ಬೆಳ್ಳಿಬಂಗಾರದ ಸಾಮಾನುಗಳನ್ನು ಮಾಡಿಸಬೇಕು. ಈ ದಿನ ತನ್ನನ್ನೇ ಯೆಹೋವ ದೇವರಿಗೆ ಇಷ್ಟಪೂರ್ವಕವಾಗಿ ಸಮರ್ಪಿಸಿಕೊಳ್ಳುವವರು ಯಾರು?” ಎಂದನು.
לַזָּהָב לַזָּהָב וְלַכֶּסֶף לַכֶּסֶף וּלְכָל־מְלָאכָה בְּיַד חָרָשִׁים וּמִי מִתְנַדֵּב לְמַלֹּאות יָדוֹ הַיּוֹם לַיהוָֽה׃
6 ಆಗ ಪಿತೃಗಳ ಪ್ರಧಾನರೂ, ಇಸ್ರಾಯೇಲ್ ಗೋತ್ರಗಳ ಪ್ರಧಾನರೂ, ಸಹಸ್ರಾಧಿಪತಿಗಳೂ ಶತಾಧಿಪತಿಗಳೂ, ಅರಸನ ಕೆಲಸದ ಯಜಮಾನರೂ ಇಷ್ಟಪೂರ್ವಕವಾಗಿ ಕಾಣಿಕೆಗಳನ್ನು ತಂದು,
וַיִּֽתְנַדְּבוּ שָׂרֵי הָאָבוֹת וְשָׂרֵי ׀ שִׁבְטֵי יִשְׂרָאֵל וְשָׂרֵי הָאֲלָפִים וְהַמֵּאוֹת וּלְשָׂרֵי מְלֶאכֶת הַמֶּֽלֶךְ׃
7 ಯೆಹೋವ ದೇವರ ಮನೆಯ ಸೇವೆಗೋಸ್ಕರ ಬಂಗಾರವನ್ನೂ 17 0 ಮೆಟ್ರಿಕ್ ಟನ್, ಮತ್ತು 10,000 ಬಂಗಾರದ ನಾಣ್ಯಗಳನ್ನೂ 34 5 ಮೆಟ್ರಿಕ್ ಟನ್ ಬೆಳ್ಳಿಯನ್ನೂ, 61 0 ಮೆಟ್ರಿಕ್ ಟನ್ ಕಂಚನ್ನೂ, 34 50 ಮೆಟ್ರಿಕ್ ಟನ್ ಕಬ್ಬಿಣವನ್ನೂ ಕೊಟ್ಟರು.
וַֽיִּתְּנוּ לַעֲבוֹדַת בֵּית־הָאֱלֹהִים זָהָב כִּכָּרִים חֲמֵֽשֶׁת־אֲלָפִים וַאֲדַרְכֹנִים רִבּוֹ וְכֶסֶף כִּכָּרִים עֲשֶׂרֶת אֲלָפִים וּנְחֹשֶׁת רִבּוֹ וּשְׁמוֹנַת אֲלָפִים כִּכָּרִים וּבַרְזֶל מֵֽאָה־אֶלֶף כִּכָּרִֽים׃
8 ಇದಲ್ಲದೆ ಯಾರ ಬಳಿಯಲ್ಲಿ ಅಮೂಲ್ಯ ರತ್ನಗಳು ಇದ್ದವೋ, ಅವರು ಗೇರ್ಷೋನ್ಯನಾದ ಯೆಹೀಯೇಲನ ಕೈಯಿಂದ ಅವುಗಳನ್ನು ಯೆಹೋವ ದೇವರ ಆಲಯದ ಬೊಕ್ಕಸಕ್ಕೆ ಕೊಟ್ಟರು.
וְהַנִּמְצָא אִתּוֹ אֲבָנִים נָתְנוּ לְאוֹצַר בֵּית־יְהוָה עַל יַד־יְחִיאֵל הַגֵּרְשֻׁנִּֽי׃
9 ಆಗ ಜನರು ಸಂತೋಷವಾಗಿ ಕಾಣಿಕೆಗಳನ್ನು ಅರ್ಪಿಸಿದ್ದರಿಂದ, ಜನರು ಸಂತೋಷಪಟ್ಟರು. ಏಕೆಂದರೆ ಅವರು ಪೂರ್ಣಮನಸ್ಸಿನಿಂದ ಮನಃಪೂರ್ವಕವಾಗಿ ಯೆಹೋವ ದೇವರಿಗೆ ಅರ್ಪಿಸಿದರು. ಅರಸನಾದ ದಾವೀದನು ಮಹಾ ಸಂತೋಷಪಟ್ಟನು.
וַיִּשְׂמְחוּ הָעָם עַל־הִֽתְנַדְּבָם כִּי בְּלֵב שָׁלֵם הִֽתְנַדְּבוּ לַיהוָה וְגַם דָּוִיד הַמֶּלֶךְ שָׂמַח שִׂמְחָה גְדוֹלָֽה׃
10 ದಾವೀದನು ಸಮಸ್ತ ಕೂಟದ ಮುಂದೆ ಯೆಹೋವ ದೇವರನ್ನು ಕೊಂಡಾಡಿ ಹೇಳಿದ್ದೇನೆಂದರೆ, “ನಮ್ಮ ತಂದೆಯಾದ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ನೀವು ಯುಗಯುಗಾಂತರಗಳಿಂದ ಯುಗಯುಗಾಂತರಗಳಿಗೂ ಸ್ತುತಿಗೆ ಪಾತ್ರರಾಗಿದ್ದೀರಿ.
וַיְבָרֶךְ דָּוִיד אֶת־יְהוָה לְעֵינֵי כָּל־הַקָּהָל וַיֹּאמֶר דָּוִיד בָּרוּךְ אַתָּה יְהוָה אֱלֹהֵי יִשְׂרָאֵל אָבִינוּ מֵעוֹלָם וְעַד־עוֹלָֽם׃
11 ಯೆಹೋವ ದೇವರೇ, ಮಹತ್ವವೂ, ಪರಾಕ್ರಮವೂ, ಮಹಿಮೆಯೂ, ಜಯವೂ, ವೈಭವವೂ ನಿಮ್ಮವೇ. ಆಕಾಶಗಳಲ್ಲಿಯೂ, ಭೂಮಿಯಲ್ಲಿಯೂ ಇರುವುದೆಲ್ಲಾ ನಿಮ್ಮದೇ. ಯೆಹೋವ ದೇವರೇ, ರಾಜ್ಯವು ನಿಮ್ಮದು. ನೀವು ಸಮಸ್ತಕ್ಕೂ ತಲೆಯಾಗಿ ಉನ್ನತರು.
לְךָ יְהוָה הַגְּדֻלָּה וְהַגְּבוּרָה וְהַתִּפְאֶרֶת וְהַנֵּצַח וְהַהוֹד כִּי־כֹל בַּשָּׁמַיִם וּבָאָרֶץ לְךָ יְהוָה הַמַּמְלָכָה וְהַמִּתְנַשֵּׂא לְכֹל ׀ לְרֹֽאשׁ׃
12 ಐಶ್ವರ್ಯವೂ, ಘನವೂ ನಿಮ್ಮ ಬಳಿಯಿಂದ ಬರುತ್ತವೆ. ನೀವು ಸಮಸ್ತವನ್ನು ಆಳಿಕೆಮಾಡುವವರು. ಶಕ್ತಿಯೂ, ಪರಾಕ್ರಮವೂ ನಿಮ್ಮ ಕೈಯಲ್ಲಿ ಇವೆ. ಎಲ್ಲರಿಗೂ ಉನ್ನತಿಯನ್ನೂ, ಬಲವನ್ನೂ ಕೊಡುವುದು ನಿಮ್ಮ ಕೈಯಲ್ಲಿ ಇದೆ.
וְהָעֹשֶׁר וְהַכָּבוֹד מִלְּפָנֶיךָ וְאַתָּה מוֹשֵׁל בַּכֹּל וּבְיָדְךָ כֹּחַ וּגְבוּרָה וּבְיָדְךָ לְגַדֵּל וּלְחַזֵּק לַכֹּֽל׃
13 ಆದ್ದರಿಂದ ನಮ್ಮ ದೇವರೇ, ನಾವು ನಿಮ್ಮನ್ನು ಸ್ತುತಿಸಿ, ನಿಮ್ಮ ಮಹಿಮೆಯುಳ್ಳ ನಾಮವನ್ನು ಕೊಂಡಾಡುತ್ತೇವೆ.
וְעַתָּה אֱלֹהֵינוּ מוֹדִים אֲנַחְנוּ לָךְ וּֽמְהַֽלְלִים לְשֵׁם תִּפְאַרְתֶּֽךָ׃
14 “ಆದರೆ ನಾವು ಈ ಪ್ರಕಾರ ಇಷ್ಟಪೂರ್ತಿಯಾಗಿ ಅರ್ಪಿಸುವುದಕ್ಕೆ ಶಕ್ತಿಯನ್ನು ಹೊಂದಲು ನಾನೆಷ್ಟರವನು? ನನ್ನ ಜನರು ಎಷ್ಟರವರು? ಏಕೆಂದರೆ ಸಮಸ್ತವೂ ನಿಮ್ಮಿಂದಲೇ.
וְכִי מִי אֲנִי וּמִי עַמִּי כִּֽי־נַעְצֹר כֹּחַ לְהִתְנַדֵּב כָּזֹאת כִּֽי־מִמְּךָ הַכֹּל וּמִיָּדְךָ נָתַנּוּ לָֽךְ׃
15 ನಿಮ್ಮ ಕೈಯಿಂದಲೇ ನಿಮಗೆ ಅರ್ಪಿಸಿದೆವು. ಏಕೆಂದರೆ ನಾವು ನಿಮ್ಮ ಸಮ್ಮುಖದಲ್ಲಿ ನಮ್ಮ ಸಮಸ್ತ ಪಿತೃಗಳ ಹಾಗೆ ಪರದೇಶಸ್ಥರೂ, ಪ್ರವಾಸಿಗಳೂ ಆಗಿದ್ದೇವೆ. ಭೂಮಿಯ ಮೇಲೆ ನಮ್ಮ ದಿವಸಗಳು ನೆರಳಿನ ಹಾಗೆ ಇವೆ; ನಿರೀಕ್ಷೆಯು ಇಲ್ಲ.
כִּֽי־גֵרִים אֲנַחְנוּ לְפָנֶיךָ וְתוֹשָׁבִים כְּכָל־אֲבֹתֵינוּ כַּצֵּל ׀ יָמֵינוּ עַל־הָאָרֶץ וְאֵין מִקְוֶֽה׃
16 ನಮ್ಮ ದೇವರಾದ ಯೆಹೋವ ದೇವರೇ, ನಿಮ್ಮ ಪರಿಶುದ್ಧ ನಾಮಕ್ಕೋಸ್ಕರ ನಿಮಗೆ ಆಲಯವನ್ನು ಕಟ್ಟಿಸಲು ನಾವು ಸಿದ್ಧಮಾಡಿದ ಈ ರಾಶಿಯೆಲ್ಲಾ ನಿಮ್ಮಿಂದ ಬಂದದ್ದು. ಸಮಸ್ತವೂ ನಿಮ್ಮದು.
יְהוָה אֱלֹהֵינוּ כֹּל הֶהָמוֹן הַזֶּה אֲשֶׁר הֲכִינֹנוּ לִבְנֽוֹת־לְךָ בַיִת לְשֵׁם קָדְשֶׁךָ מִיָּדְךָ היא הוּא וּלְךָ הַכֹּֽל׃
17 ನನ್ನ ದೇವರೇ, ನೀವು ಹೃದಯವನ್ನು ಪರಿಶೋಧಿಸಿ ಯಥಾರ್ಥತೆಯಲ್ಲಿ ಸಂತೋಷವಾಗಿದ್ದೀರಿ, ಎಂದು ನಾನು ಬಲ್ಲೆನು. ನಾನು ಯಥಾರ್ಥವಾದ ಹೃದಯದಿಂದ ಇವುಗಳನ್ನೆಲ್ಲಾ ಇಷ್ಟಪೂರ್ವಕವಾಗಿ ಅರ್ಪಿಸಿದ್ದೇನೆ. ಇದಲ್ಲದೆ ಇಲ್ಲಿರುವ ನಿಮ್ಮ ಜನರು ನಿಮಗೆ ಇಷ್ಟಪೂರ್ವಕವಾಗಿ ಅರ್ಪಿಸುವುದನ್ನು ಈಗ ಕಂಡು ಸಂತೋಷಿಸಿದೆನು.
וְיָדַעְתִּי אֱלֹהַי כִּי אַתָּה בֹּחֵן לֵבָב וּמֵישָׁרִים תִּרְצֶה אֲנִי בְּיֹשֶׁר לְבָבִי הִתְנַדַּבְתִּי כָל־אֵלֶּה וְעַתָּה עַמְּךָ הַנִּמְצְאוּ־פֹה רָאִיתִי בְשִׂמְחָה לְהִֽתְנַדֶּב־לָֽךְ׃
18 ನಮ್ಮ ಪಿತೃಗಳಾದ ಅಬ್ರಹಾಮನ, ಇಸಾಕನ, ಇಸ್ರಾಯೇಲನ ದೇವರಾದ ಯೆಹೋವ ದೇವರೇ, ನಿಮ್ಮ ಜನರ ಹೃದಯದ ಮನೋಭಾವನೆಯಲ್ಲಿ ಭಕ್ತಿಯನ್ನು ನಿರಂತರವಾಗಿ ಕಾಪಾಡಿ, ಅವರ ಹೃದಯವನ್ನು ನಿಮಗೆ ಸಿದ್ಧಮಾಡಿ.
יְהוָה אֱלֹהֵי אַבְרָהָם יִצְחָק וְיִשְׂרָאֵל אֲבֹתֵינוּ שֳׁמְרָה־זֹּאת לְעוֹלָם לְיֵצֶר מַחְשְׁבוֹת לְבַב עַמֶּךָ וְהָכֵן לְבָבָם אֵלֶֽיךָ׃
19 ಇದಲ್ಲದೆ ನಿಮ್ಮ ಆಜ್ಞೆಗಳನ್ನೂ, ನಿಮ್ಮ ಸಾಕ್ಷಿಗಳನ್ನೂ, ನಿಮ್ಮ ಕಟ್ಟಳೆಗಳನ್ನೂ ಕೈಗೊಳ್ಳಲೂ, ಸಮಸ್ತವನ್ನು ಮಾಡಲೂ ನಾನು ಯಾವುದಕ್ಕೋಸ್ಕರ ಸಿದ್ಧ ಮಾಡಿದೆನೋ, ಆ ಮಹಾ ಕಟ್ಟಡವನ್ನು ಕಟ್ಟಿಸಲೂ, ನನ್ನ ಮಗನಾದ ಸೊಲೊಮೋನನಿಗೆ ಪೂರ್ಣ ಹೃದಯವನ್ನು ಕೊಡಿರಿ,” ಎಂದನು.
וְלִשְׁלֹמֹה בְנִי תֵּן לֵבָב שָׁלֵם לִשְׁמוֹר מִצְוֺתֶיךָ עֵדְוֺתֶיךָ וְחֻקֶּיךָ וְלַעֲשׂוֹת הַכֹּל וְלִבְנוֹת הַבִּירָה אֲשֶׁר־הֲכִינֽוֹתִי׃
20 ತರುವಾಯ ದಾವೀದನು ಸಮಸ್ತ ಸಭೆಗೆ, “ಈಗ ನಿಮ್ಮ ದೇವರಾದ ಯೆಹೋವ ದೇವರನ್ನು ಸ್ತುತಿಸಿರಿ,” ಎಂದನು. ಆಗ ಜನರೆಲ್ಲರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಸ್ತುತಿಸುತ್ತಾ, ತಮ್ಮ ತಲೆಗಳನ್ನು ಬಾಗಿಸಿ ಯೆಹೋವ ದೇವರನ್ನೂ, ಅರಸನನ್ನೂ ವಂದಿಸಿದರು.
וַיֹּאמֶר דָּוִיד לְכָל־הַקָּהָל בָּֽרְכוּ־נָא אֶת־יְהוָה אֱלֹהֵיכֶם וַיְבָרֲכוּ כָֽל־הַקָּהָל לַיהוָה אֱלֹהֵי אֲבֹֽתֵיהֶם וַיִּקְּדוּ וַיִּֽשְׁתַּחֲווּ לַיהוָה וְלַמֶּֽלֶךְ׃
21 ಮಾರನೆಯ ದಿವಸದಲ್ಲಿ ಅವರು ಯೆಹೋವ ದೇವರಿಗೆ ಬಲಿಗಳನ್ನು ವಧಿಸಿ, ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಿದರು. ಸಾವಿರ ಹೋರಿಗಳನ್ನೂ, ಸಾವಿರ ಟಗರುಗಳನ್ನೂ, ಸಾವಿರ ಕುರಿಮರಿಗಳನ್ನೂ, ಅವುಗಳ ಪಾನದ ಅರ್ಪಣೆಗಳನ್ನೂ, ಸಮಸ್ತ ಇಸ್ರಾಯೇಲರಿಗೋಸ್ಕರ ಬಹಳವಾಗಿ ಬಲಿಗಳನ್ನು ಅರ್ಪಿಸಿದರು.
וַיִּזְבְּחוּ לַיהוָה ׀ זְבָחִים וַיַּעֲלוּ עֹלוֹת לַיהוָה לְֽמָחֳרַת הַיּוֹם הַהוּא פָּרִים אֶלֶף אֵילִים אֶלֶף כְּבָשִׂים אֶלֶף וְנִסְכֵּיהֶם וּזְבָחִים לָרֹב לְכָל־יִשְׂרָאֵֽל׃
22 ಆ ದಿವಸದಲ್ಲಿ ಮಹಾ ಸಂತೋಷದಿಂದ ಯೆಹೋವ ದೇವರ ಮುಂದೆ ತಿಂದು ಕುಡಿದರು. ಎರಡನೆಯ ಸಾರಿ ದಾವೀದನ ಮಗ ಸೊಲೊಮೋನನನ್ನು ಅರಸನನ್ನಾಗಿ ಸ್ವೀಕರಿಸಿದರು. ಯೆಹೋವ ದೇವರ ಮುಂದೆ ಅವನನ್ನು ನಾಯಕನಾಗಿಯೂ ಚಾದೋಕನನ್ನು ಯಾಜಕನಾಗಿಯೂ ಅಭಿಷೇಕಿಸಿದರು.
וַיֹּאכְלוּ וַיִּשְׁתּוּ לִפְנֵי יְהוָה בַּיּוֹם הַהוּא בְּשִׂמְחָה גְדוֹלָה וַיַּמְלִיכוּ שֵׁנִית לִשְׁלֹמֹה בֶן־דָּוִיד וַיִּמְשְׁחוּ לַיהוָה לְנָגִיד וּלְצָדוֹק לְכֹהֵֽן׃
23 ಆಗ ಸೊಲೊಮೋನನು ತನ್ನ ತಂದೆಯಾದ ದಾವೀದನಿಗೆ ಬದಲಾಗಿ ಅರಸನಾಗಿ, ಯೆಹೋವ ದೇವರ ಸಿಂಹಾಸನದ ಮೇಲೆ ಕುಳಿತುಕೊಂಡು, ಸಮೃದ್ಧಿ ಹೊಂದಿದನು. ಸಮಸ್ತ ಇಸ್ರಾಯೇಲರು ಅವನಿಗೆ ವಿಧೇಯರಾದರು.
וַיֵּשֶׁב שְׁלֹמֹה עַל־כִּסֵּא יְהוָה ׀ לְמֶלֶךְ תַּֽחַת־דָּוִיד אָבִיו וַיַּצְלַח וַיִּשְׁמְעוּ אֵלָיו כָּל־יִשְׂרָאֵֽל׃
24 ಎಲ್ಲಾ ಪ್ರಧಾನರೂ, ಪರಾಕ್ರಮಶಾಲಿಗಳೂ, ಅರಸನಾದ ದಾವೀದನ ಸಮಸ್ತ ಪುತ್ರರೂ ಅರಸನಾದ ಸೊಲೊಮೋನನಿಗೆ ಅಧೀನರಾದರು.
וְכָל־הַשָּׂרִים וְהַגִּבֹּרִים וְגַם כָּל־בְּנֵי הַמֶּלֶךְ דָּוִיד נָתְנוּ יָד תַּחַת שְׁלֹמֹה הַמֶּֽלֶךְ׃
25 ಇದಲ್ಲದೆ ಯೆಹೋವ ದೇವರು ಸಮಸ್ತ ಇಸ್ರಾಯೇಲಿನ ಸಮ್ಮುಖದಲ್ಲಿ ಸೊಲೊಮೋನನನ್ನು ಅಧಿಕವಾಗಿ ಹೆಚ್ಚಿಸಿ, ಇಸ್ರಾಯೇಲಿನಲ್ಲಿ ಅವನಿಗಿಂತ ಮುಂಚೆ ಇದ್ದ ಯಾವ ಅರಸನಿಗಾದರೂ ಇಲ್ಲದಂಥ ರಾಜ್ಯದ ವೈಭವವನ್ನು ಅವನಿಗೆ ಕೊಟ್ಟರು.
וַיְגַדֵּל יְהוָה אֶת־שְׁלֹמֹה לְמַעְלָה לְעֵינֵי כָּל־יִשְׂרָאֵל וַיִּתֵּן עָלָיו הוֹד מַלְכוּת אֲשֶׁר לֹֽא־הָיָה עַל־כָּל־מֶלֶךְ לְפָנָיו עַל־יִשְׂרָאֵֽל׃
26 ಇಷಯನ ಮಗ ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳಿದನು.
וְדָוִיד בֶּן־יִשָׁי מָלַךְ עַל־כָּל־יִשְׂרָאֵֽל׃
27 ಅವನು ಇಸ್ರಾಯೇಲಿನ ಮೇಲೆ ಆಳಿದ ದಿವಸಗಳು ನಾಲ್ವತ್ತು ವರ್ಷಗಳು. ಏಳು ವರ್ಷ ಹೆಬ್ರೋನಿನಲ್ಲಿ ಆಳಿದನು. ಮೂವತ್ತಮೂರು ವರ್ಷ ಯೆರೂಸಲೇಮಿನಲ್ಲಿ ಆಳಿದನು.
וְהַיָּמִים אֲשֶׁר מָלַךְ עַל־יִשְׂרָאֵל אַרְבָּעִים שָׁנָה בְּחֶבְרוֹן מָלַךְ שֶׁבַע שָׁנִים וּבִירוּשָׁלַ͏ִם מָלַךְ שְׁלֹשִׁים וְשָׁלֽוֹשׁ׃
28 ಅವನು ದೀರ್ಘಾಯುಷ್ಯದಿಂದಲೂ, ಐಶ್ವರ್ಯದಿಂದಲೂ, ಘನದಿಂದಲೂ ಕೂಡಿದವನಾಗಿ, ಒಳ್ಳೆಯ ಪ್ರಾಯದಲ್ಲಿ ಮರಣಹೊಂದಿದನು. ಅವನ ಮಗ ಸೊಲೊಮೋನನು ಅವನಿಗೆ ಬದಲಾಗಿ ಅರಸನಾದನು.
וַיָּמָת בְּשֵׂיבָה טוֹבָה שְׂבַע יָמִים עֹשֶׁר וְכָבוֹד וַיִּמְלֹךְ שְׁלֹמֹה בְנוֹ תַּחְתָּֽיו׃
29 ಅರಸನಾದ ದಾವೀದನ ಕ್ರಿಯೆಗಳು ಮೊದಲಿನಿಂದ ಕೊನೆಯವರೆಗೆ ಅವನ ಸಮಸ್ತ ಆಳಿಕೆಯೂ, ಅವನ ಪರಾಕ್ರಮವೂ, ಅವನ ಮೇಲೆಯೂ, ಇಸ್ರಾಯೇಲಿನ ಮೇಲೆಯೂ, ಬೇರೆ ದೇಶಗಳ ಸಮಸ್ತ ರಾಜ್ಯಗಳ ಮೇಲೆಯೂ ಸಂಭವಿಸಿದ ಘಟನೆಗಳು,
וְדִבְרֵי דָּוִיד הַמֶּלֶךְ הָרִאשֹׁנִים וְהָאֲחרֹנִים הִנָּם כְּתוּבִים עַל־דִּבְרֵי שְׁמוּאֵל הָרֹאֶה וְעַל־דִּבְרֵי נָתָן הַנָּבִיא וְעַל־דִּבְרֵי גָּד הַחֹזֶֽה׃
30 ದರ್ಶಿಯಾದ ಸಮುಯೇಲನ ಪುಸ್ತಕದಲ್ಲಿ, ಪ್ರವಾದಿಯಾದ ನಾತಾನನ ಪುಸ್ತಕದಲ್ಲಿ ಮತ್ತು ದರ್ಶಿಯಾದ ಗಾದನ ಪುಸ್ತಕದಲ್ಲಿಯೂ ಲಿಖಿತವಾಗಿವೆ.
עִם כָּל־מַלְכוּתוֹ וּגְבוּרָתוֹ וְהָעִתִּים אֲשֶׁר עָבְרוּ עָלָיו וְעַל־יִשְׂרָאֵל וְעַל כָּל־מַמְלְכוֹת הָאֲרָצֽוֹת׃ 943 29 4 4

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 29 >