< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 27 >
1 ಇಸ್ರಾಯೇಲರು ತಮ್ಮ ಲೆಕ್ಕದ ಪ್ರಕಾರವಾಗಿ ಹೀಗೆಯೇ ಇದ್ದರು. ಹೇಗೆಂದರೆ, ಕುಟುಂಬಗಳ ಮುಖ್ಯಸ್ಥರೂ ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ, ಅಧಿಪತಿಗಳೂ ವರ್ಷದ ಎಲ್ಲಾ ತಿಂಗಳುಗಳಲ್ಲಿ ಪ್ರತಿ ತಿಂಗಳು ಸರತಿಯಂತೆ ಬರುತ್ತಿದ್ದ ವರ್ಗಗಳ ಕಾರ್ಯಗಳಲ್ಲಿ ಅರಸನನ್ನು ಸೇವಿಸಿದ ಅವರ ಪಾರುಪತ್ಯಗಾರರೂ ಪ್ರತಿವರ್ಗದಲ್ಲಿ 24,000 ಮಂದಿಯಿದ್ದರು.
이스라엘 자손의 모든 족장과 천부장과 백부장과 왕을 섬기는 유사들이 그 인수대로 반차가 나누이니 각 반열이 이만 사천 명씩이라 일 년 동안 달마다 체번하여 들어가며 나왔으니
2 ಮೊದಲನೆಯ ತಿಂಗಳಿಗೋಸ್ಕರ ಮೊದಲನೆಯ ವರ್ಗದ ಮೇಲೆ ಜಬ್ದಿಯೇಲನ ಮಗ ಯಾಷೊಬ್ಬಾಮನು. ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
정월 첫반의 반당은 삽디엘의 아들 야소브암이요 그 반열에 이만 사천 명이라
3 ಮೊದಲನೆಯ ತಿಂಗಳಿನ ಸೈನ್ಯದ ಸಮಸ್ತ ಅಧಿಪತಿಗಳಲ್ಲಿದ್ದ ಪ್ರಧಾನನಾದವನು ಪೆರೆಚನ ಮಕ್ಕಳಲ್ಲಿ ಒಬ್ಬನಾಗಿದ್ದನು.
저는 베레스의 자손으로서 정월반의 모든 장관의 두목이 되었고
4 ಎರಡನೆಯ ತಿಂಗಳಿನ ವರ್ಗದ ಮೇಲೆ ಅಹೋಹ್ಯನಾದ ದೊದಾಯಿಯು. ಅವನ ವರ್ಗದಲ್ಲಿ ಮಿಕ್ಲೋತನು ನಾಯಕನಾಗಿದ್ದನು. ಅವನ ವರ್ಗದಲ್ಲಿ 24,000 ಜನರಿದ್ದರು.
이월반의 반장은 아호아 사람 도대요 또 마글롯이 그 반의 주장이 되었으니 그 반열에 이만 사천 명이요
5 ಮೂರನೆಯ ತಿಂಗಳಿನ ಸೈನ್ಯದ ಮೂರನೆಯ ಅಧಿಪತಿಯು, ಯಾಜಕನಾಗಿರುವ ಯೆಹೋಯಾದಾವನ ಮಗ ಬೆನಾಯನು. ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
삼월 군대의 셋째 장관은 대제사장 여호야다의 아들 브나야요 그 반열에 이만 사천 명이라
6 ಈ ಬೆನಾಯನು ಮೂವತ್ತು ಮಂದಿಯಲ್ಲಿ ಪರಾಕ್ರಮಶಾಲಿಯಾದವನಾಗಿ ಮೂವತ್ತು ಮಂದಿಯ ಮೇಲೆ ಮುಖ್ಯಸ್ಥನಾಗಿದ್ದನು. ಅವನ ವರ್ಗದಲ್ಲಿ ಅವನ ಮಗ ಅಮ್ಮೀಜಾಬಾದನು ಇದ್ದನು.
이 브나야는 삼십 인 중에 용사요 삼십 인 위에 있으며 그 반열 중에 그 아들 암미사밧이 있으며
7 ನಾಲ್ಕನೆಯ ತಿಂಗಳಿನ ನಾಲ್ಕನೆಯವನು ಯೋವಾಬನ ಸಹೋದರನಾದ ಅಸಾಯೇಲನು; ಅವನ ತರುವಾಯ ಅವನ ಮಗ ಜೆಬದ್ಯನು; ಅವನ ವರ್ಗದಲ್ಲಿ 24,000 ಜನರು.
사월 넷째 장관은 요압의 아우 아사헬이요 그 다음은 그 아들 스바댜니 그 반열에 이만 사천 명이요
8 ಐದನೆಯ ತಿಂಗಳಿನ ಐದನೆಯ ಅಧಿಪತಿಯು ಇಜ್ರಾಹನಾದ ಶಮ್ಹೂತನು; ಅವನ ವರ್ಗದಲ್ಲಿ 24,000 ಜನರು.
오월 다섯째 장관은 이스라 사람 삼훗이니 그 반열에 이만 사천 명이요
9 ಆರನೆಯ ತಿಂಗಳಿನ ಆರನೆಯವನು ತೆಕೋವಿಯನಾಗಿರುವ ಇಕ್ಕೇಷನ ಮಗ ಈರನು; ಅವನ ವರ್ಗದಲ್ಲಿ 24,000 ಜನರು.
유월 여섯째 장관은 드고아 사람 익게스의 아들 이라니 그 반열에 이만 사천 명이요
10 ಏಳನೆಯ ತಿಂಗಳಿನ ಏಳನೆಯವನು ಎಫ್ರಾಯೀಮನ ಮಕ್ಕಳಲ್ಲಿ ಒಬ್ಬನಾಗಿರುವ ಪೆಲೋನ್ಯನಾದ ಹೆಲೆಚನು; ಅವನ ವರ್ಗದಲ್ಲಿ 24,000 ಜನರು.
칠월 일곱째 장관은 에브라임 자손에 속한 발론 사람 헬레스니 그 반열에 이만 사천 명이요
11 ಎಂಟನೆಯ ತಿಂಗಳಿನ ಎಂಟನೆಯವನು ಜೆರಹಿಯರಲ್ಲಿ ಒಬ್ಬನಾಗಿರುವ ಹುಷಾತ್ಯನಾದ ಸಿಬ್ಬೆಕೈ; ಅವನ ವರ್ಗದಲ್ಲಿ 24,000 ಜನರು.
팔월 여덟째 장관은 세라 족속 후사 사람 십브개니 그 반열에 이만 사천 명이요
12 ಒಂಬತ್ತನೆಯ ತಿಂಗಳಿನ ಒಂಬತ್ತನೆಯವನು ಬೆನ್ಯಾಮೀನ್ಯರಲ್ಲಿ ಒಬ್ಬನಾಗಿರುವ ಅನಾತೋತ್ಯನಾದ ಅಬೀಯೆಜೆರನು; ಅವನ ವರ್ಗದಲ್ಲಿ 24,000 ಜನರು.
구월 아홉째 장관은 베냐민 자손 아나돗 사람 아비에셀이니 그 반열에 이만 사천 명이요
13 ಹತ್ತನೆಯ ತಿಂಗಳಿನ ಹತ್ತನೆಯವನು ಜೆರಹಿಯರಲ್ಲಿ ಒಬ್ಬನಾಗಿರುವ ನೆಟೋಫದವನಾದ ಮಹರೈಯು ಅವನ ವರ್ಗದಲ್ಲಿ 24,000 ಜನರು.
시월 열째 장관은 세라 족속 느도바 사람 마하래니 그 반열에 이만 사천 명이요
14 ಹನ್ನೊಂದನೆಯ ತಿಂಗಳಿನ ಹನ್ನೊಂದನೆಯವನು ಎಫ್ರಾಯೀಮನ ಮಕ್ಕಳಲ್ಲಿ ಒಬ್ಬನಾಗಿರುವ ಪಿರಾತೋನ್ಯನಾದ ಬೆನಾಯನು; ಅವನ ವರ್ಗದಲ್ಲಿ 24,000 ಜನರು.
십일월 열한째 장관은 에브라임 자손에 속한 비라돈 사람 브나야니 그 반열에 이만 사천 명이요
15 ಹನ್ನೆರಡನೆಯ ತಿಂಗಳಿನ ಹನ್ನೆರಡನೆಯವನು ಒತ್ನಿಯೇಲನ ಮಕ್ಕಳಲ್ಲಿ ಒಬ್ಬನಾಗಿರುವ ನೆಟೋಫದವನಾದ ಹೆಲ್ದಾಯಿಯು; ಅವನ ವರ್ಗದಲ್ಲಿ 24,000 ಜನರು.
십이월 열둘째 장관은 옷니엘 자손에 속한 느도바 사람 헬대니 그 반열에 이만 사천 명이었더라
16 ಇಸ್ರಾಯೇಲಿನ ಗೋತ್ರಗಳ ಮೇಲೆ ಇರುವ ಅಧಿಕಾರಿಗಳು ಯಾರೆಂದರೆ: ರೂಬೇನ್ಯರ ಮೇಲೆ ನಾಯಕನು, ಜಿಕ್ರಿಯ ಮಗ ಎಲೀಯೆಜೆರನು. ಸಿಮೆಯೋನ್ಯರ ಮೇಲೆ ನಾಯಕನು, ಮಾಕನ ಮಗ ಶೆಫಟ್ಯನು.
이스라엘 지파를 관할하는 자는 이러하니라 르우벤 사람의 관장은 시그리의 아들 엘리에셀이요 시므온 사람의 관장은 마아가의 아들 스바댜요
17 ಲೇವಿಯರ ಮೇಲೆ ಕೆಮುವೇಲನ ಮಗ ಹಷಬ್ಯನು. ಆರೋನ್ಯರ ಮೇಲೆ ಚಾದೋಕನು.
레위 사람의 관장은 그무엘의 아들 하사뱌요 아론 자손의 관장은 사독이요
18 ಯೆಹೂದನಿಗೆ ದಾವೀದನ ಸಹೋದರರಲ್ಲಿ ಒಬ್ಬನಾಗಿರುವ ಎಲೀಹುವು; ಇಸ್ಸಾಕಾರನಿಗೆ ಮೀಕಾಯೇಲನ ಮಗ ಒಮ್ರಿಯು.
유다의 관장은 다윗의 형 엘리후요 잇사갈의 관장은 미가엘의 아들 오므리요
19 ಜೆಬುಲೂನನಿಗೆ ಓಬದ್ಯನ ಮಗ ಇಷ್ಮಾಯನು ನಫ್ತಾಲಿಯ ಗೋತ್ರಕ್ಕೆ ಅಜ್ರಿಯೇಲನ ಮಗ ಯೆರೀಮೋತನು.
스불론의 관장은 오바댜의 아들 이스마야요 납달리의 관장은 아스리엘의 아들 여레못이요
20 ಎಫ್ರಾಯೀಮನ ಮಕ್ಕಳಲ್ಲಿ ಅಜಜ್ಯನ ಮಗ ಹೋಶೇಯನು; ಮನಸ್ಸೆಯ ಅರ್ಧ ಗೋತ್ರಕ್ಕೆ ಪೆದಾಯನ ಮಗ ಯೋಯೇಲನು.
에브라임 자손의 관장은 아사시야의 아들 호세아요 므낫세 반 지파의 관장은 브다야의 아들 요엘이요
21 ಗಿಲ್ಯಾದಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರಕ್ಕೆ ಜೆಕರ್ಯನ ಮಗ ಇದ್ದೋನು; ಬೆನ್ಯಾಮೀನನ ಗೋತ್ರಕ್ಕೆ ಅಬ್ನೇರನ ಮಗ ಯಾಸೀಯೇಲನು;
길르앗에 있는 므낫세 반 지파의 관장은 스가랴의 아들 잇도요 베냐민의 관장은 아브넬의 아들 야아시엘이요
22 ದಾನನ ಗೋತ್ರಕ್ಕೆ ಯೆರೋಹಾಮನ ಮಗ ಅಜರಯೇಲ್. ಇವರೇ ಇಸ್ರಾಯೇಲಿನ ಗೋತ್ರಗಳ ಪ್ರಧಾನರು.
단의 관장은 여로함의 아들 아사렐이니 이스라엘 지파의 관장이 이러하며
23 ದಾವೀದನು ಇಪ್ಪತ್ತು ವರ್ಷಗಳೊಳಗೆ ಇದ್ದವರ ಲೆಕ್ಕ ತೆಗೆದುಕೊಳ್ಳಲಿಲ್ಲ. ಏಕೆಂದರೆ, “ಇಸ್ರಾಯೇಲನನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಾಗಿ ಮಾಡುವೆನು,” ಎಂದು ಯೆಹೋವ ದೇವರು ಹೇಳಿದ್ದರು.
이스라엘 사람의 이십 세 이하의 수효는 다윗이 조사하지 아니하였으니 이는 여호와께서 전에 말씀하시기를 이스라엘 사람을 하늘의 별 같이 많게 하리라 하셨음이라
24 ಚೆರೂಯಳ ಮಗ ಯೋವಾಬನು ಎಣಿಸಲು ಆರಂಭಿಸಿದನು. ಆದರೆ ಇಸ್ರಾಯೇಲಿಗೆ ವಿರೋಧವಾಗಿ ದೇವರ ಕೋಪಾಗ್ನಿಯು ಬಂದದ್ದರಿಂದ, ಅವನು ಪೂರ್ತಿಗೊಳಿಸಲಿಲ್ಲ. ಆ ಲೆಕ್ಕವು ಅರಸನಾದ ದಾವೀದನ ಇತಿಹಾಸಗಳ ಪುಸ್ತಕದಲ್ಲಿ ಲಿಖಿತವಾಗಲಿಲ್ಲ.
스루야의 아들 요압이 조사하기를 시작하고 끝내지 못하여서 그 일로 인하여 진노가 이스라엘에게 임한지라 그 수효를 다윗 왕의 역대지략에 기록하지 아니하였더라
25 ಅರಸನ ಬೊಕ್ಕಸಗಳ ಮೇಲೆ ಅದೀಯೇಲನ ಮಗ ಅಜ್ಮಾವೆತನು ಇದ್ದನು. ಹೊಲಗಳಲ್ಲಿಯೂ, ಪಟ್ಟಣಗಳಲ್ಲಿಯೂ, ಗ್ರಾಮಗಳಲ್ಲಿಯೂ, ಬುರುಜುಗಳ ಮೇಲೆಯೂ ಇದ್ದ ಉಗ್ರಾಣಗಳ ಮೇಲೆ ಉಜ್ಜೀಯನ ಮಗ ಯೋನಾತಾನನು ಇದ್ದನು.
아디엘의 아들 아스마웹은 왕의 곳간을 맡았고 웃시야의 아들 요나단은 밭과 성읍과 촌과 산성의 곳간을 맡았고
26 ಹೊಲವನ್ನು ವ್ಯವಸಾಯ ಮಾಡುವ ಕೆಲಸದವರ ಮೇಲೆ ಕೆಲೂಬನ ಮಗ ಎಜ್ರಿಯು ಇದ್ದನು.
글룹의 아들 에스리는 밭 가는 농부를 거느렸고
27 ರಾಮಾ ಊರಿನ ಶಿಮ್ಮೀ ದ್ರಾಕ್ಷಿತೋಟಗಳನ್ನು ನೋಡಿಕೊಳ್ಳುತ್ತಿದ್ದನು. ದ್ರಾಕ್ಷಿ ತೋಟಗಳಲ್ಲಿರುವ ದ್ರಾಕ್ಷಾರಸದ ಉಗ್ರಾಣಗಳ ಮೇಲೆ ಶಿಪ್ಮೀಯನಾದ ಜಬ್ದೀ ಜವಾಬ್ದಾರಿಯಾಗಿದ್ದನು.
라마 사람 시므이는 포도원을 맡았고 스밤 사람 삽디는 포도원의 소산 포도주 곳간을 맡았고
28 ತಗ್ಗಿನಲ್ಲಿರುವ ಓಲಿವ್ ಮರಗಳ ಮೇಲೆಯೂ, ಅತ್ತಿಮರಗಳ ಮೇಲೆಯೂ ಗೆದೇರ್ಯನಾದ ಬಾಳ್ ಹಾನಾನನು ಇದ್ದನು. ಎಣ್ಣೆಯ ಉಗ್ರಾಣಗಳ ಮೇಲೆ ಯೋವಾಷನು ಜವಾಬ್ದಾರಿಯಾಗಿದ್ದನು.
게델 사람 바알하난은 평야의 감람나무와 뽕나무를 맡았고 요아스는 기름 곳간을 맡았고
29 ಶಾರೋನಿನಲ್ಲಿ ಮೇಯಿಸುವ ದನಗಳ ಮೇಲೆ ಶಾರೋನಿನವನಾದ ಶಿಟ್ರೈ ಜವಾಬ್ದಾರಿಯಾಗಿದ್ದನು. ತಗ್ಗುಗಳಲ್ಲಿರುವ ದನಗಳ ಮೇಲೆ ಅಡ್ಲಾಯಿಯ ಮಗನಾದ ಶಾಫಾಟನು ಜವಾಬ್ದಾರಿಯಾಗಿದ್ದನು.
사론 사람 시드래는 사론에서 먹이는 소떼를 맡았고 아들래의 아들 사밧은 골짜기에 있는 소떼를 맡았고
30 ಒಂಟೆಗಳ ಮೇಲೆ ಜವಾಬ್ದಾರಿಯಾಗಿದ್ದವನು ಇಷ್ಮಾಯೇಲನಾದ ಓಬೀಲ್. ಕತ್ತೆಗಳ ಮೇಲೆ ಜವಾಬ್ದಾರಿಯಾಗಿದ್ದವನು ಮೇರೊನೋತ್ಯನಾದ ಯೆಹ್ದೆಯ.
이스마엘 사람 오빌은 약대를 맡았고 메로놋 사람 예드야는 나귀를 맡았고 하갈 사람 야시스는 양떼를 맡았으니
31 ಕುರಿ ಮಂದೆಗಳ ಮೇಲೆ ಜವಾಬ್ದಾರಿಯಾಗಿದ್ದವನು ಹಗ್ರೀಯನಾದ ಯಾಜೀಜ್. ಇವರೆಲ್ಲರು ಅರಸನಾದ ದಾವೀದನ ಸ್ವತ್ತಿನ ಮೇಲೆ ಪ್ರಧಾನರಾಗಿದ್ದರು.
다윗 왕의 재산을 맡은 자들이 이러하였더라
32 ಇದಲ್ಲದೆ ದಾವೀದನ ಚಿಕ್ಕಪ್ಪನಾದ ಯೋನಾತಾನನು ಗ್ರಹಿಕೆಯು, ವಿವೇಕಿಯೂ ಆದ ಲೇಖಕನಾಗಿದ್ದನು. ಹಕ್ಮೋನಿಯ ಮಗನಾದ ಯೆಹೀಯೇಲ್ ಅರಸನ ಪುತ್ರರನ್ನು ನೋಡಿಕೊಳ್ಳುತ್ತಿದ್ದನು.
다윗의 아자비 요나단은 지혜가 있어서 모사가 되며 서기관도 되었고 학모니의 아들 여히엘은 왕의 아들들의 배종이 되었고
33 ಅರಸನ ಆಲೋಚನೆಗಾರನು ಅಹೀತೋಫೆಲ್; ಅರಸನ ಆಪ್ತ ಸ್ನೇಹಿತನು ಅರ್ಕಿಯನಾದ ಹೂಷೈ.
아히도벨은 왕의 모사가 되었고 아렉 사람 후새는 왕의 벗이 되었고
34 ಅಹೀತೋಫೆಲನ ತರುವಾಯ ಬೆನಾಯನ ಮಗನಾದ ಯೆಹೋಯಾದಾವನೂ, ಅಬಿಯಾತರನೂ ಅರಸನ ಆಲೋಚನೆಗಾರರಾಗಿದ್ದರು. ಯೋವಾಬನು ಅರಸನ ಸೈನ್ಯಾಧಿಪತಿಯಾಗಿದ್ದನು.
브나야의 아들 여호야다와 아비아달은 아히도벨의 다음이 되었고 요압은 왕의 군대 장관이 되었더라