< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 25 >

1 ಇದಲ್ಲದೆ ದಾವೀದನೂ, ಸೈನ್ಯಾಧಿಪತಿಗಳೂ ಆಸಾಫ್, ಹೇಮಾನ್, ಯೆದುತೂನ್; ಇವರ ಪುತ್ರರಲ್ಲಿ ಕಿನ್ನರಿಗಳಿಂದಲೂ, ವೀಣೆಗಳಿಂದಲೂ, ತಾಳಗಳಿಂದಲೂ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರವಾಗಿತ್ತು.
Ferner bestellte David Dienstobere für die Dienstleistung der Söhne Asaphs, Hemans und Jedutuns, die mit Zithern, Harfen und Zimbeln vorspielen sollten. Es erfolgte aber eine Zählung der mit diesem Dienste Beschäftigten.
2 ಅವರು ಯಾರೆಂದರೆ: ಆಸಾಫನ ಪುತ್ರರಲ್ಲಿ ಜಕ್ಕೂರ್, ಯೋಸೇಫ, ನೆತನ್ಯ, ಅಶರೇಲ; ಇವರು ಆಸಾಫನ ಕೈಕೆಳಗೆ ಪ್ರವಾದಿಸಿದರು. ಇವರು ಅರಸನ ಮೇಲ್ವಿಚಾರಣೆಯಲ್ಲಿದ್ದರು.
Von Asaphs Söhnen standen Zakkur, Joseph, Netanja und Asarela, Asaphs Söhne, unter Asaph, der nach des Königs Geheiß vorspielte.
3 ಯೆದುತೂನನ ಪುತ್ರರಲ್ಲಿ ಗೆದಲ್ಯ, ಚೆರೀ, ಯೆಶಾಯ, ಶಿಮ್ಮೀ, ಹಷಬ್ಯ, ಮತ್ತಿತ್ಯ. ಈ ಆರು ಮಂದಿಯು ಯೆದುತೂನನ ಪುತ್ರರು. ತಮ್ಮ ತಂದೆ ಯೆದುತೂನನ ಕೈಕೆಳಗೆ ಕಿನ್ನರಿಗಳನ್ನು ಬಾರಿಸಿ, ಯೆಹೋವ ದೇವರನ್ನು ಕೊಂಡಾಡಿ, ಸ್ತುತಿಸಿ ಪ್ರವಾದಿಸುತ್ತಿದ್ದರು.
Von Jedutun standen Jedutuns Söhne Gedalja, Suri, Jesaja, Chasabja und Mattitja, sechs, mit Zithern unter ihrem Vater Jedutun, der beim Danksagen und beim Lobpreise des Herrn vorspielte.
4 ಹೇಮಾನನ ಪುತ್ರರಲ್ಲಿ ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೆಬೂಯೇಲ್, ಯೆರೀಮೋತ್, ಹನನ್ಯ, ಹನಾನೀ, ಎಲೀಯಾತ್, ಗಿದ್ದಲ್ತಿ, ರೋಮಮ್ತಿಯೆಜೆರ್, ಯೊಷ್ಬೆಕಾಷ, ಮಲ್ಲೋತಿ, ಹೋತೀರ್, ಮಹಜೀಯೋತ್.
Von Heman waren es Hemans Söhne Bukkiahu, Mattanjahu, Uzziel, Sebuel, Jerimot, Chananja, Chanani, Eliata, Giddalti, Romamtiezer, Josbekasa, Malloti, Hotir und Machaziot.
5 ಇವರೆಲ್ಲರು ದೇವರ ಕಾರ್ಯಗಳಲ್ಲಿ ಕೊಂಬು ಊದುವ ಅರಸನ ದರ್ಶಿಯಾದ ಹೇಮಾನನ ಪುತ್ರರು. ದೇವರು ಹೇಮಾನನಿಗೆ ಹದಿನಾಲ್ಕು ಮಂದಿ ಪುತ್ರರನ್ನೂ, ಮೂರು ಮಂದಿ ಪುತ್ರಿಯರನ್ನೂ ಕೊಟ್ಟಿದ್ದರು.
Dies alles sind Söhne Hemans, des königlichen Sehers in göttlichen Dingen und Zeichendeuters. Gott schenkte Heman vierzehn Söhne und drei Töchter.
6 ಯೆಹೋವ ದೇವರ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ, ಇವರೆಲ್ಲರೂ ತಮ್ಮ ತಂದೆಯ ನೇತೃತ್ವದಲ್ಲಿ ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನ ಮಾಡುತ್ತಿದ್ದರು. ಹೀಗೆ ಆಸಾಫ್, ಯೆದುತೂನ್, ಹೇಮಾನರು ಅರಸನ ಸೇವೆಯಲ್ಲಿದ್ದರು.
Diese alle standen unter ihrem Vater beim Gesang im Hause des Herrn, mit Zimbeln, Harfen und Zithern beim Dienst im Gotteshause unter dem König, Asaph, Jedutun und Heman.
7 ಹೀಗೆಯೇ ಅವರ ಲೆಕ್ಕವೂ, ಯೆಹೋವ ದೇವರ ಹಾಡುಗಳಲ್ಲಿ ತರಬೇತುಪಡೆದ ಸಮಸ್ತ ಪ್ರವೀಣರ ಲೆಕ್ಕ, ತಮ್ಮ ಸಹೋದರರ ಸಹಿತವಾಗಿ ಇನ್ನೂರ ಎಂಬತ್ತೆಂಟು ಮಂದಿಯಾಗಿದ್ದರು.
Ihre Zahl nebst der ihrer Brüder, die in den Liedern des Herrn wohlerfahren waren, insgesamt Meister, betrug 288.
8 ಇದಲ್ಲದೆ ಹಿರಿಯರು ಕಿರಿಯರ ಹಾಗೆಯೂ, ಶಿಷ್ಯನು ಬೋಧಕನ ಹಾಗೆಯೂ ವರ್ಗಕ್ಕೆ ಎದುರಾಗಿ ವರ್ಗದವರು ಚೀಟುಗಳನ್ನು ಹಾಕಿದರು.
Sie warfen Lose für den Dienst, für den der jüngeren und für den der Älteren, für Meister und Schüler.
9 ಆಸಾಫನಿಗೋಸ್ಕರ ಮೊದಲನೆಯ ಚೀಟು ಯೋಸೇಫನಿಗೆ ಬಂತು. ಎರಡನೆಯದು ಗೆದಲ್ಯನಿಗೆ; ಅವನೂ, ಅವನ ಸಹೋದರರೂ, ಅವನ ಪುತ್ರರೂ ಹನ್ನೆರಡು ಮಂದಿ.
Das erste Los Asaphs fiel auf Joseph, das zweite auf Gedalja; er, seine Brüder und Söhne waren zusammen zwölf,
10 ಮೂರನೆಯದು ಜಕ್ಕೂರನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ;
das dritte auf Zakkur; seine Söhne und Brüder: zwölf,
11 ನಾಲ್ಕನೆಯದು ಇಚ್ರೀಗೆ; ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das vierte auf Isri; seine Söhne und Brüder: zwölf,
12 ಐದನೆಯದು ನೆತನ್ಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das fünfte auf Netanjahu; seine Söhne und Brüder: zwölf,
13 ಆರನೆಯದು ಬುಕ್ಕೀಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das sechste auf Bukkiahu; seine Söhne und Brüder: zwölf,
14 ಏಳನೆಯದು ಯೆಸರೇಲನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das siebte auf Jesarela; seine Söhne und Brüder: zwölf,
15 ಎಂಟನೆಯದು ಯೆಶಾಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das achte auf Jesajahu; seine Söhne und Brüder: zwölf,
16 ಒಂಬತ್ತನೆಯವನು ಮತ್ತನ್ಯ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das neunte auf Mattanjahu; seine Söhne und Brüder: zwölf,
17 ಹತ್ತನೆಯದು ಶಿಮ್ಮಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das zehnte auf Simei; seine Söhne und Brüder: zwölf,
18 ಹನ್ನೊಂದನೆಯದು ಅಜರಯೇಲನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das elfte auf Azarel; seine Söhne und Brüder: zwölf,
19 ಹನ್ನೆರಡನೆಯದು ಹಷಬ್ಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das zwölfte auf Chasabja; seine Söhne und Brüder: zwölf,
20 ಹದಿಮೂರನೆಯದು ಶುಬಯೇಲನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das dreizehnte auf Subael; seine Söhne und Brüder: zwölf,
21 ಹದಿನಾಲ್ಕನೆಯವನು ಮತ್ತಿತ್ಯ; ಇವನೂ, ಇವನ ಸಹೋದರರೂ, ಮಕ್ಕಳೂ ಕೂಡಿ ಹನ್ನೆರಡು ಮಂದಿ.
das vierzehnte auf Mattijahu; seine Söhne und Brüder: zwölf,
22 ಹದಿನೈದನೆಯದು ಯೆರೆಮೋತನಿಗೆ; ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das fünfzehnte auf Jeremot; seine Söhne und Brüder: zwölf,
23 ಹದಿನಾರನೆಯದು ಹನನ್ಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das sechzehnte auf Chananjabu; seine Söhne und Bruder: Zwölf,
24 ಹದಿನೇಳನೆಯದು ಯೊಷ್ಬೆಕಾಷನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das siebzehnte auf Josbekasa; seine Söhne und Brüder: zwölf,
25 ಹದಿನೆಂಟನೆಯದು ಹನಾನೀಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das achtzehnte auf Chanani; seine Söhne und Brüder: zwölf,
26 ಹತ್ತೊಂಬತ್ತನೆಯದು ಮಲ್ಲೋತಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das neunzehnte auf Malloti; seine Söhne und Brüder: zwölf,
27 ಇಪ್ಪತ್ತನೆಯದು ಎಲಿಯಾತನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das zwanzigste auf Eliata; seine Söhne und Brüder: zwölf,
28 ಇಪ್ಪತ್ತೊಂದನೆಯದು ಹೋತೀರನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das einundzwanzigste auf Hotir; seine Söhne und Brüder: zwölf,
29 ಇಪ್ಪತ್ತೆರಡನೆಯದು ಗಿದ್ದಲ್ತಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das zweiundzwanzigste auf Giddalti; seine Söhne und Brüder: zwölf,
30 ಇಪ್ಪತ್ತಮೂರನೆಯದು ಮಹಜೀಯೋತನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das dreiundzwanzigste auf Machaziot; seine Söhne und Brüder: zwölf,
31 ಇಪ್ಪತ್ತನಾಲ್ಕನೆಯದು ರೋಮಮ್ತಿಯೆಜೆರನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
das vierundzwanzigste auf Romamtiezer; seine Söhne und Brüder: zwölf.

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 25 >