< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 24 >

1 ಆರೋನನ ಪುತ್ರರಲ್ಲಿ ವರ್ಗಗಳಾಗಿ ವಿಭಾಗ ಆದವರು ಇವರೇ. ಆರೋನನ ಪುತ್ರರು: ನಾದಾಬ್, ಅಬೀಹೂ, ಎಲಿಯಾಜರ್ ಮತ್ತು ಈತಾಮಾರ್.
Waɗannan su ne sassan’ya’yan Haruna maza.’Ya’yan Haruna maza su ne Nadab, Abihu, Eleyazar da Itamar.
2 ಆದರೆ ನಾದಾಬ್ ಮತ್ತು ಅಬೀಹೂ ತಮ್ಮ ತಂದೆಗಿಂತ ಮುಂಚೆ ಸತ್ತು ಮಕ್ಕಳಿಲ್ಲದೆ ಇದ್ದುದರಿಂದ ಎಲಿಯಾಜರನೂ, ಈತಾಮಾರನೂ ಯಾಜಕ ಸೇವೆ ಮಾಡಿದರು.
Amma Nadab da Abihu sun mutu kafin mahaifinsu, ba su kuma haifi’ya’ya maza ba; saboda haka Eleyazar da Itamar suka yi hidimar firistoci.
3 ಆದ್ದರಿಂದ ದಾವೀದನು ಎಲಿಯಾಜರನ ಮಕ್ಕಳಲ್ಲಿ ಚಾದೋಕನಿಗೂ, ಈತಾಮಾರನ ಮಕ್ಕಳಲ್ಲಿ ಅಹೀಮೆಲೆಕನಿಗೂ ಅವರ ಸೇವೆಯಲ್ಲಿರುವ ಪದ್ದತಿಗಳ ಪ್ರಕಾರ ವರ್ಗಗಳನ್ನು ವಿಭಾಗಿಸಿದನು.
Tare da taimakon Zadok zuriyar Eleyazar da Ahimelek wani zuriyar Itamar. Dawuda ya karkasa su zuwa ɓangarori don aikinsu bisa ga hidima.
4 ಈತಾಮಾರನ ಪುತ್ರರಿಗಿಂತ ಎಲಿಯಾಜರನ ಪುತ್ರರಲ್ಲಿ ಮುಖ್ಯಸ್ಥರು ಹೆಚ್ಚಾಗಿದ್ದುದರಿಂದ, ಅವರು ಸಹ ಹೀಗೆಯೇ ವಿಭಾಗಿಸಿದ್ದರು. ಎಲಿಯಾಜರನ ಪುತ್ರರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಹದಿನಾರು ಮಂದಿ ಮುಖ್ಯಸ್ಥರು. ಈತಾಮಾರನ ಪುತ್ರರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಎಂಟು ಮಂದಿ ಮುಖ್ಯಸ್ಥರು.
Akwai ɗumbun shugabanni a cikin zuriyar Eleyazar fiye da zuriyar Itamar, aka kuma karkasa su haka, kawuna goma sha shida daga zuriyar Eleyazar da kuma kawuna iyalai takwas daga zuriyar Itamar.
5 ಇವರು ಸಹ ಚೀಟುಹಾಕುವ ಮೂಲಕ ನಿಷ್ಪಕ್ಷಪಾತವಾಗಿ ವಿಭಾಗವಾಗಿದ್ದರು. ಏಕೆಂದರೆ ಪರಿಶುದ್ಧ ಸ್ಥಾನದ ಪ್ರಧಾನರೂ, ದೇವರ ಪ್ರಧಾನರೂ ಎಲಿಯಾಜರನ ಪುತ್ರರೂ, ಈತಾಮಾರನ ಪುತ್ರರೂ ಇದ್ದರು.
Aka karkasa su babu sonkai ta wurin jifa ƙuri’a, gama akwai manyan ma’aikatan wuri mai tsarki da manyan ma’aikatan Allah a cikin zuriyar Eleyazar da Itamar.
6 ಇದಲ್ಲದೆ ಲೇವಿಯರಲ್ಲಿ ಒಬ್ಬನಾದಂಥ ನೆತನೆಯೇಲ್ ಇವನ ಮಗ ಲೇಖಕನಾದ ಶೆಮಾಯನು ಅರಸನ ಮುಂದೆಯೂ; ಪ್ರಧಾನರು, ಯಾಜಕನಾದ ಚಾದೋಕನು, ಅಬಿಯಾತರನ ಮಗ ಅಹೀಮೆಲೆಕನು, ಯಾಜಕರ ಲೇವಿಯರ ಪಿತೃಗಳ ಮುಖ್ಯಸ್ಥರ ಮುಂದೆಯೂ ಅವರ ಹೆಸರುಗಳನ್ನು ಬರೆದನು. ಎಲಿಯಾಜರನಿಗೋಸ್ಕರ ಒಂದು ಶ್ರೇಷ್ಠ ಮನೆ ತೆಗೆದುಕೊಳ್ಳಲಾಯಿತು. ಅದರಂತೆಯೇ, ಈತಾಮಾರನಿಗೋಸ್ಕರವೂ ಒಂದು ತೆಗೆದುಕೊಳ್ಳಲಾಯಿತು.
Shemahiya ɗan Netanel, wani Balawe ne marubuci, ya rubuta sunayensu a gaban sarki da kuma a gaban manyan ma’aikata. Zadok firist, Ahimelek ɗan Abiyatar da kuma kawunan iyalan firistoci da na Lawiyawa, iyali guda daga Eleyazar, guda kuma daga Itamar.
7 ಮೊದಲನೆಯ ಚೀಟು ಯೆಹೋಯಾರೀಬನಿಗೆ ಬಿದ್ದಿತು; ಎರಡನೆಯದು ಯೆದಾಯನಿಗೆ,
Ƙuri’a ta farko ta faɗa a kan Yehoyarib, na biyu a kan Yedahiya,
8 ಮೂರನೆಯದು ಹಾರಿಮನಿಗೆ; ನಾಲ್ಕನೆಯದು ಸೆಯೋರೀಮನಿಗೆ;
na uku a kan Harim, na huɗu a kan Seyorim,
9 ಐದನೆಯದು ಮಲ್ಕೀಯನಿಗೆ; ಆರನೆಯದು ಮಿಯಾಮಿನನಿಗೆ;
na biyar a kan Malkiya, na shida a kan Miyamin,
10 ಏಳನೆಯದು ಹಕ್ಕೋಚನಿಗೆ; ಎಂಟನೆಯದು ಅಬೀಯನಿಗೆ;
na bakwai a kan Hakkoz, na takwas a kan Abiya,
11 ಒಂಬತ್ತನೆಯದು ಯೆಷೂವನಿಗೆ; ಹತ್ತನೆಯದು ಶೇಕನ್ಯನಿಗೆ;
na tara a kan Yeshuwa, na goma a kan Shekaniya,
12 ಹನ್ನೊಂದನೆಯದು ಎಲ್ಯಾಷೀಬನಿಗೆ; ಹನ್ನೆರಡನೆಯದು ಯಾಕೀಮನಿಗೆ,
na goma sha ɗaya a kan Eliyashib, na goma sha biyu a kan Yakim,
13 ಹದಿಮೂರನೆಯದು ಹುಪ್ಪನಿಗೆ; ಹದಿನಾಲ್ಕನೆಯದು ಯೆಷೆಬಾಬನಿಗೆ;
na goma sha uku a kan Huffa, na goma sha huɗu a kan Yeshebeyab,
14 ಹದಿನೈದನೆಯದು ಬಿಲ್ಗನಿಗೆ; ಹದಿನಾರನೆಯದು ಇಮ್ಮೇರನಿಗೆ;
na goma sha biyar a kan Bilga, na goma sha shida a kan Immer,
15 ಹದಿನೇಳನೆಯದು ಹೇಜೀರನಿಗೆ; ಹದಿನೆಂಟನೆಯದು ಹಪಿಚ್ಚೇಚನಿಗೆ;
na goma sha shida a kan Hezir, na goma sha takwas a kan Haffizzez,
16 ಹತ್ತೊಂಬತ್ತನೆಯದು ಪೆತಹ್ಯನಿಗೆ; ಇಪ್ಪತ್ತನೆಯದು ಯೆಹೆಜ್ಕೇಲನಿಗೆ;
na goma sha tara a kan Fetahahiya, na ashirin a kan Ezekiyel,
17 ಇಪ್ಪತ್ತೊಂದನೆಯದು ಯಾಕೀನನಿಗೆ; ಇಪ್ಪತ್ತೆರಡನೆಯದು ಗಾಮೂಲನಿಗೆ;
na ashirin da ɗaya wa Yakin, na ashirin da biyu a kan Gamul,
18 ಇಪ್ಪತ್ಮೂರನೆಯದು ದೆಲಾಯನಿಗೆ; ಇಪ್ಪತ್ನಾಲ್ಕನೆಯದು ಮಾಜ್ಯನಿಗೆ.
na ashirin da uku wa Delahiya da kuma na ashirin da huɗu a kan Ma’aziya.
19 ಇವೇ ಇಸ್ರಾಯೇಲಿನ ದೇವರಾದ ಯೆಹೋವ ದೇವರು ತಮ್ಮ ತಂದೆ ಆರೋನನಿಗೆ ಆಜ್ಞಾಪಿಸಿದ ಹಾಗೆ, ಅವನ ಕೈಕೆಳಗೆ ತಮ್ಮ ತಮ್ಮ ಕಟ್ಟಳೆಗಳ ಪ್ರಕಾರ, ಯೆಹೋವ ದೇವರ ಮನೆಯಲ್ಲಿ ಸೇವೆ ಮಾಡುವುದಕ್ಕೆ ಬರಬೇಕಾದ ಅವರ ನಿಯಮಗಳು.
Ga tsarin aikinsu na hidima sa’ad da suka shiga haikalin Ubangiji, bisa ga ƙa’idar da kakansu Haruna ya kafa, yadda Ubangiji, Allah na Isra’ila ya umarce shi.
20 ಲೇವಿಯ ವಂಶಜರಲ್ಲಿ ಉಳಿದವರು ಯಾರೆಂದರೆ: ಅಮ್ರಾಮನ ಕುಮಾರರಲ್ಲಿ ಶೂಬಾಯೇಲನು; ಶೂಬಾಯೇಲನ ಪುತ್ರರಲ್ಲಿ ಯೆಹ್ದೆಯಾಹನು.
Game da sauran zuriyar Lawi kuwa, Daga’ya’yan Amram maza. Shubayel; daga’ya’yan Shubayel maza. Yedehiya.
21 ರೆಹಬ್ಯನನ್ನು ಕುರಿತು: ರೆಹಬ್ಯನ ಪುತ್ರರಲ್ಲಿ ಇಷೀಯನು ಮೊದಲನೆಯವನು.
Game da Rehabiya kuwa, daga’ya’yansa maza. Isshiya shi ne na fari.
22 ಇಚ್ಹಾರರಲ್ಲಿ ಶೆಲೋಮೋತನು ಮೊದಲನೆಯವನು. ಶೆಲೋಮೋತನ ಪುತ್ರರಲ್ಲಿ ಯಹತನು.
Daga mutanen Izhar, Shelomot; daga’ya’yan Shelomot maza, Yahat.
23 ಹೆಬ್ರೋನನ ಪುತ್ರರಲ್ಲಿ ಯೆರೀಯನು ಮೊದಲನೆಯವನು; ಎರಡನೆಯವನು ಅಮರ್ಯ; ಮೂರನೆಯವನು ಯಹಜಿಯೇಲ್; ನಾಲ್ಕನೆಯವನು ಯೆಕಮ್ಮಾಮ್.
’Ya’yan Hebron maza su ne, Yeriya na fari, Amariya na biyu, Yahaziyel na uku da Yekameyam na huɗu.
24 ಉಜ್ಜೀಯೇಲನ ಕುಮಾರರಲ್ಲಿ ಮೀಕನು; ಮೀಕನ ಪುತ್ರರಲ್ಲಿ ಶಾಮೀರನು.
Ɗan Uzziyel shi ne, Mika; daga’ya’yan Mika maza, Shamir.
25 ಮೀಕನ ಸಹೋದರನು ಇಷೀಯನು; ಇಷೀಯನ ಪುತ್ರರಲ್ಲಿ ಜೆಕರ್ಯ.
Ɗan’uwan Mika shi ne, Isshiya; daga’ya’yan Isshiya maza, Zakariya.
26 ಮೆರಾರೀಯ ಪುತ್ರರಲ್ಲಿ ಮಹ್ಲೀ, ಮೂಷೀ; ಯಾಜ್ಯನ ಮಗನು ಬೆನೋನು.
’Ya’yan Merari su ne, Mali da Mushi. Ɗan Ya’aziya shi ne, Beno.
27 ಮೆರಾರೀಯ ಪುತ್ರರಲ್ಲಿ ಯಾಜ್ಯನಿಗೆ ಬೆನೋ, ಶೋಹಮ್, ಜಕ್ಕೂರ್, ಇಬ್ರೀ ಎಂಬ ಪುತ್ರರಿದ್ದರು.
’Ya’yan Merari su ne, daga Ya’aziya, Beno, Shoham, Zakkur da Ibri.
28 ಮಹ್ಲೀಯನಿಗೆ ಎಲಿಯಾಜರನು ಹುಟ್ಟಿದನು; ಎಲಿಯಾಜರನಿಗೆ ಪುತ್ರರಿರಲಿಲ್ಲ.
Daga Mali, Eleyazar, wanda ba shi da’ya’ya maza.
29 ಕೀಷನಿಂದ ಯೆರಹ್ಮೇಲನು.
Daga Kish, ɗan Kish shi ne, Yerameyel.
30 ಮೂಷೀಯ ಪುತ್ರರು: ಮಹ್ಲೀ, ಏದೆರ್, ಯೆರೀಮೋತ್. ಇವರು ತಮ್ಮ ಕುಟುಂಬಗಳ ಪ್ರಕಾರ ಲೇವಿಯರ ಪುತ್ರರಾಗಿದ್ದರು.
Kuma’ya’yan Mushi maza su ne, Mali, Eder da Yerimot. Waɗannan su ne Lawiyawa bisa ga iyalansu.
31 ಇವರು ಹಾಗೆಯೇ ಅರಸನಾದ ದಾವೀದನ ಸಮ್ಮುಖದಲ್ಲಿಯೂ, ಚಾದೋಕನು, ಅಹೀಮೆಲೆಕನು, ಯಾಜಕರ ಮತ್ತು ಲೇವಿಯರ ಪಿತೃಗಳ ಮುಖ್ಯಸ್ಥರು, ಇವರ ಸಮ್ಮುಖದಲ್ಲಿಯೂ, ಆರೋನನ ಪುತ್ರರಾದ ತಮ್ಮ ಸಹೋದರರಿಗೆ ಎದುರಾಗಿ ಮುಖ್ಯಸ್ಥರಾದ ಪಿತೃಗಳು ತಮ್ಮ ಕಿರಿಯ ಸಹೋದರರಿಗೆದುರಾಗಿ ಚೀಟುಗಳನ್ನು ಹಾಕಿದರು.
Suka kuma jifa ƙuri’a, kamar dai yadda’yan’uwansu zuriyar Haruna suka yi, a gaban Sarki Dawuda da gaban Zadok, Ahimelek, da kuma a gaban kawunan iyalan firistoci da na Lawiyawa. Aka yi da iyalan wa daidai da iyalan ƙane.

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 24 >