< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 20 >

1 ಮರು ವರ್ಷ ವಸಂತ ಕಾಲದಲ್ಲಿ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ, ಯೋವಾಬನು ಬಲವಾದ ಸೈನ್ಯವನ್ನು ಕರೆದುಕೊಂಡು ಹೋಗಿ, ಅಮ್ಮೋನಿಯರ ಪ್ರಾಂತಗಳನ್ನು ಹಾಳು ಮಾಡಿ, ರಬ್ಬ ನಗರಕ್ಕೆ ಮುತ್ತಿಗೆಹಾಕಿದನು. ಆದರೆ ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು. ಯೋವಾಬನು ರಬ್ಬ ಪಟ್ಟಣದ ಮೇಲೆ ದಾಳಿಮಾಡಿ, ಅದನ್ನು ನಾಶಮಾಡಿದನು.
וַיְהִ֡י לְעֵת֩ תְּשׁוּבַ֨ת הַשָּׁנָ֜ה לְעֵ֣ת ׀ צֵ֣את הַמְּלָכִ֗ים וַיִּנְהַ֣ג יוֹאָב֩ אֶת־חֵ֨יל הַצָּבָ֜א וַיַּשְׁחֵ֣ת ׀ אֶת־אֶ֣רֶץ בְּנֵֽי־עַמּ֗וֹן וַיָּבֹא֙ וַיָּ֣צַר אֶת־רַבָּ֔ה וְדָוִ֖יד יֹשֵׁ֣ב בִּירֽוּשָׁלִָ֑ם וַיַּ֥ךְ יוֹאָ֛ב אֶת־רַבָּ֖ה וַיֶּֽהֶרְסֶֽהָ׃
2 ಇದಲ್ಲದೆ ದಾವೀದನು ರಬ್ಬಾ ನಗರಕ್ಕೆ ಬಂದಾಗ, ಮಲ್ಕಾಮ್ ಮೂರ್ತಿಯ ತಲೆಯ ಮೇಲೆ ಇದ್ದ ಕಿರೀಟವನ್ನು ಸಹ ತೆಗೆದುಕೊಂಡನು. ಅದು ಮೂವತ್ತೈದು ಕಿಲೋಗ್ರಾಂ ತೂಕದ್ದಾಗಿತ್ತು. ಅದನ್ನು ಬಂಗಾರದಿಂದಲೂ, ಅಮೂಲ್ಯವಾದ ರತ್ನಗಳಿಂದಲೂ ಅಲಂಕರಿಸಲಾಗಿತ್ತು, ಆ ಕಿರೀಟವನ್ನು ದಾವೀದನ ಶಿರಸ್ಸಿನಲ್ಲಿ ಧರಿಸಲಾಯಿತು. ಆ ಪಟ್ಟಣದೊಳಗಿಂದ ಅತ್ಯಧಿಕವಾದ ಕೊಳ್ಳೆಯನ್ನೂ ತೆಗೆದುಕೊಂಡು ಬಂದನು.
וַיִּקַּ֣ח דָּוִ֣יד אֶת־עֲטֶֽרֶת־מַלְכָּם֩ מֵעַ֨ל רֹאשׁ֜וֹ וַֽיִּמְצָאָ֣הּ ׀ מִשְׁקַ֣ל כִּכַּר־זָהָ֗ב וּבָהּ֙ אֶ֣בֶן יְקָרָ֔ה וַתְּהִ֖י עַל־רֹ֣אשׁ דָּוִ֑יד וּשְׁלַ֥ל הָעִ֛יר הוֹצִ֖יא הַרְבֵּ֥ה מְאֹֽד׃
3 ಇದಲ್ಲದೆ ಅವನು ಅದರಲ್ಲಿದ್ದ ಜನರನ್ನು ಹೊರಗೆ ತಂದು, ಅವರನ್ನು ಗರಗಸ ಗುದ್ದಲಿ ಕೊಡಲಿಗಳಿಂದ ಕೆಲಸ ಮಾಡುವದಕ್ಕೂ ಇಟ್ಟನು. ಅದೇ ಪ್ರಕಾರ ದಾವೀದನು ಅಮ್ಮೋನಿಯರ ಸಮಸ್ತ ಪಟ್ಟಣಗಳಿಗೂ ಮಾಡಿದನು. ಅನಂತರ ದಾವೀದನು ಎಲ್ಲಾ ಸೈನಿಕರೊಡನೆ ಯೆರೂಸಲೇಮಿಗೆ ತಿರುಗಿಬಂದನು.
וְאֶת־הָעָ֨ם אֲשֶׁר־בָּ֜הּ הוֹצִ֗יא וַיָּ֨שַׂר בַּמְּגֵרָ֜ה וּבַחֲרִיצֵ֤י הַבַּרְזֶל֙ וּבַמְּגֵר֔וֹת וְכֵן֙ יַעֲשֶׂ֣ה דָוִ֔יד לְכֹ֖ל עָרֵ֣י בְנֵי־עַמּ֑וֹן וַיָּ֧שָׁב דָּוִ֛יד וְכָל־הָעָ֖ם יְרוּשָׁלִָֽם׃ פ
4 ಇದರ ತರುವಾಯ, ಫಿಲಿಷ್ಟಿಯರ ಸಂಗಡ ಗೆಜೆರಿನಲ್ಲಿ ಯುದ್ಧನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬವನು ರೆಫಾಯನಾದ ಸಿಪ್ಪೈ ಎಂಬವನನ್ನು ಕೊಂದದ್ದರಿಂದ ಫಿಲಿಷ್ಟಿಯರು ಸೋತುಹೋದರು.
וַיְהִי֙ אַחֲרֵיכֵ֔ן וַתַּעֲמֹ֧ד מִלְחָמָ֛ה בְּגֶ֖זֶר עִם־פְּלִשְׁתִּ֑ים אָ֣ז הִכָּ֞ה סִבְּכַ֣י הַחֻֽשָׁתִ֗י אֶת־סִפַּ֛י מִילִדֵ֥י הָרְפָאִ֖ים וַיִּכָּנֵֽעוּ׃
5 ಅನಂತರ ಫಿಲಿಷ್ಟಿಯರ ಸಂಗಡ ಯುದ್ಧ ಉಂಟಾದಾಗ, ಯಾಯೀರನ ಮಗನಾದ ಎಲ್ಹನಾನನು ಗಿತ್ತೀಯನಾದ ಗೊಲ್ಯಾತನ ಸಹೋದರನಾದ ಲಹ್ಮೀಯನ್ನು ಕೊಂದನು. ಈ ಗೊಲ್ಯಾತನ ಈಟಿಯ ಹಿಡಿಕೆಯು ನೇಯುವವರ ಕುಂಟೆ ಕಟ್ಟಿಗೆಗೆ ಸಮನಾಗಿತ್ತು.
וַתְּהִי־ע֥וֹד מִלְחָמָ֖ה אֶת־פְּלִשְׁתִּ֑ים וַיַּ֞ךְ אֶלְחָנָ֣ן בֶּן־יָעִ֗יר אֶת־לַחְמִי֙ אֲחִי֙ גָּלְיָ֣ת הַגִּתִּ֔י וְעֵ֣ץ חֲנִית֔וֹ כִּמְנ֖וֹר אֹרְגִֽים׃
6 ಇನ್ನೊಂದು ಸಾರಿ ಗತ್ ಊರಿನಲ್ಲಿ ಯುದ್ಧ ಉಂಟಾದಾಗ, ಅಲ್ಲಿ ಎತ್ತರವಾದ ಒಬ್ಬ ಮನುಷ್ಯನಿದ್ದನು. ಅವನ ಕೈಕಾಲುಗಳ ಬೆರಳುಗಳು ಆರಾರರಂತೆ, ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನು ಸಹ ರೆಫಾಯನಿಗೆ ಹುಟ್ಟಿದವನಾಗಿದ್ದನು.
וַתְּהִי־ע֥וֹד מִלְחָמָ֖ה בְּגַ֑ת וַיְהִ֣י ׀ אִ֣ישׁ מִדָּ֗ה וְאֶצְבְּעֹתָ֤יו שֵׁשׁ־וָשֵׁשׁ֙ עֶשְׂרִ֣ים וְאַרְבַּ֔ע וְגַם־ה֖וּא נוֹלַ֥ד לְהָרָפָֽא׃
7 ಅವನು ಇಸ್ರಾಯೇಲನ್ನು ನಿಂದಿಸಿದ್ದರಿಂದ ದಾವೀದನ ಸಹೋದರನಾದ ಶಿಮ್ಮನ ಮಗನಾದ ಯೋನಾತಾನನು ಅವನನ್ನು ಕೊಂದುಬಿಟ್ಟನು.
וַיְחָרֵ֖ף אֶת־יִשְׂרָאֵ֑ל וַיַּכֵּ֙הוּ֙ יְה֣וֹנָתָ֔ן בֶּן־שִׁמְעָ֖א אֲחִ֥י דָוִֽיד׃
8 ಇವರು ಗತ್ ಊರಿನಲ್ಲಿದ್ದ ರೆಫಾಯರ ವಂಶಜರು. ಇವರು ದಾವೀದನಿಂದಲೂ ಅವನ ಜನರಿಂದಲೂ ಸಂಹಾರವಾಗಿ ಹೋದರು.
אֵ֛ל נוּלְּד֥וּ לְהָרָפָ֖א בְּגַ֑ת וַיִּפְּל֥וּ בְיַד־דָּוִ֖יד וּבְיַד־עֲבָדָֽיו׃ פ

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 20 >