< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 12 >

1 ಕೀಷನ ಮಗ ಸೌಲನ ನಿಮಿತ್ತ ದಾವೀದನು ಇನ್ನೂ ಬಚ್ಚಿಟ್ಟುಕೊಂಡಿರುವಾಗ, ಚಿಕ್ಲಗಿನಲ್ಲಿರುವ ದಾವೀದನ ಬಳಿಗೆ ಬಂದವರು ಇವರೇ. ಅವರು ಪರಾಕ್ರಮಶಾಲಿಗಳಲ್ಲಿ ಸೇರಿದವರೂ, ಯುದ್ಧಕ್ಕೆ ಸಹಾಯಕರೂ.
וְאֵלֶּה הַבָּאִים אֶל־דָּוִיד לְצִיקְלַג עוֹד עָצוּר מִפְּנֵי שָׁאוּל בֶּן־קִישׁ וְהֵמָּה בַּגִּבּוֹרִים עֹזְרֵי הַמִּלְחָמָֽה׃
2 ಎಡಬಲ ಕೈಗಳಿಂದ ಕಲ್ಲುಗಳನ್ನು ಎಸೆಯಲೂ, ಬಿಲ್ಲುಗಳಿಂದ ಬಾಣಗಳನ್ನು ಎಸೆಯಲೂ, ಇವರು ಬೆನ್ಯಾಮೀನನ ಗೋತ್ರದ ಸೌಲನ ಸಂಬಂಧಿಕರೂ ಆಗಿದ್ದರು.
נֹשְׁקֵי קֶשֶׁת מַיְמִינִים וּמַשְׂמִאלִים בָּאֲבָנִים וּבַחִצִּים בַּקָּשֶׁת מֵאֲחֵי שָׁאוּל מִבִּנְיָמִֽן׃
3 ಅವರ ಮುಖ್ಯಸ್ಥ ಅಹೀಗೆಜೆರ್, ಇವನ ನಂತರ ಯೋವಾಷ್. ಇವರಿಬ್ಬರೂ ಗಿಬೆಯ ಊರಿನ ಶೇಮಾನ ಪುತ್ರರು. ಅಜ್ಮಾವೆತನ ಪುತ್ರರಾದ ಯೆಜಿಯೇಲ್ ಮತ್ತು ಪೆಲೆಟ್, ಅನಾತೋತ್ ಊರಿನವರಾದ ಬೆರಾಕಾ, ಯೇಹು.
הָרֹאשׁ אֲחִיעֶזֶר וְיוֹאָשׁ בְּנֵי הַשְּׁמָעָה הַגִּבְעָתִי (ויזואל) [וִיזִיאֵל] וָפֶלֶט בְּנֵי עַזְמָוֶת וּבְרָכָה וְיֵהוּא הָעַנְּתֹתִֽי׃
4 ಗಿಬ್ಯೋನ್ಯನಾದ ಇಷ್ಮಾಯನು ಮೂವತ್ತು ಮಂದಿಯಲ್ಲಿ ಪರಾಕ್ರಮಶಾಲಿಯಾಗಿದ್ದ ಮತ್ತು ಮೂವತ್ತು ಮಂದಿಯ ಮುಖ್ಯಸ್ಥನಾಗಿದ್ದ; ಯೆರೆಮೀಯ, ಯಹಜಿಯೇಲ್, ಯೋಹಾನಾನ್, ಗೆದೇರದವನಾದ ಯೋಜಾಬಾದ್,
וְיִֽשְׁמַעְיָה הַגִּבְעוֹנִי גִּבּוֹר בַּשְּׁלֹשִׁים וְעַל־הַשְּׁלֹשִֽׁים׃ וְיִרְמְיָה וְיַחֲזִיאֵל וְיוֹחָנָן וְיוֹזָבָד הַגְּדֵֽרָתִֽי׃
5 ಎಲ್ಲೂಜೈ, ಯೆರೀಮೋತ್, ಬೆಯಲ್ಯ, ಶೆಮರ್ಯ, ಹರುಫ್ಯನಾದ ಶೆಫಟ್ಯ,
אֶלְעוּזַי וִֽירִימוֹת וּבְעַלְיָה וּשְׁמַרְיָהוּ וּשְׁפַטְיָהוּ (החריפי) [הַחֲרוּפִֽי]׃
6 ಕೋರಹಿಯರಾದ ಎಲ್ಕಾನ, ಇಷ್ಷೀಯ, ಅಜರಯೇಲ್, ಯೋವೆಜೆರ್, ಯಾಷೊಬ್ಬಾಮ,
אֶלְקָנָה וְיִשִּׁיָּהוּ וַעֲזַרְאֵל וְיוֹעֶזֶר וְיָשׇׁבְעָם הַקׇּרְחִֽים׃
7 ಗೆದೋರಿನಲ್ಲಿರುವ ಯೆರೋಹಾಮನ ಪುತ್ರರಾದ ಯೋಯೇಲಹ, ಜೆಬದ್ಯ.
וְיוֹעֵאלָה וּזְבַדְיָה בְּנֵי יְרֹחָם מִן־הַגְּדֽוֹר׃
8 ಇದಲ್ಲದೆ ಮರುಭೂಮಿಯಲ್ಲಿ ಬಲವಾದ ಸ್ಥಳದಲ್ಲಿರುವ ದಾವೀದನ ಬಳಿಯಲ್ಲಿ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದ ಗಾದ್ಯರು ಇದ್ದರು. ಇವರು ಖೇಡ್ಯವನ್ನೂ, ಭಲ್ಲೆಯನ್ನೂ ಹಿಡಿದು ಪರಾಕ್ರಮಶಾಲಿಗಳಾಗಿಯೂ, ಯುದ್ಧಕ್ಕೆ ತಕ್ಕ ಸೈನಿಕರಾಗಿಯೂ ಇದ್ದರು. ಅವರ ಮುಖಗಳು ಸಿಂಹಗಳಂತೆ ಭೀಕರವಾಗಿದ್ದವು. ಪರ್ವತಗಳ ಮೇಲೆ ಇವರು ಜಿಂಕೆಗಳ ಹಾಗೆ ವೇಗವುಳ್ಳವರಾಗಿದ್ದರು.
וּמִן־הַגָּדִי נִבְדְּלוּ אֶל־דָּוִיד לַמְצַד מִדְבָּרָה גִּבֹּרֵי הַחַיִל אַנְשֵׁי צָבָא לַמִּלְחָמָה עֹרְכֵי צִנָּה וָרֹמַח וּפְנֵי אַרְיֵה פְּנֵיהֶם וְכִצְבָאיִם עַל־הֶהָרִים לְמַהֵֽר׃
9 ಅಧಿಕಾರದಲ್ಲಿ ಏಜೆರ್ ಮುಖ್ಯಸ್ಥನು; ಎರಡನೆಯವನು ಓಬದ್ಯ; ಮೂರನೆಯವನು ಎಲೀಯಾಬ್;
עֵזֶר הָרֹאשׁ עֹֽבַדְיָה הַשֵּׁנִי אֱלִיאָב הַשְּׁלִשִֽׁי׃
10 ನಾಲ್ಕನೆಯವನು ಮಿಷ್ಮನ್ನ, ಐದನೆಯವನು ಯೆರೆಮೀಯ;
מִשְׁמַנָּה הָרְבִיעִי יִרְמְיָה הַחֲמִשִֽׁי׃
11 ಆರನೆಯವನು ಅತ್ತೈ; ಏಳನೆಯವನು ಎಲೀಯೇಲ್;
עַתַּי הַשִּׁשִּׁי אֱלִיאֵל הַשְּׁבִעִֽי׃
12 ಎಂಟನೆಯವನು ಯೋಹಾನಾನ್, ಒಂಬತ್ತನೆಯವನು ಎಲ್ಜಾಬಾದ್;
יֽוֹחָנָן הַשְּׁמִינִי אֶלְזָבָד הַתְּשִׁיעִֽי׃
13 ಹತ್ತನೆಯವನು ಯೆರೆಮೀಯ; ಹನ್ನೊಂದನೆಯವನು ಮಕ್ಬನ್ನೈ.
יִרְמְיָהוּ הָעֲשִׂירִי מַכְבַּנַּי עַשְׁתֵּי עָשָֽׂר׃
14 ಗಾದನ ಪುತ್ರರಾದ ಇವರು ಸೈನ್ಯದಲ್ಲಿ ಅಧಿಪತಿಗಳಾಗಿದ್ದರು. ಕಿರಿಯನು ನೂರು ಮಂದಿಯ ಮೇಲೆಯೂ ಹಿರಿಯನು ಸಾವಿರ ಮಂದಿಯ ಮೇಲೆಯೂ ಇದ್ದರು.
אֵלֶּה מִבְּנֵי־גָד רָאשֵׁי הַצָּבָא אֶחָד לְמֵאָה הַקָּטָן וְהַגָּדוֹל לְאָֽלֶף׃
15 ಇವರು ಮೊದಲನೆಯ ತಿಂಗಳಲ್ಲಿ ಯೊರ್ದನ್ ಹೊಳೆ ದಡಮೀರಿ ಹರಿಯುತ್ತಿದ್ದಾಗ, ಅದನ್ನು ದಾಟಿ ಪೂರ್ವ ಕಡೆಯಲ್ಲಿಯೂ, ಪಶ್ಚಿಮ ಕಡೆಯಲ್ಲಿಯೂ ತಗ್ಗುಗಳಲ್ಲಿ ಇರುವವರೆಲ್ಲರನ್ನು ಓಡಿಸಿಬಿಟ್ಟರು.
אֵלֶּה הֵם אֲשֶׁר עָבְרוּ אֶת־הַיַּרְדֵּן בַּחֹדֶשׁ הָרִאשׁוֹן וְהוּא מְמַלֵּא עַל־כׇּל־[גְּדוֹתָיו] (גדיתיו) וַיַּבְרִיחוּ אֶת־כׇּל־הָעֲמָקִים לַמִּזְרָח וְלַֽמַּעֲרָֽב׃
16 ಬೆನ್ಯಾಮೀನನ ಮತ್ತು ಯೆಹೂದ್ಯರಲ್ಲಿ ಕೆಲವರು ಕೋಟೆಯ ಸ್ಥಳದಲ್ಲಿದ್ದ ದಾವೀದನ ಬಳಿಗೆ ಬಂದರು.
וַיָּבֹאוּ מִן־בְּנֵי בִנְיָמִן וִֽיהוּדָה עַד־לַמְצָד לְדָוִֽיד׃
17 ಆಗ ದಾವೀದನು ಅವರನ್ನು ಎದುರುಗೊಳ್ಳಲು ಹೊರಟುಹೋಗಿ ಅವರಿಗೆ ಉತ್ತರವಾಗಿ, “ನನಗೆ ಸಹಾಯವಾಗಿ ನನ್ನ ಬಳಿಗೆ ನೀವು ಸಮಾಧಾನವಾಗಿ ಬಂದರೆ, ನನ್ನ ಹೃದಯವು ನಿಮ್ಮ ಸಂಗಡ ಒಂದಾಗಿರುವುದು. ಆದರೆ ದೋಷವು ನನ್ನ ಕೈಯಲ್ಲಿ ಇಲ್ಲದಿರುವಾಗ, ನೀವು ನನ್ನ ವೈರಿಗಳಿಗೆ ನನ್ನನ್ನು ಮೋಸದಿಂದ ಒಪ್ಪಿಸಿಕೊಡಲು ಬಂದರೆ, ನಮ್ಮ ಪಿತೃಗಳ ದೇವರು ನೋಡಿ ನ್ಯಾಯತೀರಿಸಲಿ,” ಎಂದನು.
וַיֵּצֵא דָוִיד לִפְנֵיהֶם וַיַּעַן וַיֹּאמֶר לָהֶם אִם־לְשָׁלוֹם בָּאתֶם אֵלַי לְעׇזְרֵנִי יִֽהְיֶה־לִּי עֲלֵיכֶם לֵבָב לְיָחַד וְאִֽם־לְרַמּוֹתַנִי לְצָרַי בְּלֹא חָמָס בְּכַפַּי יֵרֶא אֱלֹהֵי אֲבוֹתֵינוּ וְיוֹכַֽח׃
18 ಆಗ ಆತ್ಮವು ಮೂವತ್ತು ಮಂದಿ ಅಧಿಪತಿಗಳ ಮುಖ್ಯಸ್ಥನಾದ ಅಮಾಸೈಯ ಮೇಲೆ ಬಂತು. ಅವನು ಹೀಗೆ ಹೇಳಿದನು, “ದಾವೀದನೇ, ನಾವು ನಿನ್ನವರು. ಇಷಯನ ಮಗನೇ, ನಾವು ನಿನ್ನ ಜೊತೆಯಿದ್ದೇವೆ; ಜಯವು ನಿನ್ನದೇ, ನಿನಗೆ ಸಹಾಯ ಮಾಡುವವರಿಗೆ ಜಯವು; ಏಕೆಂದರೆ ನಿನ್ನ ದೇವರು ನಿನಗೆ ಸಹಾಯ ಮಾಡುತ್ತಾರೆ.” ಆಗ ದಾವೀದನು ಅವರನ್ನು ಅಂಗೀಕರಿಸಿ, ಅವರನ್ನು ದಂಡಿನ ಅಧಿಪತಿಗಳಾಗಿ ಮಾಡಿದನು.
וְרוּחַ לָֽבְשָׁה אֶת־עֲמָשַׂי רֹאשׁ (השלושים) [הַשָּׁלִישִׁים] לְךָ דָוִיד וְעִמְּךָ בֶן־יִשַׁי שָׁלוֹם ׀ שָׁלוֹם לְךָ וְשָׁלוֹם לְעֹזְרֶךָ כִּי עֲזָֽרְךָ אֱלֹהֶיךָ וַיְקַבְּלֵם דָּוִיד וַֽיִּתְּנֵם בְּרָאשֵׁי הַגְּדֽוּד׃
19 ದಾವೀದನು ಸೌಲನ ಮೇಲೆ ಯುದ್ಧಮಾಡಲು ಫಿಲಿಷ್ಟಿಯರ ಸಂಗಡ ಬರುತ್ತಿರುವಾಗ, ಮನಸ್ಸೆಯವರಲ್ಲಿ ಕೆಲವರು ದಾವೀದನ ಕಡೆಗೆ ಸೇರಿದರು. ಆದರೆ ಇವರು ಅವರಿಗೆ ಸಹಾಯ ಕೊಡದೆ ಇದ್ದರು. ಏಕೆಂದರೆ ಫಿಲಿಷ್ಟಿಯರ ಅಧಿಪತಿಗಳು ಯೋಚನೆ ಮಾಡಿದ ತರುವಾಯ, “ಅವನು ನಮಗೆ ಮೋಸಮಾಡಿ, ತನ್ನ ಯಜಮಾನನಾದ ಸೌಲನ ಕಡೆಗೆ ಸೇರಿದರೆ, ನಮ್ಮ ತಲೆಗಳು ಬಿದ್ದು ಹೋಗುವುವು,” ಎಂದು ಹೇಳಿ ಅವನನ್ನು ಕಳುಹಿಸಿಬಿಟ್ಟರು.
וּמִֽמְּנַשֶּׁה נָֽפְלוּ עַל־דָּוִיד בְּבֹאוֹ עִם־פְּלִשְׁתִּים עַל־שָׁאוּל לַמִּלְחָמָה וְלֹא עֲזָרֻם כִּי בְעֵצָה שִׁלְּחֻהוּ סַרְנֵי פְלִשְׁתִּים לֵאמֹר בְּרָאשֵׁינוּ יִפּוֹל אֶל־אֲדֹנָיו שָׁאֽוּל׃
20 ದಾವೀದನು ಹಿಂದಿರುಗಿ ಚಿಕ್ಲಗಿಗೆ ಹಿಂದಿರುಗುತ್ತಿದ್ದಾಗ ಅವನೊಂದಿಗೆ ಮನಸ್ಸೆ ಗೋತ್ರದ ಸಹಸ್ರಾಧಿಪತಿಗಳಾದ ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹು, ಚಿಲ್ಲೆತೈ ಎಂಬವರು ಬಂದು ಸೇರಿಕೊಂಡರು.
בְּלֶכְתּוֹ אֶל־צִֽיקְלַג נָפְלוּ עָלָיו ׀ מִֽמְּנַשֶּׁה עַדְנַח וְיוֹזָבָד וִידִֽיעֲאֵל וּמִיכָאֵל וְיוֹזָבָד וֶאֱלִיהוּא וְצִלְּתָי רָאשֵׁי הָאֲלָפִים אֲשֶׁר לִמְנַשֶּֽׁה׃
21 ಇವರು ಗುಂಪಿಗೆ ವಿರೋಧವಾಗಿ ದಾವೀದನಿಗೆ ಸಹಾಯಕರಾಗಿದ್ದರು; ಅವರೆಲ್ಲರೂ ಬಲವುಳ್ಳ ಪರಾಕ್ರಮಶಾಲಿಗಳಾಗಿಯೂ ದಂಡಿನ ಪ್ರಧಾನರಾಗಿಯೂ ಇದ್ದರು.
וְהֵמָּה עָזְרוּ עִם־דָּוִיד עַֽל־הַגְּדוּד כִּֽי־גִבּוֹרֵי חַיִל כֻּלָּם וַיִּהְיוּ שָׂרִים בַּצָּבָֽא׃
22 ಅದೇ ಕಾಲದಲ್ಲಿ ದಿನೇ ದಿನೇ ದೊಡ್ಡ ಸೈನ್ಯವು ದೇವರ ಸೈನ್ಯದ ಹಾಗೆ ಆಗುವವರೆಗೆ, ದಾವೀದನಿಗೆ ಸಹಾಯ ಕೊಡುವುದಕ್ಕೆ ಅವನ ಕಡೆಗೆ ಬರುತ್ತಿದ್ದರು.
כִּי לְעֶת־יוֹם בְּיוֹם יָבֹאוּ עַל־דָּוִיד לְעׇזְרוֹ עַד־לְמַחֲנֶה גָדוֹל כְּמַחֲנֵה אֱלֹהִֽים׃
23 ಯೆಹೋವ ದೇವರ ವಾಕ್ಯದ ಪ್ರಕಾರ ಸೌಲನ ರಾಜ್ಯವನ್ನು ದಾವೀದನ ಕಡೆಗೆ ತಿರುಗಿಸುವುದಕ್ಕೆ, ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಯುದ್ಧಕ್ಕೆ ಆಯುಧಗಳನ್ನು ಧರಿಸಿಕೊಂಡು ಬಂದ ದಂಡುಗಳ ಸಂಖ್ಯೆ ಇದು:
וְאֵלֶּה מִסְפְּרֵי רָאשֵׁי הֶחָלוּץ לַצָּבָא בָּאוּ עַל־דָּוִיד חֶבְרוֹנָה לְהָסֵב מַלְכוּת שָׁאוּל אֵלָיו כְּפִי יְהֹוָֽה׃
24 ಖೇಡ್ಯವನ್ನೂ, ಭಲ್ಲೆಯನ್ನೂ ಹಿಡಿದುಕೊಂಡು, ಯುದ್ಧಕ್ಕೆ ಸಿದ್ಧರಾದ ಯೆಹೂದನ ಮಕ್ಕಳು 6,800 ಮಂದಿ.
בְּנֵי יְהוּדָה נֹשְׂאֵי צִנָּה וָרֹמַח שֵׁשֶׁת אֲלָפִים וּשְׁמוֹנֶה מֵאוֹת חֲלוּצֵי צָבָֽא׃
25 ಯುದ್ಧಕ್ಕೆ ಪರಾಕ್ರಮಶಾಲಿಗಳಾದ ಸಿಮೆಯೋನನ ಮಕ್ಕಳಲ್ಲಿ 7,100 ಮಂದಿ.
מִן־בְּנֵי שִׁמְעוֹן גִּבּוֹרֵֽי חַיִל לַצָּבָא שִׁבְעַת אֲלָפִים וּמֵאָֽה׃
26 ಲೇವಿಯ ಮಕ್ಕಳಲ್ಲಿ 4,600 ಮಂದಿ.
מִן־בְּנֵי הַלֵּוִי אַרְבַּעַת אֲלָפִים וְשֵׁשׁ מֵאֽוֹת׃
27 ಆರೋನಿಯರಲ್ಲಿ ಯೆಹೋಯಾದಾವನು ನಾಯಕನಾಗಿದ್ದನು. ಅವನ ಸಂಗಡ 3,700 ಮಂದಿ.
וִיהוֹיָדָע הַנָּגִיד לְאַהֲרֹן וְעִמּוֹ שְׁלֹשֶׁת אֲלָפִים וּשְׁבַע מֵאֽוֹת׃
28 ಇದಲ್ಲದೆ ಬಲವುಳ್ಳ ಪರಾಕ್ರಮಶಾಲಿಯಾದ ಪ್ರಾಯಸ್ತನಾಗಿದ್ದ ಚಾದೋಕನೂ, ಅವನ ತಂದೆಯ ಮನೆಯಿಂದ 22 ಮಂದಿ ಪ್ರಧಾನರೂ.
וְצָדוֹק נַעַר גִּבּוֹר חָיִל וּבֵית־אָבִיו שָׂרִים עֶשְׂרִים וּשְׁנָֽיִם׃
29 ಸೌಲನ ಸಹೋದರರಾಗಿರುವ ಬೆನ್ಯಾಮೀನನ ಮಕ್ಕಳಲ್ಲಿ 3,000 ಮಂದಿ. ಇಂದಿನವರೆಗೂ ಅವರಲ್ಲಿ ಅನೇಕರು ಸೌಲನ ಮನೆಯ ವಿಚಾರಣೆಯನ್ನು ಮಾಡುತ್ತಿದ್ದರು.
וּמִן־בְּנֵי בִנְיָמִן אֲחֵי שָׁאוּל שְׁלֹשֶׁת אֲלָפִים וְעַד־הֵנָּה מַרְבִּיתָם שֹׁמְרִים מִשְׁמֶרֶת בֵּית שָׁאֽוּל׃
30 ಎಫ್ರಾಯೀಮನ ಮಕ್ಕಳಲ್ಲಿ 20,800 ಮಂದಿ, ಬಲವುಳ್ಳ ಪರಾಕ್ರಮಶಾಲಿಗಳೂ, ತಮ್ಮ ಪಿತೃಗಳ ಮನೆಯಲ್ಲಿ ಹೆಸರುಗೊಂಡವರೂ ಆಗಿದ್ದರು.
וּמִן־בְּנֵי אֶפְרַיִם עֶשְׂרִים אֶלֶף וּשְׁמוֹנֶה מֵאוֹת גִּבּוֹרֵי חַיִל אַנְשֵׁי שֵׁמוֹת לְבֵית אֲבוֹתָֽם׃
31 ಮನಸ್ಸೆಯ ಅರ್ಧಗೋತ್ರದಲ್ಲಿ 18,000 ಮಂದಿ. ಅವರು ದಾವೀದನನ್ನು ಅರಸನಾಗಿ ಮಾಡಲು ಬಂದವರ ಹೆಸರು ಹೆಸರಾಗಿ ಹೇಳಲು ಆಯ್ಕೆಯಾದವರು.
וּמֵֽחֲצִי מַטֵּה מְנַשֶּׁה שְׁמוֹנָה עָשָׂר אָלֶף אֲשֶׁר נִקְּבוּ בְּשֵׁמוֹת לָבוֹא לְהַמְלִיךְ אֶת־דָּוִֽיד׃
32 ಇಸ್ಸಾಕಾರನ ಮಕ್ಕಳಲ್ಲಿ ಇಸ್ರಾಯೇಲರು ಮಾಡತಕ್ಕದ್ದು ಯಾವುದೆಂದು ತಿಳಿಯತಕ್ಕಂಥ ಕಾಲಗಳನ್ನು ಪರೀಕ್ಷಿಸಿ ತಿಳಿದವರು ಬಂದರು. ಅವರ ಯಜಮಾನರು 200 ಮಂದಿಯಾಗಿದ್ದರು. ಅವರ ಸಹೋದರರೆಲ್ಲರು ಇವರ ಆಜ್ಞಾಧೀನರಾಗಿದ್ದರು.
וּמִבְּנֵי יִשָּׂשכָר יוֹדְעֵי בִינָה לַֽעִתִּים לָדַעַת מַה־יַּעֲשֶׂה יִשְׂרָאֵל רָאשֵׁיהֶם מָאתַיִם וְכׇל־אֲחֵיהֶם עַל־פִּיהֶֽם׃
33 ಜೆಬುಲೂನನವರಲ್ಲಿ ದೃಢಹೃದಯದಿಂದ ಸಾಲಾಗಿ ನಡೆಯುವ ಸಕಲ ಆಯುಧಗಳನ್ನು ಧರಿಸಿಕೊಂಡ ಯುದ್ಧ ನಿಪುಣರಾದ ಸೈನ್ಯವಾಗಿ ಹೊರಡುವವರು 50,000 ಮಂದಿ.
מִזְּבֻלוּן יוֹצְאֵי צָבָא עֹרְכֵי מִלְחָמָה בְּכׇל־כְּלֵי מִלְחָמָה חֲמִשִּׁים אָלֶף וְלַעֲדֹר בְּלֹא־לֵב וָלֵֽב׃
34 ನಫ್ತಾಲಿಯವರಲ್ಲಿ 1,000 ಜನ ನಾಯಕರೂ ಗುರಾಣಿಬರ್ಜಿಗಳನ್ನು ಹಿಡಿದಿರುವ 37,000 ಸೈನಿಕರೂ
וּמִנַּפְתָּלִי שָׂרִים אָלֶף וְעִמָּהֶם בְּצִנָּה וַחֲנִית שְׁלֹשִׁים וְשִׁבְעָה אָֽלֶף׃
35 ದಾನನವರಲ್ಲಿ 28,600 ಮಂದಿ ಯುದ್ಧ ನಿಪುಣರು.
וּמִן־הַדָּנִי עֹרְכֵי מִלְחָמָה עֶשְׂרִֽים־וּשְׁמוֹנָה אֶלֶף וְשֵׁשׁ מֵאֽוֹת׃
36 ಆಶೇರನವರಲ್ಲಿ ಯುದ್ಧಕ್ಕೆ ಹೋಗತಕ್ಕ ಹಾಗೆ ಯುದ್ಧ ನಿಪುಣರು ಸೈನ್ಯವಾಗಿ ಹೋಗುವವರು 40,000 ಮಂದಿ.
וּמֵֽאָשֵׁר יוֹצְאֵי צָבָא לַעֲרֹךְ מִלְחָמָה אַרְבָּעִים אָֽלֶף׃
37 ಯೊರ್ದನ್ ನದಿ ಆಚೆಯಲ್ಲಿರುವ ರೂಬೇನ್ಯರಲ್ಲಿಯೂ, ಗಾದ್ಯರಲ್ಲಿಯೂ, ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಯುದ್ಧಕ್ಕೆ ತಕ್ಕಂಥ ಸಕಲ ಆಯುಧಗಳನ್ನು ಧರಿಸಿಕೊಂಡವರು 1,20,000 ಮಂದಿ.
וּמֵעֵבֶר לַיַּרְדֵּן מִן־הָראוּבֵנִי וְהַגָּדִי וַחֲצִי ׀ שֵׁבֶט מְנַשֶּׁה בְּכֹל כְּלֵי צְבָא מִלְחָמָה מֵאָה וְעֶשְׂרִים אָֽלֶף׃
38 ಯುದ್ಧಕ್ಕೆ ಸಿದ್ಧರಾದ ಈ ಸಮಸ್ತ ಸೈನಿಕರು ದಾವೀದನನ್ನು ಸಮಸ್ತ ಇಸ್ರಾಯೇಲರ ಮೇಲೆ ಅರಸನಾಗಿ ಮಾಡಲು ಹೆಬ್ರೋನಿಗೆ ಪೂರ್ಣಮನಸ್ಸಿನಿಂದ ಬಂದರು. ಇದಲ್ಲದೆ ಇಸ್ರಾಯೇಲಿನಲ್ಲಿದ್ದ ಮಿಕ್ಕಾದವರೆಲ್ಲರು ದಾವೀದನನ್ನು ಅರಸನಾಗಿ ಮಾಡಲು ಒಂದೇ ಮನಸ್ಸುಳ್ಳವರಾಗಿದ್ದರು.
כׇּל־אֵלֶּה אַנְשֵׁי מִלְחָמָה עֹדְרֵי מַעֲרָכָה בְּלֵבָב שָׁלֵם בָּאוּ חֶבְרוֹנָה לְהַמְלִיךְ אֶת־דָּוִיד עַל־כׇּל־יִשְׂרָאֵל וְגַם כׇּל־שֵׁרִית יִשְׂרָאֵל לֵב אֶחָד לְהַמְלִיךְ אֶת־דָּוִֽיד׃
39 ಅವರು ಅಲ್ಲಿ ದಾವೀದನ ಸಂಗಡ ಮೂರು ದಿವಸ ಅವರ ಕುಟುಂಬದವರು ಅವರಿಗೋಸ್ಕರ ಸಿದ್ಧಮಾಡಿದ ಆಹಾರವನ್ನು ತಿನ್ನುತ್ತಾ, ಕುಡಿಯುತ್ತಾ ಇದ್ದರು.
וַיִּֽהְיוּ־שָׁם עִם־דָּוִיד יָמִים שְׁלוֹשָׁה אֹכְלִים וְשׁוֹתִים כִּי־הֵכִינוּ לָהֶם אֲחֵיהֶֽם׃
40 ಇದಲ್ಲದೆ ಅವರ ನೆರೆಯವನಾದ ಇಸ್ಸಾಕಾರ್, ಜೆಬುಲೂನ್, ನಫ್ತಾಲಿಯರು ಮೊದಲುಗೊಂಡು ಎಲ್ಲರೂ ತಮ್ಮ ಎತ್ತು, ಕತ್ತೆ, ಹೇಸರಗತ್ತೆ ಮತ್ತು ಒಂಟೆಗಳ ಮೇಲೆಯೂ ರೊಟ್ಟಿಗಳನ್ನೂ ಆಹಾರವನ್ನೂ, ಹಿಟ್ಟನ್ನೂ ಅಂಜೂರದ ಉಂಡೆಗಳನ್ನೂ ಒಣಗಿದ ದ್ರಾಕ್ಷಿ ಗೊಂಚಲುಗಳನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ದನಕುರಿಗಳನ್ನೂ ಬಹಳವಾಗಿ ತಂದರು. ಇಸ್ರಾಯೇಲಿನಲ್ಲಿ ಸಂತೋಷವಿತ್ತು.
וְגַם הַקְּרֽוֹבִים־אֲלֵיהֶם עַד־יִשָּׂשכָר וּזְבֻלוּן וְנַפְתָּלִי מְבִיאִים לֶחֶם בַּחֲמוֹרִים וּבַגְּמַלִּים וּבַפְּרָדִים ׀ וּֽבַבָּקָר מַאֲכָל קֶמַח דְּבֵלִים וְצִמּוּקִים וְיַיִן־וְשֶׁמֶן וּבָקָר וְצֹאן לָרֹב כִּי שִׂמְחָה בְּיִשְׂרָאֵֽל׃

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 12 >