< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 11 >

1 ಇಸ್ರಾಯೇಲರೆಲ್ಲರು ಹೆಬ್ರೋನಿನಲ್ಲಿರುವ ದಾವೀದನ ಬಳಿಗೆ ಬಂದು, “ಇಗೋ, ನಾವು ನಿನ್ನ ಎಲುಬೂ, ನಿನ್ನ ಮಾಂಸವೂ ಆಗಿದ್ದೇವೆ.
És gyülekezett egész Izrael Dávidhoz Chebrónba, mondván: íme, csontod és húsod vagyunk;
2 ಇದಲ್ಲದೆ ಪೂರ್ವದಲ್ಲಿ ಸೌಲನು ನಮ್ಮ ಮೇಲೆ ಅರಸನಾಗಿದ್ದಾಗ, ನೀನು ದಳಪತಿಯಾಗಿ ಇಸ್ರಾಯೇಲನ್ನು ಹೊರಗೆ ನಡೆಸುವವನಾಗಿಯೂ, ಒಳಗೆ ತರುವವನಾಗಿಯೂ ಇದ್ದವನು. ಆದ್ದರಿಂದ ನಿನ್ನ ದೇವರಾದ ಯೆಹೋವ ದೇವರು ನಿನಗೆ, ‘ನೀನು ನನ್ನ ಜನರಾದ ಇಸ್ರಾಯೇಲರ ನಾಯಕನೂ, ಪಾಲಕನೂ ಆಗಿರುವೆ,’ ಎಂದು ವಾಗ್ದಾನ ಮಾಡಿದ್ದು ನಿಮ್ಮನ್ನು ಕುರಿತೇ,” ಎಂದು ಹೇಳಿ ವಂದಿಸಿದರು.
tegnap is, tegnapelőtt is, akkor is mikor Sául volt a király, te voltál az, aki ki- és bevezette Izraelt és azt mondta neked az Örökkévaló a te Istened: te fogod legeltetni népemet Izraelt és te leszel fejedelem népem, Izrael fölött.
3 ಇಸ್ರಾಯೇಲಿನ ಹಿರಿಯರೆಲ್ಲರು ಹೆಬ್ರೋನಿನಲ್ಲಿದ್ದ ಅರಸನ ಬಳಿಗೆ ಬಂದಾಗ, ಅರಸನಾದ ದಾವೀದನು ಹೆಬ್ರೋನಿನಲ್ಲಿ ಯೆಹೋವ ದೇವರ ಮುಂದೆ ಅವರ ಸಂಗಡ ಒಡಂಬಡಿಕೆ ಮಾಡಿದನು. ಯೆಹೋವ ದೇವರು ಸಮುಯೇಲನ ಮುಖಾಂತರ ಹೇಳಿದ ವಾಕ್ಯದ ಪ್ರಕಾರ ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕ ಮಾಡಿದರು.
És elmentek mind az Izrael vénei a királyhoz Chebrónba és kötött velük Dávid szövetséget Chebrónban az Örökkévaló színe előtt, és fölkenték Dávidot királynak Izrael fölé, az Örökkévaló igéje szerint, Sámuel által.
4 ದಾವೀದನೂ, ಸಮಸ್ತ ಇಸ್ರಾಯೇಲರೂ ಯೆಬೂಸಿಯರ ವಿರುದ್ಧವಾಗಿ ಯೆರೂಸಲೇಮಿಗೆ ಹೋದರು.
És ment Dávid és egész Izrael Jeruzsálembe, Jebúsz az; és ott volt a jebúszi, az ország lakója.
5 ಆ ದೇಶದ ಮೂಲನಿವಾಸಿಗಳಾದ ಯೆಬೂಸಿಯರು ದಾವೀದನಿಗೆ, “ನೀನು ಇದರೊಳಗೆ ಬರಲು ಸಾಧ್ಯವಿಲ್ಲ,” ಎಂದರು. ಆದರೂ ದಾವೀದನು, ಚೀಯೋನಿನ ಕೋಟೆಯನ್ನು ವಶಪಡಿಸಿಕೊಂಡನು. ಅದೇ ದಾವೀದನ ಪಟ್ಟಣವು.
És mondták Jebúsz lakói Dávidnak: nem fogsz te ide bejönni. És bevette Dávid Ción várát, Dávid városa az.
6 “ಯೆಬೂಸಿಯರಲ್ಲಿ ಒಬ್ಬನನ್ನು ಯಾರು ಮೊದಲು ಕೊಲ್ಲುವನೋ, ಅವನು ನನ್ನ ದಳಪತಿಯಾಗುವನು,” ಎಂದು ದಾವೀದ ಪ್ರಕಟಿಸಿದ್ದನು. ಹಾಗೆಯೇ ಚೆರೂಯಳ ಮಗ ಯೋವಾಬನು ಮೊದಲು ಹೋಗಿ ದಳಪತಿಯಾದನು.
És szólt Dávid: Bárki megveri a jebúszit először, az fejjé és vezérré lesz. S felszállt először Jóáb, Cerúja fia és fejjé lett.
7 ದಾವೀದನು ಕೋಟೆಯಲ್ಲಿ ವಾಸಮಾಡಿದನು. ಆದಕಾರಣ ಅದಕ್ಕೆ ದಾವೀದನ ಪಟ್ಟಣವೆಂದು ಹೆಸರಿಟ್ಟರು.
És lakott Dávid a várban; azért nevezték azt Dávid városának.
8 ಅವನು ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ, ಪಟ್ಟಣವನ್ನು ಪುನಃ ಕಟ್ಟಿದನು. ಆದರೆ ಪಟ್ಟಣದ ಉಳಿದ ಭಾಗವನ್ನು ಯೋವಾಬನು ಭದ್ರಮಾಡಿಸಿದನು.
És kiépítette a várost köröskörül amillótól egészen a körületig; Jóáb pedig fölélesztette a város többi részét.
9 ಹೀಗೆಯೇ ಸೇನಾಧೀಶ್ವರ ಯೆಹೋವ ದೇವರು ದಾವೀದನ ಸಂಗಡ ಇದ್ದುದರಿಂದ ಅವನು ದಿನದಿನಕ್ಕೆ ಬಲಗೊಳ್ಳುತ್ತಾ ಇದ್ದನು.
Egyre nagyobbá lett Dávid és az Örökkévaló a seregek ura vele volt.
10 ದಾವೀದನ ಬಳಿಯಲ್ಲಿದ್ದ ಮುಖ್ಯಸ್ಥರಾದ ಪರಾಕ್ರಮಶಾಲಿಗಳು ಇವರೇ. ಇಸ್ರಾಯೇಲನ್ನು ಕುರಿತು ಯೆಹೋವ ದೇವರು ಹೇಳಿದ ವಾಕ್ಯದ ಪ್ರಕಾರ, ಅವನನ್ನು ಅರಸನನ್ನಾಗಿ ಮಾಡುವುದಕ್ಕೆ ಅವರು ಸಮಸ್ತ ಇಸ್ರಾಯೇಲಿನ ಸಂಗಡ ಅವನ ರಾಜ್ಯದಲ್ಲಿ ತಮ್ಮ ಸಂಪೂರ್ಣ ಸಹಾಯ ನೀಡಿದರು.
És ezek Dávid vitézeinek fejei, akik erősködtek vele királyságában egész Izraellel együtt, hogy őt királlyá tegyék, az Örökkévaló igéje szerint Izraelről.
11 ದಾವೀದನ ಪರಾಕ್ರಮಶಾಲಿಗಳ ಪಟ್ಟಿ: ಹಕ್ಮೋನಿಯನಾದ ಯಾಷೊಬ್ಬಾಮನು ಅಧಿಪತಿಗಳಲ್ಲಿ ಮುಖ್ಯಸ್ಥನಾಗಿದ್ದನು. ಇವನು ತನ್ನ ಈಟಿಯಿಂದ ಮುನ್ನೂರು ಮಂದಿಗೆ ವಿರೋಧವಾಗಿ ಹೋರಾಡಿ ಅವರನ್ನು ಒಂದೇ ಕಾಳಗದಲ್ಲಿ ಕೊಂದುಹಾಕಿದನು.
És ez Dávid vitézeinek száma: Jásobeám, Chakhmóni fia a harcosok feje; ő forgatta a dárdáját háromszáz elesett fölött egyszerre.
12 ಇವನ ತರುವಾಯ ಅಹೋಹ್ಯನಾಗಿರುವ ದೋದೋ ಎಂಬವನ ಮಗನಾಗಿರುವ ಎಲಿಯಾಜರನು, ಮೂವರು ಪರಾಕ್ರಮಶಾಲಿಗಳಲ್ಲಿ ಒಬ್ಬನಾಗಿದ್ದನು.
És utána Eleázár, Dódó fia, az Achóachbeli; ő a három vitéz közül való.
13 ಪಸ್ ದಮ್ಮೀಮ್ ಎಂಬಲ್ಲಿ ಫಿಲಿಷ್ಟಿಯರು ಜವೆಗೋಧಿ ತುಂಬಿರುವ ಹೊಲದಲ್ಲಿ ಯುದ್ಧಕ್ಕಾಗಿ ಸೇರಿದಾಗ ಇವನು ದಾವೀದನ ಸಂಗಡ ಇದ್ದನು. ಅಲ್ಲಿ ಇಸ್ರಾಯೇಲ್ ಸೈನ್ಯದವರು ಫಿಲಿಷ್ಟಿಯರ ಎದುರಿನಿಂದ ಓಡಿಹೋದರು.
Ő volt Dáviddal együtt Pasz-Dammimban, és a filiszteusok gyülekeztek ott harcra; és ott volt egy telek mező tele árpával, és a nép megfutamodott a filiszteusok elől.
14 ಆಗ ಇವನು ಆ ಹೊಲದ ಮಧ್ಯದಲ್ಲಿ ನಿಂತುಕೊಂಡು, ಫಿಲಿಷ್ಟಿಯರನ್ನು ಕೊಂದುಹಾಕಿ ಹೊಲವನ್ನು ಕಾಪಾಡಿದನು. ಹೀಗೆ ಯೆಹೋವ ದೇವರು ಮಹಾಜಯವನ್ನು ಉಂಟುಮಾಡಿದರು.
Odaálltak a telek közepére, megmentették azt és megverték a filiszteusokat; és segített az Örökkévaló nagy segedelemmel.
15 ಮೂವತ್ತು ಮಂದಿ ಪರಾಕ್ರಮಶಾಲಿಗಳ ಮುಖ್ಯಸ್ಥರಲ್ಲಿ ಮೂರು ಮಂದಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿಗೆ ಗುಡ್ಡಕ್ಕೆ ಬಂದರು. ಅದೇ ವೇಳೆಯಲ್ಲಿ ಫಿಲಿಷ್ಟಿಯರ ಸೈನ್ಯವು ರೆಫಾಯಿಮ್ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡಿತ್ತು.
Lementek egyszer hárman a harminc főbb vitéz közül a sziklára Dávidhoz, Adullám barlangjába; a filiszteusok tábora pedig táborozott Refáim völgyében.
16 ದಾವೀದನು ಕೋಟೆ ಸ್ಥಳದಲ್ಲಿ ಇದ್ದನು, ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು.
Dávid akkor a hegységben volt, a filiszteusok örse pedig akkor Bét-Léchemben volt.
17 ಆಗ ದಾವೀದನು, “ಬೇತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ನನಗೆ ಕುಡಿಯಲು ಕೊಡುವವನ್ಯಾರು,” ಎಂದು ಬಹು ಆಶೆಯಿಂದ ಹೇಳಿದನು.
És kívánkozott Dávid és mondta: ki ad nekem vizet innom. Bét-Léchem kútjából, mely a kapuban van?
18 ಆಗ ಆ ಮೂವರು ಫಿಲಿಷ್ಟಿಯರ ದಂಡಿನಲ್ಲಿ ನುಗ್ಗಿಹೋಗಿ, ಬೇತ್ಲೆಹೇಮಿನ ಬಾಗಿಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ, ದಾವೀದನಿಗೆ ತೆಗೆದುಕೊಂಡು ಬಂದರು. ಆದರೆ ಅದನ್ನು ಅವನು ಕುಡಿಯದೇ ಯೆಹೋವ ದೇವರಿಗೆ ಸಮರ್ಪಿಸುವಂತೆ ನೆಲದ ಮೇಲೆ ಸುರಿದು,
Erre áttörtek hárman a filiszteusok táborán és vizet merítettek Bét-Léchem kútjából, mely a kapuban van; vették és elhozták Dávidhoz, de Dávid nem akarta meginni, hanem kiöntötte azt az Örökkévalónak.
19 “ದೇವರು ಇಂಥಾ ಕಾರ್ಯವನ್ನು ನನಗೆ ದೂರವಾಗಿ ಮಾಡಲಿ. ನಾನು ಈ ಮನುಷ್ಯರ ಪ್ರಾಣದ ರಕ್ತವನ್ನು ಕುಡಿಯಬಹುದೇ? ತಮ್ಮ ಪ್ರಾಣದಾಶೆ ತೊರೆದು ಈ ನೀರನ್ನು ತಂದರಲ್ಲಾ?” ಎಂದು ಹೇಳಿ ಕುಡಿಯಲೊಲ್ಲದೆ ಇದ್ದನು. ಇಂಥಾ ಮಹಾಕಾರ್ಯಗಳನ್ನು ಈ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು.
Így szólt: Távol legyen tőlem Istenemért, hogy ezt cselekedjem! Vajon ezeknek a férfiaknak vérét igyam-e, kik életük veszélyével mentek? Életük veszélyével hozták azt! És nem akarta meginni. Ezeket tette a három vitéz.
20 ಇದಲ್ಲದೆ ಯೋವಾಬನ ಸಹೋದರನಾದ ಅಬೀಷೈಯನು ಮೂರು ಮಂದಿಯಲ್ಲಿ ಮುಖ್ಯಸ್ಥನು. ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿಯನ್ನು ಎತ್ತಿ ಅವರನ್ನು ಕೊಂದುಹಾಕಿದ್ದರಿಂದ, ಮೂವರಂತೆ ಹೆಸರುಗೊಂಡನು.
Absáj pedig, Jóáb testvére – ő a harmincoknak feje és ő forgatta dárdáját háromszáz elesett fölött; s neki neve volt a harmincok közt.
21 ಈ ಮೂವರಲ್ಲಿ ಅವನು ಇಬ್ಬರಿಗಿಂತ ಹೆಚ್ಚು ಘನವುಳ್ಳವನಾಗಿದ್ದನು, ಆದ್ದರಿಂದ ಅವನು ಅವರಲ್ಲಿ ಪ್ರಧಾನನಾದನು; ಆದರೂ ಆ ಮೊದಲಿನ ಮೂರು ಜನರಿಗೆ ಅವನು ಸಮಾನನಾಗಿರಲಿಲ್ಲ.
A harmincoknál kétszeresen kiválóbb volt és vezérük lett, de a hárommal föl nem ért.
22 ಕಬ್ಜಯೇಲನ ಪರಾಕ್ರಮಶಾಲಿಯ ಮೊಮ್ಮಗನೂ ಯೆಹೋಯಾದಾವನ ಮಗನೂ ಆದ ಬೆನಾಯನು ಅನೇಕ ಶೂರ ಕೃತ್ಯಗಳನ್ನು ಮಾಡಿದನು; ಅವನು ಬಲಶಾಲಿಯಾದ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದನು. ಇದಲ್ಲದೆ ಹಿಮಕಾಲದಲ್ಲಿ ಕುಣಿಯೊಳಗೆ ಇಳಿದು ಒಂದು ಸಿಂಹವನ್ನು ಕೊಂದುಬಿಟ್ಟನು.
Benája, Jehójádá fia, derék ember, tettekben nagy, Kabceélből; ő verte meg Móáb két hősét és ugyan ő ment le és verte meg az oroszlánt a veremben a hóesés napján.
23 ಅವನು ಏಳುವರೆ ಅಡಿ ಎತ್ತರವಾಗಿದ್ದ ಒಬ್ಬ ಈಜಿಪ್ಟಿನವನನ್ನು ಹೊಡೆದುಬಿಟ್ಟನು; ಆ ಈಜಿಪ್ಟಿನವನ ಕೈಯಲ್ಲಿ ನೇಯ್ಗೆಗಾರರ ಕುಂಟೆಯಷ್ಟು ದಪ್ಪವಾದ ಒಂದು ಈಟಿ ಇದ್ದರೂ, ತಾನು ಒಂದು ಕೋಲು ಹಿಡಿದುಕೊಂಡು ಅವನ ಬಳಿಗೆ ಹೋಗಿ, ಈಜಿಪ್ಟಿನವನ ಕೈಯಲ್ಲಿದ್ದ ಈಟಿಯನ್ನು ಕಿತ್ತುಕೊಂಡು, ಅವನ ಈಟಿಯಿಂದಲೇ ಅವನನ್ನು ಕೊಂದುಹಾಕಿದನು.
Ugyan ő vert meg egy termetes egyiptomi embert, öt könyöknyi volt, s az egyiptominak kezében dárda volt, mint a takácsok zugolyfája, ő lement hozzá bottal és kiragadta a dárdát az egyiptominak kezéből és megölte őt saját dárdájával.
24 ಇವುಗಳನ್ನು ಯೆಹೋಯಾದಾವನ ಮಗ ಬೆನಾಯನು ಮಾಡಿದ್ದರಿಂದ, ಮೂರು ಮಂದಿ ಪರಾಕ್ರಮಶಾಲಿಗಳಂತೆಯೇ ಹೆಸರುಗೊಂಡನು.
Ezeket tette Benájáhú, Jehójádá fia, neki neve volt a vitézek, a harmincok között.
25 ಅವನು ಮೂವತ್ತು ಜನರಿಗಿಂತ ಹೆಚ್ಚು ಘನವುಳ್ಳವನಾಗಿದ್ದನು; ಆದರೆ ಆ ಮೊದಲಿನ ಮೂರು ಮಂದಿಯಲ್ಲಿ ಅವನನ್ನು ಸೇರಿಸಲಾಗಲಿಲ್ಲ; ದಾವೀದನು ಅವನನ್ನು ತನ್ನ ಮೈಗಾವಲಿನವರ ಮೇಲೆ ಯಜಮಾನನನ್ನಾಗಿ ಇಟ್ಟನು.
A harmincoknál íme ő kiválóbb, de a hárommal föl nem ért; és tette őt Dávid a szolgálatához.
26 ಇದಲ್ಲದೆ ದಂಡುಗಳಲ್ಲಿರುವ ಪರಾಕ್ರಮಶಾಲಿಗಳು ಯಾರೆಂದರೆ: ಯೋವಾಬನ ಸಹೋದರನಾದ ಅಸಾಯೇಲನು; ಬೇತ್ಲೆಹೇಮ್ ಊರಿನ ದೋದೋವಿನ ಮಗ ಎಲ್ಹನಾನನು;
És a derék vitézek: Aszáél, Jóáb testvére; Elchánán, Dódó fia, Bét-Léchemből.
27 ಹರೋರಿಯನಾದ ಶಮ್ಮೋತನು; ಪೆಲೋನ್ಯನಾದ ಹೆಲೆಚನು;
A Harórbeli Sammót, a Pelónbeli Chélec,
28 ತೆಕೋವದ ಇಕ್ಕೇಷನ ಮಗನಾದ ಈರನು; ಅನಾತೋತಿನವನಾದ ಅಬೀಯೆಜೆರನು;
a Tekóabeli Ira, Ikkés fia; az Anátótbeli Abiézer;
29 ಹುಷಾ ಊರಿನವನಾದ ಸಿಬ್ಬೆಕೈ; ಅಹೋಹ್ಯನಾದ ಈಲೈ;
a Chúsabeli Szíbbekhaj; az Achóachbeli Ilaj;
30 ನೆಟೋಫದವನಾದ ಮಹರೈ; ನೆಟೋಫದವನಾದ ಬಾಣನ ಮಗ ಹೆಲೇದ್;
a Netófabeli Maharaj; a Netófabeli Chéled, Báana fia,
31 ಬೆನ್ಯಾಮೀನ್ಯರಿಗೆ ಸೇರಿದ ಗಿಬೆಯ ಊರಿನ ರೀಬೈ ಎಂಬುವನ ಮಗನಾದ ಇತ್ತೈ, ಪಿರಾತೋನ್ಯನಾದ ಬೆನಾಯನು;
Itaj, Ríbaj fia, a Benjáminbeli Gibeából; a Pireátónbeli Benája.
32 ಹೊಳೆಗಳುಳ್ಳ ಗಾಷ್ ಊರಿನವನಾದ ಹೂರೈ; ಅರಾಬಾ ತಗ್ಗಿನವನಾದ ಅಬೀಯೇಲನು;
Chúraj, Gáas völgyeiből; az Arábabeli Abíél.
33 ಬಹರೂಮ್ಯನಾದ ಅಜ್ಮಾವೆತನು; ಶಾಲ್ಬೋನ್ಯನಾದ ಎಲೆಯಖ್ಬಾನು;
A Bácharúmbeli Azmávet; a Sáalbónbeli Eljachba.
34 ಗೀಜೋನ್ಯನಾದ ಹಾಷೇಮನ ಪುತ್ರರು; ಹರಾರ್ಯನಾದ ಶಾಗೇಯ ಮಗ ಯೋನಾತಾನನು;
A Gizóbeli Hásém fiai; a Harárbeli Jónátán, Ságé fia.
35 ಹರಾರ್ಯನಾದ ಶಾಕಾರನ ಮಗನಾದ ಅಹೀಯಾಮನು; ಊರನ ಮಗನಾದ ಎಲಿಫಾಲನು;
A Hárárbeli Achiám, Szákhár fia; Elifál, Úr fia.
36 ಮೆಕೆರಾತಿಯನಾದ ಹೇಫೆರನು; ಪೆಲೋನ್ಯನಾದ ಅಹೀಯನು;
A Mekhérabeli Chéfer; a Pelónbeli Achija.
37 ಕರ್ಮೇಲ್ಯನಾದ ಹೆಚ್ರೋ; ಎಜ್ಬೈನ ಮಗನಾದ ನಾರಾಯಿ;
A Karmelbeli Checró; Náaraj, Ezbáj fia.
38 ನಾತಾನನ ಸಹೋದರನಾದ ಯೋಯೇಲನು; ಹಗ್ರೀಯನ ಮಗನಾದ ಮಿಬ್ಹಾರನು;
Jóél, Nátán testvére; Mibchár, Hagri fia.
39 ಅಮ್ಮೋನಿಯನಾದ ಚೆಲೆಕನು; ಚೆರೂಯಳ ಮಗನಾದ ಯೋವಾಬನ ಆಯುಧವಾಹಕನು ಆಗಿದ್ದ ಬೇರೋತ್ಯನಾದ ನಹರೈ;
Az ammóni Célek; a Bérótbeli Nachráj, Jóábnak, Cerúja fiának fegyverhordozója.
40 ಯೆತೆರಿಯನಾದ ಈರನು; ಯೆತೆರಿಯನಾದ ಗಾರೇಬನು;
A Jéterbeli Ira; a Jéterbeli Gáréb.
41 ಹಿತ್ತಿಯನಾದ ಊರೀಯನು; ಅಹ್ಲಾಯಿಯ ಮಗನಾದ ಜಾಬಾದನು;
A chittita Úrija; Zábád, Achláj fia.
42 ರೂಬೇನ್ಯನಾದ ಶೀಜನ ಮಗನಾದ ಅದೀನನು; ಇವನು ರೂಬೇನ್ಯರಲ್ಲಿ ಅಧಿಪತಿಯಾಗಿದ್ದನು; ಮೂವತ್ತು ಮಂದಿ ಅವನ ಸಂಗಡ ಇದ್ದರು.
A reúbéni Adina, Siza fia, a Reubéni feje a mellette harmincan.
43 ಮಾಕನ ಮಗನಾದ ಹಾನಾನನು; ಮೆತೆನದವನಾದ ಯೋಷಾಫಾಟ್;
Chánán, Máakha fia és a Métenbeli Jósáfát.
44 ಅಷ್ಟೆರಾತ್ಯನಾದ ಉಜ್ಜೀಯ; ಅರೋಯೇರಿನಾದ ಹೋತಾಮನ ಮಕ್ಕಳಾಗಿರುವ ಶಾಮಾ, ಯೆಹೀಯೇಲ್;
Az Asterabeli Uzzija, Sámá és Jeíél, az Aróérbeli Chótám fiai.
45 ಶಿಮ್ರಿಯ ಮಗನಾದ ಎದೀಗಯೇಲ್; ಅವನ ಸಹೋದರನಾದ, ತೀಚೀಯನಾದ ಯೋಹ;
Jediaél, Simri fia és testvére; a Ticbeli Jócha.
46 ಮಹಾವಿಯನಾದ ಎಲೀಯೇಲ್; ಎಲ್ನಾಮನ ಮಕ್ಕಳಾದ ಯೆರೀಬೈ ಮತ್ತು ಯೋಷವ್ಯ; ಮೋವಾಬ್ಯನಾದ ಇತ್ಮ;
A Máchavimbeli Eliél; Jeríbaj és Jósavja, Elnáam fiai, és a móábi Jitma.
47 ಎಲೀಯೇಲ್; ಓಬೇದ್; ಮೆಚೊಬಾಯದವನಾದ ಯಾಸೀಯೇಲ್.
Elíél, Óbéd és a Mecóbájabeli Jáaszíél.

< ಪೂರ್ವಕಾಲವೃತ್ತಾಂತ ಪ್ರಥಮ ಭಾಗ 11 >