< ಚೆಫನ್ಯನು 1 >
1 ೧ ಆಮೋನನ ಮಗನೂ, ಯೆಹೂದದ ಅರಸನಾದ ಯೋಷೀಯನ ಕಾಲದಲ್ಲಿ ಕೂಷಿಯನ ಮಗನೂ, ಗೆದಲ್ಯನ ಮೊಮ್ಮಗನೂ, ಹಿಜ್ಕೀಯನಿಗೆ ಹುಟ್ಟಿದ ಅಮರ್ಯನ ಮರಿಮಗನೂ ಆದ ಚೆಫನ್ಯನಿಗೆ ಯೆಹೋವನು ದಯಪಾಲಿಸಿದ ವಾಕ್ಯ.
A word of YHWH that has been to Zephaniah son of Cushi, son of Gedaliah, son of Amariah, son of Hezikiah, in the days of Josiah son of Amoz, king of Judah:
2 ೨ ಯೆಹೋವನು ಇಂತೆನ್ನುತ್ತಾನೆ, “ನಾನು ಭೂಮಂಡಲದಿಂದ ಸಮಸ್ತವನ್ನು ಅಳಿಸಿಬಿಡುವೆನು.
“I utterly consume all from off the face of the ground,” A declaration of YHWH.
3 ೩ ಮನುಷ್ಯರನ್ನೂ, ಪಶುಗಳನ್ನೂ, ಮತ್ತು ಆಕಾಶದ ಪಕ್ಷಿಗಳನ್ನೂ, ಸಮುದ್ರದ ಮೀನುಗಳನ್ನೂ ನಾಶಪಡಿಸುವೆನು; ವಿಗ್ರಹಗಳೆಂಬ ವಿಘ್ನಗಳನ್ನೂ, ಅವುಗಳಿಗೆ ಅಡ್ಡಬೀಳುವ ದುಷ್ಟರನ್ನೂ ಸಂಹರಿಸುವೆನು; ಭೂಮಿಯ ಮೇಲಿಂದ ದುಷ್ಟರ ಸಂತಾನವನ್ನೂ ಕಿತ್ತುಹಾಕುವೆನು” ಇದು ಯೆಹೋವನ ನುಡಿ.
“I consume man and beast, I consume bird of the heavens, and fishes of the sea, And the stumbling-blocks—the wicked, And I have cut off man from the face of the ground,” A declaration of YHWH,
4 ೪ “ನಾನು ಯೆಹೂದದ ಮೇಲೂ ಮತ್ತು ಯೆರೂಸಲೇಮಿನವರೆಲ್ಲರ ಮೇಲೂ ಕೈಯೆತ್ತಿ, ಈ ಸ್ಥಳದಿಂದ ಬಾಳನ ಪೂಜೆಯನ್ನು ನಿಶ್ಶೇಷಗೊಳಿಸಿ, ಕೆಮಾರ್ಯ ಮೊದಲಾದ ಪೂಜಾರಿಗಳನ್ನು ನಿರ್ನಾಮ ಮಾಡುವೆನು,
“And I have stretched out My hand against Judah, And against all inhabiting Jerusalem, And cut off from this place the remnant of Ba‘al, The name of the idolatrous priests, with the priests,
5 ೫ ಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣವನ್ನು ಪೂಜಿಸುವವರನ್ನೂ, ಯೆಹೋವನ ಭಕ್ತರೆಂದು ಪ್ರತಿಜ್ಞೆ ಮಾಡಿಕೊಂಡು ಆರಾಧಿಸಿ ಮಲ್ಕಾಮನ ಮೇಲೆ ಆಣೆಯಿಡುವವರನ್ನೂ,
And those bowing themselves On the roofs to the host of the heavens, And those bowing themselves, Swearing to YHWH, and swearing by Malcham,
6 ೬ ಯೆಹೋವನನ್ನು ಆಶ್ರಯಿಸದೆ, ಯೆಹೋವನ ದರ್ಶನವನ್ನು ಬಯಸದೇ, ಯೆಹೋವನ ಮಾರ್ಗ ಬಿಟ್ಟವರನ್ನೂ ಧ್ವಂಸ ಮಾಡುವೆನು.”
And those removing from after YHWH, And who have not sought YHWH, nor implored Him.”
7 ೭ ಕರ್ತನಾದ ಯೆಹೋವನ ಸನ್ನಿಧಿಯಲ್ಲಿ ಮೌನವಾಗಿರಿ, ಯೆಹೋವನ ನ್ಯಾಯತೀರ್ಪಿನ ದಿನವು ಸಮೀಪಿಸಿತು; ಯೆಹೋವನು ಯಜ್ಞದ ಔತಣವನ್ನು ಸಿದ್ಧಪಡಿಸಿದ್ದಾನೆ, ಕರೆದವರನ್ನು ಪ್ರತಿಷ್ಠಿಸಿದ್ದಾನೆ.
Hush! Because of Lord YHWH, For near [is the] Day of YHWH, For YHWH has prepared a sacrifice, He has sanctified His invited ones.
8 ೮ “ಯೆಹೋವನ ಆ ಯಜ್ಞದಿನದಲ್ಲಿ ನಾನು ದೇಶಾಧಿಪತಿಗಳನ್ನೂ, ರಾಜವಂಶದವರನ್ನೂ, ವಿದೇಶ ವಸ್ತ್ರದಾರಿಗಳೆಲ್ಲರನ್ನೂ ದಂಡಿಸುವೆನು.
“And it has come to pass, In the day of the sacrifice of YHWH, That I have laid a charge on the heads, And on sons of the king, And on all putting on strange clothing.
9 ೯ ಹೊಸ್ತಿಲನ್ನು ದಾಟಿ ಮೋಸ ಹಿಂಸೆಗಳಿಂದ ದೋಚಿದ್ದನ್ನು, ತಮ್ಮ ಒಡೆಯನ ಮನೆಯೊಳಗೆ ತುಂಬಿಸುವವರೆಲ್ಲರನ್ನು ಆ ದಿನದಲ್ಲಿ ದಂಡಿಸುವೆನು.
And I have laid a charge on everyone Who is leaping over the threshold in that day, Who are filling the house of their masters [With] violence and deceit.
10 ೧೦ ಅದೇ ದಿನದಲ್ಲಿ ಮೀನುಬಾಗಿಲಿನಿಂದ ಕೂಗಾಟ, ಎರಡನೆಯ ಕೇರಿಯಿಂದ ಗೋಳಾಟ, ಗುಡ್ಡಗಳ ಮೇಲಿನಿಂದ ಭೀಕರ ಶಬ್ದವನ್ನು ಕೇಳುವಿರಿ, ಅಂತು ದೊಡ್ಡ ಗದ್ದಲವಾಗುವುದು” ಇದು ಯೆಹೋವನ ನುಡಿ.
And there has been in that day,” A declaration of YHWH, “The noise of a cry from the Fish Gate, And of a howling from the Second [Quarter], And of great destruction from the hills.
11 ೧೧ ಯೆರುಸಲೇಮ್ ಜಿಲ್ಲೆಯ ಮಾರುಕಟ್ಟೆಯಲ್ಲಿ ವಾಸಿಸುವವರೇ, ಕೂಗಿರಿ, ಏಕೆಂದರೆ ಎಲ್ಲಾ ವರ್ತಕರ ಜನರೆಲ್ಲಾ ಹಾಳಾದರು, ಬೆಳ್ಳಿಯ ವ್ಯಾಪಾರಿಗಳೆಲ್ಲರೂ ನಾಶವಾದರು.
Howl, you inhabitants of the hollow place, For all the merchant people have been cut off, All carrying silver have been cut off.
12 ೧೨ ಆ ಕಾಲದಲ್ಲಿ ನಾನು ದೀಪಗಳನ್ನು ಹಿಡಿದು, ಯೆರೂಸಲೇಮನ್ನೆಲ್ಲಾ ಹುಡುಕಿಬಿಡುವೆನು; ಯೆಹೋವನು ಮೇಲನ್ನಾಗಲಿ, ಕೇಡನ್ನಾಗಲಿ ಮಾಡನು ಎಂದು ಮನಸ್ಸಿನೊಳಗೆ ಅಂದುಕೊಳ್ಳುವವರಾಗಿ, ಮಡ್ಡಿಯಂತೆ ಮಂದವಾಗಿರುವ ದ್ರಾಕ್ಷಾರಸಕ್ಕೆ ಸಮಾನರಾದ ಜನರನ್ನು ದಂಡಿಸುವೆನು.
And it has come to pass at that time, I search Jerusalem with lights, And I have laid a charge on the men Who are hardened on their preserved things, Who are saying in their heart: YHWH does no good, nor does He do evil.
13 ೧೩ ಅವರ ಆಸ್ತಿಯು ಸೂರೆಯಾಗುವುದು, ಅವರ ಮನೆಗಳು ಹಾಳಾಗುವವು; ಅವರು ಮನೆಗಳನ್ನು ಕಟ್ಟಿಕೊಂಡರೂ ಅವುಗಳಲ್ಲಿ ವಾಸಿಸರು, ದ್ರಾಕ್ಷಾತೋಟಗಳನ್ನು ಮಾಡಿಕೊಂಡರೂ ಅವುಗಳ ದ್ರಾಕ್ಷಾರಸವನ್ನು ಕುಡಿಯರು.
And their wealth has been for a spoil, And their houses for desolation, And they have built houses, and do not inhabit, And they have planted vineyards, And they do not drink their wine.”
14 ೧೪ ಯೆಹೋವನ ಮಹಾದಿನವು ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ; ಆಹಾ, ಕಿವಿಗೊಡಿರಿ, ಯೆಹೋವನ ದಿನವೇ ಬಂದಿತು; ಇಗೋ, ಅಲ್ಲಿ ಒಬ್ಬ ಶೂರನು ಘೋರವಾಗಿ ಗೋಳಾಡುತ್ತಿದ್ದಾನೆ!
Near [is] the Great Day of YHWH, Near, and hastening exceedingly, The noise of the Day of YHWH, There a mighty one bitterly shrieks.
15 ೧೫ ಆ ದಿನದ ಸುದ್ದಿ ಕಹಿಯಾದುದು, ಅದು ರೌದ್ರದ ದಿನ, ಶ್ರಮಸಂಕಟಗಳ ದಿನ, ಹಾಳುಪಾಳುಮಾಡುವ ದಿನ, ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ಕಗ್ಗತ್ತಲ ದಿನ!
A day of wrath [is] that day, A day of adversity and distress, A day of devastation and desolation, A day of darkness and gloominess, A day of cloud and thick darkness,
16 ೧೬ ಕೋಟೆಗಳನ್ನೂ, ದೊಡ್ಡ ಕೊತ್ತಲುಗಳನ್ನೂ ಹಿಡಿಯಲು, ಆರ್ಭಟಿಸಿ ಕೊಂಬೂದುವ ದಿನ.
A day of horn and shouting against the fortified cities, And against the high corners.
17 ೧೭ ಯೆಹೋವನಾದ ನನಗೆ ಜನರು ಪಾಪಮಾಡಿದ ಕಾರಣ ಕುರುಡರಂತೆ ನಡೆಯುವ ಹಾಗೆ ಅವರನ್ನು ಸಂಕಟಪಡಿಸುವೆನು; ಅವರ ರಕ್ತವು ಧೂಳಿನಂತೆ ಚೆಲ್ಲಿ ಹೋಗುವುದು, ಅವರ ಮಾಂಸವು ಮಲದ ಹಾಗೆ ಬಿದ್ದಿರುವುದು!
“And I have sent distress to men, And they have walked as the blind, For against YHWH they have sinned, And poured out is their blood as dust, And their flesh [is] as dung.”
18 ೧೮ ಯೆಹೋವನ ರೌದ್ರದ ದಿನದಲ್ಲಿ ಅವರ ಬೆಳ್ಳಿ, ಬಂಗಾರಗಳೂ ಕೂಡಾ ಅವರನ್ನು ರಕ್ಷಿಸಲಾರವು; ಆತನ ರೋಷಾಗ್ನಿಯು ದೇಶವನ್ನೆಲ್ಲಾ ನುಂಗಿಬಿಡುವುದು; ಆತನು ದೇಶನಿವಾಸಿಗಳೆಲ್ಲರನ್ನೂ ಕೊನೆಗಾಣಿಸುವನು, ಹೌದು, ಘೋರವಾಗಿ ನಿರ್ಮೂಲಮಾಡುವನು!
Even their silver, even their gold, is not able to deliver them in a day of the wrath of YHWH, and in the fire of His jealousy is the whole land consumed, for He makes only a hurried end of all the inhabitants of the land!