< ಜೆಕರ್ಯನು 6 >
1 ೧ ನಂತರ ನಾನು ಕಣ್ಣೆತ್ತಿ ನೋಡಲು, ಇಗೋ, ಎರಡು ಬೆಟ್ಟಗಳ ನಡುವೆಯಿಂದ ಬರುತ್ತಿರುವ ನಾಲ್ಕು ರಥಗಳು ಕಾಣಿಸಿದವು. ಅ ಬೆಟ್ಟಗಳು ತಾಮ್ರದವುಗಳಾಗಿದ್ದವು.
၁အခြားဗျာဒိတ်ရူပါရုံတစ်ခုကိုငါမြင်ရ ပြန်၏။ ဤအကြိမ်၌ငါသည်ကြေးဝါတောင် နှစ်ခုကြားမှထွက်လာသောစစ်မြင်းရထား လေးစီးကိုမြင်ရလေသည်။-
2 ೨ ಮೊದಲನೆಯ ರಥಕ್ಕೆ ಕೆಂಪು ಕುದುರೆಗಳು; ಎರಡನೆಯ ರಥಕ್ಕೆ ಕಪ್ಪು ಕುದುರೆಗಳು;
၂ပထမစစ်မြင်းရထားတွင်မြင်းနီများ၊ ဒုတိယစစ်မြင်းရထားတွင်မြင်းနက်များ၊-
3 ೩ ಮೂರನೆಯ ರಥಕ್ಕೆ ಬಿಳಿ ಕುದುರೆಗಳು; ನಾಲ್ಕನೆಯ ರಥಕ್ಕೆ ಮಚ್ಚೆಯ ಬಲವಾದ ಕುದುರೆಗಳು ಕಟ್ಟಿದ್ದವು.
၃တတိယစစ်မြင်းရထားတွင်မြင်းဖြူများ၊ စတုတ္ထစစ်မြင်းရထားတွင်ပြောက်ကျား မြင်းများကလျက်ရှိ၏။-
4 ೪ ಆಗ ನನ್ನ ಸಂಗಡ ಮಾತನಾಡಿದ ದೇವದೂತನಿಗೆ, “ನನ್ನ ಸ್ವಾಮೀ ಇದೇನು?” ಎಂದೆನು.
၄ထိုနောက်ငါသည်ကောင်းကင်တမန်အား``အရှင်၊ ဤစစ်မြင်းရထားများကားမည်သည့်အနက် ကိုဆောင်ပါသနည်း'' ဟုမေးလျှင်၊
5 ೫ ಆ ದೇವದೂತನು ನನಗೆ, “ಇವು ಆಕಾಶದ ನಾಲ್ಕು ಗಾಳಿಗಳು; ಭೂಲೋಕದ ಒಡೆಯನ ಸನ್ನಿಧಾನದಲ್ಲಿ ನಿಂತಿದ್ದು ಅಲ್ಲಿಂದ ಹೊರಟು ಬರುತ್ತಾ ಇವೆ” ಎಂದು ಉತ್ತರಕೊಟ್ಟನು.
၅ကောင်းကင်တမန်က``ယင်းတို့သည်လေလေးပါး ဖြစ်၏။ ထိုလေတို့သည်ကမ္ဘာမြေပြင်တစ်ခုလုံး ကိုအစိုးရသောအရှင်၏ရှေ့တော်မှောက်မှ ယခုပင်ထွက်လာခဲ့ကြ၏'' ဟုဆိုလေသည်။
6 ೬ ಅನಂತರ ಕಪ್ಪು ಕುದುರೆಗಳ ರಥ ಉತ್ತರ ದೇಶಕ್ಕೆ ಹೊರಟವು. ಬಿಳಿ ಕುದುರೆಗಳು ಅವುಗಳನ್ನು ಪಶ್ಚಿಮ ದೇಶಕ್ಕೆ ಹಿಂಬಾಲಿಸಿದವು. ಮಚ್ಚೆ ಮಚ್ಚೆಯ ಕುದುರೆಗಳ ರಥ ದಕ್ಷಿಣ ದೇಶಕ್ಕೆ ಹೋದವು.
၆မြင်းနက်များကသည့်စစ်မြင်းရထားသည် မြောက်အရပ်သို့လည်းကောင်း၊ မြင်းဖြူများ သည်အနောက်ဘက်သို့လည်းကောင်း၊ ပြောက် ကျားမြင်းများသည်တောင်ဘက်အရပ် ဒေသသို့လည်းကောင်းသွားလျက်နေကြ၏။-
7 ೭ ಕೆಂಪು ಕುದುರೆಗಳು ಬಂದು ಲೋಕದಲ್ಲಿ ಸಂಚರಿಸುವುದಕ್ಕೆ ಹೊರಡಬೇಕೆಂದು ತ್ವರೆಪಟ್ಟವು; ಆಗ ಅವನು, “ಹೊರಡಿರಿ, ಲೋಕದಲ್ಲಿ ಸಂಚರಿಸಿರಿ” ಎಂದು ಅಪ್ಪಣೆ ಮಾಡಲು ಅವು ಲೋಕದಲ್ಲಿ ಸಂಚರಿಸಿದವು.
၇ပြောက်ကျားမြင်းများသည်ကမ္ဘာမြေပြင် ကိုကြည့်ရှုစစ်ဆေးရန် အလျင်စလိုထွက် လာကြလေသည်။ ကောင်းကင်တမန်က``သူ တို့အားကမ္ဘာမြေပြင်ကိုသွားရောက်ကြည့် ရှုစစ်ဆေးကြလော့'' ဟုဆိုသည့်အတိုင်း သူတို့သည်ထွက်သွားကြ၏။-
8 ೮ ಆ ಮೇಲೆ ಅವನು ನನಗೆ, “ಆಹಾ, ಉತ್ತರ ದೇಶಕ್ಕೆ ಹೋದವುಗಳು ಅಲ್ಲಿ ನನ್ನ ಕೋಪವನ್ನು ಶಾಂತಿಗೊಳಿಸಿವೆ” ಎಂದು ಕೂಗಿ ಹೇಳಿದನು.
၈ထိုနောက်ကောင်းကင်တမန်သည်ငါ့အား၊``မြောက် အရပ်သို့သွားသည့်မြင်းတို့သည်ထာဝရ ဘုရား၏အမျက်တော်ကိုပြေစေကြလေ ပြီ'' ဟုပြော၏။
9 ೯ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
၉ထာဝရဘုရားသည်ငါ့အားဤသို့ဗျာဒိတ် ပေးတော်မူ၏။-
10 ೧೦ ಇನ್ನು ಸೆರೆಯಲ್ಲಿರುವವರೊಳಗೆ ಸೇರಿದವರಾದ ಹೆಲ್ದಾಯ, ತೋಬೀಯ ಮತ್ತು ಯೆದಾಯ ಎಂಬುವರ ಕೈಯಿಂದ ಬೆಳ್ಳಿ ಬಂಗಾರಗಳನ್ನು ತೆಗೆದುಕೋ; ಈ ದಿನವೇ ನೀನು ಹೋಗಿ ಬಾಬೆಲಿನಿಂದ ಬಂದು, ಇವರು ಇಳಿದುಕೊಂಡಿರುವ ಚೆಫನ್ಯನ ಮಗನಾದ ಯೋಷಿಯನ ಮನೆಗೆ ಹೋಗಿ,
၁၀ကိုယ်တော်က``ပြည်နှင်ဒဏ်သင့်သူဟေလဒဲ၊ တောဘိယနှင့်ယေဒါသအနွယ်ဝင်တို့၏ အလှူပစ္စည်းများကိုယူ၍ ဇေဖနိ၏သား ယောရှိအိမ်သို့ချက်ချင်းသွားလော့။ ဤသူ အပေါင်းတို့သည် ဗာဗုလုန်ပြည်တွင်ပြည် နှင်ဒဏ်သင့်ရာမှပြန်လာကြသူများ ဖြစ်၏။-
11 ೧೧ ಇವರಿಂದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಕಿರೀಟವನ್ನು ಮಾಡಿ ಯೆಹೋಚಾದಾಕನ ಮಗನೂ ಹಾಗೂ ಮಹಾಯಾಜಕನು ಆದ ಯೆಹೋಶುವನ ತಲೆಯ ಮೇಲೆ ಇಟ್ಟು,
၁၁သူတို့ပေးလှူထားသည့်ရွှေငွေများဖြင့် သရဖူတစ်ခုကိုပြုလုပ်၍ ယောဇဒက် ၏သားယဇ်ပုရောဟိတ်မင်းယောရှု၏ ဦးခေါင်းကိုဆောင်းပေးလော့။-
12 ೧೨ ಅವನಿಗೆ ಹೀಗೆ ಹೇಳು, “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, ‘ಇಗೋ, ಮೊಳಿಕೆಯೆಂಬ ಪುರುಷನು! ಅವನು ಇದ್ದಲ್ಲಿಯೇ ವೃದ್ಧಿಯಾಗಿ, ಯೆಹೋವನ ಆಲಯವನ್ನು ಕಟ್ಟಿಸುವನು.
၁၂အနန္တတန်ခိုးရှင်ထာဝရဘုရားက``အညွှန့် အတက်'' ဟုနာမည်တွင်သူသည်မိမိရှိရာ အရပ်တွင်ကြီးပွားတိုးတက်လျက်ထာဝရ ဘုရား၏ဗိမာန်တော်ကိုပြန်လည်တည်ဆောက် ရလိမ့်မည်။-
13 ೧೩ ಹೌದು, ಅವನೇ ಯೆಹೋವನ ಆಲಯವನ್ನು ಕಟ್ಟಿಸಿ ರಾಜವೈಭವವನ್ನು ಹೊಂದಿಕೊಂಡು ತನ್ನ ಸಿಂಹಾಸನದಲ್ಲಿ ಆಸೀನನಾಗಿ ಆಳುವನು. ಮತ್ತು ಯಾಜಕರು ತನ್ನ ಸಿಂಹಾಸನದಲ್ಲಿ ಕುಳಿತಿರುವರು. ಅವರಿಬ್ಬರೂ ಸಮ್ಮತಿ ಸಮಾಧಾನದಿಂದ ಇರುವರು.
၁၃ထိုသူသည်ဗိမာန်တော်ကိုတည်ဆောက်ရမည့် သူ၊ ဘုရင်တို့နှင့်ထိုက်တန်သည့်ဘုန်းအသရေ ကိုခံယူရရှိမည့်သူဖြစ်သဖြင့် မိမိ၏အမျိုး သားတို့ကိုအုပ်စိုးရလိမ့်မည်။ သူ၏ရာဇပလ္လင် အနီးတွင်ယဇ်ပုရောဟိတ်တစ်ပါးသည်ရပ် လျက်သူနှင့်အတူငြိမ်းချမ်းသင့်မြတ်စွာ ပူးပေါင်းဆောင်ရွက်ပေးလိမ့်မည်။-
14 ೧೪ “‘ಆ ಕಿರೀಟವು ಹೇಲೆಮ್, ತೋಬೀಯ, ಯೆದಾಯ, ಚೆಫನ್ಯನ ಮಗನಾದ ಯೋಷೀಯ ಇವರ ಜ್ಞಾಪಕಾರ್ಥವಾಗಿ ಯೆಹೋವನ ಆಲಯದಲ್ಲಿ ಇಡಲಾಗಿದೆ.
၁၄ထိုသရဖူသည်လည်းထာဝရဘုရား၏ ဗိမာန်တော်တွင်ဟေလဒဲ၊ တောဘိယ၊ ယေ ဒါယနှင့်ယောရှိတို့အား ဂုဏ်ပြုချီးမြှင့် ရာအထိမ်းအမှတ်လက္ခဏာတစ်ရပ်ဖြစ် လိမ့်မည်'' ဟုမိန့်တော်မူ၏။
15 ೧೫ ದೂರದಲ್ಲಿರುವವರು ಬಂದು ಯೆಹೋವನ ಆಲಯವನ್ನು ಕಟ್ಟುವುದಕ್ಕೆ ಕೈಹಾಕುವರು; ಆಗ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದಾತನು ಸೇನಾಧೀಶ್ವರನಾದ ಯೆಹೋವನೇ ಎಂದು ನಿಮಗೆ ದೃಢವಾಗುವುದು. ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಮನಃಪೂರ್ವಕವಾಗಿ ಕೇಳಿದರೆ ಇದೆಲ್ಲಾ ನೆರವೇರುವುದು.’”
၁၅ရပ်ဝေးဒေသတွင်နေထိုင်ကြကုန်သော လူတို့သည်လာ၍ ထာဝရဘုရား၏ဗိမာန် ကိုပြန်လည်တည်ဆောက်ရာတွင်ကူညီဆောင် ရွက်ကြလိမ့်မည်။ ထိုဗိမာန်တော်ကိုပြန်လည် တည်ဆောက်၍ပြီးသောအခါ သင်တို့သည် မိမိတို့ထံသို့ငါ့အားအနန္တတန်ခိုးရှင် ထာဝရဘုရားစေလွှတ်တော်မူခဲ့ကြောင်း သိရှိကြလိမ့်မည်။ အကယ်၍သင်တို့သည် မိမိတို့ဘုရားသခင်ထာဝရဘုရား၏ အမိန့်တော်တို့ကိုတိကျစွာလိုက်နာကြ ပါမူဤအမှုအရာများဖြစ်ပျက်လာ လိမ့်မည်။