< ಜೆಕರ್ಯನು 6 >

1 ನಂತರ ನಾನು ಕಣ್ಣೆತ್ತಿ ನೋಡಲು, ಇಗೋ, ಎರಡು ಬೆಟ್ಟಗಳ ನಡುವೆಯಿಂದ ಬರುತ್ತಿರುವ ನಾಲ್ಕು ರಥಗಳು ಕಾಣಿಸಿದವು. ಅ ಬೆಟ್ಟಗಳು ತಾಮ್ರದವುಗಳಾಗಿದ್ದವು.
I podigoh oči i vidjeh: gle, četvera bojna kola izlaze između dviju gora; a gore bijahu od mjedi.
2 ಮೊದಲನೆಯ ರಥಕ್ಕೆ ಕೆಂಪು ಕುದುರೆಗಳು; ಎರಡನೆಯ ರಥಕ್ಕೆ ಕಪ್ಪು ಕುದುರೆಗಳು;
U prvim kolima bijahu riđi konji; u drugim kolima crni konji;
3 ಮೂರನೆಯ ರಥಕ್ಕೆ ಬಿಳಿ ಕುದುರೆಗಳು; ನಾಲ್ಕನೆಯ ರಥಕ್ಕೆ ಮಚ್ಚೆಯ ಬಲವಾದ ಕುದುರೆಗಳು ಕಟ್ಟಿದ್ದವು.
u trećim kolima bijeli konji, a u četvrtim kolima konji šareni.
4 ಆಗ ನನ್ನ ಸಂಗಡ ಮಾತನಾಡಿದ ದೇವದೂತನಿಗೆ, “ನನ್ನ ಸ್ವಾಮೀ ಇದೇನು?” ಎಂದೆನು.
Obratih se anđelu koji je govorio sa mnom i upitah ga: “Što je to, gospodaru?”
5 ಆ ದೇವದೂತನು ನನಗೆ, “ಇವು ಆಕಾಶದ ನಾಲ್ಕು ಗಾಳಿಗಳು; ಭೂಲೋಕದ ಒಡೆಯನ ಸನ್ನಿಧಾನದಲ್ಲಿ ನಿಂತಿದ್ದು ಅಲ್ಲಿಂದ ಹೊರಟು ಬರುತ್ತಾ ಇವೆ” ಎಂದು ಉತ್ತರಕೊಟ್ಟನು.
Anđeo mi odgovori ovako: “Ti kreću u četiri vjetra nebeska pošto su stajali pred Gospodarem sve zemlje.
6 ಅನಂತರ ಕಪ್ಪು ಕುದುರೆಗಳ ರಥ ಉತ್ತರ ದೇಶಕ್ಕೆ ಹೊರಟವು. ಬಿಳಿ ಕುದುರೆಗಳು ಅವುಗಳನ್ನು ಪಶ್ಚಿಮ ದೇಶಕ್ಕೆ ಹಿಂಬಾಲಿಸಿದವು. ಮಚ್ಚೆ ಮಚ್ಚೆಯ ಕುದುರೆಗಳ ರಥ ದಕ್ಷಿಣ ದೇಶಕ್ಕೆ ಹೋದವು.
Riđani kreću u zemlju istočnu; vranci u zemlju sjevernu; bijelci kreću u zemlju zapadnu, a šarci kreću u zemlju južnu.”
7 ಕೆಂಪು ಕುದುರೆಗಳು ಬಂದು ಲೋಕದಲ್ಲಿ ಸಂಚರಿಸುವುದಕ್ಕೆ ಹೊರಡಬೇಕೆಂದು ತ್ವರೆಪಟ್ಟವು; ಆಗ ಅವನು, “ಹೊರಡಿರಿ, ಲೋಕದಲ್ಲಿ ಸಂಚರಿಸಿರಿ” ಎಂದು ಅಪ್ಪಣೆ ಮಾಡಲು ಅವು ಲೋಕದಲ್ಲಿ ಸಂಚರಿಸಿದವು.
Krepko oni stupaju, nestrpljivi da obiđu zemlju. On im reče: “Idite, obiđite zemlju!” I oni krenuše obilaziti zemljom.
8 ಆ ಮೇಲೆ ಅವನು ನನಗೆ, “ಆಹಾ, ಉತ್ತರ ದೇಶಕ್ಕೆ ಹೋದವುಗಳು ಅಲ್ಲಿ ನನ್ನ ಕೋಪವನ್ನು ಶಾಂತಿಗೊಳಿಸಿವೆ” ಎಂದು ಕೂಗಿ ಹೇಳಿದನು.
On me zovnu i reče mi: “Vidi, oni koji su krenuli u sjevernu zemlju umirit će gnjev moj u zemlji sjevernoj.”
9 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
I dođe mi riječ Jahvina:
10 ೧೦ ಇನ್ನು ಸೆರೆಯಲ್ಲಿರುವವರೊಳಗೆ ಸೇರಿದವರಾದ ಹೆಲ್ದಾಯ, ತೋಬೀಯ ಮತ್ತು ಯೆದಾಯ ಎಂಬುವರ ಕೈಯಿಂದ ಬೆಳ್ಳಿ ಬಂಗಾರಗಳನ್ನು ತೆಗೆದುಕೋ; ಈ ದಿನವೇ ನೀನು ಹೋಗಿ ಬಾಬೆಲಿನಿಂದ ಬಂದು, ಇವರು ಇಳಿದುಕೊಂಡಿರುವ ಚೆಫನ್ಯನ ಮಗನಾದ ಯೋಷಿಯನ ಮನೆಗೆ ಹೋಗಿ,
“Uzmi prinose od izgnanika - od Heldaja, Tobije i Jedaje - i pođi danas i uđi u dom Jošije, sina Sefanijina, koji je došao iz Babilona.
11 ೧೧ ಇವರಿಂದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಕಿರೀಟವನ್ನು ಮಾಡಿ ಯೆಹೋಚಾದಾಕನ ಮಗನೂ ಹಾಗೂ ಮಹಾಯಾಜಕನು ಆದ ಯೆಹೋಶುವನ ತಲೆಯ ಮೇಲೆ ಇಟ್ಟು,
Uzmi srebra i zlata, načini krunu i stavi na glavu Jošui, sinu Josadakovu, velikom svećeniku.
12 ೧೨ ಅವನಿಗೆ ಹೀಗೆ ಹೇಳು, “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, ‘ಇಗೋ, ಮೊಳಿಕೆಯೆಂಬ ಪುರುಷನು! ಅವನು ಇದ್ದಲ್ಲಿಯೇ ವೃದ್ಧಿಯಾಗಿ, ಯೆಹೋವನ ಆಲಯವನ್ನು ಕಟ್ಟಿಸುವನು.
I reci mu: 'Ovako govori Jahve nad Vojskama: Evo čovjeka komu je ime Izdanak; ispod njega će proklijati i on će sazdati Svetište Jahvino.
13 ೧೩ ಹೌದು, ಅವನೇ ಯೆಹೋವನ ಆಲಯವನ್ನು ಕಟ್ಟಿಸಿ ರಾಜವೈಭವವನ್ನು ಹೊಂದಿಕೊಂಡು ತನ್ನ ಸಿಂಹಾಸನದಲ್ಲಿ ಆಸೀನನಾಗಿ ಆಳುವನು. ಮತ್ತು ಯಾಜಕರು ತನ್ನ ಸಿಂಹಾಸನದಲ್ಲಿ ಕುಳಿತಿರುವರು. ಅವರಿಬ್ಬರೂ ಸಮ್ಮತಿ ಸಮಾಧಾನದಿಂದ ಇರುವರು.
On će sazdati Svetište Jahvino i proslaviti se. On će sjediti i vladati na prijestolju. A do njega će na prijestolju biti svećenik. Sklad savršen bit će među njima.
14 ೧೪ “‘ಆ ಕಿರೀಟವು ಹೇಲೆಮ್, ತೋಬೀಯ, ಯೆದಾಯ, ಚೆಫನ್ಯನ ಮಗನಾದ ಯೋಷೀಯ ಇವರ ಜ್ಞಾಪಕಾರ್ಥವಾಗಿ ಯೆಹೋವನ ಆಲಯದಲ್ಲಿ ಇಡಲಾಗಿದೆ.
A kruna neka ostane u Jahvinu Svetištu za spomen Heldaju, Tobiji, Jedaji i Jošiji, sinu Sefanijinu.
15 ೧೫ ದೂರದಲ್ಲಿರುವವರು ಬಂದು ಯೆಹೋವನ ಆಲಯವನ್ನು ಕಟ್ಟುವುದಕ್ಕೆ ಕೈಹಾಕುವರು; ಆಗ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದಾತನು ಸೇನಾಧೀಶ್ವರನಾದ ಯೆಹೋವನೇ ಎಂದು ನಿಮಗೆ ದೃಢವಾಗುವುದು. ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಮನಃಪೂರ್ವಕವಾಗಿ ಕೇಳಿದರೆ ಇದೆಲ್ಲಾ ನೆರವೇರುವುದು.’”
I oni koji su daleko doći će i sazdat će Svetište Jahvino. Znat ćete tako da me Jahve nad Vojskama k vama poslao.' To će se zbiti ako zaista poslušate glas Jahve, Boga svojega.”

< ಜೆಕರ್ಯನು 6 >