< ಜೆಕರ್ಯನು 4 >
1 ೧ ಅನಂತರ ವಿವರಿಸುವ ದೇವದೂತನು ಮತ್ತೆ ಬಂದು ನಿದ್ರೆಹತ್ತಿದವನ ಹಾಗಿದ್ದ ನನ್ನನ್ನು ಎಚ್ಚರಗೊಳಿಸಿ “ಏನು ನೋಡುತ್ತೀ?” ಎಂದು ಕೇಳಲು ನಾನು,
Nibalik’ amy zao i anjely nisaontsy amakoy le nitsekafe’e, manahake ty fampivañonañe ‘ndaty miròtse.
2 ೨ “ಇಗೋ, ಏಳು ದೀಪಗಳುಳ್ಳ ಸುವರ್ಣಮಯವಾದ ಒಂದು ದೀಪಸ್ತಂಭವನ್ನು ನೋಡುತ್ತೇನೆ; ಅದರ ಮೇಲಿನ ದೀಪಗಳಿಗೆ ಏಳು ನಾಳಗಳಿವೆ; ಅದರ ಮೇಲ್ಗಡೆ ಎಣ್ಣೆಯ ಪಾತ್ರೆಯಿದೆ;
Le hoe re amako, Ino o oni’oo? Le hoe ty asako: Mahatrea fitàm-pailo volamena ki’e, reketse ty korobo ambone’e eo, ama’e ty failo fito; fito ty toiô’e, eka fito mb’amy failo fito ambone’e rey;
3 ೩ ಆ ಪಾತ್ರೆಯ ಬಲಗಡೆಯಲ್ಲಿ ಒಂದು ಎಣ್ಣೆಯ ಮರ, ಎಡಗಡೆಯಲ್ಲಿ ಒಂದು ಎಣ್ಣೆಯ ಮರ, ಮತ್ತು ಎರಡು ಮರಗಳು ಅದರ ಪಕ್ಕಗಳಲ್ಲಿ ಇದೆ” ಎಂದು ಹೇಳಿದೆನು.
naho hatae olive roe ty añ’ila’e, raike ankavana’ i koroboy, le raike ankavia’e.
4 ೪ ಪುನಃ ನಾನು ಪ್ರಸ್ತಾಪವನ್ನೆತ್ತಿ ವಿವರಿಸುವ ದೇವದೂತನನ್ನು, “ಸ್ವಾಮೀ, ಇವು ಏನನ್ನು ಸೂಚಿಸುತ್ತದೆ?” ಎಂದು ಕೇಳಿದ್ದಕ್ಕೆ,
Nañontaneako i anjely nifanaontsy amakoy, ty hoe: Inoñe o reroañeo, ry talèko?
5 ೫ ಆ ದೇವದೂತನು “ಇವು ಏನೆಂದು ನಿನಗೆ ತಿಳಿಯುವುದಿಲ್ಲವೋ?” ಎಂಬುದಾಗಿ ನನ್ನನ್ನು ಪ್ರಶ್ನೆಮಾಡಲು, “ನಾನು ಇಲ್ಲ ಸ್ವಾಮಿ” ಎಂದು ಅರಿಕೆ ಮಾಡಿದೆನು.
Le nanoiñe ahy i anjely nifanaontsy amakoy, ami’ty hoe: Tsy apota’o hao o retiañeo? Le hoe iraho: Aiy! talèko!
6 ೬ ಆಗ ಅವನು ನನಗೆ ಪ್ರತ್ಯುತ್ತರವಾಗಿ ಹೀಗೆ ಹೇಳಿದನು, “ಪರಾಕ್ರಮದಿಂದಲ್ಲ, ಬಲದಿಂದಲ್ಲ. ನನ್ನ ಆತ್ಮದಿಂದಲೇ ಎಂಬುದು ಸೇನಾಧೀಶ್ವರನಾದ ಯೆಹೋವನ ನುಡಿ” ಎಂಬ ಈ ಮಾತುಗಳನ್ನು ಯೆಹೋವನು ಜೆರುಬ್ಬಾಬೆಲನಿಗೆ ದಯಪಾಲಿಸಿದ್ದಾನೆ.
Le hoe ty navale’ i anjeliy amako: Ty tsara’ Iehovà amy Zerobabele, manao ty hoe: Tsy an-kafatrarañe, tsy an-kaozarañe, fa an-Troko hoe t’Iehovà’ i Màroy.
7 ೭ ದೊಡ್ಡ ಬೆಟ್ಟವೇ, “ನೀನು ಯಾರು? ಜೆರುಬ್ಬಾಬೆಲನ ಮುಂದೆ ನೆಲಸಮವಾಗುವಿ; ಅವನು ಕಲಶದ ಕಲ್ಲನ್ನು ಕೋಲಾಹಲದೊಡನೆ ಮೆರವಣಿಗೆ ಮಾಡುವನು; ಇದರ ಮೇಲೆ ದೇವರ ದಯೆಯಿರಲಿ” ಎಂಬ ಜನಘೋಷವಾಗುವುದು.
Ia v’iheo, ry haboañe aboo? ie aolo’ i Zerobabele eo ro hinjare tane-mira? le hendese’e boak’ ao ty vato-fampikatohañe, hikoikoike ty hoe, Fañisohañe, fañisohañe.
8 ೮ ಅಲ್ಲದೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದ್ದಾನೆ,
Nimb’ amako indraike ty tsara’ Iehovà nanao ty hoe:
9 ೯ “ಜೆರುಬ್ಬಾಬೆಲನ ಕೈಗಳು ಈ ಆಲಯದ ಅಸ್ತಿವಾರವನ್ನು ಹಾಕಿವೆ. ಆ ಕೈಗಳೇ ಇದನ್ನು ಪೂರೈಸುವವು. ಆಗ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದವನು ಸೇನಾಧೀಶ್ವರನಾದ ಯೆಹೋವನೇ” ಎಂದು ನನಗೆ ಗೊತ್ತಾಗುವುದು.
Nampipetake o mananta’ ty anjomba toio o fità’ i Zerobabeleo, le o fità’eo ka ro hamonitse aze; vaho ho fohi’o te nañirak’ ahy ama’ areo t’Iehovà’ i Màroy.
10 ೧೦ ಆಗ ದೂತನು “ಈ ದೀಪಗಳಿಂದ ಸೂಚಿತವಾದ ಯೆಹೋವನ ಏಳು ಕಣ್ಣುಗಳು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ಪ್ರಸರಿಸುತ್ತಾ ತೂಕದ ಗುಂಡು ಜೆರುಬ್ಬಾಬೆಲನ ಕೈಯಲ್ಲಿರುವುದನ್ನು ಸಂತೋಷದಿಂದ ನೋಡುತ್ತೇವೆ. ಹೀಗಿರುವಲ್ಲಿ ಅಲ್ಪ ಕಾರ್ಯಗಳ ದಿನವನ್ನು ತಿರಸ್ಕರಿಸಿದವರು ಯಾರು?
Ia ty nanirìka ty andron-draha pilipito’e? Ho isa’ iareo an-kafaleañe o talim-pahity am-pità’ i Zerobabeleo, toe o fito retoañe, o fihaino’ Iehovà manitsike ty tane toio mb’eo mb’eo.
11 ೧೧ ಆಗ ನಾನು ದೇವದೂತನಿಗೆ, ದೀಪಸ್ತಂಭದ ಎಡಬಲದಲ್ಲಿರುವ ಈ ಎಣ್ಣೆಯ ಮರಗಳು ಏನು?” ಎಂದೆನು.
Le nañontaneako ty hoe: Inoñ’ o hatae olive ankavana o fitàm-pailo naho ankavia’eo?
12 ೧೨ ಮತ್ತೆ ನಾನು ಅವನಿಗೆ, ತಮ್ಮೊಳಗಿಂದ ಚಿನ್ನದಂಥ ಎಣ್ಣೆಯನ್ನು ಪಾತ್ರೆಯಲ್ಲಿ ತುಂಬಿಸುವ ಎರಡು ಬಂಗಾರದ ನಾಳಗಳಿವೆಯಲ್ಲಾ. ಆ ನಾಳಗಳ ಬಾಯಿಗೆ ಸೇರಿರುವ ಎರಡು ಎಣ್ಣೆಕಾಯಿಗುತ್ತಿಗಳು ಏನು? ಎಂದು ಕೇಳಿದೆ.
Tinovoko fañindroe’e, ty hoe: Ino o singan’ olive roe añ’ila’ i toiò volamena roe rey, mañiliñe menake volamena boak’ ama’eo?
13 ೧೩ ಅದಕ್ಕೆ ಆ ದೂತನು ನನಗೆ, “ಇವು ಏನೆಂದು ನಿನಗೆ ತಿಳಿಯುವುದಿಲ್ಲವೋ?” ಎಂದು ಕೇಳಿದಾಗ ನಾನು, “ಇಲ್ಲ ಸ್ವಾಮೀ” ಎಂದೆ.
Natoi’e ami’ty hoe: Tsy fohi’o hao t’ie inoñe? Le hoe ty natoiko: Aiy! ry taleko.
14 ೧೪ ಅದಕ್ಕೆ ಅವನು, “ಇವು ದೇವರಿಂದ ಆಯ್ಕೆಯಾಗಿ ಎಣ್ಣೆಯಿಂದ ಅಭಿಷೇಕಿಸಲ್ಪಟ್ಟ ಆ ಇಬ್ಬರು ವ್ಯಕ್ತಿಗಳನ್ನು ಸೂಚಿಸುತ್ತವೆ. ಸರ್ವ ಲೋಕದ ಒಡೆಯನ ಸನ್ನಿಧಿಯಲ್ಲಿರುವ ಸೇವಕರನ್ನು ಸೂಚಿಸುತ್ತವೆ” ಎಂದು ಹೇಳಿದನು.
Le hoe re tamako: Ie i roe norizañe ami'ty menake rey: ie mijohañe añ’ila’ i Talè’ ty tane toy eo.